ವಿಷಯಕ್ಕೆ ಹೋಗು

ವಿಜಯ್‌ ಹಜಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Vijay Hazare
ಚಿತ್ರ:VijayHazare.jpg
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Vijay Samuel Hazare
ಬ್ಯಾಟಿಂಗ್Right-handed
ಬೌಲಿಂಗ್Right-arm medium pace
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ22 June 1946 v England
ಕೊನೆಯ ಟೆಸ್ಟ್28 March 1953 v West Indies
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1934–1942Maharashtra
1935–1939Central India
1941–1961Baroda
1957–1958Holkar
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ First-class
ಪಂದ್ಯಗಳು ೩೦ ೨೩೮
ಗಳಿಸಿದ ರನ್ಗಳು ೨,೧೯೨ ೧೮,೭೪೦
ಬ್ಯಾಟಿಂಗ್ ಸರಾಸರಿ ೪೭.೬೫ ೫೮.೩೮
೧೦೦/೫೦ ೭/೯ ೬೦/೭೩
Top score ೧೬೪* ೩೧೬*
ಎಸೆತಗಳು ೨,೮೪೦ ೩೮,೪೪೭
ವಿಕೆಟ್‌ಗಳು ೨೦ ೫೯೫
ಬೌಲಿಂಗ್ ಸರಾಸರಿ ೬೧.೦೦ ೨೪.೬೧
ಐದು ವಿಕೆಟ್ ಗಳಿಕೆ ೨೭
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೪/೨೯ ೮/೯೦
ಹಿಡಿತಗಳು/ ಸ್ಟಂಪಿಂಗ್‌ ೧೧/– ೧೬೬/–
ಮೂಲ: Cricket Archive, 22 October 2010

ವಿಜಯ್‌ ಸ್ಯಾಮುಯಲ್‌ ಹಜಾರೆ pronunciation (ಜನನ: 1915ರ ಮಾರ್ಚ್‌ 11ರಂದು; ನಿಧನ: 2004ರ ಡಿಸೆಂಬರ್ 18ರಂದು) ಭಾರತದ ಮಾಜಿ ಕ್ರಿಕೆಟ್‌ ಆಟಗಾರರಾಗಿದ್ದರು. ಅವರು ಭಾರತದ ರಾಜ್ಯವಾದ ಮಹಾರಾಷ್ಟ್ರದ ಮೂಲದವರಾಗಿದ್ದರು. 1951ರಿಂದ 1953ರ ತನಕ, ವಿಜಯ್‌ ಹಜಾರೆ ಹದಿನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಭಾರತ ಟೆಸ್ಟ್‌ ಆಡಲು ಅರ್ಹತೆ ಪಡೆದು ಸುಮಾರು 20 ವರ್ಷಗಳ ನಂತರ, ತನ್ನ 25ನೆಯ ಟೆಸ್ಟ್‌ ಪಂದ್ಯದಲ್ಲಿ ಮೊಟ್ಟಮೊದಲ ಗೆಲುವು ಸಾಧಿಸಿತು. 1951-52ರ ಋತುವಿನಲ್ಲಿ, ವಿಜಯ್‌ ಹಜಾರೆ ಸಾರಥ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡದ‌ ವಿರುದ್ಧ ಚೆನ್ನೈಯಲ್ಲಿ ನಡೆದ ಕ್ರಿಕೆಟ್‌ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್‌ ಹಾಗೂ ಎಂಟು ರನ್‌ಗಳ ಅಂತರದಿಂದ ಗೆದ್ದಿತು. ಇದು ವಿಜಯ್‌ ಹಜಾರೆ ನಾಯಕತ್ವದ ಏಕೈಕ ಗೆಲುವಾಗಿತ್ತು. ಪಂದ್ಯದ ಸಂದರ್ಭದಲ್ಲಿ ಮೊದಲ ದಿನ ಬ್ರಿಟಿಷ್‌ ರಾಜ ಆರನೆಯ ಜಾರ್ಜ್‌ ನಿಧನರಾದದ್ದು ಈ ಪಂದ್ಯದ ನೆನಪಿನ ಅಂಶವಾಗಿತ್ತು.

ಆರಂಭಿಕ ಜೀವನ

[ಬದಲಾಯಿಸಿ]

ವಿಜಯ್‌ ಹಜಾರೆ 1915ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ, ನೌಕರ-ವರ್ಗದ ಮರಾಠಿ ಕ್ರಿಶ್ಚಿಯನ್‌ ಪ್ರೊಟೆಸ್ಟಂಟ್‌ ಕುಟುಂಬದಲ್ಲಿ ಜನಿಸಿದರು. ಶಾಲಾ ಅಧ್ಯಾಪಕರ ಎಂಟು ಮಂದಿ ಮಕ್ಕಳ ಪೈಕಿ ಇವರೂ ಒಬ್ಬರು.

ಸಾಂಗ್ಲಿಯ ಪ್ರೆಸ್ಬಿಟೆರಿಯನ್‌ ಮಿಷನ್‌ ಇಂಟರ್ನ್ಯಾಷನಲ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಕಿರಿ ವಯಸ್ಸಿನಲ್ಲೇ ಏಸು ಕ್ರಿಸ್ತನ ಮೇಲೆ ನಂಬಿಗೆಯಿಟ್ಟು ಪ್ರಾರ್ಥನೆ ಮಾಡುವದನ್ನು ಅವರ ತಾಯಿ ಹೇಳಿಕೊಡುತ್ತಿದ್ದರು. ಅವರ ಸರಳ ಧರ್ಮಶ್ರದ್ಧೆ ಮತ್ತು ಯೇಸುಕ್ರಿಸ್ತನನ್ನು ಅನುದಿನವೂ ಪ್ರಾರ್ಥಿಸಿದ ಫಲವಾಗಿ, ಅವರು ಆಧ್ಯಾತ್ಮಿಕವಾಗಿ ಹಾಗೂ ಮಾನಸಿಕವಾಗಿ ತಮ್ಮೆಲ್ಲಾ ಯಶಸ್ಸುಗಳಿಗೆ ಏಸುಕ್ರಿಸ್ತನೇ ಕಾರಣ ಎಂದು ನಂಬಿಕೊಂಡಿದ್ದರು.

'ನಾನು ನನ್ನ ವಿನಮ್ರ ಆರಂಭದ ಮೂಲ ಮತ್ತು ಧರ್ಮಶ್ರದ್ಧೆಯನ್ನು ಎಂದಿಗೂ ಮರೆಯಲಾರೆ' ಎಂದು ವಿಜಯ್‌ ಹಜಾರೆ ಹೇಳಿದ್ದುಂಟು. ಒಂದು ಹಂತದಲ್ಲಿ ಅವರ ವೃತ್ತಿಗೆ ಅವರ ಧರ್ಮಶ್ರದ್ಧೆಯೇ ಅಡ್ಡಿ ಎಂಬಂತೆ ತೋರುತ್ತಿತ್ತು. ಹಿಂದೂ ಜಿಂಕಾನ ತಂಡದ ಪರ ಆಡಲು ಅವರನ್ನು ಒಮ್ಮೆ ಆಮಂತ್ರಿಸಲಾಗಿತ್ತಂತೆ. ಈ ಆಮಂತ್ರಣವು ಬಹಳ ಪ್ರತಿಷ್ಠಿತವಾಗಿತ್ತು. ಹಿಂದೂ ಜಿಂಕಾನ ತಂಡಕ್ಕಾಗಿ ಆಡಿದ ಯಾವುದೇ ಆಟಗಾರ ಮುಂದೆ ಭಾರತೀಯ ಕ್ರಿಕೆಟ್‌ ತಂಡದ ಪರ ಆಡುವುದು ನಿಶ್ಚಿತವಾಗಿತ್ತು. ಆದರೆ, 'ನಾನು ಕ್ರೈಸ್ತ ಧರ್ಮದವನು' ಎಂದು ವಿಜಯ್ ಈ ಆಮಂತ್ರಣವನ್ನು ಸ್ವೀಕರಿಸಲಿಲ್ಲ. (ಆ ದಿನಗಳಲ್ಲಿ, ಕೇವಲ ಹಿಂದೂಗಳಿಗೆ ಮಾತ್ರ ಆ ತಂಡದಲ್ಲಿ ಆಡಲು ಅವಕಾಶವಿತ್ತು). ಇತರೆ ಧರ್ಮಗಳಿಗೆ ಸೇರಿದವರಿಗೂ ಅವಕಾಶ ದೊರಕಬೇಕು ಎಂದು ಕ್ರಿಕೆಟ್‌ ನಿಯಂತ್ರಣಾ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಡಿ ಮೆಲ್ಲೊ ನಿರ್ಣಯಿಸಿದಾಗ, ವಿಜಯ್‌ ನಿಲುವಿಗೆ ಬೆಂಬಲ ಸಿಕ್ಕಿದಂತಾಯಿತು. ಈ ನಿರ್ಧಾರದಿಂದಾಗಿ ಕೆಥೊಲಿಕ್‌ ಜಿಂಕಾನ ಕ್ರಿಕೆಟ್‌ ತಂಡ ಸಂಘಟಿತವಾಯಿತು.

