ವಿಷಯಕ್ಕೆ ಹೋಗು

ಮೆದುಳಿನ ಕ್ಯಾನ್ಸರ್ ಗೆಡ್ದೆ(ಊತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆದುಳಿನ ಗೆಡ್ಡೆ
Classification and external resources
ಮೆದುಳಿನ ಹಿಂಭಾಗದ ಪಕ್ಷಿನೋಟ. ಎಮ್‌ಆರ್‌ಐ ಚಿತ್ರ. ಕೆಳ ಬಲಭಾಗದಲ್ಲಿ ಮೂಡಿರುವ ಮೆದುಳಿನ ಗೆಡ್ಡೆ
ICD-10C71, D33.0-D33.2
ICD-9191, 225.0
DiseasesDB30781
MedlinePlus007222 000768
eMedicineemerg/334
MeSHD001932

ಮೆದುಳಿನ ಗೆಡ್ಡೆ ಎಂದರೆ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.

ಪ್ರಾಥಮಿಕವಾಗಿ ಮಕ್ಕಳಲ್ಲಿ ಪೊಸ್ಟೆರಿಯರ್ ಕ್ರೇನಲ್ ಫೊಸ್ಸಾದಲ್ಲಿ ಸಾಮಾನ್ಯವಾಗಿ ಸೆರೆಬ್ರಿಯಲ್ನಲ್ಲಿ ಈ ಗೆಡ್ಡೆಯಂತಹ ಊತ ಕಂಡು ಬರುತ್ತದೆ.ವಯಸ್ಕರ ಮೆದುಳಿನ ಎರಡು ಮೂರಾಂಶದ ಬುರುಡೆ ಭಾಗದಲ್ಲಿ ಇದು ಬೆಳವಣಿಗೆ ಕಾಣುತ್ತದೆ.ಇಲ್ಲಿ ಕ್ಯಾನ್ಸರ್ ಅಂಶಗಳು ಮೆದುಳಿನ ಯಾವುದೇ ಭಾಗಕ್ಕಾದರೂ ಪಸರಿಸಬಹುದು.

ಯುನೈಟೆಡ್ ಸ್ಟೇಟ್ಸ್ ನಲ್ಲಿ 2005ರ ಸುಮಾರಿಗೆ ಅಂದಾಜಿಸಿದಂತೆ 43,800 ಮೆದುಳು ಗೆಡ್ಡೆಯ ಹೊಸ ಪ್ರಕರಣಗಳು ಕಂಡುಬಂದವು.(ಸೆಂಟ್ರಲ್ ಬ್ರೇನ್ ಟ್ಯುಮರ್ ರಜಿಸ್ಟ್ರಿ ಆಫ್ ಯುನೈಟೆಡ್ ಸ್ಟೇಟ್ಸ್ ,ಪ್ರೈಮರಿ ಬ್ರೇನ್ ಟ್ಯುಮರ್ಸ್ ಇನ್ ದಿ ಯುನೈಟೆಡ್ ಸ್ಟ್ಯಾಟಿಸ್ತಿಕಲ್ ರಿಪೊರ್ಟ್ ,[]2005-2006),ಇದು ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ1.4ರಷ್ಟು ಪಾಲು []ಹೊಂದಿತ್ತು.ಅಲ್ಲದೇ ಎಲ್ಲಾ ಪ್ರಕಾರದ ಕ್ಯಾನ್ಸರ್ []ಸಾವುಗಳಲ್ಲಿ ಇದರ ಪ್ರಮಾಣವು 2.4ರಷ್ಟಿತ್ತು.ಇದರಲ್ಲಿ ಪಾದಕ್ಕೆ ಸಂಬಂಧಿಸಿದ ಕ್ಯಾನ್ಸರ್ ಗೆ ಸುಮಾರು 20-25ರಷ್ಟು []ಸಾವಿಗೀಡಾದ ಸಂಖ್ಯೆ ಇತ್ತು. ಕೊನೆಯದಾಗಿ ಅಂದಾಜಿಸಿದಂತೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರತಿವರ್ಷ ಮೆದುಳಿನ ಗೆಡ್ಡೆ ಅಥವಾ ಊತದ ರೋಗದಿಂದ 13,000 ಸಾವಿರ ಸಾವುಗಳು []ಸಂಭವಿಸುತ್ತವೆ.

ಕಾರಣಗಳು

[ಬದಲಾಯಿಸಿ]

ಮೆಟಾಸ್ಟಿಕ್ ಅಥವಾ ಸ್ಥಾನಾಂತರ ಕ್ರಿಯೆಯ ಕ್ಯಾನ್ಸರ್ ಗಳು ಸಾಮಾನ್ಯವಾಗಿ ಪ್ರಾಥಮಿಕ ಮೆದುಳು ಗೆಡ್ಡೆ ಮತ್ತು ಬೆನ್ನುಮೂಳೆಭಾಗಗಳಿಗಿಂತ ಹೆಚ್ಚು ಕಂಡುಬರುತ್ತವೆ.

ವಿನಿಲ್ ಕ್ಲೊರೈಡ್ ಗೆ ಒಡ್ಡಿಕೊಳ್ಳುವುದು ಅಥವಾ ವಿಕಿರಣದ ಕಣಗಳಿಗೆ ತೆರೆದುಕೊಳ್ಳುವುದರಿಂದ ಕ್ಯಾನ್ಸರ್ ಬರುತ್ತದೆ.ಆದರೆ ಮೆದುಳಿನ ಗೆಡ್ಡೆ ರೋಗಕ್ಕೆ ಯಾವುದೇ ಪರಿಸರದ ಅಂಶಗಳು ಕಾರಣವಾಗಿವೆ ಎಂಬುದನ್ನು ಕಂಡು ಹಿಡಿದಿಲ್ಲ. ಊತದ ಅಥವಾ ಗೆಡ್ಡೆಯ ರೂಪಾಂತರ ಮತ್ತು ಹೊಡೆದು ಹಾಕುವ ಗುಣವುಳ್ಳ ಗೆಡ್ಡೆ ತಡೆಗಟ್ಟುವ ವಂಶವಾಹಿನಿ ಅಂಗಾಂಶಗಳು ಹೋರಾಡಿದಾಗ ಇಂಥ ಮೆದುಳು ಗೆಡ್ಡೆಗಳಿಗೆ ಕಾರಣವಾಗಬಹುದು. ಹಲವಾರು ರೋಗಿಗಳು ಪಾರಂಪರಿಕವಾಗಿ ಬಂದ ವೊನ್ ಹಿಪ್ಪೆಲ್ -ಲಿಂಡ್ಯು ಸಿಂಡ್ರೊಮ್ ,ಮಲ್ಟಿಪಲ್ ಎಂಡೊಕ್ರಿನ್ ನಿವ್ಯೊಪ್ಲಾಸಿಯಾ,ನಿಯೊಫೆಬ್ರೊಮೆಟೊಸಿಸ್ ಎರಡನೆ ಪ್ರಕಾರದ 2 ಹಂತಗಳ ಕಾಯಿಲೆಗಳು ಸಾಮಾನ್ಯವಾಗಿ ಮೆದುಳಿನ ಗೆಡ್ಡೆ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಒಂದು []ವರದಿಯ ಪ್ರಕಾರ ಮೊಬೈಲ್ ಮತ್ತು ಸೆಲ್ ಫೋನ್ ಗಳೂ ಕೊಡಾ ಮೆದುಳಿನ್ ಅಗೆಡ್ಡೆ ಅಥವಾ ಊತಕ್ಕೆ ಕಾರಣವಾಗುತ್ತವೆ ಎಂದು ಕೆಲವರು ತಮ್ಮ ವಾದ ಮಂಡಿಸುತ್ತಿದ್ದಾರೆ.(ನೋಡಿ)ಮೊಬೈಲ್ ಫೋನ್ ವಿಕಿರಣ ಮತ್ತು ಆರೋಗ್ಯ ) ಮೆದುಳಿನ ಗೆಡ್ಡೆ ಬಗ್ಗೆಗಿನ ಸಂಸ್ಥೆಯು ಉದಾಹರಣೆಗಳನ್ನು ಪಟ್ಟಿ ಮಾಡಿದೆ.ಅಲ್ಲದೇ ಮಲೇರಿಯಾ,ರೋಗಕ್ಕೆ ಕಾರಣವಾಗುವ ಅನೊಫಿಲಿಸ್ ಎಂಬ ಸೊಳ್ಳೆಯು ಈ ರೋಗಕ್ಕೆ ಕಾರಣವಾಗುತ್ತದೆ.ಇಂತಹ ಸಂದರ್ಭದಲ್ಲಿ ಇದು ಮೆದುಳಿನ ಗೆಡ್ಡೆಯ ರೋಗವು ಬರುವ ಸಾಧ್ಯತೆ ಇರುತ್ತದೆ. [] ಹಾನಿಕಾರಕ ಅಥವಾ ಮಾಲಿಗಂಟ್ ಮೆದಳು ಗೆಡ್ಡೆ ರೋಗ ಮತ್ತು ವಿಸ್ಮೃತಿ ರೋಗ ಸಾಧ್ಯತೆ ಇದೆ.ಈ ಪ್ರಕರಣಗಳು US ನ 19ರಾಜ್ಯಗಳು ಅನುಭವಿಸುತ್ತಿರುವ ಉದಾಹರಣೆಗಳಿವೆ. ಇವೆರಡೂ ಕಾಯಿಲೆಗಳು ಉರಿತದ ಸಾಮಾನ್ಯ ಲಕ್ಷಣವನ್ನು ಹೊಂದಿರುತ್ತದೆ. []

