ಲಕ್ಷ್ಮಿಬಾಯಿ ಕೇಳಕರ
ಲಕ್ಷ್ಮಿಬಾಯಿ ಕೇಳಕರ | |
---|---|
Born | ಕಮಲ ಜುಲೈ ೬, ೧೯೦೫ ನಾಗಪುರ |
Died | ನವೆಂಬರ ೨೭, ೧೯೭೮ |
Organization | ರಾಷ್ಟ್ರ ಸೇವಿಕಾ ಸಮಿತಿ |
ಲಕ್ಷ್ಮಿಬಾಯಿ ಕೇಳಕರ (೬ ಜುಲೈ ೧೯೦೫ - ೨೭ ನವೆಂಬರ ೧೯೭೮) ಇವರು ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಿದವರು. ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆ ೧೯೩೬ ವಿಜಯ ದಶಮಿಯಂದಾಯಿತು.[೧] ಲಕ್ಷ್ಮಿಬಾಯಿ ಕೇಳಕರವರನ್ನು ಸಮಿತಿಯ ಸದಸ್ಯರು ವಾತ್ಸಲ್ಯದಿಂದ ಮೌಶಿಜೀಯೆಂದು ಕರೆಯುತ್ತಿದ್ದರು. ಭಾರತೀಯ ಸಂಸ್ಕೃತಿ, ಮೌಲ್ಯ, ಸಂಸ್ಕಾರಗಳು ಹಾಗೂ ರಾಷ್ಟ್ರೀಯತೆಯನ್ನು ಹೆಣ್ಣುಮಕ್ಕಳಲ್ಲಿ ಜಾಗ್ರತಿಸುವುದು, ಅವರಲ್ಲಿ ಧೈರ್ಯ, ನಿಷ್ಟೆ, ಸ್ವಾವಲಂಬನೆ ಮತ್ತು ಆದ್ಯಾತ್ಮಿಕ ಭಾವನೆಯ ಮೂಲಕ ತೇಜಸ್ವಿ ಹಿಂದೂ ರಾಷ್ಟ್ರದ ನಿರ್ಮಾಣವನ್ನು ಧ್ಯೇಯವಾಗಿಟ್ಟು ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆ ಲಕ್ಷ್ಮಿಬಾಯಿ ಕೇಳಕರವರು ಮಾಡಿದರು.[೨]
ಜನನ
[ಬದಲಾಯಿಸಿ]ರಾಷ್ಟ್ರ ಸೇವಿಕಾ ಸಮಿತಿಯ ಸಂಸ್ಥಾಪಕರು ಹಾಗು ಪ್ರಮುಖ ಸಂಚಾಲಿಕರಾದ ಲಕ್ಷ್ಮಿಬಾಯಿ ಕೇಳಕರವರ ಜನನ ನಾಗಪುರದ ದಾತೆ ಕುಟುಂಬದಲ್ಲಾಯಿತು. ಆಷಾಢಮಾಸ ಶುಕ್ಲ ಪಕ್ಷ ದಶಮಿ ಅಂದರೆ ೬ ಜುಲೈ ೧೯೦೫ ರಂದು ಲಕ್ಷ್ಮಿಬಾಯಿರವರ ಜನನವಾಯಿತು. ಅವರ ಜನ್ಮ ಹೆಸರು ಕಮಲ. ಲಕ್ಷ್ಮಿಬಾಯಿ ಕೇಳಕರವರ ತಂದೆ ಭಾಸ್ಕರ್ ರಾವ್ ದಾತೆ, ಸರಕಾರಿ ಹುದ್ದೆಯಲ್ಲಿ ಸೇವೆಸಲ್ಲಿಸುತ್ತಿದ್ದರು ಮತ್ತು ತಾಯಿ ಯಶೋದಾಬಾಯಿ ಗೃಹಿಣಿಯಾಗಿದ್ದರು. ಆಗಿನ ಬ್ರಿಟಿಷ್ ಆಳವಿಕೆಯ ಸಮಯದಲ್ಲಿ ಸರಕಾರಿ ಹುದ್ದೆಯಲ್ಲಿರುವರು ಕೇಸರಿ ಪತ್ರಿಕೆಯನ್ನು ಕೊಳ್ಳುವುದು ದೇಶದ್ರೋಹವೆಂದು ಅನಿಸಿಕೊಳ್ಳಲಾಗುತಿತ್ತು. ಆದರೆ ಲಕ್ಷ್ಮಿಬಾಯಿ ಕೇಳಕರವರ ತಾಯಿ ಯಶೋದಾಬಾಯಿಯವರು ಕೇಸರಿ ಪತ್ರಿಕೆಯನ್ನು ತಾವೇ ಕೊಳ್ಳುವುದಲ್ಲದೇ ಅವರ ಸಹೋದರಿಯರಿಗೆ ಅದನ್ನು ಓದಿ ಹೇಳುತ್ತಿದ್ದರು. [೩] ಬಾಲ್ಯದಿಂದಲೇ ಕಮಲ ಎಂದರೆ ಲಕ್ಷ್ಮಿಬಾಯಿ ಕೇಳಕರವರಿಗೆ ಧೈರ್ಯ, ದೇಶ ಪ್ರೇಮ,ಬೆದರಿಸದ ಸ್ವಭಾವ ಅವರ ತಾಯಿಂದ ದೊರಕಿತು. ಬಾಲ್ಯದಿಂದಲೇ ದೇಶ ಭಕ್ತಿಗೀತೆ, ಹಿಂದು ನಾಯಕ ನಾಯಕಿಯರ ವೀರಕಥೆ, ಪೌರಾಣಿಕ ಕಥೆಗಳ ಪರಿಚಯ ಇವರಿಗಾಯಿತು.
ಶಿಕ್ಷಣ
[ಬದಲಾಯಿಸಿ]ಲಕ್ಷ್ಮಿಬಾಯಿ ಕೇಳಕರವರು ವಾರದಾದಲ್ಲಿ ಅವರ ಮನೆಯ ಹತ್ತಿರದ ಮಿಷನರಿ ಶಾಲೆಯಲ್ಲಿ ಕಲಿಯುತ್ತಿದ್ದರು. ಶಾಲಾ ಪ್ರಾರ್ಥನೆಯಲ್ಲಿ ಹಿಂದು ದೇವರ ಪ್ರಾರ್ಥನೆಯಿಲ್ಲವೆಂದು ಲಕ್ಷ್ಮಿಬಾಯಿ ಕೇಳಕರವರಿಗೆ ಸಮಾಧಾನವಿರಲಿಲ್ಲ. ಈ ಕಾರಣಕ್ಕಾಗಿ ಅವರು ಶಾಲೆಗೆ ಹೋಗುವುದನ್ನು ಬಿಟ್ಟರು.[೪] ಕೆಲವು ವರಷಗಳ ನಂತರ ಬಾಲಕೀಯರ ಹಿಂದು ಶಾಲೆ ವಾರ್ಧಾದಲ್ಲಿ ತೆರೆದ ನಂತರ ಲಕ್ಷ್ಮಿಬಾಯಿ ಕೇಳಕರವರನ್ನು ಅಲ್ಲಿ ಸೇರಿಸಿದರು. ಆದರೆ ಕಾರಣಾಂತರಗಳಿಂದಾಗಿ ಅವರು ಮುಂದೆ ಓದಲಿಲ್ಲ. ಶಿಕ್ಷಣದ ಕೊರತೆಯಿಂದ ಅವರ ಓದುವ ಅಭಿರುಚಿ ಕಡಿಮೆಯಾಗಲಿಲ್ಲ. ಲಕ್ಷ್ಮಿಬಾಯಿ ಕೇಳಕರವರ ಓದುವ ಅಭ್ಯಾಸದಿಂದ ಭಾರತೀಯ ಪ್ರಾಚಿನತೆ, ಭಾರತದ ಇತಿಹಾಸ, ಭೌಗೋಳಿಕ ಜ್ಞ್ಯಾನ, ಭಾರತೀಯ ಸಾಂಸ್ಕೃತಿಕದ ಪರಿಚಯ, ಆರ್ಥಿಕ ಜ್ಞ್ಯಾನ, ಆಡಳಿತದ ಶಾಸ್ತ್ರದ ಸಂಪೂರ್ಣ ಶಿಕ್ಷಣ ಅವರ ಸ್ವಅಧ್ಯಾಯದಿಂದ ದೊರಕಿತು.
ನಂತರದ ಅನುಭವಗಳು
[ಬದಲಾಯಿಸಿ]ಕಿಶೋರಿ ವಯಸಿನ್ನಲ್ಲಿ ಕಮಲ ಎಂದರೆ ಲಕ್ಷ್ಮಿಬಾಯಿ ಕೇಳಕರರವರು ಗೋ ರಕ್ಷಣೆಯ ಚಟುವಟಿಕೆಗಳಲ್ಲಿ ಭಾಗಿಯಾದರು. ಗೋ ಹತ್ಯೆಯನ್ನು ಭಹಿಸ್ಕರಿಸಿ ದೇವಾಲಯಗಳ ಅರ್ಚಕರ ಜೊತೆಯಲ್ಲಿ ಪ್ರತಿಭಟನೆಗಳನ್ನು ನಡೆಸಿದರು. [೫] ಈ ಅನುಭವಗಳಿಂದ ಲಕ್ಷ್ಮಿಬಾಯಿ ಕೇಳಕರರವರಲ್ಲಿ ವಾಗ್ಝರಿಯ ಶಕ್ತಿ ಮೂಡಿತು. ಅವಮಾನಗಳನ್ನು ಎದುರಿಸುವುದು, ಸಮಾಜದಲ್ಲಿ ವಹಿಸಬೇಕಾಗುವ ನಮ್ರತೆಯ ಅನುಭವಗಳಾಯಿತು. ಪ್ಲೇಗ್ದ ಸಮಯದಲ್ಲಿ ಲಕ್ಷ್ಮಿಬಾಯಿ ಕೇಳಕರರವರು ಅವರ ಕುಟುಂಬದ ಜೊತೆಯಲ್ಲಿ ರೋಗಿಗಳ ಚಿಕಿತ್ಸೆ, ಸೇವೆಯಲ್ಲಿ ತೊಡಗಿದರು. ಜಾತಿ, ಮತಗಳನ್ನು ಪಕ್ಕದಲಿಟ್ಟು ಲಕ್ಷ್ಮಿಬಾಯಿ ಕೇಳಕರವರ ತಂದೆ ಅಸ್ಪೃಶ್ಯ ರೋಗಿಗಳ ಸೇವೆ ಹಾಗು ರೋಗಕ್ಕೆ ಬಲಿಯಾದವರ ಅಂತಃಕ್ರಿಯೆಯೂ ಮಾಡಿದರು. ಈ ಅನುಭವದಿಂದಾಗಿ ಜಾತಿ, ಮತಗಳಲ್ಲಿ ಭೇದದ ಖಂಡನೆ ಲಕ್ಷ್ಮಿಬಾಯಿ ಕೇಳಕರವರಲ್ಲಿ ಮೂಡಿತು.
