ಲೈನಸ್ ಪಾಲಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೈನಸ್ ಪಾಲಿಂಗ್

ಲೈನಸ್ ಪಾಲಿಂಗ್ ಅವರು ಅಮೆರಿಕದ ರಾಸಾಯನಶಾಸ್ತ್ರಜ್ಞ ಹಾಗೂ ಭೌತಶಾಸ್ತ್ರಜ್ಞ. ಇವರು ೨೮ ಫೆಬ್ರವರಿ ೧೯೦೧ ರಂದು ಆರೆಗಾನ್ ರಾಜ್ಯದ ಒಸ್ವೆಗೊದಲ್ಲಿ ಜನಿಸಿದರು. ಅವರು ಹೆರ್ಮನ್ ಹೆಂಡ್ರಿವಿಲಿಯಮ್ ಪಾಲಿಂಗ್ ಹಾಗು ಲೂಸಿ ಇಸಬೆಲ್ಲೆ ಅವರ ಮೊದಲ ಪುತ್ರ. ಇವರು ರಸಾಯನಶಾಸ್ತ್ರ ಮತ್ತು ಅಣ್ವಿಕ ಜೀವಶಾಸ್ತ್ರ ಕ್ಷೇತ್ರದ ಸಂಸ್ಥಾಪಕರಲ್ಲಿ ಒಬ್ಬರು. ಪಾಲಿಂಗ್ ವೇಲೆನ್ಸ್ ಬಂಧದ ಮಾರ್ಗ,ಅನುರಣನೆ,ಅಯಾನಿಕತ್ವ,ಸಂಕರಣದಂಥ ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ೧೯೫೪ರ ಕೊನೆಯಲ್ಲಿ ಪ್ರೋಟೀನುಗಳ ಆಲ್ಫ ಹೆಲಿಕಲ್ ರಚನೆಯ ಮೇಲೆ ನಡೆಸಿದ ಕಾರ್ಯಕ್ಕೆ ಪಾಲಿಂಗ್ ನೋಬೆಲ್ ಪ್ರಶಸ್ತಿ ಪಡೆದರು[೧]. ಹಾಗೆ ಅವರುವಿದ್ಯುದೃಣನೆ ಮತ್ತು ಜಲಜನಕಬಂಧದ ಬಗ್ಗೆಯು ತಮ್ಮ ಆಸಕ್ತಿಯನ್ನು ತೋರಿದ್ದಾರೆ.೧೯೬೨ರಲ್ಲಿ ಎರಡನೇ ಭಾರಿ ನೊಬೆಲ್ ಪ್ರಶಸ್ತಿ ಪಡೆದರು. ಪಾಲಿಂಗ್ ರವರಿಗೆ ರಾಷ್ಟ್ರೀಯ ವಿಜ್ಞಾನ ಪದಕವನ್ನು ನೀಡಿ ಗೌರವಿಸಲಾಗಿತ್ತು. ಆರ್ಥೋಅಣ್ವದ ಮನೋವೈದ್ಯಶಾಸ್ರ್ತದ ಸಂಶೋಧನೆಯನ್ನು ನಡೆಸಿದ್ದರು. ಹಾಗೂ ೧೯೭೪ರಲ್ಲಿ ಲೈನಸ್ ಪಾಲಿಂಗ್ ವಿಜ್ಞಾನ ಮತ್ತು ವೈದ್ಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು.[೨]

ಬಾಲ್ಯಜೀವನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಅವರ ತಂದೆಯು ಔಷಧಿ ಅಂಗಡಿಯ ಮಾಲಿಕರಾಗಿದ್ದರು. ಬಾಲ್ಯದಲ್ಲಿ ಪಾ‍‍ಲಿಂಗ್ ಗೆ ಕೀಟಗಳಲ್ಲಿ ಮತ್ತು ಖನಿಜಗಳಲ್ಲಿ ಆಸಕ್ತಿ ಇತ್ತು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಕಾರಣ ಕುಟುಂಬಕ್ಕೆ ಸಹಾಯ ಮಾಡಲೆಂದು ಬಿಡುವಿನ ಸಮಯದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಕಾರ್ವಾಲಿಸ್ ನಲ್ಲಿದ್ದ ಆರೆಗಾನ್ ಕೃಷಿ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು. ಒಮ್ಮೆ ವಿದ್ಯಾರ್ಥಿಕೂಟದಲ್ಲಿ ಕಾಲೇಜಿನ ಡೀನ್ ಭಾಷಣ ಮಾಡುತ್ತಿದ್ದಾಗ,ಅವರ ಕೆಲವು ತಪ್ಪು ಹೇಳಿಕೆಗಳನ್ನು ಸರಿಪಡಿಸಲು ಪಾಲಿಂಗ್ ಎದ್ದು ನಿಂತು ವಿದ್ಯಾರ್ಥಿಗಳು ತಪ್ಪು ಮಾಹಿತಿ ಪಡೆಯುವುದರಿಂದ ತಪ್ಪಿಸಿದರು. ಆರ್ಥಿಕ ಕಾರಣದಿಂದ ಪಾಲಿಂಗ್ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟರು. ನಂತರ ಪರಿಮಾಣಾತ್ಮಕ ವಿಶ್ಲೇಷಣೆಯನ್ನು ಬೋಧಿಸಲು ಸಹಾಯಕರಾಗಿ ನೇಮಕವಾದ ನಂತರ ಅವರು ಕಾಲೇಜಿಗೆ ಮತ್ತೆ ಬರಲು ಸಾಧ್ಯವಾಯಿತು. ೧೯೨೨ರಲ್ಲಿ ಪಾಲಿಂಗ್ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಸ್ನಾತಕ ಪದವಿಯನ್ನು ಪಡೆದರು. ಅಲ್ಲದೆ, ಗಣಿತಶಾಸ್ತ್ರ,ಭೌತಶಾಸ್ತ್ರ, ಮತ್ತು ಸ್ಫಟಿಕ ವಿಜ್ಞಾನಗಳಲ್ಲಿ ಕೋರ್ಸ್ ನ್ನು ತೆಗೆದುಕೊಂಡಿದ್ದರು.[೩]

ವೈಯಕ್ತಿಕ ಜೀವನ[ಬದಲಾಯಿಸಿ]

ಪಾಲಿಂಗ್ ನ ದೀರ್ಘ ಕಾಲದ ಸ್ನೇಹಿತೆಯಾಗಿದ್ದ ಎವಾ ಹೆಲನ್ ರನ್ನು ಮದುವೆ ಮಾಡಿಕೊಂಡರು. ಇವರಿಗೆ ನಾಲ್ವರು ಗಂಡು ಮಕ್ಕಳು. ಲೈನಸ್ ಕಾರ್ಲ್ ಜೆ. ಆರ್. (೧೯೨೫) ಭೌತಶಾಸ್ತ್ರಜ್ಞ. ಪೀಟರ್ ಜೆಫ್ರೆಸ್ (೧೯೩೧-೨೦೦೩) ಸ್ಫಟಿಕಶಾಸ್ತ್ರಜ್ಞ. ಎಡ್ವರ್ಡ್ ಕ್ರೆಲ್ಲಿನ್ (೧೯೩೭-೧೯೯೭) ಜೀವಶಾಸ್ತ್ರಜ್ಞ. ಲಿಂಡ ಹೆಲೆನ್ (೧೯೩೨)ನಾಲ್ಕನೆಯವರು. ಪಾಲಿಂಗ್ ಮೊದಲು ಲುಥೆರಾನ್ ಚರ್ಚ್ ನಲ್ಲಿ ಸದಸ್ಯರಾಗಿದ್ದರು. ಆದರೆ ನಂತರ ಯುನಿಟರೇನಿಯನ್ ಯುನಿವರ್ಸಲಿಸ್ಟ್ ಚರ್ಚ್ ಗೆ ಸೇರಿಕೊಂಡರು.[೪]

ಜೀವನ[ಬದಲಾಯಿಸಿ]

