ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್
ಹ್ಯಾರಿ ಪಾಟರ್ ಪುಸ್ತಕಗಳು Harry Potter and the Deathly Hallows | |
---|---|
ಚಿತ್ರ:Harry Potter and the Deathly Hallows.jpg | |
ಲೇಖಕಿ | ಜೆ. ಕೆ. ರೊಲಿಂಗ್ |
ಚಿತ್ರಲೇಖಕ | Jason Cockcroft (Bloomsbury) Mary GrandPré (Scholastic) |
ಪ್ರಕಾರ | ಕಲ್ಪನೆ |
ಪ್ರಕಾಶಕರು | ಬ್ಲೂಮ್ಸ್ ಬೆರಿ (ಯುಕೆ) ಆರ್ಥರ್ ಎ. ಲೆವಿನ್/ ಸ್ಕೊಲ್ಯಸ್ಟಿಕ್ (ಯುಎಸ್) ರೈನ್‌ಕೋಸ್ಟ್ (ಕೆನಡ) |
ಬಿಡುಗಡೆ | 21 July 2007 |
ಪುಸ್ತಕ ಸಂಖ್ಯೆ | Seven |
ಮಾರಾಟ | 44 million (worldwide)[೧] |
ಕಥಾ ಕಾಲಕ್ರಮಾಂಕ | July 1997 – May 1998 and 1 September 2017 |
ಅಧ್ಯಾಯಗಳು | 36 chapters and an epilogue |
ಪುಟಗಳು | 607 (UK) 759 (US) |
ಹಿಂದಿನ ಪುಸ್ತಕ | Harry Potter and the Half-Blood Prince |
ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ಬರೆದ ಹ್ಯಾರಿ ಪಾಟರ್ ಕಾದಂಬರಿಗಳಲ್ಲಿ 7ನೇಯ ಹಾಗೂ ಕೊನೆಯದು. 21 ಜುಲೈ 2007ರಲ್ಲಿ ಬಿಡುಗಡೆಯಾದ ಈ ಪುಸ್ತಕ, 1997 ರಲ್ಲಿ ಹ್ಯಾರಿ ಪಾಟರ್ ಅಂಡ್ ದ ಫಿಲಾಸಫರ್ಸ್ ಸ್ಟೋನ್ ಎಂಬ ಪ್ರಕಟಣೆಯ ಮೂಲಕ ಆರಂಭಗೊಂಡ ಸರಣಿಯನ್ನು ಅಂತಿಮಗೊಳಿಸಿತು.
ಈ ಪುಸ್ತಕ ಕಾಲಾನುಕ್ರಮವಾದ ಚಾರಿತ್ರಿಕ ಘಟನೆಗಳ ದಾಖಲೆ ಮಾಡುತ್ತಾ ನೇರವಾಗಿ ಹ್ಯಾರಿ ಪಾಟರ್ ಅಂಡ್ ದ ಹಾಫ್-ಬ್ಲಡ್ ಪ್ರಿನ್ಸ್ (2005)ವನ್ನು ಹಿಂಬಾಲಿಸುತ್ತಾ ಬಹುಕಾಲದ ನಿರೀಕ್ಷೆಯ ಹ್ಯಾರಿ ಪಾಟರ್ ಮತ್ತು ಲಾರ್ಡ್ ವೊಲ್ಡೆಮೊರ್ಟ್‌ರವರ ನಡುವಿನ ಭೇಟಿಯಲ್ಲಿ ಕೊನೆಗೊಳ್ಳುತ್ತದೆ.
ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ಯುನೈಟೆಡ್ ಕಿಂಗ್‌ಡಂಮ್‌ನಲ್ಲಿ ಬ್ಲೂಮ್‌ಬೇರಿ ಪ್ರಕಾಶನ ಪ್ರಕಟಿಸಿದೆ. ಸಂಯುಕ್ತ ಸಂಸ್ಥಾನದಲ್ಲಿ ಸ್ಕಾಲೆಸ್ಟಿಕ್ , ಕೆನಡಾದಲ್ಲಿ ರೈನ್ಕೋಸ್ಟ್ ಬುಕ್ಸ್ ಮತ್ತು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ಗಳಲ್ಲಿ ಅಲ್ಲೆನ್ ಮತ್ತು ಅನ್ವಿನ್. ವಿಶ್ವದಾದ್ಯಂತ 93 ದೇಶಗಳಲ್ಲಿ ಬಿಡುಗಡೆಗೊಳಿಸಲಾಯಿತು. ಡೆತ್‌ಲಿ ಹ್ಯಾಲೋಸ್ ಅತ್ಯಂತ ವೇಗವಾಗಿ ಮಾರಾಟಗೊಂಡು ಎಲ್ಲಾ ಪುಸ್ತಕಗಳ ದಾಖಲೆಗಳನ್ನು ಮುರಿದಿದೆ.
ಬಿಡುಗಡೆಯಾದ 24 ಘಂಟೆಗಳಲ್ಲಿ 15 ಮಿಲಿಯನ್ ಪ್ರತಿಗಳು ಮಾರಾಟವಾದವು.[೧] ಇದರಲ್ಲಿ ಯುಎಸ್ ಮತ್ತು ಯುಕೆ ಗಳಲ್ಲಿಯೇ 11ಮಿಲಿಯನ್ ಪ್ರತಿಗಳು ಮಾರಾಟವಾದವು. ಈ ಹಿಂದೆ ಮೊದಲ ದಿನದ ದಾಖಲೆ 9 ಮಿಲಿಯನ್ ಮಾರಾಟವಾದ ಹ್ಯಾರಿ ಪಾಟರ್ ಅಂಡ್ ಹಾಫ್ ಬ್ಲಡ್ ಪ್ರಿನ್ಸ್ ನದಾಗಿತ್ತು.[೨] ಈ ಕಾದಂಬರಿಯು ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು, ಇದರಲ್ಲಿ ಉಕ್ರೇನಿಯನ್[೩] ,ಸ್ವೀಡಿಷ್[೪], ಪೊಲಿಷ್[೫] ಮತ್ತು ಹಿಂದಿ[೬] ಭಾಷೆಗಳು ಸೇರಿವೆ.[೬]
ಈ ಕಾದಂಬರಿಗೆ ಹಲವಾರು ಪ್ರಶಸ್ತಿಗಳನ್ನು ಕೊಡಲಾಗಿದೆ. ಇದರಲ್ಲಿ 2008ರ ಕೊಲೆರೆಡೊ ಬ್ಲೂ ಸ್ಪ್ರಸ್ ಪುಸ್ತಕ ಪ್ರಶಸ್ತಿಯೂ ಸಹ ಸೇರಿದೆ ಮತ್ತು ಅಮೆರಿಕನ್ ಲೈಬ್ರರಿ ಸಂಘವೂ ಇದನ್ನು ಯುವ ಜನರಿಗೆ ಅತ್ಯುತ್ತಮ ಪುಸ್ತಕದ ಪಟ್ಟಿಯಲ್ಲಿ ಸೇರಿಸಿದೆ.[೭] ಪುಸ್ತಕಕ್ಕೆ ಸಾಮಾನ್ಯವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಕೆಲ ವಿಮರ್ಶಕರು ಪದೇ ಪದೇ ಅದೇ ಪಾತ್ರಗಳು ಮರಳಿ ಬರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಈ ಕಾದಂಬರಿಯನ್ನು ಎರಡು ಭಾಗಗಳಲ್ಲಿ ಚಲನಚಿತ್ರವಾಗಿಸಲು ಸಿದ್ಧತೆಗಳು ನಡೆದಿವೆ ಅದರ ಮೊದಲ ಭಾಗ ಮುಂದಿನ ನವೆಂಬರ್ 2010ರಲ್ಲಿ ಬಿಡುಗಡೆಯಾಗಲಿದೆ.
ಸಾರಾಂಶ
[ಬದಲಾಯಿಸಿ]ಕಥಾ ಪೀಠಿಕೆ
[ಬದಲಾಯಿಸಿ]ಹ್ಯಾರಿ ಪಾಟರ್ ಸರಣಿಯ ಮೊದಲ 6 ಕಾದಂಬರಿಗಳಲ್ಲಿ ಪ್ರಮುಖ ಪಾತ್ರವೇ ಹ್ಯಾರಿ ಪಾಟರ್. ಹ್ಯಾರಿ ಪಾಟರ್ ಬೆಳೆಯುವಾಗಲೇ ಅನೇಕ ತೊಂದರೆಗಳನ್ನು ಹಾಗೂ ದೊಡ್ಡ ಮಾಂತ್ರಿಕನಾಗಲು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹ್ಯಾರಿ ಮಗುವಾಗಿದ್ದಾಗಲೇ, ಲಾರ್ಡ್ ವೊಲ್ಡೆಮೊರ್ಟ್ ಅತ್ಯಂತ ಶಕ್ತಿಶಾಲಿ ದುಷ್ಟ ಮಾಂತ್ರಿಕ, ಹ್ಯಾರಿಯ ತಂದೆ ತಾಯಿಯನ್ನು ಕೊಂದನಂತರ ಆತ ಹ್ಯಾರಿಯನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾಗಲೇ ನಿಗೂಢವಾಗಿ ಮಾಯವಾಗಿದ್ದ. ಈ ಘಟನೆ ಹ್ಯಾರಿಗೆ ಖ್ಯಾತಿಯನ್ನು ತಂದು ಕೊಟ್ಟಿತ್ತು ಮತ್ತು ಮಾಂತ್ರಿಕತೆಯನ್ನು ಅರಿಯದ ಅವನು ಸಂಬಂಧಿಕರಾದ ಚಿಕ್ಕಮ್ಮ ಪೆಟುನೀಯಾ ಹಾಗೂ ಚಿಕ್ಕಪ್ಪ ವೆರ್ನಾನ್‌ರ ಬಳಿ ಹೋಗಲು ಕಾರಣವಾಯಿತು.
ಹ್ಯಾರಿ ತನ್ನ 11ನೇ ವಯಸ್ಸಿನಲ್ಲಿ ವಾಮಾಚಾರ ಮತ್ತು ಇಂದ್ರಜಾಲದ ಹೊಗ್ವರ್ಟ್ಸ್ ಶಾಲೆಗೆ ಸೇರುವ ಮೂಲಕ ಮಾಂತ್ರಿಕ ಲೋಕವನ್ನು ಪ್ರವೇಶಿಸುತ್ತಾನೆ. ಅಲ್ಲಿ ಅವನು ರಾನ್ ವೀಸ್ಲೀ ಮತ್ತು ಹರ್ಮಯಾನ್ ಗ್ರ್ಯಾಂಗರ್ ರೊಂದಿಗೆ ಗೆಳೆತನ ಬೆಳೆಸುತ್ತಾನೆ ಮತ್ತು ಅವರೊಂದಿಗೆ ಮತ್ತೆ ಶಕ್ತಿಶಾಲಿಯಾಗುವ ಪ್ರಯತ್ನದಲ್ಲಿರುವ ಲಾರ್ಡ್ ವೊಲ್ಡೆಮೊರ್ಟ್‌ನನ್ನು ಎದುರಿಸುತ್ತಾನೆ. ಬೇಸಿಗೆಯ ರಜೆಯ ನಂತರ ಶಾಲೆಗೆ ಮರಳಿದ ಬಳಿಕ ದಂತಕಥೆಯಾದ "ರಹಸ್ಯಗಳ ಕೊಠಡಿ" ತೆರೆದ ತರುವಾಯ ಹೊಗ್‌ವರ್ಟ್ಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಅನೇಕ ದಾಳಿಗಳು ನಡೆಯುತ್ತವೆ. ಹ್ಯಾರಿ ಬಾಸಿಲಿಸ್ಕ್‌ನನ್ನು ಕೊಂದ ನಂತರ ಹಾಗೂ ಲಾರ್ಡ್ ವೊಲ್ಡೆಮೊರ್ಟ್ ಮತ್ತೆ ಶಕ್ತಿಶಾಲಿಯಾಗುವ ಪ್ರಯತ್ನವನ್ನು ವಿಫಲಗೊಳಿಸಿ ನಡೆಯುತ್ತಿದ್ದ ದಾಳಿಯನ್ನು ನಿಲ್ಲಿಸುತ್ತಾನೆ.ಮುಂದಿನ ವರ್ಷಗಳಲ್ಲಿ ಹ್ಯಾರಿಗೆ , ತಪ್ಪಿಸಿಕೊಂಡಿದ್ದ ಕೊಲೆಗಾರ ಸಿರಿಸ್ ಬ್ಲ್ಯಾಕ್ ತನ್ನನ್ನು ಕೊಲ್ಲುವ ಗುರಿಯಲ್ಲಿದ್ದಾನೆಂದು ತಿಳಿಯುತ್ತದೆ. ಹೊಗ್‌ವರ್ಟ್ಸ್‌ನಲ್ಲಿನ ಕಟ್ಟೆಚ್ಚರದ ನಡುವೆಯೂ ಹ್ಯಾರಿ ತನ್ನ ಶಾಲೆಯಲ್ಲಿನ ಮೂರನೆ ವರ್ಷದ ಕೊನೆಯಲ್ಲಿ ಬ್ಲ್ಯಾಕ್‌ನನ್ನು ಎದುರಿಸುತ್ತಾನೆ ಮತ್ತು ಆತನನ್ನು ಉಪಾಯವಾಗಿ ಈ ಕಾರ್ಯದಲ್ಲಿ ಸಿಕ್ಕಿಹಾಕಿಸಲಾಗಿದೆ ಬ್ಲಾಕ್ ನಿಜವಾಗಿಯೂ ತನ್ನ ಹಿತಪೋಷಕನೆಂದು ಹ್ಯಾರಿ ಅರಿಯುತ್ತಾನೆ. ಹ್ಯಾರಿ ತನ್ನ ಶಾಲೆಯ ನಾಲ್ಕನೇ ವರ್ಷದಲ್ಲಿ ಅತ್ಯಂತ ಅಪಾಯಕಾರಿಯಾದ ಮಾಂತ್ರಿಕ ಪೈಪೋಟಿಯಾದ ಟ್ರೈವಿಜರ್ಡ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾನೆ. ಪಂದ್ಯಾವಳಿಯ ಕೊನೆಯಲ್ಲಿ ಲಾರ್ಡ್ ವೊಲ್ಡೆಮೊರ್ಟ್ ಶಕ್ತಿಶಾಲಿಯಾಗಿ ಮರಳುವುದನ್ನು ಹ್ಯಾರಿ ನೋಡುತ್ತಾನೆ . ಮುಂದಿನ ವರ್ಷದ ಶಾಲೆ ಪ್ರಾರಂಭವಾದಾಗ , ಮಾಂತ್ರಿಕ ಸಚಿವಾಲಯ ಡೊಲೊರೇಸ್ ಉಮ್‌ಬ್ರಿಡ್ಜ್‌ರನ್ನು ಹೊಗ್‌ವರ್ಟ್ಸ್‌ನ ನೂತನ ಉನ್ನತಾಧಿಕಾರಿಯಾಗಿ ನೇಮಿಸಿತು. ಉಮ್‌ಬ್ರಿಡ್ಜ್ ವಿರುದ್ಧ ಭೂಗತ ವಿದ್ಯಾರ್ಥಿಗಳ ಗುಂಪನ್ನು ಕಟ್ಟಿದ ಬಳಿಕ , ಹ್ಯಾರಿ ಮತ್ತು ಆತನ ಸ್ನೇಹಿತರು ವೊಲ್ಡೆಮೊರ್ಟ್‌ನ ಕಪ್ಪು ಪಿಶಾಚಿಗಳ ಹಾಗೂ ಮಾಂತ್ರಿಕರ ಗುಂಪಾದ ಡೆತ್ ಇಟರ್ಸ್‌ರನ್ನು ಮುಖಾಮುಖಿಯಾಗಿ ಎದುರಿಸುತ್ತಾನೆ ಮತ್ತು ಕೊನೆಯದಾಗಿ ಅವರನ್ನು ಸೋಲಿಸುತ್ತಾರೆ. ಹ್ಯಾರಿ ತನ್ನ ಶಾಲೆಯ ಆರನೇ ವರ್ಷದಲ್ಲಿ ವೊಲ್ಡೆಮೊರ್ಟ್ ಹಾರ್‌ಕ್ರುಕ್ಸ್ ಬಳಸಿ ಅಮರನಾಗುವ ಪ್ರಯತ್ನದಲ್ಲಿ ತೊಡಗಿದ್ದಾನೆಂದು ಅರಿಯುತ್ತಾನೆ. ಹಾರ್‌ಕ್ರುಕ್ಸ್‌ಗಳೆಂದರೆ ದೇಹದಲ್ಲಿ ಪ್ರಾಣಹೋದಾಗ ಅದರ ಆತ್ಮದ ತುಂಡೊಂದನ್ನು ಯಾವುದಾದರೂ ವಸ್ತುವಿನಲ್ಲಿ ಇರಿಸುವುದು, ಈ ಆತ್ಮದ ಚೂರಿದ್ದರೆ ಆ ನಂತರವೂ ಸಹ ಆ ವ್ಯಕ್ತಿ ಮರುಜನ್ಮ ಪಡೆಯುತ್ತಾನೆ.[೮] ಒಂದು ವೇಳೆ, ಸೃಷ್ಠಿಕರ್ತನ ದೇಹವೇನಾದರೂ ನಶಿಸಿ ಹೋದರೆ ಆ ಚೂರು ದೈಹಿಕ ರೂಪವಿಲ್ಲದೆ ಅಂತರ‍್ಪಿಶಾಚಿಯಾಗಿ ಅಲೆಯುತ್ತದೆ.[೯] ಹಾರ್‌ಕ್ರುಕ್ಸ್ ಹುಡುಕುವ ಕಾರ್ಯದಿಂದ ಹಿಂತಿರುಗುತ್ತಿದ್ದಾಗ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಹ್ಯಾರಿಯ ಗುರುವಾದ ಪ್ರೊ.ಡಂಬ್ಲೆಡೊರ್‌ರನ್ನು ಸೆವೆರಸ್ ಸ್ನೇಪ್ ಕೊಲೆಗೈದ,ಈತ ಶಾಲೆಯ ಅಧ್ಯಾಪಕನಾಗಿದ್ದು ಹ್ಯಾರಿ ಇವನಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದ ಹಾಗೂ ಈತನನ್ನು ಡೆತ್ ಇಟರ್ಸ್‌ನ ಸದಸ್ಯ ಎಂದು ಶಂಕಿಸಿದ್ದ. ಹ್ಯಾರಿ ಮುಂದಿನ ವರ್ಷ ಶಾಲೆಗೆ ಮರಳುವುದಿಲ್ಲವೆಂದು ಬದಲಾಗಿ ಹಾರ್‌ಕ್ರುಕ್ಸ್‌ಗಳನ್ನು ಹುಡುಕಲು ಹೋಗುವುದಾಗಿ ಶಪಥ ಮಾಡುತ್ತಾನೆ ಎಂಬುದಾಗಿ ತಿಳಿಸುತ್ತ ಈ ಪುಸ್ತಕ ಕೊನೆಗೊಳ್ಳುತ್ತದೆ.
