ರತ್ನನ್‌ ಪ್ರಪಂಚ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರತ್ನನ್ ಪ್ರಪಂಚ
ನಿರ್ದೇಶನರೋಹಿತ್ ಪದಕಿ
ನಿರ್ಮಾಪಕಕಾರ್ತಿಕ್‌ ಗೌಡ, ಯೋಗಿ ಜಿ. ರಾಜ್
ಲೇಖಕರೋಹಿತ್ ಪದಕಿ
ಪಾತ್ರವರ್ಗಧನಂಜಯ್,ರೆಬಾ ಮೋನಿಕಾ ಜಾನ್, ಉಮಾಶ್ರೀ
ಸಂಗೀತಅಜನೀಶ್‌ ಲೋಕನಾಥ್
ಛಾಯಾಗ್ರಹಣಶ್ರೀಶ ಕುದುವಳ್ಳಿ
ಸಂಕಲನದೀಪು ಎಸ್‌ ಕುಮಾರ್
ಸ್ಟುಡಿಯೋಹೊಂಬಾಳೆ ಫಿಲಂಸ್‌, ಕೆ.ಆರ್.ಜಿ. ಸ್ಟೂಡಿಯೋಸ್
ವಿತರಕರುಅಮೆಜಾನ್ ಪ್ರೈಮ್ ವಿಡಿಯೋ
ಬಿಡುಗಡೆಯಾಗಿದ್ದು೨೨ ಅಕ್ಟೋಬರ್ ೨೦೨೧
ಅವಧಿ೧೪೭ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ರತ್ನನ್ ಪ್ರಪಂಚ ೨೦೨೧ರಲ್ಲಿ ಬಿಡುಗಡೆಗೊಂಡ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಕೆಆರ್‌ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಿಸಿ, ರೋಹಿತ್ ಪದಕಿ ಚಿತ್ರಕ್ಕೆ ಕತೆ ಬರೆದು ನಿರ್ದೇಶಿಸಿದ್ದಾರೆ.[೧] ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಧನಂಜಯ್,ರೆಬಾ ಮೋನಿಕಾ ಜಾನ್, ಶ್ರುತಿ, ಉಮಾಶ್ರೀ, ರವಿಶಂಕರ್ ಗೌಡ, ಅನು ಪ್ರಭಾಕರ್, ಅಚ್ಯುತ್‌ ರಾವ್‌, ಪ್ರಮೋದ್ ಪಂಜು ಮುಂತಾದವರು ಇರುವರು. ೨೨ ಅಕ್ಟೋಬರ್ ೨೦೨೧ರಂದು ಈ ಚಿತ್ರವು ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರುವಂಥಹ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಯಿತು.[೨] ಇದು ರೆಬಾ ಮೋನಿಕಾ ಜಾನ್ ಅವರ ಚೊಚ್ಚಲ ಕನ್ನಡ ಚಿತ್ರವಾಗಿದೆ. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಈ ಚಿತ್ರಕ್ಕಿದೆ.[೩]

ಕಥಾ ಸಾರಾಂಶ[ಬದಲಾಯಿಸಿ]

ತನ್ನ ತಾಯಿಯ ಅತಿ ಪ್ರೀತಿ, ಒರಟುತನ, ಪೆದ್ದುತನ ಎಲ್ಲಕ್ಕೂ ಸಿಡಿಮಿಡಿಗೊಳ್ಳುವ ಮಧ್ಯಮ ವರ್ಗದ ಯುವಕ ರತ್ನಾಕರ. ತಾಯಿಯಿಂದ ಬಿಡಿಸಿಕೊಂಡು ದೂರ ಹೋಗುವ ಬಯಕೆ ಅವನದ್ದು. ಆದರೆ ಅಚಾನಕ್ಕಾಗಿ ಒಂದು ದಿನ ತನ್ನ ತಾಯಿ ತನ್ನವಳಲ್ಲವೆಂದು ಬದಲಿಗೆ ತನ್ನ ಹೆತ್ತ ತಾಯಿ ಬೇರೆಯವಳೊಬ್ಬಳಿದ್ದಾಳೆಂದು ತಿಳಿದು ಬರುತ್ತದೆ ಆಗ ರತ್ನಾಕರ ಆಕೆಯನ್ನು ಹುಡುಕಲು ಹೊರಡುತ್ತಾನೆ. ಈ ಹುಡುಕಾಟದಲ್ಲಿ ಆತ ಕಂಡುಕೊಳ್ಳುವ ಸತ್ಯಗಳು, ಎದುರಿಸುವ ಸಮಸ್ಯೆಗಳು, ಸುಖಗಳು, ಭೇಟಿಯಾಗುವ ಜನ, ಎದುರಿಸುವ ಭಾವ ತೀವ್ರತೆಯ ಸನ್ನಿವೇಶಗಳು ಇವೆಲ್ಲದರ ಸುತ್ತ ಈ ಚಿತ್ರದ ಕತೆ ಸಾಗುತ್ತದೆ.[೪]