ಪಾಲಿಂಗ್ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿತ್ತ ಕಾಲಾವಧಿಯಲ್ಲಿ ಧೀರ್ಘಕಾಲದ ಸ್ನೇಹಿತೆಯಾಗಿದ್ದ ಎವಾ ಹೆಲನ್ ರನ್ನು ಮದುವೆ ಮಾಡಿಕೊಂಡರು. ಕ್ವಾಂಟಮ್ ಮೆಕ್ಯಾನಿಕನ್ನು ಬಹಿರಂಗಪಡಿಸಿದಂತೆ ಬಹುಇಲೆಕ್ಟ್ರಾನ್ ಪರಮಾಣುಗಳ ಗುಣಲಕ್ಷಣಗಳನ್ನು ಕುರಿತು ಒಂದು ಲೇಖನವನ್ನು ಬರೆದರು. ೧೯೨೨ರಲ್ಲಿ ಪಾಲಿಂಗ್ ಗೆ ಕೆಮಿಕಲ್ ಇಂಜಿನೀಯರಿಂಗ್ ನಲ್ಲಿ ಸ್ನಾತಕ ಪದವಿಯನ್ನು ಪಡೆದರು. ಪಾಲಿಂಗ್ ೧೯೨೮ ರಲ್ಲಿ ಸೈದ್ಧಾಂತಿಕ ರಸಾಯನಶಾಸ್ತ್ರದ ಉಪ ಪ್ರಾಧ್ಯಾಪಕರಾಗಿ ಕ್ಯಾಲಿಟೆಕ್ಕಿಗೆ ಮರಳಿ ಬಂದರು. ಕ್ವಾಂಟಮ್ ಮೆಕ್ಯಾನಿಕ್ ನ್ನು ಬಹಿರಂಗಪಡಿಸಿದಂತೆ ಬಹು ಇಲೆಕ್ಟ್ರಾನಿಕ್ ಪರಮಾಣುಗಳನ್ನು ಕುರಿತು ಲೇಖನವನ್ನು ಬರೆದರು. ಪಾಲಿಂಗ್ ಮಾಡಿದ ಮೊದಲ ಕಾರ್ಯವೆಂದರೆ ಬೋರ್ ನ ಪರಮಾಣು ಮಾದರಿಯನ್ನು ಲೂಯಿಸ್ ನ ಪರಮಾಣು ಮತ್ತು ಅಣುಗಳ ಮಾದರಿಯೊಂದಿಗೆ ಸಮನ್ವಯಗೊಳಿಸಿದ್ದು. ದಿ ನೇಚರ್ ಆಫ್ ದಿ ಕೆಮಿಕಲ್ ಬಾಂಡ್ ಎಂಬ ಶೀರ್ಷಿಕೆಯ ಲೇಖನವನ್ನು ಬರೆದರು. ಈ ಲೇಖನದಲ್ಲಿ ಪಾಲಿಂಗ್ ವೇಲೆನ್ಸ್ ಬಂಧದ ಮಾರ್ಗ,ಅನುರಣನೆ,ಅಯಾನಿಕತ್ವ, ಸಂಕರಣದಂಥ ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಇವರು ಪರೀಕ್ಷಿಸಿದ ಇತರ ವಿಷಯಗಳು ವಿದ್ಯುದೃಣನೆ ಮತ್ತು ಜಲಜನಕ ಬಂಧ. ನಂತರ ಇವರು ಆಧುನಿಕ ರಸಾಯನಶಾಸ್ತ್ರದ ಪಿತಾಮಹರಾದರು. ೧೯೩೫ರಲ್ಲಿ ವಿಲ್ಸನ್ ಜೊತೆಯಲ್ಲಿ ಕ್ವಾಂಟಮ್ ಮೆಕ್ಯಾನಿಕ್ ಗೆ ಮತ್ತು ರಸಾಯನಶಾಸ್ತ್ರಕ್ಕೆ ಅದರ ಅನ್ವಯಿಸುವಿಕೆಗಳು ಎಂಬ ಪುಸ್ತಕವನ್ನು ಬರೆದರು. ೧೯೩೫ರಲ್ಲಿ ಪಾಲಿಂಗ್ ಜೀವಶಾಸ್ತದಲ್ಲಿ ಆಸಕ್ತಿ ಮೂಡಿದ್ದರಿಂದ ಹಿಮೋಗ್ಲೊಬಿನ್ ಮತ್ತು ಪ್ರೋಟಿನುಗಳ ಮೇಲೆ ಸಂಶೋಧನೆ ಮಾಡಲು