ಮಿಕ್ಕಿ ಮೌಸ್
Mickey Mouse | |
---|---|
ಮೊದಲು ಚಿತ್ರಣ | Plane Crazy (1928) |
ಕರ್ತೃ | Walt Disney, Ub Iwerks |
Voiced by |
Walt Disney (1928–1947) Jimmy MacDonald (1947–1977) Wayne Allwine (1977–2009) Bret Iwan (2009–present) |
ಮಿಕ್ಕಿ ಮೌಸ್ ಎಂಬುದು ಮಿಚೆಲ್ ಮೌಸ್ [೧] ಎಂಬ ಹೆಸರಿನ ಕಿರುನಾಮವಾಗಿದೆ. ವಾಲ್ಟ್ ಡಿಸ್ನಿ ಕಂಪೆನಿಗೆ ಕಣ್ಮಣಿಯಾಗಿ ಅಪಾರ ಖ್ಯಾತಿ ಗಳಿಸಿದ ಮಿಕ್ಕಿ ಒಂದು ವ್ಯಂಗ್ಯಚಿತ್ರ ಪಾತ್ರವಾಗಿದೆ. ವಾಲ್ಟ್ ಡಿಸ್ನಿ ಹಾಗು ಉಬ್ ಐವರ್ಕ್ಸ್ [೨] ಮಿಕ್ಕಿ ಮೌಸ್ ಪಾತ್ರವನ್ನು 1928ರಲ್ಲಿ ಸೃಷ್ಟಿಸಿದರು. ಈ ಪಾತ್ರಕ್ಕೆ ವಾಲ್ಟ್ ಡಿಸ್ನಿಯವರೇ ಧ್ವನಿದಾನ ಮಾಡಿದರು. ಆರು ತಿಂಗಳ ಮುಂಚೆ ಮಿಕ್ಕಿ ಮೌಸ್ ಪ್ಲೇನ್ ಕ್ರೇಜಿ ಎಂಬ ವ್ಯಂಗ್ಯಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ,ಸ್ಟೀಮ್‌ಬೋಟ್ ವಿಲ್ಲೀ [೩] ಎಂಬ ವ್ಯಂಗ್ಯಚಲನಚಿತ್ರ ಬಿಡುಗಡೆಯಾದ ದಿನಾಂಕ 18 ನವೆಂಬರ್ 1928ರನ್ನು ವಾಲ್ಟ್ ಡಿಸ್ನಿ ಕಂಪೆನಿಯು ಮಿಕ್ಕಿ ಮೌಸ್ ಹುಟ್ಟುಹಬ್ಬವೆಂದು ಆಚರಿಸಿತ್ತು. (ಸ್ಟೀಮ್‌ಬೋಟ್ ವಿಲ್ಲೀ ಮಿಕ್ಕಿ ಮೌಸ್‌ನ ಮೊದಲ ಧ್ವನಿಯುಳ್ಳ ವ್ಯಂಗ್ಯಚಲನಚಿತ್ರವಾಗಿತ್ತು). ಮಾನವರೂಪಿಇಲಿಯು ಆನಿಮೇಟ್ ಆಗಿರುವ ವ್ಯಂಗ್ಯಚಿತ್ರಗಳು ಮತ್ತು ವಿಕಟ ಚಿತ್ರಾವಳಿ (comic strip)ಗಳಲ್ಲಿ ,ಮೊದಲಿಗೆ ಸುಮ್ಮನೆ ಒಂದು ಪಾತ್ರವಾಗಿದ್ದದ್ದು ವಿಕಸನ ಹೊಂದಿ, ಬೆಳೆದು, ವಿಶ್ವದಲ್ಲೇ ಅತಿ ಚಿರಪರಿಚಿತ, ಪ್ರಮುಖ ಲಾಂಛನಗಳಲ್ಲಿ ಒಂದಾಗಿದೆ. ಡಿಸ್ನಿ ಚಾನೆಲ್ನ ಪ್ಲೇಹೌಸ್ ಡಿಸ್ನಿ ಯ ಮಿಕ್ಕಿ ಮೌಸ್ ಕ್ಲಬ್‌ಹೌಸ್ ಸರಣಿಯಲ್ಲಿ ಮಿಕ್ಕಿ ಸದ್ಯಕ್ಕೆ ಪ್ರಮುಖ ಪಾತ್ರವಾಗಿದೆ. ಮಿಕ್ಕಿಯು ದಿ ಮಿಕ್ಕಿ ಮೌಸ್ ಕ್ಲಬ್‌ನ ನಾಯಕ (ಮುಖ್ಯಸ್ಥ).
ಸೃಷ್ಟಿ ಹಾಗೂ ಪ್ರಥಮ ಪರಿಚಯ
[ಬದಲಾಯಿಸಿ]ಯುನಿವರ್ಸಲ್ ಸ್ಟುಡಿಯೊಸ್ನ ಚಾರ್ಲ್ಸ್ ಮಿಂಟ್ಜ್‌ರಿಗಾಗಿ ಡಿಸ್ನಿ ಸ್ಟುಡಿಯೊ ರಚಿಸಿದ್ದ ಆಸ್ವಾಲ್ಡ್ ದಿ ಲಕಿ ರ‌್ಯಾಬಿಟ್ ಎಂಬ ವ್ಯಂಗ್ಯಚಿತ್ರ ಪಾತ್ರಕ್ಕೆ ಬದಲಿಯಾಗಿ ಮಿಕ್ಕಿ ಮೌಸ್‌ನ್ನು ಸೃಷ್ಟಿಸಲಾಗಿತ್ತು.[೪]
ಜನಪ್ರಿಯತೆ ಗಳಿಸಿದ್ದ ಆಸ್ವಾಲ್ಡ್ ಸರಣಿಗಾಗಿ ವಾಲ್ಟ್ ಡಿಸ್ನಿ ಹೆಚ್ಚಿನ ಬಜೆಟ್ ಕೋರಿದಾಗ, ತಮ್ಮ ಸ್ಟುಡಿಯೊದ ಸಿಬ್ಬಂದಿಯಾಗಿ ಸೇರಿ, ಬಜೆಟ್ ಕಡಿತಕ್ಕೆ ಒಪ್ಪುವವರೆಗೂ ಡಿಸ್ನಿ ಆಸ್ವಾಲ್ಡ್ ಸರಣಿಯನ್ನು ಮುಂದುವರೆಸಬಹುದು ಎಂದು ಮಿಂಟ್ಸ್ ಘೋಷಿಸಿದರು. ಮಿಂಟ್ಸ್ ಆಸ್ವಾಲ್ಡ್‌ನ ಮಾಲೀಕರಾಗಿದ್ದರು, ತಾವು ಡಿಸ್ನಿಯನ್ನು ಅಸಹಾಯ ಸ್ಥಿತಿಯಲ್ಲಿ ಸಿಲುಕಿಸಿರುವೆ ಎಂದು ಯೋಚಿಸಿದರು. ಈ ಒಪ್ಪಂದವನ್ನು ಡಿಸ್ನಿ ಸಿಟ್ಟಿನಿಂದ ನಿರಾಕರಿಸಿ, ಮೂಲ ಒಪ್ಪಂದದಡಿ ತಾವು ಮಿಂಟ್ಜ್‌ಗಾಗಿ ನಿರ್ಮಿಸಬೇಕಿದ್ದ ಆಸ್ವಾಲ್ಡ್‌ನ ಅಂತಿಮ ವ್ಯಂಗ್ಯಚಲನಚಿತ್ರ ನಿರ್ಮಾಣಕ್ಕೆ ಹಿಂತಿರುಗಿದರು. ತಮ್ಮ ಸಿಬ್ಬಂದಿಯವರು ದ್ರೋಹವೆಸಗಿದ್ದರಿಂದ ನಿರಾಶೆಗೊಂಡ ವಾಲ್ಟ್ ಡಿಸ್ನಿ, ತಮ್ಮ ಸಂಸ್ಥೆಯನ್ನು ಯಾವುದೇ ಅನುಕೂಲವಿಲ್ಲದೇ ಪುನಃ ಆರಂಭಿಸಲು ಸಂಕಲ್ಪಿಸಿದರು. ನೂತನ ಡಿಸ್ನಿ ಸ್ಟುಡಿಯೊದಲ್ಲಿ ಮೊದಲಿಗೆ ಆನಿಮೇಟರ್ ಉಬ್ ಐವರ್ಕ್ಸ್ ಹಾಗೂ ನಿಷ್ಠಾವಂತ ಅಪ್ರೆಂಟಿಸ್ ಕಲಾವಿದ ಲೆಸ್ ಕ್ಲಾರ್ಕ್ ಇದ್ದರು. ಮಿಂಟ್ಜ್‌ರೊಂದಿಗಿನ ಈ ಅನುಭವದಿಂದ, ತಮ್ಮ ಮನರಂಜನಾ ಉದ್ದಿಮೆಯು ಸೃಷ್ಟಿಸುವ ಯಾವುದೇ ಪಾತ್ರಗಳ ಹಕ್ಕುಗಳ ಮಾಲೀಕತ್ವವನ್ನು ತಾವೇ ವಹಿಸಿಕೊಳ್ಳಬೇಕು ಎಂಬ ಪಾಠವನ್ನು ವಾಲ್ಟ್ ಡಿಸ್ನಿ ಕಲಿತರು.
ಇಸವಿ 1928ರ ವಸಂತಕಾಲದಲ್ಲಿ, ವಾಲ್ಟ್ ಡಿಸ್ನಿ ಉಬ್ ಐವರ್ಕ್ಸ್‌ಗೆ ಹೊಸ ಪಾತ್ರ ಕಲ್ಪನೆಗಳನ್ನು ರಚಿಸಲು ಹೇಳಿದರು. ನಾಯಿಗಳು, ಬೆಕ್ಕುಗಳು ಸೇರಿದಂತೆ ಉಬ್ ಐವರ್ಕ್ಸ್ ವಿವಿಧ ಪ್ರಾಣಿಗಳ ರೇಖಾಚಿತ್ರಗಳನ್ನು ಸೃಷ್ಟಿಸಿದರು. ಆದರೆ ಇವುಗಳಲ್ಲಿ ಯಾವುವೂ ವಾಲ್ಟ್ ಡಿಸ್ನಿಯವರಿಗೆ ತೃಪ್ತಿ ತರಲಿಲ್ಲ. ಹಸು ಮತ್ತು ಗಂಡು ಕುದುರೆಯನ್ನೂ ಸಹ ತಿರಸ್ಕರಿಸಲಾಯಿತು. ಅವು ಆನಂತರ ಕ್ಲಾರಾಬೆಲ್ ಕವ್ ಮತ್ತು ಹಾರೇಸ್ ಹಾರ್ಸ್‌ಕಾಲರ್ ಎಂಬ ಪಾತ್ರಗಳಾಗಿ ಮೂಡಿಬಂದವು. ಗಂಡುಕಪ್ಪೆಯೊಂದನ್ನು ಸಹ ತಿರಸ್ಕರಿಸಲಾಯಿತು. ಆದರೆ ಅದು ಆನಂತರ ಐವರ್ಕ್ಸ್‌ರ ಸ್ವಂತ ಸರಣಿ ಫ್ಲಿಪ್ ದಿ ಫ್ರಾಗ್ ನಲ್ಲಿ ಕಾಣಿಸಿಕೊಂಡಿತು [೨] ವಾಲ್ಟ್ ಡಿಸ್ನಿರಿಗೆ ತಮ್ಮ ಹೊಲದಲ್ಲಿ ಸಾಕಿದ್ದ ಇಲಿಯೊಂದರಿಂದ ಮಿಕ್ಕಿ ಮೌಸ್‌ನ ಸ್ಫೂರ್ತಿ ಲಭಿಸಿತು. ಇಸವಿ 1925ರಲ್ಲಿ ಹಗ್ ಹಾರ್ಮನ್ ವಾಲ್ಟ್ ಡಿಸ್ನಿಯವರ ಚಿತ್ರದ ಸುತ್ತಲೂ ಇಲಿಗಳ ಚಿತ್ರಗಳನ್ನು ರಚಿಸಿದರು. ವಾಲ್ಟ್ ಡಿಸ್ನಿಗಾಗಿ ಹೊಸದಾದ ಇಲಿಯ ಪಾತ್ರವನ್ನು ಸೃಷ್ಟಿಸಲು ಈ ಚಿತ್ರಗಳು ಉಬ್ ಐವರ್ಕ್ಸ್‌ರಿಗೆ ಪ್ರೇರಣೆಯಾದವು.[೨] ವಾಲ್ಟ್ ಡಿಸ್ನಿ ಈ ಪಾತ್ರಕ್ಕೆ ಮೊರ್ಟಿಮರ್ ಮೌಸ್ ಎಂಬ ಮೂಲ ಹೆಸರಿಟ್ಟಿದ್ದರು. ಆದರೆ ಪತ್ನಿ ಲಿಲಿಯನ್ ಅದನ್ನು ಬದಲಿಸುವಂತೆ ವಾಲ್ಟ್ ಡಿಸ್ನಿಗೆ ಮನವೊಲಿಸಿದರು. ಅಂತಿಮವಾಗಿ ಮಿಕ್ಕಿ ಮೌಸ್ ಪಾತ್ರವು ಆಸ್ತಿತ್ವಕ್ಕೆ ಬಂದಿತು.[೫][೬] ನಟ ಮಿಕ್ಕಿ ರೂನಿ ಹೇಳಿಕೆಯ ಪ್ರಕಾರ, ತಾವು ಮಿಕ್ಕಿ ಮೆಗ್ವಯರ್ ಪಾತ್ರ ನಿರ್ವಹಿಸುತ್ತಿದ್ದ ದಿನಗಳಂದು ವಾರ್ನರ್ ಬ್ರದರ್ಸ್ ಸ್ಟುಡಿಯೊದಲ್ಲಿ ವ್ಯಂಗ್ಯಚಿತ್ರಕಾರ ವಾಲ್ಟ್ ಡಿಸ್ನಿಯವರನ್ನು ಭೇಟಿಯಾದರಂತೆ. ಹಾಗಾಗಿ ತಮ್ಮ (ಮಿಕ್ಕಿ ರೂನಿ) ಹೆಸರನ್ನು ಆಧರಿಸಿ ವಾಲ್ಟ್ ಡಿಸ್ನಿ ಮಿಕ್ಕಿ ಮೌಸ್ ಪಾತ್ರದ ಹೆಸರನ್ನು ಆಯ್ದುಕೊಂಡರಂತೆ.[೭] ವಾಲ್ಟ್ ಡಿಸ್ನಿ ಕೆಳಕಂಡ ಹೇಳಿಕೆ ನೀಡಿದರು:
- 'ಜನರು, ಅದರಲ್ಲೂ ವಿಶಿಷ್ಟವಾಗಿ ಮಕ್ಕಳು ಮುದ್ದಾದ, ಸಣ್ಣ ಗಾತ್ರದ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಈ ಕಲ್ಪನೆಗಾಗಿ ನಾವು ಚಾರ್ಲೀ ಚ್ಯಾಪ್ಲಿನ್‌ರಿಗೆ ಋಣಿಯಾಗಿದ್ದೇವೆ. ನಮಗೆ ಮನಮುಟ್ಟುವಂತಹ ಪಾತ್ರದ ಅಗತ್ಯವಿತ್ತು. ಅತ್ಯುತ್ತಮ ಕೆಲಸ ಮಾಡಲು ಶತ ಪ್ರಯತ್ನ ಮಾಡುವ ಸಣ್ಣ ವ್ಯಕ್ತಿ ಚಾರ್ಲೀ ಚ್ಯಾಪ್ಲಿನ್‌ರಂತೆ ಉತ್ಸುಕತೆ ತುಂಬಿದ ಒಂದು ಸಣ್ಣ ಇಲಿಯ ಬಗ್ಗೆ ಯೋಚಿಸಿದವು. ಜನರು ಮಿಕ್ಕಿ ಮೌಸ್‌ನ್ನು ನೋಡಿ ಆನಂದಿಸಿ, ನಕ್ಕಾಗ, ಮಿಕ್ಕಿ ಮೌಸ್ ಮನುಷ್ಯನಂತೆ ಇರುವುದು ಇದರ ಕಾರಣ. ಇದು ಮಿಕ್ಕಿಯ ಜನಪ್ರಿಯತೆಯ ರಹಸ್ಯ. ಇವೆಲ್ಲದರ ಹಿಂದಿನ ಪ್ರೇರೇಪಣೆ ಒಂದು ಇಲಿ ಎಂಬ ಒಂದು ವಿಚಾರವನ್ನು ನಾವು ಮರೆಯದಿರುವುದು ಒಳಿತು.' [೮]
ಪ್ಲೇನ್ ಕ್ರೇಜಿ
[ಬದಲಾಯಿಸಿ]ದಿನಾಂಕ 15 ಮೇ 1928ರಂದು ಬಿಡುಗಡೆಯಾದ ವ್ಯಂಗ್ಯಚಲನಚಿತ್ರ ಪ್ಲೇನ್ ಕ್ರೇಜಿ ಯಲ್ಲಿ ಮಿಕ್ಕಿ ಮತ್ತು ಮಿನ್ನೀ ಮೌಸ್ ಪಾತ್ರಗಳು ಮೊದಲ ಬಾರಿಗೆ ಕಾಣಿಸಿಕೊಂಡವು. ಈ ವ್ಯಂಗ್ಯಚಲನಚಿತ್ರಕ್ಕಾಗಿ ವಾಲ್ಟ್ ಡಿಸ್ನಿ ಮತ್ತು ಉಬ್ ಐವರ್ಕ್ಸ್ ಇಬ್ಬರೂ ಸಹ-ನಿರ್ದೇಶಕರಾಗಿದ್ದರು. ಈ ಚಲನಚಿತ್ರಕ್ಕೆ ಉಬ್ ಐವರ್ಕ್ಸ್ ಪ್ರಮುಖ ಆನಿಮೇಟರ್ ಆಗಿದ್ದರು. ಅವರು ಈ ಚಿತ್ರಕ್ಕಾಗಿ ಸತತ ಆರು ವಾರಗಳ ಕಾಲ ಕಾರ್ಯಮಗ್ನರಾಗಿದ್ದರು. ಇಸವಿ 1928 ಮತ್ತು 1929ರಲ್ಲಿ ಬಿಡುಗಡೆಯಾದ ಡಿಸ್ನಿ ಉದ್ದಿಮೆಯ ಪ್ರತಿಯೊಂದು ಕಿರು-ವ್ಯಂಗ್ಯಚಲನಚಿತ್ರಕ್ಕಾಗಿಯೂ ಐವರ್ಕ್ಸ್ ಪ್ರಮುಖ ಆನಿಮೇಟರ್ ಆಗಿದ್ದರು. ಈ ವರ್ಷಗಳ ಕಾಲ ಹಗ್ ಹಾರ್ಮನ್ ಮತ್ತು ರುಡಾಲ್ಫ್ ಐಸಿಂಗ್ ಸಹ ವಾಲ್ಟ್ ಡಿಸ್ನಿಯವರಿಗೆ ಸಹಾಯ ಮಾಡಿದರು. ವಾಲ್ಟ್ ಡಿಸ್ನಿಯವರ ಸಹಯೋಗಿಗಳು ಆಗಲೇ ಚಾರ್ಲ್ಸ್ ಮಿಂಟ್ಜ್‌ರೊಂದಿಗೆ ಕರಾರು ಮಾಡಿಕೊಂಡಿದ್ದರು. ಆದರೆ ಅವರು ತಮ್ಮದೇ ಹೊಸ ಸ್ಟುಡಿಯೊ ನಿರ್ಮಾಣದಲ್ಲಿ ಮಗ್ನರಾಗಿದ್ದರು. ಹಾಗಾಗಿ ಸದ್ಯಕ್ಕೆ ಅವರು ಡಿಸ್ನಿ ಉದ್ದಿಮೆಯ ಉದ್ಯೋಗಿಗಳಾಗಿದ್ದರು. ಈ ವಿಚಿತ್ರ ಪರಿಸ್ಥಿತಿಯಲ್ಲಿ, ಅವರು ಆನಿಮೇಷನ್ ಕಾರ್ಯನಿರ್ವಹಿಸಿದ ಈ ಕಿರುಚಿತ್ರವು ಕೊನೆಯ ಕಿರು-ವ್ಯಂಗ್ಯಚಲನಚಿತ್ರವಾಗಿತ್ತು.
ಪ್ಲೇನ್ ಕ್ರೇಜಿ ಯ ಚಿತ್ರಕಥೆಯು ತಕ್ಕಮಟ್ಟಿಗೆ ಸರಳವಾಗಿತ್ತು. ಚಾರ್ಲ್ಸ್ ಲಿಂಡ್ಬರ್ಗ್‌ರನ್ನು ಅನುಸರಿಸಿ, ಮಿಕ್ಕಿ ಮೌಸ್ ಒಬ್ಬ ವಿಮಾನ ಚಾಲಕನಾಗಲು ಪ್ರಯತ್ನಿಸುತ್ತಾನೆ. ತನ್ನದೇ ಆದ ವಿಮಾನವನ್ನು ನಿರ್ಮಿಸಿದ ನಂತರ, ಅದರ ಮೊದಲ ಉಡ್ಡಯನಕ್ಕಾಗಿ ಮಿಕ್ಕಿ ಮಿನ್ನೀಯನ್ನು ಆಮಂತ್ರಿಸುತ್ತಾನೆ. ವಿಮಾನ ಹಾರಿಸುವ ಸಮಯ ಮಿಕ್ಕಿ ಮಿನ್ನೀಯನ್ನು ಚುಂಬಿಸಲು ಹಲವು ಸಲ ಯತ್ನಿಸಿ ವಿಫಲನಾಗುತ್ತಾನೆ. ಅಂತಿಮವಾಗಿ ಬಲವಂತದ ಚುಂಬನ ನೀಡಲು ಮುಂದಾಗುತ್ತಾನೆ. ಆಗ ಮಿನ್ನೀ ಪ್ಯಾರಚೂಟ್ ಬಳಸಿ ವಿಮಾನದಿಂದ ಪಾರಾಗುತ್ತಾಳೆ. ಮಿನ್ನೀಯಿಂದ ವಿಚಲಿತನಾದ ಮಿಕ್ಕಿ ಮೌಸ್ ವಿಮಾನದ ಹತೋಟಿ ಕಳೆದುಕೊಳ್ಳುತ್ತಾನೆ. ಇದು ಹತೋಟಿ ತಪ್ಪಿದ ಉಡ್ಡಯನಕ್ಕೆ ನಾಂದಿಯಾಗಿ, ಹಲವು ವಿಡಂಬನಾತ್ಮಕ ಪರಿಸ್ಥಿತಿಗಳ ಸರಮಾಲೆಯ ನಂತರ, ವಿಮಾನವು ಕೊನೆಗೆ ನೆಲಕ್ಕೆ ಧುಮುಕುತ್ತದೆ.
ಪ್ಲೇನ್ ಕ್ರೇಜಿ ಯಲ್ಲಿ ಮಿಕ್ಕಿ ಬಹಳ ತರಲೆ, ಪ್ರಣಯಾಸಕ್ತ ಹಾಗು ಕೆಲವೊಮ್ಮೆ ಒಬ್ಬ ಪುಂಡನೆಂದೂ ಬಣ್ಣಿಸಲಾಗಿದೆ. ಆದರೂ, ತನ್ನ ಮೊದಲ ಬಿಡುಗಡೆಯ ಸಮಯ, ಪ್ಲೇನ್ ಕ್ರೇಜಿ ಪ್ರೇಕ್ಷಕರ ಮನಮುಟ್ಟುವಲ್ಲಿ ವಿಫಲವಾಯಿತು. ಅದಲ್ಲದೆ ಗಾಯಕ್ಕೆ ಉಪ್ಪು ಹಚ್ಚಿದಂತೆ ವಾಲ್ಟ್ ಡಿಸ್ನಿಗೆ ಒಬ್ಬ ವಿತರಕರೂ ಸಿಗಲಿಲ್ಲ. ಇದರಿಂದ ನಿರಾಶೆಗೊಂಡರೂ, ವಾಲ್ಟ್ ಡಿಸ್ನಿ ದಿ ಗ್ಲಾಲೊಪಿನ್' ಗಾಚೊ ಮಿಕ್ಕಿ ಮೌಸ್‌ನ ಇನ್ನೊಂದು ಕಿರು-ವ್ಯಂಗ್ಯಚಲನಚಿತ್ರವನ್ನು ನಿರ್ಮಿಸಲು ಹೊರಟರು.
ಆರಂಭಿಕ ಪ್ರಮುಖ ತಿರುವುಗಳು
[ಬದಲಾಯಿಸಿ]ದಿ ಗ್ಯಾಲೊಪಿನ್' ಗಾಚೊ , ಬ್ಲ್ಯಾಕ್ / ಪೆಗ್ ಲೆಗ್ ಪೀಟ್‌ನೊಂದಿಗೆ ಮೊದಲ ಭೇಟಿ
[ಬದಲಾಯಿಸಿ]ಹಿಂದಿನಂತೆಯೇ, ವಾಲ್ಟ್ ಡಿಸ್ನಿ ಮತ್ತು ಉಬ್ ಐವರ್ಕ್ಸ್ ದಿ ಗ್ಯಾಲೊಪಿನ್' ಗಾಚೊ ಕಿರು-ವ್ಯಂಗ್ಯಚಲನಚಿತ್ರದ ಜಂಟಿ ನಿರ್ದೇಶಕರಾಗಿದ್ದರು. ಉಬ್ ಐವರ್ಕ್ಸ್ ಇದರ ಏಕೈಕ ಆನಿಮೇಟರ್ ಆಗಿದ್ದರು. ದಿನಾಂಕ 7 ಆಗಸ್ಟ್ 1928ರಂದು ಬಿಡುಗಡೆಯಾದ ಡಗ್ಲಸ್ ಫೇರ್ಬ್ಯಾಂಕ್ಸ್‌ರ ದಿ ಗಾಚೊ ಚಲನಚಿತ್ರದ 'ಅಣಕು' ಕಿರು-ವ್ಯಂಗ್ಯಚಲನಚಿತ್ರವಾಗಿತ್ತು. ಮೂಲ ಚಲನಚಿತ್ರದ ನಂತರ, ಕಿರು-ವ್ಯಂಗ್ಯಚಲನಚಿತ್ರದಲ್ಲಿನ ಘಟನೆಗಳು ಅರ್ಜೆಂಟೀನಾ ದೇಶದ ಪ್ಯಾಂಪಸ್‌ನಲ್ಲಿ ನಡೆಯುತ್ತವೆ. ಶೀರ್ಷಿಕೆಯಲ್ಲಿ ಗಾಚೊ ಸ್ವತಃ ಮಿಕ್ಕಿಯೆ. ಮೊದಲಿಗೆ ನಿರೀಕ್ಷಿಸಿದಂತೆಕುದುರೆಯ ಬದಲಿಗೆ ಮಿಕ್ಕಿ ರಿಯಾಮೇಲೆ ಸವಾರಿ ಮಾಡುತ್ತಾನೆ(ಆಗಾಗ್ಗೆ ವರದಿಯಾದಂತೆ ಉಷ್ಟ್ರಪಕ್ಷಿ ಮೇಲೆ) ಶೀಘ್ರದಲ್ಲಿಯೇ ಮಿಕ್ಕಿ 'ಕ್ಯಾನ್ಟೀನಾ ಅರ್ಜೆಂಟೀನಾ' ಎಂಬ ಸ್ಥಳೀಯಬಾರ್ ಮತ್ತು ಉಪಾಹಾರ ಮಂದಿರಕ್ಕೆ ಬರುತ್ತಾನೆ. ಮಿಕ್ಕಿ ಒಳಹೊಕ್ಕಿ ಕುರ್ಚಿಯೊಂದರಲ್ಲಿ ಕೂರುತ್ತಾನೆ. ಅವನು ಸುಮ್ಮನೆ ಸ್ವಲ್ಪ ಮದ್ಯಪಾನ ಹಾಗೂ ತಂಬಾಕು ಸೇವಿಸಿ ವಿಶ್ರಮಿಸಲೆಂದು ಬಂದಿರುವನು. ಅದೇ ಉಪಾಹಾರ ಮಂದಿರದಲ್ಲಿ ಪೆಗ್‌ಲೆಗ್ ಪೀಟ್ (ಆನಂತರ 'ಬ್ಲ್ಯಾಕ್ ಪೀಟ್', ಅಥವಾ ಸುಮ್ಮನೆ 'ಪೀಟ್' ಎಂದು ಮರುನಾಮಕರಣ) ಕುಳಿತಿರುತ್ತಾನೆ. ಇವನು ಪೊಲೀಸರಿಗೆ ಬೇಕಾದ ಕಾನೂನುಬಾಹಿರ ವ್ಯಕ್ತಿ ಹಾಗೂ ಸದ್ಯಕ್ಕೆ ಉಪಾಹಾರ ಮಂದಿರದಲ್ಲಿ ಗಿರಾಕಿಯಾಗಿರುತ್ತಾನೆ. ಈ ಉಪಾಹಾರ ಮಂದಿರದಲ್ಲಿ ಮಿನ್ನೀ ಮೌಸ್ ಒಬ್ಬ ಉಪಚಾರಕಿ ಹಾಗೂ ನರ್ತಕಿ ಸಹ. ಆ ಸಮಯ ಮಿನ್ನೀ ಟ್ಯಾಂಗೊ ನರ್ತನೆ ಮಾಡುತ್ತಿರುತ್ತಾಳೆ. ಮಿಕ್ಕಿ ಮತ್ತು ಪೀಟ್ - ಇಬ್ಬರೂ ಗಿರಾಕಿಗಳು ಮಿನ್ನೀಯೊಂದಿಗೆ ಚೆಲ್ಲಾಟವಾಡಿ ಒಬ್ಬರಿಗೊಬ್ಬರು ತೀವ್ರ ಪೈಪೋಟಿ ನಡೆಸುವರು. ಒಂದು ಹಂತಲ್ಲಿ ಪೀಟ್ ಮಿನ್ನೀಯನ್ನು ಅಪಹರಿಸಿ, ತನ್ನ ಕುದುರೆಯ ಮೇಲೆ ಹೊತ್ತೊಯ್ಯಲು ಮುಂದಾಗುತ್ತಾನೆ. ಮಿಕ್ಕಿ ತನ್ನ ರಿಯಾ ಹಕ್ಕಿಯ ಮೇಲೆ ಸವಾರನಾಗಿ ಪೀಟ್‌ನ ಬೆನ್ನಟ್ಟುತ್ತಾನೆ. ಮಿಕ್ಕಿ ತನ್ನ ಎದುರಾಳಿಯನ್ನು ಹಿಡಿದು, ಇಬ್ಬರೂ ಕತ್ತಿಯುದ್ಧ ನಡೆಸುವರು. ಈ ಯುದ್ಧದಲ್ಲಿ ಮಿಕ್ಕಿ ವಿಜಯಿಯಾಗುತ್ತಾನೆ. ಈ ಕಿರು-ವ್ಯಂಗ್ಯಚಲನಚಿತ್ರದ ಅಂತ್ಯದಲ್ಲಿ ಮಿಕ್ಕಿ ಮತ್ತು ಮಿನ್ನೀ ಇಬ್ಬರೂ ರಿಯಾ ಹಕ್ಕಿಯನ್ನೇರಿ ದೂರ ಹೋಗುವರು.
ಆನಂತರದ ಸಂದರ್ಶನಗಳಲ್ಲಿ ಐವರ್ಕ್ಸ್ ಹೇಳಿದ ಪ್ರಕಾರ, ದಿ ಗ್ಯಾಲೊಪಿನ್' ಗಾಚೊ ದಲ್ಲಿ ಮಿಕ್ಕಿಯ ಪಾತ್ರ ಫೇರ್‌ಬ್ಯಾಂಕ್ಸ್ ಮಾದರಿಯಲ್ಲಿ ದುಂಡಾವರ್ತಿಗಾರನ ಪಾತ್ರವಾಗಿತ್ತು. ಈ ಕಿರು-ವ್ಯಂಗ್ಯಚಲನಚಿತ್ರದದಲ್ಲಿ ಮಿಕ್ಕಿ ಮತ್ತು ಬ್ಲ್ಯಾಕ್ ಪೀಟ್ ಮೊದಲ ಬಾರಿಗೆ ಮುಖಾಮುಖಿಯಾಗುತ್ತಾರೆ. ಬ್ಲ್ಯಾಕ್ ಪೀಟ್ ಈಗಾಗಲೇಅಲೀಸ್ ಕಾಮೆಡೀಸ್ ಮತ್ತು ಆಸ್ವಾಲ್ಡ್ ಸರಣಿ ಕಥೆಗಳಲ್ಲಿ ಖಳನಾಯಕನಾಗಿದ್ದ. ಚಿತ್ರದ ಅಂತಿಮ ದೃಶ್ಯದ ತನಕ, ಮಿಕ್ಕಿ ಮತ್ತು ಮಿನ್ನೀ ಪರಸ್ಪರ ಅಪರಿಚಿತರಂತೆ ನಟಿಸುವ ಆಧಾರದ ಮೇಲೆ, ಅವರಿಬ್ಬರ ನಡುವೆ ಮೂಲತಃ ಪರಸ್ಪರ ಪರಿಚಯವಿರುವಂತೆ ತೋರಿಸುವ ಸಂಭಾವ್ಯ ಉದ್ದೇಶವಿತ್ತು. ಈ ಮೂರೂ ಪಾತ್ರಗಳೂ ಒರಟಾದ, ಕೆಳಮಟ್ಟದ ವರ್ಗದ ಹಿನ್ನೆಲೆಯಿಂದ ಬಂದಿದ್ದು, ಅವುಗಳ ಆನಂತರದ ಆವೃತ್ತಿಯಲ್ಲಿ ಈ ಲಕ್ಷಣಗಳು ತೋರಿರುವುದಿಲ್ಲ ಎಂದು ಆಧುನಿಕ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ, ದಿ ಗ್ಯಾಲೊಪಿನ್' ಗಾಚೊ ಕಿರು-ವ್ಯಂಗ್ಯಚಲನಚಿತ್ರವು ಐತಿಹಾಸಿಕವಾಗಿ ಗಮನಾರ್ಹ ಎನ್ನಲು ವಾದಯೋಗ್ಯವಾಗಿದೆ.
ಇದರ ಮೂಲ ನಿರ್ಮಾಣ ಸಮಯದಲ್ಲಿ, ವಾಲ್ಟ್ ಡಿಸ್ನಿ ಪುನಃ ಒಬ್ಬ ವಿತರಕನನ್ನು ಗಳಿಸಿಕೊಳ್ಳಲು ವಿಫಲರಾದರು. ಮಿಕ್ಕಿಯ ಇನ್ನೊಂದು ಚಿತ್ರದ ನಂತರ ಇದು 30 ಡಿಸೆಂಬರ್ 1928ರಂದು ಬಿಡುಗಡೆಯಾಯಿತು. ಮೊದಲಿಗೆ, ಮಿಕ್ಕಿ ಹಾಗೂ ತನ್ನ ಮುಂಚಿನ ಪಾತ್ರ ಆಸ್ವಾಲ್ಡ್‌ನೊಂದಿಗೆ ಹೋಲಿಕೆಯಿತ್ತು ಎಂದು ಊಹಿಸಿದ ಜನರು ಮಿಕ್ಕಿ ಪಾತ್ರದಲ್ಲಿ ಆಸಕ್ತಿ ವಹಿಸಿರಲಿಲ್ಲ. ಇದನ್ನು ಮನಗಂಡ ವಾಲ್ಟ್ ಡಿಸ್ನಿ, ಮಿಕ್ಕಿ ಮೌಸ್ ಸರಣಿಗೆ ತಮ್ಮ ಮುಂಚಿನ ಕೃತಿಗಳು ಹಾಗು ತಮ್ಮ ಪೈಪೋಟಿದಾರರ ಪಾತ್ರಗಳಿಗಿಂತಲೂ ಭಿನ್ನರೂಪ ನೀಡಲು ರೂಪುರೇಖೆ ಹಾಕಿದರು. ಇದರ ಫಲವಾಗಿ, ನಿರ್ಮಾಣವಾದದ್ದು ಮಿಕ್ಕಿ ಮೌಸ್‌ನ ಮೂರನೆಯ, ಬಿಡುಗಡೆಯಾಗಲು ಎರಡನೆಯ ಹಾಗೂ ಪ್ರೇಕ್ಷಕರು ನಿಜಕ್ಕೂ ಗಮನ ಹರಿಸಿದ ಮೊದಲ ಕಿರು-ವ್ಯಂಗ್ಯಚಲನಚಿತ್ರ ಸ್ಟೀಮ್‌ಬೋಟ್ ವಿಲ್ಲೀ .
ಸರಣಿಗೆ ಧ್ವನಿಪಥದ ಸೇರ್ಪಡೆ
[ಬದಲಾಯಿಸಿ]thumb|right|ಸ್ಟೀಮ್‌ಬೋಟ್ ವಿಲ್ಲೀ (1928) ನಲ್ಲಿ ಮಿಕ್ಕಿ ಮೌಸ್. ಸ್ಟೀಮ್‌ಬಟ್ ವಿಲ್ಲೀ 18 ನವೆಂಬರ್ 1828ರಂದು ಬಿಡುಗಡೆಯಾಯಿತು. ಎಂದಿನಂತೆ, ಈ ಕಿರುವ್ಯಂಗ್ಯಚಲನಚಿತ್ರವನ್ನೂ ಸಹ ವಾಲ್ಟ್ ಡಿಸ್ನಿ ಮತ್ತು ಉಬ್ ಐವರ್ಕ್ಸ್ ಜಂಟಿಯಾಗಿ ನಿರ್ದೇಶಿಸಿದ್ದರು. ಐವರ್ಕ್ಸ್ ಪುನಃ ಮುಖ್ಯ ಆನಿಮೇಟರ್ ಆದರು. ಜಾನಿ ಕ್ಯಾನನ್, ಲೆಸ್ ಕ್ಲಾರ್ಕ್, ವಿಲ್ಫ್ರೆಡ್ ಜ್ಯಾಕ್ಸನ್ ಮತ್ತು ಡಿಕ್ ಲುಂಡಿ ಐವರ್ಕ್ಸ್‌ಗೆ ಸಹಾಯಕ-ಸಹಯೋಗಿ ಆನಿಮೇಟರ್‌ಗಳಾದರು. ಅದೇ ವರ್ಷ 12 ಮೇರಂದು ಬಿಡುಗಡೆಯಾದ ಬಸ್ಟರ್ ಕೀಟನ್‌ರ ಸ್ಟೀಮ್‌ಬೋಟ್ ಬಿಲ್ ಜೂನಿಯರ್ ಚಲನಚಿತ್ರದ ಅಣಕು ಇದರ ಉದ್ದೇಶವಾಗಿತ್ತು. ನಿರ್ಮಾಣವಾಗಲು ಇದು ಮೂರನೆಯ ಮಿಕ್ಕಿ ಕಿರು-ವ್ಯಂಗ್ಯಚಲನಚಿತ್ರವಾದರೂ, ವಿತರಕರನ್ನು ಗಳಿಸಲು ಇದು ಮೊದಲ ಚಿತ್ರವಾಗಿತ್ತು. ಹಾಗಾಗಿ, ಇದನ್ನು ಮಿಕ್ಕಿಯ ಚೊಚ್ಚಲ ಚಿತ್ರ ಎನ್ನಲಾಗಿದೆ. ವಿಲ್ಲೀ ಚಿತ್ರದಲ್ಲಿ ಮಿಕ್ಕಿ ಪಾತ್ರದಲ್ಲಿ ಕೆಲವು ಬದಲಾವಣೆಗಳಿದ್ದವು. ವಿಶಿಷ್ಟವಾಗಿ, ಅವನ ಕಣ್ಣುಗಳು ಎರಡು ದೊಡ್ಡ ಚುಕ್ಕೆಗಳಾಗಿ ಮಾರ್ಪಾಡಾಗಿದ್ದವು. ಇದು ಆನಂತರದ ವ್ಯಂಗ್ಯಚಲನಚಿತ್ರಗಳಲ್ಲಿ ಅವನ ರೂಪವನ್ನು ಸ್ಥಾಪಿಸಿದವು.
