ವಿದ್ಯುನ್ಮಾನ ತ್ಯಾಜ್ಯ (Electronic waste)
ವಿದ್ಯುನ್ಮಾನ ತ್ಯಾಜ್ಯ , ಇ-ತ್ಯಾಜ್ಯ , ಇ-ಸ್ಕ್ರ್ಯಾಪ್ , ಅಥವಾ ನಿರುಪಯುಕ್ತ ವಿದ್ಯುತ್ ಮತ್ತು ವಿದ್ಯುನ್ಮಾನ ಸಲಕರಣೆಗಳು ಎಂಬ ಪದಗಳು ಹಿಂದಕ್ಕೆ ಹಾಕಿದ, ಮಿಕ್ಕಿದ, ಹಳೆಯ, ಅಥವಾ ಮುರಿದ ವಿದ್ಯುತ್ ಮತ್ತು ವಿದ್ಯುನ್ಮಾನ ಸಾಧನಗಳನ್ನು ಸರಲವಾಗಿ ವಿವರಿಸುತ್ತದೆ[೧]. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿದ್ಯುನ್ಮಾನ ತ್ಯಾಜ್ಯವನ್ನು ಅಸಾಂಪ್ರದಾಯಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಅರೋಗ್ಯ ಮತ್ತು ಮಲಿನತೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಪರಿಸರ ಪ್ರೇಮಿ ಸಂಘಗಳು ವಾದಿಸುತ್ತವೆ. ಕೆಲವು ವಿದ್ಯುನ್ಮಾನ ಸ್ಕ್ರ್ಯಾಪ್ ಭಾಗಗಳು, ಉದಾಹರಣೆಗೆ ಸಿಆರ್‌ಟಿಗಳು, ಸೀಸ, ನೀಲಿ ತವರ, ಬೆರಿಲಿಯಮ್, ಪಾದರಸ, ಮತ್ತು ಬ್ರಾಮಿನೇಟೆಡ್ ಫ್ಲೇಮ್ ರಿಟಾರ್ಡ್ಯಾಂಟ್‌ಗಳನ್ನು ಹೊಂದಿರುತ್ತವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಕೂಡ ಇ-ತ್ಯಾಜ್ಯದ ಮರುಬಳಕೆ ಮತ್ತು ಗಳಿಂದ ಕೆಲಸಗಾರರಿಗೆ ಮತ್ತು ಸಮುದಾಯಕ್ಕೆ ಅಪಾಯ ಒದಗುವ ಸಂಭವವಿದ್ದು, ಮರುಬಳಕೆ ಕಾರ್ಯಗಳ ಸಂದರ್ಭದಲ್ಲಿ ಅಸುರಕ್ಷಿತವಾಗಿ ಅವುಗಳಿಗೆ ತೆರೆದುಕೊಳ್ಳುವುದು ಮತ್ತು ಕಸದ ರಾಶಿಗಳು ಮತ್ತು ಇನ್ಸಿನೆರೇಟರ್‌ಗಳಿಂದ ಭಾರವಾದ ಲೋಹ ಮುಂತಾದ ವಸ್ತುಗಳ ಸೋರಿಕೆಯನ್ನು ತಡೆಯಲು ಹೆಚ್ಚಿನ ನಿಗಾವಹಿಸಬೇಕು. ವಸ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕೆಂಬುದನ್ನು ಸ್ಕ್ರ್ಯಾಪ್ ಉದ್ಯಮ ಮತ್ತು ಯುಎಸ್‌ಎ ಇಪಿಎ ಅಧಿಕಾರಿಗಳು ಒಪ್ಪುತ್ತಾರೆ, ಆದರೆ ಅತಿಯಾದ ನಿಯಮಗಳಿಂದ ಲಾಭ ಹೊಂದುವ ಸಂಸ್ಥೆಗಳು ನಿರುಪಯುಕ್ತ ವಿದ್ಯುನ್ಮಾನ ವಸ್ತುಗಳಿಂದ ಪರಿಸರಕ್ಕೆ ಆಗುವ ಅಪಾಯಗಳನ್ನು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುತ್ತಾರೆ.
ವ್ಯಾಖ್ಯಾನ
[ಬದಲಾಯಿಸಿ]"ವಿದ್ಯುನ್ಮಾನ ತ್ಯಾಜ್ಯ"ವನ್ನು, ತನ್ನ ಮೂಲ ಮಾಲೀಕರು ಮಾರಿದ, ದಾನಮಾಡಿದ ಅಥವಾ ಬಿಸಾಡಿದ ಎಲ್ಲ ಗೌಣ ಕಂಪ್ಯೂಟರ್‌ಗಳು, ಮನೋರಂಜನ ಸಾಧನ ಎಲೆಕ್ಟ್ರಾನಿಕ್‌ಗಳು, ಮೊಬೈಲ್ ದೂರವಾಣಿಗಳು, ಮತ್ತು ಟಿವಿ ಸೆಟ್‌ಗಳು ಮತ್ತು ಫ್ರಿಜ್‌ಗಳು ಮುಂತಾದ ಇತರ ವಸ್ತುಗಳು. ಈ ವ್ಯಾಖ್ಯಾನವು ಎರಡನೇ ಬಳಕೆ, ಮರುಮಾರಾಟ, ಅವಶೇಷದ ಬಳಕೆ, ಮರುಬಳಕೆ, ಅಥವಾ ವಿಲೇವಾರಿಗೆ ಯೋಗ್ಯವಾಗಿರುವ ವಿದ್ಯುನ್ಮಾನ ವಸ್ತುಗಳನ್ನು ಒಳಗೊಂಡಿದೆ. ಇತರ ವ್ಯಾಖ್ಯಾನಗಳು ಎರಡನೇ ಬಳಕೆಗೆ ಯೋಗ್ಯವಾದ, (ಕೆಲಸ ಮಾಡುತ್ತಿರುವ ಮತ್ತು ರಿಪೇರಿ ಮಾಡಬಹುದಾದ ವಿದ್ಯುನ್ಮಾನ ಉಪಕರಣಗಳು) ಮತ್ತು "ಪದಾರ್ಥ"ಗಳಾಗಬಹುದಾದ ಗೌಣ ಸ್ಕ್ರ್ಯಾಪ್‌ಗಳಾದ (ತಾಮ್ರ, ಸ್ಟೀಲ್, ಪ್ಲಾಸ್ಟಿಕ್, ಮುಂತಾದುವನ್ನು.) ವ್ಯಾಖ್ಯಾನಿಸುತ್ತವೆ, ಮತ್ತು "ತ್ಯಾಜ್ಯ" ಎಂಬ ಪದವನ್ನು ಎರಡನೇ ಬಳಕೆ ಮತ್ತು ಮರುಬಳಕೆ ಕಾರ್ಯಗಳಿಂದಾದ ಶೇಷಗಳನ್ನೂ ಒಳಗೊಂಡು, ಕೆಲಸ ಮಾಡುತ್ತಿರುವ ಅಥವಾ ರಿಪೇರಿ ಮಾಡಬಹುದಾದ ವಸ್ತುಗಳು ಎಂದು ಹೇಳಿದ್ದರೂ ಗ್ರಾಹಕನು ಬಿಸಾಡಿದ ಅಥವಾ ವಿಲೇವಾರಿ ಮಾಡಿದ ಅಥವಾ ಹಿಂದಕ್ಕೆ ತಳ್ಳಿದ ವಸ್ತುಗಳಿಗೆ ಮಾತ್ರ ಉಪಯೋಗಿಸಲಾಗಿದೆ. ಏಕೆಂದರೆ ಸಾಮಾನ್ಯವಾಗಿ ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳ ರಾಶಿಗಳನ್ನೇ ಸಮ್ಮಿಶ್ರ ಮಾಡಲಾಗುತ್ತದೆ (ಒಳ್ಳೆಯವು, ಮರುಬಳಕೆ ಮಾಡಬಹುದಾದ, ಮತ್ತು ಮರುಬಳಕೆ ಮಾಡಲಾಗದ), ಹಲವು ಸಾರ್ವಜನಿಕ ಕಾರ್ಯನೀತಿ ಪ್ರತಿಪಾದಕರು ’ಇ-ತ್ಯಾಜ್ಯ’ ಎಂಬ ಪದವನ್ನು ಎಲ್ಲ ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳಿಗೆ ಉಪಯೋಗಿಸುತ್ತಾರೆ. ಯುನೈಟೆಡ್ ಸ್ಟೇಟ್ಸ್ ಪರಿಸರ ಸಂರಕ್ಷಣಾ ಸಂಸ್ಥೆಯು ಹಿಂದಕ್ಕೆ ಹಾಕಿದ ಸಿಆರ್‌ಟಿ ಮಾನಿಟರ್‌ಗಳನ್ನು ಕೂಡ ತನ್ನ "ಅಪಾಯಕಾರಿ ಗೃಹೀಯ ತ್ಯಾಜ್ಯ" ವಿಭಾಗದಲ್ಲಿ ಸೇರಿಸುತ್ತದೆ.[೨] ಆದರೆ ಅವುಗಳನ್ನು ಹಿಂದಕ್ಕೆ ಹಾಕದೆ, ಅನುಮಾನಾಸ್ಪದವಾಗಿ ಒಟ್ಟುಮಾಡದೆ ಅಥವಾ ಹವಾಮಾನ ಮತ್ತು ಇತರ ಹಾನಿಗಳಿಂದ ರಕ್ಷಣೆ ಮಾಡದೆ ಬಿಡದಿದ್ದ ಪಕ್ಷದಲ್ಲಿ ಅವುಗಳಿಂದ ’ಪದಾರ್ಥ’ಗಳಾಗಬಹುದೇನೋ ಎಂಬ ಪರೀಕ್ಷೆಗೆ ಪರಿಗಣಿಸುತ್ತದೆ.
"ಪದಾರ್ಥ" ಮತ್ತು "ತ್ಯಾಜ್ಯ" ವಿದ್ಯುನ್ಮಾನ ಉಪಕರಣಗಳ ವ್ಯಾಖ್ಯಾನಗಳ ನಡುವಿನ ಭೇದಗಳ ಬಗೆಗೆ ಚರ್ಚೆ ಮುಂದುವರೆದಿದೆ. ಕೆಲಸ ಮಾಡುತ್ತಿರುವ ಉಪಕರಣಗಳ ರಾಶಿಯಲ್ಲಿ ಸೇರಿಕೊಂಡ ಗುರುತಿಸಲಾಗದ, ಹಳೆಯ ಅಥವಾ ಕೆಲಸ ಮಾಡದ ಉಪಕರಣಗಳನ್ನು ಉದ್ದೇಶಪೂರ್ವಕವಾಗಿ ಕೆಲವು ರಫ್ತುಗಾರರು ಬಿಟ್ಟುಬಿಡುತ್ತಾರೆ (ತಿಳುವಳಿಕೆ ಇಲ್ಲದೇ, ಅಥವಾ ಹೆಚ್ಚು ದುಬಾರಿ ಸಂಸ್ಕರಣಾ ಪ್ರಕ್ರಿಯೆಗಳನ್ನು ತಪ್ಪಿಸಲು). ವ್ಯಾಪಾರಿ ಸಂರಕ್ಷಣಕಾರರು (ಪ್ರೊಟೆಕ್ಷನಿಸ್ಟ್ಸ್) "ತ್ಯಾಜ್ಯ" ವಿದ್ಯುನ್ಮಾನ ಉಪಕರಣಗಳ ವ್ಯಾಖ್ಯಾನವನ್ನು ವಿಸ್ತರಿಸಬಹುದು. ವಿದ್ಯುನ್ಮಾನ ತ್ಯಾಜ್ಯದ ಉಪವಿಭಾಗವಾದ ಕಂಪ್ಯೂಟರ್ ಮರುಬಳಕೆಯ ಅತಿಮೌಲ್ಯವು (ಕೆಲಸ ಮಾಡುತ್ತಿರುವ ಮತ್ತು ಉಪಯೋಗಿಸಬಹುದಾದ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಮತ್ತು ರ್ಯಾಮ್‌ನಂತಹ ಭಾಗಗಳು) ಅನೇಕ ಅನುಪಯುಕ್ತ "ಪದಾರ್ಥಗಳ" ಸಾಗಾಣಿಕೆ ವೆಚ್ಚವನ್ನು ಕೊಡಲು ಸಹಾಯ ಮಾಡಬಲ್ಲದು.
ಸಮಸ್ಯೆಗಳು
[ಬದಲಾಯಿಸಿ]ಕ್ಷಿಪ್ರ ತಂತ್ರಜ್ಞಾನ ಬದಲಾವಣೆ, ಕಡಿಮೆ ಆರಂಭದ ವೆಚ್ಚ, ಮತ್ತು ಯೋಜಿತ ಲುಪ್ತವಾಗುವಿಕೆ ಇವುಗಳು ಪ್ರಪಂಚದಾದ್ಯಂತ ಹೆಚ್ಚುವರಿ ವಿದ್ಯುನ್ಮಾನ ತ್ಯಾಜ್ಯವು ಬೆಳೆಯಲು ಕಾರಣವಾಗಿವೆ. ಕ್ಯಾಷ್ ಫಾರ್ ಲ್ಯಾಪ್‌ಟಾಪ್ಸ್‌ನ ಪ್ರಧಾನ ಕಾರ್ಯಕಾರೀ ಅಧಿಕಾರಿ ಡೇವ್ ಕ್ರೂಷ್, ವಿದ್ಯುನ್ಮಾನ ತ್ಯಾಜ್ಯವನ್ನು "ಕ್ಷಿಪ್ರವಾಗಿ ಬೆಳೆಯುತ್ತಿರುವ" ವಿವಾದಾಂಶ ಎನ್ನುತ್ತಾರೆ.[೩] ತಾಂತ್ರಿಕ ಪರಿಹಾರಗಳು ಲಭ್ಯವಿದೆ, ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಪರಿಹಾರಗಳನ್ನು ಉಪಯೋಗಿಸುವ ಮೊದಲು ಕಾನೂನಿನ ಚೌಕ್ಕಟ್ಟು, ಸಂಗ್ರಹಣಾ ವ್ಯವಸ್ಥೆ, ನಿರ್ವಹಣಾ ವ್ಯವಸ್ಥೆ, ಮತ್ತು ಇತರ ಸೇವೆಗಳನ್ನು ಅಳವಡಿಸಿರಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ೫೦ ಮಿಲಿಯನ್ ಟನ್‌ಗಳಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ. ಯುಎಸ್‌ಎ ಪ್ರತಿವರ್ಷ ೩೦ ಮಿಲಿಯನ್ ಕಂಪ್ಯೂಟರ್‌ಗಳನ್ನು ಹಿಂದಕ್ಕೆ ಹಾಕುತ್ತದೆ ಮತ್ತು ೧೦೦ ಮಿಲಿಯನ್ ಫೋನ್‌ಗಳನ್ನು ಬಿಸಾಡುತ್ತದೆ.[೪]
ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕಸದರಾಶಿಯಲ್ಲಿರುವ ಬೇಡದವಸ್ತುಗಳಲ್ಲಿ ವಿದ್ಯುನ್ಮಾನ ಉಪಕರಣಗಳು ಕೇವಲ ೨%[೫], ಆದರೆ ಕಸದ ರಾಶಿಯಲ್ಲಿರುವ ಅಂದಾಜು ೭೦% ಭಾರದ ಲೋಹಗಳು ಹಿಂದಕ್ಕೆ ಹಾಕಿದ ವಿದ್ಯುನ್ಮಾನ ಉಪಕರಣಳಿಂದ ಬರುತ್ತದೆ[೬]. ೨೦೦೫ರಲ್ಲಿ ಬೇಡದ ವಿದ್ಯುನ್ಮಾನ ಉಪಕರಣಗಳ ಒಟ್ಟು ತೂಕ ೨ ಮಿಲಿಯನ್ ಟನ್ ಇತ್ತು ಎನ್ನುತ್ತದೆ ಇಪಿಎ. ಹಿಂದಕ್ಕೆ ಹಾಕಿದ ವಿದ್ಯುನ್ಮಾನ ಉಪಕರಣಗಳ ತೂಕ, ಮರುಬಳಕೆ ಮಾಡಿದ ವಿದ್ಯುನ್ಮಾನ ಉಪಕರಣಗಳ ತೂಕಕ್ಕಿಂತ ೫ರಿಂದ ೬ ಪಟ್ಟು ಹೆಚ್ಚು ಇರುತ್ತದೆ.[೩] ಯುಎಸ್‌ನ ಕುಟುಂಬಗಳು ಪ್ರತಿವರ್ಷ, ಸರಾಸರಿ ೨೪ ವಿದ್ಯುನ್ಮಾನ ಉಪಕರಣಗಳ ಮೇಲೆ $೧,೪೦೦ ಖರ್ಚು ಮಾಡುತ್ತದೆ, ಇದರಿಂದ ಮಿಲಿಯನ್‌ಗಟ್ಟಲೆ ಟನ್‌ಗಳಷ್ಟು ಬೆಲೆಬಾಳುವ ಲೋಹಗಳು ಟೇಬಲ್ ಡ್ರಾಯರ್‌ಗಳಲ್ಲಿ ಕೂತಿರುವ ಸಾಧ್ಯತೆ ಇದೆ ಎಂದು ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಹೇಳುತ್ತದೆ.[೭][೮] ಈವರೆಗೆ ಬಿಕರಿಯಾಗಿರುವ ಎಲ್ಲ ವಯಕ್ತಿಕ ಕಂಪ್ಯೂಟರ್‌ಗಳಲ್ಲಿ ಈಗ ೭೫% ಕಂಪ್ಯೂಟರ್‌ಗಳು ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳಾಗಿ ಧೂಳು ಹಿಡಿಯುತ್ತಾ ಕೂತಿವೆ ಎಂದು ಯುಎಸ್ ರಾಷ್ಟ್ರೀಯ ಸುರಕ್ಷತಾ ಮಂಡಲಿಯು ಅಂದಾಜು ಮಾಡಿದೆ.[೯] ಕೆಲವರು ಮರುಬಳಕೆ ಮಾಡಿದರೂ, ೭%ರಷ್ಟು ಮೊಬೈಲ್‌ಫೋನ್ ಮಾಲೀಕರು ತಮ್ಮ ಹಳೆಯ ಮೊಬೈಲ್ ಫೋನ್‌ಗಳನ್ನು ಬಿಸಾಡುತ್ತಾರೆ.[೧೦]
ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳು ಬೆಲೆಗಳಲ್ಲಿ ಅತ್ಯಧಿಕ ವ್ಯತ್ಯಾಸ ಹೊಂದಿರುತ್ತದೆ. ಒಂದು ರಿಪೇರಿ ಮಾಡಬಹುದಾದ ಲ್ಯಾಪ್‌ಟಾಪ್ ನೂರಾರು ಡಾಲರ್‌ಗಳಷ್ಟು ಬೆಲೆ ಬಾಳಬಹುದು, ಆದರೆ ಒಂದು ಒಳಸ್ಫೋಟಗೊಂಡ ಕ್ಯಾತೋಡ್ ರೇ ಟ್ಯೂಬ್‌ಅನ್ನು ಮರುಬಳಕೆ ಮಾಡುವುದು ಅತಿಕಷ್ಟ. ಇದು ಕಷ್ಟಕರವಾದ ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಸೃಷ್ಟಿಸಿದೆ. ದೊಡ್ಡ ಪ್ರಮಾಣದ ಬಳಸಿದ ವಿದ್ಯುನ್ಮಾನ ಉಪಕರಣಗಳನ್ನು ಸಾಮಾನ್ಯವಾಗಿ ಅತಿ ಹೆಚ್ಚು ರಿಪೇರಿ ಮಾಡುವ ಶಕ್ತಿ ಇರುವ ಮತ್ತು ಹೆಚ್ಚು ಕಚ್ಚಾ ವಸ್ತುಗಳ ಬೇಡಿಕೆಯಿರುವ ದೇಶಗಳಿಗೆ ಮಾರಾಟ ಮಾಡಲಾಗುತ್ತದೆ, ಇದರಿಂದ ದೃಢವಾದ ಪರಿಸರ ಕಾನೂನು ಇಲ್ಲದ ಬಡ ಪ್ರದೇಶಗಳಲ್ಲಿ ಉಳಿಕೆಗಳು ಶೇಖರಣೆಯಾಗುವ ಸಂಭವ ಇರುತ್ತದೆ.[೧೧] ಬಾಸೆಲ್ ಕನ್‌ವೆನ್‌ಷನ್ ವಿದ್ಯುನ್ಮಾನ ತ್ಯಾಜ್ಯದ ವ್ಯಾಪಾರವನ್ನು ನಿಯಂತ್ರಿಸುತ್ತದೆ. ಅಪಾಯಕಾರಿಯಾದ ಬಳಕೆಯಾದ ವಿದ್ಯುನ್ಮಾನ ಸಾಧನವನ್ನು ರಿಪೇರಿಗೆ ಅಥವಾ ಮರುಬಳಕೆಗಾಗಿ ರಫ್ತು ಮಾಡಿದವುಗಳನ್ನು ಅವುಗಳನ್ನು ತ್ಯಜಿಸದಿದ್ದರೆ ಬಾಸೆಲ್ ಕನ್ವೆನ್ಶನ್ ಅಪಾಯಕಾರಿ ತ್ಯಾಜ್ಯಗಳು ಎಂದು ಕರೆಯಲಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಬಾಸೆಲ್ ಕನ್ವೆನ್ಶನ್ ಪಕ್ಷಗಳು ಪರಿಗಣಿಸಿವೆ. ವಸ್ತುಗಳನ್ನು ಬಿಸಾಡದೆ ರಿಪೇರಿ ಮಾಡಲಾಗುತ್ತದೆ ಎಂಬುದಕ್ಕೆ ಸಾಕ್ಷಿ ರಫ್ತುಗಾರನೇ ಆಗಿರುತ್ತಾನೆ, ಮತ್ತು ಅಂತಿಮವಾಗಿ ಯಾವುದೇ ಕೆಲಸ ಮಾಡದ ಭಾಗಗಳನ್ನು ಬಿಸಾಡುವುದು ಕನ್‌ವೆನ್‌ಷನ್ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಆ ವಿಷಯದ ಮೇಲೆ ಮಾಡಿರುವ ಮಾರ್ಗದರ್ಶಿಯಲ್ಲಿ ಈ ಪ್ರಶ್ನೆಯನ್ನು ಕಕ್ಷಿಗಳಿಗೇ ಬಿಡಲಾಗಿದೆ.[೧೨]
ವಿರ್ಜಿನ್ ವಸ್ತು ಗಣಿಗಾರಿಕೆ ಮತ್ತು ಸಂಗ್ರಹಣೆಯಂತೆ, ವಿದ್ಯುನ್ಮಾನ ತ್ಯಾಜ್ಯದಿಂದ ವಸ್ತುಗಳ ಮರುಬಳಕೆ ಮಾಡುವುದು, ಅದರ ಕೆಲವು ವಸ್ತುಗಳ ಮತ್ತು ಪ್ರಕ್ರಿಯೆಗಳ ವಿಷಮತೆ ಮತ್ತು ಕ್ಯಾನ್ಸರ್‌ಕಾರಕ ಗುಣದ ಬಗೆಗೆ ಶಂಕೆ ಎದ್ದಿದೆ. ವಿದ್ಯುನ್ಮಾನ ತ್ಯಾಜ್ಯದಲ್ಲಿನ ವಿಷವಸ್ತುಗಳು ಸೀಸ, ಪಾದರಸ, ಮತ್ತು ನೀಲಿತವರವನ್ನು ಒಳಗೊಂಡಿರಬಹುದು. ವಿದ್ಯುನ್ಮಾನ ತ್ಯಾಜ್ಯದಲ್ಲಿನ ಕ್ಯಾನ್ಸರ್‌ಕಾರಕ ವಸ್ತುಗಳು ಪಾಲಿಕ್ಲೋರಿನೇಟೆಡ್ ಬೈಫಿನಾಯಿಲ್(ಪಿಸಿಬಿ)ಗಳನ್ನು ಒಳಗೊಂಡಿರಬಹುದು. ೧೯೭೭ಕ್ಕಿಂತ ಮೊದಲು ಉತ್ಪಾದಿಸಲಾದ ಪಾಲಿವಿನೇಲ್ ಕ್ಲೋರೈಡ್‌ನಿಂದ ಮುಚ್ಚಲಾದ ಕೆಪ್ಯಾಸಿಟರ್‌ಗಳು, ಟ್ರಾನ್ಸ್‌ಫಾರ್ಮ್‌ಗಳು, ಮತ್ತು ತಂತಿಗಳು ಅಥವಾ ಚಿಲಖತ್ತು ಮಾಡಿದ ಭಾಗಗಳು, ಅನೇಕವೇಳೆ ಪಿಸಿಬಿಗಳನ್ನು ಅಪಾಯಕಾರಿ ಮೊತ್ತದಲ್ಲಿ ಹೊಂದಿರುತ್ತದೆ.[೧೩]
ವಿದ್ಯುನ್ಮಾನ ತ್ಯಾಜ್ಯ ವಸ್ತುಗಳಿಗೆ ೩೮ರಷ್ಟು ರಾಸಾಯನಿಕ ವಸ್ತುಗಳನ್ನು ಸಂಯೋಜಿಸಲಾಗಿದೆ. ವಿದ್ಯುನ್ಮಾನ ಸಲಕರಣೆಗಳಲ್ಲಿ ಬಳಸುವ ಬಹುತೇಕ ಪ್ಲಾಸ್ಟಿಕ್‌ಗಳು ಅಗ್ನಿಶಾಮಕಗಳನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಪ್ಲಾಸ್ಟಿಕ್ ರಾಳಗಳಿಗೆ ಸೇರಿಸಿದ ಮೂಲಧಾತುಗಳು, ಇದರಿಂದ ಪ್ಲಾಸ್ಟಿಕ್‌ಅನ್ನು ಮರುಬಳಕೆ ಮಾಡುವುದು ಕಷ್ಟವಾಗುತ್ತದೆ. ಅಗ್ನಿಶಾಮಕಗಳು ಸೇರ್ಪಡೆಗಳಾಗಿರುವುದರಿಂದ, ಬಿಸಿ ವಾತಾವರಣದಲ್ಲಿ ಸುಲಭವಾಗಿ ಆ ವಸ್ತುವಿನಿಂದ ಸೊರಿಹೋಗುತ್ತದೆ, ಇದು ಒಂದು ತೊಂದರೆ ಏಕೆಂದರೆ ವಿದ್ಯುನ್ಮಾನ ತ್ಯಾಜ್ಯವನ್ನು ಬಿಸಾಡಿದಾಗ ಸಾಮಾನ್ಯವಾಗಿ ಹೊರಗೆ ಬಿಟ್ಟುಬಿಡಲಾಗುತ್ತದೆ. ಇದರಿಂದ ಅಗ್ನಿಶಾಮಕಗಳು ಮಣ್ಣಿನ ಒಳಗೆ ಸೋರಿಹೋಗುತ್ತದೆ, ಮಣ್ಣಿಗಿಂತ ೯೩ಪಟ್ಟಿ ಜಾಸ್ತಿಯಾದ ವಿದ್ಯುನ್ಮಾನ ತ್ಯಾಜ್ಯದೊಂದಿಗೆ ಸಂಪರ್ಕವೇ ಇಲ್ಲದ ಮಾಪನವು ದಾಖಲಾಗಿದೆ.೦/} ಬಿಸಾಡಿದ ವಿದ್ಯುನ್ಮಾನ ಉಪಕರಣಗಳ ನಿರ್ವಹಣೆ ಸಾಧ್ಯವಾಗದಿರುವುದು ಮತ್ತು ಕಂಪ್ಯೂಟರ್ ತಂತ್ರಜ್ಞಾನಗಳು, ವಿದ್ಯುನ್ಮಾನ ತ್ಯಾಜ್ಯದ ಮರುಬಳಕೆ ಅಥವಾ ಎರಡನೇ ಬಳಕೆಯ ಅಗತ್ಯತೆಯನ್ನು ಎತ್ತಿಹಿಡಿಯಲು ಮತ್ತೊಂದು ಕಾರಣ.
ವಸ್ತುಗಳನ್ನು ಎರಡನೇ ಬಳಕೆ ಮಾಡದಿದ್ದಾಗ ಅಥವಾ ಮಾಡಲಾಗದಿದ್ದಾಗ, ಸಾಂಪ್ರದಾಯಿಕ ಮರುಬಳಕೆ ಮಾಡಲಾಗುತ್ತದೆ ಅಥವಾ ಕಸದರಾಶಿಯಲ್ಲಿ ಬಿಸಾಡಲಾಗುತ್ತದೆ. ಮುಂದುವರೆದ ರಾಷ್ಟ್ರದಲ್ಲೇ ಆಗಲಿ ಅಥವಾ ಅಭಿವೃದ್ಧಿಶೀಲ ರಾಷ್ಟದಲ್ಲೇ ಆಗಲಿ ಎರಡೂ ಮಾರ್ಗಗಳ ಮಟ್ಟಗಳಲ್ಲಿ ಕಾನೂನಿಗೆ ತಕ್ಕ ಹಾಗೆ ಬಹಳ ವ್ಯತ್ಯಾಸ ಇರುತ್ತದೆ. ಬಿಸಾಡಬೇಕಾದ ಅನೇಕ ವಸ್ತುಗಳ ಕ್ಲಿಷ್ಟತೆ, ಪರಿಸರಸಂರಕ್ಷಣೆ ದೃಷ್ಟಿಯಿಂದ ಅಂಗೀಕರಿಸಿದ ಮರುಬಳಕೆ ವ್ಯವಸ್ಥೆಗಳ ಬೆಲೆ, ಮತ್ತು ಉಪಕರಣಗಳನ್ನು ಸಂಗ್ರಹಿಸಲು ಮತ್ತು ವ್ಯವಸ್ಥಿತವಾಗಿ ಸಂಸ್ಕರಿಸಲು ಬೇಕಾದ ಕಳಕಳಿಯ ಮತ್ತು ಸಂಘಟಿತ ಕ್ರಮಗಳ ಅಗತ್ಯತೆ - ಇವು ಸವಾಲುಗಳು. ಒಂದು ಅಧ್ಯಯನವು ಮೂರರಲ್ಲಿ ಇಬ್ಬರು ನಿರ್ವಾಹಕರಿಗೆ ಪರಿಸರ ಕಾನೂನಿಗೆ ಸಂಬಂಧಿಸಿದ ದಂಡಗಳ ಬಗ್ಗೆ ಏನೂ ತಿಳಿದಿಲ್ಲ ಎಂದು ಸೂಚಿಸುತ್ತದೆ.[೧೪]
ಬಿಸಿಚರ್ಚೆಗಳು
[ಬದಲಾಯಿಸಿ]ಹೆಚ್ಚಾದ ವಿದ್ಯುನ್ಮಾನ ತ್ಯಾಜ್ಯ ನಿಯಂತ್ರಣ ಮತ್ತು ವಿಷಪೂರಿತ ವಿದ್ಯುನ್ಮಾನ ತ್ಯಾಜ್ಯದಿಂದ ಆಗಬಹುದಾದ ಪರಿಸರ ಹಾನಿಯ ಬಗೆಗಿನ ಕಾಳಜಿಗಳು ಬಿಸಾಡುವ ವೆಚ್ಚವನ್ನು ಜಾಸ್ತಿ ಮಾಡಿದೆ. ರಫ್ತು ಮಾಡುವ ಮೊದಲೇ ಅವಶೇಷಗಳನ್ನು ತೆಗೆದುಬಿಡುವಂತೆ ಪ್ರಚೋದಿಸುವ ಆರ್ಥಿಕ ನಿಬಂಧನೆಯನ್ನು ಕಾನೂನು ಸೃಷ್ಟಿಸುತ್ತದೆ. ಅತಿರೇಕದ ಸಂದರ್ಭಗಳಲ್ಲಿ, ಮರುಬಳಕೆ ಮಾಡುವವರು ಎಂದು ಹೇಳಿಕೊಳ್ಳುವ ದಳ್ಳಾಳಿಗಳು ಮತ್ತು ಇತರರು ಪರಿಷ್ಕರಿಸದ ವಿದ್ಯುನ್ಮಾನ ತ್ಯಾಜ್ಯವನ್ನು ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡುತ್ತಾರೆ, ಕೆಟ್ಟ ಕ್ಯಾತೋಡ್ ಕಿರಣ ನಳಿಕೆಗಳು ಮುಂತಾದ ವಸ್ತುಗಳನ್ನು ತೆಗೆಯುವ ಖರ್ಚನ್ನು ಉಳಿಸುತ್ತಾರೆ (ತೆಗೆಯುವ ಪ್ರಕ್ರಿಯೆ ಬಹಳ ದುಬಾರಿ ಮತ್ತು ಕಷ್ಟಕರ).
ಬಳಸಿದ ವಿದ್ಯುನ್ಮಾನ ಉಪಕರಣಗಳ ವ್ಯಾಪಾರವನ್ನು ಸಮರ್ಥಿಸುವವರು ವರ್ಜಿನ್ ಗಣಿಗಾರಿಕೆಯಿಂದ ಲೋಹವನ್ನು ಬೇರ್ಪಡಿಸುವ ಕೆಲಸವನ್ನೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವರ್ಗಾಯಿಸಲಾಗಿದೆ ಎನ್ನುತ್ತಾರೆ. ವಿದ್ಯುನ್ಮಾನ ಉಪಕರಣಗಳಿಂದ ಬೇರ್ಪಡಿಸಿದ ತಾಮ್ರ, ಬೆಳ್ಳಿ, ಚಿನ್ನ ಮತ್ತು ಇತರ ಪದಾರ್ಥಗಳನ್ನು ಗಟ್ಟಿ ಬಂಡೆಗಳಲ್ಲಿ ಗಣಿಗಾರಿಕೆ ಮಾಡುವುದು ಆ ಪದಾರ್ಥಗಳನ್ನು ಮರುಬಳಕೆ ಮಾಡುವುದಕ್ಕಿಂತ ಹೆಚ್ಚು ಪರಿಸರ ಹಾನಿಯುಂಟು ಮಾಡುತ್ತದೆ ಎನ್ನಲಾಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಟಿವಿಗಳನ್ನು ಮತ್ತು ಕಂಪ್ಯೂಟರ್‌ಗಳನ್ನು ರಿಪೇರಿ ಮಾಡುವುದು ಮತ್ತು ಎರಡನೇ ಬಾರಿಗೆ ಉಪಯೋಗಿಸುವುದು ಒಂದು "ಕಳೆದು ಹೋದ" ಕಲೆಯೇ ಆಗಿದೆ ಎಂದೂ ಅವರು ಹೇಳುತ್ತಾರೆ, ಮತ್ತು ಆ ಮೆರುಗು ನೀಡುವ ಕೆಲಸವೇ ಸಾಂಪ್ರದಾಯಿಕವಾಗಿ ಅಭಿವೃದ್ಧಿಗೆ ದಾರಿಯಾಗಿತ್ತು. ದಕ್ಷಿಣ ಕೊರಿಯಾ, ತೈವಾನ್, ಮತ್ತು ಪೂರ್ವ ಚೈನಾ ರಾಷ್ಟ್ರಗಳು ಬಳಸಿದ ಸರಕಿನಲ್ಲಿ "ಉಳಿಸಿಕೊಂಡ ಮೌಲ್ಯ"ವನ್ನು ಕಂಡುಹಿಡಿಯುವುದರಲ್ಲಿ ಪರಿಣತರಾಗಿದ್ದರು, ಮತ್ತು ಕೆಲವು ಸಂದರ್ಭಗಳಲ್ಲಿ ಬಳಸಿದ ಇಂಕ್-ಕಾರ್ಟ್ರಿಜ್, ಒಂದು-ಬಳಕೆ ಕ್ಯಾಮರಾಗಳು, ಮತ್ತು ಕೆಲಸ ಮಾಡುತ್ತಿರುವ ಸಿಆರ್‌ಟಿಗಳನ್ನು ಮೆರಗು ನೀಡುವುದರಲ್ಲಿಯೇ ಬಿಲಿಯನ್-ಡಾಲರ್ ಕಂಪನಿಗಳನ್ನು ಹುಟ್ಟುಹಾಕಿಬಿಟ್ಟಿದ್ದಾರೆ. ಸಾಂಪ್ರಾದಾಯಿಕವಾಗಿ, ಮೆರುಗು ನೀಡುವುದು ಸ್ಥಾಪಿತ ಉತ್ಪಾದನೆಗಳಿಗೆ ಒಂದು ಅಪಾಯ, ಮತ್ತು ವ್ಯಾಪಾರದ ಕೆಲವು ಟೀಕೆಗಳನ್ನು ಸರಳವಾದ ರಕ್ಷಣಾತಂತ್ರಗಳೇ ವಿವರಿಸುತ್ತವೆ. ವ್ಯಾನ್ಸ್ ಪ್ಯಾಕರ್ಡ್‌ರವರ "ದ ವೇಸ್ಟ್ ಮೇಕರ್ಸ್"ನಂತಹ ಕೃತಿಗಳು ಕೆಲಸ ಮಾಡುತ್ತಿರುವ ವಸ್ತುಗಳ ರಫ್ತಿನ ಬಗೆಗಿನ ಕೆಲವು ಟೀಕೆಗಳನ್ನು ವಿವರಿಸುತ್ತವೆ, ಉದಾಹರಣೆಗೆ ಪರೀಕ್ಷಿಸಿದ ಕೆಲಸ ಮಾಡುತ್ತಿರುವ ಪೆಂಟಿಯಮ್ 4 ಲ್ಯಾಪ್‌ಟಾಪ್‌ಗಳ ಆಮದನ್ನು ಚೈನಾ ನಿಷೇದಿಸಿರುವುದು, ಅಥವಾ ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳ ರಫ್ತನ್ನು ಜಪಾನ್ ನಿಷೇಧಿಸಿರುವುದು.
ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳ ರಫ್ತನ್ನು ವಿರೋಧಿಸುವವರು, ಪರಿಸರ ಮತ್ತು ಕಾರ್ಯದ ಕೀಳುಮಟ್ಟ, cheap ಕೆಲಸಗಾರರು, ಮತ್ತು ತುಲನಾತ್ಮಕವಾಗಿ ಪಡೆದುಕೊಂಡ ವಸ್ತುಗಳ ಅಧಿಕ ಮೌಲ್ಯಗಳು ತಾಮ್ರದ ತಂತಿಯನ್ನು ಸುಡುವುದು ಮುಂತಾದ ಮಾಲಿನ್ಯ-ಜನಕ ಚಟುವಟಿಕೆಗಳನ್ನು ವರ್ಗಾಯಿಸುವುದಕ್ಕೆ ಕಾರಣವಾಗುತ್ತದೆ ಎಂದು ವಾದಿಸುತ್ತಾರೆ. ಚೈನಾ, ಮಲೇಷಿಯಾ, ಭಾರತ, ಕೀನ್ಯಾ, ಮತ್ತು ವಿವಿಧ ಆಫ್ರಿಕಾ ದೇಶಗಳಿಗೆ, ಕೆಲವು ವೇಳೆ ಕಳ್ಳತನದಿಂದ, ವಿದ್ಯುನ್ಮಾನ ತ್ಯಾಜ್ಯವನ್ನು ಸಂಸ್ಕರಣೆಗಾಗಿ ಕಳುಹಿಸಲಾಗುತ್ತದೆ. ಅನೇಕ ಹೆಚ್ಚುವರಿ ಲ್ಯಾಪ್‌ಟಾಪ್‌ಗಳನ್ನು, "ಇ-ತ್ಯಾಜ್ಯವನ್ನು ಬಿಸಾಡುವ ಸ್ಥಳ" ಎಂಬಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಳುಹಿಸಲಾಗುತ್ತದೆ.[೩] ಯುನೈಟೇಡ್ ಸ್ಟೇಟ್ಸ್ ತನ್ನ ಬಾಸೆಲ್ ಕನ್‌ವೆನ್‌ಷನ್ ಅಥವಾ ತನ್ನ ನಿಷೇಧ ತಿದ್ದುಪಡಿಯನ್ನು ಸ್ಥಿರೀಕರಣ ಮಾಡದ ಕಾರಣ, ಮತ್ತು ವಿಷಪೂರಿತ ತ್ಯಾಜ್ಯದ ರಫ್ತನ್ನು ನಿಷೇಧಿಸುವ ಯಾವ ಗೃಹ ಕಾನೂನು ಇಲ್ಲದಿರುವ ಕಾರಣ, ಯುಎಸ್‌ನಲ್ಲಿ ಮರುಬಳಕೆಗಾಗಿ ನಿಗದಿ ಮಾಡಿದ ೮೦% ವಿದ್ಯುನ್ಮಾನ ತ್ಯಾಜ್ಯ ಅಲ್ಲಿ ಮರುಬಳಕೆ ಆಗುವುದೇ ಇಲ್ಲ, ಆದರೆ ಕಂಟೇನರ್ ಹಡಗುಗಳಲ್ಲಿ ಹಾಕಿ ಚೀನಾದಂತಹ ರಾಷ್ಟ್ರಗಳಿಗೆ ಕಳುಹಿಸಲಾಗುತ್ತದೆ ಎಂದು ಬಾಸೆಲ್ ಆಕ್ಷನ್ ನೆಟ್‌ವರ್ಕ್ ಅಂದಾಜು ಮಾಡಿದೆ.[೧೧][೧೫][೧೬][೧೭] ಇಪಿಎ, ದ ಇನ್‌ಸ್ಟಿಟ್ಯೂಟ್ ಫಾರ್ ಸ್ಕ್ರ್ಯಾಪ್ ರಿಸೈಕ್ಲಿಂಗ್ ಇಂಡಸ್ಟ್ರೀಸ್ ಮತ್ತು ವರ್ಲ್ಡ್ ರೀಯೂಸ್, ರೆಪೇರ್ ಮತ್ತು ರಿಸೈಕ್ಲಿಂಗ್ ಅಸೋಸಿಯೇಷನ್‌ಗಳು ಈ ಸಂಖ್ಯೆ ಉತ್ಪ್ರೇಕ್ಷೆ ಎಂದು ವಾದಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು].
ಚೀನಾದ ಶಾನ್‌ಟೌ ಪ್ರದೇಶದ ಗಿಯು, ಭಾರತದ ದೆಹಲಿ ಮತ್ತು ಬೆಂಗಳೂರು ಹಾಗೆಯೇ ಆಕ್ರಾ, ಘಾನಾ ಸಮೀಪದ ಆಗ್‌ಬೊಗ್‌ಬ್ಲೋಷಿ ಸ್ಥಳಗಳು ವಿದ್ಯುನ್ಮಾನ ತ್ಯಾಜ್ಯ ಸಂಸ್ಕರಣಾ ಪ್ರದೇಶಗಳನ್ನು ಹೊಂದಿವೆ.[೧೧][೧೮][೧೯] ಅನಿಯಂತ್ರಿತ ಸುಡುವಿಕೆ, ನಿಸಂಯೋಜನೆ, ಮತ್ತು ಬಿಸಾಡುವಿಕೆ ಅನೇಕ ಪರಿಸರ ತೊಂದರೆಗಳನ್ನು ಉಂಟುಮಾಡಬಹುದು ಉದಾಹರಣೆಗೆ ಅಂತರ್ಜಲ ಕಲುಷಿತಗೊಳ್ಳುವುದು, ವಾತಾವರಣ ಕಲುಷಿತಗೊಳ್ಳುವುದು, ಅಥವಾ ಬಿಸಾಡುವುದರಿಂದ ಅಥವಾ ಮೇಲ್ಮೈ ಹರಿಯುವಿಕೆಯ ಕಾರಣದಿಂದ ಜಲಮಾಲಿನ್ಯ ಕೂಡ (ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ), ಹಾಗೆಯೇ ತ್ಯಾಜ್ಯವನ್ನು ಸಂಸ್ಕರಿಸುವ ವಿಧಾನಗಳ ಕಾರಣ, ಅದರಲ್ಲಿ ಭಾಗಿಯಾಗಿದ್ದವರ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಮೇಲೆ ಪರಿಣಾಮ. ಕಂಪ್ಯೂಟರ್ ಮತ್ತು ವಿದ್ಯುನ್ಮಾನ ತ್ಯಾಜ್ಯದಿಂದ ಲೋಹಗಳನ್ನು, ಟೋನರ್‌ಗಳನ್ನು ಮತ್ತು ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸುವ ಕೆಲಸಕ್ಕಾಗಿ, ವಿಪರೀತ ಮಲಿನತೆ ಸೃಷ್ಟಿಸುವ, ಪ್ರಾರಂಭಿಕ ಮರುಬಳಕೆ ತಂತ್ರಜ್ಞಾನಗಳಲ್ಲಿ ಸಾವಿರಾರು ಮಂದಿ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ತೆಗೆದುಕೊಳ್ಳಲಾಗಿದೆ.
ವ್ಯಾಪಾರದ ಸಮರ್ಥಕರು ಬಡತನಕ್ಕಿಂತ ಅಂತರಜಾಲದ ಸಂಪರ್ಕವೇ ವ್ಯಾಪಾರದ ಪರಸ್ಪರ ಸಂಬಂಧ ಎನ್ನುತ್ತಾರೆ. ಆಗ್ನೇಯ ಏಷಿಯಾಕ್ಕಿಂತ ಹೈಟಿ ಬಡರಾಷ್ಟ್ರ ಮತ್ತು ನ್ಯೂ ಯಾರ್ಕ್ ಪೋರ್ಟ್‌ಗೆ ಬಹಳ ಹತ್ತಿರವಾದದ್ದು, ಆದರೆ ಹೈಟಿಗೆ ರಫ್ತು ಮಾಡುವುದಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ವಿದ್ಯುನ್ಮಾನ ತ್ಯಾಜ್ಯವನ್ನು ನ್ಯೂಯಾರ್ಕ್‌ನಿಂದ ಏಷಿಯಾಕ್ಕೆ ರಫ್ತು ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಎರಡನೇ ಬಳಕೆ, ಮೆರುಗು ನೀಡುವುದು, ರಿಪೇರಿ, ಮತ್ತು ಮರುಉತ್ಪಾದನೆ, ಮುಚ್ಚಿಹೋಗುತ್ತಿರುವ ಉಳಿಸಿಕೊಳ್ಳಬಲ್ಲ ಉದ್ಯಮಗಳಿಗೆ ಸಾವಿರಾರು ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಳಸಿದ ವಿದ್ಯುನ್ಮಾನ ಉಪಕರಣಗಳನ್ನು ನಿಲ್ಲಿಸುವುದರಿಂದ ಅವರಿಗೆ ಸುಲಭ ಬೆಲೆಯ ಉತ್ಪನ್ನಗಳು ಮತ್ತು ಅಂತರಜಾಲ ಸಂಪರ್ಕವನ್ನು ನಿಲ್ಲಿಸಿದಂತಾಗುತ್ತದೆ ಎಂದು ಹೇಳಲಾಗುತ್ತದೆ.