ಕಥಾ ಸಾರಾಂಶ
[ಬದಲಾಯಿಸಿ]ಡಂಬಲ್‌ಡೋರ್‌ರವರ ಮರಣದ ನಂತರ, ವೊಲ್ಡೆಮಾರ್ಟ್ ತನ್ನ ಅಧಿಕಾರದ ಆರೋಹಣ ಪೂರ್ಣಿಸಿ ಮಿನಿಸ್ಟ್ರಿ ಆಫ್ ಮ್ಯಾಜಿಕ್ ಮೇಲೆ ನಿಯಂತ್ರಣ ಪಡೆದರು.ಹ್ಯಾರಿ,ರೊನ್ ಮತ್ತು ಹರ್ಮಿಯನ್ ವೊಲ್ಡೆಮಾರ್ಟ್‌ನ ಉಳಿದ ಹಾರ್‌ಕೃಕ್ಸಸ್‍ಗಳನ್ನು ಶೋಧಿಸಿ ನಾಶಪಡಿಸಬೇಕೆಂದು ಶಾಲೆಯನ್ನು ಮಧ್ಯದಲ್ಲಿಯೇ ಬಿಡುತ್ತಾರೆ. ತಮ್ಮ ಪರಿವಾರದ ಮತ್ತು ಸ್ನೇಹಿತರ ಸುರಕ್ಷತೆಗಾಗಿ, ಅವರು ಪ್ರತ್ಯೇಕವಾಗಿ ಇರುತ್ತಾರೆ.ಅವರಿಗೆ ಉಳಿದ ಹಾರ್‌ಕೃಕ್ಸಸ್‍ಗಳ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ.ಅವರಿಗೆ ತಿಳಿದ ಅಂಶವೆಂದರೆ, ಎರಡು ಹಾರ್‌ಕೃಕ್ಸಸ್‌ಗಳು ಪ್ರಾಯಶಃ ಹಾಗ್ವರ್ಟ್ಸ್ ಶೋಧಕರಾದ ರೊಯೆನಾ ರೆವನ್‍ಕ್ಲಾ ಮತ್ತು ಹೆಲ್ಗಾ ಹಫಲ್‌ಪಫ್‌ರ ವಸ್ತುಗಳಿರಬಹುದುದೆಂದು ಹಾಗು ಮೂರನೆಯದು ನೆಜಿನಿ, ವೊಲ್ಡೆಮಾರ್ಟ್‌ನ ಪರಿಚಿತ ಹಾವು. ಎರಡು ಶೋಧಕರ ವಸ್ತುಗಳು ಇರುವ ಸ್ಥಳ ತಿಳಿದಿರಲಿಲ್ಲಾ ಮತ್ತು ನೆಜಿನಿ ವೊಲ್ಡೆಮಾರ್ಟ್‌ರ ಬಳಿ ಇದೆ ಎಂದು ಭಾವಿಸಬಹುದು.ಹಾರ್‌ಕ್ರುಕ್ಸ್‌ಗಳನ್ನು ಹುಡುಕಲು ಆರಂಭಿಸಿದಾಗ, ಈ ಮೂವರಿಗೆ ಡಂಬಲ್‌ಡೋರ್‌ನ ಗತಕಾಲದ ಬಗ್ಗೆ ಅಲ್ಲದೆ ಸ್ನೇಪ್‌ನ ನಿಜವಾದ ಉದ್ದೇಶಗಳು ತಿಳಿಯುತ್ತವೆ.
ಈ ಮೂವರು ಮಿನಿಸ್ಟರಿ ಆಫ್ ಮ್ಯಾಜಿಕ್ ಮಂತ್ರಿಮಂಡಲದಲ್ಲಿ ಅನುಮತಿ ಇಲ್ಲದೆ ಪ್ರವೇಶಿಸಿ, ವೊಲ್ಡೆಮೊರ್ಟ್‌ರ ಮೊದಲನೆಯ ಹಾರ್‌ಕ್ರುಕ್ಸ್ ಸ್ಯಾಲಜಾರ್ ಸ್ಲೀದರಿನ್‌ನ ಪದಕ ಹತೋಟಿಗೆ ತಂದುಕೊಳ್ಳುತ್ತಾರೆ.ಗೊಡ್ರಿಕ್ ಗ್ರಿಫೈಂಡರ್‌ರ ಖಡ್ಗದ ಮೇಲೆ ಹತೋಟಿ ಪಡೆದರು; ಹಾರ್‌ಕ್ರುಕ್ಸ್‌ಗಳನ್ನು ನಾಶಪಡಿಸುವ ವಸ್ತುಗಳಲ್ಲಿ ಇದು ಒಂದು ಮತ್ತು ಇದನ್ನೇ ಉಪಯೋಗಿಸಿ ಅವರು ಪದಕವನ್ನು ನಾಶಪಡಿಸಿದರು. ಅವರ ಪ್ರಯಾಣದಲ್ಲಿ ಈ ಮೂವರು ಒಂದು ವಿಚಿತ್ರ ಸಂಕೇತವನ್ನು ಎದುರಿಸುತ್ತಾರೆ, ಒಬ್ಬ ವಿಚಿತ್ರ ನಡತೆಯ ಮಾಟಗಾರ ಕ್ಸೆನೊಫಿಲಿಯುಸ್ ಲವ್‌ಗುಡ್ ಇದನ್ನು ಪುರಾಣ ಸಂಬಂಧಿತ ಡೆತ್‌ಲಿ ಹ್ಯಾಲೋವನ್ನು ಪ್ರತಿಬಿಂಬಿಸುವ ವಸ್ತು ಎಂದು ಹೇಳುತ್ತಾರೆ. ಈ ಹ್ಯಾಲೋಸ್‌ನ್ನು ಮೂರು ಪೂಜ್ಯ ವಸ್ತುಗಳೆಂದು ಅರಿವಾಗುತ್ತದೆ: ಸತ್ತವರರನ್ನು ಪುನಃ ಜೀವಿಸುವ ಶಕ್ತಿಯಿರುವ ರಿಸರೆಕ್ಷನ್ ಸ್ಟೋನ್; ಹಿರಿಯ ಮಾಂತ್ರಿಕದಂಡ, ಇದು ಸಾಟಿಯಿಲ್ಲದ ಮಾಂತ್ರಿಕದಂಡ; ಮತ್ತು ಅದೃಶ್ಯರನ್ನಾಗಿಸುವ ಶಕ್ತಿಯನ್ನು ಹೊಂದಿರುವಂತಹ ದೋಷಾತೀತ ತೋಳಿಲ್ಲದ ನಿಲುವಂಗಿ. ವೊಲ್ಡೆಮೊರ್ಟ್ ಎಲ್ಡರ್‌ಮಾಂತ್ರಿಕದಂಡದ ಹಿಂದೆ ಬಿದ್ದಿರುವುದನ್ನು ಹ್ಯಾರಿ ತಿಳಿಯುತ್ತಾನೆ, ಆದರೆ ಈ ಮೂವರು ಮಾಂತ್ರಿಕದಂಡ ತಮಗೆ ಗಳಿಸುವುದಗಿಂತ ವೊಲ್ಡೆಮೊರ್ಟ್‌ನ ಹಾರ್‌ಕ್ರುಕ್ಸ್‌ನ್ನು ಶೋಧಿಸುವುದು ಮುಖ್ಯವೆಂದು ನಿರ್ಧರಿಸುತ್ತಾರೆ. ಅವರು ಮಾಂತ್ರಿಕ ವಸ್ತುಗಳನ್ನು ಸಂಗ್ರಹಿಸಿಟ್ಟ ಭದ್ರವಾದ ಕೋಣೆ ಗ್ರಿಂಗೊಟ್ಸ್‌ಗೆ ನುಗ್ಗುತ್ತಾರೆ,ಇಲ್ಲಿ ಇನ್ನೊಂದು ಹಾರ್‌ಕ್ರುಕ್ಸ್, ಹೆಲ್ಗಾ ಹಫಲ್‌ಪಫ್‌ರ ಬಟ್ಟಲನ್ನು ಮರಳಿ ಪಡೆಯುತ್ತಾರೆ. ಮತ್ತೊಂದು ಹಾರ್‌ಕ್ರುಕ್ಸ್‌ನ್ನು ಹೊಗ್ವರ್ಟಸ್‌ನಲ್ಲಿ ಬಚ್ಚಿಡಲಾಗಿದೆ ಎಂದು ಹ್ಯಾರಿ ತಿಳಿದು; ಹ್ಯಾರಿ, ರೊನ್ ಮತ್ತು ಹರ್‌ಮಿಯೊನ್ ಶಾಲೆಯೊಳಗೆ ಪ್ರವೇಶಿಸುತ್ತಾರೆ.ಇಲ್ಲಿ ಅವರು ರೆವನ್‌ಕ್ಲಾರ ಮುಕುಟ ಹಾರ್‌ಕ್ರುಕ್ಸ್‌ನನ್ನು ಪಡೆಯುತ್ತಾರೆ ಮತ್ತು ಎರಡು ಹಾರ್‌ಕ್ರುಕ್ಸ್‌ಗಳನ್ನು ಸಫಲವಾಗಿ ನಾಶಿಸುತ್ತಾರೆ.
ಈ ಪುಸ್ತಕ ಹೊಗ್ವರ್ಟಸ್ ಯುದ್ಧವನ್ನು ಸಮಾಪ್ತಿಸುತ್ತದೆ.ಹ್ಯಾರಿ, ರೊನ್ ಮತ್ತು ಹರ್‌ಮಿಯೊನ್, ವಿದ್ಯಾರ್ಥಿಗಳ ಹಾಗು ಮಾಂತ್ರಿಕ ವಿಶ್ವದ ಸದಸ್ಯರ ಜೊತೆಗೂಡಿ ಹೊಗ್ವರ್ಟಸ್‌ನ್ನು ವೊಲ್ಡೆಮೊರ್ಟ್, ಅವನ ಸಾವಿನ ಭಕ್ಷಕರು ಮತ್ತು ಹಲವಾರು ಮಾಯೆಯ ಜೀವಿಗಳಿಂದ ಕಾಪಾಡಬೇಕೆಂದು, ವೊಲ್ಡೆಮೊರ್ಟ್‌ರ ಏಳಿಗೆಯನ್ನು ವಿರೋಧಿಸುತ್ತಾರೆ.ಯುದ್ಧದ ಮೊದಲ ಹಂತದಲ್ಲಿ ಹಲವಾರು ಮುಖ್ಯ ಪಾತ್ರಧಾರರು ಸಾವಿಗೀಡಾಗುತ್ತಾರೆ.ವೊಲ್ಡೆಮೊರ್ಟ್ ಹ್ಯಾರಿ ಮಗುವಿದ್ದಾಗ ಅವನ ಮೇಲೆ ದಾಳಿ ಮಾಡಿ ವಿವೇಚಿಸದ ಅವನನ್ನು ಕೂಡ ಹಾರ್‌ಕುಕ್ಸ್‌ನಾಗಿ ಮಾಡಿರುತ್ತಾನೆಂದು ಹ್ಯಾರಿಗೆ ತಿಳಿಯುತ್ತದೆ ಮತ್ತು ವೊಲ್ಡೆಮೊರ್ಟ್‌ನನ್ನು ನಾಶಮಾಡುವುದಕ್ಕೆ ಹ್ಯಾರಿ ಸಾಯಬೇಕೆಂಬುದು ಅವನ ಗಮನಕ್ಕೆ ಬರುತ್ತದೆ.ಹ್ಯಾರಿ ವೊಲ್ಡೆಮೊರ್ಟ್‌ಗೆ ಶರಣಾಗುತ್ತಾನೆ, ಅವನು ಹ್ಯಾರಿಗೆ ಕಿಲ್ಲಿಂಗ್ ಕರ್ಸ್‌ನಿಂದ ದಾಳಿಮಾಡಿಸಿ, ಸಾವು ಬದುಕಿನ ನಡುವಿನ ತ್ರಿಶಂಕು ಸ್ಥಿತಿಯ ಲಿಂಬೋ ಎಂಬ ಲೋಕಕ್ಕೆ ಕಳುಹಿಸುತ್ತಾನೆ. ಅಲ್ಲಿ ಹ್ಯಾರಿ ಡಂಬಲ್‌ಡೋರೆರನ್ನು ಭೇಟಿಯಾಗುತ್ತಾನೆ, ವೊಲ್ಡೆಮೊರ್ಟ್ ಪೂರ್ತಿ ಶಕ್ತಿಗಳಿಸಲು ಹ್ಯಾರಿಯ ರಕ್ತವನ್ನು ಉಪಯೋಗಿಸಿದ್ದ ಆದ್ದರಿಂದ ಹ್ಯಾರಿಯು ವೊಲ್ಡೆಮೊರ್ಟ್‌ನ ಅಪಾಯದಿಂದ ಸುರಕ್ಷಿತನಾಗಿದ್ದಾನೆ ಎಂದು ವಿಸ್ತಾರವಾಗಿ ಹೇಳುತ್ತಾನೆ. ಇದರ ಅರ್ಥ ಹ್ಯಾರಿಯೊಳಗಿನ ಹಾರ್‌ಕ್ರುಕ್ಸ್ ನಾಶವಾಗಿದ್ದರೂ ಕೂಡ ಅವನು "ಕಿಲ್ಲಿಂಗ್ ಕರ್ಸ್"ನನ್ನು ಹೊಡೆದು ತನ್ನ ಶರೀರಕ್ಕೆ ಹಿಂದಿರುಗಬಹುದು ಎಂದು ತಿಳಿಸುತ್ತಾನೆ. ಹ್ಯಾರಿ ತನ್ನ ಶರೀರಕ್ಕೆ ಹಿಂದಿರುಗುತ್ತಾನೆ, ಯುದ್ಧ ಪುನಃ ಆರಂಭವಾಗುತ್ತದೆ ಮತ್ತು ಕೊನೆಯ ಹಾರ್‌ಕ್ರುಕ್ಸ್ ನಾಶವಾದ ನಂತರ ಹ್ಯಾರಿ ವೊಲ್ಡೆಮೊರ್ಟ್‌ರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತಾನೆ.
ಉಪಸಂಹಾರ
[ಬದಲಾಯಿಸಿ]ಉಪಸಂಹಾರವು ವೊಲ್ಡೆಮೊರ್ಟ್‌ರ ಸಾವಿನ 19 ವರ್ಷದ ನಂತರದ ವಾತಾವರಣದ ಕುರಿತು ಹೇಳುತ್ತದೆ. ಇದರಲ್ಲಿ ಹ್ಯಾರಿ ಮತ್ತು ಜಿನಿ ಮದುವೆಯಾಗಿ ತಮ್ಮ ಮಕ್ಕಳು ಜೇಮ್ಸ್ ಮತ್ತು ಅಲ್ಬಸ್‌ರನ್ನು ಹೊಗ್ವರ್ಟಸ್‌ಗೆ ಕಳುಹಿಸುವುದು ಒಳಗೊಂಡಿದೆ. ಇದಲ್ಲದೆ ರೊನ್ ಮತ್ತು ಹರ್‌ಮಿಯೊನ್ ಕೂಡ ಮದುವೆಯಾಗಿ ಮಕ್ಕಳೊಂದಿಗಿರುವುದು ಇಲ್ಲಿ ಹೇಳಲಾಗಿದೆ.
ಹಿನ್ನಲೆ
[ಬದಲಾಯಿಸಿ]ಶೀರ್ಷಿಕೆಯ ಆಯ್ಕೆ
[ಬದಲಾಯಿಸಿ]ಶೀರ್ಷಿಕೆಯ ಬಿಡುಗಡೆಯ ಸ್ವಲ್ಪ ದಿನಗಳ ಮೊದಲು ಜೆ.ಕೆ.ರೊಲಿಂಗ್ ಪುಸ್ತಕಕ್ಕೆ ಮೂರು ಶೀರ್ಷಿಕೆಗಳನ್ನು ಯೋಚಿಸಿರುವುದಾಗಿ ಘೋಷಿಸಿದರು.[೧೦][೧೧] ಅಂತಿಮ ಶೀರ್ಷಿಕೆ,ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ , 21 ಡಿಸೆಂಬರ್ 2006ರಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಯಿತು. ವಿಶೇಷ ಕ್ರಿಸ್‌ಮಸ್-ಸಂದರ್ಭದ ಹ್ಯಾಂಗ್‌ಮ್ಯಾನ್‌ನ ಫಜಲ್‌ನ ಮೂಲಕ ರೊಲಿಂಗ್‌ರ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿತ್ತು. ಶೀಘ್ರದಲ್ಲೇ ಪುಸ್ತಕ ಪ್ರಕಾಶಕರು ಕೂಡ ಇದನ್ನು ದೃಢಪಡಿಸಿದರು.[೧೨] ಒಂದು ನೇರ ಸಂಭಾಷಣೆಯಲ್ಲಿ ಅವರನ್ನು ಈ ಪುಸ್ತಕಕ್ಕೆ ಯೋಚಿಸಿದ ಇನ್ನುಳಿದ ಶೀರ್ಷಿಕೆಗಳು ಯಾವುವು ಎಂದು ಕೇಳಿದಾಗ, ರೌಲಿಂಗ್‌ರವರು ಹ್ಯಾರಿಪಾಟರ್ ಆಯ್೦ಡ್ ದ ಎಲ್ಡರ್ ವಾಂಡ್ ಮತ್ತು ಹ್ಯಾರಿ ಪಾಟರ್ ಆಯ್೦ಡ್ ಪೆವೆರೆಲ್ ಕ್ವೆಸ್ಟ್ ಎಂದು ಹೇಳಿದರು.[೧೦]
ಪುಸ್ತಕ ಪೂರ್ಣಗೊಳಿಸಿದ ಕುರಿತಂತೆ ರೌಲಿಂಗ್ ಹೇಳಿಕೆ
[ಬದಲಾಯಿಸಿ]ರೌಲಿಂಗ್ ಈ ಪುಸ್ತಕವನ್ನು ಜನವರಿ 2007ರಲ್ಲಿ ಎಡಿನ್ಬರ್ಗ್ನ ಬಲಮೊರಾಲ್ ಹೋಟೇಲ್‌ನಲ್ಲಿದ್ದಾಗ ಪೂರ್ಣಗೊಳಿಸಿದರು, ಅವರು ಅಲ್ಲಿದ್ದ ಹರ್ಮೀಸ್ ಅಮೃತಶಿಲೆಯ ವಿಗ್ರಹದ ಮೇಲೆ ಈ ರೀತಿ ಸಹಿ ಮಾಡಿದರು:"ಜೆ.ಕೆ. ರೌಲಿಂಗ್ ಈ ಕೋಣೆ(652)ಯಲ್ಲಿ ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ಪುಸ್ತಕವನ್ನು, 11 ಜನವರಿ 2007ರಂದು ಬರೆದು ಮುಗಿಸಿದರು ".[೧೩] ಆಕೆಯ ಜಾಲತಾಣದಲ್ಲಿ ಅವರು ನೀಡಿದ ಒಂದು ವಿವರಣೆಯಲ್ಲಿ,"ನನ್ನ ಜೀವನದಲ್ಲಿ ಈ ಮೊದಲು ಈ ರೀತಿಯ ತೀವ್ರ ಭಾವನೆಗಳ ಮಿಶ್ರಣದ ಅನುಭವವಾಗಿರಲಿಲ್ಲ. ಇದೆ ಮೊದಲು, ದುಃಖ ಮತ್ತು ಹರ್ಷೋತ್ಕರ್ಷದ ಭಾವನೆಗಳು ಒಟ್ಟಿಗೆ ನನ್ನ ಆವರಿಸಿವೆ. ಇದನ್ನು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ"ಎಂದು ಹೇಳಿದ್ದಾರೆ.
ಅವರು ತಮ್ಮ ಮಿಶ್ರ ಭಾವನೆಗಳ ಅನುಭವವನ್ನು, ಚಾರ್ಲ್ಸ್ ಡಿಕನ್ಸ್‌ರವರು ತಮ್ಮ ಡೆವಿಡ್ ಕೊಪರ್‌ಫೀಲ್ಡ್ ನ 1850 ಮುದ್ರಣದ ಮುನ್ನುಡಿಯಲ್ಲಿ ವ್ಯಕ್ತಪಡಿಸಿದ "ಎರಡು ವರ್ಷದ ಕಾಲ್ಪನಿಕ ಕಾರ್ಯ"ಕ್ಕೆ ಹೋಲಿಸಿದರು. ಇದಕ್ಕೆ ಅವರು "ನಾನು ಬರೀ ನಿಟ್ಟುಸಿರು ಬಿಡಬಲ್ಲೆ, ಹದಿನೇಳು ವರುಷ ಪ್ರಯತ್ನಿಸಿ, ಚಾರ್ಲ್ಸ್..." ಎಂದು ಸೇರಿಸಿದರು. ಅವರು ತಮ್ಮ ಸಂದೇಶ ಪೂರ್ಣಗೊಳಿಸುತ್ತಾ "ಡೆತ್‌ಲಿ ಹ್ಯಾಲೋಸ್ ನನಗೆ ಅತ್ಯಂತ ಪ್ರಿಯವಾದದ್ದು ಮತ್ತು ಈ ಸರಣಿಯನ್ನು ಕೊನೆಗೊಳಿಸಲು ಇದೊಂದು ಅದ್ಭುತ ದಾರಿ" ಎಂದರು.[೧೪]
ಪ್ರಕಾಶನಕ್ಕೂ ಮುಂಚೆ ಮುಂಬರುವ ಪುಸ್ತಕದ ಬಗ್ಗೆ ಕೇಳಿದಾಗ ರೊಲಿಂಗ್,ಈ ಕಾದಂಬರಿಯ ಕೊನೆಯನ್ನು ಬೇಕೆನ್ನಿಸಿದರೂ ಬದಲಾಯಿಸಲಾರೆನು ಎಂದು ಹೇಳಿಕೆ ನೀಡಿದರು. "ಈ ಪುಸ್ತಕಗಳ ಕಥಾವಸ್ತು ಬಹುಕಾಲದಿಂದ ನಡೆದು ಬಂದಿದೆ ಮತ್ತು ಇದುವರೆಗಿನ ಆರು ಪುಸ್ತಕಗಳೆಲ್ಲಾ ಒಂದು ಖಚಿತವಾದ ದಿಶೆಯಲ್ಲಿ ಮುಂದುವರೆಯುತ್ತಿವೆ. ಆದ್ದರಿಂದ, ನಾನು ನಿಜವಾಗಿಯು ಕೊನೆಯನ್ನು ಬದಲಾಯಿಸಲಾರೆ." [೧೫] ಕೊನೆಯ ಸಂಪುಟವು ಅದರ ಸರಣಿಯ ಹಿಂದಿನ ಪುಸ್ತಕ ಹ್ಯಾರಿ ಪಾಟರ್ ಅಂಡ್ ದ ಹಾಫ್-ಬ್ಲಡ್ ಪ್ರಿನ್ಸ್ ಗೆ ಹತ್ತಿರದ ಸಂಬಂಧದಲ್ಲಿದೆ,"ಬಹುಪಾಲು ಇವು ಒಂದೇ ಕಾದಂಬರಿಯ ಎರಡು ಭಾಗಗಳಂತಿವೆ" ಎಂದು ಅವರು ಅಭಿಪ್ರಾಯಪಟ್ಟರು.[೧೬] ಈ ಪುಸ್ತಕದ ಕೊನೆಯ ಭಾಗವನ್ನು ರೌಲಿಂಗ್ "ಸುಮಾರು 1990ರಲ್ಲಿಯೇ ಈ ಹಿಂದೆ ಬರೆದ ಒಂದು ಪುಸ್ತಕದ ಭಾಗವಾಗಿ ಬರೆದಿಟ್ಟಿದ್ದೆ." ಎಂದು ಹೇಳಿಕೊಂಡರು.[೧೭]
ಬಿಡುಗಡೆ
[ಬದಲಾಯಿಸಿ]ಮಾರಾಟ ಮತ್ತು ಪ್ರಚಾರ
[ಬದಲಾಯಿಸಿ]ಇಡೀ ರಾತ್ರಿ ಪುಸ್ತಕ ಸಹಿ ಹಾಕುತ್ತಾ ಮತ್ತು ಓದುತ್ತಾ ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ನಲ್ಲಿ, ರೊಲಿಂಗ್ ಮತ್ತು ರಹಸ್ಯ ಮತದಾನದಿಂದ ಆಯ್ಕೆಯಾದ 1700 ಅಥಿತಿಗಳು ಭಾಗವಹಿಸುವ ಮೂಲಕ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಚರಿಸಲಾಯಿತು.[೧೮]
ರೊಲಿಂಗ್ ಅಕ್ಟೋಬರ್ 2007ರಲ್ಲಿ USನ ಪ್ರವಾಸದಲ್ಲಿದ್ದರು,ನ್ಯೂಯಾರ್ಕ್‌ನ ಕಾರ್ನೇಗಿ ಹಾಲ್‍ನಲ್ಲಿ ಇನ್ನೊಂದು ಕಾರ್ಯಕ್ರಮ ಆಯೋಜಿಸಿದ್ದಾಗ,ಇಲ್ಲಿ ಟಿಕೆಟುಗಳನ್ನು ಲಾಟರಿಯ ಮೂಲಕ ನೀಡಲಾಗಿತ್ತು.[೧೯]
ಸ್ಕೋಲಾಸ್ಟಿಕ್ Inc., ಹ್ಯಾರಿ ಪಾಟರ್ ಸರಣಿಯ ಅಮೇರಿಕಾದ ಪ್ರಕಾಶಕರು "ದೇರ್ ವಿಲ್ ಸೂನ್ ಬಿ 7" ಎಂಬ ಬಹು-ಮಿಲಿಯನ್ ಡಾಲರಿನ ಮಾರಾಟ ಪ್ರಚಾರವನ್ನು ಪ್ರಾರಂಭಿಸಿತು. ಇದರಲ್ಲಿ ಒಂದು 'Knight Bus' ಯುನೈಟೆಡ್ ಸ್ಟೇಟ್ಸ್‌ನ ನಲವತ್ತು ಗ್ರಂಥಾಲಯಗಳ ಪರ್ಯಟನೆ ಮಾಡಿತ್ತು. ಆನ್‍ಲೈನಿನಲ್ಲಿ ಅಭಿಮಾನಿಗಳ ಚರ್ಚೆಗಳು ಮತ್ತು ಸ್ಪರ್ಧೆಗಳು, ಸಂಗ್ರಹಿಸುವ ಬುಕ್‍ಮಾರ್ಕ್‌ಗಳು, ಹಚ್ಚೆ ಚಿತ್ರ ಮತ್ತು ಕಾರ್ಯಕ್ರಮವೊಂದರ ಮೂಲಕ ಅಭಿಮಾನಿಗಳಿಂದ ಬಹುಚರ್ಚಿತಗೊಂಡ ಏಳು ಡೆತ್‌ಲಿ ಹ್ಯಾಲೊಸ್‍ನ ಪ್ರಶ್ನೆಗಳನ್ನು ಬಿಡುಗಡೆಗೊಳಿಸಲಾಯಿತು.[೨೦] ಪುಸ್ತಕ ಬಿಡುಗಡೆಯ ನಿಟ್ಟಿನಲ್ಲಿ,ಸ್ಕೋಲಾಸ್ಟಿಕ್ ಏಳು ಪ್ರಶ್ನೆಗಳನ್ನು ಬಿಡುಗಡೆ ಮಾಡಿತು, ಅಭಿಮಾನಿಗಳಿಗೆ ಇವುಗಳಿಗೆ ಉತ್ತರವನ್ನು ಕೊನೆಯ ಪುಸ್ತಕದಲ್ಲಿ ಪಡೆಯಬಹುದೆಂದು ಘೋಷಿಸಿತು.[೨೧]
- ಯಾರು ಬದುಕುವರು? ಯಾರು ಸಾಯುವರು?
- ಸ್ನೇಪ್ ಒಳ್ಳೆಯದೊ ಅಥವಾ ಕೆಟ್ಟದೊ?
- ಹೊಗ್ವರ್ಟ್ಸ್ ಮತ್ತೆ ತೆರೆಯುತ್ತದೆಯೆ?
- ಯಾರು ಯಾರ ಜೊತೆಯಾಗುತ್ತಾರೆ?
- ಹಾರ್‌ಕ್ರುಕ್ಸ್ ಎಲ್ಲಿವೆ?
- ವೊಲ್ಡಮಾರ್ಟ್‌ನನ್ನು ಸೋಲಿಸಲಾಗುತ್ತದೆಯೇ ?
- ಡೆತ್‌ಲಿ ಹ್ಯಾಲೊಸ್‌ಗಳೆಂದರೇನು ?
ಸ್ಕೋಲಾಸ್ಟಿಕ್ "ಹ್ಯಾರಿ ಪಾಟರ್ ಪ್ಲೇಸ್" ಎನ್ನುವ ಸಂವಾದಾತ್ಮಕ ಬೀದಿ ಮ್ಯಾಜಿಕ್ ಆಧಾರಿತ ಆಚರಣೆಯನ್ನು ನ್ಯೂಯಾರ್ಕ್ ನಗರದಲ್ಲಿಯ ಸ್ಕೋಲಾಸ್ಟಿಕ್ ಕೇಂದ್ರ ಕಚೇರಿಗಳಲ್ಲಿ ಪ್ರಾಯೋಜಿಸಿತ. U.S.ನಲ್ಲಿ ಮೊಟ್ಟ ಮೊದಲ ಬಾರಿಗೆ, ಸಹಿ ಮಾಡಿದಡೆಥಲಿ ಹ್ಯಾಲೊಸ್‍ನ ಮುದ್ರಣವು 20 ಜುಲೈ 2007ರಲ್ಲಿ ಬಿಡುಗಡೆಯಾಯಿತು. ಈ ಆಚಾರಣೆಗಳಲ್ಲಿ ಇಪ್ಪತ್ತು ಅಡಿ (ಆರು ಮೀಟರ್)ಎತ್ತರದ ವಾಂಪಿಗ್ ವಿಲ್ಲೊ, ಮುಖದ ಮೇಲೆ ಚಿತ್ರ ಬಿಡಿಸುವುದು, ಮಾಂತ್ರಿಕ ದಂಡದ ತಯಾರಿಕೆ, ಬೆಂಕಿ-ತಿನ್ನುವವರು, ಮಾಯಾಗಾರರು, ಯಕ್ಷಿಣಿ ಮಾಡುವವರು ಮತ್ತು ಮರದ ಕಾಲು ಹಾಕಿಕೊಂಡು ನಡೆಯುವವರು ಸೇರಿದ್ದರು.[೨೨]
ಜೆ.ಕೆ.ರೊಲಿಂಗ್ ಪ್ರಕಾಶಕರ ಜೊತೆಗೂಡಿ, ಕಾಣೆಯಾಗಿದ್ದ ಒಬ್ಬ ಬ್ರಿಟಿಷ್ ಮಗು ಮ್ಯಾಡಲಿನ್ ಮ್ಯಾಕೆನ್‍ನ ಮುಖದ ಚಿತ್ರವಿರುವ ಪೋಸ್ಟರನ್ನು ತಯಾರಿಸಲು ಏರ್ಪಡಿಸಿ, ಡೆಥಲಿ ಹ್ಯಾಲೊಸ್ ಪುಸ್ತಕ 21 ಜುಲೈ 2007ರಲ್ಲಿ ವಿಧಿವತ್ತಾಗಿ ಮಾರುಕಟ್ಟೆಗೆ ಕಳುಹಿಸಬೇಕಾದರೆ, ಎಲ್ಲಾ ಪುಸ್ತಕ ಮಾರಾಟಗಾರರಿಗೆ ಈ ಪೋಸ್ಟರ್ ಲಭ್ಯವಾಗುವಂತೆ ಹೇಳಿದರು ಮತ್ತು ವಿಶ್ವದ ಎಲ್ಲಾ ಮುಖ್ಯ ಅಂಗಡಿಗಳಲ್ಲಿ ಇದನ್ನು ಪ್ರದರ್ಶಿಸಬೇಕೆಂದು ಆಶಿಸಿದರು.[೨೩]
ಕುತೂಹಲ ಕೆಡಿಸುವವರ ನಿಯಂತ್ರಣ
[ಬದಲಾಯಿಸಿ]ಯಾರಿಗಾದರೂ ಅವರ ಕೊನೆಯ ಪುಸ್ತಕದ ವಿಷಯದಲ್ಲಿ ಏನೇ ಮಾಹಿತಿ ತಿಳಿದಿದ್ದರೂ, ಅವರು ಅದನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕೆಂದು, ಇದರಿಂದ ಬೇರೆ ಓದುಗರ ಅನುಭವ ಹಾಳಾಗುವುದನ್ನು ತಡೆಯಬಹುದು ಎಂದು ರೌಲಿಂಗ್ ಸಾರ್ವಜನಿಕವಾಗಿ ಮನವಿ ಮಾಡಿದರು.[೨೪] ಈ ನಿಟ್ಟಿನಲ್ಲಿ ಬ್ಲೂಮ್ಸ್‌ಬೆರಿ GB£ 10 ಮಿಲಿಯನ್ ಅಷ್ಟು ಬಂಡವಾಳವನ್ನು ಈ ಪುಸ್ತಕದ ಕುರಿತ ವಿವರಗಳನ್ನು 21 ಜುಲೈ, ಬಿಡುಗಡೆಯ ದಿನಾಂಕದವರೆಗೆ ಗುಪ್ತವಾಗಿಡಲು ಹೂಡಿಸಿದರು.[೨೫] ಅರ್ಥರ್ ಲೆವಿನ್,ಹ್ಯಾರಿ ಪಾಟರ್ ಸರಣಿಯ U.S. ಸಂಪಾದಕ,ಡೆಥಲಿ ಹ್ಯಾಲೊಸ್‍ನ ಯಾವುದೇ ಪ್ರತಿಯನ್ನು ಮುಂಚಿತವಾಗಿ ವಾರ್ತಾಪತ್ರಿಕೆಗಳಿಗೆ ವಿಮರ್ಶೆ ಬರೆಯಲು ನೀಡುವುದಿಲ್ಲ ಎಂದರು, ಆದರೆ U.S.ನ ಎರಡು ದಿನಪತ್ರಿಕೆಗಳಲ್ಲಿ ಇದರ ಆರಂಭದ ವಿಮರ್ಶೆಗಳು ಪ್ರಕಟಗೊಂಡವು.[೨೬] ಕೆಲವು ಅಂಗಡಿಗಳು ಮುಂಚಿತವಾಗಿ ಪುಸ್ತಕದ ಪ್ರತಿಗಳನ್ನು ವಿತರಿಸುವುದನ್ನು ತಡೆಯುವ ಸಲುವಾಗಿ, ಈ ರೀತಿಯ ವರ್ತನೆ ಕಂಡು ಬಂದಲ್ಲಿ ಮುಂದಿನ ಕಂತುಗಳ ಪುಸ್ತಕಗಳನ್ನು ವಿತರಕರಿಗೆ ನೀಡಲಾಗುವುದಿಲ್ಲ ಎಂದು ಹೇಳಲಾಯ್ತು.[೨೭]
ಅಂತರ್ಜಾಲದಲ್ಲಿ ಮಾಹಿತಿ ಸೋರಿಕೆ ಮತ್ತು ಮುಂಚಿತ ತಲುಪಿಸುವಿಕೆ
[ಬದಲಾಯಿಸಿ]ಇದರ ಬಿಡುಗಡೆಯ ಒಂದು ವಾರ ಮುಂಚಿತವಾಗಿ, ಇದರ ಹಲವು ವಿಷಯಗಳು ವಿವಿಧ ರೂಪದಲ್ಲಿ, ಸಹಜವಾಗಿ ಬಯಲಾದಂತೆ ಕಾಣಿಸಿಕೊಂಡವು. 16 ಜುಲೈರಲ್ಲಿ ,U.S. ಆವೃತ್ತಿಯ 759 ಪುಟಗಳ ಛಾಯಾಚಿತ್ರವು ಸೋರಿಕೆಯಾಗಿದ್ದು ಅದನ್ನು ಅಧಿಕೃತ ಬಿಡುಗಡೆಯ ದಿನಾಂಕದ ಮುಂಚಿತವಾಗಿಯೇ ಪೂರ್ತಿಯಾಗಿ ಲಿಪ್ಯಂತರ ಮಾಡಲಾಯಿತು.[೨೮][೨೯][೩೦][೩೧] ಈ ಭಾವಚಿತ್ರಗಳು ನಂತರ ಜಾಲತಾಣದಲ್ಲಿ ಕಾಣಿಸಿಕೊಂಡವು ಮತ್ತು ಸಹಜಾಲತಾಣಗಳ ಸಂಪರ್ಕಜಾಲಗಳಲ್ಲಿ ಕೂಡ ಕಂಡುಬಂತು, ಆದ್ದರಿಂದ ಸ್ಕೋಲಾಸ್ಟಿಕ್ ಇವರುಗಳಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಲಿಖಿತ ಆದೇಶಕೊಟ್ಟು, ಇವರೆಲ್ಲರ ಮೂಲ ಕಂಡುಹಿಡಿಯಬೇಕೆಂದು ತೀರ್ಮಾನಿಸಿತು.[೩೨] ಹ್ಯಾರಿ ಪಾಟರ್ ಸರಣಿಯ ಇತಿಹಾಸದಲ್ಲೇ ಇದು ತುಂಬ ಗಂಭಿರವಾದ ಸುರಕ್ಷತೆಯ ನಿಯಮ ಭಂಗ ಎಂದು ತೋರಿತು.[೩೩] ರೊಲಿಂಗ್ ಮತ್ತು ಅವರ ವಕೀಲರು ನಿಖರವಾಗಿ ಆನ್‍ಲೈನ್ ಸೋರಿಕೆ ಆಗಿರುವುದನ್ನು ಖಚಿತ ಪಡಿಸಿದರು.[೩೪] The Baltimore Sun ಮತ್ತು The New York Times ಎರಡರಲ್ಲೂ 18 ಜುಲೈ 2007ರಂದು ವಿಮರ್ಶೆಗಳು ಪ್ರಕಾಶನಗೊಂಡಿತು, ಈ ಸೋರಿಕೆಯಿಂದಾಗಿ ಹಲವು ಪಿತೂರಿಯ ಅಂಶಗಳು ದೃಢೀಕೃತವಾಯಿತು ಮತ್ತು ಬಿಡುಗಡೆಯ ಒಂದು ದಿನ ಮೊದಲು The New York Times , ಮುಖ್ಯವಾಗಿ ಪ್ರಸಾರದಲ್ಲಿನ ಸೋರಿಕೆ ಆಗಿರುವುದು ನಿಜವೆಂದು ಖಚಿತಪಡಿಸಿತು.[೩೩]
ಸುಮಾರು ಹತ್ತು ಸಾವಿರದ ಒಂದನೆಯ ಭಾಗದಷ್ಟು(0.0001) ಅಂದರೆ 1,200 U.S. ಸಂಗ್ರಹದ ಪ್ರತಿಗಳು ಮುಂಚಿತವಾಗಿಯೆ ಹಡಗಿನಲ್ಲಿ ಕಳುಹಿಸಲಾಗಿದೆ ಎಂದು ಸ್ಕೋಲಾಸ್ಟಿಕ್ ಘೋಷಿಸಿತು. ಮೆರಿಲ್ಯಾಂಡಿನ ಒಬ್ಬ ಓದುಗನಿಗೆ ಪುಸ್ತಕದ ಒಂದು ಪ್ರತಿ ಅಂಚೆಯ ಮೂಲಕ DeepDiscount.com ಇವರಿಂದ ಪುಸ್ತಕವು ವಿಧಿವತ್ತಾಗಿ ಮಾರುಕಟ್ಟೆಗೆ ಬರುವ ನಾಲ್ಕು ದಿನ ಮುಂಚಿತವಾಗಿ ದೊರಕಿತು, ಇದು ಸ್ಕೋಲಾಸ್ಟಿಕ್ ಮತ್ತು ಡೀಪ್‌ಡಿಸ್ಕೌಂಟ್ ಇಬ್ಬರಿಗೂ ನಂಬಲಾರದಷ್ಟು ಪ್ರತಿಕ್ರಿಯೆಯನ್ನು ತಂದುಕೊಟ್ಟಿತು. ಆರಂಭದಲ್ಲಿ ಇದು "ಮಾನವ ಸಹಜ ತಪ್ಪು" ಎಂದು ಸಮಾಧಾನವಿದೆ ಮತ್ತು ಇದರ ಪ್ರತಿ ಆಗಬಹುದಾದ ದಂಡನೆಯನ್ನು ಚರ್ಚಿಸುವುದಿಲ್ಲಾ ಎಂದು ಸ್ಕೋಲಾಸ್ಟಿಕ್ ವರದಿ ನೀಡಿತು.[೩೫] ಅದೇನೆ ಇದ್ದರೂ ಮುಂದಿನ ದಿನಗಳಲ್ಲಿ ಸ್ಕೋಲಾಸ್ಟಿಕ್,DeepDiscount.com ಮತ್ತು ಅದರ ವಿತರಕರರಾದ Levy Home Entertainment ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವುದಾಗಿ ಘೋಷಿಸಿತು.[೩೬] ಸ್ಕೋಲಾಸ್ಟಿಕ್ ಡೀಪ್‌ಡಿಸ್ಕೌಂಟ್‍ನ ಮೇಲೆ, ಕುಕ್ ಕೌಂಟಿಯ ಶಿಕಾಗೊ ಸರ್ಕೀಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಡೀಪ್‌ಡಿಸ್ಕೌಂಟ್ "ಪೂರ್ತಿಯಾಗಿ ಮತ್ತು ನಿಖರವಾಗಿ ಕರಾರುಗಳನ್ನು ಉಲ್ಲಂಘಿಸಿದ್ದಾರೆ. ಡೀಪ್‌ಡಿಸ್ಕೌಂಟ್ ಕೂಡ ಪುಸ್ತಕ ಬಿಡುಗಡೆಗೆ ಅಣಿಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡಿತ್ತು." ಎಂದು ವಾದಿಸಿತು.[೩೭] ಆರಂಭದಲ್ಲಿ ಬಿಡುಗಡೆಯಾದ ಪುಸ್ತಕಗಳು eBayಯಲ್ಲಿ ಕಾಣಿಸಿಕೊಂಡವು. ಒಂದು ಸಂದರ್ಭದಲ್ಲಿ Publishers Weekly ಗೆ ಇದು ಮಾರಾಟವಾದಾಗ ಇದರ ಬೆಲೆ US$18ರಿಂದ ಶುರುವಾಗಿ US$250ವರೆಗೆ ಏರಿತು.[೩೮]