ಸಾಂಸಾರಿಕ ಜೀವನ
[ಬದಲಾಯಿಸಿ]ಲಕ್ಷ್ಮಿಬಾಯಿ ಕೇಳಕರರವರು ವರದಕ್ಷಿಣೆಯ ವಿರುಧವಿದ್ದರು. ಅವರು ಬಯಸಿದಂತಹ ಮನೆತನ ಅವರಿಗೆ ಸಿಕ್ಕಿತು. ಮಹಾರಾಷ್ಟ್ರದ ವಾರ್ಧಾದಲ್ಲಿ ಪ್ರಸಿದ್ಧ ವಕೀಲರಾದ ಪುರುಷೊತ್ತಮರಾವ ಕೇಳಕರರ ಜೊತೆಗೆ ಲಕ್ಷ್ಮಿಬಾಯಿ ಕೇಳಕರರವರ ಮದುವೆಯಾಯಿತು. ಮದುವೆಯ ನಂತರ ಅವರ ಜನ್ಮ ಹೆಸರಾದ ಕಮಲವನ್ನು ಬದಲಾಯಿಸಿ ಲಕ್ಷ್ಮಿಬಾಯಿ ಎಂದಿಟ್ಟರು. ಪುರುಷೊತ್ತಮರಾವ ಕೇಳಕರವರ ಮೊದಲ ವಿವಾಹದಿಂದ ಎರಡು ಹೆಣ್ಣುಮಕ್ಕಳಿಗೂ ಲಕ್ಷ್ಮಿಬಾಯಿಯವರು ತಾಯಿಯಾದರು. ತುಂಬು ಕುಟುಂಬದ ಜವಾಬದಾರಿಯನ್ನು ನಿಭಾಯಿಸಿದರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಬೇಕೆಂಬ ಆಸೆ ಲಕ್ಷ್ಮಿಬಾಯಿ ಕೇಳಕರರವರಲ್ಲಿ ಮೂಡಿತು. ವಾರ್ಧಾ ಹತ್ತಿರದಲ್ಲಿದಲದ್ದ ಸೇವಾಗ್ರಾಮ ಗಾಂಧಿಜೀಯವರ ಚಟುವಟಿಕೆಯ ಕೇಂದ್ರವಾಗಿತ್ತು. ಆದರೆ ಕೇಳಕರ ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ಇಂಥ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿವಿರಲಿಲ್ಲ. ಮನೆಯಲ್ಲಿ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವಹಿಸಿ ಕ್ರಮೇಣ ಸ್ವಾತಂತ್ರ್ಯ ಚಳುವಳಿಯ ಬೈಠಕ, ಪ್ರಭಾತ ಫೇರೆಗಳಲ್ಲಿ ಲಕ್ಷ್ಮಿಬಾಯಿಯವರು ಭಾಗವಹಿಸಿದರು. ಇಂಥಹ ಒಂದು ಸಂಧರ್ಬದಲ್ಲಿ ಲಕ್ಷ್ಮಿಬಾಯಿಯವರು ಮಹಾತ್ಮಾ ಗಾಂಧಿಜೀಯವರನ್ನು ಭೇಟಿಯಾದರು. [೬] ಮಹಿಳೆಯರು ಸೀತಾ ದೇವಿಯ ಜೀವನವನ್ನು ಆದರ್ಶವಾಗಿಡಬೇಕೆಂಬ ಗಾಂಧಿಜೀಯವರ ಮಾತು ಲಕ್ಷ್ಮಿಬಾಯಿಯವರಲ್ಲಿ ರಾಮಾಯಣದ ಅಭ್ಯಾಸ ಮಾಡಲು ಅಡಿಪಾಯ ನೀಡಿತು. ಸೀತಾ ದೇವಿಯ ಜೀವನ ಚರಿತ್ರೆ ಒದಿದಾಗ ಲಕ್ಷ್ಮಿಬಾಯಿಯವರಿಗೆ ಸ್ತ್ರೀಯರು ಧೈರ್ಯವಂತರಾಗಿರಬೇಕೆಂಬುದನ್ನು ಇನ್ನು ಧ್ರಡವಾಗಿ ನಂಬಿದರು. ೧೯೩೨ ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಿಬಾಯಿಯವರ ಪತಿ ಪುರುಷೊತ್ತಮರಾವ ಕೇಳಕರವರ ನಿಧನವಾಯಿತು. ತುಂಬು ಕುಟುಂಬ, ತಮ್ಮದೇಯಾದ ಎಂಟು ಮಕ್ಕಳು ಅಪಾರ ಆಸ್ತಿ ಇವೆಲ್ಲರ ಜವಾಬದಾರಿ ಲಕ್ಷ್ಮಿಬಾಯಿಯವರದಾಯಿತು. ಲಕ್ಷ್ಮಿಬಾಯಿಯವರು ಧೈರ್ಯದಿಂದ ಪರಿಸ್ಥತಿಯನ್ನು ಎದುರಿಸಿದರು.
