ಮ್ಯಾಕ್ ಓಎಸ್ X

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಈ ಲೇಖನವನ್ನು Mac OS X ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

revision of annual fees pertaining to bsc, nursing pharma and BPT OF karnataka state private nursing and paramedical college management seats prescribes as per (1) of the above read in government order


as per the letter of director of medical education mentioned above in read (2) of the private medical college management seats fees revision as mentioned below


after duly verify with relevent documents and records pertaining to the private nursing.

college management seats annual fees havebeen revised by the following government order.


the private institutions management seats fee has been revised with immediate effect till the further orders

Kn-250px-TigerDesk.png

ಆಪಲ್ ಕಂಪ್ಯೂಟರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ಗಣಕಯಂತ್ರ ಕಾರ್ಯನಿರ್ವಹಣ ಸಾಧನ. ಸುಂದರವಾದ ಚಿತ್ರಾತ್ಮಕ ಸಂಪರ್ಕ ಸಾಧನ. GUI (ಆಂಗ್ಲದಲ್ಲಿ) ಅಳವಡಿಸಲಾಗಿರುವ ಈ ಸಾಧನವು ಬಿ.ಎಸ್.ಡಿ ಯೂನಿಕ್ಸ್ ಅಡಿಪಾಯದ ಮೇಲೆ ನಿರ್ಮಿತವಾಗಿದೆ.

ಇತಿಹಾಸ[ಬದಲಾಯಿಸಿ]

೧೯೮೫ರಲ್ಲಿ ಸ್ಟೀವ್ ಜಾಬ್ಸ್ ಆಪಲ್ ತ್ಯಜಿಸಿ ನೆಕ್ಷ್ಟ್ ಸಂಸ್ಥೆಯನ್ನು ನಿರ್ಮಿಸಿದರು. ಅಲ್ಲಿ ಮ್ಯಾಖ್ ಕರ್ನಲ್ (ಆಂಗ್ಲದಲ್ಲಿ kernel) ಮತ್ತು ಬಿ.ಎಸ್.ಡಿ ಯೂನಿಕ್ಸ್ ಅಳವಡಿಸಿಕೊಂಡು ನೆಕ್ಟ್ ಸ್ಟೆಪ್ (ಆಂಗ್ಲದಲ್ಲಿ NEXTSTEP) ಎಂಬ ವಸ್ತು-ನಿಷ್ಟ ಕಾರ್ಯನಿರ್ವಹಣ ಸಾಧನವನ್ನು (ಆಂಗ್ಲದಲ್ಲಿ Objected Oriented Operating System) ನಿರ್ಮಿಸಲಾಯಿತು. ಈ ಮಧ್ಯೆ ಸ್ಟೀವ್ ಜಾಬ್ಸ್ ಇಲ್ಲದಿರುವ ವರ್ಷಗಳಲ್ಲಿ ಆಪಲ್ ಸಂಸ್ಥೆಯು ತನ್ನದೇ ಆದ ಹೊಸ ತಲೆಮಾರಿನ ಕಾರ್ಯನಿರ್ವಹಣ ಸಾಧನಗಳನ್ನು ತಯಾರಿಸಲು ಪ್ರಯತ್ನಿಸಿತಾದರೂ ಅಂತಹ ಯಶಸ್ಸು ಕಾಣಲಿಲ್ಲ.

ನಂತರ ತನ್ನ ಮುಂದಿನ ಕಾರ್ಯನಿರ್ವಹಣ ಸಾಧನದ ಅಡಿಪಾಯಕ್ಕೆ ಆಪಲ್ ಸಂಸ್ಥೆಯು ನೆಕ್ಟ್ ಸ್ಟೆಪ್ಓಪೆನ್ ಸ್ಟೆಪ್ ಅನ್ನು ಆಯ್ದುಕೊಂಡಿತು, ಹಾಗೆಯೇ ನೆಕ್ಟ್ ಸ್ಟೆಪ್ ‍ಅನ್ನು ತನ್ನೊಳಗೆ ವಿಲೀನಗೊಳಿಸಿತು. ಸ್ಟೀವ್ ಜಾಬ್ಸ್ ಮತ್ತುಮ್ಮೆ ಆಪಲ್ ನೇತೃತ್ವ ವಹಿಸಿಕೊಂಡು, ಅಲ್ಲಿಯವರೆಗೆ ಕೇವಲ ಗಣಕತಂತ್ರಜ್ಞರು ಬಳಸುವಂತಿದ್ದ ಓಪೆನ್ ಸ್ಟೆಪ್ ಅನ್ನು ಗೃಹಪಯೋಗಿ ಗಣಕಗಳಲ್ಲಿ ಅಳವಡಿಸುವಂತಹ ಕಾರ್ಯನಿರ್ವಹಣ ಸಾಧನವನ್ನಾಗಿ ಬದಲಿಸಲು ರಾಪ್ಸಡಿ ಎಂಬ ಕಾರ್ಯ ಪ್ರಾರಂಭಿಸಿದರು. ಕೆಲವು ಪ್ರಾರಂಭದ ತೊಡಕುಗಳನ್ನು ನಿವಾರಿಸಿ, ಹಳೆಯ ಮ್ಯಾಕ್ ಓಎಸ್ ಅವತರಣಿಕೆಗಳಿಂದ ಸುಲಲಿತವಾಗಿ ಮಾರ್ಪಾಡು ಮಾಡಲು ಸಹಾಯಕವಾಗುವಂತಹ ರೀತಿಯಲ್ಲಿ ರಾಪ್ಸಡಿಯಿಂದ ಮ್ಯಾಕ್ ಓಎಸ್ X ನಿರ್ಮಾಣಗೊಂಡಿತು.