ರೋಗ ಸೂಚನೆ ಹಾಗೂ ಲಕ್ಷಣಗಳು

[ಬದಲಾಯಿಸಿ]

ಮೆದಳು ಊತದ ಅಥವಾ ಗೆಡ್ಡೆಯ ಲಕ್ಷಣಗಳೆಂದರೆ ಎರಡು:ಗೆಡ್ಡೆಯ ಗಾತ್ರ(ಅದರ ಆಕಾರ) ಮತ್ತು ಗೆಡ್ಡೆಯ ಸ್ಥಳ. ಇದರ ಸಂಭವನೀಯ ವೇಳೆ ಮತ್ತು ಕಾಯಿಲೆಯ ಸ್ವರೂಪವು ಕೆಲವು ಕಾಯಿಲೆಗುಣಲಕ್ಷಣಗಳನ್ನು ಹೊಂದಿದೆ.("ಬೆನಿಗ್ನ್ "ಅಂದರೆ "ಸಾವಕಾಶವಾಗಿ ಬೆಳೆಯುವ ತಡವಾಗಿ ಲಕ್ಷಣತೋರುವ,ಅಥವಾ ವೇಗವಾಗಿ ಬೆಳೆಯುವ/ಕೂಡಲೇ ಲಕ್ಷಣಗಳನ್ನು ತೋರುವ)ಗುಣಗಳಿರುವದರಿಂದ ಇದಕ್ಕೆ ಮೇಲಿಂದ ಮೇಲೆ ವೈದ್ಯಕೀಯ ನೆರವನ್ನು ಪಡೆಯಬೇಕಾಗುತ್ತದೆ.

ದೊಡ್ಡ ಗೆಡ್ಡೆಗಳು ಅಥವಾ ಅಗಲವಾಗಿ ವಿಸ್ತರಿಸುವ ಊತದ ಆಕಾರದ ಗೆಡ್ಡೆಗಳು ಎಡಿಮಾಲಕ್ಷಣವು ಅನಿವಾರ್ಯವಾಗಿ ಅಧಿಕ ಇಂಟ್ರಾಕ್ರೇನಿಯಲ್ ಒತ್ತಡ ಇಂಟ್ರಾಕ್ರೇನಿಯಲ್ ಒತ್ತಡ (ಇಂಟ್ರಾಕ್ರೇನಿಯಲ್ ಹೈಪರ್ ಟೆನ್ಸನ್ ), ಇದು ತಲೆನೋವುಗಳಿಗೆ , ವಾಂತಿ (ಕೆಲವೊಮ್ಮೆ ಇಲ್ಲದ ಪಿತ್ತೋದ್ರೇಕ ), ಅಲ್ಲದೇ ಹಲವು ಲಕ್ಷಣಗಳಾದ ಪ್ರಜ್ಞೆ ತಪ್ಪುವ ಕ್ರಿಯೆ (ಮಂಪರು , ಕೊಮಾ ), ಇದರಿಂದಾಗಿ (ಅನಿಸೊಕೊರಿಯಾ), ಪಾಪಿಲ್ಲೆಡೆಮ್ಮಾ (ಪ್ರಮುಖ ಆಪ್ಟಿಕ್ ಡಿಸ್ಕ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ಆರೈಕೆ)).ಗಳ ಅಗತ್ಯ ಕಂಡು ಬರುತ್ತದೆ. ಕೆಲವೊಮ್ಮೆ ಸಣ್ಣ ಗೆಡ್ಡೆಗಳು ಸೆರೆಬ್ರೊಸ್ಪೈನಲ್ (CSF)ದ್ರವಕ್ಕೆ ಅಡಚಣೆಯನ್ನುಂಟು ಮಾಡುವ ಸಂದರ್ಭವೇ ಹೆಚ್ಚು.ಇದು ಆರಂಭಿಕವಾಗಿ ಅಧಿಕಗೊಂಡ ಇಂಟ್ರಾಕ್ರೇನಿಯಲ್ ಒತ್ತಡಕ್ಕೆ ಕಾರಣವಾಗುತ್ತವೆ. ಹೆಚ್ಚಿದ ಇಂಟ್ರಾಕ್ರೇನಿಯಲ್ ಒತ್ತಡವು ಮೆದುಳಿನಲ್ಲಿನ ಕೆಲ ಭಾಗಗಳಲ್ಲಿ ಹೆರ್ನಿಯೇಶನ್ ಗೆ(ಅಂದರೆ ಸ್ಥಾನಪಲ್ಲಟ) ಕಾರಣವಾಗುತ್ತದೆ.ಇದು ಸೆರಿಬೆಲ್ಲರ್ ಟಾನ್ಸಿಲ್ ಗೆ ಅಥವಾ ತಾತ್ಕಾಲಿಕ ಊತ ಉಂಟಾಗಿ ಅದು ಮೆದುಳಿನ ಮೆದಳು ಕಾಂಡಕ್ಕೆಒತ್ತಡದಿಂದಾಗಿ ಭಾರವಾಗುತ್ತದೆ. ಹರೆಯದ ಮಕ್ಕಳಲ್ಲಿನ ಇಂಟ್ರಾಕ್ರೇನಿಯಲ್ ಒತ್ತಡವು ಅವರ ಬುರುಡೆಯ ಗಾತ್ರ ಹೆಚ್ಚಳ ಮತ್ತು ತಲೆಯ ಸುಳಿನೆತ್ತಿಭಾಗದ ಜೋಲುಗಳು ಬೀಳಬಹುದು.

ಗೆಡ್ಡೆ ಎಲ್ಲಿ ಇದೆ ಎಂಬುದನ್ನು ಗುರ್ತಿಸಿ ಅದು ತನ್ನ ಸಮೀಪದ ಮೆದುಳಿನ ಭಾಗಕೆ ಏನು ಹಾನಿ ಮಾಡಿದೆ ಎಂಬುದನ್ನು ಅಂದಾಜು ಮಾಡಲಾಗುತ್ತದೆ.ಮೆದುಳು ಆಕಾರಗಳು, ಅದರ ಇನ್ನಿತರ ಭಾಗಗಳು ಶುದ್ದೀಕರಣಗೊಳ್ಳದ ರೀತಿಯಲ್ಲಿರುತ್ತವೆ.ಇದರಲ್ಲಿ ಅಧಿಕ ಒತ್ತಡ ಅಥವಾ ಅಶುದ್ಧತೆಯಿಂದಾಗಿ ಯಾವುದೇ ತರಹದನಾಭಿಯ ನರವ್ಯವಸ್ಥೆಯ ಲಕ್ಷಣಗಳು ಕಂಡುಬರುತ್ತವೆ. ಉದಾಹರಣೆಗೆ, ಜ್ಞಾನಗ್ರಹಿಕೆ ಸಂವೇದನೆ ಮತ್ತುನಡವಳಿಕೆಯ ಏರುಪೇರು, ವ್ಯಕ್ತಿತ್ವದಲ್ಲಿನ ಬದಲಾವಣೆಗಳು, ನರವ್ಯೂಹದ ಕೇಂದ್ರ ವ್ಯತ್ಯಾಸ , ಅಧಿಕ ಆಂತರಿಕ ಒತ್ತಡ , ಮಾತು ಸ್ಥಗಿತದ ರೋಗ , ಆಘಾತದ ಸ್ತಂಬನ , ಮಂದವಲಯ ದ ಏರುಪೇರು , ಮುಖದ ಲಕ್ವಾ , ಎರಡು ದೃಷ್ಟಿ ಕಾಣುವುದು , ನಡುಕ ಇತ್ಯಾದಿ ಲಕ್ಷಣಗಳು ಇದರಲ್ಲಿವೆ. ಇಂತಹ ಲಕ್ಷಣಗಳು ಮೆದುಳಿನ ಗೆಡ್ಡೆ ರೋಗಕ್ಕೆ ಸಂಪೂರ್ಣ ಕಾರಣವಲ್ಲದಿದ್ದರೂ ಇವು ನರವ್ಯೂಹದಲ್ಲಿನ ವಿಪರೀತತೆಯಿಂದ ಉಂಟಾಗುವ ಸಾಧಯ್ತೆ ಇದೆ.(ಉದಾಹರಣೆಗೆ ಪಾರ್ಶ್ವವಾಯು , ಆಘಾತಕಾರಿ ಮೆದುಳಿನ ಗಾಯ ). ಇದರಲ್ಲಿ ಮುಖ್ಯವಾಗಿರುವುದೆಂದರೆ ಇದು ಆಕ್ರಮಿಸಿರುವ ಸ್ಥಳ ಮತ್ತು ಅಂಗಾಂಗಗಳ ಕ್ರಿಯೆಗಳ ಮೇಲೆ ಅದರ ಪರಿಣಾಮವನ್ನು ಆಧರಿಸಿದೆ.ಉದಾಹರಣೆಗೆ ವಾಹನ,ಸಂವೇದಕಗಳು,ದೃಷ್ಟಿಇತ್ಯಾದಿ)ಇಲ್ಲಿ ದುಷ್ಪರಿಣಾಮಕ್ಕೆ ತುತ್ತಾಗುತ್ತವೆ.