ಕ್ರಿಯಾ ದೃಶ್ಯಗಳಿಗೆ ಸಂಬಂಧಿತ ಧ್ವನಿಮುದ್ರಣವನ್ನು ಪ್ರದರ್ಶಿಸಲು ಈ ವ್ಯಂಗ್ಯಚಿತ್ರವು ಮೊದಲ ವ್ಯಂಗ್ಯಚಿತ್ರವಾಗಿರಲಿಲ್ಲ. ಸಹೋದರರಾದ ಡೇವ್ ಮತ್ತು ಮ್ಯಾಕ್ಸ್ ಫ್ಲೇಷರ್ ಸಾರಥ್ಯದ ಫ್ಲೇಷರ್ ಸ್ಟುಡಿಯೊಸ್, 1920ರ ಇಸವಿಯಲ್ಲಿ ಡೆಫಾರೆಸ್ಟ್ ತಂತ್ರಜ್ಞಾನ-ವ್ಯವಸ್ಥೆ ಬಳಸಿ 1920ರ ದಶಕದಲ್ಲಿ ಆಗಲೇ ಹಲವು ಧ್ವನಿ-ಸಹಿತ ವ್ಯಂಗ್ಯ-ಚಲನಚಿತ್ರಗಳನ್ನು ನಿರ್ಮಿಸಿ ಬಿಡುಗಡೆಗೊಳಿಸಿತ್ತು. ಆದರೆ, ಚಲನಚಿತ್ರದುದ್ದಕ್ಕೂ ಈ ವ್ಯಂಗ್ಯಚಿತ್ರ-ದೃಶ್ಯಗಳೊಂದಿಗೆ ಧ್ವನಿಪಥವು ಸಮನ್ವಯಗೊಂಡಿರಲಿಲ್ಲ. ಸ್ಟೀಮ್‌ಬೋಟ್ ವಿಲ್ಲೀ ಕಿರು-ವ್ಯಂಗ್ಯಚಲನಚಿತ್ರಕ್ಕಾಗಿ ಡಿಸ್ನಿ ಉದ್ದಿಮೆಯು, ಧ್ವನಿಗಳನ್ನು ದೃಶ್ಯಗಳೊಂದಿಗೆ ಸಮನ್ವಯಿಸಲು ಕ್ಲಿಕ್ ಟ್ರ್ಯಾಕ್ ವ್ಯವಸ್ಥೆಯೊಂದಿಗೆ ಧ್ವನಿಮುದ್ರಣ ನಡೆಸಿತು. ಇದರ ಮೂಲಕ ಸಂಗೀತ ನುಡಿಸುವವರು ಲಯಕ್ಕೆ ತಕ್ಕಂತೆ ಸಂಗೀತ ನೀಡಲು ನೆರವಾಯಿತು. ಈ ನಿಖರ ಕಾಲಯೋಜನೆಯು 'ಟರ್ಕಿ ಇನ್ ದಿ ಸ್ಟ್ರಾ' ಎಂಬ ದೃಶ್ಯಾವಳಿಯಲ್ಲಿ ಕಾಣಸಿಗುತ್ತದೆ. ಇದರಲ್ಲಿ ಮಿಕ್ಕಿಯ ನಟನೆಯು ಜೊತೆಗೆ ನುಡಿಸಲಾಗುವ ವಾದ್ಯಗಳೊಂದಿಗೆ ನಿಖರ ಹೊಂದಿಕೆಯಾಗುತ್ತದೆ. ಈ ಚಿತ್ರದ ಮೂಲ ಸಂಗೀತ ಸಂಯೋಜಕರು ಯಾರು ಎಂಬ ಕುರಿತು ಆನಿಮೇಷನ್ ಇತಿಹಾಸಕಾರರು ದೀರ್ಘಕಾಲದಿಂದಲೂ ಚರ್ಚಿಸುತ್ತಿದ್ದಾರೆ. ವಿಲ್ಫ್ರೆಡ್ ಜ್ಯಾಕ್ಸನ್, ಕಾರ್ಲ್ ಸ್ಟಾಲಿಂಗ್ ಮತ್ತು ಬರ್ಟ್ ಲೂಯಿಸ್ ಸಂಗೀತ ಸಂಯೋಜನೆ ಮಾಡಿದ್ದರೆಂದು ಹೇಳಲಾಗಿದೆ, ಆದರೆ ಇದರ ಗುರುತಿಸುವಿಕೆ ಇನ್ನೂ ಅಸ್ಪಷ್ಟ. ಮಿಕ್ಕಿ ಹಾಗೂ ಮಿನ್ನೀ ಮೌಸ್ ಪಾತ್ರಗಳೆರಡಕ್ಕೂ ವಾಲ್ಟ್ ಡಿಸ್ನಿ ಧ್ವನಿದಾನ ಮಾಡಿದ್ದರು.
ಚಿತ್ರಕಥೆಯಲ್ಲಿ ಮಿಕ್ಕಿ ಕ್ಯಾಪ್ಟನ್ ಪೀಟ್‌ನ ಆಧೀನನಾಗಿ 'ಸ್ಟೀಮ್‌ಬೋಟ್ ವಿಲ್ಲೀ' ಎಂಬ ನೌಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಮೊದಲಿಗೆ ಅವನು ನೌಕೆಯನ್ನು ಚಲಾಯಿಸುತ್ತಿರುವಾಗ ಸಿಳ್ಳು ಹೊಡೆಯುತ್ತಿರುತ್ತಾನೆ. ಆನಂತರ, ಪೀಟ್ ಮಿಕ್ಕಿಯಿಂದ ನೌಕೆಯ ಚಾಲನಾ ಕಸಬನ್ನು ಕಸಿದುಕೊಂಡು ಸಿಟ್ಟಿನಿಂದ ಅವನನ್ನು ನೌಕೆಯ ಸೇತುವೆಯಿಂದ ನೂಕುತ್ತಾನೆ. ಸರಕನ್ನು ನೌಕೆಗೆ ವರ್ಗಾಯಿಸಲೆಂದು ನೌಕೆಯನ್ನು ಶೀಘ್ರದಲ್ಲಿ ನಿಲ್ಲಿಸಬೇಕಾಗುತ್ತದೆ. ನೌಕೆಯು ಹೊರಡುವಾಗಲೇ ಮಿನ್ನೀ ಅಲ್ಲಿಗೆ ಬರುತ್ತಾಳೆ. ಅವಳು ನೌಕೆಯ ಏಕೈಕ ಪ್ರಯಾಣಿಕೆಯಾಗಿದ್ದರೂ, ನೌಕೆಯನ್ನು ತಲುಪಲು ತಡವಾಗಿದ್ದಳು. ಮಿಕ್ಕಿ ಅವಳನ್ನು ನದಿಯ ತೀರದಿಂದ ಕರೆದುಕೊಳ್ಳಲು ಯಶಸ್ವಿಯಾಗುತ್ತಾನೆ. ಜನಪ್ರಿಯ ಜನಪದ ಗೀತೆ 'ಟರ್ಕಿ ಇನ್ ದಿ ಸ್ಟ್ರಾ' ಹಾಡಿನ ಸಂಗೀತ ಸಂಯೋಜನಾ ಹಾಳೆಯನ್ನು ಮಿನ್ನೀ ಅಕಸ್ಮಾತ್ ಬೀಳಿಸುತ್ತಾಳೆ. ಈ ನೌಕೆಯಲ್ಲಿ ಸಾಗಿಸಲಾದ ಪ್ರಾಣಿಗಳ ಪೈಕಿ ಮೇಕೆಯೊಂದು ಈ ಸಂಗೀತ-ಸಂಯೋಜನಾ ಹಾಳೆಯನ್ನು ತಿಂದುಬಿಡುತ್ತದೆ. ಇದರ ಫಲವಾಗಿ, ಮಿಕ್ಕಿ ಮತ್ತು ಮಿನ್ನೀ ಮೇಕೆಯ ಬಾಲವನ್ನು ರಾಗ ನುಡಿಸುವ ಧ್ವನಿಲೇಖ (ಫೊನೊಗ್ರಾಫ್) ವನ್ನಾಗಿಸುತ್ತಾರೆ. ಈ ಕಿರು-ವ್ಯಂಗ್ಯಚಲನಚಿತ್ರದ ಉಳಿದ ಭಾಗದುದ್ದಕ್ಕೂ, ಮಿಕ್ಕಿ ವಿವಿಧ ಇತರೆ ಪ್ರಾಣಿಗಳನ್ನು ತನ್ನ ಸಂಗೀತ ವಾದ್ಯಗಳನ್ನಾಗಿ ಬಳಸುತ್ತಾನೆ. ನೌಕೆಯ ಮುಖ್ಯಸ್ಥ ಕ್ಯಾಪ್ಟನ್ ಪೀಟ್ ಅಂತಿಮವಾಗಿ ಈ ಸದ್ದುಗಳಿಂದ ವಿಚಲಿತನಾಗಿ ಮಿಕ್ಕಿಯನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳುತ್ತಾನೆ. ಪ್ರಯಾಣದ ಉಳಿದ ಭಾಗದುದ್ದಕ್ಕೂ ಮಿಕ್ಕಿ ಆಲೂಗಡ್ಡೆಗಳಿಂದ ಸಿಪ್ಪೆ ತೆಗೆಯುವ ಕೆಲಸ ಮಾಡಬೇಕಾಯಿತು. ಗಿಣಿಯೊಂದು ಮಿಕ್ಕಿಯನ್ನು ಲೇವಡಿ ಮಾಡಲು ಯತ್ನಿಸುತ್ತದೆ. ಸಿಟ್ಟಾದ ಮಿಕ್ಕಿ ಅದನ್ನು ನದಿಗೆ ಎಸೆಯುತ್ತಾನೆ. ಇದು ಈ ಕಿರು-ವ್ಯಂಗ್ಯಚಲನಚಿತ್ರದ ಕೊನೆಯ ದೃಶ್ಯವಾಗುತ್ತದೆ.
ಸ್ಟೀಮ್‌ಬೋಟ್ ವಿಲ್ಲೀ ಬಿಡುಗಡೆಯಾಗುವ ಸಮಯ, ವಿನೋದಾತ್ಮಕ ಉದ್ದೇಶಗಳಿಗೆ ಧ್ವನಿಯ ಬಳಕೆಯನ್ನು ಬಹಳಷ್ಟು ಮೆಚ್ಚಿದ್ದರು ಎಂದು ವರದಿಯಾಗಿತ್ತು. ಅಂದಿನ ಕಾಲದಲ್ಲಿ ಧ್ವನಿ-ಸಹಿತ ಚಲನಚಿತ್ರಗಳು ಅಥವಾ 'ಟಾಕೀಸ್' ಹೊಸತನದ ಪ್ರತೀಕ ಎಂದು ಪರಿಗಣಿಸಲಾಗುತ್ತಿತ್ತು. ಸಂವಾದ ದೃಶ್ಯಾವಳಿಗಳನ್ನು ಹೊಂದಿದ್ದ ಮೊಟ್ಟಮೊದಲ ಪೂರ್ಣಪ್ರಮಾಣದ ಚಲನಚಿತ್ರ , ಆಲ್ ಜೊಲ್ಸನ್ ಅಭಿಯನದ ದಿ ಜ್ಯಾಝ್ ಸಿಂಗರ್ 6 ಅಕ್ಟೋಬರ್ 1927ರಂದು ಬಿಡುಗಡೆಯಾಯಿತು. ಈ ಚಲನಚಿತ್ರ ಯಶಸ್ಸು ಕಂಡ ಒಂದು ವರ್ಷದೊಳಗೇ, ಅಮೆರಿಕಾ ಸಂಯುಕ್ತ ಸಂಸ್ಥಾನದ ಹಲವು ಚಲನಚಿತ್ರ ಮಂದಿರಗಳಲ್ಲಿ ಚಲನಚಿತ್ರ ಧ್ವನಿ ಉಪಕರಣಗಳನ್ನು ಸ್ಥಾಪಿಸಲಾಗಿತ್ತು. ಈ ಹೊಸ ವಿದ್ಯಮಾನದ ಲಾಭ ಪಡೆಯ ಹೊರಟ ವಾಲ್ಟ್ ಡಿಸ್ನಿ ಯಶಸ್ವಿಯೂ ಆದರು. ಹಲವು ಇತರೆ ವ್ಯಂಗ್ಯಚಲನಚಿತ್ರ ಸ್ಟುಡಿಯೊಗಳು ಇನ್ನೂ ಮೂಕ ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸುತ್ತಿದ್ದ ಕಾರಣ, ವಾಲ್ಟ್ ಡಿಸ್ನಿಗೆ ಯಾವುದೇ ಸಶಕ್ತ ಪೈಪೋಟಿಯಾಗಲು ಸಾಧ್ಯವಾಗಲಿಲ್ಲ. ಇದರ ಫಲವಾಗಿ, ಮಿಕ್ಕಿ ಮೌಸ್ ಆ ಕಾಲದ ಪ್ರಮುಖ ಆನಿಮೇಟೆಡ್ ಪಾತ್ರವಾಯಿತು. ಶೀಘ್ರದಲ್ಲಿಯೇ ವಾಲ್ಟ್ ಡಿಸ್ನಿ ತಮ್ಮ ಮುಂಚಿನ ಧ್ವನಿ-ರಹಿತ ಮಿಕ್ಕಿ ಚಿತ್ರಗಳಾದ ಪ್ಲೇನ್ ಕ್ರೇಜಿ ಹಾಗೂ ದಿ ಗ್ಯಾಲೊಪಿಂಗ್ ಗಾಚೊಗೆ ಧ್ವನಿ ಸಂಯೋಜಿಸಿ ಅಳವಡಿಸಿ, ಪುನಃ ಬಿಡುಗಡೆಗೊಳಿಸಿದರು. ಇವೆರಡೂ ಕಿರು-ವ್ಯಂಗ್ಯಚಲನಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದು ಮಿಕ್ಕಿ ಮೌಸ್‌ನ ಜನಪ್ರಿಯತೆಯನ್ನು ಹೆಚ್ಚಿಸಿತು. ಮಿಕ್ಕಿಯ ನಾಲ್ಕನೆಯ ಕಿರು-ವ್ಯಂಗ್ಯಚಲನಚಿತ್ರ ದಿ ಬಾರ್ನ್ ಡ್ಯಾನ್ಸ್ ನಿರ್ಮಾಣ ಆರಂಭವಾಯಿತು. ಆದರೆ ವಾಸ್ತವವಾಗಿ, 1929ರಲ್ಲಿ ಬಿಡುಗಡೆಯಾದ ದಿ ಕಾರ್ನಿವಲ್ ಕಿಡ್ ಚಿತ್ರದಲ್ಲಿ 'ಹಾಟ್ ಡಾಗ್ಸ್, ಹಾಟ್ ಡಾಗ್ಸ್!' ಎನ್ನುವ ತನಕ ಮಿಕ್ಕಿ ವಾಸ್ತವವಾಗಿ ಮಾತನಾಡುವುದಿಲ್ಲ. ಸ್ಟೀಮ್‌ಬೋಟ್ ವಿಲ್ಲಿ ಬಿಡುಗಡೆಯಾದ ನಂತರ, ಮಿಕ್ಕಿ ಮೌಸ್ ಫೆಲಿಕ್ಸ್ ದಿ ಕ್ಯಾಟ್ ಪಾತ್ರದೊಂದಿಗೆ ಪೈಪೋಟಿ ನಡೆಸಿ, ತಾನು ಸತತವಾಗಿ ಧ್ವನಿ-ಸಹಿತ ವ್ಯಂಗ್ಯಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಅವನ ಜನಪ್ರಿಯತೆ ಅಪಾರವಾಗಿ ಬೆಳೆಯತೊಡಗಿತು. ಇಸವಿ 1929ರೊಳಗೆ, ಫೆಲಿಕ್ಸ್ ಚಿತ್ರಮಂದಿರದ ಪ್ರೇಕ್ಷಕರಲ್ಲಿ ಜನಪ್ರಿಯತೆ ಕಡಿಮೆಯಾದ ಕಾರಣ, ಪ್ಯಾಟ್ ಸಲ್ಲಿವನ್ ಮುಂಬರುವ ತಮ್ಮ ಎಲ್ಲಾ ಫೆಲಿಕ್ಸ್ ವ್ಯಂಗ್ಯಚಲನಚಿತ್ರಗಳನ್ನು ಧ್ವನಿ-ಸಹಿತ ಬಿಡುಗಡೆಗೊಳಿಸಲು ನಿರ್ಧರಿಸಿದರು.[೯] ದುರದೃಷ್ಟವಶಾತ್, ಧ್ವನಿ-ಸಹಿತದ ಫೆಲಿಕ್ಸ್ ವ್ಯಂಗ್ಯ-ಚಲನಚಿತ್ರಗಳಿಗೆ ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇಸವಿ 1930ರೊಳಗೆ ಫೆಲಿಕ್ಸ್ ಪಾತ್ರವು ಪರದೆಯಿಂದ ಮಾಸಿಹೋಗಿ ಅದೃಶ್ಯವಾಗಿತ್ತು.[೧೦]
ಬಣ್ಣದ ಸೇರ್ಪಡೆ
[ಬದಲಾಯಿಸಿ]ಮಿಕ್ಕಿ 1935ರಲ್ಲಿ ಮೊದಲ ಬಾರಿಗೆ ಬಣ್ಣದಲ್ಲಿ ಕಾಣಿಸಿಕೊಂಡನು. ಇಸವಿ 1932ರಲ್ಲಿ ಬಿಡುಗಡೆಯಾದ ಫ್ಲಾವರ್ಸ್ ಅಂಡ್ ಟ್ರೀಸ್ ಡಿಸ್ನಿ ಸಂಸ್ಥೆಯ ಮೊಟ್ಟಮೊದಲ ಟೆಕ್ನಿಕಲರ್ ಚಿತ್ರವಾಗಿತ್ತು. ಆನಂತರದ ವರ್ಷಗಳಲ್ಲಿ ಮೂಲತಃ ಕಪ್ಪು-ಬಿಳುಪಿನಲ್ಲಿ ಬಿಡುಗಡೆಯಾಗಿದ್ದ ಹಳೆಯ ಡಿಸ್ನಿ ಕಿರು-ವ್ಯಂಗ್ಯಚಲನಚಿತ್ರಗಳಿಗೆ ಬಣ್ಣ-ಲೇಪನ ಮಾಡಲಾಯಿತು.