ಸಂಘದ ಪರಿಚಯ
[ಬದಲಾಯಿಸಿ]ಲಕ್ಷ್ಮಿಬಾಯಿಯವರ ಗಂಡು ಮಕ್ಕಳು ವಾರ್ಧಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗುತ್ತಿದ್ದರು. ತಮ್ಮ ಮಕ್ಕಳಲ್ಲಿ ಬೆಳಯುತ್ತಿದ್ದ ಅನುಷಾಸನ, ಪರಸ್ಪರ ಪ್ರೀತಿ, ಸೇವಾ ಮನೋಭಾವವನ್ನು ನೋಡಿ ಲಕ್ಷ್ಮಿಬಾಯಿಯವರಿಗೆ ಸಂಘದ ಬಗ್ಗೆ ಕುತುಹಲ ಮೂಡಿತು. [೭] ಇಂಥಹ ಸಂಘಟನಾ ಕಾರ್ಯಗಳನ್ನು ಹೆಣ್ಣುಮಕ್ಕಳೂ ಯಾಕೆ ಮಾಡಬಾರದೆಂದು ಅವರಿಗೆ ಅನಿಸಿತು. ಅದೃಷ್ಟವಶಾತ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಡಾ.ಹೆಡ್ಗೆವಾರವರು ನಾಗಪುರಕ್ಕೆ ಆಗಮಿಸಿದ್ದರು. ಅಂದಿನ ನಾಗಪುರದ ಸ್ವಯಂಸೇವಕರಾದ ಅಪ್ಪಾಜೀ ಜೋಶಿಯವರ ಸಹಾಯದಿಂದ ಲಕ್ಷ್ಮಿಬಾಯಿಯವರು ಡಾ.ಹೆಡ್ಗೆವಾರವರನ್ನು ಭೇಟಿಸಿದರು. ಲಕ್ಷ್ಮಿಬಾಯಿಯವರು ಡಾಕ್ಟರಜೀಯನ್ನು ಸಂಘಟನಾ ಕಾರ್ಯಗಳನ್ನು ಹೆಣ್ಣುಮಕ್ಕಳೂ ಯಾಕೆ ಮಾಡಬಾರದೆಂದು ಕೇಳಿದರು. ಡಾಕ್ಟರಜೀಯರ ತೀಕ್ಷಣ ದೃಷ್ಟಿಯಿಂದ ಲಕ್ಷ್ಮಿಬಾಯಿಯವರಲ್ಲಿ ಉರಿಯುತಿರುವ ಉತ್ಸಾಹವನ್ನು ಕಂಡರು. ನಂತರ ಹಲವು ಭೇಟಿಗಳಾದವು. ಡಾಕ್ಟರಜೀಯರು ಲಕ್ಷ್ಮಿಬಾಯಿಯವರ ಈ ವಿಚಾರ ಕುರಿತು ಸನ್ಮತಿ ನೀಡಿ, ಮಾರ್ಗದರಶನನೀಡಲು ಒಪ್ಪಿದರು. ಆದರೆ ಸಂಘದ ಜೊತೆ ದೃಷ್ಟೀಕೋಣ ಹೊಂದಿದರೂ ಎರಡೂ ಸಂಘಟನೆಗಳು ಸ್ವತಂತ್ರವಾಗಿ ಸಮಾನಂತರದಲ್ಲಿ ನಡೆಯುವುದಾಗಿ ಹೇಳಿದರು. ಶಾರೀರಿಖ ಅಭ್ಯಾಸಗಳಿಗೆ ಸ್ವಲ್ಪ ಸಮಯ ಮಾರ್ಗದರಶನ ನೀಡಿ, ಕ್ರಮೇಣ ಹೆಣ್ಣುಮಕ್ಕಳೇ ಸ್ವತಂತ್ರವಾಗಿ ನಡೆಸಲಾಗುವುದೆಂದೂ ತಿಳಿಸಿದರು.
ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆ
[ಬದಲಾಯಿಸಿ]ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಡಾ.ಹೆಡ್ಗೆವಾರವರ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಲಕ್ಷ್ಮಿಬಾಯಿ ಕೇಳಕರವರು ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆಯನ್ನು ವಾರ್ಧಾದಲ್ಲಿ ಮಾಡಿದರು. ೧೯೩೬ ರ ವಿಜಯದಶಮಿದಂದು ಲಕ್ಷ್ಮಿಬಾಯಿ ಕೇಳಕರವರು ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಿದರು. ಭಾರತದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ, ಮನೋಭಾವ, ಅಗತ್ಯಗಳನ್ನು ಮನದಲ್ಲಿಟ್ಟು ಲಕ್ಷ್ಮಿಬಾಯಿ ಕೇಳಕರವರು ರಾಷ್ಟ್ರ ಸೇವಿಕಾ ಸಮಿತಿಯ ರೇಖಾ ಚಿತ್ರವನ್ನು ತಾವೇ ರಚಿಸಿದರು. ಸೇವೆ, ಸಂಸ್ಕಾರ, ಶಿಕ್ಷಣ, ಸ್ವಾವಲಂಬನ ಇವೆಲ್ಲ ಗುಣಮಟ್ಟಗಳಿಗೆ ಹೆಚ್ಚಿನ ಒತ್ತು ಸಮಿತಿಯಲ್ಲಿ ಹೆಣ್ಣಮಕ್ಕಳಿಗೆ ಕೊಡಬೇಕೆಂಬ ವಿಚಾರ ಸ್ಪಷ್ಟವಾಗಿತ್ತು. ಶಾರೀರಿಕ ಅಭ್ಯಾಸಗಳನ್ನು ಲಕ್ಷ್ಮಿಬಾಯಿಯವರು ಸಂಘದ ಸ್ವಯಂಸೇವಕರಿಂದ ಕಲಿತು ಇತರ ಸೇವಿಕೆಯರಿಗೆ ಕಲಿಸಿದರು. ಬೇರೆಯವರಿಗೆ ಪ್ರೇರಣೆವಾಗುವಂತೆ ಸೈಕಲ್, ಈಜುವುದು, ಯೋಗಾಭ್ಯಾಸ ಕಲಿತರು. ಹಿಂದುತ್ವದ ತತ್ವಗಳ ಆದಾರದ ಮೇಲೆ ಸಮಿತಿಯನ್ನು ಸ್ಥಾಪಿಸಿ, ಸಮಿತಿಯ ಸೇವಿಕೆಯರು ಈ ತತ್ವಗಳನ್ನು ಹೆಚ್ಚಿನ ಜನರಲ್ಲಿ ಪ್ರಸಾರಿಸುವ ಬಗ್ಗೆ ತಿಳಿಹೇಳಿದರು. ಇವೆಲ್ಲಾ ಸುಲಭವಾಗಿ ಮಾಡಲು ಹೆಣ್ಣುಮಕ್ಕಳು ಮನೆ ಮನೆಯಲ್ಲಿ ಕುಟುಂಬದ ಸದಸ್ಯರಲ್ಲಿ ಸಂಸ್ಕಾರಗಳನ್ನು ಧೃಡಪಡಿಸುವ ಪ್ರಶಿಕ್ಷಣ ಸಮಿತಿಯ ಸೇವಕಿಯರಿಗೆ ಸಿಗುವಂತೆ ಲಕ್ಷ್ಮಿಬಾಯಿಯವರು ಮಾರ್ಗದರಶನನೀಡಿದರು. ಸಮಿತಿಯಲ್ಲಿ ದೇವಿ ಅಷ್ಡಭುಜೆಯನ್ನು ಪ್ರಾರ್ಥಿಸಿ ಸ್ತ್ರೀಯರಿಗೆ ಬೇಕಾದ ಪರಿಶುದ್ಧತೆ, ಧೈರ್ಯ, ವಾತ್ಸಲ್ಯ, ತಾಯಿಯ ಮಮತೆ, ಪಾವಿತ್ರತೆಯ ಪ್ರೇರಣೆ ಪಡೆದರು. ಸಮಿತಿಯ ಹರಡುವಿಕೆ ಕೆಲಸಗಳಿಗೆ ಮಾಡಬೇಕಾದ ಪ್ರವಾಸಗಳನ್ನು ಲಕ್ಷ್ಮಿಬಾಯಿ ಕೇಳಕರವರು ಮಾಡಿದರು. ಕೆಲವು ವರುಷಗಳಲ್ಲಿ ಸಮಿತಿಗೆ ಅಖಿಲ ಭಾರತೀಯ ಕಾರ್ಯಾಚರಣೆಯ ದರ್ಜೆ ದೊರಕಿತು. ೧೯೪೫ ರಲ್ಲಿ ಅಖಿಲ ಭಾರತೀಯ ಸಮ್ಮೆಲನ ಮುಂಬೈಯಲ್ಲಿ ನಡೆಯಿತು. ಬೇರೆ ರಾಜ್ಯಗಳಲ್ಲಿ ಸಮಿತಿಯ ಸಾಧನೆ, ಎದುರಿಸುವ ಸವಾಲು, ಕಾರ್ಯಪದ್ದತಿಗಳನ್ನು ಎಲ್ಲರಿಗೆ ಸಮಾನವಾಗಿ ತಿಳಿಯಬೇಕು ಮತ್ತು ದೇಶಾದ್ಯಂತ ಒಂದೇ ಪದ್ದತಿಯ ಕಾರ್ಯಾಚರಣೆ ನಡೆಸುವ ಉದ್ದೇಶ ಈ ಸಮ್ಮೆಲನದ್ದಾಗಿತ್ತು. ಇಂದಿಗೂ ಮೂರು ವರ್ಷಕ್ಕೊಮ್ಮೆ ಅಖಿಲ ಭಾರತೀಯ ಸಮ್ಮೆಲನ ನಡೆಯುತ್ತದೆ. ಲಕ್ಷ್ಮಿಬಾಯಿ ಕೇಳಕರವರಿಗೆ ಸಮಿತಿ ಕುರಿತು ಬಹಳ ಜನರಿಂದ ಟೀಕೆ, ಸವಾಲು ಮತ್ತು ವಿರೋಧವೂ ಅಯಿತು. ಆದರೆ ಅವರು ಇದಕ್ಕೆಲ್ಲ ತಲೆಬಾಗಿಸಲಿಲ್ಲ. ಸಮಿತಿಯು ಶಿಕ್ಷಣ ಕ್ಷೇತ್ರದಲ್ಲೂ ತನ್ನ ಕಾರ್ಯ ನಿರ್ಮಿಸಬೇಕೆಂಬ ಅಗತ್ಯ ಲಕ್ಷ್ಮಿಬಾಯಿ ಕೇಳಕರವರಿಗೆ ಕಂಡಿತು. ೧೯೪೫ರಲ್ಲಿ ಇದರ ಕೆಲಸ ಶುರುಮಾಡಿದರು. ಹಲವು ರಾಜ್ಯಗಳಲ್ಲಿ ಶಿಶು ಮಂದಿರದ ಸ್ಥಾಪನೆಗಳಾದವು. ೧೯೫೩ ರಲ್ಲಿ ಗೃಹಿಣಿ ವಿದ್ಯಾಲಯದ ಸ್ಥಾಪನೆ ಮುಂಬೈನಲ್ಲಿ ಆಯಿತು. ಇದಕ್ಕೆ ಅಖಿಲ ಭಾರತೀಯ ದರ್ಜೆ ನೀಡಲು ಭಾರತೀಯ ಸ್ತ್ರೀ ವಿದ್ಯಾನಿಕೇತನಯೆಂಬ ಪ್ರತಿಶ್ಥಾನದ ರಚನೆ ೧೯೮೩ ರಲ್ಲಿ ಆಯಿತು. ರಾಮಾಯಣ, ಮಹಾಭಾರತ ಮತ್ತು ಭಾಗವತದ ಶಿಕ್ಷಣವೂ ಗೃಹಿಣಿಯರಿಗೆ, ಮಕ್ಕಳಿಗೆ ಮತ್ತು ಯುವತಿಯರಿಗೆ ಕೊಡಲಾಯಿತು. ಲಕ್ಷ್ಮಿಬಾಯಿ ಕೇಳಕರವರು ರಾಮಾಯಣದ ಪ್ರವಚನಗಳನ್ನು ನಗರ ನಗರಗಳಲ್ಲಿ ಮಾಡತೊಡಗಿದರು. ಈ ಮಾರ್ಗದಿಂದ ಅವರಿಗೆ ಸಮಿತಿಯ ಪ್ರಚಾರ ಹಾಗು ಸಂಪರ್ಕಕ್ಕೆ ಅನುಕೂಲವಾಗುತ್ತಿತ್ತು. [೮] ಇವತ್ತು ರಾಷ್ಟ್ರ ಸೇವಿಕಾ ಸಮಿತಿಯು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲು ಹಿಂದು ಸೇವಿಕಾ ಸಮಿತಿಯ ಹೆಸರಲ್ಲಿ ಕಾರ್ಯನಡೆಯಿಸುತ್ತಿದೆ. [೯] [೧೦]
ಸಮಿತಿಯ ಪ್ರಕಲ್ಪಗಳು
[ಬದಲಾಯಿಸಿ]ಲಕ್ಷ್ಮಿಬಾಯಿ ಕೇಳಕರವರ ಮೃದು ಮಾತು, ತೀಕ್ಷ್ಣತೆಯ ದೃಷ್ಟಿ, ಆತ್ಮೀಯತೆಯಿಂದಾಗಿ ಹೆಣ್ಣುಮಕ್ಕಳು ತಮ್ಮ ಕಷ್ಟ ಸುಖಗಳನ್ನು ಅವರೊಡನೆ ಹಂಚುತಿದ್ದರು. ಕೆಲವರಲ್ಲಿ ಉತ್ತಮ ಕಲೆ ಕೌಶಲ್ಯಗಳ ಅರಿವಿದ್ದರೆ, ಇನ್ನು ಕೆಲವರಲ್ಲಿ ಅಡಿಗೆ ಪಾಕದ ಕೈ ರುಚಿ ಕಂಡಿತು, ಇನ್ನು ಕೆಲವರಲ್ಲಿ ಹಾಡು, ಸಂಗೀತದ ಕಲೆ, ಪ್ರವಚನ, ಕೀರ್ತನೆ ಮಾಡುವ ಪ್ರಬಲತೆ, ಇವಲ್ಲ ಇದ್ದರೂ ಇನ್ನು ಕೆಲವರಿಗೆ ಆರ್ಥಿಕ ತೊಂದರೆ ಅಥವಾ ಪ್ರೋತ್ಸಾಹದ ಕೊರತೆ ಕಂಡಿತು. ಲಕ್ಷ್ಮಿಬಾಯಿ ಕೇಳಕರವರು ಸಮಿತಿಯ ವತಿಯಿಂದ ಈ ಎಲ್ಲ ಕ್ಷೇತ್ರದಲ್ಲೂ ಸಹಾಯ ಸಿಗಬೇಕೆಂಬ ದೃಷ್ಥಯಿಂದ ಅನ್ಯ ಪ್ರಕಲ್ಪಗಳ ರಚನೆ ಮಾಡಿದರು. ಸ್ವ ಉದ್ಯೋಗ ಮಂದಿರಗಳು, ಭಜನೆ ಕೀರ್ತನೆಗಳಿಗೆ ಪ್ರೋತ್ಸಾಹ ಸಿಗುವಂತೆ ಧಾರಮಿಕ ಕಾರ್ಯಕ್ರಮಗಳು, ಕಲೆ-ಕೌಶಲ್ಯಗಳ ಸಾರ್ವಜನಿಕರಿಗೆ ಪ್ರದರ್ಶನಗಳು ಪ್ರಾರಂಭ ಮಾಡಿದರು. ಇದರಿಂದ ಹೆಣ್ನುಮಕ್ಕಳಿಗೆ ಆರ್ಥಿಕ ಸಹಾಯ ಹಾಗೂ ಧೈರ್ಯವೂ ದೊರಕಿತು. [೧೧]
ದೇಹಾಂತ್ಯ
[ಬದಲಾಯಿಸಿ]ಲಕ್ಷ್ಮಿಬಾಯಿ ಕೇಳಕರವರು ಸಮಿತಿಯ ಸ್ಥಾಪನೆ ಮಾಡಿ ಹಲವು ಸೇವಿಕೆಯರಿಗೆ ಮಾರ್ಗದರ್ಶನಮಾಡಿ ಎಲ್ಲರ ನೆಚ್ಷಿನ ಮೌಶಿಜೀಯಾಗಿದ್ದರು. ೧೯೭೮ ರ ಕಾರ್ತಿಕ ಮಾಸ ಕೃಷ್ಣ ಪಕ್ಷ ದ್ವಾದಷಿಯಂದು ಅಂದರೆ ನವೆಂಬರ ೨೭ ರಂದು ಅನಾರೋಗ್ಯದ ಕಾರಣದಿಂದಾಗಿ ನಿಧನಹೊಂದಿದರು. ನೂರಾರು ಹೆಣ್ಣುಮಕ್ಕಳು ಅನುಶಾಸನದಿಂದ ಒಂದು ಮಹಿಳೆಯ ದಿವ್ಯ ದೇಹದ ಕೊಣೆಯ ಯಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ನಾಗಪುರದ ಅಂಬಾಜರಿ ಘಾಟನಲ್ಲಿ ಅಂತ ಕ್ರಿಯೆ ನಡೆಯಿತು. ಲಕ್ಷ್ಮಿಬಾಯಿ ಕೇಳಕರವರು ನಗಪುರದಲ್ಲಿ ಸ್ರಿಷ್ಟಿಸಿದ ಶಕ್ತಿ ಪೀಠ ಅವರ ಸ್ಮಾರಕವಾಗಿದೆ. ಇಂದಿಗೂ ಈ ಶಕ್ತಿ ಪೀಠವು ಹಲವು ಸ್ತ್ರೀಯರಿಗೆ ಶಕ್ತಿ, ಸ್ಪೂರ್ತಿ ಮತ್ತು ಪ್ರೇರಣೆವಾಗಿದೆ. ಮೌಶಿಜೀಯವರ ಮಾರ್ಗದರ್ಶನ ಇಂದಿಗೂ ಸಮಿತಿಯ ಶಾಖೆಗಳಲ್ಲಿ, ಕಾರ್ಯಗಳಲ್ಲಿ ಹಾಗೂ ಸಂಸ್ಕಾರಗಳಲ್ಲಿ ಕಾಣಬಹುದು. [೧೨]
ರಾಷ್ಟ್ರ ಸೇವಿಕಾ ಸಮಿತಿಯ ಕೊಡುಗೆಗಳು
[ಬದಲಾಯಿಸಿ]ದೇಶಾದ್ಯಂತ ಸಮಿತಿಯ ಕಾರ್ಯ ಪಸರಿಸಿ ಇವತ್ತಿಗೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ತನ್ನ ಕೆಲಸ ನಿರ್ವಹಿಸುತ್ತಿದ್ದು ವಿದೇಶದಲ್ಲೂ ತನ್ನ ರೆಕ್ಕೆಗಳನ್ನು ಬೀಸಿದೆ. ಹಲವು ಪ್ರಕಲ್ಪಗಳು, ಶಿಶು ಮಂದಿರ, ಛಾತ್ರಾವಾಸ, ಶಾಲೆಗಳು, ಸಂಸ್ಕಾರ ಕೇಂದ್ರಗಳು ನಡೆಯುತ್ತಿದೆ. ನಿರಂತರ ಸಮ್ಮೆಳನಗಳು, ಉಪನ್ಯಾಸಗಳು, ಕಾರ್ಯಾಗಾರಗಳು, ಚರ್ಚೆಗಳು ಸಮಾಜ ಮತ್ತು ಹೆಣ್ನುಮಕ್ಕಳಿಗೆ ಉಪಯೋಗವಾಗುವಂತೆ ನಡೆಸುತದೆ. ಸೇವಾ ಕಾರ್ಯಗಳು, ಪರಿಸರ - ಪ್ರಕೃತಿಯ ವಿಕೋಪಗಳಾದಾಗ ಸಮಿತಿಯು ಜನ, ಸಮಾಜ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುತದೆ. ವ್ಯಕ್ತಿ ನಿರ್ಮಾನದ ಕೆಲಸದಲ್ಲಿ ಸಮಿತಿಯ ಪಾತ್ರ ಹೆಚ್ಕಿನದ್ದು. ಹೆಣ್ಣುಮಕ್ಕಳಿಗೆ ಮಾನಸಿಕ, ಶಾರೀರಿಕ ಹಾಗೂ ಬೌದ್ಧಿಕದ ಬೆಳವಣಿಗೆಯಲ್ಲಿ ಮಾರ್ಗದರ್ಶನ ಮಾಡುವುದು, ಹಿಂದುತ್ವದ ಆಲ ವಿಚಾರಗಳ ಪ್ರಸಾರ, ಪ್ರಸ್ತುತ ಅಭಿವೃದ್ಧಿಯಲ್ಲಿ ಪಾತ್ರ, ಸಂಸ್ಕಾರಗಳ ಸಮಾಜದಲ್ಲಿ ಒತ್ತು, ಆಧುನಿಕತೆಯಲ್ಲಿ ನಮ್ಮತನವನ್ನು ಜನರಲ್ಲಿ ಮೂಡಿಸುವ ಕಾರ್ಯ ರಾಷ್ಟ್ರ ಸೇವಿಕಾ ಸಮಿತಿಯು ಮಾಡುತ್ತಿದೆ.