ವಿರೋಧಿಗಳು ಅಭಿವೃದ್ಧಿಶೀಲರಾಷ್ಟ್ರಗಳು ಅಪಾಯಕಾರಿ ಮತ್ತು ಹೆಚ್ಚು ಅಪವ್ಯಯಕಾರಿ ವಿಧಾನಗಳನ್ನು ಬಳಸುತ್ತಾರೆ ಎಂದು ವಾದಿಸುತ್ತಾರೆ. ಒಂದು ಯುಕ್ತಿಯುಕ್ತ ಮತ್ತು ಸಾಮಾನ್ಯ ವಿಧಾನವೆಂದರೆ ಸುಮ್ಮನೆ ಉಪಕರಣವನ್ನು ಉರಿಯುವ ಬೆಂಕಿಗೆ ಬಿಸಾಡುವುದು, ಇದರಿಂದ ಪ್ಲಾಸ್ಟಿಕ್ ಕರಗುತ್ತದೆ ಮತ್ತು ಅಮೌಲ್ಯ ಲೋಹಗಳು ಉರಿದು ಹೋಗುತ್ತವೆ. ಇದು ಕಾರ್ಸಿನೋಜೆನ್‌ಗಳು ಮತ್ತು ನ್ಯೂರೋಟಾಕ್ಸಿನ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ, ತೀಕ್ಷ್ಣವಾದ, ಹಿಡಿದುಕೊಳ್ಳುವ ಹೊಗೆ ಮಿಶ್ರಿತ ಮಂಜಿಗೆ ಕಾರಣವಾಗುತ್ತದೆ. ಈ ಅಪಾಯಕಾರಿ ಹೊಗೆಯು ಡಯಾಕ್ಸಿನ್‌ಗಳು ಮತ್ತು ಫುರಾನ್‌ಗಳನ್ನು ಒಳಗೊಂಡಿರುತ್ತವೆ.[೨೦] ಬೊನ್‌ಫಾಯರ್ ಉಳಿಕೆಗಳನ್ನು ತಕ್ಷಣವೇ ಚರಂಡಿಗಳಿಲ್ಲಿ ಅಥವಾ ಸಮುದ್ರ ಸೇರುವ ಹರಿಯುವ ನೀರಿನಲ್ಲಿ ಅಥವಾ ಸ್ಥಳೀಯ ನೀರು ಸರಬರಾಜುಗಳಲ್ಲಿ ಬಿಸಾಡಿಬಿಡಬಹುದು.[೧೭][೨೧]
ಜೂನ್ ೨೦೦೮ರಲ್ಲಿ, ವಿದ್ಯುನ್ಮಾನ ತ್ಯಾಜ್ಯವನ್ನು ಹೊತ್ತ ಹಡಗೊಂದನ್ನು, ಇದು ಯು.ಎಸ್‌ನ ಓಕ್‌ಲ್ಯಾಂಡ್‌ನ ಪೋರ್ಟ್‌ನಿಂದ ಮುಖ್ಯ ಚೀನಾದಸಾನ್ಶುಯಿ ಜಿಲ್ಲೆಯ ವರೆಗೆ ಹೊರಟಿತ್ತು, ಹಾಂಗ್‌ಕಾಂಗ್‌ನಲ್ಲಿ ಗ್ರೀನ್‌ಪೀಸ್ ತಡೆಯಿತು.[೨೨] ಭಾರತ,[೨೩][೨೪] ಘಾನಾ,[೨೫][೨೬][೨೭] ಐವರಿ ಕೋಸ್ಟ್,[೨೮] ಮತ್ತು ನೈಜೀರಿಯಾ ದೇಶದ ಪತ್ರಿಕಾ ವರದಿಗಳಲ್ಲಿ ವಿದ್ಯುನ್ಮಾನ ತ್ಯಾಜ್ಯದ ರಫ್ತಿನ ಬಗೆಗೆ ಪ್ರಶ್ನೆಗಳು ಎದ್ದವು.[೨೯]
ಮರುಬಳಕೆ
[ಬದಲಾಯಿಸಿ]ಇಂದು ವಿದ್ಯುನ್ಮಾನ ತ್ಯಾಜ್ಯ ವ್ಯಾಪಾರವು ಅಬಿವೃದ್ಧಿ ಹೊಂದಿದ ಪ್ರಪಂಚದ ಎಲ್ಲ ಕ್ಷೇತ್ರಗಳಲ್ಲಿಯೂ ಇವೆ, ಇದು ಒಂದು ದೊಡ್ಡ ಮತ್ತು ಅತ್ಯಂತ ವೇಗವಾಗಿ ಸಂಘಟಿಸುತ್ತಿರುವ ವ್ಯಾಪಾರ. ಹೆಚ್ಚಾದ ನಿಯಂತ್ರಣ, ಸಾರ್ವಜನಿಕ, ಮತ್ತು ವ್ಯಾವಹರಿಕ ಪರಾಮರ್ಶೆ, ಮತ್ತು ಉದ್ಯಮಶೀಲತೆಯಲ್ಲಿ ಅಷ್ಟೇ ಪ್ರಮಾಣದ ಬೆಳವಣಿಗೆಗಳ ಕಾರಣ ಈಚಿನ ವರ್ಷಗಳಲ್ಲಿ ವಿದ್ಯುನ್ಮಾನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗಳು ಪಕ್ವವಾಗಿವೆ. ಈ ವಿಕಾಸದ ಭಾಗವಾಗಿ, ಉಪಕರಣವನ್ನು ಕಚ್ಚಾ ಸಾಮಗ್ರಿಯ ರೂಪಕ್ಕೆ ಹಿಂಬಡತಿ ಮಾಡುವ ಎನರ್ಜಿ-ಇಂಟೆನ್ಸಿವ್ ಡೌನ್‌ಸೈಕ್ಲಿಂಗ್ ಪ್ರಕ್ರಿಯೆಗಳಿಂದ ವಿದ್ಯುನ್ಮಾನ ತ್ಯಾಜ್ಯವನ್ನು ಗಣನೀಯವಾಗಿ ದೂರ ತರುವುದು ಸಾಧ್ಯವಾಯಿತು (ಉದಾಹರಣೆಗೆ, ಸಾಂಪ್ರದಾಯಿಕ ಮರುಬಳಕೆ). ಇದನ್ನು ಎರಡನೆಯ ಬಳಕೆ ಮತ್ತು ಮೆರುಗು ನೀಡುವುದರ ಮೂಲಕ ಸಾಧಿಸಲಾಗುತ್ತದೆ. ಎರಡನೆಯ ಬಳಕೆಯಿಂದಾಗುವ ಪರಿಸರ ಮತ್ತು ಸಾಮಾಜಿಕ ಉಪಯೋಗಗಳೆಂದರೆ (ತಮ್ಮದೇ ಆದ ಪರಿಸರ ಸಮಸ್ಯೆಗಳನ್ನು ಹೊಂದಿರುವ)ಹೊಸ ಉತ್ಪನ್ನಗಳಿಗೆ ಮತ್ತು ವರ್ಜಿನ್ ಕಚ್ಚಾ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುವುದು; ಸಂಬಂಧಿಸಿದ ಉತ್ಪಾದನೆಗಳಿಗೆ ಅಧಿಕ ಪ್ರಮಾಣದ ಶುದ್ಧ ನೀರು ಮತ್ತು ವಿದ್ಯುತ್ ದೊರೆಯುವುದು; ಪ್ರತಿ ಘಟಕಕ್ಕೆ ಕಡಿಮೆ ಪ್ಯಾಕೆಂಜಿಂಗ್; ಕಡಿಮೆ ದರದ ಉತ್ಪನ್ನಗಳ ಕಾರಣ ಸಮಾಜದ ವಿಸ್ತೃತ ವರ್ಗಗಳಿಗೆ ತಂತ್ರಜ್ಞಾನದ ಲಭ್ಯತೆ; ಮತ್ತು ಕಸದ ರಾಶಿಗಳ ಕಡಿಮೆ ಬಳಕೆ.
ಶ್ರವಣ-ದೃಶ್ಯ ಭಾಗಗಳು, ಟಿವಿಗಳು, ವಿಸಿಆರ್‌ಗಳು, ಸ್ಟೀರಿಯೋ ಉಪಕರಣ, ಮೊಬೈಲ್ ಫೋನ್‌ಗಳು, ಇತರ ಕೈಬಳಕೆ ವಸ್ತುಗಳು, ಮತ್ತು ಕಂಪ್ಯೂಟರ್ ಭಾಗಗಳು, ಸೀಸ, ತಾಮ್ರ, ಮತ್ತು ಚಿನ್ನ ಸೇರಿದಂತೆ ವಾಪಾಸು ಪಡೆದುಕೊಳ್ಳಲು ಯೋಗ್ಯವಾದ ಅನೇಕ ಉಪಯುಕ್ತ ಪದಾರ್ಥಗಳನ್ನು ಹೊಂದಿರುತ್ತವೆ.
ಗ್ರಾಹಕ ಜಾಗ್ರತಾ ಪ್ರಯತ್ನಗಳು
[ಬದಲಾಯಿಸಿ]- (AddressTheMess.com) ಅಡ್ರೆಸ್‌ದಮೆಸ್.ಕಾಂ ಎಂಬುದು ಒಂದು ಕಾಮೆಡಿ ಸೆಂಟ್ರಲ್ ಸಮಾಜಪರ ಆಂದೋಲನ, ಇದು ವಿದ್ಯುನ್ಮಾನ ತ್ಯಾಜ್ಯದ ಅಪಾಯಗಳ ಬಗೆಗೆ ಜಾಗೃತಿಯನ್ನು ಮೂಡಿಸಲು ಮತ್ತು ಮರುಬಳಕೆಯನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ. ಈ ಪ್ರಯತ್ನಕ್ಕೆ ಪಾಲುದಾರರೆಂದರೆ, ಅರ್ಥ್‌೯೧೧.ಒಆರ್‌ಜಿ(Earth911.org), ಈಕೋಇಂಟರ್‌ನ್ಯಾಷನಲ್.ಕಾಂ(ECOInternational.com), ಮತ್ತು ಯು.ಎಸ್ ಇಂಟರ್‌ನ್ಯಾಷನಲ್ ಪ್ರೊಟೆಕ್ಷನ್ ಏಜೆನ್ಸಿ. ಅನೇಕ Comedy Central ವೀಕ್ಷಕರು ಹೊಸ ವಿದ್ಯುನ್ಮಾನ ಉಪಕರಣಗಳನ್ನು ಮೊದಲಿಗೇ ತೆಗೆದುಕೊಳ್ಳುವವರು, ಮತ್ತು ಮರುಬಲಕೆ ಮಾಡಬಹುದಾದ ಒಂದು ಸಂಘಟಿತ ಮೊತ್ತದ ತ್ಯಾಜ್ಯವನ್ನು ಉತ್ಪಾದಿಸುತ್ತಾರೆ. ನವೀಕರಿಸಬಹುದಾದ ಶಕ್ತಿ ಮತ್ತು ಇಂಗಾಲದ ಸಮತೋಲನ ಗಳಲ್ಲಿ ಪರಿಣತಿ ಪಡೆದಿರುವ ನೇಟಿವ್‌ಎನರ್ಜಿ.ಕಾಂ(NativeEnergy.com)ನ ಜೊತೆಗೆ ತಾನು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡುವುದಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ.
- ದ ಎಲೆಕ್ಟ್ರಾನಿಕ್ ಟೇಕ್‌ಬ್ಯಾಕ್ ಕೊಅಲಿಶನ್ [೧] Archived 2019-08-25 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬುದು ಮಾನವನ ಆರೋಗ್ಯವನ್ನು ಕಾಪಾಡಲು ಮತ್ತು ವಿದ್ಯುನ್ಮಾನ ಸಂಬಂಧಿ ವಸ್ತುಗಳನ್ನು ತಯಾರಿಸುವ, ಬಳಸುವ ಮತ್ತು ವಿಸರ್ಜಿಸುವಲ್ಲಿ ಪರಿಸರದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಿರುವ ಆಂದೋಲನವಾಗಿದೆ. ETBC ಯು ತಂತ್ರಜ್ಞಾನದ ಉತ್ಪಾದನೆಗಳ ತ್ಯಜಿಸುವಿಕೆಯ ಜವಾಬ್ದಾರಿಯನ್ನು ಆಯಾ ವಿದ್ಯುನ್ಮಾನ ತಯಾರಕರು ಮತ್ತು ಆ ಬ್ರ್ಯಾಂಡ್ ಮಾಲೀಕರೇ ಹೊತ್ತುಕೊಳ್ಳಬೇಕು ಎಂಬುದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಮತ್ತು ಇದಕ್ಕಾಗಿ ಅದು ಸಮುದಾಯದ ಮೂಲಕ ಮತ್ತು ನಂತರದಲ್ಲಿ ಕಾನೂನಿನ ಮೂಲಕ ಇದನ್ನು ಸಾಧಿಸಲು ಹೊರಟಿದೆ. ಇದು ಬಳಕೆದಾರರ ಮರುಬಳಕೆಗೆ ಕೆಲವು ಸಲಹೆಗಳನ್ನು ನೀಡುತ್ತದೆ ಮತ್ತು ಹಲವಾರು ಮರುಬಳಕೆದಾರರನ್ನು ಪರಿಸರದ ಕುರಿತಂತೆ ಹೆಚ್ಚು ಜವಾಬ್ದಾರಿಯಿರುವವರು ಎಂದು ತೀರ್ಮಾನಿಸಿ ಪಟ್ಟಿಮಾಡಿದೆ.[೩೦]
- ಸಿಲಿಕಾನ್ ವ್ಯಾಲಿ ಟಾಕ್ಸಿಕ್ಸ್ ಕೊಅಲಿಶನ್ (svtc.org) ಸಂಸ್ಥೆಯು ಮಾನವನ ಆರೋಗ್ಯವನ್ನು ಹೆಚ್ಚಿಸುವ ಕಡೆ ಗಮನಹರಿಸುತ್ತದೆ ಮತ್ತು ತಂತ್ರಜ್ಞಾನದಿಂದ ಉದ್ಭವಿಸುವ ವಿಷಯುಕ್ತ ಪದಾರ್ಥಗಳಿಂದಾಗಿ ಉಂಟಾಗುವ ಪರಿಸರದ ನ್ಯಾಯವನ್ನು ಎಲ್ಲರಿಗೂ ದೊರಕಿಸಿಕೊಡಲು ಕೆಲಸ ಮಾಡುತ್ತದೆ.