ನಿರ್ಮಾಣ[ಬದಲಾಯಿಸಿ]

"ರತ್ನನ ಪ್ರಪಂಚ" ಚಲನಚಿತ್ರವನ್ನು ಮೈಸೂರು,ಬೆಂಗಳೂರು, ಕಾಶ್ಮೀರ,ಗೋಕಾಕ್‌, ಗೋಕರ್ಣ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಯ್ತು.[೫]

ಪಾತ್ರ ವರ್ಗ[ಬದಲಾಯಿಸಿ]

  • ರತ್ನಾಕರನಾಗಿ ಧನಂಜಯ್[೬]
  • ಮಯೂರಿಯಾಗಿ ರೆಬಾ ಮೋನಿಕಾ ಜಾನ್
  • ಸರೋಜಾ ಬಾಯಿಯಾಗಿ ಉಮಾಶ್ರೀ (ರತ್ನಾಕರನನ್ನು ದತ್ತು ಪಡೆದ ತಾಯಿ)
  • ಯಲ್ಲವ್ವನಾಗಿ ಶ್ರುತಿ (ಉಡಾಲ್ ಬಾಬು ರಾವನ ದತ್ತು ತಾಯಿ)
  • ಉಡಾಲ್ ಬಾಬು ರಾವ್ ಆಗಿ ಪ್ರಮೋದ್ ಪಂಜು (ರತ್ನಾಕರನ ಕಿರಿಯ ಸಹೋದರನಾಗಿ)
  • ತಬಸ್ಸುಮ್ ಆಗಿ ಅನು ಪ್ರಭಾಕರ್ (ರತ್ನಾಕರನ ಹಿರಿಯ ಸಹೋದರಿ)
  • ಅಹ್ಮದ್ ಅಲಿಯಾಗಿ ರವಿಶಂಕರ್ ಗೌಡ (ತಬಸ್ಸುಮ್ ಪತಿ)
  • ಬೆಣ್ಣೆಯಾಗಿ ವೈನಿಧಿ ಜಗದೀಶ್ (ಉಡಾಲ್ ಬಾಬು ರಾವ್ ನ ಪ್ರಿಯತಮೆ)
  • ತ್ರಿವೇಣಿಯಾಗಿ ಶೋಭಾ ರಾಘವೇಂದ್ರ (ರತ್ನಾಕರ್, ತಬಸ್ಸುಮ್, ಉಡಾಲ್ ಬಾಬುರಾವ್ ಅವರ ಹೆತ್ತ ತಾಯಿ)
  • ಬಸಪ್ಪನಾಗಿ ಅಚ್ಯುತ್ ಕುಮಾರ್ (ಉಡಾಲ್ ಬಾಬು ರಾವ್ ನ ದತ್ತು ತಂದೆ)
  • ಪಾರವ್ವ ಪಾತ್ರದಲ್ಲಿ ಅಕ್ಕೈ ಪದ್ಮಶಾಲಿ (ಮಯೂರಿಯ ಸಾಕು ತಾಯಿ)
  • ಶ್ರೀನಾಥ್ ಪಾತ್ರದಲ್ಲಿ ರಾಜೇಶ್ ನಟರಂಗ (ಪತ್ರಿಕಾ ಸಂಪಾದಕ)
  • ಬೂಬಮ್ಮನಾಗಿ ಉಷಾ ಭಂಡಾರಿ (ಸರೋಜಾ ಬಾಯಿಯ ನೆರೆಹೊರೆ ಮತ್ತು ಸ್ನೇಹಿತೆ)
  • ರತ್ನಾಕರನ ಗೆಳೆಯನಾಗಿ ಅಶ್ವಿನ್ ರಾವ್ ಪಲ್ಲಕ್ಕಿ
  • ರಘು ಪಾತ್ರದಲ್ಲಿ ಅಶೋಕ್ ಶರ್ಮಾ (ಸರೋಜಾ ಬಾಯಿಯ ಹೆತ್ತ ಮಗ)
  • ರಘುವಿನ ಪತ್ನಿಯಾಗಿ ದಿವ್ಯಶ್ರೀ ಮೋಹನ್
  • ಪೋಸ್ಟ್ ಮ್ಯಾನ್ ರಮೇಶ್ ಪಾತ್ರದಲ್ಲಿ ಶಿವಾಜಿ ರಾವ್ ಜಾಧವ್ (ಸರೋಜಾ ಬಾಯಿಯ ಪತಿ)
  • ಅಜ್ಘರ್ ಸಾಬ್ ಮುಲ್ಲಾ ಆಗಿ ಅನಂತವೇಲು
  • ಮುಶ್ಫಿಕರ್ ಆಗಿ, .ಕೆ. ಮಠ ( ತಬಸ್ಸುಮ್ ನ ದತ್ತು ತಂದೆ)
  • ರತ್ನಾಕರನ ಸ್ನೇಹಿತ ಮತ್ತು ಬ್ರೋಕರ್ ಆಗಿ ಗೋವಿಂದೇಗೌಡ
  • ದಾನ್ಯನಾಗಿ ದಾನಪ್ಪ ಮೂಡಲಗಿ
  • ಯಶವಂತ ಬಿಜೂರ್ (ಗ್ರಾಮಸ್ಥರು)
  • ವೀಣಾ ರಾವ್ (ಗ್ರಾಮಸ್ಥರು)
  • ಜಹಾಂಗೀರ್ (ಗ್ರಾಮಸ್ಥರು)
  • ತಿಲಕ್ ಶೇಖರ್ (ಮಯೂರಿಯ ಗೆಳೆಯ)
  • ವೈಜನಾಥ ಬಿರಾದಾರ್ (ಕುರುಡನಾಗಿ ಅತಿಥಿ ಪಾತ್ರದಲ್ಲಿ)
  • ಸುಂದರ್ ವೀಣಾ (ಟ್ರಾಫಿಕ್ ಇನ್ಸ್‌ಪೆಕ್ಟರ್‌ ಆಗಿ ಅತಿಥಿ ಪಾತ್ರದಲ್ಲಿ)
  • ತಾಯಂದಿರ ದಿನದ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ರಕ್ಷಿತಾ ಶೆಟ್ಟಿ (ಅತಿಥಿ ಪಾತ್ರದಲ್ಲಿ)