ಬೆಲೆ ಸಮರ ಮತ್ತು ಇನ್ನಿತರ ವಿವಾದಗಳು
[ಬದಲಾಯಿಸಿ]Asda [೩೯][೪೦] ಸೇರಿ ಇನ್ನಿತರ ಹಲವು UKಯ ಸೂಪರ್ ಮಾರ್ಕೆಟ್‌ಗಳು ಅದಾಗಲೇ ಭಾರಿ ರಿಯಾಯತಿ ದರದಲ್ಲಿ ಪುಸ್ತಕಗಳನ್ನು ಒದಗಿಸಲು ಕೋರಿಕೆ ತೆಗೆದುಕೊಂಡಿದ್ದರು. Asda ಆಕಸ್ಮಿಕವಾಗಿ ಪುಸ್ತಕ ಅಧಿಕೃತವಾಗಿ ಮಾರುಕಟ್ಟೆಗೆ ಬರುವ ಎರಡು ದಿನ ಮುಂಚಿತವಾಗಿ ಬೆಲೆಯ ಯುದ್ಧ ಘೋಷಿಸಿತು. ಅವರು ಕೇವಲ GB£5(ಸುಮಾರು US$8)ಗೆ ಪುಸ್ತಕದ ಪ್ರತಿಗಳು ಮಾರಾಟಕ್ಕೆ ಸಿಗುತ್ತವೆ ಎಂದು ಘೋಷಣೆ ಮಾಡಿತು. ಇತರೇ ಚಿಲ್ಲರೆ ವ್ಯಾಪಾರಿಗಳೂ ಕೂಡ ಪುಸ್ತಕದ ಮೇಲೆ ರಿಯಾಯತಿ ದರ ನೀಡಲಾಗುವುದು ಎಂದು ಘೋಷಿಸಿದರು. ಈ ಬೆಲೆಗೆ ಪುಸ್ತಕವು ತನ್ನ ಲಾಭಾಂಶವನ್ನು ಕಳೆದುಕೊಂಡಿತು. ಇದು UKಯ ಸಾಂಪ್ರದಾಯಿಕ ಪುಸ್ತಕ ಮಾರಾಟಗಾರರಿಂದ ಹೆಚ್ಚಿನ ವಿರೋಧಕ್ಕೆ ಕಾರಣವಾಯಿತು ಅಲ್ಲದೆ ಆ ರೀತಿಯ ಸ್ಪರ್ಧೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ತಿಳಿಸಿದರು. ಸ್ವತಂತ್ರ ಮಳಿಗೆಗಳು ಎಲ್ಲರಗಿಂತ ಹೆಚ್ಚಾಗಿ ಇದನ್ನು ವಿರೋಧಿಸಿದವು. ಅದಲ್ಲದೆ UKಯ ಅತಿ ದೊಡ್ಡ ಪುಸ್ತಕ ಅಂಗಡಿಗಳ ಸರಣಿಯನ್ನು ಹೊಂದಿದ್ದ Waterstone ಕೂಡ ಸೂಪರ್ ಮಾರ್ಕೆಟ್‌ಗಳ ಬೆಲೆ ಸಮರದೊಂದಿಗೆ ಪೈಪೋಟಿಗಿಳಿಯಲಿಲ್ಲ. ಕೆಲವು ಚಿಕ್ಕ ಪುಸ್ತಕದ ಅಂಗಡಿಗಳು,ಪುಸ್ತಕಗಳನ್ನು ಸಗಟಾದ ವ್ಯಾಪಾರಿಗಳ ಹತ್ತಿರ ಕೊಳ್ಳುವುದರ ಬದಲು ದೊಡ್ಡ ಅಂಗಡಿ ಮಳಿಗೆಗಳಂಥವರಿಂದ ಕೊಳ್ಳುವುದಕ್ಕೆ ಆರಂಭಿಸಿದರು. Asda ಇದಕ್ಕೆ ಪ್ರತ್ಯುತ್ತರವಾಗಿ ಪುಸ್ತಕಗಳ ಸಗಟು ಕೊಳ್ಳುವಿಕೆ ತಡೆಗಟ್ಟಲು ಒಬ್ಬ ಗಿರಾಕಿಗೆ ಎರಡು ಪ್ರತಿಗಳನ್ನು ಮಾತ್ರ ನೀಡಲಾಗುವುದೆಂದು ಮಿತಿ ಹೇರಿತು. UK ಪುಸ್ತಕ ಮಾರಾಟಗಾರರ ಸಂಘದ ವಕ್ತಾರ ಫಿಲಿಫ್ ವಿಕ್ಸ್ ಹೇಳಿಕೆಯ ಪ್ರಕಾರ,"ಇದು ನಾವು ಭಾಗವಹಿಸಲಿಕ್ಕಾಗದಂತಹ ಬೆಲೆ ಸಮರ. ಈ ಪುಸ್ತಕವನ್ನು ಮಾರಾಟದ ಕೀಳು ಪ್ರಚಾರಕ್ಕೆ ಅಳವಡಿಸಿ ಬೇಯಿಸಿದ ಬೀನ್ಸ್ ಮಟ್ಟಕ್ಕೆ ಇಳಿಸಿದ ದೊಡ್ಡ ಅಂಗಡಿ ಮಳಿಗೆದಾರರಿಗೆ ಇದು ನಾಚಿಕೆಯ ವಿಷಯ." ಸಿಂಬಾ ಇನ್‌ಫಾರ್‌ಮೇಷನ್‌ನ ವಿಶ್ಲೇಷಕ ಮೈಕಲ್ ನೋರಿಸ್ ಹೇಳುವ ಪ್ರಕಾರ:"ನೀವು ಬರೀ ಪುಸ್ತಕದ ಮೌಲ್ಯವನ್ನು ಕಡಿಮೆ ಮಾಡುತ್ತಿಲ್ಲಾ, ಈ ಹಂತದಲ್ಲಿ ನೀವು ಓದುವ ಮೌಲ್ಯವನ್ನೇ ಕಡಿಮೆ ಮಾಡುತ್ತಿದ್ದೀರಿ."[೪೧]
ಮಲೇಶಿಯಾದಲ್ಲಿ ಇದೇ ತರಹದ ಬೆಲೆ ಯುದ್ಧವು ಪುಸ್ತಕಗಳ ಮಾರಾಟದಲ್ಲಿ ವಿವಾದಗಳನ್ನುಂಟು ಮಾಡಿತು.[೪೨] ಮಲೇಶಿಯಾದ ನಾಲ್ಕು ದೊಡ್ಡ ಪುಸ್ತಕ ಮಳಿಗೆಗಳಾದ MPH Bookstores,Popular Bookstores, Times and Harris ಇವು Tesco and Carrefour ಹೈಪರ್‌ಮಾರ್ಕೆಟ್ ವಿರುದ್ಧ ಪ್ರತಿಭಟನೆಯಾಗಿ ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೋಸ್ ಪುಸ್ತಕವನ್ನು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುವುದಿಲ್ಲಾ ಎಂದು ಘೋಷಿಸಿದರು. ಈ ಪುಸ್ತಕದ ಬೆಲೆ ಮಲೇಶಿಯಾದ ಚಿಲ್ಲರೆ ಅಂಗಡಿಯಲ್ಲಿ MYR 109.90 (ಸುಮಾರು GB£16)ರಷ್ಟು ಇದೆ ಆದರೆ Tesco ಮತ್ತು Carrefour ಇದನ್ನು MYR 69.90(ಸುಮಾರು GB£10)ಗೆ ಮಾರುತ್ತಿದ್ದರು. ಪುಸ್ತಕದ ಅಂಗಡಿಗಳ ಈ ನಡೆಯನ್ನು Penguin Books ವಿತರಕರ ಮೇಲೆ,ಪುಸ್ತಕಗಳನ್ನು ಹೈಪರ್‌ಮಾರ್ಕೆಟುಗಳಿಂದ ತೆಗೆಯಬೇಕೆಂದು ದಬ್ಬಾಳಿಕೆ ಹೋಡಿದ ಒಂದು ಪ್ರಯತ್ನದ ಹಾಗೆ ಎನಿಸುತ್ತೆ. ಕೊನೆಗೆ 24 ಜುಲೈ 2007ರಂದು ಬೆಲೆ ಯುದ್ಧ ಮುಗುಯಿತು ಮತ್ತು ಈ ನಾಲ್ಕು ಪುಸ್ತಕದ ಅಂಗಡಿಗಳು ಪುನಃ ಪುಸ್ತಕಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡಲಾರಂಭಿಸಿದವು. Tesco ಮತ್ತು Carrefour ಕೂಡ ಈ ಪುಸ್ತಕವನ್ನು ಸ್ವಲ್ಪ ನಷ್ಟದ ಬೆಲೆಗೆ ಮಾರುತ್ತಿದ್ದಾರೆ ಎಂದು Penguin Books ಖಚಿತ ಪಡಿಸಿ,ಒಳ್ಳೆಯ ವ್ಯಾಪಾರದ ಅರಿವು ಮತ್ತು ನ್ಯಾಯವಾದ ಉದ್ಯೋಗ ಮಾಡಲು ಪ್ರೇರಿಸಿತು.[೪೩]
ಪುಸ್ತಕದ ಬಿಡುಗಡೆ ಶನಿವಾರದ ಮುಂಜಾನೆ ಮಾಡಿದರಿಂದ ಶಬ್ಬಾತ್‍ನ ಉಲ್ಲಂಘನೆಯಾಯಿತು ಎಂದು ಇಸ್ರೇಲ್ ವ್ಯಾಖ್ಯಾನಿಸಿತು. ವ್ಯಾಪಾರ ಮತ್ತು ಕೈಗಾರಿಕ ಮಂತ್ರಿ ಇಲೈ ಇಶೈರವರು "ಜೀವಿಷ್ ತತ್ವಗಳ ಮತ್ತು ಜೀವಿಷ್ ಸಂಸ್ಕಾರದ ಪ್ರಕಾರ,ಈ ರೀತಿಯ ಘಟನೆಯೊಂದು ಶನಿವಾರದ ಬೆಳಗ್ಗೆ 2 a.m.ಗೆ ನಡೆಯುವುದು ನಿಷೇಧಿಸಿದೆ. ಇದನ್ನೆ ಅವರು ಬೆರೆ ಯಾವ ದಿನವಾದರು ಮಾಡಲಿ." ಎಂದು ಟಿಪ್ಪಣಿಸಿದರು. ಇಶೈರವರು ಕೆಲಸದ ಮತ್ತು ವಿಶ್ರಾಂತಿಯ ಕಾನೂನಿನ ಘಂಟೆಗಳ ಆಧಾರದ ಮೇಲೆ ದೋಷಾರೋಪಣೆ ಪ್ರಕಟಿಸುವುದು ಮತ್ತು ದಂಡನೆ ವಿಧಿಸಲಾಗುವುದೆಂದು ತಿಳಿಸಿದರು.[೪೪]
ಪ್ರಕಟಣೆಗಳು ಮತ್ತು ಮನ್ನಣೆಗಳು
[ಬದಲಾಯಿಸಿ]ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ದಿ ಬಾಲ್ಟಿಮೋರ್ ಸನ್/0}ನ ವಿಮರ್ಶೆ, ಮೇರಿ ಕ್ಯಾರೋಲ್ ಮೆಕಾಲೆ ಈ ಸರಣಿಗಳನ್ನು ಅತಿಶ್ರೇಷ್ಠವಾದ "ಒಂದು ಶಿಕ್ಷಣದ ಬಗೆಗಿನ ಕಾದಂಬರಿ, ಅಥವಾ ಮುಂಬರುವ ದಿನಗಳ ಕಥೆ" ಎಂದು ಪ್ರಶಂಸಿಸಿದ್ದಾರೆ . ಆಕೆಯು ಗಮನಿಸಿದ ವಿಶಯವೆಂದೆರೆ, ಈ ಪುಸ್ತಕವು ಹಿಂದಿನ ಸರಣಿಯಲ್ಲಿ ಬಂದಿರುವ ಕಾದಂಬರಿಗಳಿಗಿಂತ ಗಂಭೀರ ಮತ್ತು ಹೆಚ್ಚು ನೇರ ನುಡಿಯ ಗದ್ಯವಾಗಿದೆ ಎಂಬುದು.[೪೫]
ಇನ್ನೂ ಹೆಚ್ಚಾಗಿ, ದಿ ಟೈಮ್ಸ್‌ನ ವಿಮರ್ಶೆಗಾರರಾದ ಆಯ್‌ಲಿಸ್ ಫೋರ್ಧಮ್ ಅವರು "ರೌಲಿಂಗ್‌ರವರ ವಿಶಿಷ್ಟ ಪ್ರತಿಭೆ ಕೇವಲ ಅವಾಸ್ತವಿಕ ಜಗತ್ತಿನ ಬಗೆಗಿನ ಆಕೆಯ ಪ್ರತ್ಯಕ್ಷೀಕರಣವಲ್ಲದೆ ಇನ್ನೂ ಹೆಚ್ಚಾಗಿ ಉತ್ಸಾಹದಿಂದ ತಿರುವಿಹಾಕಬಹುದಾದ ಪುಟಗಳಲ್ಲಿ ನೈಜ ಮತ್ತು ಲೋಪವಿಲ್ಲದ ಹಾಗೂ ಧೈರ್ಯ ಮತ್ತು ಪ್ರೀತಿಯೋಗ್ಯ ಪಾತ್ರಗಳನ್ನು ಸೃಷ್ಟಿಸುವ ಆಕೆಯ ಸಾಮರ್ಥ್ಯ" ಎಂದು ಬರೆದಿದ್ದಾರೆ. ಫೋರ್ಧಮ್ ಕೊನೆಯಲ್ಲಿ " ನಾವು ಬಹಳ ದೂರದವರೆಗೆ ಜೊತೆಯಾಗಿಯೆ ಸಾಗಿದೆವು, ಮತ್ತು ರೌಲಿಂಗ್ ಅವರಾಗಲಿ ಅಥವಾ ಹ್ಯಾರಿಯಾಗಲಿ ಕೊನೆಯಲ್ಲಿ ನಮ್ಮನ್ನು ಕುಗ್ಗ್ಗುವುದಕ್ಕೆ ಬಿಡಲಿಲ್ಲ" ಎಂದು ಹೇಳಿದ್ದಾರೆ.[೪೬] ನ್ಯೂಯಾರ್ಕ ಟೈಮ್ಸನ ಬರಹಗಾರರಾದ ಮಿಚಿಕೊ ಕ್ಯಾಕುಟಾನಿ, ಈ ಮೇಲಿನ ಹೆಳಿಕೆಯನ್ನು ಒಪ್ಪಿಕೊಳ್ಳುತ್ತಾ, ಹ್ಯಾರಿಯನ್ನು ಒಬ್ಬ ನಾಯಕ ಮತ್ತು ಕಥೆಗೆ ಹೋಲಿಕೆಯಾಗುವಂಥಹ ಪಾತ್ರವನ್ನಾಗಿ ನಿರ್ಮಾಣ ಮಾಡುವ ರೌಲಿಂಗ್‌ರವರ ಸಾಮರ್ಥ್ಯವನ್ನು ಹೊಗಳಿದ್ದಾರೆ[೪೭] .