- ಬಾಸೆಲ್ ಆಯ್‌ಕ್ಷನ್ ನೆಟ್‌ವರ್ಕ್ (BAN.org) ಜಾಗತೀಕ ಪಾರಿಸಾರಿಕ ಅನ್ಯಾಯಗಳನ್ನು ಮತ್ತು ಜಾಗತೀಕ "ವಿಷ ವ್ಯಾಪಾರ"ದಲ್ಲಿನ ಆರ್ಥಿಕ ಅಸಾಮರ್ಥ್ಯಗಳನ್ನು ಸರಿಪಡಿಸುವ ಉದ್ದೇಶಕ್ಕಾಗಿಯೇ ಕೆಲಸ ಮಾಡುತ್ತದೆ. ಇದು ಅಳತೆ ತಪ್ಪಿ ದೊಡ್ಡ ಮಟ್ಟದಲ್ಲಿ ಇಂತಹ ತ್ಯಾಜ್ಯಗಳನ್ನು ಒಂದು ಪ್ರದೇಶದಲ್ಲಿ ಸುರಿಸುವುದನ್ನು ತಡೆಯುವ ಮೂಲಕ ಮಾನವ ಹಕ್ಕುಗಳಿಗಾಗಿ ಮತ್ತು ಪರಿಸರಕ್ಕಾಗಿ ಕೆಲಸ ಮಾಡುತ್ತದೆ. ಇದು ಉಳಿಸಿಕೊಳ್ಳಬಲ್ಲ ಪರಿಹಾರಗಳನ್ನು ಉತ್ತೇಜಿಸುತ್ತದೆ ಮತ್ತು ತ್ಯಾಜ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಯತ್ನಿಸುತ್ತದೆ.
- ಟೆಕ್ಸಾಸ್ ಕ್ಯಾಂಪೇನ್ ಫಾರ್ ದ ಎನ್ವಿರಾನ್‌ಮೆಂಟ್ (texasenvironment.org) ಸಂಸ್ಥೆಯು ಇ-ತ್ಯಾಜ್ಯ ಮರುಬಳಕೆಗೆ ಮೂಲಭೂತ ಬೆಂಬಲವನ್ನು ಪಡೆಯಲು ಕೆಲಸ ಮಾಡುತ್ತದೆ ಮತ್ತು ಸಮುದಾಯ ಬೆಂಬಲವನ್ನು ಪಡೆಯುವ ಮೂಲಕ ವಿದ್ಯುನ್ಮಾನ ತಯಾರಕರಿಗೆ ಮತ್ತು ಚುನಾಯಿತ ಅಧಿಕಾರಿಗಳಿಗೆ ಒತ್ತಡವನ್ನು ಹೇರುವ ಮೂಲಕ ಉತ್ಪಾದಕರು ಮರುಬಳಕೆ ನೀತಿಯನ್ನು ಮರಳಿ ಪಡೆದು ಮರುಬಳಕೆ ಕಾರ್ಯಕ್ರಮಗಳಿಗೆ ಕುರಿತಂತೆ ತಾವೇ ಜವಾಬ್ದಾರಿಯನ್ನು ಹೊರಬೇಕೆಂದು ಒತ್ತಾಯಮಾಡುವ ಕೆಲಸ ಮಾಡುತ್ತದೆ.
- ದ ವರ್ಲ್ಡ್ ರಿಯೂಸ್, ರಿಪೇರ್, ಅಂಡ್ ರಿಸೈಕ್ಲಿಂಗ್ ಅಸೋಸಿಯೇಶನ್ (wr೩a.org) ಸಂಸ್ಥೆಯು ರಫ್ತು ಮಾಡುವ ವಿದ್ಯುನ್ಮಾನ ವಸ್ತುಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಾರಂಭವಾಗಿರುವ ಸಂಸ್ಥೆ. ಇದು ಅಮದು ಮಾಡಿಕೊಳ್ಳುವ ದೇಶಗಳಲ್ಲಿ ಉತ್ತಮವಾದ ಮರುಬಳಕೆಯನ್ನು ಉತ್ತೇಜಿಸುವುದಕ್ಕಾಗಿ, ಮತ್ತು ಮತ್ತು "ಒಳ್ಳೆಯ ವ್ಯಾಪಾರ" ನೀತಿಗಳ ಮೂಲಕ ಈ ಪದ್ಧತಿಗಳನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಸಂಸ್ಕರಿಸುವ ವಿಧಾನಗಳು
[ಬದಲಾಯಿಸಿ]ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿದ್ಯುನ್ಮಾನ ತ್ಯಾಜ್ಯಗಳ ಪ್ರಕ್ರಿಯೆಯು ಸಾಧನಗಳ ಭಾಗಗಳನ್ನು (ಲೋಹದ ಫ್ರೇಮ್, ವಿದ್ಯುತ್ ಸರಬರಾಜು ವ್ಯವಸ್ಥೆ, ಸರ್ಕ್ಯುಟ್ ಬೋರ್ಡ್, ಪ್ಲ್ಯಾಸ್ಟಿಕ್‌ಗಳು) ಕೈಯಿಂದ ಬಿಡಿಸುವ ಮೂಲಕ ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯ ಉಪಯೋಗಗಳೆಂದರೆ ಯಾವ ಚಿಪ್‌ಗಳು, ಟ್ರಾನ್ಸಿಸ್ಟರ್‌ಗಳು, ಆರ್‌ಎಎಮ್ ಮುಂತಾದ ಭಾಗಗಳನ್ನು ಬಳಸಿಕೊಳ್ಳಬಹುದು ಅಥವಾ ರಿಪೇರಿ ಮಾಡಬಹುದು ಎಂದು ಯೋಚಿಸಿ ಅವುಗಳನ್ನು ಉಳಿಸಿಕೊಳ್ಳುವ ಮನುಷ್ಯನ ಸಾಮರ್ಥ್ಯ. ಆದರೆ ಇದರ ತೊಂದರೆಯೆಂದರೆ ಯಾವ ದೇಶದಲ್ಲಿ ಆರೋಗ್ಯ ಮತ್ತು ರಕ್ಷಣೆ ಪ್ರಮಾಣಗಳು ಕೆಳಮಟ್ಟದಲ್ಲಿವೆಯೋ ಅಂತಹ ದೇಶದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಕೆಲಸಗಾರರು ಸಿಗುವುದು.
ಒಂದು ಪರ್ಯಾಯ ಬಲ್ಕ್ ವ್ಯವಸ್ಥೆಯಲ್ಲಿ, ಒಂದು ಯಾಂತ್ರಿಕ ವಿಭಾಜಕವನ್ನು ಬಳಸಿಕೊಂಡು ಇಂಥ ವಿದ್ಯುನ್ಮಾನ ತ್ಯಾಜ್ಯಗಳನ್ನು ವಿಭಾಜಿಸಿ ಉಪಯುಕ್ತವಾದುದನ್ನು ಉಳಿಸಿಕೊಂಡು, ಉಳಿದದ್ದನ್ನು ವಿಲೇವಾರಿ ಮಾಡುವುದು, ಮತ್ತು ಉಪಯುಕ್ತವಾದುದನ್ನು ಗಳಿಗೆ ಅಥವಾ ಪ್ಲ್ಯಾಸ್ಟಿಕ್ ಮರುಬಳಕೆದಾರರಿಗೆ ಮಾರುವುದು. ಅಂತಹ ಮರುಬಳಕೆ ಯಂತ್ರಗಳನ್ನು ಒಟ್ಟುಗೂಡಿಸಲಾಗುತ್ತದೆ ಮತ್ತು ಅದು ಒಂದು ಡಸ್ಟ್ ಕಲೆಕ್ಷನ್ ಸಿಸ್ಟಮ್ ಅನ್ನು ಬಳಸಿಕೊಳ್ಳುತ್ತದೆ. ಹೆಚ್ಚಿನ ಹೊರಕಳಿಸುವಿಕೆಗಳನ್ನು ಉಜ್ಜುಗಗಳು ಮತ್ತು ಪರದೆಗಳು ಹಿಡಿಯುತ್ತವೆ. ಅಯಸ್ಕಾಂತಗಳು, ಎಡ್ಡಿ ಕರೆಂಟ್‌ಗಳು, ಮತ್ತು ಟ್ರೊಮೆಲ್ ಪರದೆಗಳನ್ನು ಗಾಜು, ಪ್ಲ್ಯಾಸ್ಟಿಕ್, ಮತ್ತು ಕಬ್ಬಿಣಯುಕ್ತ ಮತ್ತು ಕಬ್ಬಿಣಯುಕ್ತವಲ್ಲದ ಲೋಹಗಳನ್ನು ಬೇರ್ಪಡಿಸಿ ನಂತರದಲ್ಲಿ ಕುಲುಮೆಯಲ್ಲಿ ಇನ್ನೂ ಹೆಚ್ಚಿನ ಬೇರ್ಪಡಿಸುವಿಕೆಯನ್ನು ಮಾಡಬಹುದು. ಸಿಆರ್‌ಟಿಗಳ ಸೀಸ ಹೊಂದಿರುವ ಗಾಜುಗಳನ್ನು ಕಾರಿನ ಬ್ಯಾಟರಿಗಳಲ್ಲಿ, ಮದ್ದುಗುಂಡಿನಲ್ಲಿ ಮತ್ತು ಲೆಡ್ ಚಕ್ರ ಭಾರಗಳಲ್ಲಿ ಬಳಸಲಾಗುತ್ತದೆ[೨೦] ಅಥವಾ ಎರಕಗಾರಗಳಲ್ಲಿ ಸೀಸದ ಅದಿರನ್ನು ಪ್ರಕ್ರಿಯೆಗೊಳಪಡಿಸಲು ಫ್ಲಕ್ಸಿಂಗ್ ಏಜೆಂಟ್ ಆಗಿ ಬಳಸಲಾಗುತ್ತದೆ. ತಾಮ್ರ, ಬಂಗಾರ, ಪೆಲ್ಲಾಡಿಯಮ್, ಬೆಳ್ಳಿ, ಮತ್ತು ತವರಗಳು ಕುಲುಮೆಗಳಿಗೆ ಮರುಬಳಕೆಗೆ ನೀಡಲಾದ ಅತ್ಯಂತ ಬೆಲೆಬಾಳುವ ಲೋಹಗಳಾಗಿವೆ. ಅಪಾಯಕಾರಿ ಹೊಗೆ ಮತ್ತು ಅನಿಲಗಳನ್ನು ಹಿಡಿದು, ಸಂಗ್ರಹಿಸಿ ಅವುಗಳನ್ನು ಪ್ರಕ್ರಿಯೆಗೊಳಪಡಿಸುವ ಮೂಲಕ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟಲಾಗುತ್ತದೆ. ಈ ಪ್ರಕ್ರಿಯೆಗಳು ಬೆಲೆಬಾಳುವ ಕಂಪ್ಯೂಟರ್ ಭಾಗಗಳನ್ನು ಯಾವುದೇ ತೊಂದರೆಯಿಲ್ಲದೇ ಸಂಗ್ರಹಿಸಲು ಸಹಾಯ ಮಾಡುತ್ತವೆ.[೧೭] ಹೆಲ್ವೆಟ್-ಪೆಕರ್ಡ್ ಉತ್ಪನ್ನ ಮರುಬಳಕೆ ಪರಿಹಾರದ ಮ್ಯಾನೇಜರ್ ರೀನೆ ಸೆಂ. ಡೆನಿಸ್ ಈ ಪ್ರಕ್ರಿಯೆಯನ್ನು ಹೀಗೆ ವಿವರಿಸುತ್ತಾರೆ: "ನಾವು ಮೊದಲು ಅವುಗಳನ್ನು ಸುಮಾರು ೩೦ ಅಡಿ ಎತ್ತರದ ಬೃಹತ್ ಗಾತ್ರದ ಕತ್ತರಿಸುವ ಸಾಧನಗಳಲ್ಲಿ ಹಾಕುತ್ತೇವೆ ಮತ್ತು ಅದು ನಾಲ್ಕನೇ ಒಂದರ ಗಾತ್ರಕ್ಕೆ ಎಲ್ಲವನ್ನೂ ಕತ್ತರಿಸುತ್ತದೆ. ಒಂದು ಬಾರಿ ನಿಮ್ಮ ಡಿಸ್ಕ್ ಡ್ರೈವ್ ಗಳನ್ನು ಈ ಗಾತ್ರಕ್ಕೆ ತುಂಡುಗಳಾಗಿಸಿದ ನಂತರ ಅದರಲ್ಲಿರುವ ದತ್ತಾಂಶವನ್ನು ಮರಳಿ ಪಡೆಯುವುದು ಕಷ್ಟ.[೩೧]
ಒಂದು ಆದರ್ಶಯುತವಾದ ವಿದ್ಯುನ್ಮಾನ ತ್ಯಾಜ್ಯ ಮರುಬಳಕೆ ಸ್ಥಾವರವು ಭಾಗಗಳನ್ನು ಮರಳಿ ಪಡೆಯಲು ಸಾಧ್ಯವಾಗುವಂತೆ ಬಿಡಿಸುವುದು ಮತ್ತು ಕಡಿಮೆ ಬೆಲೆಯಲ್ಲಿ ಬೃಹತ್ ಗಾತ್ರದ ವಿದ್ಯುನ್ಮಾನ ತ್ಯಾಜ್ಯದ ಪ್ರಕ್ರಿಯೆಯನ್ನು ಮಾಡುವುದು ಎರಡನ್ನೂ ಹೊಂದಿರಬೇಕು.
