ವಿಷಯಕ್ಕೆ ಹೋಗು

ಲಲಿತ ಮಹಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಲಿತ ಮಹಲ್
ಲಲಿತ ಮಹಲ್, ಮೈಸೂರು
ಲಲಿತ ಮಹಲ್, ಮೈಸೂರು
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿನವೋದಯ ವಾಸ್ತುಶಿಲ್ಪ
ನಗರಮೈಸೂರು
ದೇಶಭಾರತ
ನಿರ್ದೇಶಾಂಕ12°17′53″N 76°41′35″E / 12.298°N 76.693°E / 12.298; 76.693
ಕಕ್ಷಿಗಾರನಾಲ್ವಡಿ ಕೃಷ್ಣರಾಜ ಒಡೆಯರ್,
Design and construction
ವಾಸ್ತುಶಿಲ್ಪಿಇ.ಡಬ್ಯೂ.ಫ಼್ರಿಚ್ಲೀ

ಲಲಿತ ಮಹಲ್ ಮೈಸೂರಿನ ಅರಮನೆಗಳಲ್ಲಿ ಒಂದು. ಇದು ಮೈಸೂರಿನ ಎರಡನೇ ಅತಿದೊಡ್ಡ ಅರಮನೆ. ಇದು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಎಂಬ ನಗರದ ಪೂರ್ವ ದಿಕ್ಕಿನಲ್ಲಿ ಈ ಮಹಲ್ ಕಂಡು ಬರುತ್ತದೆ. ಇದು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಎಡ ಭಾಗದಲ್ಲಿ ಗೋಚರಿಸುತ್ತದೆ.

ಲಲಿತ ಮಹಲ್ ಮೈಸೂರು ನಗರದಿಂದ ೧೧ ಕಿ.ಮೀ. ದೂರದಲ್ಲಿ ನೆಲೆಗೊಂಡಿದೆ. ಈ ಅರಮನೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಆದೇಶದಂತೆ ೧೯೨೧ರಲ್ಲಿ ನಿರ್ಮಿಸಲಾಯಿತು. ಇದನ್ನು ಮೈಸೂರಿನ ಮಹಾರಾಜರು ಆಗಿನ ಭಾರತದ ವೈಸ್ರಾಯ್'ಗಳಿಗೆ[] ಉಳಿಯಲಿಕ್ಕೆಂದೇ ನಿರ್ಮಿತವಾಯಿತು. ಈ ಅರಮನೆಯನ್ನು ಎತ್ತರದ ಪ್ರದೇಶದ ಮೇಲೆ ಕಟ್ಟಲಾಗಿದ್ದು, ಲಂಡನ್'ನ 'ಸಂತ ಪಾಲ್ಸ್ ಆರಾಧನ ಮಂದಿರ'(ಸಂತ ಪಾಲ್ಸ್ ಕ್ಯಾಥೆಡ್ರಲ್/St. Paul’s Cathedral)ನಲ್ಲಿ ರಚನೆಗೊಂಡ ಸಾಲುಗಳ ವಿನ್ಯಾಸವನ್ನು ಈ ಲಲಿತ ಮಹಲ್ ಅರಮನೆಗೆ ರೂಪಿಸಿದ್ದಾರೆ.[]

ಈ ಅರಮನೆಯನ್ನು ಶುದ್ಧ ಬಿಳಿ ಬಣ್ಣದಿಂದ ಅಲಂಕೃತ ಮಾಡಿದ್ದಾರೆ. ಇದನ್ನು ೧೯೭೪ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಯಿತು.[] ಇದು ಇದೀಗ ಭಾರತ ಸರ್ಕಾರದ ಅಡಿಯಲ್ಲಿ 'ಭಾರತದ ಅಶೋಕ ಗ್ರೂಪ್'ನ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ'ದವರು ಗಣ್ಯ(ಎಲೈಟ್) ಹೋಟೆಲ್'ನ್ನಾಗಿ ನಡೆಸುತ್ತಿದ್ದಾರೆ. ಆದಾಗ್ಯೂ, ಅರಮನೆಯ ಮೂಲ ರಾಜರ ಮೆರುಗಿನ ಪರಿಸರದಲ್ಲಿ ನಿರ್ವಹಿಸುತ್ತಿದ್ದಾರೆ. ಈ ಲಲಿತ ಮಹಲನ್ನು ಮೈಸೂರು ಮಹಾರಾಜರು ತಮ್ಮ ಮುಖ್ಯ ಅತಿಥಿಗಳಿಗೆ ಹಾಗೂ ಅವರ ಆತಿಥ್ಯಕ್ಕೆ ನಿರ್ಮಿಸಿದರು.[]

ಇತಿಹಾಸ

[ಬದಲಾಯಿಸಿ]