ಟೈಮ್ ನಿಯತಕಾಲಿಕೆಯ ಲೆವ್ ಗ್ರೋಸ್‌ಮನ್ ಇದಕ್ಕೆ 8ನೇಯ ಶ್ರೇಣಿಯನ್ನು ಕೊಡುತ್ತಾ 2007ರ ಅತ್ಯುತ್ತಮ 10 ಕಾಲ್ಪನಿಕ ಕಥೆಗಳಲ್ಲಿ ಇದೂ ಒಂದು ಎಂದು ಹೆಸರಿಸಿದ್ದಾನೆ, ಮತ್ತು ಇಂದಿಗೂ ಒಂದು ಜಾಗತಿಕ ಸಮೂಹ ಮಾಧ್ಯಮವಾಗಬಹುದಾದ ಉತ್ತಮ ಪುಸ್ತಕವನ್ನು ಒದಗಿಸಿರುವ ರೌಲಿಂಗ್‌ರನ್ನು ಪ್ರಶಂಸಿಸಿದ್ದಾರೆ.ಗ್ರೋಸ್‌ಮನ್ ಹಿಂದಿನ ಪುಸ್ತಕಗಳ ಸರಣಿಯೊಂದಿಗೆ ಈ ಕಾದಂಬರಿಯನ್ನು ಹೋಲಿಸಿ ನೋಡಿ: "ಪೋಟರ್ ಸರಣಿಗಳಲ್ಲಿ ಇದು ಅಷ್ಟು ಮೋಹಕವಾದುದಲ್ಲ ಆದರೆ ಇದು ಈ ಕಾದಂಬರಿಯ ಅಂತ್ಯ ಎಂಬ ಅನುಭವವನ್ನು ನೀಡುತ್ತದೆ, ರೌಲಿಂಗ್ ಅವರು ತಮ್ಮ ಕಥೆಗೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಈ ಕಾದಂಬರಿಯಲ್ಲೂ ಕೂಡ ಸಾವಿನ ಸಮೀಪದ ಪ್ರೀತಿಯ ಬಗ್ಗೆ ಬರೆದಿದ್ದಾರೆ."[೪೮][೪೯]
ಕಾದಂಬರಿಕಾರ ಎಲಿಜಬೆತ್ ಹ್ಯಾಂಡ್ ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ಈ ಎಲ್ಲಾ ಸರಣಿಗಳನ್ನು ಮುಕ್ತಾಯಗೊಳಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ, ಅಲ್ಲದೆ "ದರ್ಶನೀಯವಾದ ಸಂಕೀರ್ಣ ಅನ್ಯೋನ್ಯ ಕ್ರಿಯೆಯ ನಿರೂಪಣೆ ಮತ್ತು ಪದೇ ಪದೇ ಓದಿಸಿಕೊಂಡು ಹೋಗುವ ಪಾತ್ರಗಳು, ಸಂಪೂರ್ಣ ನಾಟಕತ್ರಯಗಳ ಯೋಗ್ಯವಾದ ಕ್ರೋಡಿಕರಣ ಸಂಪುಟದಲ್ಲಿ ತುಂಬಲ್ಪಟ್ಟಿದೆ" ಎಂದು ವಿಮರ್ಶೆಯನ್ನು ಕೂಡ ಮಾಡಿದ್ದಾರೆ.[೫೦]
ವಿಭಿನ್ನತೆಯಲ್ಲಿ, "ಕ್ರಿಸ್ಚಿಯನ್ ಸೈನ್ಸ್ ಮಾನಿಟರ್ "ನ ಜೆನ್ನಿ ಸಾಯರ್ "ಹ್ಯಾರಿ ಪಾಟರ್ ಸರಣಿಯನ್ನು ಪ್ರೀತಿಸಲು, ಇದರ ಮಾಂತ್ರಿಕ ಜಗತ್ತನ್ನು ಪ್ರತಿಭಾಪೂರ್ಣವಾಗಿ ಅರಿತುಕೊಂಡ ಬಗೆಯಿಂದ ಹಿಡಿದು ವಿವಿಧ ಸ್ಥರಗಳ ನಿರೂಪಣೆಯವರೆಗೆ, ಹಲವಾರು ಕಾರಣಗಳಿವೆ" ಎಂದು ಹೇಳುತ್ತಾರೆ, ಏನಿದ್ದರೂ ಇದು ಬದಲಾವಣೆಗೊಳ್ಳುವ ಒಬ್ಬ ವ್ಯಕ್ತಿಯ ಕಥೆಯಾಗಿದೆ.ಮತ್ತು, ಯೌವನಕ್ಕೆ ಬಂದ ನಂತರವೂ, ಹ್ಯಾರಿ ಹೆಚ್ಚು ಬದಲಾಗಲಿಲ್ಲ.ರೋಲಿಂಗ್‌ರಿಂದ ನಿರ್ದೇಶಿಸಲ್ಪಟ್ಟಂತೆ ಹ್ಯಾರಿಯು ಒಳ್ಳೆಯದರ ಹಾದಿಯನ್ನು ಹೇಗೆ ಪಯಣಿಸುತ್ತಾನೆಂದರೆ ವೊಲ್ಡೆಮೊರ್ಟ್ ಜೊತೆಗೆ ಅವನ ವಿಜಯವು ಅನಿವಾರ್ಯ ಮಾತ್ರವಲ್ಲದೆ ದೈವಿಕವಾದುದು ಕೂಡಾ ಆಗಿರುತ್ತದೆ.[೫೧] 12 ಆಗಸ್ಟ್ 2007ರಲ್ಲಿಯ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಕ್ರಿಸ್ಟೋಫರ್ ಹಿಚನ್ಸ್ ಅವರು ಈ ಕಥೆಗಳನ್ನು ಎರಡನೇ ಮಹಾಯುದ್ಧದ ಕಾಲದಲ್ಲಿ ಇಂಗ್ಲೀಷ್ ಬೋರ್ಡಿಂಗ್ ಸ್ಕೂಲ್‌ನಲ್ಲಿ ಚಾಲ್ತಿಯಲ್ಲಿದ್ದ ಕಥೆಗಳಿಗೆ ಹೋಲಿಸುತ್ತಾರೆ. ಅಲ್ಲದೇ "ರೌಲಿಂಗ್ ಅವರು ಶಾಶ್ವತ ಹೆಸರನ್ನು ಮಾಡಿದ್ದಾರೆ." ಅಲ್ಲದೆ ಅವರ ಸಂಪೂರ್ಣ ಸರಣಿಯ ಕುರಿತು ಹೇಳುತ್ತಾ ತಾನು ರೋಲಿಂಗ್ ಅವರು deus ex machina ಎಂಬುದನ್ನು ಕಥೆಯಲ್ಲಿ ಬಳಸಿರುವುದನ್ನು ಮೆಚ್ಚುವುದಿಲ್ಲ. ಮತ್ತು ಮಧ್ಯದ ಪುಸ್ತಕದಲ್ಲಿಯ ಅಧ್ಯಾಯಗಳು ತುಂಬಾ ಉದ್ದವಾಗಿವೆ ಮತ್ತು ಕಳನಾಯಕ ವೊಲ್ಡೆಮೋರ್ಟ್ ಇಯಾನ್ ಫ್ಲೆಮಿಂಗ್‌ನ ಕಳನಾಯಕನಿಗಿಂತ ಕ್ರೂರ ಎನಿಸುತ್ತಾನೆ.[೫೨] ಸ್ಟಿಫನ್ ಕಿಂಗ್ ಅವರು ಕೆಲವು ವಿಮರ್ಶಕರ ಕುರಿತು ಕೂಡ ಕಟಕಿಯಾಡಿದ್ದಾರೆ. ಮೆಕಾಲೆ ಕುರಿತು ಕೂಡ ಅವರು ಮಾತನಾಡುತ್ತಾ ಅವರನ್ನು ತಕ್ಷಣ ಪುಸ್ತಕದ ಕೊನೆಯ ಭಾಗದ ಕುರಿತು ವಿಮರ್ಶಿಸುವುದನ್ನು ವಿರೋಧಿಸುತ್ತಾರೆ.[೫೩] ಈ ರೀತಿಯ ಟೀಕೆಗಳು ಅತ್ಯಗತ್ಯ ಎಂದು ಅವರಿಗೆ ಅನಿಸಿತ್ತು ಏಕೆಂದರೆ ಪುಸ್ತಕ ಬಿಡುಗಡೆಗೆ ಮೊದಲು ಪುಸ್ತಕ ಬಿಡುಗಡೆ ಮಾಡಬೇಕಾದ್ದರಿಂದ ಈ ಹಿಂದಿನ ಕೆಲವು ಪುಸ್ತಕಗಳ ಕುರಿತಾದ ಪ್ರಾರಂಭದ ವಿಮರ್ಶೆಗೆ ಆಳವಾದ ದೃಷ್ಟಿಕೋನವಿಲ್ಲವಾಗಿತ್ತು.
ನಿರಾಶಾದಾಯಕ ಬರವಣಿಗೆಯ ಶೈಲಿಯನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ , ಅವರು ಇದು ಮಾಗಿದೆ ಮತ್ತು ಸುಧಾರಿಸಿದೆ ಎಂದು ಅಭಪ್ರಾಯಪಟ್ಟರು.ಅವರು, ಪುಸ್ತಕದ ವಿಷಯ ವಸ್ತು ಹೆಚ್ಚು ಪ್ರೌಢವಾಗಿ ಬಂದಿದೆ ಮತ್ತು ಸರಣಿಯ ಮಧ್ಯ ಭಾಗದಲ್ಲಿ ವಯಸ್ಕ ಶ್ರೋತೃಗಳನ್ನು ಸ್ಥಿರವಾಗಿ ಮನದಲ್ಲಿಟ್ಟುಕೊಂಡು ರೌಲಿಂಗ್‌ರವರು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಅಂಗೀಕರಿಸಿದ್ದಾರೆ. ಒಂದು ಭಾಗದಲ್ಲಿ ವಯಸ್ಕ ಶ್ರೋತೃಗಳನ್ನು ಮತ್ತು ಮಕ್ಕಳನ್ನು ರಂಜಿಸುತ್ತ, ಶ್ರೇಷ್ಟತೆಯನ್ನು ಸ್ಥಾಪಿಸಿದ ಮತ್ತು ಸಫಲತೆಯನ್ನು ಸಾಧಿಸಿದ ಹಕಲ್ಬೆರ್ರಿ ಫಿನ್ ಮತ್ತು ಅಯ್‌ಲಿಸ್ ಇನ್ ವಂಡರ್‌ಲ್ಯಾಂಡ್ ಗಳ ಜೊತೆಗೆ ಇದರ ಬರವಣಿಗೆಯನ್ನು ಇವರು ಹೋಲಿಸಿ ನೋಡಿದ್ದರು.
ವ್ಯಾಪಾರ
[ಬದಲಾಯಿಸಿ]ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ನ ಮಾರಾಟವು ದಾಖಲೆಯನ್ನು ಶ್ರಷ್ಟಿಸಿತ್ತು. U.S.ನಲ್ಲಿ ಪ್ರಾರಂಭಿಕ 12 ಮಿಲಿಯನ್ ಪ್ರತಿಗಳು ಮುದ್ರಣಗೊಡಿದ್ದು ಡೆತ್‌ಲಿ ಹ್ಯಾಲೋಸ್ ಪುಸ್ತಕ , ಮತ್ತು ಅಮೇಜಾನ್, ಬಾರ್ನೆಸ್ ಮತ್ತು ನೋಬೆಲ್‌ನ ಮೂಲಕ ಮುಂಚಿತವಾಗಿ ಒಂದು ಮಿಲಿಯನ್‌ಗಿಂತ ಹೆಚ್ಚು ಪ್ರತಿಗಳಿಗಾಗಿ ಕೋರಿಕೆಯು ಬಂದಿತ್ತು.[೫೪] ತನ್ನ ತಾಣಗಳ ಮೂಲಕ 500,000 ಪ್ರತಿಗಳನ್ನು ಮುಂಚಿತವಾಗಿಯೇ ಕೋರುವ ಮೂಲಕ ಡೆತ್‌ಲಿ ಹ್ಯಾಲೋಸ್ ಇದು ತನ್ನ pre-order ದಾಖಲೆಯನ್ನು ಮುರಿದುಹಾಕಿತ್ತು ಎಂದು ಬಾರ್ನೆಸ್ ಮತ್ತು ನೋಬೆಲ್ 2007, ಏಪ್ರಿಲ್ 12ರಂದು ಪ್ರಕಟಿಸಿತ್ತು.[೫೫] ಪ್ರಾರಂಭದ ದಿನಗಳಲ್ಲಿ, ಅಮೇರಿಕಾ ಸಂಯುಕ್ತ ರಾಷ್ಟ್ರದಲ್ಲಿ ದಾಖಲೆಯ 8.3 ಮಿಲಿಯನ್ ಪ್ರತಿಗಳು ಮಾರಾಟಗೊಂಡವು,[೫೬][೫೭] ಮತ್ತು ಸಂಯುಕ್ತ ಸಂಸ್ಥಾನದಲ್ಲಿ 2.65 ಮಿಲಿಯನ್ ಪ್ರತಿಗಳು ಮಾರಾಟಗೊಂಡವು.[೫೮] ಒಂದು ಸೆಕೆಂಡಿನಲ್ಲಿ 15 ಪುಸ್ತಕಗಳು ಮಾರಾಟವಾದ ವರದಿಯು ಡಬ್ಲೂ.ಎಚ್ ಸ್ಮಿಥ್‌ರಲ್ಲಿದೆ.[೫೯] ಜೂನ್ 2008ರ ಹೊತ್ತಿಗೆ, ಅಂದರೆ ಸಾಮಾನ್ಯವಾಗಿ ಈ ಪುಸ್ತಕ ಪ್ರಕಟಗೊಂಡ ಒಂದು ವರ್ಷದ ನಂತರ, ಜಗತ್ತಿನಾದ್ಯಂತ ಮಾರಾಟಗೊಂಡ ಪುಸ್ತಕಗಳ ಸಂಖ್ಯೆ 44 ಮಿಲಿಯನ್‌ಗಳು ಎಂದು ವರದಿಯಾಗಿದೆ.[೬೦]
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿತ್ತು.[೭] 2007 ರಲ್ಲಿ, ನ್ಯೂಯಾರ್ಕ ಟೈಮ್ಸ್‌ನ [೬೧] 100 ಪ್ರಖ್ಯಾತ ಪುಸ್ತಕಗಳಲ್ಲೊಂದರಲ್ಲಿ ಮತ್ತು ಇದರ ಮಕ್ಕಳ ಪ್ರಖ್ಯಾತ ಪುಸ್ತಕಗಳಲ್ಲಿ ಈ ಪುಸ್ತಕವನ್ನು ಹೆಸರಿಸಲಾಗಿತ್ತು.[೬೨]ಪಬ್ಲಿಷರ್ಸ್ ವೀಕ್ಲಿ ಕೂಡ 2007ರ ತನ್ನ ಅತೀ ಪ್ರಮುಖ ಪುಸ್ತಕಗಳಲ್ಲಿ ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ಯನ್ನು ಪಟ್ಟಿ ಮಾಡಿದೆ.[೬೩] 2008ರಲ್ಲಿ ಅಮೇರಿಕನ್ ಲೈಬ್ರರಿ ಅಸೋಸಿಯೇಶನ್ ಈ ಕಾದಂಬರಿಯನ್ನು ತನ್ನ ಇತರ ಅತ್ತ್ಯುತ್ತಮ ಯುವ ವಯಸ್ಕರ[೬೪] ಪುಸ್ತಕದಲ್ಲಿ ಹೆಸರಿಸಿದೆ ಮತ್ತು ಗಮನಾರ್ಹವಾದ ಮಕಳ ಪುಸ್ತಕದಲ್ಲಿಯೂ ಕೂಡ ಪಟ್ಟಿಮಡಿದೆ.[೬೫] ಇನ್ನೂ ಹೆಚ್ಚಾಗಿ, ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ 2008ರ ಕೊಲ್ಯಾರಡೋ ಬ್ಲ್ಯೂ ಸ್ಪ್ರುಸ್ ಬುಕ್ ಪ್ರಶಸ್ತಿಯನ್ನೂ ಗಳಿಸಿದೆ.[೭]
ರೌಲಿಂಗ್‌ನ ವೀಕ್ಷಕ ವಿವರಣೆ ಮತ್ತು ಅನುಬಂಧ
[ಬದಲಾಯಿಸಿ]ರೌಲಿಂಗ್ ತನ್ನ ಒಂದು ಸಂದರ್ಶನದಲ್ಲಿ,[೬೬] ಆನ್‌ಲೈನ್ ಚಾಟ್‌ನಲ್ಲಿ,[೧೦][೬೭] ದಿ ವಿಜಾರ್ಡ ಆಫ್ ದಿ ಮಂತ್ ಸೆಕ್ಷನ್ ಎಂಬ ತನ್ನ ವೆಬ್‌ಸೈಟ್‌ನಲ್ಲಿ ಮತ್ತು ತನ್ನ 2007ರ ಯು.ಎಸ್. ಮುಕ್ತ ಪ್ರವಾಸ ಸಂದರ್ಭದಲ್ಲಿ, ವಿಶೇಷ ಪಾತ್ರಗಳ ಬಗ್ಗೆ ಮಾತನಾಡಿದ್ದಳು ಆದರೆ ಆಕೆಯ ಪುಸ್ತಕದಲ್ಲಿ ಆ ಪಾತ್ರಗಳನ್ನು ಸೇರಿಸಿರಲಿಲ್ಲ.
ಹ್ಯಾರಿ ಮತ್ತು ಆತನ ಇಬ್ಬರು ಸ್ನೇಹಿತರು, ಈ ಮೂರು ಜನ ಮತ್ತು ಅವರ ಕುಟುಂಬಗಳನ್ನು ಕುರಿತು, ಆಕೆ ತಾನು ನೀಡಿದ ಮೊದಲ ಮಾಹಿತಿಯಲ್ಲಿ ತಿಳಿಸಿದಳು. ಮೊದಲಿಗೆ ಹ್ಯಾರಿ ಯಕ್ಷಿಣಿವಿದ್ಯೆ ಮಾಡುವ ಆರೋರ್ ಎಂದು ಕರೆಯಲ್ಪಡುವ ವಿಭಾಗದಲ್ಲಿ ಸದಸ್ಯನಾಗುತ್ತಾನೆ ಮತ್ತು ಸ್ವಲ್ಪ ಸಮಯದ ನಂತರ ಆ ವಿಭಾಗದ ಮುಖ್ಯಸ್ಥನಾಗಿ ನೇಮಕಗೊಳ್ಳುತ್ತಾನೆ ಎಂದು ಆಕೆ ಹೇಳಿದಳು.
ಇದರ ಜೊತೆಗೆ ಅವಳು ಹ್ಯಾರಿ ಪಾಟರ್ ಅಂಡ್ ದ ಹಾಫ್-ಬ್ಲಡ್ ಪ್ರಿನ್ಸ್ ಎಂಬ ಕಾದಂಬರಿಯಲ್ಲಿ ಬರುವ ಹ್ಯಾರಿಯ ಗೆಳತಿಯಾದ ಜಿನಿ ವೆಸ್ಲೆ ಎನ್ನುವ ಪಾತ್ರದ ಬಗ್ಗೆಯೂ ತಿಳಿಸುತ್ತಾಳೆ. ಜಿನಿ ವೆಸ್ಲೆಯು ಕ್ವಿಡ್ಡಿಚ್ ಆಟವನ್ನು ಹೋಲೀಹೆಡ್ ಹಾರ್ಫಿಸ್ ಎನ್ನುವ ತಂಡದ ಪರವಾಗಿ ಆಡುತ್ತಿರುತ್ತಾಳೆ. ನಂತರ ಆಕೆ ಹ್ಯಾರಿ ಜೊತೆಗೆ ಸಂಸಾರ ನಡೆಸಲು ತೆರಳುತ್ತಾಳೆ ಮತ್ತು ಸ್ವಲ್ಪ ಸಮಯದ ನಂತರ ಆಕೆ ಡೈಲಿ ಪ್ರಾಫೆಟ್ ಎನ್ನುವ ಪತ್ರಿಕೆಯಲ್ಲಿ ಕ್ವಿಡ್ಡಿಚ್ ಆಟದ ಬಗ್ಗೆ ವರದಿಮಾಡುವ ವರದಿಗಾರಳಾಗುತ್ತಾಳೆ. ರಾನ್ ವೆಸ್ಲೆಯು Weasleys' Wizard Wheezes ಎನ್ನುವ ಜಾರ್ಜ್ ಎನ್ನುವವನಿಗೆ ಸೇರಿದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು, ನಂತರ ಆತ ಆರೋರ್ ಆಗಿ ಹ್ಯಾರಿಯ ಜೊತೆ ಸೇರಿದದನು. ಹರ್ಮಿಯೋನ್‌ಳ ಪೋಷಕರು ಆಸ್ಟ್ರೇಲಿಯದಲ್ಲಿ ನೆಲೆಸಿದ್ದರು ಮತ್ತು ಜ್ಞಾಪಕ ಶಕ್ತಿಯ ಆಕರ್ಶಣೆಯ ಬದಲಾವಣೆಯನ್ನು ತೆಗೆದುಹಾಕಲು ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಅಲ್ಲಿ ಇಡಲಾಗಿತ್ತು. ಪ್ರಾಥಮಿಕವಾಗಿ, ಆಕೆಯು ಇಂದ್ರಜಾಲದ ಸಚಿವ ಸಂಪುಟದ ಡಿಪಾರ್ಟ್‌ಮೆಂಟ್ ಫಾರ್ ದಿ ರೆಗ್ಯುಲಷನ್ ಆಂಡ್ ಕಂತ್ರೋಲ್ ಆಪ್ ಮ್ಯಾಜಿಕಲ್ ಕ್ರಿಯೇಚರ್ಸ್ನಲ್ಲಿ ಕೆಲಸ ಮಾಡಿದ್ದಳು, ಮನೆಯೊಳಗಿರುವವರ ಜೀವನದಲ್ಲಿ ಅಸಾಧಾರಣವಾದ ಬದಲಾವಣೆಯನ್ನು ತಂದರು. ಈಕೆ ನಂತರದಲ್ಲಿ ಡಿಪರ್ಟ್‌ಮೆಂಟ್ ಆಪ್ ಮ್ಯಾಜಿಕಲ್ ಲಾ ಎನ್ಫೋರ್ಸ್‌ಮೆಂಟ್‌ಗೆ ಬದಲಾವಣೆ ಹೊಂದಿದರು ಮತ್ತು ಕಠೋರವಾದ pro-pureblood ಕಾನೂನುಗಳನ್ನು ತೆಗೆದುಹಾಕಲು ಸಹಕರಿಸಿದರು. ಮೂರು ಕೂಟಗಳ ಸದಸ್ಯರಲ್ಲಿ ಹಿಂದೆ ಹೋಗಿ Hogwartsನಲ್ಲಿ ತನ್ನ ಏಳು ವರ್ಷಗಳನ್ನು ಪೂರೈಸಿದವರಲ್ಲಿ ಈಕೆಯೇ ಮೊದಲಿಗಳು. "ನಿಜವಾಗಿಯೂ ಡಂಬ್ಲೆದೋರ‍್ ಒಬ್ಬ ಗೇ" ಎಂಬುದನ್ನು ರೌಲಿಂಗ್ ಬಹಿರಂಗಪಡಿಸಿದರು.[೬೮][೬೯]
ನಂತರ, ರೌಲಿಂಗ್ ವೊಲ್ಡೆಮಾರ್ಟ್‌ರ ಹಣೆಬರಹವನ್ನು ಬಹಿರಂಗಪಡಿಸಿದರು.ಈತನ ಸಾವಿನ ನಂತರ, ವೊಲ್ಡೆಮಾರ್ಟ್ ತನ್ನ ಅಪರಾಧಗಳಿಂದಾಗಿ ಕುಬ್ಜನಾಗಿ ಅಂತರ್‌ಶಾಚಿಯಾಗುವುದಕ್ಕೆ ಹ್ಯಾರಿಯು ಕಿಂಗ್ಸ್ ಕ್ರಾಸ್ ಲಿಂಬೋ ಮೂಲಕ ಸಾಕ್ಷಿಯಾಗುತ್ತಾನೆ. ರೋಲಿಂಗ್ ಮಾಂತ್ರಿಕ ಲೋಕದಲ್ಲಿ ಉಂಟಾದ ಮುಂದಿನ ರೂಪಾಂತರಗಳ ಬಗ್ಗೆ ಈ ರೀತಿಯಾಗಿ ಹೇಳುತ್ತಾಳೆ.
ಕಿಂಗ್ಸ್‌ಲೆ ಶಾಕ್ಲ್‌ಬೋಲ್ಟ್, ಹ್ಯಾರಿಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫಿನಿಕ್ಸ್ ನಲ್ಲಿ ಪರಿಚಯಿಸಲಾದ ಒಂದು ಸಣ್ಣ ಪಾತ್ರವಾಗಿದೆ. ಈ ಪಾತ್ರವು ಮುಂದೆ ರಾನ್‌ನ ಸಹೋದರ ಪರ್ಸ್ಲೆ ವೆಸ್ಲೆ ಕೆಳಗೆ ಉನ್ನತ ಅಧಿಕಾರಿಯಾಗಿ ಶಾಶ್ವತವಾಗಿ ಮ್ಯಾಜಿಕ್‌ನ ಮಂತ್ರಿಯಾಗಿ ನೇಮಕಗೊಳ್ಳುತ್ತಾನೆ. ಶಾಕ್‌ಬೋಲ್ಟ್‌ನಿಂದ ಪರಿಚಯಿಸಲ್ಪಟ್ಟ ಉಳಿದ ಸುಧಾರಣೆಯಲ್ಲಿ ಮಾಯಾವಿ ಕೈದಿ ಅಜ್ಕಾಬಾನ್‌ನನ್ನ ಹೆಚ್ಚು ಕಾಲ ಅಪನಂಬಿಗಸ್ಥನಾಗಿ ಉಳಿಯುವುದಿಲ್ಲ.
ಹ್ಯಾರಿ, ರಾನ್ ಮತ್ತು ಹರ್ಮಿಯೋನ್‌ರೂ ಕೂಡ ಮಂತ್ರಿಮಂಡಲವನ್ನು ಮರುರೂಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತಾರೆ.[೧೦] ಹ್ಯಾರಿಯನ್ನು ಡಿಫೆನ್ಸ್ ಅಗೇನಸ್ಟ್ ದಿ ಡಾರ್ಕ್ ಆರ್ಟ್ಸ್ ತರಗತಿಗಳಿಗೆ ಪಾಠ ಹೇಳಲು ವರ್ಷಕ್ಕೆ ಹಲವಾರು ಬಾರಿ ಬರುವಂತೆ ಸೂಚಿಸಲಾಗುತ್ತದೆ.[೬೬] ಕೊನೆಯಲ್ಲಿ, ಭಾವಚಿತ್ರದಲ್ಲಿ ಗೋಚರಿಸುವ Snape Hogwartsನ ಮುಖ್ಯೋಪಾದ್ಯಾಯನಾಗಿ ಸ್ವಲ್ಪ ದಿನಗಳವರೆಗೆ ಕಾರ್ಯನಿರ್ವಹಿಸಿದ ವ್ಯಕ್ತಿ, ಮತ್ತು ಈತನು ಮುಖ್ಯೋಪಾದ್ಯಾಯ ಕಛೇರಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಆ ಕಾರಣದಿಂದ ಆತನನ್ನು ಆ ಕೆಲಸದಿಂದ ತೆಗೆದುಹಾಕಲಾಯಿತು ಎಂದು ರೌಲಿಂಗ್ ಹೇಳಿದರು. ಹ್ಯಾರಿ ನಂತರದಲ್ಲಿ Snape'sನ ಭಾವಚಿತ್ರದ ಅಳವಡಿಕೆಯನ್ನು ಆಕ್ಷೇಪಿಸುತ್ತಾನೆ, ಮತ್ತು Snape'sನ ನಿಷ್ಠೆಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುತ್ತಾನೆ.[೧೦]
ಭಾಷಾಂತರಗಳು
[ಬದಲಾಯಿಸಿ]ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ವಿಶ್ವಖ್ಯಾತಿಯ ಕಾರಣದಿಂದಾಗಿ,ಇದು ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿತು.' ಮೊದಲ ಭಾಷಾಂತರವಾದ ಉಕ್ರೇನಿಯನ್ ಭಾಷಾಂತರವು ಸೆಪ್ಟೆಂಬರ್ 25,2007 ರಂದು ಬಿಡುಗಡೆಯಾಯಿತು(as Гаррі Поттер і смертельні реліквії).[೩]' ಹ್ಯಾರಿ ಪಾಟರ್ ಮತ್ತು ರೆಲಿಕ್ಸ್ ಆಪ್ ಡೆತ್' ಸ್ವಿಡೀಶ್ ಶೀರ್ಷಿಕೆಯ ಪುಸ್ತಕ ರೊಲಿಂಗ್ ನಿಂದ ಬಹಿರಂಗಗೊಂಡಿತ್ತು (Harry Potter och Dödsrelikerna),ಮತ್ತು ಪುಸ್ತಕ ಬಿಡುಗಡೆ ಪೂರ್ವದಲ್ಲಿ "ಡೆತ್‌ಲಿ ಹ್ಯಾಲೋಸ್" ಪುಸ್ತಕವನ್ನು ಓದದೇ, ಎರಡು ಪದಗಳ ನ್ನು ಭಾಷಾಂತರಿಸುವುದು ಕಷ್ಟವಾಗಿದೆ ಎಂಬುದು ಸ್ವಿಡೀಶ್ ಪಬ್ಲಿಷರ್‌ನ ಕಳಕಳಿಯಾಗಿತ್ತು.[೪] ಮೊದಲ ಪೋಲಿಶ್ ಭಾಷಾಂತರವು ನೂತನ ಶೀರ್ಷಿಕೆ ಯೊಂದಿಗೆ ಜನವರಿ 26,2008 ರಂದು ಬಿಡುಗಡೆಯಾಯಿತು:Harry Potter i Insygnia Śmierci - Harry Potter and the Insignia of Death.[೫]' '' [೭೦] ಹಿಂದಿ ಭಾಷಾಂತರ ಹ್ಯಾರಿ ಪಾಟರ್ ಔರ್ ಮೌತ್ ಕೆ ತೋಹ್ಪೆ(हैरी पॉटर और मौत के तोहफे)ಯು "ಹ್ಯಾರಿಪಾಟರ್ ಅಂಡ್ ದ ಗಿಫ್ಟ್ಸ್ ಆಪ್ ಡೆತ್" ಆಗಿ ಭಾಷಾಂತರಗೊಂಡು ಮಂಜುಳ್ ಪಬ್ಲಿಕೇಷನ್‍ನಿಂದ ಭಾರತದಲ್ಲಿ ಜೂನ್ 27 , ೨೦೦೮ ರಂದು ಬಿಡುಗಡೆಯಾಯಿತು.[೬]
ಆಧಾರಿತ ಚಲನಚಿತ್ರಗಳು
[ಬದಲಾಯಿಸಿ]ಹ್ಯಾರಿ ಪಾಟರ್ ಅಂಡ್ ದ ಡೆತ್‌ಲಿ ಹ್ಯಾಲೋಸ್ ನ್ನು ಎರಡು ಭಾಗಗಳುಳ್ಳ ಚಿತ್ರ ರೂಪಾಂತರವಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು ಡೇವಿಡ್ ಯೆಟ್ಸ್ ನಿರ್ದೇಶನದೊಂದಿಗೆ ಯೋಜನೆ ರೂಪಿಸಿಲಾಗಿದೆ. ಭಾಗ-I ನವೆಂಬರ್ 19,2010 ರಲ್ಲಿ ಮತ್ತು ಭಾಗ-II ಜುಲೈ 15,2011 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.[೭೧][೭೨]2007–2008 ಅಮೇರಿಕ ಬರಹಗಾರರ ಕೂಟದ ಮುಷ್ಕರ ಅಂತ್ಯವಾಗುವವರೆಗೂ ಸ್ಟಿವ್ ಕ್ಲೌವ್ಸ್ ಕಾರ್ಯಾರಂಭ ಮಾಡಲಿಲ್ಲ. ಆದ್ದರಿಂದಾಗಿ ಈ ಸ್ಕ್ರಿಪ್ಟ್ ವಿಳಂಬವಾಯಿತು.[೭೩] ಫೆಬ್ರುವರಿ 2009 ನಲ್ಲಿ ಆರಂಭವಾಗಿರುವ ಚಿತ್ರೀಕರಣ ಒಂದು ವರ್ಷದವರೆಗೂ ಮುಂದುವರೆಯುವ ಸಾಧ್ಯತೆ ಇದೆ.[೭೪] ಮೊದಲ ಮೂರು ಚಿತ್ರಗಳಿಂದ ಉತ್ತಮ ಖ್ಯಾತಿ ಪಡೆದಿದ್ದ ಜಾನ್ ವಿಲಿಯಮ್ಸ್ ಚಿತ್ರರಂಗಕ್ಕೆ ಮರಳುವುದಾಗಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.[೭೫]
ಆಕರಗಳು
[ಬದಲಾಯಿಸಿ]- ↑ ೧.೦ ೧.೧ The Celebrity 100 #9: J. K. Rowling [Forbes.com, 2008-06-11] "The final one, Harry Potter and the Deathly Hallows, has sold 44 million since it was published last July, including 15 million in the first 24 hours." Retrieved 2009-07-17
- ↑ "Harry Potter finale sales hit 11m". BBC. 23 July 2007. Retrieved 2007-07-27.