ಬಾಹ್ಯ ಸಂಪರ್ಕ
[ಬದಲಾಯಿಸಿ]- http://rashtrasevikasamiti.org/
- https://sevikasamiti.org/ Archived 2020-07-24 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-07-24. Retrieved 2020-07-24.
- ↑ https://www.hinduscriptures.com/hindu-lifestyle/lakshmibai-kelkar-mausiji/27107/
- ↑ Dr.Rajani, Rai (26 October 1996). Life Sketch of Vandaniya Mausiji. Dhantoli, Nagpur: Sevika Prakashan. p. 5.
- ↑ https://www.hinduscriptures.com/hindu-lifestyle/lakshmibai-kelkar-mausiji/27107/
- ↑ http://indpaedia.com/ind/index.php/Cow_slaughter:_India
- ↑ https://bharatdiscovery.org/india/%E0%A4%B2%E0%A4%95%E0%A5%8D%E0%A4%B7%E0%A5%8D%E0%A4%AE%E0%A5%80%E0%A4%AC%E0%A4%BE%E0%A4%88_%E0%A4%95%E0%A5%87%E0%A4%B2%E0%A4%95%E0%A4%B0#gsc.tab=0
- ↑ "ಆರ್ಕೈವ್ ನಕಲು". Archived from the original on 2020-03-19. Retrieved 2020-09-06.
- ↑ Dr.Rajani, Rai (26 October 1996). Life Sketch of Vandaniya Mausiji. Dhantoli, Nagpur: Sevika Prakashan. p. 37.
- ↑ "ಆರ್ಕೈವ್ ನಕಲು". Archived from the original on 2021-09-03. Retrieved 2020-09-06.
- ↑ https://hssuk.org/samiti/
- ↑ Dr.Rajani, Rai (26 October 1996). Life Sketch of Vandaniya Mausiji. Dhantoli, Nagpur: Sevika Prakashan. p. 38.
- ↑ Dr.Rajani, Rai (26 October 1996). Life Sketch of Vandaniya Mausiji. Dhantoli, Nagpur: Sevika Prakashan. p. 63.