ಮೂಲ ವ್ಯಾಪಾರಮುದ್ರೆ (ಟ್ರೇಡ್-ಮಾರ್ಕ್)
[ಬದಲಾಯಿಸಿ]ಯ ಮೂಲ ಶೈಲೀಕರಿಸಿದ ಮಿಕ್ಕಿ ಮೌಸ್ ಲಾಂಛನ. ಮಿಕ್ಕಿ ಮೌಸ್‌ನ್ನು 1928ರಲ್ಲಿ ಬಿಡುಗಡೆಯಾದ ಪ್ಲೇನ್ ಕ್ರೇಜಿ ಕಿರು-ವ್ಯಂಗ್ಯಚಿತ್ರದಲ್ಲಿ ಪರಿಚಯಿಸಲಾಯಿತು. ಆನಂತರ ಹೆಚ್ಚು ಜನಪ್ರಿಯವಾದ ಸ್ಟೀಮ್‌ಬೋಟ್ ವಿಲ್ಲೀ ಆನಿಮೇಟೆಡ್ ವ್ಯಂಗ್ಯಚಿತ್ರದ ಮೂಲಕ ಮಿಕ್ಕಿ ತಾರೆಯಾಗಿ ಹೊರಹೊಮ್ಮಿದ.
ಕಾಲ್ಪನಿಕಹಾಗೂ ಕಿಲಕಿಲ ನಗುವ ಈ ದಂಶಕವು ಜನ್ಮ ತಾಳಿದ 1928ಕ್ಕೆ ಹೊಂದಿಕೆಯಾಗುವಂತೆ ಡಿಸ್ನಿ ಸಂಸ್ಥೆಯು ತನ್ನ ಅತ್ಯಮೂಲ್ಯ ಲಾಂಛನ ಮಿಕ್ಕಿ ಮೌಸ್‌ನ್ನು ರಕ್ಷಿಸಲೆಂದು ವ್ಯಾಪಾರಮುದ್ರೆ ಅರ್ಜಿ ಸಲ್ಲಿಸಿತು. ವಾಲ್ಟರ್ ಎಲಿಯಾಸ್ ಡಿಸ್ನಿ 21 ಮೇ 1928ರಂದು ಮೂಲ ಅರ್ಜಿಯನ್ನು USPTOಗೆ ಸಲ್ಲಿಸಿದರು. 'ಮಾರಾಟಕ್ಕಾಗಿ ಪ್ರತಿಗೊಳಿಸಲಾದ ಚಲನಚಿತ್ರಗಳಲ್ಲಿ ಬಳಕೆಗಾಗಿ ಈ ಟ್ರೇಡ್‌ಮಾರ್ಕ್ ಬಳಕೆಯಾಗುವುದು' ಎಂದು ಅವರು ನಮೂದಿಸಿದರು.[೧೧] ಈ ಟ್ರೇಡ್‌ಮಾರ್ಕ್ 1 ಮೇ 1928 ದಿನಾಂಕದ ಸುಮಾರಿನಿಂದಲೂ ಸತತ ಬಳಕೆಯಲ್ಲಿತ್ತು. 'ಚಲನಚಿತ್ರಗಳಲ್ಲಿ ಈ ಟ್ರೇಡ್‌ಮಾರ್ಕ್‌ನ ಸ್ಥಿರಚಿತ್ರ ತೆಗೆದುಕೊಂಡು ಸಂಬಂಧಿತ ಸರಕುಗಳ ಮೇಲೆ ಅಚ್ಚು ಮಾಡಲಾಗಿದೆ' ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಪರಂಪರಾಗತ ಮಿಕ್ಕಿ ಮೌಸ್ ಟ್ರೇಡ್‌ಮಾರ್ಕ್‌ನ್ನು ಸದ್ಯಕ್ಕೆ ಕ್ಯಾಲಿಫೊರ್ನಿಯಾದ ಬರ್ಬ್ಯಾಂಕ್‌ನಲ್ಲಿರುವ ಡಿಸ್ನಿ ಎಂಟರ್ಪ್ರೈಸಸ್ ಇನ್ಕಾರ್ಪೊರೇಟೆಡ್ ಸಂಸ್ಥೆಯು ನೋಂದಾಯಿಸಿ ನವೀಕರಿಸಿ ಸ್ವಾಮ್ಯದಲ್ಲಿಟ್ಟುಕೊಂಡಿದೆ.
ಪಾತ್ರಗಳು ಮತ್ತು ಸೂಕ್ತ ವಿನ್ಯಾಸ
[ಬದಲಾಯಿಸಿ]ಒಬ್ಬ ಕನ್ಯಾರ್ಥಿಯಾಗಿ ಮಿಕ್ಕಿ
[ಬದಲಾಯಿಸಿ]ಇಸವಿ 1929ರಲ್ಲಿ ಬಿಡುಗಡೆಯಾದ ಹನ್ನೆರಡು ಮಿಕ್ಕಿ ಮೌಸ್ ಕಿರು-ವ್ಯಂಗ್ಯಚಲನಚಿತ್ರಗಳ ಪೈಕಿ ದಿ ಬಾರ್ನ್ ಡ್ಯಾನ್ಸ್ 14 ಮಾರ್ಚ್ 1929ರಂದು ಬಿಡುಗಡೆಯಾಗಿ ಆ ವರ್ಷದ ಮೊದಲ ಚಿತ್ರವಾಗಿತ್ತು. ಈ ಕಿರು-ವ್ಯಂಗ್ಯಚಿತ್ರಕ್ಕೆ ಉಬ್ ಐವರ್ಕ್ಸ್ ಮುಖ್ಯ ಆನಿಮೇಟರ್ ಹಾಗೂ ವಾಲ್ಟ್ ಡಿಸ್ನಿ ನಿರ್ದೇಶಕರಾಗಿದ್ದರು. ಮಿನ್ನೀ ಪೀಟ್‌ಗಾಗಿ ಮಿಕ್ಕಿಯನ್ನು ತಿರಸ್ಕರಿಸಿದ ದೃಶ್ಯಾವಳಿಗಾಗಿ ಈ ಚಿತ್ರವು ಗಮನಾರ್ಹವಾಗಿದೆ. ಈ ಚಿತ್ರದಲ್ಲಿ ಪೀಟ್‌ನ ಪಾತ್ರವು ಬಹಳ ಅಸಾಮಾನ್ಯವಾಗಿ ಕಾಣುತ್ತದೆ. ಹಿಂದೆ ಒಬ್ಬ ಖಳನಾಗಿದ್ದ ಪೀಟ್, 'ದಿ ಬಾರ್ನ್ ಡ್ಯಾನ್ಸ್'ನಲ್ಲಿ ಸನ್ನಡತೆಯ ಸಜ್ಜನನಾಗಿ ಬಿಂಬಿತನಾಗುತ್ತಾನೆ. ಇನ್ನೂ ಹೆಚ್ಚಾಗಿ, ಮಿಕ್ಕಿ ಒಬ್ಬ ನಾಯಕನ ಬದಲಿಗೆ ಒಬ್ಬ ಅಸಮರ್ಥ ಯುವ ಕನ್ಯಾರ್ಥಿಯಾಗಿರುತ್ತಾನೆ. ತನ್ನ ವೈಫಲ್ಯದ ಕಾರಣ ದುಃಖದಿಂದ ಅಳುವ ಮಿಕ್ಕಿ ಅಸಾಮಾನ್ಯವಾಗಿ ಭಾವನಾತ್ಮಕ ಮತ್ತು ಸುಲಭವಾಗಿ ಮನನೋಯುವ ಸ್ವಭಾವದವನಾಗಿ ಕಾಣುತ್ತಾನೆ. ಆದರೂ, ಈ ಪಾತ್ರದ ಸ್ವಭಾವವು ಪ್ರೇಕ್ಷಕರಿಂದ ಅನುಕಂಪ ಗಳಿಸುತ್ತದೆ ಎಂದು ಅಭಿಪ್ರಾಯಗಳು ಮೂಡಿಬಂದಿವೆ.
ಕೈಚೀಲಧಾರಿ ಮಿಕ್ಕಿ
[ಬದಲಾಯಿಸಿ]"ನಾವು ಈ ಕೈಚೀಲಗಳನ್ನು ಏಕೆ ಎಂದಿಗೂ ಧರಿಸುವೆವು ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರ?" - ಸಣ್ಣ-ಪುಟ್ಟ ವಿಭಿನ್ನತೆಯುಳ್ಳ ವಿವಿಧ ಪಾತ್ರಗಳು
ದಿನಾಂಕ 28 ಮಾರ್ಚ್ 1929ರಂದು ಬಿಡುಗಡೆಯಾದ ದಿ ಆಪ್ರಿ ಹೌಸ್ , ಆ ವರ್ಷ ಬಿಡುಗಡೆಯಾದ ಎರಡನೆಯ ಕಿರು-ವ್ಯಂಗ್ಯಚಲನಚಿತ್ರವಾಗಿತ್ತು. ಈ ಚಿತ್ರದಲ್ಲಿ ಮಿಕ್ಕಿ ಮೊದಲ ಬಾರಿಗೆ ಕೈಚೀಲಧಾರಿಯಾಗಿರುತ್ತಾನೆ. ಇನ್ನು ಮುಂದಿನ ಹಲವು ಚಿತ್ರಗಳಲ್ಲಿ ಮಿಕ್ಕಿ ಕೈಚೀಲಧಾರಿಯಾಗಿಯೇ ಕಾಣುತ್ತಾನೆ. 'ಕಪ್ಪು-ಬಿಳುಪಿನಲ್ಲಿ ಬಿಡುಗಡೆಯಾದ ಕಿರು-ವ್ಯಂಗ್ಯಚಲನಚಿತ್ರಗಳಲ್ಲಿ ಪಾತ್ರಗಳ ಕೈಗಳು ಮತ್ತು ಶರೀರ ಕಪ್ಪು ಬಣ್ಣದ್ದಾಗಿದ್ದ ಕಾರಣ, ಕೈಗಳು ಶರೀರದ ಹತ್ತಿರವಿದ್ದಾಗ ಪ್ರೇಕ್ಷಕರು ಕೈಗಳನ್ನು ಗುರುತಿಸಲು ಸುಲಭವಾಗಲೆಂದು ಕೈಗವಸುಗಳನ್ನು ಪರಿಚಯಿಸಲಾಯಿತು' ಎಂಬ ವಿವರಗಳು ಕೇಳಿಬಂದಿವೆ (1935ರಲ್ಲಿ ದಿ ಬ್ಯಾಂಡ್ ಕಾನ್ಸರ್ಟ್ ಬಿಡುಗಡೆಯಾಗುವ ತನಕ ಮಿಕ್ಕಿ ಬಣ್ಣದ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿಲ್ಲ). ಕೈಗವಸಿನ ಹಿಂಭಾಗದಲ್ಲಿ ಕಾಣುವ ಮುರು ಕಪ್ಪು ಗೀಟುಗಳು, ಕೈಬೆರಳುಗಳ ನಡುವಿನಿಂದ ವಿಸ್ತರಿಸುವ ಕೈಗವಸುಗಳ ಬಟ್ಟೆಯ ಮಡಿಕೆಗಳನ್ನು ಬಿಂಬಿಸುತ್ತದೆ. ಇದು ಆ ಕಾಲದ ಸಣ್ಣಮಕ್ಕಳ ಕೈಗವಸು ವಿನ್ಯಾಸ ಮಾದರಿಯಂತಿದೆ.