ಅರಮನೆಯನ್ನು 20 ನೇ ಶತಮಾನದ ಬ್ರಿಟಿಷ್ ಆಡಳಿತದ ಅಡಿಯಲ್ಲಿ ಮೈಸೂರು ರಾಜ ಸಂಸ್ಥಾನವು ನಿರ್ಮಿಸಲಾಯಿತು. ಮೈಸೂರು ಸಂಸ್ಥಾನ ನಿರ್ವಾಹಕರನ್ನು ಒಂದು "ಮಾದರಿ ರಾಜ್ಯ" ಎಂದು ಬ್ರಿಟಿಷರು ಪತ್ತಿಮಾದಿದ್ದರು. ಮೈಸೂರು ಮಹಾರಾಜರು ಹೈದರಾಬಾದ್ನ ನಿಜಾಮರ ನಂತರ ಅತ್ಯಂತ ಶ್ರೀಮಂತರೆನಿಸಿಕೊಂಡಿದ್ದರು. ಅರಮನೆಯನ್ನು ಒಂದು ಸುಸಂಗತವಾದ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪ ಮಂದಿರವನ್ನಾಗಿ,ಕಡಿಮೆ ಹಣದಲ್ಲಿ ನಿರ್ಮಿಸಲಾಗಿತ್ತು ಮತ್ತು ಅವರ ವಾರ್ಷಿಕ ಆದಾಯದ ಎರಡು ಮಿಲಿಯನ್ ಪೌಂಡ್ ಒಳಗೆ ಮುಗಿದಿತ್ತು .

ಮುಂಚಿನ ಭಾರತ, ಬ್ರಿಟಿಷ್ ಆಡಳಿತದಿಂದ ಕೂಡಿತ್ತು, ಸ್ವತಂತ್ರಗೊಂಡ ನಂತರ ಭಾರತದ ಕರ್ನಾಟಕ ರಾಜ್ಯವು ಒಂದು ಅಸ್ಥಿತ್ವವನ್ನು ಕಂಡಿತು. ನಂತರ ಮೈಸೂರು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್(ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦), ರಾಜ್ಯವನ್ನು ಆಳಲು ಶುರು ಮಾಡಿದರು. ಅವರ ಆಡಳಿತದಲ್ಲಿ ಮೈಸೂರು ನಗರವನ್ನು ರಾಜಧಾನಿಯನ್ನಾಗಿ ಮಾಡಿ, ಒಡೆಯರ್ ಎಂಬ ಶೀರ್ಷಿಕೆಯ ಅಡಿಯಲ್ಲಿ ರಾಜ್ಯವನ್ನು ಆಳಲು ಆರಂಭಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಇಪತ್ನಾಲ್ಕನೇ ರಾಜನಾಗಿ ಒಡೆಯರ್ ವಂಶವನ್ನು ಆಳಿದರು. ಮೈಸೂರು ರಾಜರನ್ನು, ಕಲೆ ಮತ್ತು ವಾಸ್ತುಶಿಲ್ಪದ ಮಹಾನ್ ಪಂಡಿತರೆಂದು ಪರಿಗಣಿಸಲಾಗಿತ್ತು. ಅವರು ತಮ್ಮ ಆಡಳಿತದ ಶೈಲಿಯನ್ನು ಆಡಂಬರದಿಂದ ಮಾಡುತ್ತಿದ್ದರು. ಅವರು ತಮ್ಮ ರಾಜ್ಯದ ವಾಸ್ತುಶಿಲ್ಪದ ಪರಂಪರೆಯನ್ನು ಹೆಚ್ಚಿಸಲು ನಿರ್ಮಿಸಿದ ಸುಂದರ ಸ್ಮಾರಕಗಳಾದ ಅರಮನೆಗಳು, ದೇವಾಲಯಗಳು, ಚರ್ಚ್'ಗಳು, ತೋಟಗಳು ಮತ್ತು ಇತರೆ ಸ್ಮಾರಕಗಳು ಸಾಕ್ಷಿಗಳಾಗಿವೆ. ಲಲಿತ ಮಹಲ್ ಅರಮನೆಯನ್ನು ಆಗಿನ ಭಾರತದ ವೈಸ್ರಾಯ್ ಹಾಗೂ ಮಹಾರಾಜರ ಯುರೋಪಿಯನ್ ಅತಿಥಿಗಳಿಗೆ ಉಳಿಯಲು ಅತಿಥಿ ಗೃಹವೆಂದು ೧೯೨೧ರಲ್ಲಿ ನಿರ್ಮಿಸಲಾಯಿತು.