ಮೊದಮೊದಲು ಕಣ್ಣಿನ ದೃಷ್ಟಿಯ ವಲಯದ ಮೇಲೆ ಎರಡರಷ್ಟು ಬೈಟೆಂಪರಲ್ ಹೆಮಿಯೆನೊಪಿಯಾ-ಅಂದರೆ ಇದು ಕಣ್ಣಿನ ಒಳಭಾಗದ ಮೇಲಿನ ಒತ್ತಡದಿಂದ ಈ ಕಾರಣ ಕಾಣಬರುವುದು.ಇದನ್ನು ಆಪ್ಟಿಕ್ ಚಿಯಾಸಮ್ ಎನ್ನುತ್ತಾರೆ.ಇದು ಬಹುತೇಕ ಹೈಪೊಪಿಟುಟೇರಿಯಿಸಮ್ ಅಥವಾ ಅತಿ ಹೆಚ್ಚಾದ ಪಿಟ್ಯುಟರಿ ಹಾರ್ಮೊನ್ ಗಳ ಉತ್ಪಾದನೆಯ ಕಾರಣವಾಗಿರುತ್ತದೆ.ಹೀಗೆ ಇಲ್ಲಿ ಹೈಪರ್ ಪ್ರೊಲ್ಯಾಕ್ಟಿನೇಮಿಯಾವನ್ನು ಈ ಸಂದರ್ಭದಲ್ಲಿ ಶಿಫಾರಸು ಮಾಡಲಾಗುತ್ತದೆ.


ಮೆದುಳು ಗೆಡ್ಡೆಯ ಪ್ರಕಾರಗಳು

[ಬದಲಾಯಿಸಿ]

ರೋಗನಿರ್ಣಯ

[ಬದಲಾಯಿಸಿ]
Micrograph of an oligodendroglioma, a type of brain cancer. Brain biopsy. H&E stain.

ಆದರೂ ಕೂಡಾ ಮೆದುಳಿನ ಗೆಡ್ಡೆಗಳ ಪತ್ತೆಗೆ ಅಂತಹ ಯಾವುದೇ ಪ್ರಾಯೋಗಿಕ ಲಕ್ಷಣಗಳನ್ನು ಅಥವಾ ಗುಣಸ್ವಭಾವಗಳನ್ನು ಕಂಡು ಹಿಡಿಯಲಾಗದು.ಒಟ್ಟು ನರಮಂಡಲದ ಲಕ್ಷಣಗಳು ಯಾವಾಗಲೂ ಇಂಟ್ರಾಕ್ರೇನಿಯಲ್ ಒತ್ತಡದ ಮೂಲಕ ಇದರ ಉಲ್ಬಣತೆ ಕಂಡು ಬರುತ್ತದೆ.ಇದರಲ್ಲಿ ಅಪಸ್ಮಾರದಂತಹ ಕಾಯಿಲೆಯು ರೋಗಿಗೆ ತಗಲಬಹುದು.ಕೆಲವೊಮ್ಮೆ ಇದೇ ಕಾಯಿಲೆ ಲಕ್ಷಣದ ವ್ಯಕ್ತಿಗೆ ಇದು ಇನ್ನಷ್ಟು ಮಾರಕವಾಗಬಹುದು. ಈ ಸಂದರ್ಭದಲ್ಲಿ ರೋಗಿಯು ಹಠಾತ್ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಕಂಡುಬರುವುದು;ಇಲ್ಲಿ ಈ ರೋಗಿಗೆ ಅಪಸ್ಮಾರ ದ ಯಾವುದೇ ಪ್ರಾಥಮಿಕ ಲಕ್ಷಣಗಳಿರುವದಿಲ್ಲ.ಹಠಾತ್ ಇಂಟ್ರಾಕ್ರೇನಿಯಲ್ ಹೈಪರ್ ಟೆನ್ಸೆನ್ (ಇದು ಮೆದುಳಿನಘೆಡ್ಡೆಯಲ್ಲಿ ರಕ್ತಹರಿವನ್ನು ತಂದು ಊತದೊಂದಿಗೆ ಸೆರೆಬ್ರೊ ಸ್ಪೈನಲ್ ಹರಿವನ್ನು ಅಡಚಣೆ ಮಾಡುವಸಾಧ್ಯತೆ ಇದೆ)

ಗ್ಲಿಯೊಬ್ಲಾಸ್ಟೊಮಾ ಮಲ್ಟಿಫರ್ಮೆ ಮತ್ತು ಅನಾಪ್ಲಾಸ್ಟಿಕ್ ಅಸ್ಟ್ರೊಸೈಟೊಮಾಗಳು ಹಲವಾರು ಪ್ರಕರಣಗಳಲ್ಲಿ ದಾಖಲಾಗಿವೆ.ವರದಿಗಳ ಪ್ರಕಾರ ಪಬ್ ಮೆಡ್ ನಂತಹವುಗಳು ಅತಿಯಾದ ವಂಶವಾಹಿನಿಯ ಮೂಲಕ ಕಾಣಿಸಿಕೊಂಡ ಲಕ್ಷಣಗಳೆನಿಸಿವೆ.ವಿಪರೀತ ಹೆಪಾಟಿಕ್ ಪಾರ್ಫಿರಿಯಾಗಳು(PCT, AIP, HCP ಮತ್ತುVP),ಹೀಗೆ ಔಷಧಿಗಳ ಪ್ರಮಾಣದ ಶಿಫಾರಸಿಗೂ ಇದು ಅನ್ವಯವಾಗುತ್ತದೆ. ಇಂತಹ ಗೆಡ್ಡೆಗಳಿಗೆ ಔಷಧೋಪಚಾರ ಮಾಡುವ ವೈದ್ಯವರ್ಗ ಅತಿ ಹೆಚ್ಚು ಜಾಗೃತಿಯಿಂದ ರೋಗ ನಿದಾನ ಮತ್ತು ಉಪಚಾರವನ್ನು ಮಾಡಬೇಕಾಗುತ್ತದೆ.ಇಂತಹ ಸಂದರ್ಭದಲ್ಲಿ ವಿವರಣೆಗೆ ನಿಲುಕದ ಪರಿಸ್ಠಿತಿಗಳು ನರವ್ಯೂಹದ ಪೊರ್ಫಿರಿಯಾಗಳು ಉಂಟಾಗುತ್ತವೆ.