- ↑ ೩.೦ ೩.೧ "Ukrainian Potter comes first". Kyiv Post. 27 July 2007. Retrieved 2007-07-29.
- ↑ ೪.೦ ೪.೧ "Släppdatum för sjunde Harry Potter-boken klar!". Tiden. Archived from the original on 2007-07-04. Retrieved 2007-07-24.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೫.೦ ೫.೧ "Translated Edition of Deathly Hallows Hits Stores in Poland". Leaky Cauldron website. 25 January 2008. Retrieved 2008-01-25.
- ↑ ೬.೦ ೬.೧ ೬.೨ "Harry Potter aur Maut Ke Tohfe - Hindi Version of the Deathly Hallows". India Club. Archived from the original on 2009-07-03. Retrieved 2009-08-04.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೭.೦ ೭.೧ ೭.೨ "Harry Potter and the Deathly Hallows". Arthur A. Levine Books. 2001–2005. Archived from the original on 2007-10-22. Retrieved 2009-07-17.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)CS1 maint: date format (link) - ↑ ಜೆ. ಕೆ. ರೌಲಿಂಗ್ (2005.ಹ್ಯಾರಿ ಪಾಟರ್ ಅಂಡ್ ದ ಹಾಫ್-ಬ್ಲಡ್ ಪ್ರಿನ್ಸ್ (ಇಂಗ್ಲೀಷ್‌ನಲ್ಲಿ). ಲಂಡನ್: ಬ್ಲೂಮ್ಸ್‌ಬರೀ/New York City: Scholastic, et al. p. 503. UK ISBN 0-7475-8108-8/U.S. ISBN 0-439-78454-9.
- ↑ ಜೆ. ಕೆ. ರೌಲಿಂಗ್ 2000). Harry Potter and the Goblet of Fire (ಇಂಗ್ಲೀಷ್‌ನಲ್ಲಿ). ಲಂಡನ್: ಬ್ಲೂಮ್ಸ್‌ಬರೀ, et al. p.566. UK ISBN 0-7475-4624-X.
- ↑ ೧೦.೦ ೧೦.೧ ೧೦.೨ ೧೦.೩ ೧೦.೪ "Webchat with J.K. Rowling, 30 July 2007". Bloomsbury Publishing. Archived from the original on 2008-02-14. Retrieved 2007-07-31.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "J.K.Rowling Official Site". News Archive. Archived from the original on 2007-04-15. Retrieved 2007-04-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Harry Potter and the Deathly Hallows". Bloomsbury Publishing. 2006-12-21. Archived from the original on 2007-02-03. Retrieved 2006-12-21.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Cornwell, Tim (2007-02-03). "Finish or bust — J. K. Rowling's unlikely message in an Edinburgh hotel room". The Scotsman. Retrieved 2007-03-29.
- ↑ "Rowling reacts to Potter's end". USA Today. Associated Press. 2007-02-06. Retrieved 2007-07-21.
- ↑ "One-on-one interview with J.K. Rowling" (reprint). ITV. 2005-07-17. Retrieved 2007-06-16.
- ↑ Rowling, J. K. (2004-03-15). "Progress on Book Six". J. K. Rowling Official Site. Archived from the original on 2012-01-07. Retrieved 2006-12-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Rowling to kill two in final book". BBC News. 2006-06-27. Retrieved 2007-07-25.
- ↑ "Harry Potter". Scholastic. Archived from the original on 2007-05-25. Retrieved 2007-05-25.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "The Open Book Tour, October 2007". J.K.Rowling Official Site. 14 July 2007. Archived from the original on 2007-07-07. Retrieved 2007-07-14.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Scholastic announces record breaking 12 million first printing in United States of Harry Potter and the Deathly Hallows". Scholastic. 14 March 2007. Archived from the original on 2007-06-23. Retrieved 2007-07-09.
- ↑ "Harry Potter: Shrieking Shack Poll". Scholastic. Retrieved 2007-08-18.
- ↑ "Scholastic to Host "Harry Potter Place"". Scholastic. 2007-06-26. Archived from the original on 2011-05-20. Retrieved 2007-06-26.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Rowling in Madeleine poster plea". BBC News. 2007-07-16. Retrieved 2007-07-17.
- ↑ Rowling, J. K. (14 May 2007). "J.K.Rowling Official Site". Archived from the original on 2005-12-30. Retrieved 2007-05-18.
- ↑ "10 million pounds to guard 7th Harry Potter book". Rediff News. 16 July 2007. Retrieved 2007-07-16.
- ↑ "Editor Says Deathly Hallows Is Unleakable". MTV Overdrive (video). 17 July 2007. Archived from the original on 2007-08-10. Retrieved 2007-07-19.
- ↑ "Potter embargo "could be broken"". BBC News. 12 July 2007. Retrieved 2007-07-17.
- ↑ "Harry Potter Fans Transcribe Book from Photos". TorrentFreak. 18 July 2007. Retrieved 2007-07-19.
- ↑ "New Potter book leaked online". Sydney Morning Herald, Fairfax newspapers. 18 July 2007. Retrieved 2007-07-18.
- ↑ "Harry Potter and the Deathly Hallows leaked to BitTorrent". TorrentFreak. 17 July 2007. Retrieved 2007-07-19.
- ↑ Healey, Jon (20 July 2007). "Harry Potter Spoiler Count". Los Angeles Times. Retrieved 2007-07-20.
- ↑ Hoyt, Clark (30 July 2007). "Did the Times Betray Harry Potter Fans?". New York Times. Retrieved 2007-07-30.
- ↑ ೩೩.೦ ೩೩.೧ Fenton, Ben (17 July 2007). "Web abuzz over Potter leak claims". Retrieved 2007-07-20.
- ↑ Malvern, Jack (2007-07-19). "Harry Potter and the great web leak". Archived from the original on 2008-07-06. Retrieved 2007-07-19.
- ↑ "The spell is broken". The Baltimore Sun. 18 July 2007. Archived from the original on 2021-05-06. Retrieved 2007-07-18.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Press release from Scholastic". PR Newswire (from Scholastic). 18 July 2007. Retrieved 2007-07-18.
- ↑ "Distributor mails final Potter book early". MSNBC Interactive. 18 July 2007. Archived from the original on 2007-08-11. Retrieved 2007-07-18.
- ↑ "I Was an eBay Voldemort". National Review Online. 20 July 2007. Archived from the original on 2007-08-05. Retrieved 2007-07-20.
- ↑ "Potter book firm clashes with supermarket over price". Times Newspapers. 2007-07-17. Archived from the original on 2008-07-06. Retrieved 2009-07-17.
- ↑ Addley, Esther (18 July 2007). "Harry Potter and the supermarket giant, a very modern publishing tale". The Guardian. Retrieved 2009-07-18.
- ↑ "British retailer sells final Potter book for $10, setting dangerous precedent for U.S. market". July 20, 2007. Archived from the original on 2007-08-22. Retrieved 2009-07-17.
- ↑ "Harry Potter and the ugly price war". The Star Malaysia. 21 July 2007. Archived from the original on 2007-09-09. Retrieved 2007-07-21.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Bookstores end Harry Potter boycott". The Star Malaysia. 24 July 2007. Archived from the original on 2007-10-11. Retrieved 2007-07-24.
- ↑ "Yishai warns stores over Harry Potter book launch on Shabbat". Haaretz. 21 July 2007. Archived from the original on 2007-08-29. Retrieved 2007-07-18.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ McCauley, Mary Carole (18 July 2007). "An inevitable ending to Harry Potter series". Baltimore Sun. Archived from the original on 2007-09-27. Retrieved 2007-07-21.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Fordham, Alice (21 July 2007). "Harry Potter and the Deathly Hallows". The Times. Archived from the original on 2011-05-17. Retrieved 2007-07-25.
- ↑ Kakutani, Michiko (19 July 2007). "An Epic Showdown as Harry Potter Is Initiated Into Adulthood". New York Times. Retrieved 2009-07-20.
- ↑ ಗ್ರೊಸ್‌ಮನ್, Lev; "ದಿ 10 ಬೆಸ್ಟ್ ಫಿಕ್ಷನ್ ಬುಕ್ಸ್"; ಟೈಮ್ ನಿಯತಕಾಲಿಕೆ; ಡಿಸೆಂಬರ್ ೨೪, 2007; ಪುಟಗಳು 44–45.
- ↑ Grossman, Lev (24 December 2007). "Top 10 Fiction Books". time.com. Archived from the original on 2007-12-22. Retrieved 2007-12-24.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Hand, Elizabeth (22 July 2007). "Harry's Final Fantasy: Last Time's the Charm". The Washington Post Company. Retrieved 2009-07-20.
- ↑ Sawyer, Jenny (25 July 2007). "Missing from Harry Potter a real moral struggle". Christian Science Monitor. Retrieved 2007-07-25.
- ↑ Hitchens, Christopher. "The Boy Who Lived". The New York Times. Retrieved 2008-04-01.
- ↑ King, Stephen. "J K Rowling's Ministry of Magic". Entertainment Weekly. Archived from the original on 2007-08-16. Retrieved 2007-08-21.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Record print run for final Potter". BBC. 15 March 2007. Retrieved 22 May 2007.
- ↑ "New Harry Potter breaks pre-order record". RTÉ.ie Entertainment. 13 April 2007. Archived from the original on 18 ಏಪ್ರಿಲ್ 2007. Retrieved 23 April 2007.
- ↑ Blais, Jacqueline (2007-07-24). "'Deathly Hallows' records lively sales". USAToday. Retrieved 2009-07-13.
{{cite web}}
: Unknown parameter|coauthors=
ignored (|author=
suggested) (help) - ↑ Rich, Motoko (July 22, 2007). "Record First-Day Sales for Last 'Harry Potter' Book". New York Times. Retrieved 2009-07-13.
- ↑ "'Harry Potter and the Deathly Hallows' Breaks Records". Associated Press. July 24, 2007. Retrieved 2009-07-13.
- ↑ Phelvin, Patrick (23 Jul 2007). "Harry Potter and the hallowed sales figures". Telegraph. Retrieved 2009-07-13.
- ↑ "#9 J.K. Rowling". Forbes.com LLC. 06.11.08. Retrieved 2009-07-19.
{{cite web}}
: Check date values in:|date=
(help) - ↑ "100 Notable Books of 2007". The New York Times. December 2, 2007. Retrieved 2009-07-17.
- ↑ Fleischman, Paul (December 2, 2007). "Notable Children's Books of 2007". The New York Times. Retrieved 2009-07-17.
- ↑ Staff (11/5/2007). "PW's Best Books of the Year". Reed Business Information. Retrieved 2009-07-17.
{{cite web}}
: Check date values in:|date=
(help) - ↑ "Best Books for Young Adults 2008". American Library Association. 2008. Archived from the original on 2009-05-01. Retrieved 2009-07-17.
- ↑ "2008 Notable Children's Books". American Library Association. 2008. Retrieved 2009-07-17.
- ↑ ೬೬.೦ ೬೬.೧ Brown, Jen (2007-07-25). "Finished Potter? Rowling tells what happened next". MSNBC. Archived from the original on 2007-08-01. Retrieved 2007-07-26.
- ↑ "Rowling Answers Fans' Final Questions". MSN Entertainment. 2007-07-30. Archived from the original on 2007-10-17. Retrieved 2007-07-31.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Rowling says Dumbledore is Gay". Newsweek. 16 October 2007. Retrieved 2007-10-21.
- ↑ "JK Rowling outs Dumbledore as gay". BBC News. 2007-10-20. Retrieved 2007-10-21.
- ↑ "Harry Potter i insygnia śmierci". LibraryThing. 24 December 2007. Retrieved 2007-12-24.
- ↑ "Official: Two Parts for Deathly Hallows Movie". ComingSoon.net. 25 February 2009. Archived from the original on 2009-02-26. Retrieved 2009-03-02.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Release Date Set for Harry Potter 7: Part I". ComingSoon.net. 25 April 2008. Archived from the original on 2008-05-18. Retrieved 2008-05-25.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "About Those Harry Potter Rumours". Empire. 14 January 2008. Archived from the original on 2015-09-24. Retrieved 2008-02-14.
- ↑ Richards, Olly (2008-03-14). "Potter Producer Talks Deathly Hallows". Empire. Retrieved 2008-03-15.
- ↑ "Williams Might be Back for Last Potter Film". JWFAN. 2007-08-22. Retrieved 2007-08-25.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Harry Potter at Bloomsbury.com web site Archived 2009-05-17 ವೇಬ್ಯಾಕ್ ಮೆಷಿನ್ ನಲ್ಲಿ. U.K. ಪ್ರಕಟಕರ ಪುಸ್ತಕ ಮಾಹಿತಿ
- Harry Potter at Scholastic.com web site U.S. ಪ್ರಕಟಕರ ಪುಸ್ತಕ ಮಾಹಿತಿ
- Harry Potter at Raincoast.com web site Archived 2007-07-16 ವೇಬ್ಯಾಕ್ ಮೆಷಿನ್ ನಲ್ಲಿ. ಕೆನಡಿಯನ್ ಪ್ರಕಟಕರ ಪುಸ್ತಕ ಮಾಹಿತಿ
- Harry Potter at Allen & Unwin web siteArchived 2007-08-07 ವೇಬ್ಯಾಕ್ ಮೆಷಿನ್ ನಲ್ಲಿ. ಆಸ್ಟ್ರೇಲಿಯ-ನ್ಯೂಜಿಲೆಂಡ್ ಪ್ರಕಟಕರ ಪುಸ್ತಕ ಮಾಹಿತಿ
- Pages using the JsonConfig extension
- Pages using duplicate arguments in template calls
- CS1 errors: redundant parameter
- CS1 maint: date format
- CS1 errors: unsupported parameter
- CS1 errors: dates
- Pages using ISBN magic links
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಹ್ಯಾರಿ ಪಾಟರ್ ಪುಸ್ತಕಗಳು
- 2007 ಕಾದಂಬರಿಗಳು
- ಪರಿಣಾಮಕಾರಿ ಕಾದಂಬರಿಗಳು
- ಆಂಗ್ಲ ಸಾಹಿತ್ಯ