ಉದ್ಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಯೋಗವು (ವೃತ್ತಿ) ಸಮಾಜದಲ್ಲಿ ಒಬ್ಬ ವ್ಯಕ್ತಿಯ ಪಾತ್ರವಾಗಿರುತ್ತದೆ. ಹೆಚ್ಚು ನಿರ್ದಿಷ್ಟವಾಗಿ, ಉದ್ಯೋಗವು ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ (ಜೀವನ ನಿರ್ವಹಣೆಗಾಗಿ) ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆ. ಅನೇಕ ಜನರಿಗೆ ಬಹು ಉದ್ಯೋಗಗಳಿರುತ್ತವೆ (ಉದಾ. ಹೆತ್ತವನ/ಳ ಉದ್ಯೋಗ, ಗೃಹಿಣಿ, ಮತ್ತು ಉದ್ಯೋಗಿ). ಒಬ್ಬ ವ್ಯಕ್ತಿಯು ಉದ್ಯೋಗಿಯಾಗಿ, ಸ್ವಯಂಸೇವಕನಾಗಿ, ಉದ್ಯಮವನ್ನು ಶುರುಮಾಡಿ, ಅಥವಾ ತಂದೆ ಅಥವಾ ತಾಯಿಯಾಗಿ ಉದ್ಯೋಗವನ್ನು ಆರಂಭಿಸಬಹುದು. ಉದ್ಯೋಗದ ಕಾಲಾವಧಿ ತಾತ್ಕಾಲಿಕದಿಂದ (ಉದಾ. ಗಂಟೆಗಂಟೆಯ ಚಿಲ್ಲರೆ ಕೆಲಸಗಳು) ಹಿಡಿದು ಜೀವಮಾನದವರೆಗೆ ಇರಬಹುದು (ಉದಾ. ನ್ಯಾಯಾಧೀಶರು).

ಕೆಲಸವೆಂದರೆ ಒಬ್ಬ ವ್ಯಕ್ತಿಯ ಮಾನಸಿಕ ಅಥವಾ ದೈಹಿಕ ಶ್ರಮದ ಅಗತ್ಯವಿರುವ ಒಂದು ಚಟುವಟಿಕೆ. ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಬಗೆಯ ಉದ್ಯೋಗಕ್ಕಾಗಿ ತರಬೇತಿ ಪಡೆದಿದ್ದರೆ, ಅವರು ಒಂದು ವೃತ್ತಿಯನ್ನು ಹೊಂದಿರಬಹುದು. ಸಾಮಾನ್ಯವಾಗಿ, ಉದ್ಯೋಗವು ಒಬ್ಬರ ವೃತ್ತಿಜೀವನದ ಉಪ-ವರ್ಗವಾಗಿರುತ್ತದೆ.

ಬಹುತೇಕ ಜನರು ಪ್ರತಿ ವಾರಕ್ಕೆ ನಲವತ್ತು ಅಥವಾ ಹೆಚ್ಚು ಗಂಟೆಗಳವರೆಗೆ ಕೆಲಸ ಮಾಡಿ ಪ್ರತಿಫಲವಾಗಿ ಹಣ ಪಡೆಯುತ್ತಾರೆ. ಕೆಲವು ಅಪವಾದಗಳೆಂದರೆ ಮಕ್ಕಳು, ನಿವೃತ್ತಿ ಹೊಂದಿದವರು, ಮತ್ತು ಅಂಗವಿಕಲರು; ಆದರೆ, ಈ ಗುಂಪುಗಳೊಳಗೆ, ಅನೇಕರು ಅರೆಕಾಲಿಕವಾಗಿ, ಸ್ವಯಂಸೇವಕರಾಗಿ, ಅಥವಾ ಗೃಹಿಣಿಯಾಗಿ ಕೆಲಸ ಮಾಡುತ್ತಾರೆ. ೫ ಅಥವಾ ಅದರ ಸುಮಾರಿನ ವಯಸ್ಸಿನಿಂದ, ವಿಧ್ಯಾರ್ಥಿಯಾಗಿ ಕಲಿಯುವುದು ಮತ್ತು ಅಧ್ಯಯನ ಮಾಡುವುದು ಅನೇಕ ಮಕ್ಕಳ ಪ್ರಧಾನ ಪಾತ್ರವಾಗಿರುತ್ತದೆ.

ಪ್ರತಿ ವಾರಕ್ಕೆ ದುಡಿಯುವ ಗಂಟೆಗಳನ್ನು ಆಧರಿಸಿ ಉದ್ಯೋಗಗಳನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ಉದ್ಯೋಗ ಎಂದು ವರ್ಗೀಕರಿಸಬಹುದು. ಉದ್ಯೋಗಗಳನ್ನು ತಾತ್ಕಾಲಿಕ, ಚಿಲ್ಲರೆ ಕೆಲಸಗಳು, ಸಮಯಾನುಸಾರವಾದ ಉದ್ಯೋಗಗಳು, ಸ್ವ-ಉದ್ಯೋಗ, ಸಲಹಾ ಉದ್ಯೋಗಗಳು, ಅಥವಾ ಗುತ್ತಿಗೆ ಉದ್ಯೋಗವೆಂದು ವರ್ಗೀಕರಿಸಬಹುದು.

ಮುಖ್ಯ ಉದ್ಯೋಗ ಪದವಿನ್ಯಾಸವನ್ನು ಹಲವುವೇಳೆ, ತಮ್ಮ ಇಷ್ಟದ ವೃತ್ತಿಯಲ್ಲಿ ಕಡಿಮೆ ಆದಾಯದ (ಅಥವಾ ಆದಾಯವಿಲ್ಲದ) ಕೆಲಸ ಮಾಡಿಕೊಂಡು, ಜೀವನೋಪಾಯಕ್ಕಾಗಿ ಒಬ್ಬರು ಮಾಡುವ ಉದ್ಯೋಗವನ್ನು ಸೂಚಿಸಲು ಬಳಸಲಾಗುತ್ತದೆ. ಇದರ ಮೂಲಮಾದರಿಯ ಉದಾಹರಣೆಗಳೆಂದರೆ ಒಬ್ಬ ಮಹಿಳೆ ನಟಿಯಾಗಲು ಪ್ರಯತ್ನ ಮಾಡಿಕೊಂಡು ಪರಿಚಾರಿಕೆಯಾಗಿ ಉದ್ಯೋಗ ಮಾಡುವುದು (ಅವಳ ಮುಖ್ಯ ಉದ್ಯೋಗ), ಮತ್ತು ಪ್ರಸಕ್ತವಾಗಿ ಆತನು ಕೇವಲ ಒಂದು ಅರೆವೃತ್ತಿಪರ ತಂಡದ ಸರದಿಪಟ್ಟಿಯನ್ನು ಸೇರಿಕೊಳ್ಳಬಹುದಾದ ಕಾರಣದಿಂದ ಅಕಾಲದಲ್ಲಿ ಶ್ರಮಜೀವಿಯಾಗಿ ಕೆಲಸ ಮಾಡಿಕೊಂಡಿರುವ ವೃತ್ತಿಪರ ಕ್ರೀಡಾಪಟು.

ಅನೇಕ ಜನರು ಪೂರ್ಣಕಾಲದ ವೃತ್ತಿಯನ್ನು ಹೊಂದಿರುತ್ತಾರಾದರೂ, "ಮುಖ್ಯ ಉದ್ಯೋಗ" ಪದವು ನಿರ್ದಿಷ್ಟವಾಗಿ ಕೇವಲ ದೈನಂದಿನ ಖರ್ಚುಗಳನ್ನು ಪಾವತಿಸಲು ಈ ಸ್ಥಾನವನ್ನು ಹೊಂದಿರುವವರನ್ನು ಸೂಚಿಸುತ್ತದೆ, ಮತ್ತು ಇತರೆ ಸಮಯದಲ್ಲಿ ಇವರು ತಮಗೆ ನಿಜವಾಗಿಯೂ ಬೇಕಾದ ಕಡಿಮೆ ಆದಾಯದ ಪ್ರವೇಶ ಕಾಯಕವನ್ನು ಮುಂದುವರೆಸುತ್ತಾರೆ. ನಿಜವಾದ ವೃತ್ತಿಯು ಜೀವನಕ್ಕೆ ಬೇಕಾದಷ್ಟು ಆದಾಯವನ್ನು ಒದಗಿಸಿದರೆ, ಮುಖ್ಯ ಉದ್ಯೋಗವನ್ನು ತ್ಯಜಿಸಲಾಗುವುದು ಎಂದು ಈ ಪದಸಮುಚ್ಚಯ ಬಲವಾಗಿ ಸೂಚಿಸುತ್ತದೆ.

"https://kn.wikipedia.org/w/index.php?title=ಉದ್ಯೋಗ&oldid=923907" ಇಂದ ಪಡೆಯಲ್ಪಟ್ಟಿದೆ