ವಿಂಡೋಸ್ 7
Windows 7 | |
---|---|
Part of the Microsoft Windows family | |
Screenshot of Windows 7 Ultimate Edition | |
Developer | |
Microsoft Corporation | |
Website | Official Website |
Releases | |
Initial release | RTM: July 22, 2009 Retail: October 22, 2009 [info] |
Stable release | 6.1[೧] (build 7600)[೨] (ಅಕ್ಟೋಬರ್ 22, 2009 ) [info] |
Source model | Closed source / Shared source |
License | MS-EULA |
Kernel type | Hybrid |
Update method | Windows Update |
Platform support | IA-32, x86-64, various ARM platforms[೩] |
Support status | |
Mainstream support until January 13, 2015.[೪] | |
Further reading | |
ವಿಂಡೋಸ್ 7 ಎಂಬ ತಂತ್ರಾಶವು, ಮೈಕ್ರೋಸಾಫ್ಟ್ ವಿಂಡೋಸ್ ನ ಒಂದು ಉತ್ಪನ್ನವಾಗಿದೆ. ಇದು ಮೈಕ್ರೋಸಾಫ್ಟ್ ರಚಿತ ಕಾರ್ಯನಿರ್ವಹಣಾ ವಿಧಾನಗಳ ಸರಣಿಯಾಗಿದೆ. ಇದು ಗೃಹಬಳಕೆ ಮತ್ತು ವ್ಯಾಪಾರ ಡೆಸ್ಕ್ ಟಾಪ್ ಗಳು, ಲ್ಯಾಪ್ ಟಾಪ್ ಗಳು, ನೆಟ್ ಬುಕ್ ಗಳು, ಟ್ಯಾಬ್ಲೆಟ್ PC ಗಳು, ಮತ್ತು ಮೀಡಿಯಾ ಸೆಂಟರ್ PC ಗಳನ್ನು ಒಳಗೊಂಡಂತೆ ವೈಯಕ್ತಿಕ ಕಂಪ್ಯೂಟರ್ ಗಳ ಮೇಲೆ ಬಳಸುವ ಉತ್ಪನ್ನವಾಗಿದೆ.[೫] ವಿಂಡೋಸ್ 7 ಅನ್ನು ಸಿದ್ದಪಡಿಸಿ 2009 ರ ಜುಲೈ 22 ರಂದು ಬಿಡುಗಡೆ ಮಾಡಲಾಯಿತು.[೬] ಅಲ್ಲದೇ ಇದು ಸಾರ್ವತ್ರಿಕ ಸಗಟು ವ್ಯಾಪಾರಿಗಳಲ್ಲಿ 2009 ರ ಅಕ್ಟೋಬರ್ 22 ರಿಂದ ದೊರೆವಂತಾಯಿತು.[೭], ಇದರ ಪೂರ್ವವರ್ತಿ ವಿಂಡೋಸ್ ವಿಸ್ಟಾ ಬಿಡುಗಡೆಯಾದ ಮೂರುವರ್ಷದ ಅವಧಿಯೊಳಗೆ ಇದನ್ನು ಬಿಡುಗಡೆ ಮಾಡಲಾಯಿತು. ಅದಕ್ಕೆ ಪೂರಕವಾದ ವಿಂಡೋಸ್ 7 ನ ಸರ್ವರ್ ಪ್ರತಿ, ವಿಂಡೋಸ್ ಸರ್ವರ್ 2008 R2 ಅನ್ನು ಕೂಡ ಇದೇ ಸಮಯದಲ್ಲಿ ಬಿಡುಗಡೆ ಮಾಡಲಾಯಿತು.
ವಿಂಡೋಸ್ 7, ಅಸಂಖ್ಯಾತ ವಿಶೇಷ ಗುಣಲಕ್ಷಣಗಳನ್ನು ಪರಿಚಯಿಸಿದ ಅದರ ಪೂರ್ವವರ್ತಿ ವಿಂಡೋಸ್ ವಿಸ್ಟಾದಂತಿರದೇ , ವಿಂಡೋಸ್ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸುವ ಮತ್ತು ಹೆಚ್ಚುವರಿ ಮಾಹಿತಿ ದಾಖಲಿಸುವ ಉದ್ದೇಶ ಹೊಂದಿದೆ. ಇದರ ಜೊತೆ ಆ ಸಮಯದಲ್ಲಿ ವಿಂಡೋಸ್ ವಿಸ್ಟಾಗೆ ಅನ್ವಯಿಸಲು ಸಾಧ್ಯವಾಗದ ಅನ್ವಯಿಕೆಗಳು ಮತ್ತು ಯಂತ್ರಾಂಶಗಳೊಂದಿಗೆ ಹೊಂದಿಕೆಯಾಗುವ ಗುರಿ ಹೊಂದಿದೆ.[೮] ಆಗ 2008 ರಲ್ಲಿ ಮೈಕ್ರೋಸಾಫ್ಟ್ ನೀಡಿದ ಪ್ರದರ್ಶನಗಳಲ್ಲಿ ಬಹು-ಸ್ಪರ್ಶ(ಮಲ್ಟಿ ಟಚ್) ಬೆಂಬಲದ(ಸಪೋರ್ಟ್) ಮೇಲೆ ಹೆಚ್ಚು ಗಮನ ಹರಿಸಲಾಯಿತು. ಅಲ್ಲದೇ ಹೊಸ ಟಾಸ್ಕ್ ಬಾರ್(ಕಾರ್ಯಪಟ್ಟಿಕೆ) ನೊಂದಿಗೆ ಪುನರ್ವಿನ್ಯಾಸಗೊಳಿಸಿದ ವಿಂಡೋಸ್ ಶೆಲ್ ಅನ್ನು ಸೂಪರ್ ಬಾರ್ ಎಂದು, ಹಾಗು ಗೃಹ,ಸ್ಥಳೀಯ ಸಂಪರ್ಕಜಾಲ ವ್ಯವಸ್ಥೆಯನ್ನು ಹೋಮ್ ಗ್ರೂಪ್ ಎಂದು ಕರೆಯಲಾಯಿತು,[೯] ಇಲ್ಲಿ ಇದರ ಅರ್ಪಣೆಗೆ ಮೊದಲು ಸುಧಾರಣೆಯ ಕಡೆಗೂ ಗಮನಹರಿಸಲಾಯಿತು. ಮೈಕ್ರೋಸಾಫ್ಟ್ ವಿಂಡೋಸ್ ನ ಮುಂಚಿನ ಬಿಡುಗಡೆಗಳೊಂದಿಗೆ ಸೇರಿಸಲಾಗಿದ್ದ ಕೆಲವೊಂದು ಪ್ರಮಾಣಕ ಅನ್ವಯಿಕೆಗಳು ಕೆಳಕಂಡಂತಿವೆ: ವಿಂಡೋಸ್ ಕ್ಯಾಲಂಡರ್, ವಿಂಡೋಸ್ ಮೇಲ್, ವಿಂಡೋಸ್ ಮೂವೀ ಮೇಕರ್, ಮತ್ತು ವಿಂಡೋಸ್ ಫೋಟೋ ಗ್ಯಾಲರಿ, ಇವುಗಳನ್ನು ವಿಂಡೋಸ್ 7 ನಲ್ಲಿ ಸೇರಿಸಲಾಗಿಲ್ಲ;[೧೦][೧೧] ಇವುಗಳಲ್ಲಿ ಬಹುಪಾಲು ಅನ್ವಯಿಕೆಗಳನ್ನು ವಿಂಡೋಸ್ ಲೈವ್ ಎಸೆನ್ಷಿಯಲ್ ಗಳ ಗುಂಪಿನ ಭಾಗವಾಗಿ, ನೋ ಚಾರ್ಚ್ ನಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.[೧೨]
ಅಭಿವೃದ್ಧಿ
[ಬದಲಾಯಿಸಿ]ಮೂಲತಃ, ವಿಂಡೋಸ್ ನ ಆವೃತ್ತಿಯ ಸಂಕೇತ ನಾಮವಾದ ಬ್ಲ್ಯಾಕ್ ಕೋಮ್ ಅನ್ನು, ವಿಂಡೋಸ್ XP (ಸಂಕೇತನಾಮ ವಿಸ್ಟಲರ್) ಮತ್ತು ವಿಂಡೋಸ್ ಸರ್ವರ್ 2003ಯ ಮುಂದಿನ ಆವೃತ್ತಿಯಂತೆಯೇ ಯೋಜಿಸಲಾಗಿತ್ತು. ಬ್ಲ್ಯಾಕ್ ಕೋಮ್ ಗಾಗಿ ಯೋಜಿಸಲಾದ ಪ್ರಮುಖ ಲಕ್ಷಣಗಳು ಕೆಳಕಂಡಂತಿವೆ: ದತ್ತಾಂಶದ ಶೋಧನೆ ಮತ್ತು ವಿಚಾರಣೆಗೆ ಪ್ರಾಧಾನ್ಯ ನೀಡುವುದು. ಅಂತಹ ವಿದ್ಯಮಾನಗಳನ್ನು ಸಾಧ್ಯವಾಗಿಸಲು WinFS ಎಂದು ಕರೆಯಲಾಗುವ ಮುಂದುವರೆದ ಸಂಗ್ರಹಣಾ ವಿಧಾನದ ಅಳವಡಿಕೆಯನ್ನು ಒಳಗೊಂಡಿದೆ. ಅದೇನೇ ಆದರೂ ಈ ನಡುವೆ ಬ್ಲ್ಯಾಕ್ ಕೋಮ್ ನ ಅಭಿವೃದ್ಧಿಯನ್ನು ವಿಳಂಬಿಸಿ, "ಲಾಂಗ್ ಹಾರ್ನ್" ಎಂಬ ಸಂಕೇತನಾಮಾಂಕಿತ ಸಣ್ಣ ಪ್ರಮಾಣದ ಬಿಡುಗಡೆಯನ್ನು 2003 ಕ್ಕಾಗಿ ಪ್ರಕಟಿಸಲಾಯಿತು.[೧೩] ಆದರೂ, 2003ರ ಮಧ್ಯಾವಧಿಗೆ ಮೂಲತಃ ಬ್ಲ್ಯಾಕ್ ಕೋಮ್ ಗಾಗಿ ಉದ್ದೇಶಿಸಲಾಗಿದ್ದ ಕೆಲವೊಂದು ಗುಣಲಕ್ಷಣಗಳನ್ನು ಲಾಂಗ್ ಹಾರ್ನ್ ಪಡೆದುಕೊಂಡಿತು. ಸ್ವಲ್ಪ ಕಾಲವಧಿಯಲ್ಲಿಯೇ ಅಂದರೆ 2003 ರಲ್ಲಿ ವಿಂಡೋಸ್ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಮೂರು ಪ್ರಮುಖ ವೈರಸ್ ಗಳು ಉಂಟುಮಾಡಿದ ಹಾನಿಯ ನಂತರ, ಮೈಕ್ರೋಸಾಫ್ಟ್ ಅದರ ಅಭಿವೃದ್ಧಿಯ ಆದ್ಯತೆಗಳನ್ನು ಬದಲಾಯಿಸಿಕೊಂಡಿತು. ಅಲ್ಲದೇ ಲಾಂಗ್ ಹಾರ್ನ್ ನ ಕೆಲವೊಂದು ಪ್ರಮುಖ ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸಿ, ವಿಂಡೋಸ್ XP ಮತ್ತು ವಿಂಡೋಸ್ ಸರ್ವರ್ 2003 ಕ್ಕಾಗಿ ಹೊಸ ಸರ್ವೀಸ್ ಪ್ಯಾಕ್ ಅನ್ನು ಅಭಿವೃದ್ಧಿಪಡಿಸಿತು. ಲಾಂಗ್ ಹಾರ್ನ್ (ವಿಂಡೋಸ್ ವಿಸ್ಟಾ) ನ ಅಭಿವೃದ್ಧಿಯನ್ನು ಪುನಃ ಪ್ರಾರಂಭಿಸಲಾಯಿತು. ಈ ರೀತಿಯಾಗಿ 2004 ರ ಆಗಸ್ಟ್ ನಲ್ಲಿ ಇದು ವಿಳಂಬ ಕಂಡಿತು. ಲಾಂಗ್ ಹಾರ್ನ್ ನಿಂದ ಅನೇಕ ವಿಶೇಷ ಲಕ್ಷಣಗಳನ್ನು ತೆಗೆದುಹಾಕಲಾಯಿತು.[೧೪]
ಬ್ಲ್ಯಾಕ್ ಕೋಮ್ ಗೆ 2006 ರ ಪೂರ್ವಾರ್ಧದಲ್ಲಿ ವಿಯೆನ್ನಾ ಎಂದು ಪುನರ್ನಾಮಕರಣ ಮಾಡಲಾಯಿತು[೧೫], ಹಾಗು 2007 ರಲ್ಲಿ ಮತ್ತೊಮ್ಮೆ ವಿಂಡೋಸ್ 7 ಎಂಬ ಹೊಸ ಹೆಸರನ್ನಿಡಲಾಯಿತು.[೧೬] ವಿಂಡೋಸ್ 7 ಎಂಬುದು ಕೂಡ ಕಾರ್ಯನಿರ್ವಹಣಾ ವ್ಯವಸ್ಥೆಯ ಆಧಿಕೃತ ಹೆಸರಾಗಿದೆ ಎಂದು 2008ರಲ್ಲಿ ಪ್ರಕಟಿಸಲಾಯಿತು.[೧೭][೧೮] ವಿಂಡೋಸ್ 7 ಉತ್ಪನ್ನಕ್ಕೆ ಹೆಸರನ್ನಿಡುವ ಬಗ್ಗೆ ಕೆಲವು ಗೊಂದಲಗಳಿದ್ದವು.[೧೯] ವಿಸ್ಟಾ ಗೆ ಸದೃಶವಾಗಿರುವ ಇದರ ನಿರ್ಮಾಣ ಸೂಚಿಸಲು, ಹಾಗು ಕೇವಲ ಪ್ರಮುಖ ಆವೃತ್ತಿ ಸಂಖ್ಯೆಗಳನ್ನು ಮಾತ್ರ ಪರೀಕ್ಷಿಸುವ ಅನ್ವಯಿಕೆಗಳೊಂದಿಗೆ ಹೊಂದಾಣಿಕೆಯನ್ನು ಹೆಚ್ಚಿಸಲಾಯಿತು. ಇದನ್ನು 6.1 ರಂತೆ ಆವೃತ್ತಿಕರಿಸುವಾಗ,[೨೦] ಇದು ವಿಂಡೋಸ್ 2000 ಮತ್ತು ವಿಂಡೋಸ್ XP ಗೆ ಸದೃಶವಾಗಿರುವಂತೆ ಕಂಡುಬಂದಿತು. ಇವೆರೆಡೂ ಕೂಡ 5.x ಆವೃತ್ತಿ ಸಂಖ್ಯೆಯನ್ನು ಹೊಂದಿವೆ.[೨೧]
ಮೈಕ್ರೋಸಾಫ್ಟ್ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳಲು 2008 ರ ಜನವರಿಯಲ್ಲಿ ಮೈಲ್ ಸ್ಟೋನ್ 1, ನಿರ್ಮತಿ 6519 ರೊಂದಿಗೆ ಮೊದಲ ಬಾಹ್ಯ ಬಿಡುಗಡೆಯನ್ನು ಮಾಡಲಾಯಿತು.[೨೨] ನಂತರ 2008 ರ PDCಯಲ್ಲಿ ಮೈಕ್ರೋಸಾಫ್ಟ್, ಪುನಃ ಬದಲಾಯಿಸಿದ ಅದರ ಟಾಸ್ಕ್ ಬಾರ್ ನೊಂದಿಗೆ ವಿಂಡೋಸ್ 7 ಅನ್ನು ಪ್ರದರ್ಶಿಸಿತು. ವಿಂಡೋಸ್ 7 ನಿರ್ಮಾಣ 6801ರ ಪ್ರತಿಗಳನ್ನು ಸಮಾವೇಶದ ಕೊನೆಯಲ್ಲಿ ವಿತರಿಸಲಾಯಿತು; ಆದರೂ, ಪ್ರದರ್ಶಿಸಲಾದ ಟಾಸ್ಕ್ ಬಾರ್ ಈ ನಿರ್ಮಾಣದಲ್ಲಿರಲಿಲ್ಲ.
