ಮ್ಯಾಕರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಕರಲ್‍ನ ಕೆಲವು ಪ್ರಜಾತಿಗಳು ಕರಾವಳಿಯುದ್ದಕ್ಕೆ ಬಹಳ ದೂರಗಳವರೆಗೆ ಗುಂಪಿನಲ್ಲಿ ವಲಸೆ ಹೋಗುತ್ತವೆ ಮತ್ತು ಇತರ ಪ್ರಜಾತಿಗಳು ಮಹಾಸಾಗರಗಳನ್ನು ದಾಟುತ್ತವೆ

ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮ್ಯಾಕರಲ್ ಎನ್ನುವುದು ಮುಖ್ಯವಾಗಿ ಪಶ್ಚಿಮ ಕರಾವಳಿಯ ಪ್ರಧಾನ ಮೀನುಗಾರಿಕೆಗೆ ಕಾರಣವಾದ ಬಂಗುಡೆ (ರಾಸ್ಟ್ರೆಲ್ಲಿಜರ್ ಕನಗುರ್ತ) ಮೀನು.

ಮ್ಯಾಕರಲ್‌ಗಳು ಬಹಳ ವೇಗವಾಗಿ ಈಜಬಲ್ಲ ಹಾಗೂ ಅತ್ಯಂತ ಚಟುವಟಿಕೆಯ ಮೀನುಗಳು.

ದೇಹರಚನೆ[ಬದಲಾಯಿಸಿ]

ದೇಹದ ಮೇಲ್ಭಾಗ ನೀಲಿಬಣ್ಣದ್ದು. ಕೆಳಭಾಗ ಬಿಳಿ. ಬೆನ್ನಿನ ರೆಕ್ಕೆ ಮತ್ತು ಗುದದ ರೆಕ್ಕೆಗಳ ಹಿಂದೆ ಕಿರಿರೆಕ್ಕೆಗಳ ಸಾಲೊಂದು ಇರುವುದು.

ಮುಖ್ಯ ಜಾತಿಗಳು[ಬದಲಾಯಿಸಿ]

ನಿಜವಾದ ಮ್ಯಾಕರಲ್‌ಗಳು ಎಂದು ಹೇಳಬಹುದಾದ ಜಾತಿಗಳು:

  1. ಸ್ಕಾಂಬರ್: ಮೆಡಿಟರೇನಿಯನ್ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರಗಳಲ್ಲಿ ನೆಲಸಿರುವ ಸ್ಕಾಂಬರ್ ಸ್ಕಾಂಬ್ರಸ್ ಜಾತಿಯ ಮೀನು.[೧][೨] ಸ್ಕಾಂಬರ್ ಜಾತಿಯ ಮೀನುಗಾರಿಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜಪಾನ್, ಸ್ಕಾಂಡಿನೇವಿಯ, ನೆದರ್‌ಲ್ಯಾಂಡ್ಸ್, ಸ್ಪೇನ್, ಪೋರ್ಚುಗಲ್ ಮತ್ತು ಬ್ರಿಟನ್‌ಗಳಲ್ಲಿ ವಿಶೇಷವಾಗಿದೆ. ಸ್ಕಾಂಬರ್ ಜಪಾನಿಕಸ್ ಪ್ರಭೇದ ಪೆಸಿಫಿಕ್ ಮಹಾಸಾಗರದ ಪ್ರಧಾನ ಮ್ಯಾಕರಲ್ ಮೀನು.
  2. ರಾಸ್ಟ್ರೆಲ್ಲಿಜರ್: ರಾಸ್ಟ್ರೆಲ್ಲಿಜರ್ ಕನಗುರ್ತ (ಬಂಗುಡೆ) ಹಿಂದೂ ಮಹಾಸಾಗರದ ಮುಖ್ಯವಾದ ಮ್ಯಾಕರಲ್ ಮೀನು.[೩][೪][೫] ಭಾರತ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಇದರ ಮೀನುಗಾರಿಕೆ ಮುಖ್ಯವೆನಿಸಿದೆ.

ಬೇರೆ ಮುಖ್ಯವಾದ ಮೀನುಗಳು[ಬದಲಾಯಿಸಿ]

ಮ್ಯಾಕರಲ್ ಗುಂಪಿಗೆ ಸೇರಿದ ಆದರೆ ನಿಜವಾದ ಮ್ಯಾಕರಲ್‌ಗಳಲ್ಲದ ಬೇರೆ ಮುಖ್ಯವಾದ ಮೀನುಗಳು ಸ್ಕಾಂಬಿರೋಮೋರಸ್ (ಸುರ್ಮೈ) ಮತ್ತು ಆಕ್ಸಿಸ್ ಜಾತಿಗಳಿಗೆ ಸೇರಿದ ಮೀನುಗಳು. ಸ್ಕಾಂಬಿರೋಮೋರಸ್ ಕೆವಲ್ಲಾ ಪ್ರಭೇದ ಗುಂಪಿನ ಅತಿ ದೊಡ್ಡ ಮೀನು. ಇದು ಸುಮಾರು 50 ಕೆಜಿ ತೂಕದ್ದು. ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪೂರ್ವ ಸಮುದ್ರಗಳ ನಿವಾಸಿ. ಆ.ಥಿನ್ನಾಯ್‌ಡೆಸ್ (ಆ.ಟಾನೋಸೋಮಾ) ಸಿಕ್ಕಿರುವುದು ವರದಿಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Froese, Rainer; Pauly, Daniel (eds.) (2012). "Scomber scombrus" in FishBase. March 2012 version.
  2. "Species Fact Sheet: Scomber scombrus (Linnaeus, 1758)". FAO. Archived from the original on 2019-05-02. Retrieved 2012-03-02.
  3. Froese, Rainer; Pauly, Daniel (eds.) (2012). "Rastrelliger kanagurta" in FishBase. March 2012 version.
  4. "Species Fact Sheet: Rastrelliger kanagurta (Cuvier, 1817)". FAO. Archived from the original on 2018-08-06. Retrieved 2012-03-02.
  5. Collette, B.; Di Natale, A.; Fox, W.; Juan Jorda, M.; Nelson, R. (2011). "Rastrelliger kanagurta". IUCN Red List of Threatened Species. 2011: e.T170328A6750032. doi:10.2305/IUCN.UK.2011-2.RLTS.T170328A6750032.en. Retrieved 11 November 2021.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: