ವಿಕಿಪೀಡಿಯ:ಸಂಪಾದನೋತ್ಸವಗಳು/ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಸಂಪಾದನೋತ್ಸವ ಸಂತ ಅಲೋಶಿಯಸ್ ಕಾಲೇಜು ಮಂಗಳೂರು
ಕನ್ನಡ ವಿಕಿಪೀಡಿಯದ ಹದಿಮೂರನೆಯ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಹೆಚ್ಚಿಸಲು ಸಂಪಾದನೋತ್ಸವ. ಸಮ್ಮಿಲನ-೧೯ರಲ್ಲಿ ಚರ್ಚೆಯಾದಂತೆ ಹದಿಮೂರನೆಯ ವರ್ಷಾಚರಣೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸಲಾಗಿದೆ.
ದಿನಾಂಕಗಳು ಮತ್ತು ಸ್ಥಳ
[ಬದಲಾಯಿಸಿ]- ದಿನಾಂಕ: ೧೪ನೆಯ ಫೆಬ್ರವರಿ ೨೦೧೬.
- ಸ್ಥಳ : ಸಂತ ಅಲೋಶಿಯಸ್ ಕಾಲೇಜು, ಮಂಗಳೂರು. ಗೂಗ್ಲ್ ಮ್ಯಾಪ್.
ಕಾರ್ಯಕ್ರಮ ವಿವರ
[ಬದಲಾಯಿಸಿ]ಹದಿಮೂರನೆಯ ವರ್ಷಾಚರಣೆಯ ಪ್ರಯುಕ್ತ ಈ ಕೆಳಗಿನಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಕಿಪೀಡಿಯ ಫೋಟೋ ನಡಿಗೆ
[ಬದಲಾಯಿಸಿ]ದಿನಾಂಕ ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ನಡೆಸಲಾಗುವುದು. ಕಾರ್ಯಕ್ರಮವನ್ನು ನಡೆಸಿಕೊಡುವವರು ಡಾ. ಯು.ಬಿ.ಪವನಜ. ಈ ಕಾರ್ಯಕ್ರಮವು ಮಧ್ಯಾಹ್ನ ೧.೩೦ ರಿಂದ ಸಂಜೆ ೪.೩೦ರ ತನಕ ನಡೆಯಲಿದೆ.
ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-than)
[ಬದಲಾಯಿಸಿ]ದಿನಾಂಕ ೧೪-೦೨-೨೦೧೬, ಭಾನುವಾರದಂದು ಬೆಳಗಿನಿಂದ ಮಧ್ಯಾಹ್ನದ ತನಕ ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆಯ ಔಪಚಾರಿಕ ಕಾರ್ಯಕ್ರಮವಿರುತ್ತದೆ. ಅದು ಮುಗಿದ ನಂತರ ೨:೦೦ ರಿಂದ ೫:೦೦ರ ವರೆಗೆ– ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-than)ವನ್ನು ನಡೆಸಲಾಗುತ್ತದೆ. ಈ ಸಂಪಾದನೋತ್ಸವದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ನುರಿತ ಸಂಪಾದಕರು ಪಾಲ್ಗೊಳ್ಳುವವರು. ಮತ್ತು ಈಗಾಗಲೇ ನಡೆಸಲಾದ ಸಂಪಾದನೋತ್ಸವಗಳಲ್ಲಿ ತರಬೇತಿ ಪಡೆದ ಸಂಪಾದಕರೂ ಲೇಖನಗಳನ್ನು ಸಂಪಾದಿಸಲು ಪಾಲ್ಗೊಳ್ಳುತ್ತಾರೆ. ಪಾಲ್ಗೊಳ್ಳುವವರು ಲೇಖನಗಳನ್ನು ಮುಂಚಿತವಾಗಿ ತಯಾರಿಸಿ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಾದಲ್ಲಿ ಹೊಸ ಲೇಖನಗಳನ್ನು ಬಿತ್ತರಿಸುತ್ತಾರೆ. ಹೆಚ್ಚು ಕಡಿಮೆ ೫೦ ಸಂಪಾದಕರು ಸುಮಾರು ೧೦೦ ಹೊಸ ಲೇಖನಗಳನ್ನು ಸೇರಿಸಬಹುದೆಂಬ ನಿರೀಕ್ಷೆಯಿದೆ.
ಉತ್ಸವದ ವಿಶೇಷ
[ಬದಲಾಯಿಸಿ]ಇದೊಂದು ಅಪೂರ್ವ ಸಂಪಾದನೋತ್ಸವ ಆಗುವುದೆಂಬುದು ಕನ್ನಡ ವಿಕಿಪೀಡಿಯನ್ನರ ನಂಬುಗೆ. ಯಾಕೆಂದರೆ ಈ ಸಂಪಾನೋತ್ಸವದಲ್ಲಿ ಹೊಸ ಲೇಖಕರು ಹಾಗೂ ನುರಿತ ಹಿರಿಯ ಸಂಪಾದಕರು ಭಾಗವಹಿಸಲಿದ್ದಾರೆ.
ಸೂಚನೆ ಗಮನಿಸಿ
[ಬದಲಾಯಿಸಿ]- ದಿನಾಂಕ ೧೩-೦೨-೨೦೧೬, ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮದಲ್ಲಿ ತೆಗೆಯಲಾಗುವ ಫೋಟೋಗಳಿಗೆ ಲೇಖನಗಳನ್ನು ತಯಾರಿಸಲಾಗುವುದು. ಹಾಗಾಗಿ ಫೋಟೋ ನಡಿಗೆಯಲ್ಲಿ ಪಾಲ್ಗೊಂಡು, ನೀವು ತೆಗೆಯುವ ಚಿತ್ರಗಳಿಗೆ ಅಲ್ಲೇ ಮಾಹಿತಿಯನ್ನು ಸಂಗ್ರಹಿಸಿ ಸಂಪಾದನೋತ್ಸವದಲ್ಲಿ ಲೇಖನಗಳನ್ನು ಸಂಪಾದಿಸುವುದು. ಫೋಟೋ, ವೀಡಿಯೋಗಳನ್ನು ವಿಕಿಮೀಡಿಯ ಕಾಮನ್ಸ್‌ಗೆ ಸೇರಿಸುವುದು.
- ಸಂಪಾದನೋತ್ಸವದಲ್ಲಿ ಭಾಗವಹಿಸುವವರಿಗೆ ಗಣಕ ಮತ್ತು ಅಂತರಜಾಲ ಸಂಪರ್ಕ ವ್ಯವಸ್ಥೆ ಇದೆ. ಭಾಗವಹಿಸುವ ಎಲ್ಲರಿಗೂ ಡೆಸ್ಕ್‌ಟಾಪ್ ವ್ಯವಸ್ಥೆ ನೀಡಲಾಗುವುದು. ಲ್ಯಾಪ್‌ಟಾಪ್ ಇರುವವರು ತರಬಹುದು.
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]ಭಾಗವಹಿಸಲು ಇಚ್ಛಿಸುವವರು
[ಬದಲಾಯಿಸಿ]ನೋಂದಣಿ
[ಬದಲಾಯಿಸಿ]ಭಾಗವಹಿಸಿದವರು ಮತ್ತು ಅವರ ಲೇಖನಗಳು
[ಬದಲಾಯಿಸಿ]ಛಾಯಾಚಿತ್ರಗಳು
[ಬದಲಾಯಿಸಿ]ಹದಿಮೂರನೆಯ ವಾರ್ಷಿಕೋತ್ಸವ ಸಂಪಾದನೋತ್ಸವದಲ್ಲಿ ಪಾಲ್ಗೊಂಡವರ ಛಾಯಾಚಿತ್ರಗಳು.