ಡಿಸೆಂಬರ್ 27, 2008 ರಂದು ವಿಂಡೋಸ್ 7 ರ ಬೀಟಾ, ಬಿಟ್ ಟಾರಂಟ್ ನ ಮೂಲಕ ಅಂತರಜಾಲದಲ್ಲಿ ಬಯಲಾಯಿತು.[೨೩] ZDNet ನಡೆಸಿದ ದಕ್ಷತಾ ಪರೀಕ್ಷೆಗಳಲ್ಲಿ,[೨೪] ವಿಂಡೋಸ್ 7 ರ ಬೀಟಾ, ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ವಿಂಡೋಸ್ XP ಮತ್ತು ವಿಸ್ಟಾವನ್ನು ಮೀರಿಸುತ್ತದೆ; ಇದು ಬೂಟ್ ಮತ್ತು ಷಟ್ ಡೌನ್ ನ ಸಮಯ ಹಾಗು ದಾಖಲೆಗಳನ್ನು ಭರಿಸುವಂತಹ(ಲೋಡ್) ಕಡತ(ಫೈಲ್ಸ್)ಗಳೊಂದಿಗಿನ ಕಾರ್ಯ ಒಳಗೊಂಡಿದೆ. ಇತರ ಕ್ಷೇತ್ರಗಳು XPಯನ್ನು ಮೀರಿಸಲಾರವು; ಕಚೇರಿಯ ಸಾಮಾನ್ಯ ಕಾರ್ಯಚುಟುವಟಿಕೆಗಳಿಗೆ ಮತ್ತು ವಿಡಿಯೋ ಸಂಪಾದನೆಗೆ ಬಳಸುವ PC ಪ್ರೋ ಮಾನದಂಡಗಳನ್ನು ಒಳಗೊಂಡಿದೆ. ಇದು ವಿಸ್ಟಾಗೆ ಅನನ್ಯವಾಗಿ ಮತ್ತು XP ಗಿಂತ ನಿಧಾನ ಗತಿಯಲ್ಲಿ ಉಳಿದುಕೊಂಡಿತು.[೨೫] ಆಗ 2009ರ ಜನವರಿ 7 ರಂದು, ವಿಂಡೋಸ್ 7 ಬೀಟಾ(ನಿರ್ಮಾಣ 7000)ದ 64-ಬಿಟ್ಆವೃತ್ತಿ, ಕೆಲವೊಂದು ಟಾರಂಟೊಗಳೊಂದಿಗೆ ವೆಬ್ ನಲ್ಲಿ ಬಹಿರಂಗವಾಯಿತು. ಇವುಗಳು ಆಕ್ರಮಣಕಾರಿ ಟ್ರೋಜನ್ ನಿಂದ ಹಾನಿಗೊಳಗಾಗಿದ್ದವು.[೨೬][೨೭] ಅದೇ ಸಮಯದ 2009 ರ CESನಲ್ಲಿ, ಮೈಕ್ರೋಸಾಫ್ಟ್ ನ CEO ಸ್ಟೀವ್ ಬ್ಯಾಲ್ಮರ್, ವಿಂಡೋಸ್ 7 ಬೀಟಾ ನಿರ್ಮಾಣ 7000, ISO ಚಿತ್ರದ ಸ್ವರೂಪದಲ್ಲಿ MSDN ಮತ್ತು TechNet ನ ಚಂದಾದಾರರಿಗೆ ಡೌನ್ ಲೋಡ್ (ಪಡೆಯಲು)ಮಾಡಿಕೊಳ್ಳಲು ಲಭ್ಯವಿದೆ ಎಂಬುದನ್ನು ಪ್ರಕಟಿಸಿದರು.[೨೮] ಬೀಟಾವನ್ನು 2009 ರ ಜನವರಿ 9 ರಂದು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು. ಅಲ್ಲದೇ ಮೈಕ್ರೋಸಾಫ್ಟ್, ಈ ದಿನಾಂಕದಂದು 2.5 ಮಿಲಿಯನ್ ಜನರಿಗೆ ಡೌನ್ ಲೌಡ್ ಸಾಧ್ಯವಾಗುವಂತಹ ಆರಂಭಿಕ ಯೋಜನೆ ರೂಪಿಸಿತ್ತು. ಆದರೂ ಅಧಿಕ ಸಂಪರ್ಕ ದಟ್ಟಣೆಯಿಂದಾಗಿ ಡೌನ್ ಲೋಡ್ ಮಾಡಿಕೊಳ್ಳುವುದು ತಡವಾಯಿತು.[೨೯] ಡೌನ್ ಲೋಡ್ ನ ಪರಿಮಿತಿಯನ್ನು ಪ್ರಾರಂಭದಲ್ಲಿ ಜನವರಿ 24 ರ ವರೆಗೆ, ಅನಂತರ ಫೆಬ್ರವರಿ 10 ರ ವರೆಗೂ ವಿಸ್ತರಿಸಲಾಯಿತು. ಬೀಟಾ ಡೌನ್ ಲೋಡಿಂಗ್ ಅನ್ನು ಸಂಪೂರ್ಣಗೊಳಿಸದವರು, ಡೌನ್ ಲೋಡ್ ಅನ್ನು ಸಂಪೂರ್ಣಗೊಳಿಸಲು ಇನ್ನೂ ಅಧಿಕ ಎರಡು ದಿನಗಳನ್ನು ತೆಗೆದುಕೊಂಡರು. ಫೆಬ್ರವರಿ 12 ರ ನಂತರ, ಸಂಪೂರ್ಣಗೊಳ್ಳದ ಡೌನ್ ಲೋಡ್ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಳಕೆದಾರರು, 2009 ರ ಆಗಸ್ಟ್ ನಲ್ಲಿ ಮುಕ್ತಾಯವಾಗಿದ್ದ ಅವರ ವಿಂಡೋಸ್ 7 ಬೀಟಾ ಪ್ರತಿಗಳನ್ನು ಕ್ರೀಯಾಶೀಲಗೊಳಿಸಲು ಮೈಕ್ರೋಸಾಫ್ಟ್ ನಿಂದ ಇನ್ನೂ ಉತ್ಪನ್ನದ ಕೀಗಳನ್ನು ಪಡೆಯಬಹುದಾಗಿದೆ.
ಬಿಡುಗಡೆ ಮಾಡಲಾದ 7100 ನಿರ್ಮಾಣ, MSDN ಮತ್ತು TechNet ಚಂದಾದಾರರು ಹಾಗು ಕನೆಕ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ 2009 ರ ಏಪ್ರಿಲ್ 30 ರಂದು ಡೌನ್ ಲೋಡ್ ಲಭ್ಯವಾಯಿತು. ಇದು ಬಿಟ್ ಟಾರಂಟ್ ಮೂಲಕ ಅಂತರಜಾಲದಲ್ಲಿ ಸೋರಿಕೆಯಾದರೂ ಕೂಡ 2009 ರ ಮೇ 5 ರಂದು, ಇದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು.[೩೦] ಬಿಡುಗಡೆ ಮಾಡಲಾದ ನಿರ್ಮಾಣವು ಐದು ಭಾಷೆಗಳಲ್ಲಿ ಲಭ್ಯವಾಯಿತಲ್ಲದೇ, 2010 ರ ಜೂನ್ 1 ರಂದು ಇದರ ಅವಧಿ ಮುಕ್ತಾಯವಾಯಿತು. ಇದರ ಜೊತೆಯಲ್ಲಿ 2010 ರ ಮಾರ್ಚ್ 1 ರಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ಥಗಿತಗೊಳ್ಳಲು ಪ್ರಾರಂಭವಾಯಿತು.[೩೧] ಮೈಕ್ರೋಸಾಫ್ಟ್, 2009 ರ ಅಕ್ಟೋಬರ್ 22 ರಂದು ವಿಂಡೋಸ್ 7 ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದೆಂಬ ಹೇಳಿಕೆ ನೀಡಿತು. ಮೈಕ್ರೋಸಾಫ್ಟ್, ವಿಂಡೋಸ್ 7 ಅನ್ನು MSDN ಮತ್ತು Technet ನ ಚಂದಾದಾರರಿಗೆ, 2009 ರ ಆಗಸ್ಟ್ 6 ರಂದು ಬೆಳಗ್ಗೆ 10:00 PDT ಗಂಟೆಗೆ ಬಿಡುಗಡೆ ಮಾಡಿತು.[೩೨] ಮೈಕ್ರೋಸಾಫ್ಟ್,ವಿಂಡೋಸ್ ಸರ್ವರ್ 2008 R2 ರೊಂದಿಗೆ ವಿಂಡೋಸ್ 7 ಅನ್ನು ಸಿದ್ದಪಡಿಸಿ 2009 ರ ಜುಲೈ 22 ರಂದು ಈ ಅವಧಿಗೆ ಬಿಡುಗಡೆ ಮಾಡಲಾಗುವುದೆಂದು ಪ್ರಕಟಿಸಿತು. ವಿಂಡೋಸ್ 7 RTM, 7600.16385.090713-1255 ಅನ್ನು ನಿರ್ಮಿಸಿತು. ಇದನ್ನು 2009 ರ ಜುಲೈ 13 ರಂದು ಸಂಕಲಿಸಲಾಯಿತು, ಹಾಗು ಆಂತರಿಕವಾಗಿ ಮೈಕ್ರೋಸಾಫ್ಟ್ ನ ಎಲ್ಲಾ ಪರೀಕ್ಷೆಗಳನ್ನು ನಡೆಸಿದ ನಂತರ ಅಂತಿಮ RTM ನಿರ್ಮಾಣವನ್ನು ಘೋಷಿಸಿತು.[೬]
ಗುರಿಗಳು
[ಬದಲಾಯಿಸಿ]ನ್ಯೂಸ್ ವೀಕ್ ನೊಂದಿಗಿನ ಸಂದರ್ಶನದಲ್ಲಿ ಬಿಲ್ ಗೇಟ್ಸ್, ವಿಂಡೋಸ್ ನ ಈ ಆವೃತ್ತಿಯು ಹೆಚ್ಚಾಗಿ "ಬಳಕೆದಾರ-ಕೇಂದ್ರೀಕೃತ"ವಾಗಿದೆ ಎಂದು ಹೇಳಿದರು.[೩೩] ಅನಂತರ ಗೇಟ್ಸ್ ವಿಂಡೋಸ್ 7, ರ ಕಾರ್ಯದಕ್ಷತೆಯು ಸುಧಾರಣೆಗಳ ಮೇಲೂ ಗಮನ ಹರಿಸಿದೆ ಎಂಬುದನ್ನು ತಿಳಿಸಿದರು.[೩೪] ಅನಂತರ ಸ್ಟೀವನ್ ಸಿನೊಫ್ಸ್ಕಿ ಇಂಜಿನಿಯಂರಿಂಗ್ ವಿಂಡೋಸ್ 7 ಬ್ಲಾಗ್ ನಲ್ಲಿ ಈ ವಿಚಾರವನ್ನು ಇನ್ನಷ್ಟೂ ವಿಸ್ತರಿಸಿ ವಿವರಿಸಿದರು. ಕಂಪನಿಯು, ಅಸ್ತಿತ್ವದಲ್ಲಿನ ಆಧಾರದ ಕಾರ್ಯನಿರ್ವಹಣಾ ವ್ಯವಸ್ಥೆಯ ಅನೇಕ ಕ್ಷೇತ್ರಗಳಲ್ಲಿನ ಕಾರ್ಯಾಚರಣೆ ಗುರ್ತಿಸಲು, ಸುಳ್ಳು ಸಂಕೇತ ಮಾರ್ಗಗಳನ್ನು ಪತ್ತೆಹಚ್ಚುವುದಕ್ಕೆ ಸಹಾಯ ಮಾಡಲು, ಹಾಗು ಪ್ರದರ್ಶನದ ನಿರ್ವರ್ತನವನ್ನು ತಡೆಗಟ್ಟಲು ಸಹಾಯ ಮಾಡುವುದಕ್ಕಾಗಿ, ಮತ್ತು ಇಂತಹದನ್ನು ಪತ್ತೆಹಚ್ಚುವ ವಿವಿಧ ಹೊಸ ಸಾಧನಗಳನ್ನು(ಟ್ರೇಸಿಂಗ್ ಟೂಲ್) ಬಳಸುತ್ತಿದೆ.[೩೫]
ಹಿರಿಯ ಉಪಾಧ್ಯಕ್ಷ ಬಿಲ್ ವೆಗ್ಟೆ ಕೆಳಕಂಡಂತೆ ಹೇಳಿದ್ದಾರೆ: ವಿಂಡೋಸ್ ವಿಸ್ಟಾದ ಬಳಕೆದಾರರು ವಿಂಡೋಸ್ 7 ಅನ್ನು ಬಳಸುವುದರಿಂದ, ಅವರು ವಿಂಡೋಸ್ XP ಯಿಂದ ಬೇರೆಯದನ್ನು ಬಳಸುವಾಗ ಎದುರಿಸಿದ ಸಾಧನದ ಹೊಂದಾಣಿಕೆಯ ಸಮಸ್ಯೆ ಎದುರಿಸುವಂತಿಲ್ಲ.[೩೬] ನಂತರ 2008 ರ ಅಕ್ಟೋಬರ್ 16 ರಂದು ವಿಂಡೋಸ್ 7 ಅನ್ನು ಕುರಿತು ಮಾತನಾಡುವಾಗ ಮೈಕ್ರೋಸಾಫ್ಟ್ ನ CEO ಸ್ಟೀವ್ ಬ್ಯಾಲ್ಮರ್, ವಿಂಡೋಸ್ 7, ವಿಂಡೋಸ್ ವಿಸ್ಟಾದ ಪರಿಷ್ಕೃತ ಆವೃತ್ತಿಯಾಗಿದೆ ಎಂಬುದನ್ನು ತಿಳಿಸಿದರು. ಈ ಮೂಲಕ,ವಿಸ್ಟಾ ಮತ್ತು ವಿಂಡೋಸ್ 7 ನಡುವಿನ ಹೊಂದಾಣಿಕೆಯನ್ನು ದೃಢಪಡಿಸಿದರು.[೩೭]
ವಿಶಿಷ್ಟ ಲಕ್ಷಣಗಳು
[ಬದಲಾಯಿಸಿ]ಹೊಸ ಮತ್ತು ಬದಲಾವಣೆಗೊಂಡ ಲಕ್ಷಣಗಳು
[ಬದಲಾಯಿಸಿ]ವಿಂಡೋಸ್ 7 ಒಳಗೊಂಡಿರುವ ಅನೇಕ ಹೊಸ ಲಕ್ಷಣಗಳು ಕೆಳಕಂಡಂತಿವೆ: ಸ್ಪರ್ಶ ಮತ್ತು ಕೈಬರಹ ಗುರುತಿಸುವಿಕೆಯಲ್ಲಿ ಪ್ರಗತಿ, ಕಾರ್ಯತಃ ಹಾರ್ಡ್ ಡಿಸ್ಕ್ ಗಳಿಗೆ ಬೆಂಬಲ, ಬಹು-ಪ್ರಮುಖ ಮಹತ್ವದ,ಸಂಸ್ಕರಣದ ಮೇಲೆ ಕಾರ್ಯಕ್ಷಮತೆ ಸುಧಾರಿಸುವುದು,[೩೮][೩೯][೪೦][೪೧] ಬೂಟ್ ವಿಧಾನ ಸುಧಾರಿಸುವುದು, ನೇರಪ್ರವೇಶ ಮತ್ತು ಕೇಂದ್ರ ಘಟಕಗಳ ಸುಧಾರಣೆಗಳು ಇತ್ಯಾದಿ. ವಿಂಡೋಸ್ 7, ವಿಭಿನ್ನ ಮಾರಾಟಗಾರರಿಂದ ಬಹು ವೈವಿಧ್ಯ ರೇಖಾಚಿತ್ರ ಕಾರ್ಡ್ ಗಳನ್ನು ಬಳಸಿ ಸಿಸ್ಟಮ್ ಗಳಿಗೆ ಬೆಂಬಲ ನೀಡುತ್ತದೆ.(ಹೋಲಿಕೆಯಿಲ್ಲದ ಬಹು-ಸಂಯೋಜಕ), ವಿಂಡೋಸ್ ಮೀಡಿಯಾ ಸೆಂಟರ್ ನ ಹೊಸ ಆವೃತ್ತಿ,[೪೨] ವಿಂಡೋಸ್ ಮೀಡಿಯಾ ಸೆಂಟರ್ ಗಾಗಿರುವ ಸಾಧನ, ಅಭಿವೃದ್ಧಿಪಡಿಸಲಾದ ಮೀಡಿಯಾ ಲಕ್ಷಣಗಳು, XPS ಎಸೆನ್ಷಿಯಲ್ ಪ್ಯಾಕ್ ಮತ್ತು ವಿಂಡೋಸ್ ಪವರ್ ಶೆಲ್ ಅನ್ನು ಕೂಡ ಒಳಗೊಳ್ಳುತ್ತದೆ. ಅಲ್ಲದೇ ಘಟಕ ಪರಿವರ್ತನೆಯೊಂದಿಗೆ ಅಭಿವರ್ಧಕ ಮತ್ತು ಅಂಕಿಅಂಶ ಗಳ ಪ್ರಕಾರಗಳನ್ನು ಒಳಗೊಂಡಂತೆ, ಬಹು ಸಾಮರ್ಥ್ಯಯುಳ್ಳ ಪುನಃ ವಿನ್ಯಾಸಗೊಳಿಸಲಾದ ಕ್ಯಾಲ್ಕ್ಯುಲೇಟರ್ ಅನ್ನು ಒಳಗೊಂಡಿದೆ. ಕ್ಲಿಯರ್ ಟೈಪ್ ಟೆಕ್ಸ್ಟ್ ಟ್ಯೂನರ್, ಡಿಸ್ಪ್ಲೆ ಕಲರ್ ಕ್ಯಾಲಿಬರೇಷನ್ ವಿಸಾರ್ಡ, ಸಾಧನ(ಗ್ಯಾಡ್ಜೆಟ್), ರಿಕವರಿ, ಟ್ರಬಲ್ ಶೂಟಿಂಗ್,ವಾಕ್ ಸ್ಪೇಸ್ ಸೆಂಟರ್ ಲೊಕೇಶನ್ ಮತ್ತು ಇತರ ಸಂವೇದಕಗಳು ಹೊಸ ವಿಧಗಳಾಗಿವೆ. ಕಾರ್ಯಾಚರಣೆ ಆಧಾರಗಳ ನಿರ್ವಾಹಕ, ಜೀವಸಂಖ್ಯಾಶಾಸ್ತ್ರದ ಸಾಧನಗಳು, ಸಿಸ್ಟಮ್ ಐಕಾನ್ ಗಳು ಮತ್ತು ಪ್ರದರ್ಶಕಗಳನ್ನು ಒಳಗೊಂಡಂತೆ ಕಂಟ್ರೋಲ್ ಪ್ಯಾನಲ್ ಗೆ ಹೊಸ ಅಂಶಗಳನ್ನು ಸೇರಿಸಲಾಗಿದೆ.[೪೩] ವಿಂಡೋಸ್ ಸುರಕ್ಷಿತ ಕೇಂದ್ರವನ್ನು ವಿಂಡೋಸ್ ಆಕ್ಷನ್ ಸೆಂಟರ್(ಮುಂಚಿನ ನಿರ್ಮಾಣಗಳಲ್ಲಿ ವಿಂಡೋಸ್ ಆರೋಗ್ಯ ಕೇಂದ್ರ ಮತ್ತು ವಿಂಡೋಸ್ ಪರಿಹಾರ ಕೇಂದ್ರ) ಎಂದು ಪುನಃ ಹೆಸರಿಡಲಾಯಿತು. ಇದು ಕಂಪ್ಯೂಟರ್ ನ ಸುರಕ್ಷತೆ ಮತ್ತು ನಿರ್ವಹಣೆ ಎರಡನ್ನೂ ನೋಡಿಕೊಳ್ಳುತ್ತದೆ. ಇಲ್ಲಿ 32ಬಿಟ್ ಆವೃತ್ತಿಯಲ್ಲಿರುವ ರೆಡಿಬೂಸ್ಟ್ ಅಧಿಕ 256 ಗಿಗಾಬೈಟ್ಸ್ ವರೆಗೂ ಬೆಂಬಲ ನೀಡುತ್ತದೆ. ವಿಂಡೋಸ್ 7 ನಲ್ಲಿ ಯೂಸರ್ ಅಕೌಂಟ್ ಕಂಟ್ರೋಲ್ ಗಾಗಿ ಬಳಸಲಾದ ಪೂರ್ವ ನಿಯೋಜಿತ ಸೆಟ್ಟಿಂಗ್ ಅನ್ನು ಟೀಕಿಸಲಾಯಿತು. ಏಕೆಂದರೆ ಉತ್ತಮಗೊಳಿಸಲಾದ ಪ್ರಯೋಜನದೊಂದಿಗೆ ನಂಬಿಕೆಯನ್ನು ಕಳೆದುಕೊಂಡ ಸಾಫ್ಟ್ ವೇರ್ ಅನ್ನು ಬಳಸಲು ಅವಕಾಶ ನೀಡಿದ್ದಕ್ಕಾಗಿ ಮತ್ತು ನಂಬಿಕೆಗೆ ಅರ್ಹವಾಗಿರುವ ಅನ್ವಯಿಕೆಗಳನ್ನು ಬಳಸದಿದ್ದಕ್ಕಕಾಗಿ ಟೀಕೆಗೆ ಒಳಗಾಯಿತು.[೪೪] ಮೈಕ್ರೋಸಾಫ್ಟ್ ನ ವಿಂಡೋಸ್ ಕೇಂದ್ರದ ಎಂಜಿನಿಯರ್ ಮಾರ್ಕ್ ರುಸ್ಸಿನೊವಿಚ್ ಈ ಸಮಸ್ಯೆಯನ್ನು ಒಪ್ಪಿಕೊಂಡರು. ಆದರೆ ಬಳಕೆದಾರರು ಪ್ರಾಂಪ್ಟ್ ಅನ್ನು (VDU ಪರದೆಯ ಮೇಲೆ ಬರುವ ಸಂಕೇತವನ್ನು) ಒಪ್ಪಿಕೊಂಡಾಗ ಮಾಲ್ ವೇರ್ ಕೂಡ ಸಿಸ್ಟಮ್ ಅನ್ನು ರಾಜಿಯಾಗುವಂತೆ ಮಾಡಬಹುದು ಎಂಬುದನ್ನು ಸೂಚಿಸಿದರು.[೪೫] ವಿಂಡೋಸ್ 7 RAW ಇಮೇಜ್ ಫಾರ್ಮೆಟ್ ನಲ್ಲಿ ವಿಂಡೋಸ್ ಇಮೇಜಿಂಗ್ ಕಾಂಪೊನೆಂಟ್ ನ ಮೂಲಕ ಚಿತ್ರಗಳಿಗೆ ಕೂಡ ಆಧಾರ ನೀಡುತ್ತದೆ-ಇದು ಮೂಲ ಸಂಕ್ಷೇಪಿತ ಚಿತ್ರಗಳಿಗೆ ಅನುಕೂಲ ಮಾಡಿಕೊಡುವ ಚಿತ್ರ ವಿಸಂಕೇತಗಳನ್ನು ಒದಗಿಸುತ್ತದೆ. ವಿಂಡೋಸ್ ಎಕ್ಸ್ ಪ್ಲೋರರ್ ನಲ್ಲಿ ಮುನ್ನೋಟ ಮತ್ತು ಮೇಟಾಡೇಟಾ ಪ್ರದರ್ಶನವನ್ನು ನೀಡುತ್ತದೆ. ಇದರೊಂದಿಗೆ ವಿಂಡೋಸ್ ಫೋಟೋ ವ್ಯೂವರ್ ಮತ್ತು ವಿಂಡೋ ಮೀಡಿಯಾ ಸೆಂಟರ್ ನಲ್ಲಿ ಸಂಪೂರ್ಣ ಗಾತ್ರದ ವೀಕ್ಷಣೆ ಮತ್ತು ಸ್ಲೈಡ್ ಶೋವನ್ನು ಒದಗಿಸುತ್ತದೆ.[೪೬]
ಟಾಸ್ಕ್ ಬಾರ್ ನಲ್ಲಿ ಅತ್ಯಂತ ದೊಡ್ಡ ವೀಕ್ಷಣಾ ಬದಲಾವಣೆ ಮಾಡಲಾಗಿದ್ದು, ಶೀಘ್ರದಲ್ಲಿ ಆರಂಭಿಸಲಾದ ಟಾಸ್ಕ್ ಬಾರ್ ಅನ್ನು "ಸೂಪರ್ ಬಾರ್" ನೊಂದಿಗೆ ಬದಲಾಯಿಸಲಾಯಿತು. ಅಲ್ಲದೇ ಟಾಸ್ಕ್ ಬಾರ್ ಗೆ ಅನ್ವಯಿಕೆಗಳನ್ನು ಅಲ್ಲಿ ನಿರ್ದೇಶಿಸಲು ಅವಕಾಶ ನೀಡಲಾಯಿತು. ನಿರ್ದೇಶಿಸಲಾದ ಅನ್ವಯಿಕೆಗಳಿಗೆ ಅಗತ್ಯವಿರುವ ಬಟನ್ ಗಳನ್ನು ಟಾಸ್ಕ್ ಬಟನ್ ಗಳೊಂದಿಗೆ ಸೇರಿಸಲಾಯಿತು. ಈ ಬಟನ್ ಗಳು ಸಾಮಾನ್ಯ ಕೆಲಸಕ್ಕೆ ಸುಲಭವಾಗಿ ಪ್ರವೇಶದ ಅವಕಾಶ ನೀಡಲು ಜಂಪ್ ಲಿಸ್ಟ್ಸ್ ಲಕ್ಷಣಗಳನ್ನು ಒದಗಿಸುತ್ತವೆ.[೪೭] ಪರಿಷ್ಕರಿಸಿದ ಟಾಸ್ಕ್ ಬಾರ್ ಕೂಡ, ಟಾಸ್ಕ್ ಬಾರ್ ಬಟನ್ ಗಳ ಪುನರಾದೇಶಕ್ಕೆ ಅವಕಾಶ ನೀಡುತ್ತದೆ. ಸಿಸ್ಟಮ್ ಗಡಿಯಾರದ ಬಲಬದಿಯಲ್ಲಿರುವುದು ಚಿಕ್ಕ ಆಯತಾಕೃತಿಯ ಬಟನ್ ಆಗಿದ್ದು, ಇದು ಶೋ ಡೆಸ್ಕ್ ಟಾಪ್ ಐಕಾನ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಬಟನ್ ವಿಂಡೋಸ್ 7 ನಲ್ಲಿ ಹೊಸ ಗುಣಲಕ್ಷಣದ ಭಾಗವಾಗಿದ್ದು, ಇದನ್ನು ಏರೋ ಪೀಕ್ ಎಂದು ಕರೆಯಲಾಗುತ್ತದೆ. ಈ ಬಟನ್ ನ ಮೇಲೆ ಬೆರಳಾಡುವುದರಿಂದ, ಗೋಚರ ಪರದೆಯ ಎಲ್ಲಾ ವಿಂಡೋಗಳನ್ನು ಡೆಸ್ಕ್ ಟಾಪ್ ನ ಮೇಲೆ ತಕ್ಷಣವೇ ನೋಡಲು ಸಾಧ್ಯವಾಗುವಂತೆ ಮಾಡುತ್ತದೆ.[೪೮] ಸ್ಪರ್ಶದ ಮೂಲಕ ಪ್ರದರ್ಶಿಸುವ ಪ್ರದರ್ಶಕಗಳು ಉದಾಹರಣೆಗೆ ಸ್ಪರ್ಶ ಪಟಲಗಳು, ಟ್ಯಾಬ್ಲೆಟ್ PC ಗಳು, ಇತ್ಯಾದಿಗಳಲ್ಲಿ ಈ ಬಟನ್ ಬೆರಳುಗಳಿಂದ ಒತ್ತುವುದಕ್ಕೆ ಅವಕಾಶ ನೀಡಲು ಸ್ವಲ್ಪ ವಿಸ್ತಾರವಾಗಿರುತ್ತದೆ.[೪೯] ಈ ಬಟನ್ ಅನ್ನು ಒಮ್ಮೆ ಕ್ಲಿಕ್ ಮಾಡುವುದರಿಂದ ಅದು ಎಲ್ಲಾ ವಿಂಡೋಸ್ ಅನ್ನು ಚಿಕ್ಕದಾಗಿಸುತ್ತದೆ. ಜೊತೆಗೆ ಇದನ್ನು ಎರಡನೆಯ ಬಾರಿ ಕ್ಲಿಕ್ ಮಾಡುವುದರಿಂದ ಅವುಗಳನ್ನು ಹಿಂದಿರಿಗಿಸುತ್ತದೆ. ಇದರ ಜೊತೆಯಲ್ಲಿ ಏರೋ ಸ್ನ್ಯಾಪ್ ಎಂದು ಕರೆಯಲಾಗುವ ಲಕ್ಷಣವನ್ನು ಕೂಡ ಒಳಗೊಂಡಿದೆ. ಇದನ್ನು ಪಟಲದ ಮೇಲಕ್ಕೆ ಎಳೆದಾಗ ಅದು ಸ್ವಯಂಚಾಲಿತವಾಗಿ ವಿಂಡೋವನ್ನು ದೊಡ್ಡದಾಗಿಸುತ್ತದೆ.[೫೦] ಪಟಲದ ಎಡ/ಬಲ ತುದಿಗಳಿಗೆ ವಿಂಡೋಗಳನ್ನು ಎಳೆಯುವುದರಿಂದ ಬಳಕೆದಾರರಿಗೆ, ವಿಂಡೋಗಳ ನಡುವೆ ಹೋಲಿಕೆ ಮಾಡಲು ದಾಖಲೆ ಅಥವಾ ಕಡತಗಳನ್ನು ಪಟಲದ ಎರಡು ಬದಿಗಳಲ್ಲಿ ಚಲಿಸುವಂತೆ ಮಾಡುತ್ತದೆ. ಬಳಕೆದಾರ ಏರೋ ಸ್ನ್ಯಾಪ್ ಅನ್ನು ಬಳಸಿ ದೊಡ್ಡದಾಗಿಸಿದ ವಿಂಡೋಗಳನ್ನು ಬದಲಾಯಿಸಿದಾಗ, ಸಿಸ್ಟಮ್ ತನ್ನಿಂದತಾನೇ ಅದರ ಹಿಂದಿನ ಸ್ಥಿತಿಗೆ ಹಿಂದಿರುಗಿಸುತ್ತದೆ. ಈ ಕಾರ್ಯಾಚರಣೆಯನ್ನು ಕೀಲಿಕೈ ಶಾರ್ಟ್ ಕಟ್ ಗಳೊಂದಿಗೂ ನಿರ್ವಹಿಸಿ ಮಾಡಬಹುದಾಗಿದೆ. ವಿಂಡೋಸ್ ವಿಸ್ಟಾದಲ್ಲಿರುವಂತೆ, ವಿಂಡೋಸ್ ಏರೋವನ್ನು ಅನ್ವಯಿಸಿ ವಿಂಡೋಗಳನ್ನು ದೊಡ್ಡದಾಗಿಸಿದಾಗ ವಿಂಡೋ ಬಾರ್ಡರ್ ಗಳು ಮತ್ತು ಟಾಸ್ಕ್ ಬಾರ್ ಗಳು ಅದೃಶ್ಯವಾಗುವುದಿಲ್ಲ. ಬದಲಿಗೆ ಅವು ಪಾರದರ್ಶಕದಂತೆ ಉಳಿದುಕೊಂಡಿರುತ್ತವೆ.
ಅಭಿವರ್ಧಕರಿಗಾಗಿ ವಿಂಡೋಸ್ 7, ಯಂತ್ರ ಸಂಕೇತದಲ್ಲಿರುವ(.NET-ಆಧಾರಿತWCF ವೆಬ್ ಸೇವೆಗಳಿಗೆ ವ್ಯತಿರಿಕ್ತವಾಗಿ) ನಿರ್ಮಾಣ SOAP-ಆಧಾರಿತ ವೆಬ್ ಸೇವೆಗಳಿಗೆ ಬೆಂಬಲ ನೀಡುವುದರೊಂದಿಗೆ ಹೊಸ ಸಂಪರ್ಕ ವ್ಯವಸ್ಥೆ APIಯನ್ನು ಒಳಗೊಂಡಿದೆ.[೫೧] ಅಲ್ಲದೇ ಅನ್ವಯಿಕೆಗಳನ್ನು ಚಿಕ್ಕದಾಗಿಸಲು ಕಾಲಾವಧಿ ಅಳವಡಿಕೆಯ ಹೊಸ ಲಕ್ಷಣಗಳನ್ನು ಒಳಗೊಂಡಿದೆ;ಆಗ UAC ಪ್ರಾಂಪ್ಟ್ ಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅಳವಡಿಸುವಿಕೆಯ ಪ್ಯಾಕೇಜ್ ಗಳ ವರ್ಧನೆಯನ್ನು ಸುಲಭವಾಗಿಸಿದೆ.[೫೨] ಅಷ್ಟೇ ಅಲ್ಲದೇ ಹೊಸದಾಗಿ ವಿಸ್ತರಿಸಿದ ಭಾಷಾಶಾಸ್ತ್ರೀಯ ಸೇವೆಗಳಾದ APIನ ಮೂಲಕ ಜಾಗತಿಕ ಬೆಂಬಲವನ್ನೂ ಹೆಚ್ಚಿಸಿದೆ.[೫೩] WinHEC ನಲ್ಲಿ 2008 ರ ಮೈಕ್ರೋಸಾಫ್ಟ್, 30-ಬಿಟ್ ಮತ್ತು 48-ಬಿಟ್ ನ ಬಣ್ಣದ ತೀವ್ರತೆಗಳಿಗೆ ವಿಂಡೋಸ್ 7 ನಲ್ಲಿ ವ್ಯಾಪಕವಾದ ಬಣ್ಣದ ಪ್ರಸಾರ scRGB ( HDMI ಗೆ 1.3 ಅನ್ನು ಬದಲಾಯಿಸಬಹುದು. ಅಲ್ಲದೇ xvYCC ಎಂದು ಔಟ್ ಪುಟ್ ನೀಡಬಹುದು) ದೊಂದಿಗೆ ಬೆಂಬಲ ದೊರೆಯುತ್ತದೆ ಎಂಬುದನ್ನು ಪ್ರಕಟಿಸಿತು. ವಿಂಡೋಸ್ 7 ನಲ್ಲಿ ಬೆಂಬಲ ದೊರೆಯುವ ವಿಡಿಯೋ ಮೋಡ್ ಗಳು ಕೆಳಕಂಡಂತಿವೆ: 16-ಬಿಟ್ sRGB, 24-ಬಿಟ್ sRGB, 30-ಬಿಟ್ sRGB, ವಿಸ್ತರಿಸಲಾದ ಬಣ್ಣದ ಪ್ರಸಾರ sRGB ಯೊಂದಿಗೆ 30-ಬಿಟ್ ಮತ್ತು 48-ಬಿಟ್ scRGB.[೫೪][೫೫] ಮೈಕ್ರೋಸಾಫ್ಟ್, ಹೊಸ TRIM ಆದೇಶವನ್ನು ಒಳಗೊಂಡಂತೆ, ಘನಾಕೃತಿಯಲ್ಲಿರುವ ಸಾಧನಗಳಿಗೂ ಕೂಡ ಉತ್ತಮ ಬೆಂಬಲವನ್ನು ಜಾರಿಗೆ ತಂದಿದೆ,[೫೬]. ಅಲ್ಲದೇ ವಿಂಡೋಸ್ 7, ಘನಾಕೃತಿಯ ಸಾಧನಗಳನ್ನು ಅಸಾಧಾರಣ ರೀತಿಯಲ್ಲಿ ಗುರುತಿಸಬಲ್ಲದು. ಮೈಕ್ರೋಸಾಫ್ಟ್, ಅನಂತರದ ಜೋಡನಾ ರೂಪದಲ್ಲಿ USB 3.0ಗೆ ಬೆಂಬಲ ನೀಡಲು ಯೋಜಿಸುತ್ತಿದೆ. ಮಾನದಂಡಗಳನ್ನು ನಿರ್ಧರಿಸುವಲ್ಲಿನ ವಿಳಂಬದಿಂದಾಗಿ ಆರಂಭಿಕ ಬಿಡುಗಡೆಯಲ್ಲಿ ಆಧಾರವನ್ನು ಸೇರಿಸಿರಲಿಲ್ಲ.[೫೭]
ವಿಂಡೋಸ್ ವಿಸ್ಟಾದಿಂದ ತೆಗೆದುಹಾಕಲಾದ ಅಂತರಜಾಲದ ಸ್ಪೇಡ್ಸ್, ಅಂತರಜಾಲ ಬ್ಯಾಕ್ ಗ್ಯಾಮನ್ ಮತ್ತು ಅಂತರಜಾಲ ಚೆಕ್ಕರಸ್,ಪರೀಕ್ಷಕಗಳನ್ನು ವಿಂಡೋಸ್ 7 ನಲ್ಲಿ ಹಿಂದಿರುಗಿಸಲಾಯಿತು. ವಿಂಡೋಸ್ 7, ಇಂಟರ್ ನೆಟ್ ಎಕ್ಸ್ ಪ್ಲೋರರ್8 ಮತ್ತು ವಿಂಡೋಸ್ ಮೀಡಿಯಾ ಪ್ಲೇಯರ್ 12 ಅನ್ನು ಒಳಗೊಂಡಿದೆ.