ಮೆದುಳಿನ ಗೆಡ್ಡೆಗಳನ್ನು ಪತ್ತೆಹಚ್ಚುವಲ್ಲಿ ಛಾಯಾಂಕನ ಅಥವಾ ಪಡಿಯಚ್ಚು ಪಡೆಯುವುದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಪಡೆಯಚ್ಚು ಪಡೆಯುವ ವಿಧಾನಗಳು ಆಕ್ರಮಣಕಾರಿ ಎನಿಸಿ ಇತ್ತೀಚಿಗೆ ಅಪಾಯಕಾರಿಯೂ ಎನಿಸಿವೆ.ಉದಾಹರಣೆಗೆ ನಿಮೊಎನ್ ಸಿಫಾಲೊಗ್ರಾಫಿ ಮತ್ತು ಸೆರಿಬ್ರಲ್ ಎಂಜಿಯಿಗ್ರಾಫಿಗಸ್ಳು ಇತ್ತೀಚಿಗೆ ಮಾಯವಾಗಿವೆ.ಇದರ ಬದಲಾಗಿ ಆಕ್ರಮಣಕಾರಿಯಲ್ಲದ ಅತ್ಯುತ್ತಮ ಉನ್ನತಿಕರಣದ ಕಾಂಪೂಟೆಡ್ ಟೊಮೊಗ್ರಾಫಿ(CT)ಮತ್ತು ವಿಶೇಷವಾಗಿ ಕಾಂತತ್ವದ ಸಂವೇದಿತ ಪಡಿಯಚ್ಚು(MRI)ಗಳು ಇಂದು ಕಾಣುತ್ತಿವೆ. ಬೆನಿಗ್ನ್ ಮೆದುಳಿನ ಗೆಡ್ಡೆಗಳು ಮೂಲ ಅಂಗಾಂಶಗಳಿಗಿಂತಲೂ ಕಪ್ಪಾಗಿರುತ್ತವೆ.ಇದರಲ್ಲಿ ಅತಿ ಸಾಂದ್ರತೆಯು ಕ್ರೇನಿಯಲ್ CT-ಸ್ಕ್ಯಾನಗಳಲ್ಲಿ ಕಾಣುತ್ತದೆ. ಅವುಗಳು MRIನಲ್ಲಿ ಅತಿಯಾಗಿ (ಮೆದುಳಿನ ಅಂಗಾಂಶಗಳಿಗಿಂತ ಕಪ್ಪಾಗಿ ಕಾಣಿಸುತ್ತವೆ)ಅಥವಾ ಎಸೊಟೆನ್ಸ್ (ಅಧಿಕ ವರ್ಣ)(ಇದರಲ್ಲಿ ಕೂಡಾ ಅದೇ ತೆರನಾದ ಅಂಗಾಂಶಗಳ ತೀವ್ರತೆ ಇರುತ್ತದೆ.)ಅಂದರೆ T1-ನಲ್ಲಿ ತೂಗಿದ ಸ್ಕ್ಯಾನ್ ಗಳಲ್ಲಿ ಅಥವಾ ಹೈಪರ್ ಇಂಟೆನ್ಸ್ (ಮೆದುಳಿನ ಅಂಗಾಂಶಗಳಿಗಿಂತ ಸ್ವಲ್ಪ ಎದ್ದು ಕಾಣುವ)ಹೀಗೆ ಎದ್ದು ಕಾಣುವ T2-ತೂಕದ MRI ಕೂಡಾ ಇದರಲ್ಲಿ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪೆರಿಫೊಕಲ್ ಎಡಿಮಾ ಕೂಡಾ T2-ತೂಕದ MRIನಲ್ಲಿ ತೀವ್ರತೆಯಿಂದ ಗೋಚರಿಸುತ್ತದೆ.ಇದರಲ್ಲಿ ತದ್ವಿರುದ್ದದ ಅಂಶವು ಮೇಲೆ ಕಾಣಸಿಗುತ್ತದೆ.ಕೆಲವು ವೇಳೆ ಅದರ ಪ್ರತಿರೂಪದ ಮೇಲೆ ಇದು ಅವಲಂಬಿತವಾಗಿರುತ್ತದೆ.ಮೆಟಾಸ್ಟಾಟಿಕ್ ಮೆದಳು ಗೆಡ್ಡೆಗಳನ್ನು ಪತೆಹಚ್ಚಲು ಪ್ರಾಥಮಿಕವಾಗಿ CTಸ್ಕ್ಯಾನ್ ಅಥ್ವಾ MRI-ಸ್ಕ್ಯಾನ್ ಗಳನ್ನು ಅವಲಂಬಿಸುತ್ತಾರೆ. ಇದನ್ನು ಯಾಕೆ ಮಾಡಬೇಕೆಂದರೆ ಇಂತಹ ಗೆಡ್ಡೆಗಳು ಸಹಜ ರಕ್ತದ ತಡೆಯ ನಿರ್ಭಂಧವನ್ನು ನಿಲ್ಲಿಸಿ ಅದರ ಸಾಮಾನ್ಯ ಕ್ರಿಯೆಗೆ ಭಂಗ ತರುವ ಸಾಧ್ಯತೆ ಇದೆ.ಇದು ಮುಂದೆ ಖಾಯಮ್ಮಾಗಿ ತಡೆಯಾಗಿ ಉಳಿಯಬಾರದೆಂಬ ಉದ್ದೇಶದಿ6ದ ಇದನ್ನು ಆರಂಬಹದಲ್ಲಿಯೇ ಪತ್ತೆಹಚ್ಚಲಾಗುತ್ತದೆ. ಹೇಗೆಯಾದರೂ ದೊಡ್ಡ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಬೆಳೆಯುವ ರೋಗವನ್ನು ಕೂಡಲೇ ಹತೋಟಿಗೆ ತರುವ ವಿಧಾನಗಳ ಕೊರತೆಯನ್ನು ಇಂದು ಕಾಣಬಹುದಾಗಿದೆ.

ಎಲೆಕ್ಟ್ರೊಫಿಸಿಯೊಲಾಜಿಕ ಪರೀಕ್ಷೆಗಳ ಪ್ರಕಾರ,ಎಲೆಕ್ಟ್ರೊಎನ್ ಸೈಫಾಲೊಗ್ರಾಫಿ(EEG) ಮೆದಳು ಗೆಡ್ಡೆ ರೋಗ ಪತ್ತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಆದರೆ ನಿಶ್ಚಿತ ತಪಾಸಣೆಯನ್ನು ಗೆಡ್ಡೆಕೋಶಗಳನ್ನು ಮೆದುಳಿನ ಬಯೊಪ್ಸಿ ಅಥವಾ ಮುಕ್ತ ಶಸ್ತ್ರಚಿಕಿತ್ಸೆ ಮೂಲಕ ಪಡೆದು ಅದನ್ನು ಹಿಂದಿನ ಹಳೆಯ ಪರೀಕ್ಷಾ ವಿಧಾನಗಳನ್ನು ಅನುಸರಿಸಿ ನೋಡಲಾಗುತ್ತದೆ. ರೋಗಿಯ ಹಳೆಯ ಇತಿಹಾಸವನ್ನು ಪಡೆದುಕೊಂಡರೆ ಮೆದಳು ಗೆಡ್ಡೆಯ ಸಂಪೂರ್ಣ ಕಾರಣಗಳನ್ನು ತಿಳಿದು ಸೂಕ್ತ ಪ್ರೊಗ್ನೊಸಿಸ್ ಅಥವಾ ಔಷಧೋಪಚಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ರೋಗನಿದಾನ ಶಾಸ್ತ್ರಜ್ಞರು ಪ್ರಾಥನಿಕವಾಗಿ ಮೂರು ಹಂತಗಳಲ್ಲಿ ತಪಾಸಣೆ ಕೆಗೊಳ್ಳುತ್ತಾರೆ: ತಾಜಾ ಅಂಗಾಂಶದ ಇಂಟರೊಪೆರೆಟೇವ್ ತಪಾಸಣೆ,ಮೊದಲೇ ಸಿದ್ದಪಡಿಸಿದ ಅಂಗಾಂಶಗಳ ಪ್ರಥಮ ಮೈಕ್ರೊಸ್ಕೊಪಿಕ್ ತಪಾಸಣೆ ಮತ್ತು ರೋಗ ನಿರೋಧಕರಾಸಾಯನಿಕಗಳ ತಪಾಸಣೆಯೊಂದಿಗೆ ಅದರ ವಂಶವಾಹಿನಿಯ ವಿಶ್ಲೇಷಣಾ ವರದಿಗಳನ್ನು ಆಧರಿಸಿ ಪರಿಣತರು ಈ ಕ್ರಮಕ್ಕೆ ಮುಂದಾಗುತ್ತಾರೆ.

ಇನ್ನೊಂದು ಸಂಭವನೀಯ ತಪಾಸಣೆಯೆಂದರೆ ನ್ಯುರೊಫೈಬ್ರೊಮ್ಯಾಟೊಸಿಸ್ ಇದು ಮೊದಲ ಅಥವಾ ಎರಡನೆಯ ವಿಧಾನದಾಗಿದ್ದರಬಹುದು.

ಚಿಕಿತ್ಸೆ ಮತ್ತು ಮುನ್ಸೂಚನೆ

[ಬದಲಾಯಿಸಿ]

ಕೆಲವು ಮೆನಿಂಗಿಯೊಮಾಸ್ ಪ್ರಕರಣಗಳಲ್ಲಿರುವ ಬುರುಡೆಯಲ್ಲಿ ಅಪರೂಪವಾಗಿರುವ ಗೆಡ್ದೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆಯಬಹುದು. []ಬಹಳಷ್ಟು ಕಠಿಣ ಪ್ರಕರಣಗಳಲ್ಲಿ ಸ್ಟಿರಿಯಿಟ್ಯಾಕ್ಟಿಕ್ ರೇಡಿಯೊ ಶಸ್ತ್ರಚಿಕಿತ್ಸೆ,ಅಂದರೆ ಗಾಮಾ ಚೂರಿ ಬಳಕೆ,ಸೈಬರ್ ನೈಫ್ ಅಥವಾ ನೊವಿಲಿಸ್ Tx ರೇಡಿಯೊ ಶಸ್ತ್ರಚಿಕಿತ್ಸೆಯು ಅತ್ಯಂತ ಉಪಯುಕ್ತ []ಆಯ್ಕೆಯಾಗಿದೆ.

ಬಹಳಷ್ಟು ಪಿಟ್ಯುಟರಿ ಅಡೆನೊಮಾಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ.ಅಂದರೆ ಕನಿಷ್ಟ ಆಕ್ರಮಣಕಾರಿ ವಿಧಾನಗಳನ್ನು ಬಳಸಿ ಮೂಗಿನ ಹೊರಳೆಗಳ ಮೂಲಕ ಮತ್ತು ಬುರುಡೆ ಮೂಲಕ (ಮೂಗಿನ-ಹೊರಳೆ,ನಾಳದ-ಮೂಲಕ ತಲುಪಿಸುವ ಕ್ರಿಯೆ) ದೊಡ್ಡ ಆಕಾರದ ಪಿಟ್ಯುಟರಿ ಅಡೆನೊಮಾಗಳು ಕ್ರೇನಿಯೊಟೊಮಿಯನ್ನು ಅಳವಡಿಸಿಕೊಳ್ಳುತ್ತವೆ.(ಅ6ದರೆ ತಲೆ ಬುರುಡೆ ತೆಗೆದು ಅದರೊಳಗಿನ ಗೆಡ್ಡೆಗಳನ್ನು ಹೊರಹಾಕಲಾಗುತ್ತದೆ) ರೇಡಿಯೊಥೆರೊಪಿಯು ಸ್ಟೆರಿಯೊಟ್ಯಾಕ್ಟಿಕ್ಸ್ ವಿಧಾನವನ್ನು ಅನುಸರಿಸುತ್ತದೆ,ಇದು ಶಸ್ತ್ರಚಿಕಿತ್ಸೆ ಕಠಿಣ ಎನ್ನುವ ಸಂದರ್ಭದಲ್ಲಿ ಬಳಕೆ ಸಾಮಾನ್ಯ.

ಪ್ರಾಥಮಿಕವಾಗಿ ಮೆದುಳಿನ ಗೆಡ್ಡೆಗಳನ್ನು ನಿಖರವಾಗಿ ಗುರುತಿಸುವ ಯಾವುದೇ ಪ್ರಬಂಧಕಾತ್ಮಕ ಚಿಕಿತ್ಸಾ ವಿಧಾನಗಳು ಲಭ್ಯವಿಲ್ಲ.ಆದರೆ ಶಸ್ತ್ರ ಚಿಕಿತ್ಸೆ ಮೂಲಕ ಮೆದುಳಿನ್ ಅಗೆಡ್ಡೆಗಳನ್ನು ತೆಗೆದು ಹಾಕಿ ಅಲ್ಲಿ ಮತ್ತಷ್ಟು ಈ ರೋಗ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬಹುದಾಗಿದೆ.ಕೊನೆಯ ಪಕ್ಷ ಸೈಟರ್ ರಿಡಕ್ಷನ್ (ಅಂದರೆ ಇಂತಹ ಗೆಡ್ಡೆಯನ್ನು ತೆಗೆಯುವುದು,ಗೆಡ್ಡೆಯ ಕೋಶಗಳನ್ನು ಕಡಿಮೆ ಮಾಡಲು ಈ ಪ್ರಯತ್ನ ಮಾಡಲಾಗುವುದು)ಇಂಥ ಶಸ್ತ್ರಕ್ರಿಯೆಯನ್ನು ಬಹಳಷ್ಟು ಪ್ರಕರಣಗಳಲ್ಲಿ [೧೦]ಕಾಣಬಹುದಾಗಿದೆ. ಇಂತಹ ಅಸಹಜ ಚಿಕಿತ್ಸಾ ವ್ಯವಸ್ಥೆಗಳು ಹಲವರು ಬಾರಿ ಮೆದುಳಿನ ಗೆಡ್ಡೆಯನ್ನು ಮತ್ತೆ ಹುಟ್ಟಿಕೊಳ್ಳುವಂತೆ ಮಾಡುವುದು ಸಹಜವಾಗಿರುತ್ತದೆ.ಶಸ್ತ್ರ ಚಿಕಿತ್ಸೆಯ ನಂತರಸಂಪೂರ್ಣ ಗೆಡ್ಡೆಯನ್ನು ತೆಗೆದು ಹಾಕಿದರೂ ಇದರ ಬೆಳವಣಿಗೆ ಸಾಧ್ಯತೆಯನ್ನು ತಳ್ಳಿ ಹಾಕಲಾಗುವದಿಲ್ಲ. ಇತ್ತೀಚಿನ ಗೆಡ್ಡೆ ತೆಗೆದು ಹಾಕುವ ಶಸ್ತ್ರ ಚಿಕಿತ್ಸೆಗಳು ಗೆಡ್ಡೆಯುಂಟು ಮಾಡಿದ ಕೋಶಗಳನ್ನು ಪ್ರತ್ರ್ಯೇಕಿಸಿ ಅದರ ಅಧ್ಯಯನ ನಡೆಸಿ ಅದಕ್ಕ್ಕೆ ಸೂಕ್ತ ರಾಸಾಯನಿಕ ಹೆಸರನ್ನು ಸೂಚಿಸಲು ಸಾಧ್ಯವಾಗಿದೆ.(ಉದಾ:5-ಅಮಿನೊಲೆವಿಲೆನಿಕ್ ಆಸಿಡ್ )ಇದು ಮತ್ತಷ್ಟು ಅಧ್ಯಯನ ವಿವರ ತಿಳಿಯಲು [೧೧]ಸಾಧ್ಯವಾಗುತ್ತದೆ. ಹಾನಿಕಾರಕ ಅಥವಾ ಮಾಲಿಗಂಟ್ ಗೆಡ್ಡೆಗಳನ್ನು ರೇಡಿಯೊ ನ್ಥೆರಪಿ ಮತ್ತು ಕೆಮಿಯೊಥೆರಪಿ ಮೂಲಕ ತೆಗೆಯುವುದು ಸಮಗ್ರ ರೋಗ ನಿರ್ಭಂಧಕ ಕ್ರಮಗಳಲ್ಲಿ ಒಂದಾಗಿದೆ. "ಸಣ್ಣ-ಪ್ರಮಾಣದ"ಗ್ಲಿಯೊಮಾಸ ಇರುವ ಪ್ರಕರಣಗಳಲ್ಲಿ ರೇಡಿಯೊ ಥೆರಪಿಯನ್ನು ಬಳಸಲಾಗುತ್ತದೆ,ಇದು ಮೆದುಳಿನ ಗೆಡ್ಡೆಯ ಭಾರವನ್ನು ಸಹ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.

ಮೆದುಳಿನ ಗೆಡ್ಡೆಯ ಪ್ರಕರಣಗಳಲ್ಲಿ ಬಹ್ದುಕುಳಿವವರ ದರಗಳು ಅವರ ಗೆಡ್ಡೆಯ ಪ್ರಕಾರ,ವಯಸ್ಸು,ಆತನ ಕಾರ್ಯಚಟುವಟಿಕೆ,ಆತನ ಮೆದುಳು ಗೆಡ್ಡೆಯನ್ನು ಎಷ್ಟರ ಮಟ್ಟಿಗೆ ತೆಗೆದು ಹಾಕಲಾಗಿದೆ ಎಂಬುದನ್ನು ಅವಲಂಬಿಸಿದೆ.ಇದರಲ್ಲಿ ಕೆಲವೇ ಕೆಲವು ಅಂಶಗಳನ್ನು [೧೨]ಉಲ್ಲೇಖಿಸಲಾಗಿದೆ.

ಇಂತಹ ಚಿಕಿತ್ಸಾ ವ್ಯವಸ್ಥೆಗೆ ಒಳಗಾಗುವ ರೋಗಿಗಳ ಅಂಕಿಅಂಶಗಳನ್ನುUCLA ನ್ಯುರೊ-ಆಂಕಾಲಜಿಯು ರಿಯಲ್ ಟೈಮ್ ಸುರ್ವೈವಲ್ ಡಾಟಾ Archived 2012-06-09 ವೇಬ್ಯಾಕ್ ಮೆಷಿನ್ ನಲ್ಲಿ.ವನ್ನು ಪ್ರಕಟಿಸಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಂತಹ ಸಂಸ್ಥೆಗ್ಳು ಮಾತ್ರ ಮೆದುಳಿನ ಗೆಡ್ಡೆ ಇರುವ ರೋಗಿಗಳು ಹೇಗೆ ಆಧುನಿಕ ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟಿವೆ. ದೊಡ್ಡ ಪ್ರಮಾಣದ ಗ್ಲಿಯೊಮಾ ಗೆಡ್ಡೆಗಳನ್ನು ವಾಸಿ ಮಾಡಲು ಬಳಸುವ ಕೆಮಿಯೊಥೆರಪಿ ಅಂಶವನ್ನು ಬಳಸಿ ಅದನ್ನುಅ ಅದಷ್ಟು ಕಡಿಮೆಗೊಳಿಸುವ ಕ್ರಮಕ್ಕೆ ಮುಂದಾಗುತ್ತಾರೆ.

ಬೆನಿಗ್ನ್ [೧೩]ಗ್ಲಿಯೊಮಾಸ್ ಇರುವ ರೋಗಿಗಳು ಬಹುಕಾಲ ಬದುಕುವ [೧೪]ಆಶಾವಾದಿಗಳಾಗಿರುತ್ತಾರೆ.ಆದರೆ ಗ್ಲಿಯೊಬ್ಲಾಸ್ಟೊಮಾ ಮಲ್ಟಿಫೊರ್ಮೆ ಪ್ರಕರಣಗಳಲ್ಲಿ ಚಿಕಿತ್ಸೆಯಲ್ಲಿ ಏರುಪೇರಾದರೆ ಅಥವಾ ನಿರ್ಲಕ್ಷ ತೋರಿದರೆ ರೋಗಿಯು ಕೆಲವೇ ತಿಂಗಳಗಳ ವರೆಗೆ ಬದುಕಬಹುದು.

ಕೇವಲ ಒಂದೇ ತೆರನಾದ ಮೆಟಾಸ್ಟ್ಯಾಟಿಕ್ ಗೆಡ್ದೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದು,ಇದು ರೇಡಿಯಿಥೆರಪಿ/ಅಥವಾ ಕೆಮಿಯೊಥೆರಪಿ ಮೂಲಕ ನಡೆಸಬಹುದು. ವಿವಿಧ ಅಥವಾ ಬಹುವಿಧದ ಮೆಟಾಸ್ಟ್ಯಾಟಿಕ್ ಗೆಡ್ಡೆಗಳನ್ನು ಸಾಮಾನ್ಯವಾಗಿ ರೇಡಿಯೊ ಥೆರಪಿ ಮತ್ತು ಕೆಮಿಯೊಥೆರಪಿ ಮೂಲಕ ಗುಣಪದಿಸಲಾಗುತ್ತದೆ. ಸ್ಟಿರಿಯಿಟ್ಯಾಕ್ಟಿಕ್ ರೇಡಿಯೊ ಸರ್ಜರಿ (SRS), ಅಂದರೆ ಗಾಮಾ ನೈಫ್ , ಸೈಬರ್ ನೈಫ್ ಅಥವಾ ನೊವಲಿಸ್Tx , ರೇಡಿಯೊ ಸರ್ಜರಿ , ಗಳು ಕೂಡಾ ಇಂದಿಗೆ ಪ್ರಸ್ತುತ ಚಿಕಿತ್ಸೆಗಳಾಗಿವೆ. ಇಂತಹ ಪ್ರಕರಣಗಳಲ್ಲಿ ರೋಗದ ತೀವ್ರತೆಯನ್ನು ಗೆಡ್ಡೆಯ ಮುನ್ಸೂಚನೆಯ ಲಕ್ಷಣಗಳನ್ನು ಆಧರಿಸಿ ಪ್ರಾಥಮಿಕ ಹಂತದ ಗೆಡ್ಡೆಯನ್ನು ಪತ್ತೆ ಹಚ್ಚಲಾಗುತ್ತದೆ.

ಎರಡನೆಯ ತೆರನಾದ ಕ್ಯಾನ್ಸರ್ ಮೆದುಳಿನ ಗೆಡ್ಡೆಗಳನ್ನು ವಾಸಿ ಮಾಡಲು ರೇಡಿಯೊಥೆರಪಿಯು ಬಹಳಷ್ಟು ಸಾಮಾನ್ಯವಾದ ಚಿಕಿತ್ಸಾ ಪದ್ದತಿ ಎನಿಸಿದೆ. ಮೆದುಳಿನಲ್ಲಿ ಈ ರೋಗವು ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಆವರಿಸಿದೆ ಎಂಬುದರ ಮೇಲೆ ರೇಡಿಯೊಥೆರಪಿಯನ್ನು ಅನುಸರಿಸಲಾಗುತ್ತದೆ. [೧೫]ಹೊರಭಾಗದ ತಪಾಸಣೆಯ ಪ್ರತಿಬಿಂಬದ ಆಧಾರಿತ ಸಂಪೂರ್ಣ ಮೆದುಳಿನ ರೇಡಿಯೊಥೆರಪಿ ಚಿಕಿತ್ಸೆ (WBRT)ಅಥವಾ 'ಸಂಪೂರ್ಣ ಮೆದುಳು ಇರೇಡಿಯೇಶನ್ ' ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.ಯಾಕೆಂದರೆ ಎರಡನೆಯ ಹಂತದ ಗೆಡ್ಡೆಯ ಪ್ರಮಾಣವು ಮೆದುಳಿನಲ್ಲಿ ಭವಿಷ್ಯದಲ್ಲಿ ಬೆಳೆಯಬಾರದೆಂಬ ಕಾರಣದಿಂದ ಇದನ್ನು ಶಿಫಾರಸು [೧೬]ಮಾಡಲಾಗುತ್ತದೆ. ಸಾಮಾನ್ಯವಾಗಿ ಮೂರು ಸಣ್ಣ ಗೆಡ್ದೆಗಳ ನಿರ್ವಹಣೆಗಾಗಿ ಸ್ಟೆರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯನ್ನು ಚಿಕ್ಕ ಪ್ರಮಾಣದ ಗೆಡ್ಡೆಗ್ಫಳನ್ನು ತೆಗೆಯಲು ಬಳಸಲಾಗುತ್ತದೆ.

ಯುನ್ವರ್ಸಿಟಿ ಆಫ್ ಟೆಕ್ಸಾಸ್ ನ ಎಂ.ಡಿ ಅಂಡರ್ಸನ್ ಕ್ಯಾನ್ಸರ್ ಸೆಂಟರ್ ನ ಅಧ್ಯಯನದ ಪ್ರಕಾರ ಸ್ಟೆರಿಯೊಟ್ಯಾಕ್ಟಿಕ್ ರೇಡಿಯೊಸರ್ಜರಿ(SRS)ಮತ್ತು ಸಂಪೂರ್ಣ ಮೆದುಳಿನ ರೇಡಿಯೇಶನ್ ಥೆರಪಿಗೆ (WBRT)ಒಳಗಾದವರು ತಮ್ಮ ಸ್ಮರಣಶಕ್ತಿ ಮತ್ತು ಕಲಿಯುವ ಸಾಮರ್ಥ್ಯವನ್ನು ಕಡಿಮೆ ಪಡೆಯುವ ಸಾಧ್ಯತೆ ಇದೆ.ಆದರೆ ಕೇವಲ SRSಮೂಲಕ ಚಿಕಿತ್ಸೆ ಪಡೆದವರು ಈ ರೋಗದ ಮರುಕಳಿಕೆಗೆ ತುತ್ತಾಗುವುದು ಕಡಿಮೆ ಎಂದು [೧೭][೧೮]ಹೇಳಲಾಗಿದೆ.

ಇದರಲ್ಲಿ ಶಂಟ್ ಅಥವಾ ಬದಲಿ ಅಂಗಾಂಶದ ಕ್ರಿಯೆಯನ್ನು ವಾಸಿ ಮಾಡಲು ಬಳಸುವದಿಲ್ಲ ಅದರೆ ರೋಗದ ಗುಣಲಕ್ಷಣಗಳಿಂದ ದೂರವಿದಲು ಇದನ್ನು [೩].[29] ಸೆರೆಬ್ರೊಸ್ಪೈನಲ್ ದ್ರವನಾಲೆಯ ಮೂಲಕ ಹರಿವನ್ನು ತಡೆಯಲು ಕಾರಣವಾಗುವ ಹೈಡ್ರೊಸೆಫಾಲಸ್ ನಿವಾರಣೆಗೆ ಈ ಚಿಕಿತ್ಸೆ ಮಾಡಲಾಗುತ್ತದೆ.

ಬೊಕ್ಕೆ ತುಂಬಿದ ಸ್ಟೊಮ್ಯಾಟಿಟಿಸ್ ವೈರಸ್ ತಡೆಗೆ ಚಿಕಿತ್ಸಾ ಸಂಶೋಧನೆಗಳು ನಡೆದಿವೆ.

[ಬದಲಾಯಿಸಿ]

ಸುಮಾರು2000ರಲ್ಲಿ ಯುನ್ವರಸಿಟಿ ಆಫ್ ಒಟ್ಟಾವಾದ ಸಂಶೋಧಕರ ಪ್ರಕಾರ ವೆಸಿಕುಲರ್ ಸ್ಟೊಮಾಟಿಟಿಸ್ ವೈರಸ್ ಅಥವಾVSV, ಚಿಕಿತ್ಸೆಯುಅ ಕ್ಯಾನ್ಸರ್ ಕೋಶಗಳನ್ನು ಸಫಲವಾಗಿ ಕೊಲ್ಲುತ್ತದೆ;ಅಂದರೆ ಇಂಟರ್ ಫೆರೊನ್ ನ ಸಮರೂಪದ ಚಿಕಿತ್ಸೆ ಒದಗಿಸಿದರೆ ಇದರಿಂದ ಪಕ್ಕದಲ್ಲಿರುವ ಆರೋಗ್ಯವಂತ ಕೋಶಗಳಗೆ ಯಾವುದೇ ಹಾನಿಯಾಗುವದಿಲ್ಲ ಎಂದು ಜಾನ್ ಬೆಲ್ PhD.,ಅವರ ನೇತೃತ್ವದ ತಂಡ [೧೯]ಸಾಬೀತುಪಡಿಸಿದೆ.