ಪ್ರಾರಂಭಿಸಿದರು. ೧೯೪೭ರಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಹೊಸದಾಗಿ ಪ್ರವೇಶಿಸಿದ ವಿದ್ಯಾರ್ಥಿಗಳಿಗಾಗಿ ಸೂಕ್ತವಾದ ರಸಾಯನಶಾಸ್ತ್ರದ ಪುಸ್ತಕವನ್ನು ಬರೆದರು. ಡಾರತಿ ವ್ರಿಂಚಿನ ಮಾದರಿಯು ತಪ್ಪೆಂದು ಮತ್ತು ಅದು ಎಲ್ಲಾ ರಾಸಾಯನಿಕ ತಂತ್ರಜ್ಞಾನಕ್ಕೆ ವಿರುದ್ಧವೆಂದು ಪಾಲಿಂಗ್ ತೋರಿಸಿದರು. ೧೯೪೯ರಲ್ಲಿ ಪಾಲಿಂಗ್ ಕುಡುಗೋಲುಜೀವಕೋಶ ರಕ್ತಹೀನತೆಯ ರೋಗದ ಬಗ್ಗೆ ಲೇಖನವನ್ನು ಬರೆದರು. ಪಾಲಿಪೆಪ್ಟೈಡುಗಳ ಹಾಗೂ ಪ್ರೋಟೀನುಗಳ ರಚನೆಗಳಿಗೆ ಪಾಲಿಂಗ್ ತಮ್ಮದೇ ಆದ ಪೆಪ್ಟೈಡ್ ಬಂಧದ ಸಮತೋಲಿತದ ಆಧಾರಿತ ಸರಪಳಿ ಮಾದರಿಯನ್ನು ಪ್ರಸ್ತಾಪಿಸಿದರು. ೧೯೫೦ರ ಹೊತ್ತಿಗೆ ಪಾಲಿಂಗ್ ಮತ್ತು ಕೊರಿ ಪ್ರೋಟೀನುಗಳ ಆಲ್ಫ ಹೆಲಿಕ್ಸ್ ರಚನೆಯನ್ನು ಬಿಡಿಸಿದರು. ೧೯೫೪ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ನಂತರ, ಅಲ್ಪ ಸಮಯದಲ್ಲಿ ಪಾಲಿಂಗ್ ಮನೋರೋಗದ ಅಣ್ವಿಕ ಆಧಾರದ ಬಗ್ಗೆ ಕಾರ್ಯ ನಡೆಸಿದರು. ಮತ್ತು ವಿಟಮಿನ್ ಬಿ3 ಪ್ರಾಮುಖ್ಯತೆಯನ್ನು ಸ್ಪಷ್ಟ ಪಡಿಸಿದರು. ನ್ಯೂಕ್ಲಿಯಾರ್ ವಿಕಿರಣದ ಅಪಾಯಗಳ ಬಗ್ಗೆ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ಕೊಟ್ಟಿದ್ದರು. ೧೯೫೮ರಲ್ಲಿ ಪಾಲಿಂಗ್ ರಸಾಯನಶಾಸ್ತ್ರ ವಿಭಾಗದ ಚೇರ್ಮನ್ ಪದವಿಗೆ ರಾಜೀನಾಮೆ ನೀಡಿದರು. ಪಾಲಿಂಗ್ ಅಮೆರಿಕನ್ ಕೆಮಿಕಲ್ ಸೊಸೈಟಿಯ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು. ವಿಟಮಿನ್ ಸಿ ಮತ್ತು ಕ್ಯಾನ್ಸರ್ ಬಗ್ಗೆ ಸಂಶೋಧನೆಯನ್ನು ಪ್ರಾರಂಭಿಸಿದರು. ೧೯೭೬ ರಲ್ಲಿ ಅಮೇರಿಕನ್ ಕೆಮಿಕಲ್ ಸೊಸೈಟಿ ತನ್ನ ಶತಮಾನೋತ್ಸವವನ್ನು ಆಚರಿಸಿತು. ೧೯೮೦ರ ದಶಕದಲ್ಲಿ ಪಾಲಿಂಗ್ ಸಂಶೋಧನೆಯಲ್ಲಿ ನಿರತರಾಗಿದ್ದರು. ೧೯೯೧ರಲ್ಲಿ ಅಧಿವಾಹಕತೆಯ ಮೇಲೆ ಲೇಖನವನ್ನು ಬರೆದರು. ೧೯೮೫ರಲ್ಲಿ ಎಕ್ವಸಿ ಸ್ಫಟಿಕಗಳು ಮತ್ತು ಅಧಿವಾಹಕತೆಯ ಮೇಲೆ ಲೇಖನವನ್ನು ಬರೆದರು. ೧೯೯೧ರಲ್ಲಿ ಅವರ ೯೦ನೆ ಜನ್ಮ ದಿನದಂದು ಅಮೇರಿಕದ ರಾಷ್ಟ್ರೀಯ ಸೈನ್ಸಸ್ ಅಕಾಡೆಮಿಯು ಪಾಲಿಂಗ್ ರನ್ನು ಪ್ರಸ್ತುತಿಯಿಂದ ಗೌರವಿಸಿತು.[೫][೬]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

 • ೧೯೩೧ರಲ್ಲಿ ಇರ್ವಿಂಗ್ ಲ್ಯಾಂಗ್ಮುಯಿರ್ ಪ್ರಶಸ್ತಿ, ಅಮೇರಿಕನ್ ಕೆಮಿಕಲ್ ಸೊಸೈಟಿ
 • ೧೯೪೦ರಲ್ಲಿ ನಿಕೋಲಸ್ ಪದಕ,ನ್ಯೂಯಾರ್ಕ್ ವಿಭಾಗ,ಅಮೇರಿಕನ್ ಕೆಮಿಕಲ್ ಸೊಸೈಟಿ
 • ೧೯೪೬ರಲ್ಲಿ ವಿಲ್ಲಾರ್ಡ್ ಗಿಬ್ಸ್ ಪ್ರಶಸ್ತಿ, ಚಿಕಾಗೊ ವಿಭಾಗ,ಅಮೇರಿಕನ್ ಕೆಮಿಕಲ್ ಸೊಸೈಟಿ
 • ೧೯೪೭ರಲ್ಲಿ ಡೇವಿ ಪದಕ,ರೋಯಲ್ ಸೊಸೈಟಿ
 • ೧೯೪೮ರಲ್ಲಿ ಪ್ರೆಸಿಡೆನ್ಸಿಯಲ್ ಪದಕ
 • ೧೯೫೧ರಲ್ಲಿ ಗಿಲ್ಬರ್ಟ್ ಎನ್ ಲೆವಿಸ್ ಪದಕ,ಕ್ಯಾಲಿಫೋರ್ನಿಯ ವಿಭಾಗ
 • ೧೯೫೨ರಲ್ಲಿ ಪಾಶ್ಚರ್ ಪದಕ,ಪ್ರಾನ್ಸ್ ಬೈಯೊ ಕೆಮಿಕಲ್ ಸೊಸೈಟಿ
 • ೧೯೫೪ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ
 • ೧೯೫೫ರಲ್ಲಿ ಅಡ್ಡಿಸ್ ಪದಕ,ರಾಷ್ಟ್ರೀಯ ನೆಫ್ರೋಸಿಸ್ ಫೌಂಡೇಶನ್
 • ೧೯೫೬ರಲ್ಲಿ ಅವಗ್ಯಾಡ್ರೊ ಪದಕ,ಅಕಾಡೆಮಿ ಆಫ್ ಸೈನ್ಸ್
 • ೧೯೫೭ರಲ್ಲಿ ಪೌಲ್ ಸ್ಯಾಬಟಿರ್ ಪದಕ
 • ೧೯೫೭ರಲ್ಲಿ ಗಣಿತಕ್ಕೆ ಪಿಯರೆ ಫೆರ್ಮಾಟ್ ಪದಕ
 • ೧೯೫೭ರಲ್ಲಿ ರಾಷ್ಟ್ರೀಯ ಗ್ರೊಟಿಸ್ ಪದಕ
 • ೧೯೫೯ರಲ್ಲಿ ಮೆಸೆಂಜರ್ ಲೆಕ್ಚರ್ಶಿಪ್
 • ೧೯೬೧ರಲ್ಲಿ ಹ್ಯೂಮಾನಿಷ್ಟ್ ಅಸೋಸಿಯೇಷನ್
 • ೧೯೬೧ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿ,
 • ೧೯೬೨ರಲ್ಲಿ ನೋಬೆಲ್ ಪ್ರಶಸ್ತಿ

ಉಲ್ಲೇಖ[ಬದಲಾಯಿಸಿ]