ಬಳಕೆದಾರರು ವಿಂಡೋಸ್ ವಿಸ್ಟಾದಲ್ಲಿ ಸಾಧ್ಯವಾಗುವುದಕ್ಕಿಂತ ಹೆಚ್ಚು ವಿಂಡೋಸ್ ಘಟಕಗಳನ್ನು ಅಸಮರ್ಥವಾಗಿಸಬಲ್ಲರು. ಈ ಘಟಕಗಳ ಪಟ್ಟಿಗೆ ಹೊಸದಾಗಿ ಸೇರಿಸಲಾಗಿರುವವು ಎಂದರೆ ಇಂಟರ್ ನೆಟ್ ಎಕ್ಸ್ ಪ್ಲೋರ್ರ್, ವಿಂಡೋಸ್ ಮೀಡಿಯಾ ಪ್ಲೇಯರ್, ವಿಂಡೋಸ್ ಮೀಡಿಯಾ ಸೆಂಟರ್, ವಿಂಡೋಸ್ ಶೋಧಕ,ಮತ್ತು ವಿಂಡೋಸ್ ಪ್ರಸಾರ ವೇದಿಕೆಯನ್ನು ಒಳಗೊಂಡಿವೆ.[೫೮] ವಿಂಡೋಸ್ 7, 13 ಅಧಿಕ ಶಬ್ದ ವ್ಯವಸ್ಥೆಗಳನ್ನು, ಟೈಟಲ್ಡ್ ಆಫ್ಟರ್ ನೂನ್, ಕೈಬರಹ, ಅಕ್ಷರಗಳನ್ನು, ಪುರಚಿತ್ರವನ್ನು, ಡೆಲ್ಟಾ, ಉತ್ಸವ,ಉದ್ಯಾನ, ಪರಂಪರೆ,ಗುರುತು, ಚಮತ್ಕಾರ, ರಾಗ, ಸ್ಯಾವನ್ನ ಮತ್ತು ಸೊನಾಟಾವನ್ನು ಒಳಗೊಂಡಿದೆ.[೫೯] ಮೈಕ್ರೋಸಾಫ್ಟ್ ವಾಸ್ತವಪ್ರಾಯವಾದ PCಯ ಹೊಸ ಆವೃತ್ತಿಗೆ ಹೊಸದಾಗಿ ವಿಂಡೋಸ್ ವರ್ಚ್ಯುವಲ್ PC ಎಂದು ಪುನಃ ನಾಮಕರಣ ಮಾಡಲಾಯಿತು. ಅಲ್ಲದೇ ಇದನ್ನು ವಿಂಡೋಸ್ 7 ನ ಫ್ರೋಫೆಷನಲ್ ಉದ್ಯಮಗಳಿಗೆ ಮತ್ತು ಅಂತಿಮ ಆವೃತ್ತಿಗಳಿಗೆ ಲಭ್ಯವಾಗುವಂತೆ ಮಾಡಲಾಯಿತು.[೬೦] ಇದು ಒಂದೇ ಯಂತ್ರದಲ್ಲಿ ಚಲಾಯಿಸಲು ವಿಂಡೋಸ್ XP ಮೋಡ್ ಅನ್ನು ಒಳಗೊಂಡಂತೆ ಬಹುವಿಂಡೋಗಳ ವಾತಾವರಣಕ್ಕೆ ಅವಕಾಶ ನೀಡುತ್ತದೆ. ವಿಂಡೋಸ್ XP ಮೋಡ್ ವರ್ಚ್ಯುವಲ್ ಯಂತ್ರದಲ್ಲಿ ವಿಂಡೋಸ್ XPಯನ್ನು ಚಲಾಯಿಸುತ್ತವೆ.ಇದು ವಿಂಡೋಸ್ XP ಯಲ್ಲಿ ಪ್ರದರ್ಶನವಾಗುತ್ತಿರುವ ಪ್ರದರ್ಶಕಗಳನ್ನು ವಿಂಡೋಸ್ 7 ಡೆಸ್ಕ್ ಟಾಪ್ ನಲ್ಲಿ ಪುನರ್ನಿರ್ದೇಶಿಸುತ್ತದೆ.[೬೧] ಮುಂದೆ ವಿಂಡೋಸ್ 7, ವರ್ಚ್ಯುವಲ್ ಹಾರ್ಡ್ ಡಿಸ್ಕ್ ಅನ್ನು (VHD) ಸಾಮಾನ್ಯ ದತ್ತಾಂಶ ಸಂಗ್ರಾಹಕವಾಗಿ ಸ್ಥಾಪಿಸಲು ಬೆಂಬಲ ನೀಡುತ್ತದೆ. ಅಲ್ಲದೇ ವಿಂಡೋಸ್ 7 ನೊಂದಿಗೆ ನೀಡುವ ಬೂಟ್ ಲೋಡರ್, ವಿಂಡೋಸ್ ಸಿಸ್ಟಮ್ ಅನ್ನು VHD ಯಿಂದ ಸಜ್ಜುಗೊಳಿಸಬಲ್ಲದು. ಅದೇನೇ ಆದರೂ ಇದು ಕೇವಲ ಉದ್ಯಮಗಳಲ್ಲಿ ಮತ್ತು ಅಂತಿಮ ಆವೃತ್ತಿಗಳಲ್ಲಿ ಮಾತ್ರ ಲಭ್ಯ.[೬೨] ವಿಂಡೋಸ್ 7 ನ ರಿಮೋಟ್ ಡೆಸ್ಕ್ ಟಾಪ್ (RDP) ಅನ್ನು, ವಿಡಿಯೋ ಧ್ವನಿಮುದ್ರಣಗಳು ಮತ್ತು 3D ಆಟಗಳನ್ನು ಒಳಗೊಂಡಂತೆ ನಿಜ ಅವಧಿಯ ಬಹುಮಾಧ್ಯಮ ಅನ್ವಯಿಕೆಗಳಿಗೆ ಆಧಾರವನ್ನು ನೀಡಲು ಕೂಡ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ರಿಮೋಟ್ ಡೆಸ್ಕ್ ಟಾಪ್ ಪರಿಸದರಲ್ಲಿ ಡೈರೆಕ್ಟ್ ಎಕ್ಸ್ 10 ನ ಬಳಕೆಗೆ ಅವಕಾಶ ನೀಡಲಾಗಿದೆ.[೬೩] ಹಿಂದೆ ವಿಂಡೋಸ್ ವಿಸ್ಟಾದ ಆರಂಭಿಕ ಆವೃತ್ತಿಯಲ್ಲಿದ್ದ ಮೂರು ಅನ್ವಯಿಕೆಗಳ ಪರಿಮಿತಿಯನ್ನು ವಿಂಡೋಸ್ 7 ನಿಂದ ತೆಗೆದುಹಾಕಲಾಗಿದೆ.[೬೪]
ತೆಗೆದು ಹಾಕಲಾದ ಕಾರ್ಯಲಕ್ಷಣಗಳು
[ಬದಲಾಯಿಸಿ]ವಿಂಡೋಸ್ ವಿಸ್ಟಾದ ಭಾಗವಾಗಿದ್ದ ಅನೇಕ ಸಾಮರ್ಥ್ಯಗಳು ಮತ್ತು ಕೆಲವೊಂದು ಪ್ರೋಗ್ರಾಂಗಳು ದೀರ್ಘಕಾಲದ ವರೆಗೆ ಇರಲಿಲ್ಲ ಅಥವಾ ಅವುಗಳನ್ನು ಬದಲಾಯಿಸಲಾಯಿತು. ಇದರ ಫಲಿತಾಂಶವಾಗಿ ಕೆಲವು ಕಾರ್ಯಕಾರಿತ್ವಗಳನ್ನು ತೆಗೆದುಹಾಕಲಾಯಿತು. ಇದು ಕ್ಲಾಸಿಕ್ ಸ್ಟಾರ್ಟ್ ಮೆನು ಬಳಕೆದಾರರ ಅಂತರ ಸಂಪರ್ಕವನ್ನು, ಕೆಲವು ಟಾಸ್ಕ್ ಬಾರ್ ಲಕ್ಷಣಗಳನ್ನು, ವಿಂಡೋಸ್ ಎಕ್ಸ್ ಪ್ಲೋರರ್ ನ ಲಕ್ಷಣಗಳನ್ನು, ವಿಂಡೋಸ್ ಮೀಡಿಯಾ ಪ್ಲೇಯರ್ ನ ಲಕ್ಷಣಗಳನ್ನು, ವಿಂಡೋಸ್ ಅಲ್ಟಿಮೇಟ್ ಎಕ್ಸ್ ಟ್ರಾಸ್ ಮತ್ತು ಇಂಕ್ ಬಾಲ್ ಅನ್ನು ಒಳಗೊಂಡಿದೆ. ವಿಂಡೋಸ್ ವಿಸ್ಟಾನೊಂದಿಗಿದ್ದ ನಾಲ್ಕು ಅನ್ವಯಿಕೆಗಳು — ವಿಂಡೋಸ್ ಫೋಟೋ ಗ್ಯಾಲರಿ, ವಿಂಡೋಸ್ ಮೂವೀ ಮೇಕರ್, ವಿಂಡೋಸ್ ಕ್ಯಾಲಂಡರ್[೬೫] ಮತ್ತು ವಿಂಡೋಸ್ ಮ್ಯೇಲ್ — ಗಳನ್ನು ವಿಂಡೋಸ್ 7 ನೊಂದಿಗೆ ಸೇರಿಸಲಾಗಿಲ್ಲ. ಆದರೆ ಇವುಗಳ ಬದಲಿಗೆ ಸದೃಶವಾಗಿ ಕಾರ್ಯ ನಿರ್ವಹಿಸುವ ಅನ್ವಯಿಕೆಗಳನ್ನು ಪ್ರತ್ಯೇಕವಾದ ಪ್ಯಾಕೇಜ್ ವಿಂಡೋಸ್ ಲೈವ್ ಎಸೆನ್ಷಿಯಲ್ಸ್ ನಲ್ಲಿ ಉಚಿತವಾಗಿ ನೀಡಲಾಗಿದೆ. ಇದನ್ನು ಮೈಕ್ರೋಸಾಫ್ಟ್ ವೆಬ್ ಸೈಟ್ ನಲ್ಲಿ ಕಾಣಬಹುದಾಗಿದೆ. ವಿಂಡೋಸ್ ಅಲ್ಟಿಮೇಟ್ ಎಕ್ಸ್ ಟ್ರಾ ಗಳನ್ನು ತೆಗೆದರೂ ಕೂಡ ಅನೇಕ ಹೆಚ್ಚುವರಿ ಲಕ್ಷಣಗಳನ್ನು ಅಳವಡಿಸಲಾಗಿದೆ. ಅತ್ಯಂತ ಜನಪ್ರಿಯವಾದ ಹೆಚ್ಚುವರಿ ಲಕ್ಷಣಗಳೆಂದರೆ: ಮೈಕ್ರೋಸಾಫ್ಟ್ ಟೆಕ್ಸಸ್ ಹೋಲ್ಡ್ 'em, ಮೈಕ್ರೋಸಾಫ್ಟ್ ಟಿಂಕರ್, ಮತ್ತು ವಿಂಡೋಸ್ ಡ್ರೀಮ್ ಸೀನ್.[ಸೂಕ್ತ ಉಲ್ಲೇಖನ ಬೇಕು] ಇಂಕ್ ಬಾಲ್ ಅನ್ನು ಕೂಡ ವಿಂಡೋಸ್ 7 ಗೆ ಅಳವಡಿಸಬಹುದಾಗಿದೆ.
ನಂಬಿಕೆ ವಿರೋಧಿ ನಿಯಂತ್ರಣದ ನಿಗಾವಹಿಸುವಿಕೆ
[ಬದಲಾಯಿಸಿ]ಅಮೇರಿಕ ಸಂಯುಕ್ತ ಸಂಸ್ಥಾನದ ಒಕ್ಕೂಟ ನಿಯಂತ್ರಕರು ಮೈಕ್ರೋಸಾಫ್ಟ್ ನ ಇತರ ಕಾರ್ಯನಿರ್ವಹಣಾ ವ್ಯವಸ್ಥೆಗಳೊಂದಿಗೆ ವಿಂಡೋಸ್ 7 ಅನ್ನು ಅಧ್ಯಯನ ಮಾಡುತ್ತಿದ್ದಾರೆ. ಇವರು 2001 ರ ಅಮೇರಿಕ ಸಂಯುಕ್ತ ಸಂಸ್ಥಾನದ v. ಮೈಕ್ರೋಸಾಫ್ಟ್ ಒಪ್ಪಂದದ ನಂತರ ಕಂಪನಿಯ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ದಾಖಲಿತ ವಿದ್ಯಮಾನದ ಪ್ರಕಾರ, ಮೂರು-ಜನ ಸದಸ್ಯರ ಸಮಿತಿಯು 2008 ರ ಫೆಬ್ರವರಿಯಲ್ಲಿ ಹೊಸ ಕಾರ್ಯನಿರ್ವಹಣಾ ವ್ಯವಸ್ಥೆಯ ಪ್ರಯೋಗ ಮಾದರಿಯನ್ನು ನಿರ್ಧರಿಸುತ್ತಿದೆ. ಜುಪಿಟರ್ ರಿಸರ್ಚ್ ನಲ್ಲಿ ವಿಶ್ಲೇಷಕನಾಗಿರುವ ಮೈಕೆಲ್ ಗಾರ್ಟೆನ್ ಬರ್ಗ್ ಕೆಳಕಂಡಂತೆ ಹೇಳಿದ್ದಾರೆ: ಗ್ರಾಹಕರು ಬಯಸಬಹುದಾದ ಅಧಿಕ ಗುಣಲಕ್ಷಣಗಳನ್ನು ನಿಯಮಗಳ ವಿರುದ್ಧ ಸೇರಿಸುವುದನ್ನು ಹೇಗೆ ಮುಂದುವರೆಸಬೇಕು ಎಂಬುದು, ವಿಂಡೋಸ್ 7 ನ ಮೇಲಿರುವ "[ಮೈಕ್ರೋಸಾಫ್ಟ್] ಸವಾಲಾಗಿದೆ."[೬೬]
ಯುರೋಪ್
[ಬದಲಾಯಿಸಿ]ಯುರೋಪಿನ ಟ್ರಸ್ಟ್ ವಿರೋಧಿ ನಿಯಮಗಳೊಂದಿಗೆ ಅನುವರ್ತಿಸಲು ಮೈಕ್ರೋಸಾಫ್ಟ್, "ಬ್ಯಾಲೊಟ್" ಪಟಲದ ಬಳಕೆಯ ಪ್ರಸ್ತಾಪವನ್ನು ಮುಂದಿಟ್ಟಿತು. ಇದು ಬಳಕೆದಾರರಿಗೆ ಸ್ಪರ್ಧಾತ್ಮಕ ಬ್ರೌಸರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ಮೂಲಕ ಹಿಂದೆ ಯೋಜಿಸಿದಂತೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಅನ್ನು ಬಿಟ್ಟು ಉಳಿದ ವಿಂಡೋಸ್ ಆವೃತ್ತಿಯ ಅಗತ್ಯವನ್ನು ನೀಗಿಸಲಾಗುತ್ತದೆ.[೬೭] ಇಂಟರ್ ನೆಟ್ ಎಕ್ಸ್ ಪ್ಲೋರರ್ ನೊಂದಿಗೆ ವಿಂಡೋಸ್ 7 ಆವೃತ್ತಿಯ ಬಗ್ಗೆ ಗ್ರಾಹಕರಲ್ಲಿ ಉಂಟಾಗಬಹುದಾದ ಗೊಂದಲದ ಕುರಿತು ತಯಾರಕರಿಗೆ ಸಂಬಂಧಿಸಿದಂತೆ, ಮತ್ತು ವಿಂಡೋಸ್ 7 E ನ ಮೇಲೆ ಮಾಡಲಾದ ಟೀಕೆಗಳಿಗೆ ಪ್ರತಿಕ್ರಿಯಿಸುವಂತೆ, ಮೈಕ್ರೋಸಾಫ್ಟ್, ಇಂದು ಯುರೋಪ್ ಗೆ ಪ್ರತ್ಯೇಕ ಆವೃತ್ತಿಯನ್ನು ನೀಡಲು ನಿರಾಕರಿಸಿದೆ. ಅದಲ್ಲದೇ ಪ್ರಪಂಚದಾದ್ಯಂತ ಸಂಪೂರ್ಣ ಪ್ಯಾಕೇಜ್ ಗಳನ್ನು ಮತ್ತು ಪ್ರಮಾಣೀಕೃತ ಹೊಸ ಮಾಹಿತಿಗಳನ್ನು ರವಾನಿಸಲಾಗುತ್ತದೆ ಎಂಬುದನ್ನು ಪ್ರಕಟಿಸಿತು.[೬೮]
ವಿಂಡೋಸ್ ನ ಇತರ ಆವೃತ್ತಿಗಳೊಂದಿಗೆ ಮತ್ತು N ಆವೃತ್ತಿಯೊಂದಿಗೆ ನಡೆದಂತೆ, ಇದು ಯುರೋಪ್ ನಲ್ಲಿ ಬಿಡುಗಡೆ ಮಾಡಲಾದ ವಿಂಡೋಸ್ ಮೀಡಿಯಾ ಪ್ಲೇಯರ್ ನೊಂದಿಗೆ ಬರಲಿಲ್ಲ, ಆದರೆ ಇದನ್ನು ಮೈಕ್ರೋಸಾಫ್ಟ್ ನ ಮಾರಾಟ ವೆಬ್ ಸೈಟ್ ಗಳು ಮತ್ತು ಆಯ್ದ ಇತರ ವೆಬ್ ಸೈಟ್ ಗಳಲ್ಲಿ ಮಾತ್ರ ನೇರವಾಗಿ ಮಾರಾಟಕ್ಕಿಡಲಾಯಿತು.[೬೯]
ಸ್ವೀಕೃತಿ
[ಬದಲಾಯಿಸಿ]ಎಂಟು ಗಂಟೆಗಳೊಳಗೆ, Amazon.co.uk ನಲ್ಲಿ 2009 ರ ಜುಲೈನಲ್ಲಿ ಮಾಡಲಾದ ವಿಂಡೋಸ್ 7 ನ ಪೂರ್ವ ಬೇಡಿಕೆಗಳು, ವಿಂಡೋಸ್ ವಿಸ್ಟಾ ಅದರ ಮೊದಲ 17 ವಾರಗಳಲ್ಲಿ ಗಳಿಸಿದ ಬೇಡಿಕೆಯನ್ನು ಮೀರಿಸಿದವು.[೭೦] ಇದು ಹಿಂದಿನ ಏಳನೆ ಹ್ಯಾರಿ ಪಾಟರ್ ಪುಸ್ತಕದ ಮಾರಾಟ ದಾಖಲೆಯನ್ನು ಮೀರಿಸುವ ಮೂಲಕ ಅಮೇಜಾನ್ ಸೈಟ್ ನ ಇತಿಹಾಸದಲ್ಲೇ ಅತ್ಯಂತ ಗಳಿಕೆಯ ಅಪೂರ್ವ ಬೇಡಿಕೆಯಾಯಿತು.[೭೧] ವಿಂಡೋಸ್ 7 ನ ಫ್ರೋಫೆಷನಲ್ ಮತ್ತು ಅಲ್ಟಿ ಮೇಟ್ ಸಂಪುಟಗಳ, 64-ಬಿಟ್ ಆವೃತ್ತಿಗಳು ಜಪಾನ್ ನಲ್ಲಿ 36 ಗಂಟೆಗಳ ನಂತರ, ಮಾರಾಟವಾದವು.[೭೨] ಇದು ಬಿಡುಗಡೆಯಾದ ಎರಡು ವಾರಗಳ ನಂತರ, ಇದರ ಮಾರುಕಟ್ಟೆ ಶೇರ್ ನ ಬೆಲೆ ಸ್ನೋ ಲೆಪರ್ಡ್ ಅನ್ನು ಮೀರಿಸಿದೆ ಎಂಬ ಪ್ರಕಟಣೆ ನೀಡಲಾಗಿತ್ತು. ಇದು ಎರಡು ತಿಂಗಳ ಹಿಂದೆ ಆಪಲ್ ನ ಮ್ಯಾಕ್OS X ಕಾರ್ಯನಿರ್ವಹಣಾ ವ್ಯವಸ್ಥೆಯ ಅತ್ಯಂತ ಇತ್ತೀಚೀನ ಪರಿಷ್ಕರಣೆಯಾಗಿ ಬಿಡುಗಡೆಯಾಗಿತ್ತು.[೭೩][೭೪] ನೆಟ್ ಅನ್ವಯಿಕೆಗಳ ಪ್ರಕಾರ, ವಿಂಡೋಸ್ 7 ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 4 ಪ್ರತಿಶತದಷ್ಟು ಮಾರುಕಟ್ಟೆಯ ಶೇರ್ ಅನ್ನು ತಲುಪಿತು. ಹೋಲಿಕೆ ಮಾಡಿದಾಗ, ಈ ಹಂತವನ್ನು ತಲುಪಲು ವಿಂಡೋಸ್ ವಿಸ್ಟಾ ಏಳು ತಿಂಗಳು ತೆಗೆದುಕೊಂಡಿತ್ತು.[೭೫] ನಂತರ ಅದು 2010 ರ ಮಾರ್ಚ್ 4 ರ ಹೊತ್ತಿಗೆ ಮೈಕ್ರೋಸಾಫ್ಟ್, 90 ಮಿಲಿಯನ್ ವಿಂಡೋಸ್ 7 ಪರವಾನಗಿಗಳನ್ನು ಮಾರಾಟ ಮಾಡಿದೆ ಎಂದು ಪ್ರಕಟಿಸಿತು.