ಮೊದಲ ಹಂತದ ಸಂಶೋಧನೆಗಳು ವೈರಸ್ ಆಂಕೊಲಿಟಿಕ್ ಅಂಶಗಳನ್ನು ಗಮನಿಸಿದರೆ ಇದು ಕೆಲವೇ ಕೆಲವು ಕ್ಯಾನ್ಸರ್ ಗಳ ಗುಣಮುಖ ಮಾಡಲು ಬಳಸಲಾಗುತ್ತಿತ್ತು. ಹಲವಾರು ಈ ಬಗೆಗಿನ ಸ್ವತಂತ್ರ ಅಧ್ಯಯನಗಳು ಇನ್ನೂ ಹಲವು ಪ್ರಕಾರದ ಕ್ಯಾನ್ಸರ್ ಗಳ ಚಿಕಿತ್ಸೆಗೆ ಈ ವೈರಸ್ ಪ್ರಕ್ರಿಯೆ ಬಳಸಲು ಮುಂದಾದವು.ಉದಾಹರಗೆ ಗ್ಲಿಯೊಬ್ಲಾಸ್ಟೊಮಾ ಮಲ್ಟಿಫಾರ್ಮೆ ಅಪಾಯಕಾರಿ ಮೆದುಳಿನ ಗೆಡ್ದೆಗಳ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಇದನ್ನು ಉಪಯೋಗಿಸಲಾಗುತ್ತದೆ.

ಸುಮಾರು 2008ರಲ್ಲಿVSV ನ ಕೃತಕ ಬಳಕೆಯ ಅಂಗಾಂಶಗಳನ್ನು ಸಂಶೋಧಕರು ಕಂಡು ಹಿಡಿದು ಅವು ಸಾಮಾನ್ಯ ಕೋಶಗಳಿಗೆ ಸೈಟೊಟಾಕ್ಸಿಕ್ ಅಥವಾ ವಿಷಕಾರಿಯಾಗದಂತೆ ನೋದಿಕೊಂಡರು. ಈ ಆಧುನಿಕ ವಿಧಾನವು ಇಂಟೆರ್ ಫೊರೆನ್ ನ ಸಹ ಬಳಕೆಯನ್ನು ಮಾಡದೇ ಕ್ಯಾನ್ಸರ್ ಕಾರಕಗಳನ್ನು ಹೊಡೆದು ಹಾಕಲು ಸಮರ್ಥವಾಗಿದೆ. ವೈರಸ್ ವಿಧಾನವನ್ನು ಆಂತರಿಕವಾಗಿ ಅಥವಾ ಒಲೊಫ್ಯಾಕ್ಟರಿ ನರದ ಮೂಲಕ ಹಾಯಿಸಿ ಗುಣಪದಡಿಸುವ ಸಾಧ್ಯತೆಗಳಿವೆ. ಈ ಸಂಶೋಧನೆಯಲ್ಲಿ ಪರೀಕ್ಷಾದೃಷ್ಟಿಯಿಂದ ಮಾನವ ಮೆದುಳು ಗೆಡ್ಡೆಯನ್ನು ಇಲಿಯ ಮೆದುಳಿಗೆ ವರ್ಗಾಯಿಸಲಾಯ್ತು ಇಲ್ಲಿ VSV ನ್ನು ಅವುಗಳ ಬಾಲದ ಮೂಲಕ ಚುಚ್ಚುಮದ್ದಿನ ಮೂಲಕ ಒಳಸೇರಿಸಲಾಯಿತು.3ದಿನಗಳ ಅವಧಿಯಲ್ಲೇ ಎಲ್ಲಾ ಗೆಡ್ಡೆಯ ಕೋಶಗಳು ಸತ್ತವು ಅಲ್ಲದೆ ಸಾಯಲು [ಸೂಕ್ತ ಉಲ್ಲೇಖನ ಬೇಕು][dubious ]ಆರಂಭಿಸಿದವು.

ವೈರಸ್ ಚಿಕಿತ್ಸಾ ಪದ್ದತಿಯು ಕೆಲವರ್ಶಗಳ ಕಾಲ ನಡೆಯಿತಾದರೂ ಬೇರೆ ವೈರಸ್ ಗಳ ಪರಿಣಾಮವು VSVಗಳಷ್ಟು ಫಲಪ್ರದವಾಗಿರಲಿಲ್ಲ. }ಮುಂಬರುವ ಇಂತಹ ಸಂಶೋಧನೆಯು ಈ ಚಿಕಿತ್ಸೆಯಿಂದ ಮಾನವರ ಮೇಲಾಗುವ ಅಪಾಯಗಳನ್ನು ಕಂಡು ಹಿದಿಯಲು [೨೦]ಕಾರಣವಾಯಿತು.

ಹಸುಗೂಸುಗಳು ಮತ್ತು ಮಕ್ಕಳಲ್ಲಿನ ಮೆದುಳು ಗೆಡ್ಡೆಗಳು

[ಬದಲಾಯಿಸಿ]
A brain-stem glioma in four year old. MRI ಸ್ಯಾಗಿಟಲ್, ಉತೌಟ್ ಕಾಂಟ್ರಾಸ್ಟ್

USನಲ್ಲಿ ಪ್ರತಿವರ್ಷ 2000 ಮಕ್ಕಳು ಮತ್ತು 20ವರ್ಷಕ್ಕಿಂತ ದೊಡ್ಡವರಿರುವ ವಯಸ್ಕರಲ್ಲಿ ಮಾಲಿಗಂಟ್ ಅಥವಾ ಹಾನಿಕಾರಕ ಮೆದುಳು ಗೆಡ್ಡೆಗಳ ಕಾರಣಕ್ಕಾಗಿ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಅತ್ಯಧಿಕ ಈ ಕುರಿತ ವರದಿಗಳು 1975–83 ಗಿಂತ 1985–94.ರಲ್ಲಿ ದಾಖಲಾಗಿವೆ. ಇದಕ್ಕಾಗಿ ಹಲವು ಚರ್ಚೆಗಳು ಚಾಲ್ತಿಯಲ್ಲಿವೆ;ಸುಧಾರಿತ ರೋಗ ಪತ್ತೆ ವಿಧಾನ,ಚಿಕಿತ್ಸಾ ಪದ್ದತಿ,ವಿಶಿಷ್ಟ ಬಹುಪಯೋಗಿ ಥೆರಪಿಗಳು ಇಂದು ಕಾಣುತ್ತವೆ.MRIsಗಳು ಎಲ್ಲೆಡೆಗೂ ಈಗ ಲಭ್ಯವಿದ್ದು ಅವುಗಳನ್ನು ಬಳಸಿ ರೋಗ ಪತ್ತೆ ಮಾಡುವುದರಿ6ದ ಸಾವಿನ ದರದ ಪ್ರಮಾಣದಲ್ಲೂ ಇಳಿಮುಖ ಕಂಡಿದೆ. CNS ಕ್ಯಾನ್ಸರ್ ಪೀಡಿತ ಮಕ್ಕಳ ಬದುಕುಳಿಯುವ ಪ್ರಮಾಣವು ಸಾಮಾನ್ಯವಾಗಿ 60%.ರಷ್ಟಿದೆ. . ಬದುಕುಳಿಯುವ ದರದ ಪ್ರಮಾಣವು ರೋಗಿಗಳ ವಯಸ್ಸು ಮತ್ತು ಗೆಡ್ಡೆಯ ಹಂತವನ್ನು ಅವಲಂಬಿಸುತ್ತರುತ್ತದೆ.ಹರೆಯದ ರೋಗ್ಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದು ಕಂದು [೨೧]ಬಂದಿದೆ.

