ಕಾಂತ ಪ್ರವರ್ಧಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂತ ಪ್ರವರ್ಧಕ

ಪರ್ಯಾಪ್ತಶೀಲ (ಸ್ಯಾಚುರೇಬಲ್) ರಿಯಾಕ್ಟರುಗಳನ್ನು ಪ್ರತ್ಯೇಕವಾಗಿ ಅಥವಾ ಇತರ ಮಂಡಲ ಧಾತುಗಳೊಂದಿಗೆ (ಸಕ್ರ್ಯೂಟ್ ಎಲಿಮೆಂಟ್ಸ್) ಉಪಯೋಗಿಸಿಕೊಂಡು ಪ್ರವರ್ಧನೆಯನ್ನು (ಆಂಪ್ಲಿಫಿಕೇಶನ್) ಪಡೆಯಲು ಬಳಸುವ ಸಾಧನ (ಮ್ಯಾಗ್ನೆಟಿಕ್ ಆಂಪ್ಲಿಫೆಯರ್). ಚಿತ್ರ 1 ರಲ್ಲಿ ತೋರಿಸಿರುವ ಮಂಡಲದಲ್ಲಿ ಂ ಒಂದು ಕಾಂತ ವಸ್ತುವಿನಿಂದ ತಯಾರಿಸಲಾಗಿರುವ ದಿಂಡು (ಕೋರ್). [೧] ಇದಕ್ಕೆ ಎರಡು ಸುರುಳಿಗಳನ್ನು ಸುತ್ತಿದೆ. ಸುರುಳಿ 2 ಮತ್ತು ಹೊರೆಪ್ರತಿರೋಧತ್ವ ಖಐ (ಲೋಡ್‍ರೆಸಿಸ್ಟೆನ್ಸ್) ಮೂಲಕ ಪರ್ಯಾಯ ವಿದ್ಯುತ್ಪ್ರವಾಹ Iಐನ್ನು ಪರ್ಯಾಯ ಮೂಲ ಇS ನ ಸಹಾಯದಿಂದ ಹರಿಸಲಾಗುತ್ತಿದೆ. ಈಗ ಸುರುಳಿ 2 ಒಂದು ಪ್ರೇರಕತ್ವವಾಗಿ (ಇಂಡಕ್ಟೆನ್ಸ್) ವರ್ತಿಸುತ್ತದೆ. ಈಗ ಸುರುಳಿ 1ರಲ್ಲಿನ ನೇರ ವಿದ್ಯುತ್ಪ್ರವಾಹ Iಅ ಯನ್ನು (ಇದನ್ನು ನಿಯಂತ್ರಣ ವಿದ್ಯುತ್ಪ್ರವಾಹವೆನ್ನುತ್ತಾರೆ) ವ್ಯತ್ಯಾಸ ಮಾಡಿದರೆ ಅದು ಂ ದಿಂಡಿನ ಕಾಂತಸ್ಥಿತಿಯಲ್ಲಿ ವ್ಯತ್ಯಾಸ ಮಾಡುತ್ತದೆ. ಆದ್ದರಿಂದ ಸುರುಳಿ 2ರ ಪ್ರೇರಕತ್ವ ವ್ಯತ್ಯಾಸವಾಗುತ್ತದೆ. ಆದ್ದರಿಂದ Iಐ ವ್ಯತ್ಯಾಸವಾಗುತ್ತದೆ. Iಐ ಮತ್ತು Iಅ ಗಳಿಗೆ ರೇಖೀಯ ಸಂಬಂಧ (ಲೀನಿಯರ್ ರಿಲೇಷನ್‍ಶಿಪ್) ಇಲ್ಲದಿದ್ದರೂ ಸ್ವಲ್ಪ Iಅ ವ್ಯತ್ಯಾಸ ಜಾಸ್ತಿ Iಐ ವ್ಯತ್ಯಾಸವನ್ನುಂಟುಮಾಡುತ್ತದೆಂದು ತೋರಿಸಬಹುದು. ಅಂದರೆ ವಿದ್ಯುತ್ಪ್ರವಾಹದ ವರ್ಧನೆಯಾಯಿತು. ಚಿತ್ರ 1ರಲ್ಲಿ ತೋರಿಸಿರುವ ಮಂಡಲದ ಹೆಸರು ಪರ್ಯಾಪ್ತಶೀಲ (ಸ್ಯಾಚುರೇಬಲ್) ರಿಯಾಕ್ಟರ್. ಇದಕ್ಕೆ ಕಾಂತಪ್ರವರ್ಧಕವೆಂದು ಸಹ ಹೆಸರಿದೆ.

ಚಿತ್ರ 1ರ ಮಂಡಲದಲ್ಲಿರುವ ತೊಂದರೆಯೆಂದರೆ ಸುರುಳಿ 2ರಲ್ಲಿ ಉಂಟಾಗುವ ವಿದ್ಯುತ್ಪ್ರವಾಹ ವ್ಯತ್ಯಾಸ ಸುರುಳಿ 1ರಲ್ಲಿ (ಅಂದರೆ ನಿಯಂತ್ರಣ ಮಂಡಲದಲ್ಲಿ) ವಿದ್ಯುತ್ತನ್ನು ಪ್ರೇರಿಸುತ್ತದೆ. ಇದರಿಂದ ನಿಯಂತ್ರಣ ಮಂಡಲದಲ್ಲಿ ಶಕ್ತಿ ವ್ಯಯವಾಗುತ್ತದೆ. ಈ ತೊಂದರೆಯನ್ನು ತಪ್ಪಿಸಲು ಸಾಮಾನ್ಯವಾಗಿ ಎರಡು ಪರ್ಯಾಪ್ತಶೀಲ ರಿಯಾಕ್ಟರುಗಳನ್ನು ಉಪಯೋಗಿಸುತ್ತಾರೆ.

ಉಲ್ಲೇಖನೆಗಳು:[ಬದಲಾಯಿಸಿ]

  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಕಾಂತ_ಪ್ರವರ್ಧಕ