ರತ್ನಾಭರಣಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಂಬರಿನ ಸರಪದಕಗಳು

ರತ್ನಾಭರಣಗಳು ವೈಯಕ್ತಿಕ ಶೃಂಗಾರಕ್ಕೆ ಧರಿಸಲಾಗುವ ಬ್ರೋಚುಗಳು, ಉಂಗುರಗಳು, ಕಂಠಹಾರಗಳು, ಕಿವಿಯೋಲೆಗಳು, ಲೋಲಕಗಳು ಮತ್ತು ಕಂಕಣಗಳಂತಹ ಸಣ್ಣ ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತವೆ. ರತ್ನಾಭರಣಗಳನ್ನು ಮೈ ಮೇಲೆ ಧರಿಸಬಹುದು ಅಥವಾ ಬಟ್ಟೆಗಳಿಗೆ ಲಗತ್ತಿಸಬಹುದು, ಮತ್ತು ಈ ಪದವು ಬಾಳಿಕೆ ಬರುವ ವಸ್ತುಗಳಿಗೆ ಸೀಮಿತವಾಗಿದೆ, ಮತ್ತು ಹೂವುಗಳಂತಹ ವಸ್ತುಗಳನ್ನು ಬಿಟ್ಟು. ಅನೇಕ ಶತಮಾನಗಳಿಂದ, ಹಲವುವೇಳೆ ರತ್ನಗಳು ಸೇರಿ, ಲೋಹವು ರತ್ನಾಭರಣಗಳಿಗೆ ಸಾಮಾನ್ಯ ವಸ್ತುವಾಗಿದೆ, ಆದರೆ ಚಿಪ್ಪುಗಳು ಮತ್ತು ಇತರ ಸಸ್ಯಜನ್ಯ ವಸ್ತುಗಳಂತಹ ಇತರ ವಸ್ತುಗಳನ್ನು ಬಳಸಬಹುದು. ಇದು ಪುರಾತತ್ವ ಕಲಾಕೃತಿಯ ಅತ್ಯಂತ ಹಳೆಯ ಬಗೆಗಳಲ್ಲಿ ಒಂದಾಗಿದೆ – ನ್ಯಾಸೇರಿಯಸ್ ಚಿಪ್ಪುಗಳಿಂದ ತಯಾರಿಸಲ್ಪಟ್ಟ ೧೦೦,೦೦೦ ವರ್ಷ ಹಳೆಯ ಮಣಿಗಳು ಪರಿಚಿತವಿರುವ ಅತ್ಯಂತ ಹಳೆಯ ರತ್ನಾಭರಣಗಳು ಎಂದು ನಂಬಲಾಗಿದೆ.[೧] ರತ್ನಾಭರಣಗಳ ಮೂಲ ರೂಪಗಳು ಸಂಸ್ಕೃತಿಗಳ ನಡುವೆ ಬದಲಾಗುತ್ತವೆ ಆದರೆ ಹಲವುವೇಳೆ ವಿಪರೀತವಾಗಿ ದೀರ್ಘಾಯುವಾಗಿವೆ; ಐರೋಪ್ಯ ಸಂಸ್ಕೃತಿಗಳಲ್ಲಿ ಪ್ರಾಚೀನ ಕಾಲದಿಂದ ಮೇಲೆ ಪಟ್ಟಿಮಾಡಲಾದ ಅತ್ಯಂತ ಸಾಮಾನ್ಯ ರೂಪದ ರತ್ನಾಭರಣಗಳು ಉಳಿದುಕೊಂಡಿವೆ, ಅದೇ ವೇಳೆ ಇತರ ಸಂಸ್ಕೃತಿಗಳಲ್ಲಿ ಪ್ರಮುಖವಾದ ಮೂಗು ಅಥವಾ ಕಣಕಾಲಿನ ಶೃಂಗಾರಗಳಂತಹ ಇತರ ರೂಪಗಳು ಕಡಿಮೆ ಸಾಮಾನ್ಯವಾಗಿವೆ.

