ಕಾಂತ ಸ್ಥಿತಿಶಾಸ್ತ್ರ
ಕಾಂತಗಳು ಮತ್ತು ಅವುಗಳಿಂದ ಉತ್ಪನ್ನವಾದ ಕ್ಷೇತ್ರಗಳ ವ್ಯಾಸಂಗ (ಮ್ಯಾಗ್ನೆಟೋಸ್ಟ್ಯಾಟಿಕ್). ಈ ವ್ಯಾಸಂಗದಲ್ಲಿ ಕಾಂತಧ್ರುವಗಳನ್ನು ಕಾಂತದ ಉದ್ಭವಸ್ಥಾನಗಳೆಂದು ಪರಿಗಣಿಸುತ್ತಾರೆ. ಶೂನ್ಯಪ್ರದೇಶದಲ್ಲಿ ಬಿಂದುಧ್ರುವಗಳ ನಡುವೆ ಬಲದ ಕೂಲಾಂಬನ ನಿಯಮ ಇಲ್ಲಿ ಪ್ರಧಾನವಾದದ್ದು. ಸಾಮರ್‍ಫೆಲ್ಡನ ಸಲಹೆಯನ್ನು ಉಪಯೋಗಿಸಿಕೊಂಡು ಪರಿಮೇಯ (ರಾಷ್ಯನಲೈಸ್ಡ್) mಞs ಮಾನಗಳಲ್ಲಿ ಈ ನಿಯಮಗಳನ್ನು ಹೀಗೆ ಬರೆಯಬಹುದು. [೧]
ಭೌತಶಾಸ್ತ್ರ:
[ಬದಲಾಯಿಸಿ]ಇಲ್ಲಿ ವೆಬರ್/ಆಂಪೇರ್-ಮೀ: ಇದು ಶೂನ್ಯಪ್ರದೇಶದ ವ್ಯಾಪ್ಯತೆ; m1 ಒಂದು ಬಿಂದುಧ್ರುವದ ತ್ರಾಣ (ಸ್ಟ್ರೆಂತ್), m2 ಇನ್ನೊಂದರದ್ದು. ಈ ಧ್ರುವತ್ರಾಣಗಳನ್ನು ಆಂಪೇರ್-ಮೀಟರುಗಳಲ್ಲಿ ಉಕ್ತಿಸಿದೆ. ಈ ನ್ಯೂಟನ್ ಮಾನಗಳಲ್ಲಿ ಅಳೆದ ಬಲ ಮತ್ತು ಡಿ ಧ್ರುವಗಳ ನಡುವೆ ಇರುವ ಅಂತರ-ಇವು ಮೀಟರನಲ್ಲಿವೆ. ಧ್ರುವಗಳು ವಿಜಾತಿಯವಾದರೆ ಆಕರ್ಷಣಬಲವಾಗುವುದು: ಸಜಾತಿಯವಾದರೆ ವಿಕರ್ಷಣವಾಗುವುದು. m ಆಂಪೇರ್-ಮೀಟರ್ ಧ್ರುವತ್ರಾಣ ಇರುವ ಕಾಂತಧ್ರುವದಿಂದ ಶೂನ್ಯಪ್ರದೇಶದಲ್ಲಿ ಡಿ ಮೀಟರ್ ದೂರದಲ್ಲಿ ಕಾಂತಕ್ಷೇತ್ರದ ತೀವ್ರತೆ ಊನ್ನು ಮಂದಿನ ಸಮೀಕರಣ ಕೊಡುತ್ತದೆ. ಊ=m/4ಡಿ2. ಇಲ್ಲಿ ಊ ಮೀಟರ್ ಒಂದಕ್ಕೆ ಆಂಪೇರುಗಳ ಮಾನದಲ್ಲಿ ಬೆಳೆದಿದೆ. ಬಿಂದುಧ್ರುವಗಳ ಸಮೂಹಕ್ಕೆ ಅಧ್ಯಾರೋಪಣ ತತ್ತ್ವದ (ಪ್ರಿನ್ಸಿಪಲ್ ಆಫ್ ಸೂಪರ್ ಪೊಸಿಷನ್) ಪ್ರಕಾರ P ಬಿಂದುವಿನಲ್ಲಿ ಪರಿಣಾಮೀ ಊ ಸದಿಶೀಯ ಮೊತ್ತ
ಇಲ್ಲಿ ದಕ್ಷಿಣ ಧ್ರುವಗಳು ಋಣ ಚಿಹ್ನೆಯನ್ನೂ ಉತ್ತರ ಧ್ರುವಗಳು ಧನಚಿಹ್ನೆಯನ್ನೂ ಹೊಂದಿವೆ. Pಯಲ್ಲಿ ಉತ್ತರ ಧ್ರುವವನ್ನು ಇಟ್ಟರೆ ಅದು ಯಾವ ದಿಕ್ಕಿನಲ್ಲಿ ಚಲಿಸುವುದೋ ಅದೇ ಆ ಬಿಂದುವಿನಲ್ಲಿ ಊನ ದಿಕ್ಕು ಎಂದು ತಿಳಿಯಬೇಕು.