ಸಹಜ ಇಲಿಯಂತೆ ನಿರೂಪಣೆ
[ಬದಲಾಯಿಸಿ]ದಿನಾಂಕ 18 ಏಪ್ರಿಲ್ 1929ರಂದು ಬಿಡುಗಡೆಯಾದ ವೆನ್ ದಿ ಕ್ಯಾಟ್'ಸ್ ಅವೇ , ಮಿಕ್ಕಿಯ ಆ ವರ್ಷದ ಮೂರನೆಯ ಕಿರು-ವ್ಯಂಗ್ಯಚಲನಚಿತ್ರವಾಗಿತ್ತು. ದಿನಾಂಕ 15 ಜನವರಿ 1926ರಂದು ಬಿಡುಗಡೆಯಾದ ಅಲೀಸ್ ರ‌್ಯಾಟ್ಲ್‌ಡ್ ಬೈ ರ‌್ಯಾಟ್ಸ್ ಎಂಬ ಅಲೀಸ್ ಕಾಮಿಡಿ ಸರಣಿಯ ಒಂದು ಭಾಗದ ರೀಮೇಕ್ ಆಗಿತ್ತು. ಅವನ ಹೆಸರು "ಟಾಮ್ ಕ್ಯಾಟ್" ಎಂದಾಗಿದ್ದರೂ,ಕ್ಯಾಟ್ ನಿಪ್ ಎರಡನೆಯ ಬಾರಿ ಕಾಣಿಸಿಕೊಳ್ಳುತ್ತಾನೆ. (ಟಾಮ್ ಅಂಡ್ ಜೆರಿ ಸರಣಿಯ ಪ್ರಮುಖ ಸಹಪಾತ್ರ ಟಾಮ್‌ನೊಂದಿಗೆ ಈ ಪಾತ್ರವನ್ನು ಗೊಂದಲ ಮಾಡುವುದು ಬೇಡ). ಅವನು ಅತಿಯಾಗಿ ಮದ್ಯ ಸೇವಿಸಿ ಪಾನಮತ್ತನಾಗಿ ತೋರುತ್ತಾನೆ. ಆನಂತರ ಅವನು ಬೇಟೆಯಾಡಲೆಂದು ಮನೆಯಿಂದ ಹೊರಡುತ್ತಾನೆ. ಅವನು ಮನೆಯಲ್ಲಿದ ಸಮಯ ಇಲಿಗಳ ಸೇನೆ ಆಹಾರ ಹುಡುಕಿಕೊಂಡು ಅವನ ಮನೆಯೊಳಗೆ ನುಗ್ಗುತ್ತವೆ. ಈ ಇಲಿಗಳ ಪೈಕಿ ಮಿಕ್ಕಿ ಮತ್ತು ಮಿನ್ನೀ ಸಹ ಇದ್ದು, ಈ'ಕೂಟ'ವನ್ನು ಔತಣಕೂಟವನ್ನಾಗಿಸುತ್ತಾರೆ. ಮಿಕ್ಕಿ ಮತ್ತು ಮಿನ್ನೀ ಸಹಜ ಇಲಿಯ ಗಾತ್ರ ಹಾಗು ಭಾಗಶಃ ಇಲಿಯ ವರ್ತನೆಯನ್ನು ಹೊಂದಿರುವಂತೆ ಈ ಕಿರು-ವ್ಯಂಗ್ಯಚಿತ್ರದಲ್ಲಿ ನಿರೂಪಿಸಿರುವುದು ವಿಶೇಷ. ಈ ಚಿತ್ರದ ಮುಂಚೆ ಹಾಗೂ ಆನಂತರದ ಚಿತ್ರಗಳಲ್ಲಿ ಮಿಕ್ಕಿ ಮತ್ತು ಮಿನ್ನೀ ಕುಳ್ಳಗಿನ ಮನುಷ್ಯರ ಗಾತ್ರದಲ್ಲಿ ನಿರೂಪಿತವಾಗಿರುತ್ತಾರೆ. ಗಮನಿಸಬೇಕಾದ ಇನ್ನೊಂದು ವಿಚಾರವೇನೆಂದರೆ, ಮದ್ಯಪಾನ ನಿಷೇಧ ಯುಗದಲ್ಲಿ ಈ ಚಿತ್ರವನ್ನು ಬಿಡುಗಡೆಗೊಳಿಸಿರುವುದರಿಂದ, ಮದ್ಯಪಾನೀಯಗಳು ಬಹುಶಃ ಕಳ್ಳಬಟ್ಟಿಯ ಉತ್ಪನ್ನಗಳಾಗಿವೆ.
ಸೈನಿಕನಾಗಿ ಮಿಕ್ಕಿ
[ಬದಲಾಯಿಸಿ]ಮುಂದೆ ಬಿಡುಗಡೆಯಾಗಲಿರುವ ಮಿಕ್ಕಿ ಕಿರು-ವ್ಯಂಗ್ಯಚಲನಚಿತ್ರವೂ ಸಹ ಅಸಾಮಾನ್ಯ ಎನ್ನಲಾಗಿದೆ. ದಿನಾಂಕ 25 ಏಪ್ರಿಲ್ 1929ರಂದು ಬಿಡುಗಡೆಯಾದ ದಿ ಬಾರ್ನ್‌ಯಾರ್ಡ್ ಬ್ಯಾಟ್ಲ್ ಈ ಚಿತ್ರದ ಹೆಸರು. ಈ ಚಿತ್ರದ ಮೂಲಕ ಮಿಕ್ಕಿ ಮೊದಲ ಬಾರಿಗೆ ಒಬ್ಬ ಸೈನಿಕನಾಗಿ ಯುದ್ಧದಲ್ಲಿ ಕಾಣಸಿಗುತ್ತಾನೆ.
ಸಂಕ್ರಮಣದಲ್ಲಿ ಮಿಕ್ಕಿ
[ಬದಲಾಯಿಸಿ]ಮಿಕ್ಕಿ ಮೌಸ್ ಕ್ಲಬ್
[ಬದಲಾಯಿಸಿ]ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ನೂರಾರು ಚಲನಚಿತ್ರ ಮಂದಿರಗಳಲ್ಲಿನ ಮಿಕ್ಕಿ ಮೌಸ್ ಕ್ಲಬ್‌ಗಳಾಗಿ ಚಿರಪರಿಚಿತವಾದ ಸಮುದಾಯಗಳಲ್ಲಿ ಮೊದಲನೆಯದನ್ನು ಡಿಸ್ನಿ ಸಂಸ್ಥೆಯು 1929ರಲ್ಲಿ ರಚಿಸಿತು.[೧೨]
ಮೊದಲ ವಿನೋದಪತ್ರಿಕಾ (ಕಾಮಿಕ್ಸ್) ಪ್ರಕಟಣೆ
[ಬದಲಾಯಿಸಿ]ಈ ಹಂತದೊಳಗೆ ಮಿಕ್ಕಿಯ ಪಾತ್ರವು ವಾಣಿಜ್ಯ ಸಾಫಲ್ಯ ಕಂಡ ಹದಿನೈದು ಕಿರು-ವ್ಯಂಗ್ಯಚಲನಚಿತ್ರಗಳಲ್ಲಿ ಕಾಣಿಸಿಕೊಂಡು, ಅಪಾರ ಜನಪ್ರಿಯತೆ ಗಳಿಸಿತ್ತು. ಹಾಗಾಗಿ, ಕಿಂಗ್ ಫೀಚರ್ಸ್ ಸಿಂಡಿಕೇಟ್‌ನವರು ವಾಲ್ಟ್ ಡಿಸ್ನಿಯವರನ್ನು ಸಂಪರ್ಕಿಸಿ, ಮಿಕ್ಕಿ ಹಾಗೂ ಅವನ ಸಹಯೋಗಿ ಪಾತ್ರಗಳನ್ನು ಅನುಮತಿಯ ಮೇರೆಗೆ ಬಳಸಿ ವಿನೋದ-ಚಿತ್ರಸರಣಿ (ಕಾಮಿಕ್ ಸ್ಟ್ರಿಪ್)ಗಾಗಿ ಬಳಸಲು ಅನುಮತಿ ಕೋರಿದರು. ವಾಲ್ಟ್ ಡಿಸ್ನಿ ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದರು. ದಿನಾಂಕ 13 ಜನವರಿ 1930ರಂದು ಮಿಕ್ಕಿ ಮೊದಲ ಬಾರಿ ಅಚ್ಚಾದ ವಿನೋದ-ಚಿತ್ರಾವಳಿಯಲ್ಲಿ ಕಾಣಿಸಿಕೊಂಡನು. ಈ ಕಾಮಿಕ್ ಕಥೆಯ ಮನ್ನಣೆಯನ್ನು ವಾಲ್ಟ್ ಡಿಸ್ನಿಯವರಿಗೆ, ಕಲೆ ಉಬ್ ಐವರ್ಕ್ಸ್‌ಗೆ ಹಾಗೂ ವರ್ಣ-ಶಾಯಿ ಕೆಲಸಕ್ಕಾಗಿ ವಿನ್ ಸ್ಮಿತ್‌ರಿಗೆ ಮನ್ನಣೆ ನೀಡಲಾಯಿತು. ಕಾಮಿಕ್ ಚಿತ್ರಸರಣಿಯ ಮೊದಲ ವಾರದಲ್ಲಿ ಪ್ಲೇನ್ ಕ್ರೇಜಿ 'ಯ ಸ್ಥೂಲ ರೂಪಾಂತರವನ್ನು ಹಾಸ್ಯಚಿತ್ರಮಾಲೆಯು ತೋರಿಸಿತು. ಮಿನ್ನೀ ಶೀಘ್ರದಲ್ಲಿಯೇ ಕಾಮಿಕ್ ಸರಣಿಯ ಪಾತ್ರವರ್ಗಕ್ಕೆ ಮೊದಲ ಸೇರ್ಪಡೆಯಾದರು. ದಿನಾಂಕ 13 ಜನವರಿ 1930ರಿಂದ 31 ಮಾರ್ಚ್ 1930ರ ವರೆಗೆ ಬಿಡುಗಡೆಯಾದ ಚಿತ್ರಾವಳಿಗಳನ್ನು ಕೆಲವೊಮ್ಮೆಲಾಸ್ಟ್ ಆನ್ ಎ ಡೆಸರ್ಟ್ ಐಲೆಂಡ್ ' ಎಂಬ ಸಾಮೂಹಿಕ ಶಿರೋನಾಮೆ ಹೊತ್ತ ಕಾಮಿಕ್-ಬುಕ್ ರೂಪದಲ್ಲಿ ಅಚ್ಚಾಗಿವೆ. ಆನಿಮೇಷನ್ ಇತಿಹಾಸಕಾರ ಜಿಮ್ ಕೊರ್ಕಿಸ್ ಗಮನಿಸಿದಂತೆ, 'ಹದಿನೆಂಟು ಸರಣಿಗಳ ನಂತರ, ಐವರ್ಕ್ಸ್ ಡಿಸ್ನಿ ಸಂಸ್ಥೆ ತೊರೆದರು; ವಿನ್ ಸ್ಮಿತ್ ದೈನಿಕ ಮೇರೆಗೆ ಚಿತ್ರರಚನೆಯನ್ನು ಮುಂದುವರೆಸಿದರು.' [೧೩]
ಶಾಸ್ತ್ರೀಯ ಸಂಗೀತ ಪ್ರದರ್ಶನಗಳು
[ಬದಲಾಯಿಸಿ]ಏತನ್ಮಧ್ಯೆ, ಆನಿಮೇಷನ್‌ನಲ್ಲಿ ಮಿಕ್ಕಿಯ ಇನ್ನೂ ಎರಡು ಕಿರು-ವ್ಯಂಗ್ಯಚಲನಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಇವುಗಳಲ್ಲಿ ಮೊದಲನೆಯದಾದ 'ದಿ ಬಾರ್ನ್‌ಯಾರ್ಡ್ ಕಾನ್ಸರ್ಟ್ ' 3 ಮಾರ್ಚ್ 1930ರಂದು ಬಿಡುಗಡೆಯಾಯಿತು. ಇದರಲ್ಲಿ ಮಿಕ್ಕಿ ಸಂಗೀತ ವಾದ್ಯವೃಂದವನ್ನು ನಿರ್ವಹಿಸುವಂತೆ ನಿರೂಪಿಸಲಾಯಿತು. ಹಿಂದಿನ ಚಿತ್ರಗಳಿಂದ ಕೇವಲ ಎರಡೇ ಪಾತ್ರಗಳು ಈ ವಾದ್ಯವೃಂದದಲ್ಲಿ ಸೇರಿಕೊಂಡಿರುವಂತೆ ನಿರೂಪಿಸಲಾಗಿತ್ತು (ಕೊಳಲುವಾದಕಿಯಾಗಿ ಕ್ಲಾರಾಬೆಲ್ ಮತ್ತು ಡ್ರಮ್ ವಾದಕನಾಗಿ ಹಾರೇಸ್). ಫ್ರಾನ್ಜ್ ವೊನ್ ಸುಪ್ಪೆ ವಿರಚಿತ ಪೊಯೆಟ್ ಅಂಡ್ ಪೆಸೆಂಟ್ ಒವರ್ಟ್ಯುವರ್ ಬಹಳ ಹಾಸ್ಯಮಯವಾಗಿದೆ. ಆದರೆ, ಇದರಲ್ಲಿ ನಿರೂಪಿಸಲಾದ ಹಲವು ಹಾಸ್ಯಪ್ರಸಂಗಗಳನ್ನು ಹಿಂದಿನ ಕಿರುಚಿತ್ರಗಳಿಂದ ಪುನರಾವರ್ತಿಸಲಾಗಿತ್ತು. ದಿನಾಂಕ 14 ಮಾರ್ಚ್ 1930ರಂದು ಬಿಡುಗಡೆಯಾದ ಎರಡನೆಯ ಕಿರು-ವ್ಯಂಗ್ಯಚಲನಚಿತ್ರವು ಮೊದಲಿಗೆ ಫಿಡ್ಲಿನ್' ಅರೌಂಡ್ ಎಂಬ ಶಿರೋನಾಮೆ ಹೊಂದಿದ್ದು, ಆನಂತರ ಜಸ್ಟ್ ಮಿಕ್ಕಿ ಎಂದು ಮರುನಾಮಕರಣ ಮಾಡಲಾಯಿತು. ಕಿರು-ವ್ಯಂಗ್ಯಚಲನಚಿತ್ರದಲ್ಲಿ ಮಿಕ್ಕಿ ಸೊಲೊ ವಯೊಲಿನ್ ನುಡಿಸುವಂತೆ ನಿರೂಪಿತವಾಗಿರುವ ಕಾರಣ, ಎರಡೂ ಶಿರೋನಾಮೆಗಳು ಸಾಕಷ್ಟು ನಿಕಟ ವಿವರಣೆ ನೀಡುತ್ತವೆ. "ವಿಲಿಯಮ್ ಟೆಲ್ ಒವರ್ಟ್ಯುವರ್", ರಾಬರ್ಟ್ ಷುಮನ್‌ರ "ಟ್ರಾಮೆರೇ" ("ರೆವರೀ"), ಹಾಗೂ ಫ್ರಾನ್ಜ್ ಲಿಝ್ಟ್‌ರ "ಹಂಗೇರಿಯನ್ ರ್‌ಹ್ಯಾಪ್ಸೊಡಿ ನಂಬರ್ 2"ಗಳ ಮುಕ್ತಾಯಗತಿಯನ್ನು ಮಿಕ್ಕಿ ಭಾವುಕವಾಗಿ ನುಡಿಸುವುದು ಗಮನಾರ್ಹವೆನಿಸಿದೆ. ಇದರಲ್ಲಿ ಎರಡನೆಯದು ಆಗಾಗ್ಗೆ ಬಗ್ಸ್ ಬನ್ನಿ, ಟಾಮ್ ಅಂಡ್ ಜೆರಿ ಹಾಗೂ ವುಡಿ ವುಡ್ಪೆಕರ್ ಪಾತ್ರಗಳುಳ್ಳ ಕಿರು-ವ್ಯಂಗ್ಯಚಲನಚಿತ್ರಗಳಲ್ಲಿ ಕೇಳಿಬರುತ್ತವೆ.
