ವಿಷಯಕ್ಕೆ ಹೋಗು

ರಾಜ್ಯಸಭೆಯ ಸದಸ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Member of Parliament
Rajya Sabha, the meeting place of the members.
Incumbent

April 2023

Ministry of Parliamentary Affairs
Style
  • Honourable (Inside India)
  • His/Her Excellency (Outside India)
Type Upper house of the Parliament of India
Status Active
Abbreviation MP
Member of Rajya Sabha
Reports to Vice President of India
Residence Rajya Sabha chamber, Sansad Bhavan, Sansad Marg, New Delhi, India – 110001
Seat Parliament of India
Term length 6 years; renewable
Constituting instrument Fourth schedule to the Constitution of India
Formation 26 January 1950; 74 years ago (1950-01-26)
Deputy Member of Parliament, Lok Sabha
Salary 400,000 (US$5,000)

(incl. allowances) per month[೧]

Website rajyasabha.nic.in

ರಾಜ್ಯಸಭೆಯಲ್ಲಿನ ಸಂಸದರು ( ಸಂಕ್ಷಿಪ್ತ : ಎಂ.ಪಿ) ಇವರು ಭಾರತದ ಸಂಸತ್ತಿನ ಎರಡು ಸದನಗಳಲ್ಲಿ ಒಂದಾದ ಭಾರತದ ಸಂಸತ್ತಿನ ಮೇಲ್ಮನೆಗೆ ರಾಜ್ಯಸಭೆಗೆ ಭಾರತೀಯ ರಾಜ್ಯಗಳ ಪ್ರತಿನಿಧಿ. ರಾಜ್ಯ ಸಭೆಯ ಸಂಸದರನ್ನು ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರುಗಳು ವರ್ಗಾವಣೆ ಮಾಡಬಹುದಾದ ಮತದಿಂದ ಪ್ರಮಾಣಾನುಗುಣವಾದ ಪ್ರಾತಿನಿಧ್ಯದ ವ್ಯವಸ್ಥೆಯೊಂದಿಗೆ ಆಯ್ಕೆ ಮಾಡಲಾಗುತ್ತದೆ. ಚುನಾವಣೆಗಳು, ನಾಮನಿರ್ದೇಶನಗಳು ಅಥವಾ ಇತರ ಅಂಶಗಳಿಂದ ಸಂಯೋಜನೆ ಮತ್ತು ಸದಸ್ಯತ್ವವು ನಿಯಮಿತವಾಗಿ ಬದಲಾಗಬಹುದು. ಭಾರತದ ಸಂಸತ್ತು ಎರಡು ಸದನಗಳೊಂದಿಗೆ ದ್ವಿಸದನವಾಗಿದೆ ; ರಾಜ್ಯಸಭೆ ( ಮೇಲ್ಮನೆ ಅಂದರೆ ಕೌನ್ಸಿಲ್ ಆಫ್ ಸ್ಟೇಟ್ಸ್) ಮತ್ತು ಲೋಕಸಭೆ ( ಕೆಳಮನೆ ಅಂದರೆ ಜನರ ಮನೆ). ಲೋಕಸಭೆಗೆ ಹೋಲಿಸಿದರೆ, ರಾಜ್ಯಸಭೆಯು ಕಡಿಮೆ ಸದಸ್ಯರನ್ನು ಹೊಂದಿದೆ ಮತ್ತು ಅದರ ಸದಸ್ಯರು ನಿರ್ಬಂಧಿತ ಅಧಿಕಾರವನ್ನು ಹೊಂದಿದ್ದಾರೆ. [೨] ಲೋಕಸಭೆಯ ಸದಸ್ಯತ್ವಕ್ಕಿಂತ ಭಿನ್ನವಾಗಿರುವ ರಾಜ್ಯಸಭೆಯ ಸದಸ್ಯತ್ವವು ಶಾಶ್ವತ ಸಂಸ್ಥೆಯಾಗಿದೆ ಮತ್ತು ಯಾವುದೇ ಸಮಯದಲ್ಲಿ ವಿಸರ್ಜಿಸಲಾಗುವುದಿಲ್ಲ. ಆದಾಗ್ಯೂ ಪ್ರತಿ ಎರಡನೇ ವರ್ಷದಲ್ಲಿ, ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಪ್ರತಿ ಮೂರನೇ ವರ್ಷದ ಆರಂಭದಲ್ಲಿ ಹೊಸ ಚುನಾವಣೆಗಳು ಮತ್ತು ಅಧ್ಯಕ್ಷೀಯ ನಾಮನಿರ್ದೇಶನದ ಮೂಲಕ ಖಾಲಿ ಸ್ಥಾನವನ್ನು ತುಂಬಲಾಗುತ್ತದೆ. [೩]