[೭೬] ಆರುತಿಂಗಳೊಳಗೆ ಅಂದರೆ 2010 ರ ಏಪ್ರಿಲ್ 23 ರಂದು, ವಿಂಡೋಸ್ 7, 100 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಇದು ಮೈಕ್ರೋಸಾಫ್ಟ್ ನ ಅತ್ಯಂತ ಹೆಚ್ಚು ಮಾರಾಟವಾದ ಕಾರ್ಯನಿರ್ವಹಣಾ ವ್ಯವಸ್ಥೆಯಾಯಿತು.[೭೭][೭೮] ಆದಾಗ್ಯೂ 2010 ರ ಜೂನ್ 23 ರ ಹೊತ್ತಿಗೆ ವಿಂಡೋಸ್ 7 ನ 150 ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು. ಈ ಮೂಲಕ ಪ್ರತಿ ಸೆಕೆಂಡ್ ಗಳಿಗೆ ಏಳು ಪ್ರತಿಗಳು ಮಾರಾಟವಾಗುವುದರೊಂದಿಗೆ ಇದು ಇತಿಹಾಸದಲ್ಲೆ ಅತ್ಯಂತ ವೇಗವಾಗಿ ಮಾರಾಟವಾದ ಕಾರ್ಯನಿರ್ವಾಹಕ ವ್ಯವಸ್ಥೆಯಾಯಿತು.[೭೮][೭೯] ವಿಂಡೋಸ್ ಮಾಹಿತಿಯಿಂದ 2010 ರ ಜೂನ್ ಸಮಯದಲ್ಲಿ ಗಣನೆಗೆ ತೆಗೆದುಕೊಳ್ಳಲಾದ ಪ್ರಪಂಚದಾದ್ಯಂತ ದತ್ತಾಂಶವನ್ನು ಆಧರಿಸಿದಂತೆ, 46 ಪ್ರತಿಶತದಷ್ಟು ವಿಂಡೋಸ್ 7 PC ಗಳು ವಿಂಡೋಸ್ 7 ನ 64-ಬಿಟ್ ಆವೃತ್ತಿಯನ್ನು ಬಳಸುತ್ತಿವೆ, ಎಂದು ಹೇಳಲಾಗಿದೆ.[೮೦] NPD ಗ್ರೂಪ್ ನ ಸ್ಟಿಫನ್ ಬೇಕರ್ ಪ್ರಕಾರ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ 2010 ರ ಏಪ್ರಿಲ್ ಸಮಯದಲ್ಲಿ ಸಗಟು ವ್ಯಾಪಾರದ ಮಳಿಗೆಗಳಲ್ಲಿ ಮಾರಾಟವಾದ 77 ಪ್ರತಿಶದಷ್ಟು PC ಗಳಿಗೆ ವಿಂಡೋಸ್ 7 ನ 64-ಬಿಟ್ ಆವೃತ್ತಿಯನ್ನು ಮೊದಲೇ ಅಳವಡಿಸಲಾಗಿತ್ತು.[೮೦][೮೧] ಅದಲ್ಲದೇ 2010 ರ ಜುಲೈ 22 ರ ಹೊತ್ತಿಗೆ ವಿಂಡೋಸ್ 7, 175 ಮಿಲಿಯನ್ ಪ್ರತಿಗಳನ್ನು ಮಾರಾಟಮಾಡಿತ್ತು.[೮೨] ಹೀಗೆ 2010 ರ ಅಕ್ಟೋಬರ್ 21ರಂದು ಮೈಕ್ರೋಸಾಫ್ಟ್, ವಿಂಡೋಸ್ 7 ನ 240 ಮಿಲಿಯನ್ ಗಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂಬುದನ್ನು ಪ್ರಕಟಿಸಿತು.[೮೩]
ವಿಂಡೋಸ್ 7 ನ ವಿಮರ್ಶೆಗಳು ಅತ್ಯಂತ ಸಕಾರಾತ್ಮಕವಾಗಿದ್ದು, ಇದರ ಪೂರ್ವವರ್ತಿಯಾದ ವಿಂಡೋಸ್ ವಿಸ್ಟಾದೊಂದಿಗೆ ಹೋಲಿಸಿದರೆ ಇದರ ಉಪಯುಕ್ತತೆಯನ್ನು ಇಲ್ಲಿ ಪ್ರಶಂಸಿಸಲಾಗಿದೆ. CNET, ವಿಂಡೋಸ್ 7 ಹೋಮ್ ಪ್ರೀಮಿಯಂ ಗೆ 5 ಸ್ಟಾರ್ ಗಳಲ್ಲಿ 4.5 ಗುಣಾಂಕಗಳನ್ನು ನೀಡಿದೆ.[೮೪] ಇದರೊಂದಿಗೆ "ಇದು ವಿಸ್ಟಾ ಏನನ್ನು ಹೊಂದಬೇಕಿತ್ತೊ ಅದಕ್ಕಿಂತ ಹೆಚ್ಚಿನದನ್ನು ಹೊಂದಿದೆ, [ಮತ್ತು] ಮೈಕ್ರೋಸಾಫ್ಟ್ ಏನನ್ನು ಸಾಧಿಸಬೇಕಿತ್ತೊ ಅದನ್ನು" ಎಂದು ಹೇಳಿದೆ.ಲ್ PC ನಿಯತಕಾಲಿಕೆ,ವಿಂಡೋಸ್ 7, ಪುನಃ ಒದಗಿಸಿದ ಟಾಸ್ಕ್ ಬಾರ್, ಸರಳವಾದ ಹೋಮ್ ನೆಟ್ ವರ್ಕಿಂಗ್, ಮತ್ತು ವೇಗವಾಗಿ ಪ್ರಾರಂಭವಾಗುವ ಕೆಲವೇ ಕೆಲವು ಹೊಂದಾಣಿಕೆಯ ಸಮಸ್ಯೆಗಳೊಂದಿಗೆ ವಿಂಡೋಸ್ ವಿಸ್ಟಾ ದ ಮೇಲೆ ಮಾಡಲಾದ "ಬಹುದೊಡ್ಡ ಸುಧಾರಣೆಯಾಗಿದೆ" ಎಂದು ಹೇಳುವ ಮೂಲಕ ಇದಕ್ಕೆ 5 ರಲ್ಲಿ 4 ಅಂಕಗಳನ್ನು ನೀಡಿದೆ.[೮೫] ಮ್ಯಾಗ್ಸಿಮಮ್ PC, ವಿಂಡೋಸ್ 7 ಗೆ 10 ರಲ್ಲಿ 9 ಅಂಕಗಳನ್ನು ನೀಡಿತು. ಅಲ್ಲದೇ ಈ ಕುರಿತು ವಿಂಡೋಸ್ 7, ಉಪಯುಕ್ತತೆ ಮತ್ತು ಸುರಕ್ಷತೆಯಲ್ಲಿ "ಬೃಹತ್ ಮಟ್ಟದ ಪ್ರಗತಿ ಸಾಧಿಸಿದೆ" ಎಂದು ಹೇಳಿತಲ್ಲದೇ, "ಇದನ್ನು ಸ್ವೀಕರಿಸಲು ಅರ್ಹವಾಗಿರುವ" ಹೊಸ ಟಾಸ್ಕ್ ಬಾರ್ ಅನ್ನು ಕೂಡ ಪ್ರಶಂಸಿಸಿತು.[೮೬] PC ವರ್ಲ್ಡ್,ವಿಂಡೋಸ್ 7 ಅನ್ನು ವಿಂಡೋಸ್ XP ಗೆ "ತಕ್ಕ ಉತ್ತರಾಧಿಕಾರಿಯಾಗಿದೆ" ಎಂದು ಕರೆಯಿತಲ್ಲದೇ, ವೇಗದ ಮಾನದಂಡಗಳು ವಿಂಡೋಸ್ 7, ವಿಂಡೋಸ್ ವಿಸ್ಟಾ ಗಿಂತ ಸ್ವಲ್ಪ ವೇಗವಾಗಿರುವುದನ್ನು ತೋರಿಸುತ್ತವೆ ಎಂದು ಹೇಳಿತು.[೮೭] PC ವರ್ಲ್ಡ್, ವಿಂಡೋಸ್ 7 ಅನ್ನು ವರ್ಷದ ಅತ್ಯುತ್ತಮ ಉತ್ಪನ್ನ ಎಂದು ಕರೆಯಿತು.[೮೮] ವಿಂಡೋಸ್ 7 ನ ಮೇಲೆEngadget ಮಾಡಿದ ವಿಮರ್ಶೆಯಲ್ಲಿ, ಮೈಕ್ರೋಸಾಫ್ಟ್ ವಿಂಡೋಸ್ 7ನೊಂದಿಗೆ "ಸದೃಢ ಹೆಜ್ಜೆಯನ್ನು ಮುಂದಿಟ್ಟಿದೆ" ಎಂದು ಹೇಳಿತು. ಅಲ್ಲದೇ ವಿಶೇಷವಾಗಿ ನೆಟ್ ಬುಕ್ ಸೆಟ್ ಗಳಿಗೆ ವೇಗವು ವಿಂಡೋಸ್ 7 ಮಾರಾಟದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ, ಎಂದು ವರದಿಮಾಡಿದೆ.[೮೯] LAPTOP ನಿಯತಕಾಲಿಕೆ, ವಿಂಡೋಸ್ 7 ಗೆ 5 ಸ್ಟಾರ್ ಗಳಲ್ಲಿ 4 ಸ್ಟಾರ್ ಗಳನ್ನು ನೀಡಿದೆ. ಅಲ್ಲದೇ ವಿಂಡೋಸ್ 7 ಕಂಪ್ಯೂಟರ್ ಅನ್ನು ಮತ್ತಷ್ಟು ಗ್ರಹಿಸುವಂತೆ ಮಾಡಿದೆ. ಲ್ಯಾಪ್ ಟಾಪ್ ಕಂಪ್ಯೂಟರ್ ನ ಬ್ಯಾಟರಿಗಳಲ್ಲಿ "ಸಾಧಾರಣದಿಂದ ಆಕರ್ಷಕ" ಸುಧಾರಣೆ ಒಳಗೊಂಡಂತೆ ಒಟ್ಟಾಗಿ ಉತ್ತಮ ಪ್ರದರ್ಶನದ ಅವಕಾಶ ನೀಡಿದೆ ಎಂದು ತಿಳಿಸಿದೆ.[೯೦] Techradar , ಇಲ್ಲಿಯವರೆಗಿನ ವಿಂಡೋಸ್ ಆವೃತ್ತಿಗಳಲ್ಲೇ ಇದು ಅತ್ಯುತ್ತಮ ಆವೃತ್ತಿ ಎಂದು ಹೇಳುವ ಮೂಲಕ ಇದಕ್ಕೆ 5 ಸ್ಟಾರ್ ಗಳನ್ನು ನೀಡಿತು.[೯೧] ನ್ಯೂಯಾರ್ಕ್ ಟೈಮ್ಸ್ ,[೯೨] USA ಟುಡೇ ,[೯೩] ದಿ ವಾಲ್ ಸ್ಟ್ರೀಟ್ ಜರ್ನಲ್ ,[೯೪] ಮತ್ತು ದಿ ಟೆಲಿಗ್ರಾಫ್ [೯೫] ಗಳೂ ಕೂಡ ವಿಂಡೋಸ್ 7 ಗೆ ಉತ್ತಮ ವಿಮರ್ಶೆಗಳನ್ನು ನೀಡಿವೆ.
ಕೆಲವು ವಿಸ್ಟಾ ಅಲ್ಟಿಮೇಟ್ ನ ಬಳಕೆದಾರರು, ವಿಂಡೋಸ್ 7 ನ ಹೊಗಳಿಕೆ ಮತ್ತು ಪರಿಷ್ಕರಣಾ ಆಯ್ಕೆಗಳ ಮೇಲೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.[೯೬][೯೭] ವಿಂಡೋಸ್ ವಿಸ್ಟಾದಿಂದ ವಿಂಡೋಸ್ 7 ಗೆ ಪರಿಷ್ಕರಣ ಮಾಡಲು ಬಯಸುವ ವಿಂಡೋಸ್ ವಿಸ್ಟಾ ಅಲ್ಟಿಮೇಟ್ ನ ಬಳಕೆದಾರರು, ವಿಂಡೋಸ್ 7 ಅಲ್ಟಿಮೇಟ್ ಅನ್ನು ಪರಿಷ್ಕರಿಸಲು $219.99[೯೮] ಅನ್ನು ಪಾವತಿಸಬೇಕು. ಅಥವಾ ಅವರ ಎಲ್ಲಾ ಪ್ರೋಗ್ರಾಂಗಳನ್ನು ಪುನಃ ಅಳವಡಿಸುವ ಸಂಪೂರ್ಣ ಅನ್ವಯಿಕೆಯನ್ನು ಮಾಡಬೇಕು.[೯೯]
ಆವೃತ್ತಿಗಳು
[ಬದಲಾಯಿಸಿ]ವಿಂಡೋಸ್ 7 ಆರು ವಿಭಿನ್ನ ಆವೃತ್ತಿಗಳಲ್ಲಿ ದೊರೆಯುತ್ತದೆ. ಆದರೆ ಕೇವಲ ಹೋಮ್ ಪ್ರೀಮಿಯಂ, ಫ್ರೋಫೆಷನಲ್ ಮತ್ತು ಅಲ್ಟಿಮೇಟ್ ಆವೃತ್ತಿಗಳು ಮಾತ್ರ ಬಹುಪಾಲು ರಾಷ್ಟ್ರಗಳಲ್ಲಿ ಗ್ರಾಹಕರಿಗೆ ಸಗಟು ವ್ಯಾಪಾರದ ಮಾರುಕಟ್ಟೆಗಳಲ್ಲಿ ದೊರೆಯುತ್ತವೆ.[೧೦೦] ಇತರ ಆವೃತ್ತಿಗಳನ್ನು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಥವಾ ಉದ್ಯಮಗಳ ಬಳಕೆಯಂತಹ ಇತರ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.[೧೦೦] ವಿಂಡೋಸ್ 7 ನ ಪ್ರತಿ ಆವೃತ್ತಿ, ಅದರ ಹಿಂದಿನ ಆವೃತ್ತಿಯ ಎಲ್ಲಾ ಸಾಮರ್ಥ್ಯ ಮತ್ತು ಗುಣಲಕ್ಷಣಗಳನ್ನು ಒಳಗೊಂಡಿರುತ್ತದೆ.[೧೦೦][೧೦೧][೧೦೨][೧೦೩][೧೦೪] ಎಲ್ಲಾ ಆವೃತ್ತಿಗಳು, 32-ಬಿಟ್ (IA-32) ಸಂಸ್ಕಾರಕ ವಿನ್ಯಾಸಕ್ಕೆ ಆಧಾರ ನೀಡುತ್ತವೆ. ಅಲ್ಲದೇ ಸ್ಟಾರ್ಟರ್ ಅನ್ನು ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಗಳು 64-ಬಿಟ್ (x86-64) ಸಂಸ್ಕರಣಾ ವಿನ್ಯಾಸಕ್ಕೆ ಆಧಾರ ನೀಡುತ್ತವೆ. ವಿಂಡೋಸ್ 7 ನ ಗ್ರಾಹಕರ ಎಲ್ಲಾ ಆವೃತ್ತಿಗಳಿಗೂ ಅಳವಡಿಸುವ ಮಾಧ್ಯಮ ಒಂದೇ ಆಗಿದೆ. ಇದು ಒಂದೇ ತೆರನಾದ ಸಂಸ್ಕರಣ ವಿನ್ಯಾಸ ಹಾಗು ಕ್ರಿಯಾಶೀಲವಾಗಿರುವ ಗುಣಲಕ್ಷಣವನ್ನು ಗುರುತಿಸುವ ಅನುಮತಿ ಹೊಂದಿದೆ. ಅಲ್ಲದೇ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಪುನಃ ಅಳವಡಿಸದೇ, ಅನಂತರ ಗುಣಲಕ್ಷಣಗಳು ಬಹಿರಂಗವಾಗುವುದಕ್ಕೆ ಅವಕಾಶ ನೀಡುವ ಪರವಾನಗಿ ಪರಿಷ್ಕರಣಗಳನ್ನು ಹೊಂದಿದೆ.[೧೦೫] ವಿಂಡೋಸ್ 7 ನ ಪ್ರತಿ ಆವೃತ್ತಿಗೆ ಮೈಕ್ರೋಸಾಫ್ಟ್ 2 DVDಗಳನ್ನು (IA-32 ಸಂಸ್ಕರಣ ವಿನ್ಯಾಸಕ್ಕಾಗಿ 1 DVD ಯನ್ನು ಮತ್ತೊಂದು DVDಯನ್ನು x86-64 ಸಂಸ್ಕರಣ ವಿನ್ಯಾಸಕ್ಕಾಗಿ ವಿತರಿಸಿತು)ಹೀಗೆ ವಿತರಿಸಿರುವುದು ಮೊದಲ ಬಾರಿಯಾಗಿದೆ.(ಸ್ಟ್ರಾರ್ಟರ್ ಮತ್ತು ಹೋಮ್ ಬೇಸಿಕ್ ಅನ್ನು ಹೊರತುಪಡಿಸಿ; ಕೇವಲ ಬಿಡಿ ಮಾರಾಟದಲ್ಲಿ, OEM ನಲ್ಲಿ ಅಲ್ಲ; ವಿಂಡೋಸ್ 7 ಹೋಮ್ ಬೇಸಿಕ್ 64-ಬಿಟ್ ಆವೃತ್ತಿಯನ್ನು ಅಳವಡಿಸುವ DVDಯನ್ನು ಬಿಡಿ ಮಾರಾಟದ ಪ್ಯಾಕೇಜ್ ನಲ್ಲಿ ಸೇರಿಸಲಾಗಿಲ್ಲ. ಆದರೆ ಅದನ್ನು ಮೈಕ್ರೋಸಾಫ್ಟ್ ನಿಂದ ಪಡೆಯಬಹುದಾಗಿದೆ). ಅಧಿಕ ಗುಣಲಕ್ಷಣಗಳೊಂದಿಗೆ ವಿಂಡೋಸ್ 7 ಅನ್ನು ಪರಿಷ್ಕರಿಸಲು ಬಯಸುವ ಬಳಕೆದಾರರು, ಪರಿಷ್ಕರಣವನ್ನು ಖರೀದಿಸಲು ವಿಂಡೋಸ್ ಏನಿಟೈಮ್ ಅಪ್ ಗ್ರೇಡ್ ಅನ್ನು ಬಳಸಬಹುದಾಗಿದೆ. ಅಲ್ಲದೇ ಆ ಆವೃತ್ತಿಗಳ ಗುಣಲಕ್ಷಣಗಳನ್ನು ಅದು ಹೊರಗಿರಿಸುತ್ತದೆ.[೧೦೧][೧೦೫][೧೦೬] ವಿಂಡೋಸ್ 7 ನ ಕೆಲವು ಪ್ರತಿಗಳು ನಿರ್ಬಂಧನೆಗಳನ್ನು ಹೊಂದಿವೆ. ಇವುಗಳನ್ನು ಅದರ ಮುಂಭಾಗದ ಕವರ್ ಬಾಕ್ಸ್ ನಲ್ಲಿ ನಿರ್ದಿಷ್ಟಗೊಳಿಸಲಾದ ಭೌಗೋಳಿಕ ಪ್ರದೇಶಗಳಲ್ಲಿ (ಕೆಳಗೆ ನೀಡಲಾದ ಭೌಗೋಳಿಕ ಪ್ರದೇಶಗಳಲ್ಲಿ: ಆಗ್ನೇಯ ಏಷ್ಯಾ ; ಸಿಂಗಾಪುರವನ್ನು ಒಳಗೊಂಡಂತೆ ಆಗ್ನೇಯ ಏಷ್ಯಾ; ಭಾರತ; ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ; ಅಥವಾ ಲ್ಯಾಟೀನ್ ಅಮೇರಿಕ ಮತ್ತು ಕ್ಯಾರಿಬೀನ್) ಮಾತ್ರ ವಿತರಿಸಬಹುದು, ಮಾರಬಹುದು ಅಥವಾ ಕೊಂಡುಕೊಳ್ಳಬಹುದು ಮತ್ತು ಬಳಸಬಹುದು.