ಟೆಕ್ನಿಕಲರ್ ತಂತ್ರಜ್ಞಾನ ಬಳಸಿ ಚಿತ್ರಿಸಲಾದ ಮೊದಲ ಮಿಕ್ಕಿ ಮೌಸ್ ವ್ಯಂಗ್ಯಚಲನಚಿತ್ರ ದಿ ಬ್ಯಾಂಡ್ ಕಾನ್ಸರ್ಟ್ ನಲ್ಲಿ ಮಿಕ್ಕಿ ವಿಲಿಯಮ್ ಟೆಲ್ ಒವರ್ಟ್ಯುವರ್ ವಾದ್ಯವೃಂದ ನಿರ್ವಹಿಸಿದನು. ಆದರೆ ವ್ಯಂಗ್ಯಚಿತ್ರ ಸರಣಿಯಲ್ಲಿ ಮಿಕ್ಕಿ ಮತ್ತು ಅವನ ವಾದ್ಯವೃಂದವು ಚಂಡಮಾರುತದಲ್ಲಿ ಕೊಚ್ಚಿಹೋಗುತ್ತವೆ. ಈ ಕಿರು-ವ್ಯಂಗ್ಯಚಲನಚಿತ್ರವನ್ನು ನೋಡಿದ ಸಂಗೀತ ನಿರ್ವಾಹಕ ಆರ್ಟರೋ ಟಾಸ್ಕಾನಿನಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಇದನ್ನು ಪುನಃ ಪ್ರದರ್ಶಿಸುವಂತೆ ಪ್ರೊಜೆಕ್ಟರ್ ಚಾಲಕನಲ್ಲಿ ಕೇಳಿಕೊಂಡರಂತೆ.
ಇಸವಿ 1940ರಲ್ಲಿ ಬಿಡುಗಡೆಯಾದ ಡಿಸ್ನಿ ಸಂಸ್ಥೆಯ ಅತ್ಯುತ್ತಮ ವ್ಯಂಗ್ಯಚಲನಚಿತ್ರ ಫ್ಯಾಂಟೆಸಿಯಾ ದಲ್ಲಿ, ಶಾಸ್ತ್ರೀಯ ಸಂಗೀತದ ವಿಚಾರದಲ್ಲಿ ಮಿಕ್ಕಿ ತನ್ನ ವಿಖ್ಯಾತ ಪಾತ್ರದಲ್ಲಿ ಕಾಣಿಸಿಕೊಂಡನು. ಪಾಲ್ ಡ್ಯುಕಾಸ್ ಇದೇ ಹೆಸರಿನ ಸ್ವರಮೇಳಕ್ಕೆ ಸಂಯೋಜಿಸಲಾದ ದಿ ಸಾರ್ಸೆರರ್ಸ್ ಅಪ್ರೆಂಟೀಸ್ ರೂಪದಲ್ಲಿ ಮಿಕ್ಕಿ ತೆರೆಯ ಮೇಲೆ ಕಾಣಿಸಿಕೊಂಡದ್ದು ಈ ಚಿತ್ರದ ಪ್ರಖ್ಯಾತ ಭಾಗವಾಗಿದೆ. ಈ ಭಾಗದಲ್ಲಿ ಯಾವುದೇ ಸಂವಾದವಿರದೆ, ಕೇವಲ ಸಂಗೀತವುಂಟು. ತನ್ನ ದಿನನಿತ್ಯ ಚಾಕರಿ ಕೆಲಸ ಮಾಡಲು ಇಷ್ಟಪಡದ ಅಪ್ರೆಂಟಿಸ್ ಮಿಕ್ಕಿ, ಮಂತ್ರವಾದಿಯು ನಿದ್ದೆ ಹೋದನಂತರ ಮಂತ್ರವಾದಿಯ ಟೊಪ್ಪಿಯನ್ನು ಧರಿಸಿ, ಪೊರಕೆಯೊಂದರ ಮೇಲೆ ಮಂತ್ರ ಹಾಕುತ್ತಾನೆ. ಪೊರಕೆಯು ಜೀವಂತವಾಗಿ ಬಂದು, ಎರಡು ಬಕೆಟ್‌ಗಳಿಂದ ನೀರನ್ನು ಬಳಸಿಕೊಂಡು ಆಳವಾದ ಬಾವಿಯನ್ನು ತುಂಬುವ ಅತಿ ಶ್ರಮದ ಕೆಲಸವನ್ನು ವೇಗವಾಗಿ ಮಾಡುತ್ತದೆ. ಅಂತಿಮವಾಗಿ ಬಾವಿಯ ನೀರು ಉಕ್ಕಿ ಹರಿದಾಗ, ಮಿಕ್ಕಿ ಪೊರಕೆಯನ್ನು ನಿಯಂತ್ರಿಸಲು ವಿಫಲನಾಗುತ್ತಾನೆ. ಇದು ಪ್ರವಾಹದ ಸ್ಥಿತಿಗೆ ಕಾರಣವಾಗುತ್ತದೆ. ಈ ಭಾಗವು ಅಂತ್ಯಗೊಂಡಾಗ, ಮಿಕ್ಕಿ ನೆರಳುಚಿತ್ರರೂಪದಲ್ಲಿ ಕಾಣಿಸಿಕೊಂಡು, ಫ್ಯಾಂಟೆಸಿಯಾ ದುದ್ದಕ್ಕೂ ಸಂಗೀತ ನೀಡಿದ್ದ ಲಿಯೊಪೊಲ್ಡ್ ಸ್ಟೊಕೊವ್‌ಸ್ಕಿ ಅವರೊಂದಿಗೆ ಕೈಕುಲುಕುತ್ತಾನೆ.
ಸಹ-ಸೃಷ್ಟಿಕರ್ತರ ನಿರ್ಗಮನ ಮತ್ತು ಇದರ ಪರಿಣಾಮಗಳು
[ಬದಲಾಯಿಸಿ]ಇವುಗಳ ನಂತರ, ಕ್ಯಾಕ್ಟಸ್ ಕಿಡ್ ' 11 ಏಪ್ರಿಲ್ 1930ರಂದು ಬಿಡುಗಡೆಯಾಯಿತು. ಶಿರೋನಾಮೆಯಲ್ಲಿ ಸೂಚಿಸಿರುವಂತೆ'ವೆಸ್ಟರ್ನ್' ಶೈಲಿಯ ಚಲನಚಿತ್ರವನ್ನು ಅಣಕಿಸುವುದು ಅದರ ಉದ್ದೇಶವಾಗಿತ್ತು. ಆದರೂ, ಇದು ಹೆಚ್ಚು-ಕಡಿಮೆ ಅರ್ಜೆಂಟೀನಾ ಬದಲು ಮೆಕ್ಸಿಕೊದಲ್ಲಿ ಕಥೆ ಹೆಣೆದು ನಿರ್ಮಿಸಲಾದ ದಿ ಗ್ಯಾಲೊಪಿನ್' ಗಾಚೊ ದ ರಿಮೇಕ್ ಎಂದು ಪರಿಗಣಿಸಲಾಗಿತ್ತು. ಈ ಕಿರು-ವ್ಯಂಗ್ಯಚಲನಚಿತ್ರದಲ್ಲಿ ಮಿಕ್ಕಿ ಪುನಃ ಏಕಾಂಗಿ ಪ್ರಯಾಣಿಕನಾಗಿ, ಸ್ಥಳೀಯ ಪ್ರವಾಸಿಗೃಹವನ್ನು ಪ್ರವೇಶಿಸಿ, ಅಲ್ಲಿನ ನರ್ತಕಿಯೊಬ್ಬಳೊಂದಿಗೆ ಚೆಲ್ಲಾಟವಾಡುತ್ತಾನೆ. ಈ ನರ್ತಕಿ ಪುನಃ ಮಿನ್ನೀ. ಮತ್ತೊಮ್ಮೆ ಪೀಟ್ ಕನ್ಯಾರ್ಥಿಯಾಗಿ ಮಿಕ್ಕಿಯೊಂದಿಗೆ ಪೈಪೋಟಿ ನಡೆಸುತ್ತಾನೆ. ಆದರೆ ಈ ಬಾರಿ ಪೀಟ್‌ನ ಹೆಸರು ಪೆಗ್-ಲೆಗ್ ಪೆಡ್ರೊ . ಮಿಕ್ಕಿಯ ಕಿರು-ವ್ಯಂಗ್ಯಚಲನಚಿತ್ರಗಳಲ್ಲಿ ಮೊದಲ ಬಾರಿಗೆ ಪೀಟ್ ಕೃತಕಕಾಲು ಹೊಂದಿರುವಂತೆ ನಿರೂಪಿತನಾಗಿರುತ್ತಾನೆ. ಈ ಲಕ್ಷಣವು ಮುಂದೆ ಪೀಟ್ ಪಾತ್ರದಲ್ಲಿ ಪುನರಾವರ್ತಿಸುವ ದೃಶ್ಯವಾಗುತ್ತದೆ. ಮೂಲ ಚಿತ್ರದ ರಿಯಾ ಹಕ್ಕಿಯ ಬದಲಿಗೆ ಈ ಚಿತ್ರದಲ್ಲಿ ಹಾರೇಸ್ ಹಾರ್ಸ್‌ಕಾಲರ್‌ನ್ನು ಪ್ರದರ್ಶಿಸಲಾಯಿತು. ಇದು ಹಾರೇಸ್‌ನ ಅಂತಿಮ ಮನುಷ್ಯಾರೂಪವವಲ್ಲದ ಪಾತ್ರವಾಗಿತ್ತು. ಉಬ್ ಐವರ್ಕ್ಸ್ ಆನಿಮೇಟ್ ಮಾಡಿದ ಕೊನೆಯ ಮಿಕ್ಕಿ ಚಿತ್ರ ಎಂದು ಈ ಚಿತ್ರವು ಗಮನಾರ್ಹವಾಗಿದೆ.
ಈ ಚಿತ್ರ ಬಿಡುಗಡೆಗೊಳ್ಳುವ ಮುನ್ನ ಐವರ್ಕ್ಸ್ ವಾಲ್ಟ್ ಡಿಸ್ನಿ ಸಂಸ್ಥೆಯನ್ನು ತೊರೆದು, ಡಿಸ್ನಿಯ ಅಂದಿನ ವಿತರಕ ಪ್ಯಾಟ್ ಪಾವರ್ಸ್‌ರ ಹಣಸಹಾಯದಿಂದ ತಮ್ಮದೇ ಆದ ಸ್ಟುಡಿಯೊ ಆರಂಭಿಸಿದರು. ವಿತರಣೆಯ ಒಪ್ಪಂದದಂತೆ, ಡಿಸ್ನಿ ಸಂಸ್ಥೆಗೆ ಸಲ್ಲಬೇಕಾದ ಹಣದ ಕುರಿತು ಪ್ಯಾಟ್ ಪಾವರ್ಸ್ ಹಾಗೂ ವಾಲ್ಟ್ ಡಿಸ್ನಿ ನಡುವೆ ಜಟಾಪಟಿಯಾಗಿತ್ತು. ಬಹಳ ಕಾಲದಿಂದ ತಮ್ಮದೇ ಸ್ಟುಡಿಯೊ ಸ್ಥಾಪಿಸುವ ಹಂಬಲ ಹೊತ್ತಿದ್ದ ಉಬ್ ಐವರ್ಕ್ಸ್‌ರೊಂದಿಗೆ,ಡಿಸ್ನಿ ಸಂಸ್ಥೆಯ ವ್ಯಂಗ್ಯಚಲನಚಿತ್ರಗಳನ್ನು ವಿತರಿಸುವುದಾಗಿ ಮಾಡಿಕೊಂಡ ಒಪ್ಪಂದದ ಹಕ್ಕನ್ನು ಪ್ಯಾಟ್ ಪಾವರ್ಸ್ ಕಳೆದುಕೊಂಡಿದ್ದಕ್ಕೆ ಇದು ಪ್ರತಿಕ್ರಿಯೆಯಾಗಿತ್ತು. ಉಬ್ ಐವರ್ಕ್ಸ್‌ರ ನಿರ್ಗಮನವು ವಾಲ್ಟ್ ಡಿಸ್ನಿ ಮತ್ತು ಮಿಕ್ಕಿ ಮೌಸ್‌ರ ವೃತ್ತಿಗಳಲ್ಲಿ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ಇಸವಿ 1919ರಿಂದಲೂ ತನ್ನ ಅತಿ-ನಿಕಟ ಸಹೋದ್ಯೋಗಿಯಾಗಿದ್ದ ಉಬ್ ಐವರ್ಕ್ಸ್‌ನ್ನು ವಾಲ್ಟ್ ಡಿಸ್ನಿ ಕಳೆದುಕೊಂಡಂತಾಯಿತು. ಮಿಕ್ಕಿ ತನ್ನ ಮೂಲ ವಿನ್ಯಾಸಕಕ್ಕೆ ಜವಾಬ್ದಾರನಾದ ಹಾಗೂ ಇದುವರೆಗೂ ಬಿಡುಗಡೆಯಾದ ಹಲವು ಕಿರು-ವ್ಯಂಗ್ಯಚಿತ್ರಗಳಲ್ಲಿ ತನ್ನನ್ನು ಆನಿಮೇಟ್ ಮಾಡಿದ/ನಿರ್ದೇಶಿಸಿದ ವ್ಯಕ್ತಿಯನ್ನು ಕಳೆದುಕೊಂಡ. ಕೆಲವರು ಮಿಕ್ಕಿಯ ಸೃಷ್ಟಿಕರ್ತ ಎಂದು ಅವರ ಬಗ್ಗೆ ವಾದಿಸುತ್ತಿದ್ದರು. ವಾಲ್ಟ್ ಡಿಸ್ನಿ ಮಿಕ್ಕಿಯನ್ನು ಸೃಷ್ಟಿಸಲು ಮೂಲ ಸ್ಫೂರ್ತಿ ಎಂಬ ಮನ್ನಣೆ ಪಡೆದರೆ, ಮೊದಲ ಬಾರಿ ಪಾತ್ರವನ್ನು ವಿನ್ಯಾಸಗೊಳಿಸಿದವರು ಐವರ್ಕ್ಸ್. ಮೊದಲ ಕೆಲವು ಮಿಕ್ಕಿ ಮೌಸ್ ವ್ಯಂಗ್ಯಚಿತ್ರಗಳನ್ನು ಇಡಿಯಾಗಿ ಉಬ್ ಐವರ್ಕ್ಸ್ ರಚಿಸಿದ್ದರು. ಈ ಆಧಾರದ ಮೇಲೆ, ಉಬ್ ಐವರ್ಕ್ಸ್ ಮಿಕ್ಕಿ ಮೌಸ್‌ನ ನೈಜ ಸೃಷ್ಟಿಕರ್ತ ಎಂದು ಕೆಲವು ಆನಿಮೇಷನ್ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಆರಂಭ ಕಾಲದಲ್ಲಿ ಮಿಕ್ಕಿ ಮೌಸ್ ವ್ಯಂಗ್ಯಚಿತ್ರಗಳ ಜಾಹೀರಾತುಗಳಲ್ಲಿ 'ಇದೊಂದು ವಾಲ್ಟ್ ಡಿಸ್ನಿ ಕಾಮಿಕ್, ಚಿತ್ರಕಲಾವಿದರು ಉಬ್ ಐವರ್ಕ್ಸ್' ಎಂದು ಮನ್ನಣೆ ನೀಡಲಾಗಿತ್ತು. ಆನಂತರ, ಡಿಸ್ನಿ ಸಂಸ್ಥೆಯು ಈ ಆರಂಭಿಕ ವ್ಯಂಗ್ಯಚಿತ್ರಗಳನ್ನು ಪುನಃ ಪ್ರಕಟಿಸಿದಾಗ ಕೇವಲ ವಾಲ್ಟ್ ಡಿಸ್ನಿಯವರಿಗೆ ಮಾತ್ರ ಇಡಿಯಾಗಿ ಮನ್ನಣೆ ನೀಡಲಾಯಿತು.