ಸಂಸತ್ತಿನ ಸದಸ್ಯರ ಜವಾಬ್ದಾರಿಗಳು[ಬದಲಾಯಿಸಿ]

ರಾಜ್ಯಸಭೆಯ ಸಂಸತ್ತಿನ ಸದಸ್ಯರ ವಿಶಾಲವಾದ ಜವಾಬ್ದಾರಿಗಳು:

  • ಶಾಸಕಾಂಗ ಜವಾಬ್ದಾರಿ: ರಾಜ್ಯಸಭೆಯಲ್ಲಿ ಭಾರತದ ಕಾನೂನುಗಳನ್ನು ಅಂಗೀಕರಿಸುವುದು.
  • ಉಸ್ತುವಾರಿ ಜವಾಬ್ದಾರಿ: ಕಾರ್ಯನಿರ್ವಾಹಕ (ಅಂದರೆ ಸರ್ಕಾರ) ತನ್ನ ಕರ್ತವ್ಯಗಳನ್ನು ತೃಪ್ತಿಕರವಾಗಿ ನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು.
  • ಪ್ರತಿನಿಧಿ ಜವಾಬ್ದಾರಿ: ಭಾರತದ ಸಂಸತ್ತಿನಲ್ಲಿ (ರಾಜ್ಯಸಭೆ) ತಮ್ಮ ಕ್ಷೇತ್ರದ ಜನರ ಅಭಿಪ್ರಾಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸಲು.
  • ಹಣಕಾಸಿನ ಶಕ್ತಿಯ ಜವಾಬ್ದಾರಿ : ಸರ್ಕಾರವು ಪ್ರಸ್ತಾಪಿಸಿದ ಆದಾಯ ಮತ್ತು ವೆಚ್ಚಗಳನ್ನು ಅನುಮೋದಿಸಲು ಮತ್ತು ಮೇಲ್ವಿಚಾರಣೆ ಮಾಡಲು.
  • ಸಂಸತ್ತಿನ ಸದಸ್ಯರೂ ಆಗಿರುವ ಯೂನಿಯನ್ ಕೌನ್ಸಿಲ್ ಆಫ್ ಮಿನಿಸ್ಟರ್ಸ್, ಮಂತ್ರಿ ಮಂಡಳಿಯಲ್ಲಿಲ್ಲದವರಿಗೆ ಹೋಲಿಸಿದರೆ ಕಾರ್ಯಾಂಗದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುತ್ತಾರೆ. [೩]

ವಿಶೇಷ ಅಧಿಕಾರಗಳು[ಬದಲಾಯಿಸಿ]

ರಾಜ್ಯಸಭೆಯಲ್ಲಿ ಸಂಸತ್ತಿನ ಸದಸ್ಯರು ವಿಶೇಷ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಅನುಭವಿಸುತ್ತಾರೆ:

