ಲಂಚಗುಳಿತನ

ವಿಕಿಪೀಡಿಯ ಇಂದ
Jump to navigation Jump to search

ಲಂಚಗುಳಿತನ (ಲಂಚಗಾರಿಕೆ) ಎಂದರೆ ಗ್ರಾಹಿಯು ಅನ್ಯಥಾ ಕೊಡಲಾರದ/ನೀಡಲಾರದ ಯಾವುದೋ ಬಗೆಯ ಪ್ರಭಾವ ಅಥವಾ ಕೆಲಸಕ್ಕೆ ಪ್ರತಿಯಾಗಿ ಮೌಲ್ಯವಿರುವ ಏನನ್ನಾದರೂ ಕೊಡುವ ಅಥವಾ ತೆಗೆದುಕೊಳ್ಳುವ ಕ್ರಿಯೆ. ಬ್ಲ್ಯಾಕ್‍ನ ಕಾನೂನು ನಿಘಂಟು ಲಂಚಗುಳಿತನವನ್ನು ಸಾರ್ವಜನಿಕ ಅಥವಾ ಕಾನೂನಾತ್ಮಕ ಕರ್ತವ್ಯಕ್ಕೆ ಹೊಣೆಯಾಗಿರುವ ಒಬ್ಬ ಅಧಿಕಾರಿ ಅಥವಾ ಇತರ ವ್ಯಕ್ತಿಯ ಕಾರ್ಯಗಳ ಮೇಲೆ ಪ್ರಭಾವ ಬೀರಲು ಮೌಲ್ಯವಿರುವ ಯಾವುದೇ ವಸ್ತುವನ್ನು ನೀಡುವುದು, ಕೊಡುವುದು, ಪಡೆಯುವುದು, ಅಥವಾ ಕೇಳುವುದು ಎಂದು ವ್ಯಾಖ್ಯಾನಿಸುತ್ತದೆ.[೧] ಮೂಲಭೂತವಾಗಿ, ಲಂಚಗುಳಿತನವೆಂದರೆ ಪ್ರತಿಯಾಗಿ ಏನಾದರೂ ಪಡೆಯುವ ವ್ಯಕ್ತ ಉದ್ದೇಶದಿಂದ ಯಾರಿಗಾಗಿಯಾದರೂ ಏನಾದರೂ ಮಾಡಿಕೊಡುವುದಾಗಿ ಸೂಚಿಸುವುದು.[೨] ಸಮಾನ ಆಧಾರದಲ್ಲಿ ಎಲ್ಲರಿಗೂ ಅನ್ಯಥಾ ಲಭ್ಯವಿರುವ ಹಣ ಅಥವಾ ಮೌಲ್ಯವಿರುವ ಇತರ ವಸ್ತುಗಳ ಉಡುಗೊರೆಗಳು (ಆದರೆ ಅಪ್ರಾಮಾಣಿಕ ಉದ್ದೇಶಗಳಿಗೆ ಅಲ್ಲದ) ಲಂಚಗುಳಿತನವಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. What is bribery?, Black's Law Dictionary, archived from the original on October 1, 2015, retrieved September 30, 2015 
  2. Staff, LII (6 August 2007). "Bribery". LII / Legal Information Institute. Archived from the original on 8 March 2018. Retrieved 8 May 2018.