ಮರುಬಳಕೆಯು ಪ್ರಕ್ರಿಯೆಯ ಒಂದು ಆಯ್ಕೆಯೆಂದರೆ ವಸ್ತುವನ್ನು ಪುನಃ ಬಳಕೆ ಮಾಡುವುದು, ಆ ಮೂಲಕ ಒಂದು ಸಾಧನದ ಬಳಕೆಯ ಅವಧಿಯನ್ನು ಹೆಚ್ಚಿಸುವುದು. ಸಾಧನಗಳಿಗೆ ಇನ್ನೂ ಸಂಭಾವ್ಯ ಮರುಬಳಕೆಯ ಸಾಧ್ಯತೆಯಿವೆ, ಆದರೆ ಇತರರಿಗೆ ಬಳಸಿದ ವಿದ್ಯುನ್ಮಾನಯಂತ್ರಗಳನ್ನು ಕೊಳ್ಳಲು ಬಿಡುವ ಮೂಲಕ ಮರುಬಳಕೆಯನ್ನು ಮುಂದೂಡಬಹುದು ಮತ್ತು ಅದರ ಲಾಭ ಪಡೆಯಬಹುದು.
ವಿದ್ಯುನ್ಮಾನ ತ್ಯಾಜ್ಯ ಪದಾರ್ಥಗಳು
[ಬದಲಾಯಿಸಿ]ಕೆಲವು ಕಂಪ್ಯೂಟರ್ ಪದಾರ್ಥಗಳನ್ನು ಹೊಸ ಕಂಪ್ಯೂಟರ್ ಅಸೆಂಬಲ್ ಮಾಡುವಾಗ ಬಳಸಬಹುದು, ಆದರೆ ಬೇರೆಯವನ್ನು ಕಟ್ಟಡನಿರ್ಮಾಣ, ಫ್ಲ್ಯಾಟ್‌ವೇರ್, ಮತ್ತು ಆಭರಣಗಳಂತಹ ವಿಭಿನ್ನ ಉಪಯೋಗಗಳಿಗೆ ಒದಗುವ ಲೋಹಗಳಿಗೆ ಇಳಿಸಲಾಗುತ್ತದೆ.[೩೧]
ದೊಡ್ಡ ಮೊತ್ತಗಳಲ್ಲಿ ಸಿಗುವ ಪದಾರ್ಥಗಳೆಂದರೆ ಎಪೋಕ್ಸಿ ರೆಸಿನ್ಸ್, ಫೈಬರ್‌ಗ್ಲಾಸ್, ಪಿಸಿಬಿಗಳು, ಪಿವಿಸಿ, ತರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‌ಗಳು, ಸೀಸ, ತವರ, ತಾಮ್ರ, ಸಿಲಿಕಾನ್, ಬೆರಿಲಿಯಮ್, ಇಂಗಾಲ, ಕಬ್ಬಿಣ ಮತ್ತು ಅಲ್ಯೂಮಿನಿಯಮ್.
ಕಡಿಮೆ ಪ್ರಮಾಣದಲ್ಲಿ ಸಿಗುವ ವಸ್ತುಗಳೆಂದರೆ ನೀಲಿ ತವರ, ಪಾದರಸ, ಮತ್ತು ತೇಲಿಯಮ್.[೩೨]
ಸೋಸು ಪ್ರಮಾಣದಲ್ಲಿ ಸಿಗುವ ವಸ್ತುಗಳೆಂದರೆ ಅಮೇರಿಷಿಯಮ್, ಆಂಟಿಮೊನಿ, ಆರ್ಸೆನಿಕ್, ಬೇರಿಯಮ್, ಬಿಸ್ಮತ್, ಬೋರೋನ್, ಕೋಬಾಲ್ಟ್, ಯುರೋಪಿಯಮ್, ಗೇಲಿಯಮ್, ಜರ್ಮೇನಿಯಮ್, ಚಿನ್ನ, ಇಂಡಿಯಮ್, ಲಿತಿಯಮ್, ಮ್ಯಾಂಗನೀಸ್, ನಿಕಲ್, ನಯೋಬಿಯಮ್, ಪ್ಯಾಲೇಡಿಯಮ್, ಪ್ಲಾಟಿನಮ್, ರೋಢಿಯಮ್, ರುದೇನಿಯಮ್, ಸೆಲೆನಿಯಮ್, ಬೆಳ್ಳಿ, ಟ್ಯಾಂಟಲಮ್, ಟರ್ಬಿಯಮ್, ತೋರಿಯಮ್, ಟೈಟ್ಯಾನಿಯಮ್, ವೆನಡಿಯಮ್, ಮತ್ತು ಎಟ್ಟ್ರಿಯಮ್.
ಸೀಸ-ರಹಿತ ಸಾಲ್ಡರ್‌ಗಳು ಈಗ ಬಹು ಜನಪ್ರಿಯವಾಗುತ್ತಿದೆಯದರೂ, ಬಹುತೇಕ ಎಲ್ಲ ವಿದ್ಯುನ್ಮಾನ ಉಪಕರಣಗಳೂ ಸೀಸ ಮತ್ತು ತವರವನ್ನು ಹೊಂದಿರುತ್ತದೆ (ಸಾಲ್ಡರ್‌ಆಗಿ) ಮತ್ತು ತಾಮ್ರವನ್ನು ಹೊಂದಿರುತ್ತದೆ (ತಂತಿ ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಟ್ರ್ಯಾಕ್‌ಗಳಾಗಿ). ಕೆಲವು ಸಾಮಾನ್ಯ ಉಪಯೋಗಗಳನ್ನು ಕೆಳಗೆ ಕೊಟ್ಟಿದೆ:
ಅಪಾಯಕಾರಿ
[ಬದಲಾಯಿಸಿ]- ಅಮೇರಿಷಿಯಮ್: ಹೊಗೆ ಅಲಾರಾಂಗಳು (ರೇಡಿಯೋಆಯ್‌ಕ್ಟಿವ್ ಮೂಲ).
- ಪಾದರಸ: ಫ್ಲೂರೋಸೆಂಟ್ ಟ್ಯೂಬ್‌ಗಳು (ಅನೇಕ ಉಪಯೋಗಗಳು), ಬಾಗು ಸ್ವಿಚ್‌ಗಳು (ಪಿನ್‌ಬಾಲ್ ಆಟಗಳು, ಯಾಂತ್ರಿಕ ಕರೆಗಂಟೆಗಳು, ತರ್ಮೋಸ್ಟಾಟ್‌ಗಳು). ಹೊಸ ತಂತ್ರಜ್ಞಾನಗಳು ಬರುತ್ತಿದ್ದಂತೆ, ಹೊಸ-ಮಾದರಿ ಕಂಪ್ಯೂಟರ್‌ಗಳಲ್ಲಿ ಪಾದರಸವನ್ನು ಕೈಬಿಡುವ ಕೆಲಸಗಳಾಗುತ್ತಿವೆ.[೩೩]
- ಸಲ್ಫರ್: ಸೀಸದ-ಆಮ್ಲ ಬ್ಯಾಟರಿಗಳು.
- ಪಿಸಿಬಿಗಳು: ನಿಷೇದಿಸುವ ಮೊದಲು, ೧೯೩೦–೧೯೭೦ರ ದಶಕದ ಕ್ಯಾಪಾಸಿಟರ್ಸ್, ಟ್ರಾನ್ಸ್‌ಫಾರ್ಮರ್ಸ್, ವೈರಿಂಗ್ ಇನ್ಸುಲೇಷನ್, ಬಣ್ಣಗಳು, ಶಾಯಿಗಳು, ಮತ್ತು ಫ್ಲೆಕ್ಸಿಬಲ್ ಮುದ್ರಕಗಳನ್ನೊಳಗೊಂಡು ಬಹುತೇಕ ಎಲ್ಲ ಉಪಕರಣಗಳಿಗೂ ಇದನ್ನು ಬಳಸಲಾಗುತ್ತಿತ್ತು.
- ನೀಲಿ ತವರ: ಬೆಳಕು-ಗ್ರಾಹಿ ನಿರೋಧಕಗಳು, ಜಲ ಮತ್ತು ವಾಯು ಪರಿಸರಗಳಿಗಾಗಿ ತುಕ್ಕು-ನಿರೋಧಕ ಮಿಶ್ರಲೋಹಗಳು, ನಿಕಲ್-ನೀಲಿತವರ ಬ್ಯಾಟರಿಗಳು.
- ಸೀಸ: ಹಳೆಯ ಸಾಲ್ಡರ್, ಸಿಆರ್‌ಟಿ ಮಾನಿಟರ್ ಗಾಜು, ಸೀಸದ ಆಮ್ಲ ಬ್ಯಾಟರಿಗಳು, ಪಿವಿಸಿಯ ಕೆಲವು ರೂಪಕಗಳು.[೩೪] ಒಂದು ಸಾಮಾನ್ಯ ೧೫-ಇಂಚಿನ ಕ್ಯಾತೋಡ್ ಕಿರಣ ನಳಿಕೆಯು ೧.೫ ಪೌಂಡ್‌ಗಳಷ್ಟು ಸೀಸವನ್ನು ಹೊಂದಿರುತ್ತದೆ,[೨] ಆದರೆ ಇತರ ಸಿಆರ್‌ಟಿಗಳು ೮ ಪೌಂಡ್‌ಗಳವರೆಗೂ ಸೀಸವನ್ನು ಹೊಂದಿರುತ್ತವೆಂದು ಅಂದಾಜು ಮಾಡಲಾಗಿದೆ.[೨೦]
- ಬೆರಿಲಿಯಮ್ : ಕೆಲವು ಉಷ್ಣ ಸಂಪರ್ಕಸಾಧನ ಪದಾರ್ಥಗಳಾದ ಸಿಪಿಯುಗಳಿಗೆ ಬಳಸುವ ಹೀಟ್‌ಸಿಂಕ್‌ಗಳ ಮೇಲೆ ಬಳಸುವ ಉಷ್ಣದ ಗ್ರೀಸ್ ಮತ್ತು ಪವರ್ ಟ್ರಾನ್ಸಿಸ್ಟರ್ಗಳು,[೩೫] ಮ್ಯಾಗ್ನೆಟ್ರಾನ್‌ಗಳು, ಕ್ಷ-ಕಿರಣ-ಪಾರದರ್ಶಕ ಸೆರಾಮಿಕ್ ಕಿಟಕಿಗಳು, ನಿರ್ವಾತ ನಳಿಕೆಗಳ ಬಿಸಿ ವರ್ಗಾವಣೆ ರೆಕ್ಕೆಗಳು, ಮತ್ತು ಗ್ಯಾಸ್ ಲೇಸರ್‌ಗಳು.[೩೬]
ಸಾಮಾನ್ಯವಾಗಿ ಅಪಾಯಕಾರಿಯಲ್ಲದ
[ಬದಲಾಯಿಸಿ]- ತವರ:ಬೆಸುಗೆ,ಬಿಡಿಭಾಗಗಳ ತುದಿಯ ಮೇಲಿನ ಲೇಪನ.