  • ರಾಜ್ಯಗಳ ಪಟ್ಟಿಯಲ್ಲಿರುವ ಯಾವುದೇ ವಿಷಯದ ಮೇಲೆ ಕಾನೂನುಗಳನ್ನು ರಚಿಸುವುದು;
  • ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಸೇವೆಗಳುನ್ನ ರಚಿಸಲು ಕಾನೂನುಗಳನ್ನು ರಚಿಸುವುದು. [೩]
  • ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧಿಕಾರಾವಧಿಯ ವಿಸ್ತರಣೆ

ಅವಧಿ[ಬದಲಾಯಿಸಿ]

ಲೋಕಸಭೆಯಂತೆ, ರಾಜ್ಯಸಭೆಯನ್ನು ವಿಸರ್ಜಿಸಲಾಗುವುದಿಲ್ಲ ಮತ್ತು ಇದು ಶಾಶ್ವತ ಸಂಸ್ಥೆಯಾಗಿದೆ, ಆದ್ದರಿಂದ ಸದಸ್ಯರು ಸಾಮಾನ್ಯವಾಗಿ ತಮ್ಮ ಸಂಪೂರ್ಣ ಅಧಿಕಾರಾವಧಿಯನ್ನು ಪೂರೈಸುವ ಅವಕಾಶವನ್ನು ಪಡೆಯುತ್ತಾರೆ. ಇದನ್ನ ಹೊರತುಪಡಿಸಿ ಅವರು ರಾಜೀನಾಮೆ ಅಥವಾ ಸದಸ್ಯರು ಮೃತರಾದಾಗ ಸ್ಥಾನವು ಖಾಲಿಯಗುತ್ತದೆ. ಇದಲ್ಲದೆ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯನ ಅವಧಿಯು ಆರು ವರ್ಷಗಳು [೩]

ಸಂಸತ್ತಿನ ಸದಸ್ಯರಾಗಲು ಅರ್ಹತೆಗಳು[ಬದಲಾಯಿಸಿ]

ಒಬ್ಬ ವ್ಯಕ್ತಿಯು ರಾಜ್ಯಸಭೆಯ ಸಂಸತ್ತಿನ ಸದಸ್ಯರಾಗಲು ಅರ್ಹತೆ ಪಡೆಯಲು ಕೆಳಗಿನ ಎಲ್ಲಾ ಷರತ್ತುಗಳನ್ನು ಪೂರೈಸಬೇಕು:

  • ಭಾರತದ ಪ್ರಜೆಯಾಗಿರಬೇಕು
  • ಕನಿಷ್ಟ 30 ವರ್ಷ ವಯಸ್ಸುಅಗಿರಬೇಕು

ಸಂಸತ್ತಿನ ಸದಸ್ಯರಾಗಿರುವುದಕ್ಕೆ ಅನರ್ಹತೆಗಳು[ಬದಲಾಯಿಸಿ]

ಯಾವಗ ಒಬ್ಬ ವ್ಯಕ್ತಿಯು ರಾಜ್ಯಸಭೆಯ ಸದಸ್ಯನಾಗಲು ಅನರ್ಹನಾಗಿರುತ್ತಾನೆ ಎಂದರೆ:

  • ಭಾರತ ಸರ್ಕಾರದ ಅಡಿಯಲ್ಲಿ ಯಾವುದೇ ಲಾಭಬರುವ ಕಚೇರಿಯನ್ನು ಹೊಂದಿದೆ (ಕಾನೂನಿನ ಮೂಲಕ ಭಾರತದ ಸಂಸತ್ತು ಅನುಮತಿಸುವ ಕಚೇರಿಯನ್ನು ಹೊರತುಪಡಿಸಿ).
  • ಅಸ್ವಸ್ಥ ಮನಸ್ಸಿನವರು.
  • ದಿವಾಳಿ ಚೀಟಿ ತಗೆದುಕೊಂಡಾಗ
  • ಭಾರತದ ಪ್ರಜೆಯಾಗದಿದ್ದಾಗ.
  • ಭಾರತೀಯ ಸಂಸತ್ತು ಮಾಡಿದ ಯಾವುದೇ ಕಾನೂನಿನಿಂದ ಅನರ್ಹಗೂಂಡಾಗ.
  • ಪಕ್ಷಾಂತರದ ಆಧಾರದ ಮೇಲೆ ಅನರ್ಹಗೊಂಡಾಗ.
  • ಇತರ ವಿಷಯಗಳ ಜೊತೆಗೆ, ವಿವಿಧ ಗುಂಪುಗಳ ನಡುವೆ ಹಗೆತನವನ್ನು ಉತ್ತೇಜಿಸಿದ್ದಕ್ಕಾಗಿ ಶಿಕ್ಷೆ ವಿಧಿಸದಾಗ.
  • ಲಂಚದ ಅಪರಾಧಕ್ಕಾಗಿ ಶಿಕ್ಷೆ ವಿಧಿಸಿದಾಗ.
  • ಅಸ್ಪೃಶ್ಯತೆ, ವರದಕ್ಷಿಣೆ, ಸತಿ ಮುಂತಾದ ಸಾಮಾಜಿಕ ಅಪರಾಧಗಳ ಬೋಧನೆ ಮತ್ತು ಆಚರಣೆಗಾಗಿ ಶಿಕ್ಷೆಗೆ ಗುರಿಯಾದಾಗ.
  • ಅಪರಾಧಕ್ಕಾಗಿ ಜೈಲು ಶಿಕ್ಷೆ ವಿಧಿಸಿದಾಗ.
  • ಭ್ರಷ್ಟಾಚಾರಕ್ಕಾಗಿ ಅಥವಾ ರಾಜ್ಯಕ್ಕೆ ವಿಶ್ವಾಸದ್ರೋಹಕ್ಕಾಗಿ (ಸರ್ಕಾರಿ ಸೇವಕನ ಸಂದರ್ಭದಲ್ಲಿ) ವಜಾಗೊಳಿಸಿದಾಗ.

ಸಂಯೋಜನೆ/ಶಕ್ತಿ[ಬದಲಾಯಿಸಿ]

ರಾಜ್ಯಸಭೆಯಲ್ಲಿ ಸದಸ್ಯತ್ವವು 250 ಸದಸ್ಯರಿಗೆ ಸೀಮಿತವಾಗಿದೆ. 238 ಸದಸ್ಯರನ್ನು ಎಲ್ಲಾ ವಿಧಾನ ಸಭೆಗಳ (ವೈಯಕ್ತಿಕ ರಾಜ್ಯ ಶಾಸಕಾಂಗಗಳು) ಸದಸ್ಯರು ಆಯ್ಕೆ ಮಾಡುತ್ತಾರೆ. ಉಳಿದ 12 ಸದಸ್ಯರನ್ನು ಕಲೆ, ಸಾಹಿತ್ಯ, ಸಾಮಾಜಿಕ ಸೇವೆಗಳು ಹಾಗು ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ಸದಸ್ಯರ ಸಂಖ್ಯೆ 250 ಕ್ಕಿಂತ ಕಡಿಮೆಯಿರಬಹುದು: ಪ್ರಸ್ತುತ 245 ನಲ್ಲಿದೆ. (ಸದಸ್ಯರ ಮುಂದಿನ ವಿಭಾಗವನ್ನು ನೋಡಿ.)

ರಾಜ್ಯಸಭಾ ಸದಸ್ಯರು[ಬದಲಾಯಿಸಿ]

 

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Salaries, allowances and facilities to Members" (PDF). Lok Sabha website. Archived from the original (PDF) on 23 August 2016. Retrieved 15 August 2016.
  2. "Member of Parliament". elections.in. Retrieved 17 July 2016.
  3. ೩.೦ ೩.೧ ೩.೨ ೩.೩ "The Indian Parliament". PRS Legislative Research. Archived from the original on 10 June 2018. Retrieved 17 July 2016.