ಹಾಡುಗಳು[ಬದಲಾಯಿಸಿ]

ರತ್ನನ್ ಪ್ರಪಂಚ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಡುಗಳ ಹಕ್ಕನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಈ ಹಾಡುಗಳನ್ನು ೨೦೨೧ ಅಕ್ಟೋಬರ್ ನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಚಿತ್ರ ಒಟ್ಟು ಮೂರು ಹಾಡುಗಳನ್ನು ಹೊಂದಿದೆ[೭].

ಹಾಡುಗಳ ಪಟ್ಟಿ
ಕ್ರ.ಸಂ. ಹಾಡು ಗಾಯಕರು ಸಾಹಿತ್ಯ ಅವಧಿ
೧. ಗಿಚ್ಚಿ ಗಿಲಿಗಿಲಿ ಪುನೀತ್ ರಾಜ್‍ಕುಮಾರ್ ಶಿವು ಬೆರ್ಗಿ ೦೪.೦೦
೨. ವಾಟ್ಟ ಲೈಫು ಅಜನೀಶ್ ಲೋಕನಾಥ್ ಪ್ರಮೋದ್‌ ಮರವಂತೆ ೦೩.೫೫
೩. ಅಲೆಮಾರಿಯೇ ಸಂಜಿತ್‌ ಹೆಗ್ಡೆ, ಅಜನೀಶ್ ಲೋಕನಾಥ್ ರೋಹಿತ್‌ ಪದಕಿ ೦೫.೧೨


ಉಲ್ಲೇಖಗಳು[ಬದಲಾಯಿಸಿ]

  1. "Dhananjaya to collaborate with Rohit Padaki on dark comedy". The Times of India (in ಇಂಗ್ಲಿಷ್). Retrieved 2021-07-28.
  2. "ರತ್ನನ್‌ ಪ್ರಪಂಚ ಓಟಿಟಿ ರಿಲೀಸ್‌ಗೆ 3 ತಿಂಗಳ ಹಿಂದೆಯೇ ನಿರ್ಧಾರ".
  3. "Dhananjaya's Rathnan Prapancha gets an official launch today". The Times of India (in ಇಂಗ್ಲಿಷ್). Retrieved 2021-07-28.
  4. "ರತ್ನನ ಭಾವುಕ ಪ್ರಪಂಚದಲ್ಲೊಂದು ಸುಂದರ ಪಯಣ".
  5. "Rathnan Prapancha to go on floors on November 9". The New Indian Express (in ಇಂಗ್ಲಿಷ್). Retrieved 2021-07-28.
  6. "'ರತ್ನನ್ ಪ್ರಪಂಚ' ಕಟ್ಟೋಕೆ ಹೊರಟಿದ್ದಾರೆ ಡಾಲಿ ಧನಂಜಯ್..!". Asianet News Network Pvt Ltd. Retrieved 2021-07-28.
  7. https://www.hungama.com/album/rathnan-prapancha/76354533/