ವಿದ್ಯುತ್ ಕೋಶ

ವಿಕಿಪೀಡಿಯ ಇಂದ
Jump to navigation Jump to search

ವಿದ್ಯುತ್ ಕೋಶಗಳು[ಬದಲಾಯಿಸಿ]

ವಿದ್ಯುದಾವಿಷ್ಟ ಕಣಗಳು ವಿಭಿನ್ನ ಪ್ರಮಾಣದಲ್ಲಿ ವಿತರಣೆಗೊಂಡಾಗ ಧ್ರುವಗಳು ಉಂಟಾಗುತ್ತವೆ. ಹೆಚ್ಚಿನ ಋಣ ವಿದ್ಯುತ್ ಕಣಗಳು ಸಾಪೇಕ್ಷವಾಗಿರುವ ಧ್ರುವವನ್ನು ಋಣಾಗ್ರವೆನ್ನುವರು. ಕಡಿಮೆ ಋಣ ವಿದ್ಯುದಾಗ್ರಗಳು ಸಾಪೇಕ್ಷವಾಗಿರುವ ಧ್ರುವವನ್ನು ಧನಾಗ್ರವೆನ್ನುವರು. ಋಣಾಗ್ರ ಮತ್ತು ಧನಾಗ್ರಗಳಿರುವ ವ್ಯವಸ್ಥೆಯನ್ನು ವಿದ್ಯುತ್ ಕೋಶವೆನ್ನುವರು.ವಿದ್ಯುತ್ ಕೋಶದ ಋಣಾಗ್ರ ಮತ್ತು ಧನಾಗ್ರಗಳನ್ನು ಕೆಲವು ಬಗೆಯ ವಸ್ತುಗಳಿಂದ ಸ್ಪರ್ಶಿಸಿದಾಗ ಮಾತ್ರ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಇದನ್ನು ವಿದ್ಯುತ್ ಎನ್ನುವರು. ಟಾರ್ಚ್ ಗಳಲ್ಲಿ ವಿದ್ಯುಚ್ಛಕ್ತಿಯು ವಿದ್ಯುತ್ ಕೋಶಗಳಿಂದ ಸಿಗುತ್ತದೆ.ಈ ವಿದ್ಯುತ್ ಕೋಶಗಳು ವಿದ್ಯುಚ್ಛಕ್ತಿಯ ಒಂದು ಆಕರ.ವಿದ್ಯುತ್ ಕೋಶಗಳು ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ. ಸಾಮಾನ್ಯವಾಗಿ ಬಳಸುವ ಉಪಯುಕ್ತ ಕೋಶವೆಂದರೆ ಶುಷ್ಕಕೋಶ.ಇದು ಸಾಮಾನ್ಯವಾಗಿ ಶುಷ್ಕವಾಗಿರುವುದಿಲ್ಲ.ಆದರೂ ಇದರಲ್ಲಿ ದ್ರವದ ಬದಲು ಗಟ್ಟಿಯಾದ ಅಂಟು ಪದಾರ್ಥವನ್ನು ಉಪಯೋಗಿಸುತ್ತಾರೆ.ಆದ್ದರಿಂದ ಇದನ್ನು ಶುಷ್ಕಕೋಶ ಎನ್ನುತ್ತಾರೆ.[೧]

ಕೋಶಗಳ ವಿಧಗಳು[ಬದಲಾಯಿಸಿ]

ಕೋಶಗಳನ್ನು ಅವುಗಳ ಬಳಕೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಕೆಲವು ಕೋಶಗಳನ್ನು ಒಮ್ಮೆ ಉಪಯೋಗಿಸಿದ ನಂತರ ಪುನಃ ಉಪಯೋಗಿಸಲು ಸಾಧ್ಯವಿಲ್ಲ.ಅಂತಹ ಕೋಶಗಳನ್ನು ಪ್ರಧಾನ ಕೋಶಗಳು ಎನ್ನುವರು.

  • ಉದಾಹರಣೆ:ಲೆಕ್ಲಾಂಚ್ ಕೋಶ(Leclanché cell),ಡೇನಿಯಲ್ ಕೋಶ[೨].

ಕೆಲವು ಕೋಶಗಳನ್ನು ಒಮ್ಮೆ ಉಪಯೋಗಿಸಿದ ನಂತರವೂ ರೀಚಾರ್ಜ್ ಮಾಡಿ ಉಪಯೋಗಿಸಬಹುದು.ಅಂತಹ ಕೋಶಗಳನ್ನು ಅಧೀನ ಕೋಶಗಳ್ಳೆನ್ನುವರು.

  • ಉದಾಹರಣೆ:ವಾಹನಗಳು ಮತ್ತು ಮೊಬೈಲ್ ಫೋನುಗಳಲ್ಲಿ [೩] ಬಳಸುವ ಬ್ಯಾಟರಿಗಳು.

ಕೋಶದ ಕಾರ್ಯ[ಬದಲಾಯಿಸಿ]

ವಿದ್ಯುತ್ ಕೋಶವು ಒಂದು ವಿದ್ಯುದ್ವಿಭಾಜಕ ದ್ರಾವಣದಲ್ಲಿ ಇಟ್ಟಿರುವ ಎರಡು ವಿದ್ಯುದಗ್ರಗಳನ್ನು ಹೊಂದಿರುತ್ತದೆ.ಒಂದು ಧನಾಗ್ರ ಮತ್ತು ಇನ್ನೊಂದು ಋಣಾಗ್ರ ಆಗಿರುತ್ತದೆ.ಈ ವಿದ್ಯುದಗ್ರಗಳನ್ನು ವಾಹಕದಿಂದ ಜೋಡಿಸಿದಾಗ ಇಲೆಕ್ಟ್ರಾನುಗಳು ಋಣಾಗ್ರದಿಂದ ಧನಾಗ್ರದ ಕಡೆಗೆ ಹರಿಯುತ್ತದೆ.ಇದನ್ನು ಎಲೆಕ್ಟ್ರಾನ್ ಪ್ರವಾಹ ಎನ್ನುತ್ತಾರೆ.ಆದರೆ ಇದರಲ್ಲಿ ಸಹಜವಾಗಿ ಧನಾಗ್ರದಿಂದ ಋಣಾಗ್ರಕ್ಕೆ ವಿದ್ಯುತ್ ಹರಿಯುತ್ತದೆ ಎಂದು ತೋರಿಸಲಾಗುತ್ತದೆ.ಇದನ್ನು ಸಾಂಪ್ರದಾಯಿಕ ವಿದ್ಯುತ್ ಪ್ರವಾಹ ಎನ್ನುವರು.

ಶುಷ್ಕಕೋಶ (ಡ್ರೈಸೆಲ್)[ಬದಲಾಯಿಸಿ]

ಎರಡು ಅಥವಾ ಹೆಚ್ಚು ವಿದ್ಯುತ್ ಕೋಶಗಳ ಜೋಡಣೆಗೆ ಶುಷ್ಕಕೋಶ (ಡ್ರೈಸೆಲ್) ಎನ್ನುವರು.ಇದನ್ನು ಹೆಚ್ಚು ವಿದ್ಯುತ್ಪ್ರವಾಹ ಪಡೆಯಲು ಬಳಸುವರು.

ಬಾಹ್ಯ ಕೊಂಡಿ[ಬದಲಾಯಿಸಿ]

  1. https://simple.wikipedia.org/wiki/Electrical_cell

ಉಲ್ಲೇಖ[ಬದಲಾಯಿಸಿ]

  1. http://www.thefreedictionary.com/electric+cell
  2. https://en.wikipedia.org/wiki/Daniell_cell
  3. https://en.wikipedia.org/wiki/Lithium-ion_battery