ಸುಮಾರು 2ವರ್ಷದೊಳಗಿನ ಮಕ್ಕಳಲ್ಲಿ 70%ರಷ್ಟು ಮೆಡುಲ್ಲೊಬ್ಲಾಸ್ಟೊಮಾ,ಎಪೆಂಡಿಮೊಮಾ ಮತ್ತು ಸಣ್ಣ ಪ್ರಮಾಣದ ಗ್ಲಿಯೊಮಾಗಳ ಮೆದುಳು ಗೆಡ್ಡೆಗಳು ಕಾಣಬರುತ್ತವೆ. [೨೨]ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಹಸುಳೆಗಳಲ್ಲಿ ಕಂಡುಬರುವ ಟೆರಟಾಟೊಮಾ ಮತ್ತು ಸಹಜವಾಗಿ ಕಾಣುವ ಟೆರಾಟೊಯಿಡ್ ರಾಬ್ಡೊಡ್ ಟ್ಯುಮರ್ ಅಂದರೆ ಕ್ಯಾನ್ಸರ್ ಕಾರಕವಲ್ಲದಿದ್ದರೂ ಅದರ ಲಕ್ಷಣವಿರುವ ರೋಗವು [೨೩]ಕಾಣಿಸಿಕೊಳ್ಳಬಹುದು. [೨೪]ಜರ್ಮ್ ಸೆಲ್ ಗೆಡ್ಡೆಗಳು ಅಂದರೆ ಟೆರಟೊಮಾ ಸೇರಿದಂತೆ ವಿಶ್ವಾದ್ಯಂತ ಒಟ್ಟು3%ರಷ್ಟು ಪ್ರಾಥಮಿಕ ಹಂತದ ಲಕ್ಷಣಗಳು ಗೋಚರಿಸುತ್ತವೆ.ಆದರೂ ಇದು ಆಯಾ ಪ್ರದೇಶಕ್ಕೆ ತಕ್ಕಂತೆ [೨೪]ವಿಭಿನ್ನವಾಗಿರುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦ ೧.೧ Greenlee RT, Murray T, Bolden S, Wingo PA (2000). "Cancer statistics, 2000". CA Cancer J Clin. 50 (1): 7–33. doi:10.3322/canjclin.50.1.7. PMID 10735013. Archived from the original on 2010-07-07. Retrieved 2010-05-14.{{cite journal}}: CS1 maint: multiple names: authors list (link)
  2. ೨.೦ ೨.೧ ಅಮೆರಿಕನ್ ಕ್ಯಾನ್ಸರ್ ಸೊಸೈಟಿ . ಅಕ್ಸೆಸೆಡ್ ಜೂನ್ 2000.
  3. Chamberlain MC, Kormanik PA (1998). "Practical guidelines for the treatment of malignant gliomas". West J Med. 168 (2): 114–20. PMC 1304839. PMID 9499745. {{cite journal}}: Unknown parameter |month= ignored (help)
  4. ನಾನ್ಸಿ ಮ್ಯಾಕ್ ವೈಸರ್ ಸ್ಟಡಿ ಫೈಂಡ್ಸ್ ಸೆಲ್ ಫೋನ್ಸ್ ಕುಡ್ ಕಾಸ್ ನಾನ್ ಕ್ಯಾನ್ಸರಸ್ ಟ್ಯುಮರ್ಸ್ Archived 2010-06-10 ವೇಬ್ಯಾಕ್ ಮೆಷಿನ್ ನಲ್ಲಿ.
  5. ಲೆಹರೆರ್ ಎಸ್ . ಅನೊಫೆಲಿಸ್ ಮಾಸ್ಕಿಟೊ ಟ್ರಾನ್ಸಮಿಸ್ಸನ್ ಆಫ್ ಬ್ರೇನ್ ಟ್ಯುಮರ್ . ಮೆಡ್ ಹೈಪೊತ್ಜಿಸಿಸ್ . 2010 Jan;74(1):167-8. Epub 2009 Aug 4. [೧]
  6. ಲೆಹರರ್ S. ಗ್ಲಿಬ್ಲಾಸ್ಟೊಮಾ ಮತ್ತು ಡೆಮೊನಿಶಿಯಾಮೆ ಶೇರ್ ಎ ಕಾಮನ್ ಕಾಸ್ . ಮೆಡ್ ಹೈಪೊಸಿಥಸ್ . 2010 Feb 22. ಎಪಬ್ ಅಹೆಡ್ ಆಫ್ ಪ್ರಿಂಟ್. [೨]
  7. http://www.braintumor.org/Tumor[ಶಾಶ್ವತವಾಗಿ ಮಡಿದ ಕೊಂಡಿ] Types/
  8. "ರೇಡಿಯೊಸುರ್ಜರಿ ಟ್ರೀಟ್ ಮೆಂಟ್ ಕಂಪ್ಯಾರಿಸನ್ - ಸೈಬರ್ ನೈಫ್ , ಗಾಮಾ ನೈಫ್ , ನೊವಿಲ್ಸTx". Archived from the original on 2007-05-20. Retrieved 2010-05-14.
  9. "ರೇಡಿಯೊಸುರ್ಜರಿ ಟ್ರೀಟ್ ಮೆಂಟ್ ಕಂಪ್ಯಾರಿಸನ್ - ಸೈಬರ್ ನೈಫ್ , ಗಾಮಾ ನೈಫ್ , ನೊವಿಲ್ಸTx". Archived from the original on 2007-05-20. Retrieved 2010-05-14.
  10. Nakamura M, Konishi N, Tsunoda S (2000). "Analysis of prognostic and survival factors related to treatment of low-grade astrocytomas in adults". Oncology. 58 (2): 108–16. doi:10.1159/000012087. PMID 10705237. {{cite journal}}: Unknown parameter |month= ignored (help)CS1 maint: multiple names: authors list (link)
  11. ಕ್ಲಿನಿಕಲ್ ಟ್ರೈಯಲ್ಸ್ ಇನ್ ಬ್ರೇನ್ ಟ್ಯುಮರ್ಸ್ .. Accessed June 2000.
  12. Nicolato A, Gerosa MA, Fina P, Iuzzolino P, Giorgiutti F, Bricolo A (1995). "Prognostic factors in low-grade supratentorial astrocytomas: a uni-multivariate statistical analysis in 76 surgically treated adult patients". Surg Neurol. 44 (3): 208–21, discussion 221–3. doi:10.1016/0090-3019(95)00184-0. PMID 8545771. {{cite journal}}: Unknown parameter |month= ignored (help)CS1 maint: multiple names: authors list (link)
  13. Janny P, Cure H, Mohr M (1994). "Low grade supratentorial astrocytomas. Management and prognostic factors". Cancer. 73 (7): 1937–45. doi:10.1002/1097-0142(19940401)73:7<1937::AID-CNCR2820730727>3.0.CO;2-G. PMID 8137221. {{cite journal}}: Unknown parameter |month= ignored (help)CS1 maint: multiple names: authors list (link)
  14. Piepmeier J, Christopher S, Spencer D (1996). "Variations in the natural history and survival of patients with supratentorial low-grade astrocytomas". Neurosurgery. 38 (5): 872–8, discussion 878–9. doi:10.1097/00006123-199605000-00002. PMID 8727811. Archived from the original on 2012-05-25. Retrieved 2010-05-14. {{cite journal}}: Unknown parameter |month= ignored (help)CS1 maint: multiple names: authors list (link)
  15. ಟ್ರೀಟ್ ಮೆಂಟ್ ಸೆಕೈಂಡರಿ ಬ್ರೇನ್ ಟ್ಯುಮರ್ಸ್ ಉಯಿತ್ WBRT
  16. ಟ್ರೀಟ್ ಮೆಂಟ್ ಸೆಕೈಂಡರಿ ಬ್ರೇನ್ ಟ್ಯುಮರ್ಸ್ ಉಯಿತ್ WBRT
  17. "ವ್ಹೋಲ್ ಬ್ರೇನ್ ರಡಿಯೇಶನ್ increases risk of learning and memory problems in cancer patients with brain metastases". Archived from the original on 2008-10-05. Retrieved 2021-08-10.
  18. "IRSA - ಇಂಟರ್ ನ್ಯಾಶನಲ್ ರೇಡಿಯೊ ಸರ್ಜರಿ ಅಸೊಶಿಯನ್ - ಮೆಟಾಸ್ಟ್ಯಾಟಿಕ್ ಬ್ರೇನ್ ಟ್ಯುಮರ್ಸ್". Archived from the original on 2012-06-16. Retrieved 2010-05-14.
  19. ಸಂಶೋಧಕರು ಕ್ಯಾನ್ಸರ್ ಕೊಲ್ಲುವ ವೈರಸ್ ಕಂಡು ಹಿಡಿದರು. Archived 2009-04-25 ವೇಬ್ಯಾಕ್ ಮೆಷಿನ್ ನಲ್ಲಿ.; ಜುಲೈ24, 2000.
  20. Yale Lab Engineers Virus That Can Kill Deadly Brain Tumors; February 21, 2008.
  21. Gurney, James G. "CNS and Miscellaneous Intracranial and Instraspinal Neoplasms" (PDF). SEER Pediatric Monograph. National Cancer Institute. pp. 51–52 (incidence), pp. 56–57 (trends), p. 57 (survival). Retrieved 4 December 2008. [re incidence] In the US, approximately 2,200 children and adolescents younger than 20 years of age are diagnosed with malignant central nervous system tumors each year. More than 90 percent of primary CNS malignancies in children are located within the brain. {{cite web}}: Unknown parameter |coauthors= ignored (|author= suggested) (help)
  22. Infantile Brain Tumors by Brian Rood for The Childhood Brain Tumor Foundation Archived 2010-09-24 ವೇಬ್ಯಾಕ್ ಮೆಷಿನ್ ನಲ್ಲಿ. (accessed July 2007)
  23. Infantile Brain Tumors by Brian Rood for The Childhood Brain Tumor Foundation Archived 2010-09-24 ವೇಬ್ಯಾಕ್ ಮೆಷಿನ್ ನಲ್ಲಿ. (accessed July 2007)
  24. ೨೪.೦ ೨೪.೧ Echevarría ME, Fangusaro J, Goldman S (2008). "Pediatric central nervous system germ cell tumors: a review". Oncologist. 13 (6): 690–9. doi:10.1634/theoncologist.2008-0037. PMID 18586924. {{cite journal}}: Unknown parameter |month= ignored (help)CS1 maint: multiple names: authors list (link)

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Nervous tissue tumors