- ತಾಮ್ರ: ತಾಮ್ರದ ತಂತಿ, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಟ್ರ್ಯಾಕ್‌ಗಳು,ಬಿಡಿಭಾಗಗಳ ತುದಿ.
- ಅಲ್ಯೂಮಿನಿಯಂ:ಎಲ್ಲಾ ವಿದ್ಯುನ್ಮಾನ ಸರಕುಗಳು ಶಕ್ತಿಯ ಕೆಲವು ವ್ಯಾಟ್ಸ್ ಹೆಚ್ಚಿಗೆ ಬಳಸುತ್ತವೆ(ಹೀಟ್ ಸಿಂಕ್)ವಿದ್ಯುದ್ವಿಚ್ಛೇದನದ ಧಾರಕ
- ಕಬ್ಬಿಣ: ಸ್ಟೀಲ್ ಅಡಿಗಟ್ಟು , ಪೆಟ್ಟಿಗೆ, ಮತ್ತು ಉಪಕರಣಗಳು.
- ಜರ್ಮೆನಿಯಮ್: ೧೯೫೦–೧೯೬೦ರ ವಿದ್ಯುನ್ಮಾನ ವಿದ್ಯುನ್ನಿಯಂತ್ರಕ (ಎರಡು ಧ್ರುವಗಳಿರುವ ವಿದ್ಯುನ್ನಿಯಂತ್ರಕಗಳ ಸಂಗಮ)
- ಸಿಲಿಕಾನ್ : ಗಾಜು, ವಿದ್ಯುನ್ನುಯಂತ್ರಕಗಳು, ಐ ಸಿ ಗಳು, ಪ್ರಿಂಟೆಡ್ ಸರ್ಕ್ಯೂಟ ಬೋರ್ಡ್‌ಗಳು.
- ನಿಕ್ಕೆಲ್: ನಿಕ್ಕೆಲ್-ಕ್ಯಾಡ್ಮಿಯಮ್ ಬ್ಯಾಟರಿಗಳು.
- ಲಿಥಿಯಮ್: ಲಿಥಿಯಮ್-ಐಯಾನ್ ಬ್ಯಾಟರಿಗಳು.
- ಸತು: ಸ್ಟೀಲ್ ಭಾಗಗಳಿಗೆ ಲೋಹ ಲೇಪನ ಮಾಡುವುದು.
- ಬಂಗಾರ: ಜೋಡಕ ಲೋಹ ಲೇಪನ,ಮುಖ್ಯವಾಗಿ ಕಂಪ್ಯೂಟರ್ ಉಪಕರಣಗಳಲ್ಲಿ.
ಇವನ್ನೂ ನೋಡಿ
[ಬದಲಾಯಿಸಿ]ಟೆಂಪ್ಲೇಟು:Portalpar ಟೆಂಪ್ಲೇಟು:Portalpar
- ದೇಶದಿಂದ ವಿದ್ಯುನ್ಮಾನ ತ್ಯಾಜ್ಯ
- ಇ-ಸೈಕ್ಲಿಂಗ್
- ಡಿಗ್ಗರ್ ಗೋಲ್ಡ್
- ಗ್ರೀನ್ ಕಂಪ್ಯೂಟಿಂಗ್
- ಪಾಲಿ ಕ್ಲೋರಿನೆಟೆಡ್ ಬೈಫಿನಾಯಿಲ್
- ಅಪಾಯಕಾರಿ ಚಿಲ್ಲರೆ ತ್ಯಾಜ್ಯ
- ಬಾಸೆಲ್ ಕನ್ವೆನ್ಷನ್
- ಮಟೀರಿಯಲ್ ಸೆಫ್ಟಿ ಡಾಟಾ ಶೀಟ್
- ಸಂಸ್ಥೆಗಳು
- ಇಂತರ್‌ನ್ಯಾಷನಲ್ ನೆಟ್‌ವರ್ಕ್ ಫಾರ್ ಎನ್ವಾಯರ್ಮೆಂಟಲ್ ಕಂಪ್ಲೈನ್ಸ್ ಆಯ್‌೦ಡ್ ಎನ್ಫೋರ್ಸ್‌ಮೆಂಟ್
- ಸಾಲ್ವಿಂಗ ದ ಇ-ವೇಸ್ಟ್ ಪ್ರಾಬ್ಲೆಮ್
- ವಲ್ಡ್ ರಿಯುಸ್, ರೀಪೇರ್ಸ್ ಆಯ್‌೦ಡ್ ರೀಸೈಕ್ಲಿಂಗ್ ಅಸೋಸಿಯೇಷನ್
ಆಕರಗಳು
[ಬದಲಾಯಿಸಿ]- ↑ https://www.google.co.in/search?q=electronic+waste&oq=electronic+waste&aqs=chrome..69i57j0j69i60l2j0l2.8440j0j7&client=ms-android-lenovo&sourceid=chrome-mobile&ie=UTF-8
- ↑ ೨.೦ ೨.೧ Morgan, Russell (2006-08-21). "Tips and Tricks for Recycling Old Computers". SmartBiz. Archived from the original on 2020-05-06. Retrieved 2009-03-17.
- ↑ ೩.೦ ೩.೧ ೩.೨ Prashant, Nitya (2008-08-20). "Cash For Laptops Offers 'Green' Solution for Broken or Outdated Computers". Green Technology. Norwalk, Connecticut: Technology Marketing Corporation. Retrieved 2009-03-17. ಇನ್ "Opinion". National Center For Electronics Recycling News Summary. National Center For Electronics Recycling. 2008-08-28. Archived from the original on 2011-07-26. Retrieved 2009-03-17.
- ↑ https://www.google.co.in/search?q=increase+in+electronic+waste&oq=increase+in+electronic&aqs=chrome.2.69i57j0l3.12086j0j7&client=ms-android-lenovo&sourceid=chrome-mobile&ie=UTF-8
- ↑ Slade, Giles (2007-04-01). "iWaste". Mother Jones. Retrieved 2007-04-03.
- ↑ Silicon Valley Toxic Corporation. "Poison PCs/Toxic TVs Executive Summary" (PDF). Archived from the original (PDF) on 2010-07-07. Retrieved 2006-11-13.
- ↑ LaMonica, Martin (2008-07-28). "Got a gadget gathering dust?". Green Tech. CNET News. Archived from the original on 2008-09-05. Retrieved 2008-03-05.
- ↑ Bray, Hiawatha (2008-10-30). "Scrounge up cash with used gadgets". Boston Globe. Globe Newspaper Company. Retrieved 2009-03-05.
- ↑ Harris, Mark (2008-08-17). "E-mail from America: Buy-back gadgets". Sunday Times. Seattle, Washington. Retrieved 2009-03-10.
- ↑ Judkis, Maura (2008-07-30). "4 Ways to Earn Cash for Recycling". Fresh Greens. U.S. News and World Report. Retrieved 2008-03-05.
- ↑ ೧೧.೦ ೧೧.೧ ೧೧.೨ Basel Action Network and Silicon Valley Toxics Coalition (2002-02-25). "Exporting Harm: The High-Tech Trashing of Asia" (PDF). Seattle and San Jose. Archived from the original (PDF) on 2008-03-09. Retrieved 2010-05-06.
- ↑ ಬಾಸೆಲ್.ಇನ್
- ↑ Kaley, Karlyn Black; Carlisle, Jim; Siegel, David; Salinas, Julio (2006). Health Concerns and Environmental Issues with PVC-Containing Building Materials in Green Buildings (PDF). Integrated Waste Management Board, California Environmental Protection Agency. p. 11. Archived from the original (PDF) on 2007-09-27. Retrieved 2007-08-03.
{{cite book}}
: Unknown parameter|month=
ignored (help)CS1 maint: multiple names: authors list (link) - ↑ Kuhlenbeck, Phil (2006-06-09). "Law holds businesses responsible for disposal of computers". Austin Business Journal. Retrieved 2009-03-17.
- ↑ Chea, Terence (2007-11-18). "America Ships Electronic Waste Overseas". Associated Press.
- ↑ Slade, Giles (2006). "Made To Break: Technology and Obsolescence in America". Harvard University Press. Archived from the original on 2010-03-09. Retrieved 2010-05-06.
- ↑ ೧೭.೦ ೧೭.೧ ೧೭.೨ Carroll. "High-Tech Trash". National Geographic Magazine Online. Archived from the original on 2007-12-20. Retrieved 2010-05-06.
{{cite news}}
: Unknown parameter|month=
ignored (help) - ↑ "Activists Push for Safer E-Recycling". Archived from the original on 2002-10-01. Retrieved 2006-11-13.
- ↑ "Computer age leftovers". Denver Post. Retrieved 2006-11-13.
- ↑ ೨೦.೦ ೨೦.೧ ೨೦.೨ ೨೦.೩ Royte, Elizabeth (2005-08-01). "E-gad! Americans discard more than 100 million computers, cellphones and other electronic devices each year. As "e-waste" piles up, so does concern about this growing threat to the environment". Smithsonian Magazine. Smithsonian Institution. Archived from the original on 2015-05-22. Retrieved 2009-03-17.
- ↑ "Computer waste disposal in China". Archived from the original (WMV) on 2008-12-17.
- ↑ "Illegal e-waste exposed". Greenpeace International. Archived from the original on 2008-07-11. Retrieved 2010-05-06.
- ↑ "E-Trash Industry Poses Hazards to Workers".
- ↑ "[[British Broadcasting Corporation]]". BBC News. 2005-10-14. Retrieved 2010-01-03.
{{cite news}}
: URL–wikilink conflict (help) - ↑ "Electronic Waste in Ghana". YouTube.
- ↑ "Poisoning the poor – Electronic Waste in Ghana". Greenpeace International. Archived from the original on 2008-08-08. Retrieved 2010-05-06.
- ↑ "[[British Broadcasting Corporation]]". BBC News. 2008-08-05. Retrieved 2010-01-03.
{{cite news}}
: URL–wikilink conflict (help) - ↑ "[[British Broadcasting Corporation]]". BBC News. 2006-11-27. Retrieved 2010-01-03.
{{cite news}}
: URL–wikilink conflict (help) - ↑ "[[British Broadcasting Corporation]]". BBC News. 2006-12-19. Retrieved 2010-01-03.
{{cite news}}
: URL–wikilink conflict (help) - ↑ "How to Find a Responsible Recycler". Electronics TakeBack Coalition. Archived from the original on 2009-05-08. Retrieved 2010-05-06.
- ↑ ೩೧.೦ ೩೧.೧ Haffenreffer, David (2003-02-13). "Recycling, the Hewlett-Packard Way". Financial Times. CNN. Archived from the original on 2013-01-02. Retrieved 2009-03-17.
- ↑ "Chemical fact sheet: Thallium". Spectrum Laboratories. Archived from the original on 2008-02-21. Retrieved 2008-02-02.
- ↑ "Question 8" (PDF).
- ↑ "CollectiveGood and Environmental Issues". Archived from the original on 2010-04-29. Retrieved 2010-05-06.
- ↑ Becker, Greg; Lee, Chris; Lin, Zuchen (2005). "Thermal conductivity in advanced chips: Emerging generation of thermal greases offers advantages". Advanced Packaging: 2–4. Archived from the original on 2000-06-21. Retrieved 2008-03-04.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ https://www.google.co.in/search?q=danger+of+electronic+waste&oq=danger+of+electronic+wa&aqs=chrome.2.69i57j33l3.13472j0j7&client=ms-android-lenovo&sourceid=chrome-mobile&ie=UTF-8
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸುದ್ದಿ
- CS1 errors: unsupported parameter
- CS1 maint: multiple names: authors list
- CS1 errors: URL–wikilink conflict
- Articles with hatnote templates targeting a nonexistent page
- Articles with unsourced statements from April 2010
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons link is locally defined
- ವಿದ್ಯುನ್ಮಾನ ತ್ಯಾಜ್ಯ
- ಪುನರ್ಬಳಕೆಯ ವಸ್ತುಗಳು
- ಪರಿಸರ
- ವಿದ್ಯುನ್ಮಾನ ಶಾಸ್ತ್ರ