ವಾಸ್ತುಶಿಲ್ಪ

[ಬದಲಾಯಿಸಿ]

ಲಲಿತ ಮಹಲ್ ಚಾಮುಂಡಿ ಬೆಟ್ಟದ ಅಡಿಯಲ್ಲಿ ನೆಲೆಸಿದೆ. ಲಲಿತ ಮಹಲ್ ಗೃಹಪಂಕ್ತಿಯುಳ್ಳ ವಿಸ್ತಾರವಾದ ತೋಟಗಳ ಮಧ್ಯದಲ್ಲಿದೆ. ಬಾಂಬೆಯಿಂದ (ಈಗ ಮುಂಬಯಿ ಎಂದು ಕರೆಯಲಾಗಿದೆ) ಬಂದಿರುವ ಇ.ಡಬ್ಯೂ.ಫ಼್ರಿಚ್ಲೀ(E.W.Fritchley)ಯು ಲಲಿತ ಮಹಲ್ ಅರಮನೆಯ ಯೋಜನೆಯನ್ನು ಲಂಡನಿನ ಸಂತ ಪಾಲ್ಸ್ ಆರಾಧನಾ ಮಂದಿರ(ಸಂತ ಪಾಲ್ಸ್ ಕ್ಯಾಥೆಡ್ರಲ್)ನಿನ ವಾಸ್ತುಶಿಲ್ಪದ ಶೈಲಿಯ ತರಹ ರೂಪಿಸಲಾಗಿದೆ. ಇದನ್ನು ಬಿ.ಮುನಿವೆಂಕಟಪ್ಪನವರು ಈ ಅರಮನೆಯನ್ನು ನಿರ್ಮಾಣ ಮಾಡಿದರು. ಲಂಡನಿನ ಸಂತ ಪಾಲ್ಸ್ ಕ್ಯಾಥೆಡ್ರಲ್'ನಲ್ಲಿರುವ ಕೇಂದ್ರ ಗುಮ್ಮಟವನ್ನು ವಿಶೇಷವಾಗಿ ಲಲಿತ ಮಹಲ್ ಅರಮನೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಈ ಅರಮನೆಯ ವಾಸ್ತುಶಿಲ್ಪವು ಇಂಗ್ಲೀಷ್ ಮೇನರ್ ಮನೆ[](ದೇಶದ ಒಂದು ದೊಡ್ಡ ಮನೆ ಎಂದರ್ಥ. ಐತಿಹಾಸಿಕವಾಗಿ ಇದು ಮೇನರ್'ನ ವಾಸದ ಮನೆಯಾಗಿರುತ್ತದೆ) ಮತ್ತು ಇಟಾಲಿಯನ್ ಪಲಾಜ಼ೋವನ್ನು ಪ್ರತಿಬಿಂಬಿಸುತ್ತಿದೆ. (ಇಟಾಲಿಯನ್ ಪಲಾಜ಼ೋ - ಪಲಾಜ಼ೋ ಶೈಲಿಯು, ಪಲಾಜ಼ಿ(ಅರಮನೆಗಳು) ಎಂಬ ವಾಸ್ತುಶಿಲ್ಪದ ಆಧಾರಿತವಾಗಿ ೧೯ ಮತ್ತು ೨೦ನೇ ಶತಮಾನದಲ್ಲಿ ನವೋದಯದ ಇಟಾಲಿಯನ್ ಶ್ರೀಮಂತ ಕುಟುಂಬಗಳು ಈ ಶೈಲಿಯ ಮನೆ ಅಥವಾ ಅರಮನೆಗಳನ್ನು ನಿರ್ಮಿಸುತ್ತಿದ್ದರು) ಲಲಿತ ಮಹಲ್ ಅರಮನೆಯು ಎರಡು ಅಂತಸ್ತಿನ ಅರಮನೆಯಾಗಿದೆ. ಈ ಅರಮನೆಗೆ ಅಯಾನಿನ ಜೋಡಿ ಕಂಬಗಳು(ಐಯೋನಿಕ್ ಡಬಲ್ ಕಾಲಂ) ಆಧಾರ ಸ್ತಂಭವಾಗಿದೆ. ಅರಮನೆಯು ನೆಲಮಟ್ಟದಿಂದ ವಿಸ್ತಾರವಾಗಿರುವ ದ್ವಾರಮಂಟಪವನ್ನು ಹೊಂದಿದೆ. ಗೋಳಾಕಾರದ ಗುಮ್ಮಟಗಳು ಅರಮನೆಗೆ ಹೆಚ್ಚಿನ ಮೆರುಗನ್ನು ಕೊಡುತ್ತವೆ ಮತ್ತು ಗುಮ್ಮಟಗಳ ಮಧ್ಯದಲ್ಲಿ ತೂಗುದೀಪಗಳನ್ನು ಅಳವಡಿಸಿದ್ದಾರೆ. ಕೇಂದ್ರ ಗುಮ್ಮಟವು ಎತ್ತರವಾಗಿ ಮತ್ತು ಪ್ರಧಾನವಾಗಿದೆ. ಅರಮನೆಯ ಮುಂಭಾಗದ ನೋಟಗಳು ಹಾಗೂ ಒಳಾಂಗಣದ ಬಾಗಿಲುಗಳು, ಕಿಟಕಿಗಳು ಮತ್ತು ಮೇಲ್ಚಾವಣಿಗಳನ್ನು, ಅದಕ್ಕೆ ಒಪ್ಪುವಂತಹ ಬಣ್ಣದ ಗಾಜಿನಿಂದ ಅಲಂಕೃತಗೊಳಿಸಿದ್ದಾರೆ. ಚಾಮುಂಡಿ ಬೆಟ್ಟವು ಅರಮನೆಯ ಎಡಭಾಗದಲ್ಲಿ ಕಣ್ಣು ಸೆಳೆಯುತ್ತವೆ. ಅರಮನೆಯ ವರಂಡಾದಲ್ಲಿ ನಿಂತು ಎದುರಿಗೆ ನೋಡಿದಾಗ ಮೈಸೂರಿನ ನಗರವು ಕಂಡು ಬರುತ್ತದೆ.

