ವಿಷಯಕ್ಕೆ ಹೋಗು

ಭೂಕಾಂತತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂಜಿಗಲ್ಲು ಸದಾ ಒಂದೇ ದಿಕ್ಕಿನತ್ತ ಓರಣಗೊಳ್ಳುತ್ತಿದ್ದುದನ್ನು ೪೦೦೦ ವರ್ಷಗಳ ಹಿಂದೆಯೇ ಚೀನಿಯವರು ಗಮನಿಸಿದ್ದಾರೆ.ಇದಕ್ಕೆ ಕಾರಣವೇನೆಂಬುವುದನ್ನು ವೈಜ್ಞಾನಿಕವಾಗಿ ಅರಿಯಲು ಅನೇಕ ಶತಮಾನಗಳೇ ಬೇಕಾದವು.ಇಂಗ್ಲೆಂಡಿನ ಮೊದಲನೆ ಎಲಿಜಬೆತ್ ರಾಣಿಯ ಆಸ್ಥಾನದಲ್ಲಿ ವೈದ್ಯನಾಗಿದ್ದ ವಿಲಿಯಂ ಗಿಲ್ಬರ್ಟ್ ಭೂಮಿಯ ಬಗ್ಗೆ ವ್ಯಾಪಕವಾದ ಅಧ್ಯಯನ ಮಾಡಿ ಇದೊಂದು ಬೃಹತ್ ಕಾಂತದಂತೆ ವರ್ಣಿಸುತ್ತದೆ ಎಂದು ನುಡಿದ.ಸೂಜಿಗಲ್ಲಿನ ಗುಣವನ್ನು ಆಧರಿಸಿ ದಿಕ್ಸೂಚೆಗಳು ಬಳಕೆಗೆ ಬಂದವು.ಸಮುದ್ರ ಯಾನ ಮಾಡುತ್ತಿದ್ದ ನಾವಿಕರಿಗೆ ದಿಕ್ಕನ್ನು ನಿರ್ದೇಶಿಸುವಲ್ಲಿ ಇವು ವರರೂಪಿಯಾದುವು.ತೂಗಿಬಿಟ್ಟ ಕಾಂತ ನಸ್ಚಯ ಸ್ಥಿತಿಗೆ ಬಂದಾಗ ಒಂದು ತುದಿ ಉತ್ತರ ದಿಕ್ಕಿಗೂ ಮತ್ತೊಂದು ದಕ್ಷಿಣ ದಿಕ್ಕಿಗೂ ಓರೆಗೂಳ್ಳುತ್ತದೆ. ಈ ಬಿಂದುಗಳೆ ಕಾಂತಧ್ರುವಗಳು. ಕಬ್ಬಿನ ಮತ್ತು ಇದರ ಸಂಬಂಧಿ ಖನಿಜ ವಸ್ತುಗಳನ್ನು ಕಾಂತ ದಂಡವು ಆಕರ್ಷಿಸುತ್ತದೆ.ಇದರ ಧ್ರಾವಗಳು ಉತ್ತರ ದಕ್ಷಿಣ ದಿಕ್ಕಿನಲ್ಲಿ ಓರಣಗೊಡಿವೆ.ಆದರೆ ಭೌಗೋಳಿಕ ಧ್ರುವಗಳಿಂದ ೧೧ಡಿಗ್ರಿ ಪಕ್ಕಕ್ಕೆ ಸರಿದಿವೆ.ಭೂಕಾಂತಕ್ಷೇತ್ರ ತೀವ್ರತೆಯ ಶೇ.೯೦ ಭಾಗ ಭೂಮಿಯ ತಿರುಳಿನಲ್ಲಿದೆ.ಭೂಮಿ ತನ್ನ ಅಕ್ಷದ ಮೇಲೆ ಗಿರಿಕಿ ಹೊಡೆಯುವಾಗ ಘನರೂಪದಲ್ಲಿರುವ ಒಳ ತಿರುಳು,ದ್ರವರೂಪದಲ್ಲಿರುವ ಹೊರ ತಿರುಳು ಹಾಗು ಕವಚ ಭಾಗದ ಪ್ಲಾಸ್ಟಿಕ್ ಸದೃಶ ಶಿಲಾರಸ ಚಲನೆಯಲ್ಲಿ ವ್ಯತ್ಯಾಸ ತೋರುತ್ತದೆ.ಜೊತೆಗೆ ವಿಕಕಿರಣಪಟುತ್ವದಿಂದ ಅಂತರಾಳದಲ್ಲಿ ಅತ್ಯಧಿಕ ಉಷ್ಣತೆ ಮೈದಳೆಯುತ್ತದೆ.ಈ ಎಲ್ಲಾ ಕ್ರಿಯೆಗಳಿಂದಾಗಿ ಭೂಗರ್ಭದಲ್ಲಿ ಎಲೆಕ್ಟ್ರಾನುಗಳ ಚಲನೆ ಅಂದರೆ ವಿದ್ಯುತ್ ಪ್ರವಾಹ,ಪ್ರಾರಂಭವಾಗುತ್ತದೆ.ಇದೇ ಕಾಂತಕ್ಷೇತ್ರವನ್ನು ಒದಗಿಸಿಕೊಟ್ಟಿರುವುದು,ಸುರುಳಿ ಸುತ್ತಿದ ತಾಮ್ರದ ತಂತಿಯೊಳಗೆ ವಿದ್ಯುತ್ ಪ್ರವಾಹಿಸಿದಾಗ ಉಂಟಾಗುವ ಕಾಂತಕ್ಷೇತ್ರಕ್ಕೆ ಇದನ್ನು ಹೋಲಿಸಬಹುದು.ಭೂಕಾಂತಕ್ಷೇತ್ರ,ಧ್ರುವ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ.ಸಮಾಭಾಜಿಕ ವೃತ್ತದ ಬಳಿ ಇದರ ತೀವ್ರತೆ ಕಡಿಮೆ.ಭೂಕಾಂತಕ್ಷೇತ್ರ ಭೂಮಿಯ ತಿರುಳಿಗೆ ಮಾತ್ರ ಸೀಮಿತವಲ್ಲ. ಭೂಮಿಯ ಮೇಲುಮೈ ಹಾಗು ಆಚೆಗೂ ವಿಸ್ತರಿಸಿದೆ.ಇದರ ಪ್ರಭಾವಕ್ಕೆ ಬರುವ ವಲಯ ಎಲ್ಲವನ್ನೂ ಕಾಂತಗೋಳ ಎಂದು ಕರೆದಿದ್ದಾರೆ.ಹೊರ ವಲಯದಲ್ಲಿ ಭೂಕಾಂತಕ್ಷೇತ್ರ ಕಾಂತ ರೇಖೆಗಳಾಗಿ ಪಸರಿಸುತ್ತದೆ.ಸೂರ್ಯನಿಂದ ಹೊಮ್ಮುವ ವಿದ್ಯುದಾವಿಷ್ಟ ಕಣಗಳು ಈ ಕ್ಷೇತ್ರಕ್ಕೆ ಲಗ್ಗೆ ಹಾಕಿ ಕಾಂತಗೋಳವನ್ನು ಬಾಲದಂತೆ ಎಳೆಯುತ್ತದೆ.ಈ ವಿದ್ಯುದಾವಿಷ್ಟ ಕಣಗಳೂ ಭೂಕಾಂತಕ್ಷೇತ್ರದ ಹುಟ್ಟಿಗೆ ಸ್ವಲ್ಪ ಮಟ್ಟಿಗೆ ಕಾರಣ.