ಮುಖ್ಯವಾಗಿ ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ವಿಜಯ್‌ ಹಜಾರೆ, ಬಲಗೈ ಮಧ್ಯಮ ವೇಗದ ಬೌಲರ್‌ ಸಹ ಆಗಿದ್ದರು. ಬಹಳ ದಾಕ್ಷಿಣ್ಯದ ಸ್ವಭಾವದವರು ಎಂದು ವಿಸ್ಡೆನ್ ‌ 1952ರಲ್ಲಿ ಅಭಿಪ್ರಾಯ ತಿಳಿಸಿತ್ತು. ಅವರು ಸಹಜ ನಾಯಕರಾಗಿರದಿದ್ದ ಕಾರಣ, ಅವರ ಬ್ಯಾಟಿಂಗ್‌ ಮೇಲೆ ನಕಾರಾತ್ಮಕ ಪ್ರಭಾವ ಬೀರಿತ್ತು ಎಂದು ವ್ಯಾಪಕವಾಗಿ ಊಹಿಸಲಾಯಿತು. ‌ 'ತಂಡದ ನಾಯಕತ್ವದ ಜವಾಬ್ದಾರಿಯಿಂದಾಗಿ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗುವುದಕ್ಕೆ ತೊಂದರೆಯಾಯಿತು. ಇದು ಕ್ರಿಕೆಟ್‌ನ ದುರಂತಗಳಲ್ಲಿ ಒಂದು' ಎಂದು ಅವರ ಪ್ರತಿಸ್ಪರ್ಧಿ ಎನ್ನಲಾದ ವಿಜಯ್‌ ಮರ್ಚೆಂಟ್‌ ಹೇಳಿದ್ದರು.

ಆದರೂ ಸಹ, ವಿಜಯ್‌ ಹಜಾರೆ ಅವರ ಟೆಸ್ಟ್‌ ದಾಖಲೆಯು ಬಹಳಷ್ಟು ಯಶಸ್ವಿಯಾಗಿತ್ತು: 30 ಟೆಸ್ಟ್‌ಗಳಲ್ಲಿ 47.65 ಬ್ಯಾಟಿಂಗ್‌ ಸರಾಸರಿಯಲ್ಲಿ 2,192 ರನ್‌ ಗಳಿಸಿದ್ದರು. ಇವರ ಪ್ರಥಮ ದರ್ಜೆಯ ದಾಖಲೆಯು ಇನ್ನಷ್ಟು ಪ್ರಭಾವಿಯಾಗಿದೆ. 58.38ರ ಬ್ಯಾಟಿಂಗ್‌ ಸರಾಸರಿಯಲ್ಲಿ 18,740 ರನ್‌ ಕೂಡಿಹಾಕಿದ್ದರು. ಸುನಿಲ್‌ ಗಾವಸ್ಕರ್‌, ಸಚಿನ್‌ ತೆಂಡೂಲ್ಕರ್‌ ಮತ್ತು ರಾಹುಲ್‌ ದ್ರಾವಿಡ್‌ ನಂತರ, ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ರನ್‌ ಮಾಡಿದ ಭಾರತೀಯ ಆಟಗಾರ ವಿಜಯ್‌ ಹಜಾರೆ. ಏಳು ಟೆಸ್ಟ್‌ ಶತಕಗಳು ಸೇರಿದಂತೆ, 60 ಪ್ರಥಮ ದರ್ಜೆಯ ಶತಕ ಗಳಿಸಿದ್ದರು. ಸುನಿಲ್‌ ಗಾವಸ್ಕರ್‌ ಮತ್ತು ಸಚಿನ್‌ ತೆಂಡೂಲ್ಕರ್‌ ನಂತರ ಮೂರನೆಯ ಅತಿ ಹೆಚ್ಚು ಶತಕಗಳ ಗಳಿಸಿದ ಭಾರತೀಯರಾಗಿದ್ದಾರೆ. ಅಲ್ಲದೆ, ಎರಡನೆಯ ವಿಶ್ವಯುದ್ಧ ನಡೆಯುತ್ತಿದ್ದ ಸಮಯ ಆರು ದ್ವಿಶತಕಗಳು ಸೇರಿದಂತೆ, ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಹತ್ತು ದ್ವಿಶತಕಗಳನ್ನೂ ಗಳಿಸಿದ್ದುಂಟು. ಆಗ, ಯುದ್ಧ ನಡೆಯುತ್ತಿದ್ದಾಗಲೂ, ದೇಶೀಯ ಪ್ರಥಮ ದರ್ಜೆಯ ಕ್ರಿಕೆಟ್‌ ಪಂದ್ಯಗಳನ್ನು ಅಡಚಣೆಯಿಲ್ಲದೇ ಆಯೋಜಿಸಿದ್ದ ಭಾರತ, ಏಕೈಕ ಕ್ರಿಕೆಟ್‌-ಆಡುವ ದೇಶವಾಗಿತ್ತು.