ಗೋಳಾಕಾರದ ಗುಮ್ಮಟಗಳು

[]

ಗಾಜಿನ ಗುಮ್ಮಟಗಳು

ಈ ಅರಮನೆಯಲ್ಲಿ ವೈಸ್ರಾಯ್ ಕೊಠಡಿ, ಔತಣಂಗಣ ಹಾಗೂ ನೃತ್ಯ ಮಂಟಪವನ್ನು ಕಾಣಬಹುದಾಗಿದೆ. ಮೆಟ್ಟಿಲುಗಳನ್ನು ಇಟಾಲಿಯನ್ ಶೈಲಿಅಮೃತಶಿಲೆ ಕಲ್ಲಿನ ಬಳಿಕೆಯಿಂದ ಕಟ್ಟಲಾಗಿದೆ. ಈ ಮೆಟ್ಟಿಲು ತಿರುವು ರೀತಿಯಲ್ಲಿದೆ. ಅರಮನೆಯ ಸಣ್ಣ ಅಲಂಕಾರಿಕ ಸಾಮಗ್ರಿಗಳು ಬ್ರಿಟನಿನ ವಿವಿಧ ಅರಮನೆಗಳಿಂದ ಪ್ರತಿಕೃತಿಯಾಗಿದೆ. ಒಡೆಯರ್ ಪರಂಪರೆಯ ಪೂರ್ಣ ಭಾವಚಿತ್ರಗಳು, ಬ್ರಿಟಿಷರೊಂದಿಗೆ ಟಿಪ್ಪು ಸುಲ್ತಾನಿನ ಕದನಗಳ ಶಿಲಾಮುದ್ರಣಗಳು, ಅರಮನೆಯ ಗೋಡೆಗಳಲ್ಲಿ ಹಾಗೂ ಛಾವಣಿಗಳಲ್ಲಿ ತುಂಬಿದ ಚಿತ್ರ ಕಲೆಗಳು, ಇಟಾಲಿಯನ್ ಅಮೃತಶಿಲೆಯ ಮಹಡಿಗಳು, ಬೆಲ್ಜಿಯನ್ ಹರಳಿನ ತೂಗುದೀಪಗಳು, ಗಾಜಿನ ದೀಪಗಳು, ವಿಧ ವಿಧದ ಪೀಠೋಪಕರಣಗಳು ಹಾಗೂ ಬೀಟೆ ಮರದ ಪೀಠೋಪಕರಣಗಳು, ಕೆತ್ತಿದ ಮರದ ಕಪಾಟುಗಳು ಹಾಗೂ ಗೋಡೆಯ ಫಲಕಗಳು, ಮೊಸೈಕ್ ಟೈಲ್ಸ್'ಗಳು(ವಿವಿಧ ಬಣ್ಣದ ಸಣ್ಣ ಗಾಜಿರುವ ಕಲ್ಲಿನ ಚೂರಗಳನ್ನು ಜೋಡಿಸಿ ಮಾಡಿದ ಟೈಲ್ಸ್), ಆಕರ್ಷಕವಾದ ಪರ್ಶಿಯನ್ ರತ್ನಗಂಬಳಿಗಳು, ಇವೆಲ್ಲವೂ ಅರಮನೆಗೆ ರಾಜವೈಭವದ ಕಳೆಯನ್ನು ಕೊಡುತ್ತದೆ. ಅರಮನೆಯು ಪಾರಂಪರಿಕ ಹೋಟೆಲಾಗಿ ಪರಿವರ್ತನೆಗೊಂಡ ನಂತರ, ಅರಮನೆಯ ಕೆಲವು ಭಾಗಗಳನ್ನು ಅನುಕೂಲಕ್ಕೆ ತಕ್ಕಂತೆ ಬದಾಲಾವಣೆಯನ್ನು ಮಾಡಲಾಗಿತ್ತು. ಆದರೆ ಸುಮಾರು ಭಾಗಗಳನ್ನು, ಬದಲಾಯಿಸದೇ ಮೊದಲಿನ ಹಾಗೆಯೇ ಬಿಟ್ಟಿದ್ದಾರೆ. ಅವುಗಳಲ್ಲಿ, ನೃತ್ಯಮಂಟಪ ಹಾಗೂ ಔತಣಂಗಣವನ್ನು ಸಭೆ ಮತ್ತು ಸಮಾರಂಭಗಳನ್ನು ನಡೆಸುವುದಕ್ಕೆ ಅವನ್ನು ಬಳಸುತ್ತಿದ್ದಾರೆ. ಅರಮನೆಯಲ್ಲಿರುವ ನೆಲಕ್ಕೆ ನಯಗೊಳಿಸಿದ(ಪಾಲಿಶ್) ಮರ/ಕಟ್ಟಿಗೆಯನ್ನು ಬಳಿಕೆ ಮಾಡಿದ್ದಾರೆ ಮತ್ತು ಗುಮ್ಮಟದ ಒಳಮಾಳಿಗೆ(ಒಳಪದರ)ವನ್ನು ಮೂರು ಬಣ್ಣದ ಗಾಜಿನಿಂದ ಅಲಂಕೃತಗೊಳಿಸಿದ್ದಾರೆ. ವೃತ್ತಾಕಾರದ ಕೊಠಡಿಯನ್ನು ಈಗಿನ ಹೋಟೆಲಿನ ಭೋಜನ ಗೃಹವನ್ನಾಗಿ ಪರಿವರ್ತನೆ ಮಾಡಿದ್ದಾರೆ. ಆ ವೃತ್ತಾಕಾರದ ಕೊಠಡಿಯು ಬರೋಕ್ ಹಾಲ್ ಎಂಬುದಾಗಿತ್ತು, ಬೆಲ್ಜಿಯನ್ ಗಾಜಿನಿಂದ ಮಾಡಿದ ಆಕಾಶದೀಪವನ್ನು ಗುಮ್ಮಟದ ಒಳಮಾಳಿಗೆಗೆ ವೈಭವದಿಂದ ಕಾಣುವ ಹಾಗೆ ಅಲಂಕೃತಗೊಳಿಸಿದ್ಧಾರೆ.