ಮ್ಯಾಕ್ ಓಎಸ್ X ತನ್ನ ಮುಂದಿನ ಅವತರಣಿಕೆಗಳಲ್ಲಿ ಹಳೆಯ ಸಾಧನಗಳಿಗೆ ಹೊಂದಿಕೊಂಡಂತಿರಬೇಕಾದ ಧ್ಯೇಯವನ್ನು ಬದಿಗುತ್ತಿ, "ಡಿಜಿಟಲ್ ಜನಜೀವನ"ಕ್ಕೆ ಉಪಯುಕ್ತವಾಗುವಂತಹ ಚಿತ್ರ, ಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಚ್ಚು ಬಳಕೆಯಾಗುವಂತಹ ತಂತ್ರಾಂಶಗಳಿಗೆ ಸಹಾಯಕವಾಗುವ ದಿಸೆಯಲ್ಲಿ ವಿಕಾಸಗುಳ್ಳುತ್ತಾ ಬಂದಿತು.

ಹೆಸರಿನ ವಿಶೇಷತೆ[ಬದಲಾಯಿಸಿ]

ಓಎಸ್ X ಹೆಸರಲ್ಲಿ X ಎಂಬುದು ರೋಮನ್ ಸಂಖ್ಯೆ (ಇಂಗ್ಲಿಷ್ ಅಕ್ಷರ ಎಕ್ಸ್ ಅಲ್ಲ). ಹಳೆಯ ಮ್ಯಾಕಿನ್ತೋಶ್(ಮ್ಯಾಕ್) ಕಾರ್ಯನಿರ್ವಹಣ ಸಾಧನಗಳಾದ ೮, ೯ ಇದೇ ಕ್ರಮದಲ್ಲಿ ಇದು ೧೦ನೆಯ ಅವತರಣಿಕೆ. ಆದರೆ ಇದನ್ನು ಎಕ್ಸ್ ಎಂದು ತಪ್ಪಾಗಿ ಬಳಸುವುದು ಕೂಡ ಸಾಮಾನ್ಯವಾಗಿದೆ. ಹಾಗೆಯೇ ಮ್ಯಾಕ್ ಓಎಸ್ X ನ ಎಲ್ಲ ಉಪ ಅವತರಣಿಕೆಗಳ ಒಂದು ವಿಶೇಷವೇನೆಂದರೆ ಬೆಕ್ಕಿನ ಪ್ರಭೇದದ ಪ್ರಾಣಿಗಳ ಹೆಸರನ್ನು ಬಳಸಿರುವುದು.

ಆವೃತ್ತಿಗಳು[ಬದಲಾಯಿಸಿ]

ತಂತ್ರಾಂಶ[ಬದಲಾಯಿಸಿ]

ಮ್ಯಾಕ್ ಓಎಸ್ X ತಂತ್ರಾಂಶ ಬರವಣಿಗೆಗೆ ಕೊಕೊ(Cocoa) ಫ್ರೇಮ್ ವರ್ಕ ಉಪಯೋಗಿಸಲಾಗುತ್ತದೆ. ಕೊ(Cocoa) ಫ್ರೇಮ್ ವರ್ಕ ಅನ್ನು ಆಬಜೆಕ್ಟೀವ್-ಸಿ(objective-c) ಭಾಷೆಯಲ್ಲಿ ಬರೆಯಲಾಗಿದೆ.

ಯಂತ್ರಾಂಶ[ಬದಲಾಯಿಸಿ]

ಮ್ಯಾಕ್ ಓಎಸ್ ೧೦.೩ ವರೆಗಿನ ಕಾರ್ಯನಿರ್ವಹಣ ಸಾಧನ ppc ಯಂತ್ರಾಂಶದ ಮೇಲೆ ಕಾರ್ಯನಿರ್ವಹಿಸುತ್ತದೆ. ಮ್ಯಾಕ್ ಓಎಸ್ ೧೦.೪ ನಂತರದ ಆವೃತ್ತಿಗಳು ppc ಹಾಗೂ ಇಂಟೆಲ್ನ x86 ಯಂತ್ರಾಂಶದ ಮೇಲೆ ಕಾರ್ಯನಿರ್ವಹಿಸುತ್ತದೆ.