ವಿಜಯ್‌ ಹಜಾರೆಯವರ ಬೌಲಿಂಗ್‌ ದಾಖಲೆ ಹೇಳಿಕೊಳ್ಳು ವಷ್ಟು ವಿಜೃಂಭಿಸಲಿಲ್ಲ. ಟೆಸ್ಟ್‌ ಪಂದ್ಯಗಳಲ್ಲಿ 20 ವಿಕೆಟ್‌ಗಳು ಸೇರಿದಂತೆ, 24.61 ಬೌಲಿಂಗ್‌ ಸರಾಸರಿಯಲ್ಲಿ 595 ಪ್ರಥಮ ದರ್ಜೆ ವಿಕೆಟ್‌ ಗಳಿಸಿದರು. ಆಸ್ಟ್ರೇಲಿಯಾ ತಂಡದ ಮೇರು ಬ್ಯಾಟ್ಸ್‌ಮನ್‌ ಡೊನಾಲ್ಡ್‌ ಬ್ರ್ಯಾಡ್ಮನ್‌ರನ್ನು ಮೂರು ಬಾರಿ ಔಟ್‌ ಮಾಡಿದ್ದು ಅವರ ಬೌಲಿಂಗ್‌ ದಾಖಲೆಯ ಹೆಗ್ಗುರುತಾಗಿದೆ. ಭಾರತದ ಅಂತರ್ದೇಶೀಯ ಕ್ರಿಕೆಟ್‌ ಪಂದ್ಯಾವಳಿಗಳಲ್ಲಿ, ವಿಜಯ್ ಹಜಾರೆ ಮಹಾರಾಷ್ಟ್ರ, ಮಧ್ಯ ಭಾರತ ಹಾಗೂ ಬರೊಡಾ ತಂಡಗಳ ಪರ ಆಡಿದರು.

ಇವರ ಸಾಧನೆಗಳಲ್ಲಿ ಕೆಳಕಂಡವು ಸೇರಿವೆ:

  • ಕೆ. ಎಸ್‌. ದುಲೀಪ್‌ಸಿಂಹ್‌ಜಿ ಅವರನ್ನು ಬ್ರಿಟಿಷ್‌ ಕ್ರಿಕೆಟಿಗ ಎಂದು ಪರಿಗಣಿಸಿ, ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವೊಂದರಲ್ಲಿ ಮೊಟ್ಟಮೊದಲ ತ್ರಿಶತಕ ಗಳಿಸುವ ಮೊದಲ ಭಾರತೀಯ ವಿಜಯ್‌ ಹಜಾರೆ.
  • ಎರಡು ತ್ರಿಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌:
    • 1939-40ರ ಋತುವಿನಲ್ಲಿ ಮಹಾರಾಷ್ಟ್ರ ತಂಡದ ಪರ, ಪುಣೆ ವಿರುದ್ಧ 316 ರನ್ ಗಳಿಸಿ ಔಟಾಗದೆ ಉಳಿದದ್ದು,‌ ಅವರ ಸರ್ವೊನ್ನತ ಸ್ಕೋರ್‌.
    • ಎರಡನೆಯ ಬಾರಿ, 1943-44 ಋತುವಿನಲ್ಲಿ, ಮುಂಬಯಿಯಲ್ಲಿ, ಇತರೆ ಭಾರತ ತಂಡದ ಪರ ಬ್ಯಾಟ್‌ ಮಾಡಿ, ಹಿಂದೂ ತಂಡದ ವಿರುದ್ಧ 387 ಚೆಂಡೆಸೆತ ಎದುರಿಸಿ 309 ರನ್‌ ಗಳಿಸಿದರು. ವಿಜಯ್‌ ಹಜಾರೆಯವರ ಅಮೋಘ ಬ್ಯಾಟಿಂಗ್‌ ಪ್ರದರ್ಶನವಿದ್ದರೂ ಅವರ ತಂಡವು ಒಂದು ಇನ್ನಿಂಗ್ಸ್‌ ಅಂತರದಿಂದ ಸೋತಿತು. ಅವರ ಸಹೋದರ ವಿವೇಕ್‌ ಹಜಾರೆ ಒಂದಿಗೆ 300 ರನ್‌ಗಳ ಜೊತೆಯಾಟವೂ ಇತ್ತು. ಈ ಜೊತೆಯಾಟದಲ್ಲಿ ವಿಜಯ್‌ರದ್ದು 266 ರನ್‌ಗಳ ಕೊಡುಗೆ (88.6%ರಷ್ಟು ಪಾಲು), ವಿವೇಕ್‌ರದು 21 ರನ್‌ ಮಾತ್ರ. ತಮ್ಮ ತಂಡದ ಮೊತ್ತದಲ್ಲಿ 79.84%ರಷ್ಟು ರನ್‌ಗಳು ವಿಜಯ್‌ ಹಜಾರೆಯವರ ಕೊಡುಗೆಯಾಗಿತ್ತು. ಇದು ಆ ಕಾಲದ ವಿಶ್ವ ದಾಖಲೆಯಾಗಿತ್ತು. ತಂಡ ಸೋಲುವ ಪಂದ್ಯವೊಂದರಲ್ಲಿ ಇದು ಎರಡನೆಯ ಅತ್ಯುನ್ನತ ವೈಯಕ್ತಿಕ ಸ್ಕೋರ್‌ ಆಗಿದೆ. ಇತರೆ ಭಾರತ ತಂಡದ ಈ ಮೊತ್ತವು, ತ್ರಿಶತಕ ಹೊಂದಿರುವ ಅತಿ ಚಿಕ್ಕ ಮೊತ್ತವಾಗಿದೆ.
  • ಟೆಸ್ಟ್‌ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಮೊಟ್ಟಮೊದಲ ಭಾರತೀಯ ಬ್ಯಾಟ್ಸ್‌ಮನ್‌ ವಿಜಯ್‌ ಹಜಾರೆ. 1947-48 ಋತುವಿನಲ್ಲಿ, ಆಸ್ಟ್ರೇಲಿಯಾ ವಿರುದ್ಧ ಆಡಿಲೇಯ್ಡ್‌ನಲ್ಲಿ ಸತತ ಎರಡು ದಿನಗಳಲ್ಲಿ 116 ಮತ್ತು 145 ರನ್‌ ಗಳಿಸಿದರು. ಇದೇ ಆಸ್ಟ್ರೇಲಿಯಾ ಕ್ರಿಕೆಟ್‌‌ ತಂಡಕ್ಕೆ ದಿ ಇನ್ವಿನ್ಸಿಬಲ್ಸ್‌ ಎಂಬ ಬಿರುದು ನೀಡಲಾಗಿತ್ತು.
  • ವಿಪರ್ಯಾಸ ಎಂಬಂತೆ, 1951-52 ಋತುವಿನಲ್ಲಿ, ಇಂಗ್ಲೆಂಡ್‌ ವಿರುದ್ಧ ಕಾನ್ಪುರದಲ್ಲಿ ನಡೆದ ಕ್ರಿಕೆಟ್ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾದ ಮೊಟ್ಟಮೊದಲ ಭಾರತೀಯರೆನಿಸಿದರು.
  • ಮೂರು ಸತತ ಟೆಸ್ಟ್‌ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ
  • ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಯಲ್ಲಿ ಐವತ್ತು ಶತಕಗಳನ್ನು ಗಳಿಸಿದ ಮೊಟ್ಟಮೊದಲ ಭಾರತೀಯ
  • ಪ್ರಥಮ ದರ್ಜೆ ಕ್ರಿಕೆಟ್‌ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗಾಗಿ ಅತ್ಯುನ್ನತ ಜೊತೆಯಾಟದ ದಾಖಲೆ (1947ರಲ್ಲಿ ಬರೋಡಾದಲ್ಲಿ ನಡೆದ ರಣಜಿ ಟ್ರೊಫಿ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಹೊಲ್ಕರ್‌ ಆತಿಥೇಯ ತಂಡದ ಪರ ಆಡಿ ಗುಲ್ ಮೊಹಮ್ಮದ್‌ರೊಂದಿಗೆ ವಿರುದ್ಧ 577 ರನ್‌ಗಳ ಜೊತೆಯಾಟದ ಸಾಧನೆ). ಈ ದಾಖಲೆಯು ಹಲವು ವರ್ಷಗಳ ಕಾಲ ಹಾಗೆಯೇ ಇತ್ತು, ನಂತರ 2006ರಲ್ಲಿ ಕುಮಾರ ಸಂಗಕ್ಕರ ಮತ್ತು ಮಹೆಲಾ ಜಯವರ್ಧನ ಶ್ರೀಲಂಕಾ ತಂಡದ ಪರ ಆಡಿ, ದಕ್ಷಿಣ ಅಫ್ರಿಕಾ ವಿರುದ್ಧ ಕೊಲಂಬೊದಲ್ಲಿ (ಸಿನ್ಹಾಲೀಸ್‌ ಕ್ಲಬ್‌ ಮೈದಾನದಲ್ಲಿ) 624 ರನ್‌ಗಳ ಜೊತೆಯಾಟ ಸಾಧಿಸಿ, ವಿಜಯ್‌ ಹಜಾರೆ ಜೊತೆಯಾಟದ ದಾಖಲೆಯನ್ನು ಹಿಂದಿಕ್ಕಿದರು.
ವಿಜಯ್‌ ಹಜಾರೆಯವರ ವೃತ್ತಿ ಪ್ರದರ್ಶನದ ರೇಖಾನಕ್ಷೆ.