ರತ್ನಾಭರಣಗಳನ್ನು ವ್ಯಾಪಕ ಶ್ರೇಣಿಯ ಸಾಮಗ್ರಿಗಳಿಂದ ತಯಾರಿಸಬಹುದು. ರತ್ನಗಳು ಮತ್ತು ಅಂಬರು ಹಾಗೂ ಹವಳ, ಅಮೂಲ್ಯ ಲೋಹಗಳು, ಮಣಿಗಳು, ಹಾಗೂ ಚಿಪ್ಪುಗಳಂತಹ ಹೋಲುವ ಸಾಮಗ್ರಿಗಳನ್ನು ವ್ಯಾಪಕವಾಗಿ ಬಳಸಲಾಗಿದೆ, ಮತ್ತು ಹಲವುವೇಳೆ ಗಾಜುಲೇಪ ಪ್ರಮುಖವಾಗಿ ಉಳಿದಿದೆ. ಬಹುತೇಕ ಸಂಸ್ಕೃತಿಗಳಲ್ಲಿ ರತ್ನಾಭರಣವನ್ನು ಅದರ ಭೌತಿಕ ಗುಣಲಕ್ಷಣಗಳಿಗಾಗಿ, ಅದರ ನಮೂನೆಗಳಿಗಾಗಿ, ಅಥವಾ ಅರ್ಥಪೂರ್ಣ ಸಂಕೇತಗಳಿಗಾಗಿ ಸ್ಥಾನಮಾನದ ಸಂಕೇತವಾಗಿ ಅರ್ಥಮಾಡಿಕೊಳ್ಳಬಹುದು. ರತ್ನಾಭರಣವನ್ನು ಬಹುತೇಕ ಪ್ರತಿಯೊಂದು ದೈಹಿಕ ಭಾಗವನ್ನು ಅಲಂಕರಿಸಲು ತಯಾರಿಸಲಾಗಿದೆ, ಹೇರ್ ಪಿನ್ನುಗಳಿಂದ ಕಾಲುಂಗುರಗಳವರೆಗೆ, ಜನನಾಂಗಗಳ ರತ್ನಾಭರಣಗಳು ಕೂಡ. ಲಿಂಗಗಳ ನಡುವೆ, ಮಕ್ಕಳು ಮತ್ತು ವೃದ್ಧರು ರತ್ನಾಭರಣಗಳನ್ನು ಧರಿಸುವ ನಮೂನೆಗಳು ಸಂಸ್ಕೃತಿಗಳ ನಡುವೆ ಬಹಳವಾಗಿ ಬದಲಾಗಬಹುದು, ಆದರೆ ಹೆಂಗಸರು ರತ್ನಾಭರಣಗಳನ್ನು ಧರಿಸುವಲ್ಲಿ ಅತಿ ಹೆಚ್ಚು ನಿಷ್ಠರಾಗಿದ್ದಾರೆ; ಆಧುನಿಕ ಐರೋಪ್ಯ ಸಂಸ್ಕೃತಿಯಲ್ಲಿ ಗಂಡಸರು ಧರಿಸುವ ಆಭರಣಗಳ ಪ್ರಮಾಣ ಇತರ ಸಂಸ್ಕೃತಿಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆ ಇದೆ.

ಮಾನವರು ರತ್ನಾಭರಣಗಳನ್ನು ಹಲವಾರು ಭಿನ್ನ ಕಾರಣಗಳಿಗಾಗಿ ಬಳಸಿದ್ದಾರೆ: ಕ್ರಿಯಾತ್ಮಕ ಕಾರಣಗಳು, ಉದಾ. ಸಾಮಾನ್ಯವಾಗಿ ಉಡುಪು ಅಥವಾ ಕೂದಲನ್ನು ಅದರ ಜಾಗದಲ್ಲಿ ಭದ್ರಪಡಿಸಲು, ಅಥವಾ ಸಮಯ ಹೇಳಲು (ಕೈಗಡಿಯಾರದ ವಿಷಯದಲ್ಲಿ); ಸಾಮಾಜಿಕ ಸ್ಥಾನಮಾನದ ಮತ್ತು ವೈಯಕ್ತಿಕ ಸ್ಥಾನಮಾನದ ಸೂಚಕವಾಗಿ, ಉದಾ. ಮದುವೆ ಉಂಗುರ; ಯಾವುದೋ ರೂಪದ ಸದಸ್ಯತ್ವದ ಸೂಚಕವಾಗಿ, ಜನಾಂಗೀಯ, ಧಾರ್ಮಿಕ ಅಥವಾ ಸಾಮಾಜಿಕ; ಮಾಂತ್ರಿಕ ರಕ್ಷಣೆ ಒದಗಿಸಲು (ತಾಯಿತಗಳ ರೂಪದಲ್ಲಿ); ಕಲಾತ್ಮಕ ಪ್ರದರ್ಶನವಾಗಿ; ವೈಯಕ್ತಿಕ ಅರ್ಥದ ಸಂಕೇತವಾಗಿ, ಉದಾ. ಪ್ರೀತಿ, ಶೋಕಾಚರಣೆ, ಅಥವಾ ಅದೃಷ್ಟ.

ಉಲ್ಲೇಖಗಳು[ಬದಲಾಯಿಸಿ]