ವಿಷಯಕ್ಕೆ ಹೋಗು

ವರ್ಗ:ಕಾಂತತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂತ ಎಂದರೆ ಆಕರ್ಷಿಸುವುದು ಅಥವಾ ತನ್ನೆಡೆಗೆ ಸೆಳೆದುಕೊಳ್ಳುವುದು. ಆಯಸ್ ಎಂದರೆ ಕಬ್ಬಿಣ, ಕಬ್ಬಿಣವನ್ನು ಆಕರ್ಷಿಸುವ/ಕಬ್ಬಿಣದಿಂದ ಆಕರ್ಷಿತವಾಗುವ ವಸ್ತು ಆಯಸ್ಕಾಂತ. ಭೂಮಿಯಲ್ಲಿ ಸ್ವಾಭಾವಿಕವಾಗಿ ಸಿಗುವ ಕಾಂತೀಯಗುಣಗಳನ್ನು ಪಡೆದಿರುವ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅದುರಿಗೆ ನೈಸರ್ಗಿಕ ಕಾಂತ ಎನ್ನುವರು. ಇದು ಕಪ್ಪಾದ ಕಲ್ಲಿನಂತಿದ್ದು ನಿಯತ ಆಕಾರ ಇರುವುದಿಲ್ಲ. ಇದನ್ನು ಬಳಸುವ ಆಧಾರದ ಮೇಲೆ ವಿವಿಧ ಆಕಾರಗಳನ್ನು ನೋಡಬಹುದು. ಉದಾಹರಣೆಗೆ ದಂಡಕಾಂತ, ಸೂಜಿಕಾಂತ, ಲಾಳಕಾಂತ, ದುಂಡಾಕಾರದ ಕಾಂತ, ವೃತ್ತಾಕಾರದ ಕಾಂತ, ಬಳೆಯಾಕಾರದ ಕಾಂತ ಮುಂತಾದವು.

ಕಾಂತದ ಗುಣಗಳು

[ಬದಲಾಯಿಸಿ]
  1. ಕಾಂತವು ಕಬ್ಬಿಣ, ಕೋಬಾಲ್ಟ್, ನಿಕ್ಕಲ್, ಉಕ್ಕು, ಮುಂತಾದ ಲೋಹಗಳನ್ನು ಆಕರ್ಷಿಸುತ್ತದೆ.
  2. ಕಾಂತವನ್ನು ಸ್ವತಂತ್ರವಾಗಿ ತೂಗಿಬಿಟ್ಟಾಗ (ಗಾಳಿಯ ಅಡೆತಡೆ ಗಟ್ಟಿಯಾದ ದಾರ, ಹತ್ತಿರದಲ್ಲಿ ವಿದ್ಯುತ್ ಪ್ರವಾಹ, ಕಾಂತ ಕ್ಷೇತ್ರ ಇರಬಾರದು) ಉತ್ತರ ದಕ್ಷಿಣ ದಿಕ್ಕಿನಲ್ಲಿ ನಿಲ್ಲುತ್ತದೆ. (ಉತ್ತರದ ತುದಿಯನ್ನು ಉತ್ತರ ಧ್ರುವ ಎಂದೂ, ದಕ್ಷಿಣದ ತುದಿಯನ್ನು ದಕ್ಷಿಣ ಧ್ರುವ ಎಂದೂ ಕರೆಯುತ್ತಾರೆ)
  3. ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.
  4. ಕಾಂತವವನ್ನು ಚೂರು ಮಾಡಿದಾಗಲೂ ಪ್ರತಿ ಚೂರಿನಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಇರುತ್ತವೆ.
  5. ಕಾಂತದ ಧ್ರುವಗಳಲ್ಲಿ ಆಕರ್ಷಣ ಬಲ ಹೆಚ್ಚಾಗಿರುತ್ತದೆ.
  6. ಕಾಂತದ ಉತ್ತರ-ದಕ್ಷಿಣ ಧ್ರುವಗಳಲ್ಲಿ ಆಕರ್ಷಣ ಸಾಮರ್ಥ್ಯ ಒಂದೇ ಆಗಿರುತ್ತದೆ.
  7. ಎರಡು ಕಾಂತಗಳಲ್ಲಿ ಸಜಾತಿಯ ಧ್ರುವಗಳು (ಉತ್ತರ-ಉತ್ತರ, ದಕ್ಷಿಣ-ದಕ್ಷಿಣ) ವಿಕರ್ಷಿಸುತ್ತವೆ. ವಿಜಾತಿಯ ಧ್ರುವಗಳು ಆಕರ್ಷಿಸುತ್ತವೆ.
  8. ಕಾಂತವನ್ನು ಕಾಯಿಸುವುದರಿಂದ ಅಥವಾ ಸುತ್ತಿಗೆಯಿಂದ ಬಡಿಯುವುದರಿಂದ ಕಾಂತತ್ವ ನಷ್ಟವಾಗುತ್ತದೆ.

--Harishksmandya (talk) ೦೨:೧೪, ೯ ಆಗಸ್ಟ್ ೨೦೧೪ (UTC)