ಮೈಕ್ರೋಸಾಫ್ಟ್ , ವಿಂಡೋಸ್ 7 ಹೋಮ್ ಪ್ರೀಮಿಯಂ (ಆಯ್ದ ಮಾರುಕಟ್ಟೆಗಳಲ್ಲಿ)ಫ್ಯಾಮಿಲಿ ಪ್ಯಾಕ್ ನ ಅವಕಾಶ ನೀಡಿದ್ದು, ಇದು ಮೂರು PC ಗಳ ವರೆಗೂ ಅಳವಡಿಸಲು ಅವಕಾಶ ನೀಡುತ್ತದೆ.[೧೦೭] ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ "ಫ್ಯಾಮಿಲಿ ಪ್ಯಾಕ್" ಗೆ US$259.99 ಡಾಲರ್ ಅನ್ನು ನೀಡಬೇಕು;[೧೦೮] ಇದನ್ನು ಮೊದಲು ಪರಿಚಯಿಸಿದಾಗ ಕೆಲ ವಾರಗಳ ವರೆಗೆ ಇದು US$149.99 ಬೆಲೆಗೆ ದೊರೆಯುತ್ತಿತ್ತು.[೧೦೭]
ಮೈಕ್ರೋಸಾಫ್ಟ್, ವಿಂಡೋಸ್ 7 ರ ಮೇಲೆ, ವಿದ್ಯಾರ್ಥಿ ರಿಯಾಯಿತಿಗಾಗಿ ತಾತ್ಕಾಲಿಕ ಅವಕಾಶ ನೀಡಬೇಕೆಂದಿದೆ ಎಂಬ ಸಂಗತಿಯನ್ನು 2009 ರ ಸೆಪ್ಟೆಂಬರ್ 18 ರಲ್ಲಿ ಅದು ತಿಳಿಸಿತು. ಈ ಅವಕಾಶವನ್ನು ಕೆನಡಾ, ಆಸ್ಟ್ರೇಲಿಯಾ, ಕೊರಿಯಾ, ಮೆಕ್ಸಿಕೊ, ಫ್ರಾನ್ಸ್ ಮತ್ತು ಭಾರತದಲ್ಲಿರುವ ಯೋಜನೆಗಳೊಂದಿಗೆUS ಮತ್ತು ಇಂಗ್ಲೆಂಡ್ ನಲ್ಲಿಯೂ ಸಹ ವಿಸ್ತರಿಸಲಾಯಿತು. ಸರಿಯಾದ .edu or .ac.uk ಇ ಮೇಲ್ ವಿಳಾಸ ಹೊಂದಿರುವ ವಿದ್ಯಾರ್ಥಿಗಳು $30 ಅಥವಾ £30 ಬೆಲೆಗೆ ವಿಂಡೋಸ್ 7 ಹೋಮ್ ಪ್ರೀಮಿಯಂ ಅಥವಾ ಪ್ರೋಫೆಷನಲ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.[೧೦೯][೧೧೦]
ವಿಂಡೋಸ್ 7 ಪ್ರಸ್ತುತದಲ್ಲಿ ಅಭಿವರ್ಧಕರಿಗೆ ಸಮಗ್ರವಾಗಿಸಿದ ಆವೃತ್ತಿಯ ರೂಪದಲ್ಲೂ ಕೂಡ ಲಭ್ಯವಿದೆ.(ಹಿಂದೆ ವಿಂಡೋಸ್ ಸಮಗ್ರವಾಗಿಸಿದೆ 2011).[೧೧೧]
ಮಾರಾಟ
[ಬದಲಾಯಿಸಿ]ವಿಂಡೋಸ್ 7 ನ ವಿಭಿನ್ನ ಆವೃತ್ತಿಗಳನ್ನು ವಿನ್ಯಾಸ ಮಾಡಿ, ವಿವಿಧ ಅಗತ್ಯಗಳಿರುವವರಿಗೆ ಮಾರಾಟ ಮಾಡಲಾಗಿದೆ.[೧೧೨] ವಿಭಿನ್ನ ಆವೃತ್ತಿಗಳಲ್ಲಿ(ಸ್ಟಾರ್ಟರ್, ಹೋಮ್ ಬೇಸಿಕ್, ಹೋಮ್ ಪ್ರೀಮಿಯಂ, ಪ್ರೋಫೆಷನಲ್, ಎಂಟರ್ ಪ್ರೈಸ್, ಮತ್ತು ಅಲ್ಟಿಮೇಟ್), ಸ್ಟಾರ್ಟರ್ ಆವೃತ್ತಿಯನ್ನು ಕಡಿಮೆ ವೆಚ್ಚದ ನೋಟ್ ಬುಕ್ ಗಳಿಗಾಗಿ ವಿನ್ಯಾಸಗೊಳಿಸಿ ಮಾರಾಟ ಮಾಡಲಾಯಿತು. ಹೋಮ್ ಬೇಸಿಕ್ ಅನ್ನು ಅಸ್ತಿತ್ವಕ್ಕೆ ಬರುತ್ತಿರುವ ಮಾರುಕಟ್ಟೆಗಳಿಗಾಗಿ, ಹೋಮ್ ಪ್ರೀಮಿಯಂ ಅನ್ನು ಸಾಮಾನ್ಯ ಗೃಹ ಬಳಕೆದಾರರಿಗಾಗಿ, ಪ್ರೋಫೆಷನಲ್ ಅನ್ನು ವ್ಯಾಪಾರಗಳಿಗಾಗಿ, ಎಂಟರ್ ಪ್ರೈಸಸ್ ಅನ್ನು ದೊಡ್ಡ ವ್ಯವಹಾರಗಳಿಗೆ ಮತ್ತು ಸಂಘ ಸಂಸ್ಥೆಗಳಿಗಾಗಿ ಹಾಗು ಅಲ್ಟಿಮೇಟ್ ಅನ್ನು ಉತ್ಸಾಹಿಗಳಿಗಾಗಿ ರೂಪಿಸಲಾಗಿದೆ.[೧೧೨]
ಯಂತ್ರಾಂಶದ ಅಗತ್ಯತೆಗಳು
[ಬದಲಾಯಿಸಿ]ವಿಂಡೋಸ್ 7 ಅನ್ನು ಚಲಾಯಿಸಲು ಸಿಸ್ಟಮ್ ಗೆ ಅಗತ್ಯವಿರುವ ಕನಿಷ್ಠ ನಿರ್ದಿಷ್ಟತೆಗಳನ್ನು ಮೈಕ್ರೋಸಾಫ್ಟ್ ಪ್ರಕಟಿಸಿತು.[೧೧೩] ಈ 32-ಬಿಟ್ ಆವೃತ್ತಿಗೆ ಇರುವ ಅಗತ್ಯತೆಗಳು ವಿಸ್ಟಾದ ಪ್ರೀಮಿಯಂ ಆವೃತ್ತಿಗೆ ಇದ್ದ ಅಗತ್ಯತೆಗಳಿಗೆ ಸದೃಶವಾಗಿವೆ. ಆದರೆ 64-ಬಿಟ್ ಆವೃತ್ತಿಗಳಿಗೆ ಇವು ಅಧಿಕವಾಗಿವೆ. ನಂತರ ಮೈಕ್ರೋಸಾಫ್ಟ್ , ಪರಿಷ್ಕರಣ ಸಲಹಾರ್ಥಿಯನ್ನು ಬಿಡುಗಡೆ ಮಾಡಿತು. ಇದು ಕಂಪ್ಯೂಟರ್ ವಿಂಡೋಸ್ 7 ನೊಂದಿಗೆ ಹೊಂದಿಕೊಂಡಿದೆಯೇ ಎಂಬುದನ್ನು ನಿರ್ಧರಿಸುತ್ತದೆ Nvidia GeForce FX (5xxx) ಸರಣಿಗಳು ರೇಖಾಚಿತ್ರ ಕಾರ್ಡ್ ಗಳು ಯಂತ್ರಾಂಶದ ಕನಿಷ್ಠ ಅಗತ್ಯತೆಗಳನ್ನು ಪೊರೈಸಿದರೂ ಕೂಡ, GeForce 6 ಸರಣಿಗಳಿಗಿಂತ ಕಡಿಮೆ ಇರುವ ಯಾವುದಕ್ಕೂ, ವಿಂಡೋಸ್ 7 ಹೊಂದಾಣಿಕೆಯ ಡ್ರೈವರ್ ಗಳನ್ನು ಉತ್ಪಾದಿಸದಂತೆ nVidia ನಿರ್ಧರಿಸಿತು.
ವಿಂಡೋಸ್ 7 ಗಾಗಿ ಬೇಕಿರುವ ಯಂತ್ರಾಂಶದ ಕನಿಷ್ಠ ಅಗತ್ಯತೆಗಳು[೧೧೩] | ||
ವಿನ್ಯಾಸ | 32-ಬಿಟ್ | 64-ಬಿಟ್ |
---|---|---|
ಸಂಸ್ಕರಣಕಾರ: | 1 GHz x86 ಸಂಸ್ಕರಣಕಾರ | 1 GHz x86-64 ಸಂಸ್ಕರಣಕಾರ |
ಮೆಮೊರಿ (RAM) | 1 GB | 2 GB |
ಗ್ರಾಫಿಕ್ಸ್ ಕಾರ್ಡ್(ರೇಖಾಚಿತ್ರಗಳ ಕಾರ್ಡ್) | WDDM ಚಾಲಕ ನಮೂನೆ 1.0 ಯೊಂದಿಗೆ DirectX 9 ರೇಖಾಚಿತ್ರಗಳ ಸಂಸ್ಕಾರಕ (ಖಂಡಿತವಾಗಿ ಬೇಕಿಲ್ಲ; ಕೇವಲ ಏರೊ ಗೆ ಬೇಕಾಗುತ್ತದೆ) | |
HDD ಫ್ರೀ ಸ್ಪೇಸ್ | ಫ್ರೀ ಡಿಸ್ಕ್ ಸ್ಪೇಸ್ ನ 16 GB | ಫ್ರೀ ಡಿಸ್ಕ್ ಸ್ಪೇಸ್ ನ 20 GB |
ಆಪ್ಟಿಕಲ್ ಡ್ರೈವ್ | DVD ಡ್ರೈವ್ (ಕೇವಲ DVD/CD ಮೀಡಿಯಾ ದಿಂದ ಮಾತ್ರ ಅಳವಡಿಸಬೇಕು) |
ಕೆಲವೊಂದು ಗುಣಲಕ್ಷಣಗಳನ್ನು ಬಳಸಲು ಬೇಕಿರುವ ಹೆಚ್ಚುವರಿ ಅವಶ್ಯಕತೆಗಳು: [೧೧೩]
- ವಿಂಡೋಸ್ XP ಮೋಡ್ (ಪ್ರೋಫೆಷನಲ್, ಅಲ್ಟಿಮೆಟ್ ಮತ್ತು ಎಂಟರ್ ಪ್ರೈಸ್): ಇದಕ್ಕೆ RAM ನ ಅಧಿಕ 1GBಯ ಅಗತ್ಯವಿದೆ ಹಾಗು ಲಭ್ಯವಿರುವ ಹಾರ್ಡ್ ಡಿಸ್ಕ್ ಸ್ಪೇಸ್ ನಲ್ಲಿ ಅಧಿಕ 15GBಯ ಅಗತ್ಯವಿದೆ. ಹಾರ್ಡ್ ವೇರ್ ವರ್ಚ್ಯುಲೈಸೇಷನ್ ಗೆ ಸಮರ್ಥವಾಗಿರುವ ಸಂಸ್ಕರಣಕ್ಕೆ ಬೇಕಿರುವ ಅವಶ್ಯಕಗಳನ್ನು ತೆಗೆದುಹಾಕಲಾಗಿದೆ.[೧೧೪]
- ವಿಂಡೋಸ್ ಮೀಡಿಯಾ ಸೆಂಟರ್ ( ಹೋಮ್ ಪ್ರೀಮಿಯಂ, ಪ್ರೊಫೇಷನಲ್, ಅಲ್ಟಿಮೇಟ್ ಮತ್ತು ಎಂಟರ್ ಪ್ರೈಸ್ ನಲ್ಲಿ ಸೇರಿಸಲಾಗಿದೆ),ಇದು TVಯನ್ನು ದಾಖಲಿಸಿಕೊಳ್ಳಲು ಮತ್ತು ಪಡೆದುಕೊಳ್ಳಲು TV ಟ್ಯೂನರ್ ಅನ್ನು ಕೇಳುತ್ತದೆ.
ದತ್ತಾಂಶ ಸಂಗ್ರಹದ ಸ್ಮೃತಿಶಕ್ತಿಯ ಪರಿಮಿತಿಗಳು
[ಬದಲಾಯಿಸಿ]ದತ್ತಾಂಶ ಸಂಗ್ರಹದ ಸ್ಮೃತಿ ಶಕ್ತಿಯ (RAM) ಮೇಲಿರುವ ಗರಿಷ್ಠ ಪರಿಮಿತಿಗಳು ವಿಂಡೋಸ್ 7 ,ವಿಂಡೋಸ್ ಆವೃತ್ತಿಗಳ ಮೇಲೆ ಹಾಗು 32-ಬಿಟ್ ಮತ್ತು 64-ಬಿಟ್ ಆವೃತ್ತಿಗಳ ನಡುವೆ ಅವಲಂಬಿತವಾಗಿವೆ, ಎಂಬುದನ್ನು ತಿಳಿಸುತ್ತವೆ.[೧೧೫] ಕೆಳಕಂಡ ಟೇಬಲ್ ಮೂಲದ ಆಧಾರ ದೊರೆಯುವ ದತ್ತಾಂಶ ಸಂಗ್ರಹ ಶಕ್ತಿಯ ಗರಿಷ್ಠ ಪರಿಮಿತಿಗಳನ್ನು ನಿರ್ದಿಷ್ಟವಾಗಿ ತಿಳಿಸಲಾಗಿದೆ:
ವಿಂಡೋಸ್ 7 ಆವೃತ್ತಿಗಳಿಗಿರುವ ಕಂಪ್ಯೂಟರ್ ದತ್ತಾಂಶ ಸಂಗ್ರಹದ ಪರಿಮಿತಿಗಳು[೧೧೫] | ||
ಆವೃತ್ತಿ | 32-ಬಿಟ್ ವಿಂಡೋಸ್ ಗಳಲ್ಲಿರುವ ಪರಿಮಿತಿ | 64-ಬಿಟ್ ವಿಂಡೋಸ್ ಗಳಲ್ಲಿರುವ ಪರಿಮಿತಿ |
---|---|---|
ವಿಂಡೋಸ್ 7 ಅಲ್ಟಿಮೇಟ್ | 4 GB | 192 GB |
ವಿಂಡೋಸ್ 7 ಎಂಟರ್ ಪ್ರೈಸ್ | 4 GB | 192 GB |
ವಿಂಡೋಸ್ 7 ಪ್ರೋಫೆಷನಲ್ | 4 GB | 192 GB |
ವಿಂಡೋಸ್ 7 ಹೋಮ್ ಪ್ರೀಮಿಯಂ | 4 GB | 16 GB |
ವಿಂಡೋಸ್ 7 ಹೋಮ್ ಬೇಸಿಕ್ | 4 GB | 8 GB |
ವಿಂಡೋಸ್ 7 ಸ್ಟಾರ್ಟರ್ | 2 GB | N/A |
ಬಹು-ಕೇಂದ್ರೀಯ ಸಂಸ್ಕರಣ ಮತ್ತು ಬಹುಸಂಸ್ಕರಣದ ಪರಿಮಿತಿಗಳು
[ಬದಲಾಯಿಸಿ]ಒಂದು PCಯಲ್ಲಿ ವಿಂಡೋಸ್ 7 ಆಧಾರಗಳನ್ನು ಹೊಂದಿರುವ ತಾರ್ಕಿಕ ಸಂಸ್ಕರಣಗಳ ಗರಿಷ್ಠ ಒಟ್ಟು ಗಾತ್ರವು[೧೧೬]: 32-ಬಿಟ್ ಗೆ 32[೧೧೭], 64-ಬಿಟ್ ಗೆ 256[೧೧೮]. ಒಂದು PC ಯಲ್ಲಿ ವಿಂಡೋಸ್ 7 ನ ಆಧಾರಗಳ ಹೊಂದಿರುವ ದತ್ತಾಂಶಗಳ ಸಂಸ್ಕರಣಗಳ ಗರಿಷ್ಠ ಪರಿಮಾಣ: ಪ್ರೊಫೇಷನಲ್, ಎಂಟರ್ ಪ್ರೈಸ್ ಮತ್ತು ಅಲ್ಟಿಮೇಟ್ ಗೆ 2; ಸ್ಟಾರ್ಟರ್, ಹೋಮ್ ಬೇಸಿಕ್ ಮತ್ತು ಹೋಮ್ ಪ್ರೀಮಿಯಂಗೆ 1.[೧೧೯]
ಸರ್ವೀಸ್ ಪ್ಯಾಕ್ ಗಳು(ಸೇವಾ ಪರಿಷ್ಕರಣಗಳ ಸಂಗ್ರಹ)
[ಬದಲಾಯಿಸಿ]ವಿಂಡೋಸ್ 7 ಸರ್ವೀಸ್ ಪ್ಯಾಕ್ 1 (SP1) ಅನ್ನು 2010 ರ ಮಾರ್ಚ್ 18 ರಂದು ಪ್ರಕಟಿಸಲಾಯಿತು. ಅಲ್ಲದೇ ಪ್ರಸ್ತುತ ಇದು ಅಭಿವೃದ್ಧಿಯ ಹಂತದಲ್ಲಿದೆ. ಬೀಟಾವನ್ನು 2010 ರ ಜುಲೈ 12 ರಂದು ಬಿಡುಗಡೆ ಮಾಡಲಾಯಿತು.[೧೨೦][೧೨೧][೧೨೨] ಮೈಕ್ರೋಸಾಫ್ಟ್ ಈ ಸರ್ವೀಸ್ ಪ್ಯಾಕ್, ಹಿಂದೆ ವಿಂಡೋಸ್ ನ ಆವೃತ್ತಿಗಳಿಗೆ ಅದರಲ್ಲು ವಿಶೇಷವಾಗಿ ವಿಂಡೋಸ್ ವಿಸ್ಟಾಕ್ಕೆ ಬಿಡುಗಡೆ ಮಾಡಿದ ಸರ್ವೀಸ್ ಪ್ಯಾಕ್ ಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂಬುದನ್ನು ದೃಢಪಡಿಸಿತು.[೧೨೩]
ಆಗ 2010 ರ ಏಪ್ರಿಲ್ 7 ರಂದು ವಿಂಡೋಸ್ 7 ಸರ್ವೀಸ್ ಪ್ಯಾಕ್ 1 ರ ನಿರ್ಮಾಣವನ್ನು 2010 ರ ಮಾರ್ಚ್ 27 ರಿಂದ ಎಂದು ನಿಗದಿಪಡಿಸಲಾಗಿತ್ತು. ಆದರೆ ಇದು ಟಾರಂಟ್ ಸೈಟ್ ಗಳಲ್ಲಿ ಬಹಿರಂಗವಾಯಿತು.[೧೨೪][೧೨೫] ಬಹಿರಂಗವಾದ ಸರ್ವೀಸ್ ಪ್ಯಾಕ್ ಗಳು ನಿರ್ಮಾಣ ಸಂಖ್ಯೆ 6.1.7601.16537.amd64fre.win7.100327-0053ಯನ್ನು ಹೊಂದಿದ್ದವು. ಅಲ್ಲದೇ ವಿಂಡೋಸ್ ನ ಹಿಂದಿನ ಆವೃತ್ತಿಗಳಿಗಿಂತ ಅತ್ಯಂತ ವೇಗವಾಗಿ ಇದನ್ನು ಅಳವಡಿಸಿಕೊಳ್ಳಲಾಯಿತು ಎಂದು ವರದಿಯಾಗಿದೆ.[೧೨೬]
ಸಾಫ್ಟ್ ಪೀಡಿಯಾ 2010 ರ ಅಕ್ಟೋಬರ್ 6 ರಂದು, ಕೆಳಕಂಡಂತೆ ವರದಿ ಮಾಡಿದೆ: ಮೈಕ್ರೋಸಾಫ್ಟ್ ವಿಂಡೋಸ್ 7 ಸರ್ವೀಸ್ ಪ್ಯಾಕ್ 1 ನಿರ್ಮಾಣ "6.1.7601.17104" ರ ಬಿಡುಗಡೆಯ ಪ್ಯಾಕ್, ಎಸ್ ಕ್ರಾವ್ ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ ಆಯ್ದ ಟೆಸ್ಟರ್ ಗಳಿಗೆ ಮತ್ತು ಮೈಕ್ರೋಸಾಫ್ಟ್ ನ ಅತ್ಯಂತ ಹತ್ತಿರದ ಪಾಲುದಾರರಿಗೆ ಮಾತ್ರ ಲಭ್ಯವಾಗಿದೆ.[೧೨೭]
ಮೈಕ್ರೋಸಾಫ್ಟ್, ವಿಂಡೋಸ್ 7 ನ ಸರ್ವೀಸ್ ಪ್ಯಾಕ್ 1 ರ ಬಿಡುಗಡೆಯ ತಂತ್ರಾಂಶ ಆವೃತ್ತಿಯನ್ನು 2010 ರ ಅಕ್ಟೋಬರ್ 26 ರಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಇದು "6.1.7601.17105" ಆವೃತ್ತಿ ಸಂಖ್ಯೆಯನ್ನು ಹೊಂದಿದೆ.[೧೨೮]
ಅದರ ಪ್ರಕಟನೆಯ ಪ್ರಕಾರ ಸರ್ವೀಸ್ ಪ್ಯಾಕ್ 1ರ ಪ್ರಸ್ತುತದ ಅಧಿಕೃತ ಬಿಡುಗಡೆಯನ್ನು 2011 ರ ಮೊದಲಾರ್ಧದಲ್ಲಿ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ.[೧೨೯]
ಇವನ್ನೂ ಗಮನಿಸಿ
[ಬದಲಾಯಿಸಿ]- ಮೈಕ್ರೋಸಾಫ್ಟ್ ವಿಂಡೋಸ್ ಆವೃತ್ತಿಗಳ ಹೋಲಿಕೆ
- ಮೈಕ್ರೋಸಾಫ್ಟ್ ವಿಂಡೋಸ್ ನ ಇತಿಹಾಸ
- ಮೈಕ್ರೋಸಾಫ್ಟ್ ಸೆಕ್ಯೊರಿಟಿ ಎಸೆನ್ಷಿಯಲ್ಸ್ (MSE)
ಉಲ್ಲೇಖಗಳು
[ಬದಲಾಯಿಸಿ]- ↑ Mike Nash (ಅಕ್ಟೋಬರ್ 14, 2008). "Why 7?". The Windows Blog. Microsoft. Retrieved ಫೆಬ್ರವರಿ 1, 2011.
- ↑ "Windows 7 and Windows Server 2008 R2 Officially RTM At Build Version 6.1.7600.16385". My Digital Life. My Digital Life. ಜುಲೈ 23, 2009. Archived from the original on ಜೂನ್ 26, 2013. Retrieved ಫೆಬ್ರವರಿ 1, 2011.
- ↑ "Windows runs on Arm's mobile phone chips". BBC News. BBC. ಜನವರಿ 6, 2011. Retrieved ಫೆಬ್ರವರಿ 1, 2011.
- ↑ Microsoft. "Windows 7 Lifecycle Policy". Microsoft. Retrieved ಅಕ್ಟೋಬರ್ 22, 2009.
- ↑ Ricciuti, Mike (ಜುಲೈ 20, 2007). "Next version of Windows: Call it 7". CNET News. Archived from the original on ನವೆಂಬರ್ 20, 2008. Retrieved ಫೆಬ್ರವರಿ 9, 2011.
- ↑ ೬.೦ ೬.೧ Brandon LeBlanc. "Windows 7 Has Been Released to Manufacturing".
- ↑ "Windows 7 and Windows Server 2008 R2 Timelines Shared at Computex". Microsoft. ಜೂನ್ 3, 2009. Retrieved ಜೂನ್ 3, 2009.
- ↑ Nash, Mike (ಅಕ್ಟೋಬರ್ 28, 2008). "Windows 7 Unveiled Today at PDC 2008". Windows Team Blog. Microsoft. Retrieved ನವೆಂಬರ್ 11, 2008.
- ↑ LeBlanc, Brandon (ಅಕ್ಟೋಬರ್ 28, 2008). "How Libraries & HomeGroup Work Together in Windows 7". Windows Team Blog. Microsoft. Retrieved ನವೆಂಬರ್ 11, 2008.
- ↑ "Windows 7 to Skip Photo, Mail, Calendar and Movie Editing tools".
- ↑ "E-mail, photos, movie making will not be included in Windows 7".
- ↑ LeBlance, Brandon (ಅಕ್ಟೋಬರ್ 28, 2008). "The Complete Windows Experience – Windows 7 + Windows Live". Windows Team Blog. Microsoft. Retrieved ನವೆಂಬರ್ 11, 2008.
- ↑ Lettice, John (ಅಕ್ಟೋಬರ್ 24, 2001). "Gates confirms Windows Longhorn for 2003". The Register. Retrieved ಮಾರ್ಚ್ 5, 2008.
- ↑ "Microsoft cuts key Longhorn feature". Todd Bishop. Hearst Seattle Media, LLC. ಆಗಸ್ಟ್ 28, 2004. Retrieved ಮಾರ್ಚ್ 25, 2009.
- ↑ Thurrott, Paul (ಫೆಬ್ರವರಿ 14, 2007). "Windows "7" FAQ". Paul Thurrott's SuperSite for Windows. Retrieved ಜನವರಿ 5, 2008.
- ↑ Foley, Mary J (ಜುಲೈ 20, 2007). "Windows Seven: Think 2010". ZDNet. Archived from the original on ಆಗಸ್ಟ್ 24, 2007. Retrieved ಸೆಪ್ಟೆಂಬರ್ 19, 2007.
- ↑ Fried, Ina (ಅಕ್ಟೋಬರ್ 13, 2008). "Microsoft makes Windows 7 name final". CNET. Retrieved ಅಕ್ಟೋಬರ್ 13, 2008.
- ↑ Canadian Broadcasting Corporation (2008). "For Microsoft's Windows, 7th time's a charm". CBC News. Retrieved ಅಕ್ಟೋಬರ್ 27, 2008.
{{cite news}}
: Unknown parameter|month=
ignored (help) - ↑ Alex Castle (ಅಕ್ಟೋಬರ್ 15, 2008). "Microsoft Justifies Its Windows 7 Naming Decision". Maximum PC. Retrieved ನವೆಂಬರ್ 18, 2009.
- ↑ "Version numbers of Windows". technologizer.com.
- ↑ Andrew. "Why Call it Windows 7?". www.worldstart.com. Archived from the original on ಅಕ್ಟೋಬರ್ 18, 2009. Retrieved ನವೆಂಬರ್ 20, 2009.
- ↑ Ian Cunningham (ಡಿಸೆಂಬರ್ 3, 2008). "Windows 7 Build Numbers". Archived from the original on ಮಾರ್ಚ್ 8, 2009. Retrieved ಫೆಬ್ರವರಿ 9, 2011.
- ↑ "OSNews.com". OSNews.com. Retrieved ಮೇ 25, 2009.
- ↑ "Windows 7 beta 1 performance - How does the OS compare to Vista and XP? | Hardware 2.0 | ZDNet.com". Blogs.zdnet.com. ಜನವರಿ 1, 2009. Archived from the original on ಮಾರ್ಚ್ 14, 2009. Retrieved ಮೇ 25, 2009.
- ↑ Graham-Smith, Darien (2009). "Follow-up: Benchmarking Windows 7". Retrieved ಜನವರಿ 29, 2009.
{{cite web}}
: Unknown parameter|month=
ignored (help) - ↑ "Leaked Windows 7 RC torrents infected with trojan". ಸ್ಲ್ಯಾಶ್ ಗೇರ್
- ↑ Pennington, Kenneth (2009). "Windows 7 64-Bit Beta Hits the Web". Archived from the original on ಜನವರಿ 21, 2009. Retrieved ಜನವರಿ 7, 2009.
{{cite web}}
: Unknown parameter|month=
ignored (help) - ↑ Johnson, Bobbie (ಜನವರಿ 8, 2009). "CES: Steve Ballmer unveils Microsoft's Windows 7 | Technology | guardian.co.uk". London: Guardian. Retrieved ಮೇ 25, 2009.
- ↑ "Microsoft delays first Windows 7 public beta". Gavin Clarke. The Register. ಜನವರಿ 10, 2009. Retrieved ಮಾರ್ಚ್ 25, 2009.
- ↑ Miller, Paul (ಏಪ್ರಿಲ್ 24, 2009). "Windows 7 RC 7100 making its way to OEMs, a torrent tracker near you". Engadget.com. Retrieved ಮೇ 25, 2009.
- ↑ "Windows 7 Release Candidate Customer Preview Program". Microsoft. Retrieved ಮೇ 5, 2009.
- ↑ "The Windows Blog".
- ↑ Steven Levy (ಫೆಬ್ರವರಿ 3, 2007). "Bill Gates on Vista and Apple's 'Lying' Ads". Archived from the original on ಮಾರ್ಚ್ 31, 2007. Retrieved ಫೆಬ್ರವರಿ 9, 2011.
- ↑ Bill Gates (ಮೇ 12, 2007). "Bill Gates: Japan—Windows Digital Lifestyle Consortium".
- ↑ Sinofsky, Steven (ಡಿಸೆಂಬರ್ 15, 2008). "Continuing our discussion on performance". Engineering Windows 7. Microsoft. Retrieved ಡಿಸೆಂಬರ್ 18, 2008.
- ↑ Oiaga, Marius (ಜೂನ್ 24, 2008). "Windows 7 Will Not Inherit the Incompatibility Issues of Vista".
- ↑ Dignan, Larry (2008). "Ballmer: It's ok to wait until Windows 7; Yahoo still 'makes sense'; Google Apps 'primitive'". Archived from the original on ಅಕ್ಟೋಬರ್ 17, 2008. Retrieved ಅಕ್ಟೋಬರ್ 17, 2008.
{{cite web}}
: Unknown parameter|month=
ignored (help) - ↑ "Windows 7 Takes More Advantage of Multi-Core CPUs - Windows 7". Windowsvienna.com. Archived from the original on ಮೇ 3, 2009. Retrieved ಮೇ 25, 2009.
- ↑ "Windows 7 to get parallel-processing tweaks | All about Microsoft | ZDNet.com". Blogs.zdnet.com. ಸೆಪ್ಟೆಂಬರ್ 30, 2008. Archived from the original on ಫೆಬ್ರವರಿ 1, 2009. Retrieved ಮೇ 25, 2009.
- ↑ "Windows 7 to get parallel-processing tweaks | PC Tips". Pctipsbox.com. ಅಕ್ಟೋಬರ್ 5, 2008. Retrieved ಮೇ 25, 2009.
- ↑ "Windows 7 enters parallel universe". Vista.Blorge. ಸೆಪ್ಟೆಂಬರ್ 30, 2008. Archived from the original on ಮೇ 10, 2009. Retrieved ಮೇ 25, 2009.
- ↑ Gruener, Wolfgang (ಜನವರಿ 16, 2008). "TG Daily — Windows Vista successor scheduled for a H2 2009 release?". TG Daily. Retrieved ಜನವರಿ 17, 2008.
- ↑ "ThinkNext.net: Screenshots from a blogger with Windows 7 M1". Archived from the original on ಜನವರಿ 30, 2008. Retrieved ಫೆಬ್ರವರಿ 9, 2011.
- ↑ Zack Whittaker (ಜೂನ್ 12, 2009). "Windows 7 UAC flaw: "Pandora's box of all vulnerabilities"". Archived from the original on ಜೂನ್ 15, 2009. Retrieved ಜೂನ್ 14, 2009.
- ↑ Russinovich, Mark. "User Account Control Inside Windows 7 User Account Control". Microsoft Corporation. Retrieved ಜೂನ್ 14, 2009.
- ↑ "How to add Mac-like RAW image support to Windows 7, Vista, XP".
- ↑ Softpedia (2008). "Windows 7 User Interface – The Superbar (Enhanced Taskbar)". Retrieved ನವೆಂಬರ್ 12, 2008.