ಅರಮನೆಯ ಸಭಾಂಗಣ
ವೃತ್ತಾಕಾರದ ಕೊಠಡಿಯನ್ನು ಈಗಿನ ಹೋಟೆಲಿನ ಭೋಜನ ಗೃಹವನ್ನಾಗಿ ಪರಿವರ್ತನೆ ಮಾಡಿದ್ದಾರೆ

ಸೌಕರ್ಯ

[ಬದಲಾಯಿಸಿ]

ಲಲಿತ ಮಹಲ್ ಹೋಟೆಲಿನ ಅವಶ್ಯಕತೆಗೆ ತಕ್ಕಂತೆ ಒಳಾಂಗಣವನ್ನು ತಮ್ಮ ಅನೂಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡರು. ಆದಾಗ್ಯೂ, ಹಳೆಯ ನೆಲವಸ್ತುಗಳು ಹಾಗೂ ಪೀಠೋಪಕರಣಗಳು, ಲಿಫ್ಟ್'ಗಳು, ಭಾವಚಿತ್ರಗಳು, ಇವೆಲ್ಲವೂಗಳನ್ನು ಜಾಗೃತೆಯಿಂದ ನಿರ್ವಹಿಸುತ್ತಿದ್ದಾರೆ. ವಿಶಾಲವಾದ ಉದ್ಯಾನವನ್ನು ಆರೈಕೆ ಮಾಡಲು ಕಷ್ಟವಾದ್ದರಿಂದ, ಅದನ್ನು ಚಿಕ್ಕದಾಗಿ ಮಾಡಿ ಆದರಲ್ಲಿ ಕಾರಂಜಿ ಹಾಗೂ ವಾಹನ ನಿಲುಗಡೆಗೆ ಸೌಕರ್ಯ ನೀಡಿ, ಅದನ್ನು ಚೆನ್ನಾಗಿ ಆರೈಕೆ ಮಾಡುತ್ತಿದ್ದಾರೆ. ಅರಮನೆಯ ಆಚೆ ಇರುವ ಹುಲ್ಲುಹಾಸಿಗೆಯಲ್ಲಿ(ಲಾನ್) ಸಂಜೆಯ ಹೊತ್ತಿನಲ್ಲಿ ಚಹಾ ಕುಡಿಯಲು ಅಥವಾ ಸಣ್ಣ ಸಮಾರಂಭಗಳನ್ನು(ಕಾಕ್ಟೇಲ್ ಪಾರ್ಟಿ) ನಡೆಸುವ ವ್ಯವಸ್ಥೆ ಮಾಡಿದ್ದಾರೆ. ಈ ಹೋಟೆಲ್'ನಲ್ಲಿ ಈಜುಕೊಳವಿದ್ದು, ಈ ಈಜುಕೊಳವು ಒಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅರಮನೆಯ ಲಿಫ್ಟ್, ರತ್ನಗಂಬಳಿಗಳು ಹಾಗೂ ಒಟ್ಟೋಮನ್ (ಇದು ರಥ/ಕುದುರೆ ಗಾಡಿಯಲ್ಲಿ ಇರಿಸಿದ ಒಂದು ಬಗೆಯ ಆಸನ. ಇದನ್ನು ರಾಜರು ಕುಳಿತುಕೊಳ್ಳಲು ಬಳಸುತ್ತಿದ್ದರು. ಇದು ದಪ್ಪನೆಯ ಹಾಸಿಗೆ ಅಥವ ಬಟ್ಟೆಯಿಂದ ನೆಯ್ದಿರುವ ಆಸನವಾಗಿದೆ.) ಇವೆಲ್ಲವೂ ಅರಮನೆಯ ಅತ್ಯಮೂಲ್ಯವಾದ ವಸ್ತುಗಳಾಗಿವೆ.

