ವಿಷಯಕ್ಕೆ ಹೋಗು

ಕಂಪನ (ನರಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಡುಕ ಇಂದ ಪುನರ್ನಿರ್ದೇಶಿತ)
ಅದಿರ್ಪು ಇಲ್ಲಿ ಪುನರ್ನಿರ್ದೇಶಿಸುತ್ತದೆ. ಭಯ ಲೇಖನಕ್ಕಾಗಿ ಇಲ್ಲಿ ನೋಡಿ.

ಕಂಪನ ಒಂದು ಅಥವಾ ಹೆಚ್ಚು ಶರೀರ ಭಾಗಗಳ ತೂಗುವಿಕೆಗಳು ಅಥವಾ ಸೆಳೆತ ಚಲನೆಗಳನ್ನು ಒಳಗೊಂಡ ಒಂದು ಅನೈಚ್ಛೀಕ, ಸ್ವಲ್ಪ ಲಯಬದ್ಧ, ಸ್ನಾಯು ಸಂಕೋಚನ ಮತ್ತು ಸಡಿಲಿಕೆ. ಅದು ಎಲ್ಲ ಅನೈಚ್ಛಿಕ ಚಲನೆಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಮತ್ತು ಕೈಗಳು, ತೋಳುಗಳು, ಕಣ್ಣುಗಳು, ಮುಖ, ತಲೆ, ಧ್ವನಿ ತಂತುಗಳು, ಮುಂಡ, ಮತ್ತು ಕಾಲುಗಳ ಪ್ರಭಾವ ಬೀರಬಲ್ಲದು. ಕೆಲವು ವ್ಯಕ್ತಿಗಳಲ್ಲಿ, ಕಂಪನವು ಮತ್ತೊಂದು ನರವೈಜ್ಞಾನಿಕ ಅಸ್ವಸ್ಥತೆಯ ಲಕ್ಷಣವಾಗಿರುತ್ತದೆ. ಸಾಮಾನ್ಯವಾಗಿ ತಂಪಾದ ತಾಪಮಾನಗಳು ಅಥವಾ ಭಯದಿಂದ ಪ್ರಚೋದಿಸಲ್ಪಟ್ಟ ಹಲ್ಲಿನ ಕಟಕಟ ಶಬ್ದ ಒಂದು ಬಹಳ ಸಾಮಾನ್ಯ ಕಂಪನ.

ಕಂಪನವು ದೇಹದಾದ್ಯಂತ ಅಥವಾ ಕೈಗಳಂತಹ ದೇಹದ ನಿರ್ದಿಷ್ಟ ಪ್ರದೇಶಗಳಲ್ಲಿನ ಸ್ನಾಯುಗಳನ್ನು ನಿಯಂತ್ರಿಸುವ ಮಿದುಳಿನ ಭಾಗಗಳಲ್ಲಿನ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಲಕ್ಷಣವಾಗಿರಬಹುದು. ಕಂಪನವನ್ನು ಉಂಟುಮಾಡುವ ನರವೈಜ್ಞಾನಿಕ ಅಸ್ವಸ್ಥತೆಗಳು ಅಥವಾ ಸ್ಥಿತಿಗಳು, ಬಹು ಅಂಗಾಂಶ ಗಟ್ಟಿಯಾಗುವಿಕೆ, ಮಿದುಳಾಘಾತ, ಆಘಾತಕಾತಿ ಮಿದುಳಿನ ಗಾಯ, ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ ಮತ್ತು ಮಿದುಳುಕಾಂಡ ಅಥವಾ ಕಿರಿಮೆದುಳಿನ ಭಾಗಗಳನ್ನು ಹಾನಿಗೊಳಿಸುವ ಅಥವಾ ನಾಶಮಾಡುವ ಅನೇಕ ನರ ಅವನತಿ ರೋಗಗಳನ್ನು (ಉದಾ. ಪಾರ್ಕಿನ್ಸನ್‍ನ ರೋಗ) ಒಳಗೊಂಡಿವೆ. ಇತರ ಕಾರಣಗಳು ಔಷಧಿಗಳ ಬಳಕೆ, ಮದ್ಯಪಾನ, ಪಾದರಸ ವಿಷ ಸೇರಿಕೆ, ಔಷದಿಗಳ ವಾಪಸಾತಿಯನ್ನು ಒಳಗೊಂಡಿವೆ. ಫ಼ೆನಲ್‍ಕೀಟೋನೂರಿಯಾ, ಅತಿಚಟುವಟಿಕೆಯ ಥೈರಾಯ್ಡ್, ಅಥವಾ ಯಕೃತ್ತು ವೈಫಲ್ಯವಿರುವ ಶಿಶುಗಳಲ್ಲಿಯೂ ಕಂಪನಗಳನ್ನು ಕಾಣಬಹುದು. ವೇಗದ ಹೃದಯಬಡಿತ, ಬೆವರುವಿಕೆ ಮತ್ತು ಆತಂಕದ ಜೊತೆಗೆ ಕಂಪನಗಳು ಸಕ್ಕರೆ ಕೊರತೆ ಕಾಯಿಲೆಯ ಸೂಚನೆಯಿರಬಹುದು. ಕಂಪನವು ನಿದ್ದೆಯ ಕೊರತೆ, ವಿಟಮಿನ್‍ಗಳ ಕೊರತೆ, ಅಥವಾ ಹೆಚ್ಚಿದ ಒತ್ತಡದಿಂದಲೂ ಉಂಟಾಗಬಹುದು.

ಲಕ್ಷಣಗಳು ಕೈಗಳು, ತೋಳುಗಳು, ತಲೆ, ಕಾಲುಗಳು ಅಥವಾ ಮುಂಡದಲ್ಲಿ ಲಯಬದ್ದ ಅಲುಗಾಟ; ಅಸ್ಥಿರವಾದ ಧ್ವನಿ; ಮತ್ತು ಮುಳ್ಳು ಚಮಚ ಅಥವಾ ಪೆನ್ನಿನಂತಹ ವಸ್ತುಗಳನ್ನು ಹಿಡಿಯುವಲ್ಲಿ ಸಮಸ್ಯೆಗಳನ್ನು ಒಳಗೊಳ್ಳಬಹುದು. ಕೆಲವು ಕಂಪನಗಳು ಒತ್ತಡ ಅಥವಾ ಪ್ರಬಲ ಭಾವನೆಯ ಸಮಯದಲ್ಲಿ, ವ್ಯಕ್ತಿಯು ದೈಹಿಕವಾಗಿ ದಣಿದಾಗ, ಅಥವಾ ನಿರ್ದಿಷ್ಟ ಭಂಗಿಗಳು ಅಥವಾ ಚಲನೆಗಳ ಅವಧಿಯಲ್ಲಿ ಪ್ರಚೋದಿಸಲ್ಪಡಬಹುದು ಅಥವಾ ಉಲ್ಬಣಗೊಳ್ಳಬಹುದು.