{{cite web}}
: Unknown parameter|month=
ignored (help) - ↑ "Windows 7: Some Minor Improvements, No Game Changer".
- ↑ "Touching Windows 7 (Engineering Windows 7 Blog)".
- ↑ "Engineering Windows 7 : Designing Aero Snap". Steven Sinofsky/Microsoft. Retrieved ಜೂನ್ 8, 2009.
- ↑ "Windows 7: Web Services in Native Code". PDC 2008. Retrieved ಸೆಪ್ಟೆಂಬರ್ 26, 2008.
- ↑ "Windows 7: Deploying Your Application with Windows Installer (MSI) and ClickOnce". PDC 2008. Retrieved ಸೆಪ್ಟೆಂಬರ್ 26, 2008.
- ↑ "Windows 7: Writing World-Ready Applications". PDC 2008. Retrieved ಸೆಪ್ಟೆಂಬರ್ 26, 2008.
- ↑ "WinHEC 2008 GRA-583: Display Technologies". Microsoft. ನವೆಂಬರ್ 6, 2008. Archived from the original on ಡಿಸೆಂಬರ್ 27, 2008. Retrieved ಡಿಸೆಂಬರ್ 4, 2008.
- ↑ "Windows 7 High Color Support". Softpedia. ನವೆಂಬರ್ 26, 2008. Archived from the original on ಫೆಬ್ರವರಿ 21, 2009. Retrieved ಡಿಸೆಂಬರ್ 5, 2008.
- ↑ "Support and Q&A for Solid-State Drives". Engineering Windows 7. Microsoft. ಮೇ 5, 2009. Retrieved ಮೇ 9, 2009.
- ↑ Crothers, Brooke (ನವೆಂಬರ್ 6, 2008). "Microsoft describes USB 3.0 delays". CNet. Archived from the original on ಏಪ್ರಿಲ್ 26, 2011. Retrieved ನವೆಂಬರ್ 13, 2008.
- ↑ "Beta to RC Changes — Turning Windows Features On or Off".
- ↑ Thurrott, Paul (ಮಾರ್ಚ್ 8, 2009). "Paul Thurrott's SuperSite for Windows: Windows 7 Build 7048 Notes". Paul Thurrott's SuperSite for Windows. Retrieved ಏಪ್ರಿಲ್ 24, 2009.
- ↑ "Windows Virtual PC". Microsoft. Retrieved ಮೇ 6, 2009.
- ↑ "Windows XP Mode for Windows 7 brochure" (PDF). Microsoft. Archived from the original (PDF) on ಮೇ 30, 2009. Retrieved ಮೇ 6, 2009.
- ↑ "Demonstration: Windows 7 VHD Boot". Microsoft. Retrieved ಏಪ್ರಿಲ್ 29, 2009.
- ↑ "Windows 7 Presentation Virtualization: Graphics Remoting (RDP) Today and Tomorrow". Microsoft. Retrieved 2008.
{{cite web}}
: Check date values in:|accessdate=
(help) - ↑ "Let's talk about Windows 7 Starter". Windows 7 Team. Retrieved ಮೇ 29, 2009.
- ↑ Windows Live team (ಅಕ್ಟೋಬರ್ 22, 2009). "Finding your applications in Windows 7". Microsoft. Retrieved ಅಕ್ಟೋಬರ್ 23, 2009.
- ↑ Keizer, Gregg F. (2008). "Windows 7 eyed by antitrust regulators". Archived from the original on ಏಪ್ರಿಲ್ 23, 2008. Retrieved ಮಾರ್ಚ್ 19, 2008.
{{cite web}}
: Unknown parameter|month=
ignored (help) - ↑ "Microsoft proposes "Browser Ballot Screen" to the EU". Neowin. ಜುಲೈ 24, 2009. Archived from the original on ಜುಲೈ 27, 2009. Retrieved ಆಗಸ್ಟ್ 1, 2009.
{{cite web}}
:|first=
missing|last=
(help); Unknown parameter|coauthors=
ignored (|author=
suggested) (help) - ↑ Warren, Tom (ಆಗಸ್ಟ್ 1, 2009). "Microsoft scraps Windows 7 'E' version for Europe". Neowin. Archived from the original on ಆಗಸ್ಟ್ 22, 2009. Retrieved ಆಗಸ್ಟ್ 1, 2009.
- ↑ "Microsoft online Windows 7 store page". Archived from the original on ಸೆಪ್ಟೆಂಬರ್ 19, 2009. Retrieved ಸೆಪ್ಟೆಂಬರ್ 9, 2009.
- ↑ "Windows 7 flies off virtual shelf". BBC News. ಜುಲೈ 15, 2009. Retrieved ಜುಲೈ 15, 2009.
- ↑ Johnson, Bobbie (ಅಕ್ಟೋಬರ್ 21, 2009). "Windows 7 set to break retail records". London: The Guardian. Retrieved ಅಕ್ಟೋಬರ್ 21, 2009.
- ↑ "64bit版Windows 7は人気でやや品薄、週明けには回復?". ಅಕ್ಟೋಬರ್ 24, 2009.
- ↑ "October 2009 OS stats: Windows 7 passes Snow Leopard, Linux". ars technica. ನವೆಂಬರ್ 6, 2009. Retrieved ನವೆಂಬರ್ 7, 2009.
- ↑ "Windows 7 surpasses Snow Leopard in under two weeks". Neowin. ನವೆಂಬರ್ 7, 2009. Retrieved ನವೆಂಬರ್ 7, 2009.
- ↑ Ina Fried (ನವೆಂಬರ್ 10, 2009). "Windows 7 use continues to climb". CNET. Retrieved ನವೆಂಬರ್ 13, 2009.
- ↑ "ಆರ್ಕೈವ್ ನಕಲು". Archived from the original on ಮೇ 10, 2010. Retrieved ಫೆಬ್ರವರಿ 9, 2011.
- ↑ "Windows 7 now fastest-selling Windows OS". ZDNet. ಏಪ್ರಿಲ್ 27, 2010. Retrieved ಜೂನ್ 24, 2010.
- ↑ ೭೮.೦ ೭೮.೧ "Windows 7: 150 Million Copies Sold". Windows IT Pro. ಜೂನ್ 23, 2010. Retrieved ಜೂನ್ 24, 2010.
- ↑ "150 Million Licenses of Windows 7 Sold, Windows Live Betas Announced". Microsoft. ಜೂನ್ 23, 2010. Retrieved ಜೂನ್ 24, 2010.
- ↑ ೮೦.೦ ೮೦.೧ "64-Bit Momentum Surges with Windows 7". Microsoft. ಜುಲೈ 8, 2010. Retrieved ಆಗಸ್ಟ್ 2, 2010.
- ↑ "Microsoft: Windows 7 makes 64-bit headway". cnet. ಜುಲೈ 9, 2010. Retrieved ಆಗಸ್ಟ್ 2, 2010.
- ↑ "Windows 7 Momentum Continues: 175 Million Licenses Sold". Microsoft. ಜುಲೈ 22, 2010. Retrieved ಜುಲೈ 27, 2010.
- ↑ "Celebrating Windows 7 at 1 Year – More than 240 Million Licenses Sold". Microsoft. ಅಕ್ಟೋಬರ್ 21, 2010. Retrieved ಅಕ್ಟೋಬರ್ 22, 2010.
- ↑ "Microsoft Windows 7 (Home Premium) Review - CNet". CNet. ಜುಲೈ 31, 2009.
- ↑ Michael Muchmore (ಅಕ್ಟೋಬರ್ 22, 2009). "Microsoft Windows 7". PC Magazine. Retrieved ನವೆಂಬರ್ 13, 2009.
- ↑ Will Smith (ಅಕ್ಟೋಬರ್ 19, 2009). "Windows 7 Review: XP vs Vista vs 7 in 80+ Benchmarks". Maximum PC. Retrieved ನವೆಂಬರ್ 13, 2009.
- ↑ Harry McCracken (ಅಕ್ಟೋಬರ್ 19, 2009). "Windows 7 Review". PC World. Retrieved ನವೆಂಬರ್ 13, 2009.
- ↑ The PC World Editorial Team (ಅಕ್ಟೋಬರ್ 19, 2009). "The PC World 100: Best Products of 2009". PC World. Retrieved ನವೆಂಬರ್ 13, 2009.
- ↑ Paul Miller (ಆಗಸ್ಟ್ 12, 2009). "Windows 7 review". Engadget. Retrieved ನವೆಂಬರ್ 13, 2009.
- ↑ Dana Wollman (ಆಗಸ್ಟ್ 21, 2009). "Windows 7". LAPTOP Magazine. Archived from the original on ಏಪ್ರಿಲ್ 17, 2014. Retrieved ನವೆಂಬರ್ 13, 2009.
- ↑ Mary Branscombe (ಆಗಸ್ಟ್ 7, 2009). "Windows 7 review". TechRadar. Retrieved ನವೆಂಬರ್ 13, 2009.
- ↑ David Pogue (ಅಕ್ಟೋಬರ್ 21, 2009). "Windows 7 Keeps the Good, Tries to Fix Flaws". New York Times. Retrieved ನವೆಂಬರ್ 13, 2009.
- ↑ Edward C. Baig (ಅಕ್ಟೋಬರ್ 21, 2009). "After Vista, Windows 7 is a giant leap for Microsoft". USA Today. Retrieved ನವೆಂಬರ್ 13, 2009.
- ↑ Walter S. Mossberg (ಅಕ್ಟೋಬರ್ 8, 2009). "A Windows to Help You Forget". Wall Street Journal. Retrieved ನವೆಂಬರ್ 13, 2009.
- ↑ Matt Warman (ಅಕ್ಟೋಬರ್ 20, 2009). "Microsoft Windows 7 review". London: The Telegraph. Retrieved ನವೆಂಬರ್ 13, 2009.
- ↑ "Some Vista users say they're getting the Ultimate shaft". ಜುಲೈ 2, 2009.
- ↑ "Vista Ultimate users fume, rant over Windows 7 deals". ಜುಲೈ 2, 2009.
- ↑ "Shop: Windows 7". ಅಕ್ಟೋಬರ್ 22, 2009.
- ↑ "Windows 7 Upgrade Considerations". ಅಕ್ಟೋಬರ್ 22, 2009.
- ↑ ೧೦೦.೦ ೧೦೦.೧ ೧೦೦.೨ "All Windows 7 Versions—What You Need to Know". ExtremeTech. ಫೆಬ್ರವರಿ 5, 2009. Archived from the original on ಫೆಬ್ರವರಿ 18, 2012. Retrieved ಫೆಬ್ರವರಿ 5, 2009.
- ↑ ೧೦೧.೦ ೧೦೧.೧ Thurrott, Paul (ಫೆಬ್ರವರಿ 3, 2009). "Windows 7 Product Editions". Retrieved ಫೆಬ್ರವರಿ 3, 2009.
- ↑ "Windows 7 will come in many flavors". CNET News. ಫೆಬ್ರವರಿ 3, 2009. Retrieved ಫೆಬ್ರವರಿ 3, 2009.
- ↑ "Windows 7 Editions - Features on Parade". Softpedia. ಫೆಬ್ರವರಿ 5, 2009. Archived from the original on ಜನವರಿ 19, 2012. Retrieved ಫೆಬ್ರವರಿ 5, 2009.
- ↑ "Windows 7: Which Edition is Right For You?". PCWorld. ಫೆಬ್ರವರಿ 3, 2009. Archived from the original on ಡಿಸೆಂಬರ್ 28, 2011. Retrieved ಫೆಬ್ರವರಿ 5, 2009.
- ↑ ೧೦೫.೦ ೧೦೫.೧ LeBlanc, Brandon (ಫೆಬ್ರವರಿ 9, 2009). "A closer look at the Windows 7 SKUs". Windows Team Blog. Microsoft. Retrieved ಫೆಬ್ರವರಿ 9, 2009.
- ↑ "All Windows 7 Versions—What You Need to Know - Release Date, Cost, and Upgrades". ExtremeTech. ಫೆಬ್ರವರಿ 5, 2009. Archived from the original on ಫೆಬ್ರವರಿ 14, 2011. Retrieved ಫೆಬ್ರವರಿ 16, 2009.
- ↑ ೧೦೭.೦ ೧೦೭.೧ "Microsoft Announces "Family Pack" For Windows 7". Microsoft. ಜುಲೈ 21, 2009. Retrieved ಜುಲೈ 21, 2009.
- ↑ "Microsoft Windows 7 Home Premium Upgrade Family Pack (3-User)". Amazon. ಡಿಸೆಂಬರ್ 20, 2009. Retrieved ಡಿಸೆಂಬರ್ 20, 2009.
- ↑ Microsoft. "Windows: Student Offer". Retrieved ಸೆಪ್ಟೆಂಬರ್ 18, 2009.
- ↑ Warren, Tom. "Microsoft: Students to get Windows 7 for £30/$30". Retrieved ಸೆಪ್ಟೆಂಬರ್ 18, 2009.
- ↑ "Windows Embedded Standard 7". Microsoft. Retrieved ಜೂನ್ 19, 2010.
- ↑ ೧೧೨.೦ ೧೧೨.೧ "All Windows 7 Versions--What You Need to Know". ExtremeTech. ಫೆಬ್ರವರಿ 5, 2009. Archived from the original on ಫೆಬ್ರವರಿ 18, 2012. Retrieved ಆಗಸ್ಟ್ 2, 2010.
- ↑ ೧೧೩.೦ ೧೧೩.೧ ೧೧೩.೨ "Windows 7 system requirements". Microsoft.
- ↑ "Windows Virtual PC – no hardware virtualization update now available for download".
- ↑ ೧೧೫.೦ ೧೧೫.೧ "Memory Limits for Windows Releases". Microsoft. Retrieved ಜೂನ್ 25, 2010.
- ↑ ತಾರ್ಕಿಕ ಸಂಸ್ಕರಣವು: 1) ಹೈಪರ್ ತ್ರೆಡಿಂಗ್ ಗೆ ಆಧಾರ ನೀಡುವುದರೊಂದಿಗೆ ಭೌತಿಕ ಸಂಸ್ಕರಣದ ಪರಿಮಾಣದಲ್ಲಿ ಕೇಂದ್ರಕಗಳ ಪರಿಮಾಣದ ಸೂಚನೆಗಳ ಎಳೆಯ ಎರಡು ನಿರ್ವಾಹಕಗಳಲ್ಲಿ ಒಂದು; ಅಥವಾ 2) ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡದೆಯೇ ಭೌತಿಕ ಸಂಸ್ಕರಣಗಳ ಪರಿಮಾಣದಲ್ಲಿ ಕೇಂದ್ರಕಗಳ ಪರಿಮಾಣದಲ್ಲಿ ಒಂದಾಗಿದೆ.
- ↑ ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡದೇ 32 ಕೇಂದ್ರಕಗಳು, ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡುವುದರೊಂದಿಗಿನ 16 ಕೇಂದ್ರಕಗಳು.
- ↑ ಹೈಪರ್ ತ್ರೆಡಿಂಗ್ ಆಧಾರವನ್ನು ನೀಡದೇ 256 ಕೇಂದ್ರಕಗಳು, ಹೈಪರ್ ತ್ರೆಡಿಂಗ್ ಗೆ ಆಧಾರವನ್ನು ನೀಡುವುದರೊಂದಿಗೆ 128 ಕೇಂದ್ರಕಗಳು.
- ↑ "Multi-core processor and multiprocessor limits for Windows 7". Microsoft.com. Retrieved ನವೆಂಬರ್ 29, 2010.
- ↑ "Virtualization Updates at TechEd". Windows Team Blog. Microsoft. ಜೂನ್ 7, 2010.
- ↑ "Microsoft Announces Windows 7 Service Pack 1". Computer World.
- ↑ "Microsoft Releases SP1 Beta for Windows Server 2008 R2". Redmondmag.com.
- ↑ "Microsoft: Few issues to address with Windows 7 Service Pack 1". TechRadar UK.
- ↑ "Windows 7 SP1 Hits The Torrents". Lifehacker. Archived from the original on ಜನವರಿ 26, 2011. Retrieved ಫೆಬ್ರವರಿ 9, 2011.
- ↑ "Windows 7 Service Pack 1 Leaks Out". TechRadar UK. Archived from the original on ಜೂನ್ 10, 2010. Retrieved ಫೆಬ್ರವರಿ 9, 2011.
- ↑ "Windows 7 SP1 Beta Leaks". GeekSmack. Archived from the original on ಮಾರ್ಚ್ 19, 2011. Retrieved ಫೆಬ್ರವರಿ 9, 2011.
- ↑ "Windows 7 SP1 RC-Escrow Build 7601.17104 Available to Select Testers, Reportedly". Softpedia.
- ↑ "Windows 7 SP1 RC released". Neowin.net. ಅಕ್ಟೋಬರ್ 26, 2010. Retrieved ನವೆಂಬರ್ 29, 2010.
- ↑ "IE9 hits one more milestone but still faces one final hurdle". ZDNet. Retrieved ನವೆಂಬರ್ 29, 2010.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ವಿಂಡೋಸ್ 7 ರಿಸೋರ್ಸಸ್
- ವಿಂಡೋಸ್ 7 ಹೋಮ್ ವೆಬ್ ಸೈಟ್ - ಮೈಕ್ರೋಸಾಫ್ಟ್
- ಇಂಜಿನಿಯರಿಂಗ್ ವಿಂಡೋಸ್ 7 - MSDN ಬ್ಲಾಗ್ಸ್
- ವಿಂಡೋಸ್ 7 ಡಿಪ್ಲಾಯ್ಮೆಂಟ್ ನ್ಯೂಸ್ Archived August 15, 2019[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- ವಿಂಡೋಸ್ 7 ಬ್ಲಾಗ್ ಫಾರ್ ಡೆವಲಪರ್ಸ್
- ವಿಂಡೋಸ್ 7 ಟೀಮ್ ಬ್ಲಾಗ್ - ವಿಂಡೋಸ್ ಟೀಮ್ ಬ್ಲಾಗ್
- ವಿಂಡೋಸ್ 7 ಫಾರ್ ಗವರ್ನಮೆಂಟ್
- CS1 errors: unsupported parameter
- CS1 errors: dates
- CS1 errors: missing name
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from July 2010
- Articles with invalid date parameter in template
- Official website different in Wikidata and Wikipedia
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Use mdy dates from August 2010
- 2009ರ ತಂತ್ರಾಂಶ
- ವಿಂಡೋಸ್ 7
- ವಿಂಡೋಸ್ NT