ವಿಕಿಪೀಡಿಯ:ಸಂಪಾದನೋತ್ಸವಗಳು/ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಸಂಪಾದನೋತ್ಸವ ಸಂತ ಅಲೋಶಿಯಸ್ ಕಾಲೇಜು ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದ ಹದಿಮೂರನೆಯ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಹೆಚ್ಚಿಸಲು ಸಂಪಾದನೋತ್ಸವ. ಸಮ್ಮಿಲನ-೧೯ರಲ್ಲಿ ಚರ್ಚೆಯಾದಂತೆ ಹದಿಮೂರನೆಯ ವರ್ಷಾಚರಣೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸಲಾಗಿದೆ.

ದಿನಾಂಕಗಳು ಮತ್ತು ಸ್ಥಳ[ಬದಲಾಯಿಸಿ]

  1. ದಿನಾಂಕ: ೧೪ನೆಯ ಫೆಬ್ರವರಿ ೨೦೧೬.
  2. ಸ್ಥಳ : ಸಂತ ಅಲೋಶಿಯಸ್ ಕಾಲೇಜು, ಮಂಗಳೂರು. ಗೂಗ್ಲ್ ಮ್ಯಾಪ್.

ಕಾರ್ಯಕ್ರಮ ವಿವರ[ಬದಲಾಯಿಸಿ]

ಹದಿಮೂರನೆಯ ವರ್ಷಾಚರಣೆಯ ಪ್ರಯುಕ್ತ ಈ ಕೆಳಗಿನಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಕಿಪೀಡಿಯ ಫೋಟೋ ನಡಿಗೆ[ಬದಲಾಯಿಸಿ]

ದಿನಾಂಕ ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ನಡೆಸಲಾಗುವುದು. ಕಾರ್ಯಕ್ರಮವನ್ನು ನಡೆಸಿಕೊಡುವವರು ಡಾ. ಯು.ಬಿ.ಪವನಜ. ಈ ಕಾರ್ಯಕ್ರಮವು ಮಧ್ಯಾಹ್ನ ೧.೩೦ ರಿಂದ ಸಂಜೆ ೪.೩೦ರ ತನಕ ನಡೆಯಲಿದೆ.

ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-than)[ಬದಲಾಯಿಸಿ]

ದಿನಾಂಕ ೧೪-೦೨-೨೦೧೬, ಭಾನುವಾರದಂದು ಬೆಳಗಿನಿಂದ ಮಧ್ಯಾಹ್ನದ ತನಕ ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆಯ ಔಪಚಾರಿಕ ಕಾರ್ಯಕ್ರಮವಿರುತ್ತದೆ. ಅದು ಮುಗಿದ ನಂತರ ೨:೦೦ ರಿಂದ ೫:೦೦ರ ವರೆಗೆ– ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-than)ವನ್ನು ನಡೆಸಲಾಗುತ್ತದೆ. ಈ ಸಂಪಾದನೋತ್ಸವದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ನುರಿತ ಸಂಪಾದಕರು ಪಾಲ್ಗೊಳ್ಳುವವರು. ಮತ್ತು ಈಗಾಗಲೇ ನಡೆಸಲಾದ ಸಂಪಾದನೋತ್ಸವಗಳಲ್ಲಿ ತರಬೇತಿ ಪಡೆದ ಸಂಪಾದಕರೂ ಲೇಖನಗಳನ್ನು ಸಂಪಾದಿಸಲು ಪಾಲ್ಗೊಳ್ಳುತ್ತಾರೆ. ಪಾಲ್ಗೊಳ್ಳುವವರು ಲೇಖನಗಳನ್ನು ಮುಂಚಿತವಾಗಿ ತಯಾರಿಸಿ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಾದಲ್ಲಿ ಹೊಸ ಲೇಖನಗಳನ್ನು ಬಿತ್ತರಿಸುತ್ತಾರೆ. ಹೆಚ್ಚು ಕಡಿಮೆ ೫೦ ಸಂಪಾದಕರು ಸುಮಾರು ೧೦೦ ಹೊಸ ಲೇಖನಗಳನ್ನು ಸೇರಿಸಬಹುದೆಂಬ ನಿರೀಕ್ಷೆಯಿದೆ.

ಉತ್ಸವದ ವಿಶೇಷ[ಬದಲಾಯಿಸಿ]

ಇದೊಂದು ಅಪೂರ್ವ ಸಂಪಾದನೋತ್ಸವ ಆಗುವುದೆಂಬುದು ಕನ್ನಡ ವಿಕಿಪೀಡಿಯನ್ನರ ನಂಬುಗೆ. ಯಾಕೆಂದರೆ ಈ ಸಂಪಾನೋತ್ಸವದಲ್ಲಿ ಹೊಸ ಲೇಖಕರು ಹಾಗೂ ನುರಿತ ಹಿರಿಯ ಸಂಪಾದಕರು ಭಾಗವಹಿಸಲಿದ್ದಾರೆ.

ಸೂಚನೆ ಗಮನಿಸಿ[ಬದಲಾಯಿಸಿ]

  1. ದಿನಾಂಕ ೧೩-೦೨-೨೦೧೬, ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮದಲ್ಲಿ ತೆಗೆಯಲಾಗುವ ಫೋಟೋಗಳಿಗೆ ಲೇಖನಗಳನ್ನು ತಯಾರಿಸಲಾಗುವುದು. ಹಾಗಾಗಿ ಫೋಟೋ ನಡಿಗೆಯಲ್ಲಿ ಪಾಲ್ಗೊಂಡು, ನೀವು ತೆಗೆಯುವ ಚಿತ್ರಗಳಿಗೆ ಅಲ್ಲೇ ಮಾಹಿತಿಯನ್ನು ಸಂಗ್ರಹಿಸಿ ಸಂಪಾದನೋತ್ಸವದಲ್ಲಿ ಲೇಖನಗಳನ್ನು ಸಂಪಾದಿಸುವುದು. ಫೋಟೋ, ವೀಡಿಯೋಗಳನ್ನು ವಿಕಿಮೀಡಿಯ ಕಾಮನ್ಸ್‌ಗೆ ಸೇರಿಸುವುದು.
  2. ಸಂಪಾದನೋತ್ಸವದಲ್ಲಿ ಭಾಗವಹಿಸುವವರಿಗೆ ಗಣಕ ಮತ್ತು ಅಂತರಜಾಲ ಸಂಪರ್ಕ ವ್ಯವಸ್ಥೆ ಇದೆ. ಭಾಗವಹಿಸುವ ಎಲ್ಲರಿಗೂ ಡೆಸ್ಕ್‌ಟಾಪ್ ವ್ಯವಸ್ಥೆ ನೀಡಲಾಗುವುದು. ಲ್ಯಾಪ್‌ಟಾಪ್ ಇರುವವರು ತರಬಹುದು.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. --ಯು. ಬಿ. ಪವನಜ
  2. --Vishwanatha Badikana (ಚರ್ಚೆ)

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

ನೋಂದಣಿ[ಬದಲಾಯಿಸಿ]

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

ಛಾಯಾಚಿತ್ರಗಳು[ಬದಲಾಯಿಸಿ]

ಹದಿಮೂರನೆಯ ವಾರ್ಷಿಕೋತ್ಸವ ಸಂಪಾದನೋತ್ಸವದಲ್ಲಿ ಪಾಲ್ಗೊಂಡವರ ಛಾಯಾಚಿತ್ರಗಳು.