ಯೌವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಬ್ಬ ಯುವತಿ

ಯೌವನವು ಒಬ್ಬರು ಪ್ರಾಯದವರಾಗಿದ್ದಾಗಿನ ಜೀವನದ ಸಮಯ, ಆದರೆ ಹಲವುವೇಳೆ ಇದರ ಅರ್ಥ ಬಾಲ್ಯ ಹಾಗು ಪಡೆತನದ ನಡುವಿನ ಸಮಯ (ಪ್ರೌಢಾವಸ್ಥೆ). ಯೌವನದ ಭಾಗವಾಗಿರುವ ನಿರ್ದಿಷ್ಟ ವಯಸ್ಸಿನ ಪರಿಮಿತಿಯ ವ್ಯಾಖ್ಯಾನಗಳು ಬದಲಾಗುತ್ತವೆ. ಒಬ್ಬ ವ್ಯಕ್ತಿಯ ವಾಸ್ತವಿಕ ಪ್ರೌಢಾವಸ್ಥೆ ಮತ್ತು ಅವರ ಕಾಲಾನುಕ್ರಮದ ವಯಸ್ಸಿನ ನಡುವೆ ಸಾಮ್ಯತೆಯಿಲ್ಲದಿರಬಹುದು, ಏಕೆಂದರೆ ಎಲ್ಲ ವಯಸ್ಸಿನಲ್ಲಿ ಪ್ರೌಢವಲ್ಲದ ವ್ಯಕ್ತಿಗಳು ಇರಬಹುದು.

ಯೌವನವು ಜೀವನದ ಕ್ರಮ. ಯೌವನ ಸ್ಥೀಮಿತ, ಯೌವನದ ಕಾಲ ಏಳೀಗೆಯನ್ನು ಕಾಣುವ ಕಾಲ, ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಘಟ್ಟ ಯೌವನ ಏಕೆಂದರೆ ಈ ಸಮಯದಲ್ಲಿ ಮನುಷ್ಯನ ದೇಹ ಬೆಳವಣಿಗೆ, ಮಾನಸಿಕ ಬೆಳವಣಿಗೆ ಅತೀ ಹೆಚ್ಚಿನ ವೇಗದಲ್ಲಿ ನೆಡೆಯುತದ್ದೆ ಈ ಕಾಲದಲ್ಲಿ ಮನುಷ್ಯ ಏಳಿಗೆ ಕಾಣುತಾನೆ, ಜವಾಬ್ದಾರಿ ಹೊಂದುತ್ತಾನೆ, ಆರ್ಥಿಕವಾಗಿ ಸ್ವಾವಲಂಬಿಯಾಗುತ್ತನೆ, ಸಂಬಂಧದ ಬೆಲೆ ತಿಳಿಯುತ್ತನೆ, ಹೊಸ-ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ. ತಂದೆ-ತಾಯಿಗಳ ಪ್ರೀತಿಯ ಆವರಣದಿಂದ ಹೊರಗೆ ಬಂದು ನಿಜವಾದ ಪ್ರಪಂಚದ ಪರಿಚಯ ತಿಳಿದುಕೊಳ್ಳುತ್ತಾನೆ.ಯೌನದಲ್ಲಿ ಕೂಡಿಟ ಹಣ, ಆಸ್ತಿ, ಅಂತಸ್ತು, ಸಂಪಾದನೆಗಳೆಲ್ಲ ಮುಪ್ಪಿನ ಕಾಲದಲ್ಲಿ ಉಪಯೋಗಕ್ಕೆ ಬರುತದ್ದೆ.ಈ ಯೌವನ ಕಾಲದಲ್ಲಿ ಆರೋಗ್ಯವನ್ನು ಕಾಪಡಿಕೊಂಡು ಬಂದಲ್ಲಿ ಮುಂದೆ ಮುಪ್ಪಿನ ಕಾಲವನ್ನು ಸುಲಭವಾಗಿ ನೆಡೆಸಬಹುದು, ಸಮತೋಲನವಾದ ಜೀವನ ಅತಿ ಮುಖ್ಯ.ಯೌವನವನ್ನು ಜೇನುಹುಳಕ್ಕೆ ಹೋಲಿಸಬಹುದು, ಏಕೆಂದರೆ ದುಂಬಿಯು ಹೇಗೆ ಸಕಾಲದಲ್ಲಿ ಜೇನನ್ನು ಶೇಕರಿಸಿ ಮುಂದೆ ತನಗೆ ಬೇಕಾದಲ್ಲಿ ಉಪಯೋಗಿಸುತದೋ ಹಾಗೆಯೇ ಯೌನದಲ್ಲಿ ಚೆನಾಗಿ ದುಡಿದೂ, ಕ್ರಮಬದ್ದೆತೆಯಿಂದ ನೆಡೆದು, ಆರೋಗ್ಯವನ್ನು ಕಾಪಾಡಿಕೊಂಡು ಬಂದಲ್ಲಿ ಮುಂದೆ ಜೀವನ ಸುಖಮಯವಾಗಿ ನೆಡೆಸಬಹುದು.ಯೌನದ ಕಾಲ ಸಾಮನ್ಯವಾಗಿ ೧೫ ದರಿಂದ ೨೫ ದವರೆಗೆ ಎಂದು ಹೇಳುತ್ತರೆ, ಆದರೆ ೩೫ ದರವರೆಗೂ ಯೌನದ ಕಾಲ ಎಂದು ಪರಿಗಣಿಸಬಹುದು.ಯೌವನದ ಕಾಲದಲ್ಲಿ ಮತಚಲಾವಣೆಯ ಹಕ್ಕು ಸಿಗುತ್ತದೆ, ವಾಹನ ಚಾಲನೆ ಮಾಡಬಹುದು, ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಯಬಹುದು.ಯೌವನ ಜೀವನದಲ್ಲಿ ಬರುವ ಅತೀ ಸುಂದರವಾದ, ಅದ್ಬುತವಾದ ಚಕಿತಗೋಳಿಸುವ ದಿನಗಳು.ಈ ಕಾಲವನ್ನು ಕೆಟ್ಟ ರೀತಿಗಳಿಗೆ ಉದಾಹರಣೆಗೆ:ಕುಡಿತ, ತಂಬಾಕು, ಹೆಣ್ಣುಗಳ ಸಹವಾಸ, ಕಳತನ, ದರೋಡೆ, ಕೊಲೆ, ರೌಡಿಗಳ ಸಹವಾಸ, ಹೀಗೆ ಅನೇಕ ಕೆಟ್ಟ ಹಾಗು ತಪ್ಪು ದಾರಿಗಳಲ್ಲಿ ನೆಡೆದು ಅತಿ ಅಪರೂಪವಾಗಿ ದೊರೆಯುವ ಯೌವನವನ್ನು ಹಾಳುಮಾಡಿಕೊಂಡರೆ ಮುಂದೆ ಜೀವನದಲ್ಲಿ ಒಳ್ಳೆಮನುಷ್ಯನಾಗಿ ಬದುಕುವುದು ಅಸಾಧ್ಯ, ಹಾಗಾಗಿ ನಮ್ಮ ಜೀವನ ನಮ್ಮ ಯೌವನ ನಮ್ಮ ಹಿಡಿತದಲ್ಲಿಯೇ ಇದೆ,ಅದನ್ನು ಸಾಕಾರಗೊಳಿಸುವುದು ಅತಿ ಮುಖ್ಯ. ನಮ್ ಜೀವವು ಒಂದ್ ಅದನು ನಾವು ಸಂತೋಷದಿಂದ ಜೀವಿಸಬೇಕು.

"https://kn.wikipedia.org/w/index.php?title=ಯೌವನ&oldid=1092200" ಇಂದ ಪಡೆಯಲ್ಪಟ್ಟಿದೆ