ಒಟ್ಟೋಮನ್/ಕುದುರೆ ಗಾಡಿ

ಅರಮನೆಯ ಸುಮಾರು ವಸ್ತುಗಳು ಈಗಿನ ಹೋಟೆಲ್'ನಲ್ಲಿ ಉಪಯುಕ್ತವಾಗಿವೆ. ಹಳೆಯ ಪೀಠೋಪಕರಣಗಳಾದ ಮೇಲಾವರಣ ಮಂಚ/ಹಾಸಿಗೆ(ಪೋಸ್ಟರ್ ಬೆಡ್), ಮರದ ಕೆತ್ತನೆಯಿಂದ ಮಾಡಲ್ಪಟ್ಟ ಕಪಾಟುಗಳು, ಮಕಮಲ್ಲಿನ ಆರಾಮ್ ಚೇರುಗಳು ಮತ್ತು ಸ್ವರ್ಣಲೇಪದ ಬೆಲ್ಜಿಯನ್ ಕನ್ನಡಿಗಳನ್ನು, ಇಂದಿಗೂ ಸಹ ಅಲ್ಲಿ ಬಳಿಕೆಯಲ್ಲಿ ಇದೆ. ಇಡೀ ಅರಮನೆಯನ್ನು ಎಲ್ಲಾ ರೀತಿಯಲ್ಲೂ ಚೆನ್ನಾಗಿ ಹಾಗೂ ವಿಜೃಂಬಣೆಯಿಂದ ನೋಡಿಕೊಂಡು ಹೋಗುತ್ತಿದ್ದಾರೆ.

ಅರಮನೆಯ ಸಮೀಪದಲ್ಲಿರುವ ಹೆಲಿಪ್ಯಾಡ್, ಗಣ್ಯವ್ಯಕ್ತಿಗಳಿಗೆ ಹೆಲಿಕಾಪ್ಟರ್'ನಲ್ಲಿ ಹೋಗಿಬರಲ್ಲಿಕ್ಕೆ ಅನುಕೂಲವಾಗಿದೆ.

ಹೋಟೆಲ್ಲಿನ ಅನುಭವ

[ಬದಲಾಯಿಸಿ]

ಹೋಟೆಲ್ಲಿನ ಅನುಭವವು ರಾಜನ ಅನುಭವವನ್ನು ನೀಡುತ್ತದೆ. ರಾಜನಿಗೆ ಹೇಗೆ ಸೌಕರ್ಯ ಸಿಗುತ್ತಿತ್ತೋ ಹಾಗೆಯೇ ಅಲ್ಲಿ ಉಳಿದಕೊಂಡವರಿಗೆ ಸಿಗುತ್ತದೆ. ರಾಜ ಅತಿಥಿಗಳಿಗೆ ಮೀಸಲಾದ ಈ ಅರಮನೆ ಈಗ ಸರ್ಕಾರದ "ಭಾರತ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ" (ಐ.ಟಿ.ಡಿ.ಸಿ)ಯವರು ಪಂಚತಾರ ಹೋಟೆಲ್ಲಾಗಿ ಪರಿವರ್ತಿಸಿದ್ದಾರೆ. ಲಲಿತ ಮಹಲ್ ಈಗ ಭಾರತದ ಭವ್ಯವಾದ ಹೋಟೆಲ್'ಗಳಲ್ಲಿ ಒಂದಾಗಿದೆ. ಈ ಹೋಟೆಲ್'ನಲ್ಲಿ ಅತಿಥಿಗಳಿಗೆ ರಾಜನ ಅನುಭವವನ್ನು ಉಂಟು ಮಾಡಿದೆ. ಅಲ್ಲಿಗೆ ಬಂದ ಅತಿಥಿಗಳು, ಲಲಿತ ಮಹಲ್ ಹಾಗೂ ಅದರ ಹಿನ್ನಲೆ ದೃಶ್ಯವಾದ ಚಾಮುಂಡಿ ಬೆಟ್ಟವು ಅವರಿಗೆ ಸಂತೋಷವನ್ನು ಉಂಟು ಮಾಡಿದೆ. ಅಲ್ಲಿಯ ಊಟದ ಅನುಭವವೇ ಹೆಚ್ಚು ಸಂತಸ ನೀಡಿದೆ ಎಂದು ಜನರ ಅಭಿಪ್ರಾಯವಾಗಿದೆ.