ನಿವೃತ್ತರಾದ ನಂತರ, ವಿಜಯ್‌ ಹಜಾರೆ ಕೆಲ ಕಾಲ ಭಾರತೀಯ ಟೆಸ್ಟ್‌ ಕ್ರಿಕೆಟ್‌ ಆಯ್ಕೆ ಮಂಡಳಿಯ ಸದಸ್ಯರಾಗಿದ್ದರು. ಅವರ ಗೌರವಾರ್ಥ ಅವರ ಹೆಸರಿನಲ್ಲಿ, ಭಾರತದಲ್ಲಿ ಪ್ರತಿ ವರ್ಷ ವಿಜಯ್‌ ಹಜಾರೆ ಟ್ರೊಫಿ ಅಂತರ-ವಲಯ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗುತ್ತದೆ. ಕರುಳಿನ ಅರ್ಬುದರೋಗದಿಂದ (ಕ್ಯಾನ್ಸರ್‌) ಉಂಟಾದ ಕಾಯಿಲೆಗೆ ತುತ್ತಾದ ವಿಜಯ್‌ ಹಜಾರೆ, 2004ರ ಡಿಸೆಂಬರ್‌ 18ರಂದು ನಿಧನರಾದರು.

ವಿಜಯ್ ಮತ್ತು ಜಸು ಪಟೇಲ್‌, ಪದ್ಮಶ್ರೀ ಪುರಸ್ಕೃತರಾಗಲು ಮೊದಲ ಕ್ರಿಕೆಟಿಗರಾಗಿದ್ದರು.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Preceded by Indian National Test Cricket Captain
1951/2-1952
Succeeded by
Preceded by Indian National Test Cricket Captain
1952/3
Succeeded by