ಕಾಂತ ಮಾಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂತ ಮಾಪಕ

ಪ್ರಮುಖವಾಗಿ ಕಾಂತಕ್ಷೇತ್ರದ ತೀವ್ರತೆಯನ್ನು ಅಳೆಯುವ ಉಪಕರಣ (ಮ್ಯಾಗ್ನೆಟೋಮೀಟರ್). ಭೂಮಿಯ ಕಾಂತಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಾಂತಮಾಪಕವನ್ನು ನಿರಪೇಕ್ಷ ಮತ್ತು ಸಾಪೇಕ್ಷ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಶಿಷ್ಟ ಕಾಂತೀಯ ಉಪಕರಣದೊಂದಿಗೆ ನೇರವಾಗಿ ಹೋಲಿಸದೆ ಅಂಶಾಂಕನ (ಕ್ಯಾಲಿಬ್ರೇಷನ್) ಮಾಡಲು ಸಾಧ್ಯವಾಗುವ ಉಪಕರಣವೇ ನಿರಪೇಕ್ಷ ಕಾಂತಮಾಪಕ. ಆದರೆ ಸಾಮಾನ್ಯವಾಗಿ ಹೆಚ್ಚು ಮಾದರಿಯವು ಸಾಪೇಕ್ಷ ಕಾಂತಮಾಪಕಗಳೇ. [೧] ನಿರಪೇಕ್ಷ ಮಾದರಿಯವು. 1 ಸಾಂಪ್ರದಾಯಿಕ ಕಾಂತಮಾಪಕ : ಇದನ್ನು 1832ರಲ್ಲಿ ಗೌಸ್ ಎಂಬಾತ ಭೂಮಿಯ ಕಾಂತಕ್ಷೇತ್ರದ ಕ್ಷಿತಜೀಯ ಘಟಕವನ್ನು ಕಂಡುಹಿಡಿಯಲು ನಿರ್ಮಿಸಿದ. ಇದರಲ್ಲಿ ಸ್ಥಾಯೀ ದಂಡಕಾಂತವೊಂದನ್ನು ಚಿನ್ನದ ತೆಳು ತಂತಿಯಿಂದ ಸಮತಲದಲ್ಲಿ ತೂಗು ಹಾಕಿದೆ. ಸಮತಲದಲ್ಲಿ ಈ ಕಾಂತ ಆಂದೋಲಿಸಿದರೆ ಅದರ ಅವಧಿ (ಪೀರಿಯಡ್) ಭೂಮಿಯ ಕಾಂತಕ್ಷೇತ್ರದ ಕ್ಷಿತಿಜೀಯ ಘಟಕ ಊ  ಮತ್ತು ಕಾಂತದ ಭ್ರಮಣಾಂಕ ಒ ಇವೆರಡರ ಗುಣಲಬ್ದಕ್ಕೆ ಪ್ರತಿಲೋಮದಲ್ಲಿರುವುದು. ಈ ಕಾಂತವನ್ನು ಇದೇ ರೀತಿ ತೂಗುಹಾಕಿರುವ ಇನ್ನೊಂದು ಕಾಂತವನ್ನು ದಿಕ್ಪಲ್ಲಟ ಮಾಡಲು ಉಪಯೋಗಿಸುತ್ತಾರೆ. ಸಮತೋಲ ಸ್ಥಿತಿಯಿಂದ ದಿಕ್ಪಲ್ಲಟವಾದ ಮೇಲೆ ಕೋನವನ್ನು ಅಳತೆ ಮಾಡುವುದರಿಂದ ಒ/ಊ ಪ್ರಮಾಣ ದೊರೆಯುವುದು. ಹೀಗೆ ಆಂದೋಲನಾವಧಿ ಮತ್ತು ದಿಕ್ಪಲ್ಲಟಗಳ ಶ್ರೇಣಿಗಳನ್ನು ಅಳತೆ ಮಾಡುವುದರಿಂದ ನಮಗೆ ಬೇಕಾಗುವ ಮೌಲ್ಯಗಳನ್ನು ಪಡೆದುಕೊಳ್ಳಬಹುದು. ಆದರೆ ಇದರಲ್ಲಿ ಎದ್ದುಕಾಣುವ ಕೊರತೆ ಏನೆಂದರೆ ಊ ಮೌಲ್ಯವನ್ನು ಕಂಡುಹಿಡಿಯಲು 1 ಗಂಟೆ ಅದಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ.

ಸೈನ್ ಗ್ಯಾಲ್ವನೋಮೀಟರ್: ಈ ಉಪಕರಣದಲ್ಲಿ ಹುರಿ ಮಾಡದೆ ಇರುವ ಎಳೆಯಿಂದ ಕಾಂತವನ್ನು ಹೆಲ್ಮ್-ಹೋಲ್ಟ್ಸ್ ಸುರುಳಿಗಳ ನಡುವೆ ಮಧ್ಯಕ್ಕೆ ಸರಿಯಾಗಿ ತೂಗು ಹಾಕಿದೆ. ಈ ಸುರುಳಿಗಳ ಮೂಲಕ ವಿದ್ಯುತ್ ಪ್ರವಾಹವನ್ನು ಹರಿಸಿದಾಗ ಕಾಂತ ದಿಕ್ಪಲ್ಲಟಗೊಳ್ಳುವುದು. ದಿಕ್ಪಲ್ಲಟವಾದ ಕೋನ ಮತ್ತು ಸುರುಳಿಗಳ ಪರಿಮಾಣ, ಹರಸಿರುವ ಮೌಲ್ಯ ಇವನ್ನು ಅಳೆದು ಊ ಬೆಲೆಯನ್ನು ನಿಷ್ಕರ್ಷೆ ಮಾಡಬಹುದು.

ಉಲ್ಲೇಖನೆಗಳು:[ಬದಲಾಯಿಸಿ]

  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಕಾಂತ_ಮಾಪಕ