ಸ್ಥಳ(ಲೊಕೇಷನ್)

[ಬದಲಾಯಿಸಿ]

ಲಲಿತ ಮಹಲ್ ಅರಮನೆಯು ಮೈಸೂರು ನಗರದಿಂದ ೧೧ ಕಿ.ಮೀ. ಇದೆ. ಮೈಸೂರು ವಿಮಾನ ನಿಲ್ದಾಣದಿಂದ ೧೫ ಕಿ.ಮೀ. ಹಾಗೂ ಮೈಸೂರು ರೈಲ್ವೆ ನಿಲ್ದಾಣದಿಂದ ೮ ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ೧೫೦ ಕಿ.ಮೀ., ಮಡಿಕೇರಿಯಿಂದ ೧೩೦ ಕಿ.ಮೀ., ಕೊಡಗಿನಿಂದ ೧೨೦ ಕಿ.ಮೀ., ಊಟಿಯಿಂದ ೧೬೦ ಕಿ.ಮೀ.ಗಳು ದೂರದಲ್ಲಿದೆ .

ಲಲಿತ ಮಹಲ್ ಹೋಟೆಲ್'ನಲ್ಲಿ ೫೪ ಕೊಠಡಿಗಳ ವ್ಯವಸ್ಥೆ ಇದೆ. ಅದರಲ್ಲಿ ಡಿಲಕ್ಸ್ ಕೊಠಡಿಗಳು, ಡ್ಯುಪ್ಲೆ‍‍ಕ್ಸ್ ಕೊಠಡಿಗಳು, ವೈಸ್ರಾಯ್ ಕೊಠಡಿಗಳು, ತಿರುಗು ಗೋಪುರದ(ಟರೆಟ್) ಕೊಠಡಿಗಳು, ಪಾರಂಪರಿಕವಾದ ಕೊಠಡಿಗಳು. ಇಷ್ಟು ರೀತಿಯ ಕೊಠಡಿಗಳ ವ್ಯವಸ್ಥೆ ಇದೆ.

ಉಪಾಹಾರ ಗೃಹ(ರೆಸ್ಟೋರೆಂಟ್)

[ಬದಲಾಯಿಸಿ]

ವೈವಿದ್ಯಮಯ ಅಡುಗೆಯ ಬಗೆಯುಳ್ಳ ರೆಸ್ಟೋರೆಂಟ್, ವಾದ್ಯ ಸಂಗೀತದ ನೇರಪ್ರಸಾರದಲ್ಲಿ ಊಟದ ವ್ಯವಸ್ಥೆ(ಮಧ್ಯಾಹ್ನ ಮತ್ತು ರಾತ್ರಿ ಊಟ) ಹಾಗೂ ವಾರಾಂತ್ಯದಲ್ಲಿ ಬಫ಼ೆಟ್ ಊಟದ ವ್ಯವಸ್ಥೆ ಇರುವುದಾಗಿದೆ.

ಸೌಲಭ್ಯಗಳು

[ಬದಲಾಯಿಸಿ]

ಸಭೆ, ಸಮಾರಂಭ ಹಾಗು ಔತಣಕೂಟದ ಸೌಲಭ್ಯಗಳು - ೨೦೦ ಸಭಾಂಗಣದಷ್ಟು ಸಾಮರ್ಥ್ಯವಿರುವ ಒಂದು ದೊಡ್ಡ "ಔತಣಂಗಣ"ವಿದೆ. ೮೦ ರಷ್ಟು ಜನರ ಸಾಮರ್ಥ್ಯದ ದೊಡ್ಡದಾದ ಸಮಾವೇಶ ಭವನ(ಕಾನ್ಫೆರೆನ್ಸ್ ಹಾಲ್) ಇದೆ. ೧೦೦೦ ಜನರ ಸಾಮರ್ಥ್ಯದ ದೊಡ್ಡ ಈಜುಕೊಳವಿದೆ. ೨೦೦೦ ದಷ್ಟು ಹುಲ್ಲು ಹಾಸಿಗೆ ಇದೆ. ರಾಜವೈಭವದ ಮದುವೆಯ ಕಂತೆ(ರಾಯಲ್ ವೆಡ್ಡಿಂಗ್ ಪ್ಯಾಕೆಜ್)ಗಳು ಸಹ ಲಭ್ಯವಿದೆ.

ಬಿಲಿಯರ್ಡ್ಸ್ ಕೊಠಡಿ

ಹೋಟೆಲಿನ ಸೌಲಭ್ಯಗಳು - ಸುಮಾರು ಕೊಠಡಿಗಳಿಗೆ ವರಾಂಡದ ಸೌಲಭ್ಯವಿದೆ. ಆಟವಾಡಲು ಕೊಠಡಿ ಹಾಗೂ ಮೈದಾನಗಳ ವ್ಯವಸ್ಥೆ ಇದೆ. ಅವುಗಳಲ್ಲಿ ಬಿಲಿಯರ್ಡ್ಸ್ ಆಟದ ಕೊಠಡಿ, ಟೆನ್ನಿಸ್ ಮೈದಾನ, ಚದುರಂಗ, ಓಟದ ಮೈದಾನ(ಜಾಗಿಂಗ್), ಮುಂತಾದವು. ಅಂತರಜಾಲ(ಬ್ರಾಡ್'ಬ್ಯಾಂಡ್ ಇಂಟರ್'ನೆಟ್)ದ ಸೌಲಭ್ಯ, ವೈ-ಫ಼ೈ ಸೌಲಭ್ಯ, ಕೊಠಡಿಯಲ್ಲೇ ಟೀ/ಕಾಫಿ ತಯಾರಿಸುವ ಯಂತ್ರದ ಸೌಲಭ್ಯ, ಮಾಹಿತಿಯ ಕೊಠಡಿ(ಇನ್ಫೊಮೇಷನ್ ಡೆಸ್ಕ್), ಒಳಾಂಗಣ ಆಟಗಳು, ಬೇಬಿ ಸಿಟ್ಟಿಂಗ್, ಸೇವಕರ ಸಹಾಯ(ಮನವಿ ಮಾಡಿದ್ದಲ್ಲಿ ಮಾತ್ರ), ಬಹುಭಾಷಿಕ ಸಿಬ್ಬಂದಿಯ ಸೌಲಭ್ಯ, ಪ್ರಯಾಣ ಸೇವೆ, ಓಡಾಡಲು ಕಾರಿನ(ಬಾಡಿಗೆ) ವ್ಯವಸ್ಥೆ, ವೈದ್ಯರ ಸೌಲಭ್ಯ, ಹಣ ವಿನಿಮಯ ಸೌಲಭ್ಯ, ಲಾಕರ್ ಸೌಲಭ್ಯ, ಖಾಸಗಿ ಪಾರ್ಕಿಂಗ್'ನ ಸೌಲಭ್ಯ, ಅಂಚೆಯ ಸೇವೆ, ವ್ಯಾಪಾರ ಕೇಂದ್ರದ ಸೌಲಭ್ಯ, ಧೋಬಿ ಹಾಗೂ ಅಜಲಧಾವನ(ಡ್ರೈ ಕ್ಲೀನಿಂಗ್) ಸೌಲಭ್ಯ, ಕೊಠಡಿಗಳ ಸೇವೆ ಸೌಲಭ್ಯವಿದೆ. ಇವೆಲ್ಲವೂ ಲಲಿತ ಮಹಲ್ ಹೋಟೆಲಿನ ಸೌಲಭ್ಯಗಳು.

ವಿಶೇಷತೆ

[ಬದಲಾಯಿಸಿ]

ಲಲಿತ ಮಹಲ್ ಅರಮನೆ ಹಾಗು ಹೋಟೆಲಿನ ವಿಶೇಷತೆಗಳೆಂದರೆ, ಗಣ್ಯವ್ಯಕ್ತಿಗಳ ಅದ್ದೂರಿಯಾದ ಮದುವೆ ಸಮಾರಂಭಗಳು ನಡೆದಿವೆ ಹಾಗೂ ನಡೆಯುತ್ತಿರುತ್ತವೆ. ಗಣ್ಯವ್ಯಕ್ತಿಗಳ ಹಾಗೂ ಸಚಿವರ ಸಭೆ, ಸಮಾರಂಭಗಳು ನಡೆಯುತ್ತಿರುತ್ತವೆ. ಚಲನಚಿತ್ರ ಹಾಗೂ ಧಾರಾವಾಹಿಗಳ ಛಾಯಗ್ರಹಣವನ್ನು ಇಲ್ಲಿ ಮಾಡುತ್ತಾರೆ. ಅರಮನೆಯ ಸಮೀಪದಲ್ಲಿರುವ ಹೆಲಿಪ್ಯಾಡ್'ನಲ್ಲಿ ನೂರಕ್ಕಿಂತ ಹೆಚ್ಚಿನ ಚಿತ್ರಗಳ ಛಾಯಗ್ರಹಣವನ್ನು ಮಾಡಿದ್ದಾರೆ. ಈ ಅರಮನೆಯು ಛಾಯಗ್ರಹಣಕ್ಕೆಂದೇ ಪ್ರಾಮುಖ್ಯತೆಯನ್ನು ಕಂಡುಕೊಂಡಿದೆ. ಹಳೆಯ ಹಿಂದಿ ಹಾಗು ಕನ್ನಡ ಸಿನೆಮಾಗಳನ್ನು ಇಲ್ಲಿಯೇ ಚಿತ್ರಿಕರಿಸಲಾಗಿದೆ.

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ಆರ್ಕೈವ್ ನಕಲು". Archived from the original on 2016-06-17. Retrieved 2016-09-19.
  2. "ಆರ್ಕೈವ್ ನಕಲು". Archived from the original on 2018-05-10. Retrieved 2016-09-19.
  3. "ಆರ್ಕೈವ್ ನಕಲು". Archived from the original on 2016-09-18. Retrieved 2016-09-19.
  4. https://en.wikipedia.org/wiki/Manor_house
  5. http://www.mysore.org.uk/royal-buildings/lalith-mahal-palace.html