ವಾಲ್ಟ್ ಡಿಸ್ನಿ ಹಾಗೂ ತಮ್ಮ ಉಳಿದ ಸಿಬ್ಬಂದಿ ಮಿಕ್ಕಿ ಮೌಸ್ ಸರಣಿಯ ನಿರ್ಮಾಣ ಮುಂದುವರೆಸಿದರು. ಉಬ್ ಐವರ್ಕ್ಸ್‌ರ ಸ್ಥಾನದಲ್ಲಿ ಹಲವು ಆನಿಮೇಟರ್‌ಗಳನ್ನು ನೇಮಿಸಿಕೊಳ್ಳಲು ವಾಲ್ಟ್ ಡಿಸ್ನಿ ಶಕ್ಯರಾದರು. ಮಹಾ ಹಿಂಜರಿತ ಮುಂದುವರಿಯುತ್ತಿದ್ದಂತೆ'ಫೆಲಿಕ್ಸ್ ದಿ ಕ್ಯಾಟ್' ಚಿತ್ರಪರದೆಯಿಂದ ಮಾಸಿಹೋದ ನಂತರ, ಮಿಕ್ಕಿ ಮೌಸ್‌ನ ಜನಪ್ರಿಯತೆ ಹೆಚ್ಚಾಯಿತು. ಇಸವಿ 1932ರೊಳಗೆ, ಮಿಕ್ಕಿ ಮೌಸ್ ಕ್ಲಬ್ ಸುಮಾರು ಒಂದು ದಶಲಕ್ಷ ಸದಸ್ಯರನ್ನು ಹೊಂದಿತ್ತು.[೧೪] ಮಿಕ್ಕಿ ಮೌಸ್‌ನ್ನು ಸೃಷ್ಟಿಸಿದ್ದಕ್ಕಾಗಿ ವಾಲ್ಟ್ ಡಿಸ್ನಿಯವರಿಗೆ ಆಸ್ಕರ್ ಪ್ರಶಸ್ತಿ ಸಂದಿತು. 1935ರಲ್ಲಿ ನಿರ್ವಹಣಾ ಸಮಸ್ಯೆಗಳುಂಟಾದ ಕಾರಣ ಡಿಸ್ನಿ ಸಂಸ್ಥೆಯು ಮಿಕ್ಕಿ ಮೌಸ್ ಕ್ಲಬ್‌ಗಳನ್ನು ರದ್ದುಗೊಳಿಸಬೇಕಾಯಿತು.[೧೫]
ಇಸವಿ 1933ರಲ್ಲಿ ಬಿಡುಗಡೆಯಾದ ಸಿಲ್ಲಿ ಸಿಂಫೋನೀಸ್ ಕಿರು-ವ್ಯಂಗ್ಯಚಲನಚಿತ್ರ ದಿ ತ್ರೀ ಲಿಟ್ಲ್ ಪಿಗ್ಸ್ ಮಿಕ್ಕಿ ಚಿತ್ರಗಳನ್ನೂ ಮೀರಿಸಿ ಜನಪ್ರಿಯತೆ ಗಳಿಸಿದರೂ, ಮಿಕ್ಕಿ ಚಿತ್ರಮಂದಿರದ ಪ್ರೇಕ್ಷಕರೊಂದಿಗೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡನು. ಇಸವಿ 1935ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಪಾಪ್‌ಐಯ್ ದಿ ಸೇಯ್ಲರ್ ಪಾತ್ರವು ಮಿಕ್ಕಿಗಿಂತಲೂ ಹೆಚ್ಚು ಜನಪ್ರಿಯವಾಗಿತ್ತು.[೧೬] ಇಸವಿ 1934ರಲ್ಲಿ ಮಿಕ್ಕಿ ಛಾಪು ಹೊತ್ತಿದ ಸರಕುಗಳ ಮಾರಾಟವು ವರ್ಷಕ್ಕೆ $600,000.00 ಗಳಿಸಿತ್ತು.[೧೭]
ಇಸವಿ 1994ರಲ್ಲಿ ನಡೆಸಲಾದ ಆನಿಮೇಷನ್ ವೃತ್ತಿಪರರ ಸಮೀಕ್ಷೆಯಲ್ಲಿ, 'ದಿ ಬ್ಯಾಂಡ್ ಕಾನ್ಸರ್ಟ್ ' ಮೂರನೆಯ ಅತಿ ಮಹಾನ್ ಸರ್ವಕಾಲಿಕ ವ್ಯಂಗ್ಯಚಿತ್ರವೆಂದು ಅಯ್ಕೆಯಾಯಿತು. ವಾಲ್ಟ್ ಡಿಸ್ನಿಯವರು ಮಿಕ್ಕಿ ಮೌಸ್‌ಗೆ ಬಣ್ಣ-ಲೇಪನ ಹಾಗೂ ಸ್ವಲ್ಪಮಟ್ಟಿಗೆ ಪುನರ್ವಿನ್ಯಾಸಗೊಳಿಸುವ ಮೂಲಕ ಅವನನ್ನು ಪುನಃ ಅಗ್ರಸ್ಥಾನಕ್ಕೆ ಒಯ್ದಿದ್ದರು. ಹಿಂದೆಂದೂ ಲಭಿಸಿಲ್ಲದ ಅಪಾರ ಜನಪ್ರಿಯತೆಯು ಪ್ರೇಕ್ಷಕರಿಂದ ಮಿಕ್ಕಿಗೆ ಸಂದಿತು.[೧೪] ಇಸವಿ 1935ರಲ್ಲಿ, ಮಿಕ್ಕಿ ಮೌಸ್‌ನ್ನು ಸೃಷ್ಟಿಸಿ ಸಾಧನೆ ಮಾಡಿದ ವಾಲ್ಟ್ ಡಿಸ್ನಿಯವರಿಗೆ 'ಲೀಗ್ ಆಫ್ ನೇಷನ್ಸ್' ಇಂದ ವಿಶೇಷ ಪ್ರಶಸ್ತಿ ಲಭಿಸಿತು. ಆದರೆ,ಹೆಚ್ಚು ಉನ್ಮಾದಗ್ರಸ್ತ (0}ಡೊನಾಲ್ಡ್ ಡಕ್, ಇಸವಿ 1938ರೊಳಗೆ ನೀರಸ ಮಿಕ್ಕಿಮೌಸ್ ಪಾತ್ರವನ್ನು ಹಿಂದಿಕ್ಕಿದಾಗ, ಮಿಕ್ಕಿ ಮೌಸ್‌ನ ಮರುವಿನ್ಯಾಸದಲ್ಲಿ ಫಲ ಕಂಡಿತು.[೧೮] ಇಸವಿ 1938ರಿಂದ 1940ರ ವರೆಗೆ ಮಿಕ್ಕಿ ಮರುವಿನ್ಯಾಸದ ಫಲವಾಗಿ, ಮಿಕ್ಕಿ ಜನಪ್ರಿಯತೆಯ ಶೃಂಗದಲ್ಲಿ ಉಳಿಯಿತು.[೧೪] ಆದರೂ, 1940ರ ನಂತರ, ಮಿಕ್ಕಿಯ ಜನಪ್ರಿಯತೆ ಕಡಿಮೆಯಾಗತೊಡಗಿತು.[೧೯] ಇಷ್ಟೆಲ್ಲಾ ಆದರೂ ಮಿಕ್ಕಿ ಮೌಸ್ ಪಾತ್ರವು 1943ರ ತನಕ ಆನಿಮೇಟೆಡ್ ವ್ಯಂಗ್ಯಚಿತ್ರಗಳಲ್ಲಿ ನಿಯಮಿತವಾಗಿಕಾಣಿಸಿಕೊಳ್ಳುತ್ತಿತ್ತು. ಲೆಂಡ್ ಎ ಪಾವ್ ಗಾಗಿ ಮಿಕ್ಕಿ ಪ್ಲೂಟೊ- ಜತೆಗೆ ಏಕೈಕ ಸ್ಪರ್ಧಾತ್ಮಕ ಅಕಾಡೆಮಿ ಪ್ರಶಸ್ತಿ ಗಳಿಸಿಕೊಂಡನು ಹಾಗೂ ನಂತರ ಪುನಃ 1946ರಿಂದ 1952ರ ತನಕ ಗಳಿಸಿಕೊಂಡ.
ಕಾಮಿಕ್‌ಗಳಲ್ಲಿ ಮಿಕ್ಕಿ
[ಬದಲಾಯಿಸಿ]ಉಬ್ ಐವರ್ಕ್ಸ್ ನಿರ್ಗಮಿಸಿದ ನಂತರ 1930ರ ಆರಂಭದಲ್ಲಿ, ವಾಲ್ಟ್ ಡಿಸ್ನಿ ಮೊದಲಿಗೆ ಮಿಕ್ಕಿ ಮೌಸ್ ಕಾಮಿಕ್ ಚಿತ್ರಸರಣಿಗಾಗಿ ಕಥಾರಚನೆಯಲ್ಲಿ ಮಗ್ನರಾಗಿ, ಕಲೆಯ ಜವಾಬ್ದಾರಿಯನ್ನು ವಿನ್ ಸ್ಮಿತ್‌ರಿಗೆ ವಹಿಸುತ್ತಿದ್ದರು. ಆದರೂ, ವಾಲ್ಟ್ ಡಿಸ್ನಿಯವರ ಗಮನವು ಎಂದಿಗೂ ಆನಿಮೇಷನ್ ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿದ್ದರಿಂದ, ವಿನ್ ಸ್ಮಿತ್ ಕಥಾ ರಚನೆಯಲ್ಲೂ ಪಾಲ್ಗೊಂಡರು. ಇಡೀ ಸರಣಿಯೊಂದಕ್ಕೆ ಸ್ವತಃ ಚಿತ್ರಕಥೆ ರಚಿಸಿ, ಚಿತ್ರರಚಿಸಿ, ಬಣ್ಣಲೇಪನಾ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿನ್ ಸ್ಮಿತ್ ಹಠಾತ್ತನೆ ರಾಜೀನಾಮೆ ನೀಡಿದರು.
ವಾಲ್ಟ್ ಡಿಸ್ನಿ ವಿನ್ ಸ್ಮಿತ್‌ರ ಸ್ಥಳವನ್ನು ತುಂಬಿಸಲು ಅವರೊಂದಿಗೆ ಉಳಿದಿದ್ದ ಸಿಬ್ಬಂದಿಯಲ್ಲೇ ಆಯ್ಕೆ ಮಾಡಲು ಮುಂದಾದರು. ಅಜ್ಞಾತ ಕಾರಣಗಳಿಗಾಗಿ, ಹೊಸದಾಗಿ ನೇಮಕಗೊಂಡ ಫ್ಲಾಯ್ಡ್ ಗಾಟ್‌ಫ್ರೆಡ್ಸನ್‌ರನ್ನು ವಾಲ್ಟ್ ಡಿಸ್ನಿ ನೇಮಿಸಿಕೊಂಡರು. ಆ ಸಮಯದಲ್ಲಿ ಫ್ಲಾಯ್ಡ್ ಆನಿಮೇಷನ್‌ನಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದು, ಈ ಹೊಸ ಹುದ್ದೆ ಸ್ವೀಕರಿಸುವಲ್ಲಿ ಹಿಂಜರಿದರು. ಈ ಜವಾಬ್ದಾರಿಯು ಕೇವಲ ತಾತ್ಕಾಲಿಕವಾಗಿದ್ದು, ಅನಂತರ ಆನಿಮೇಷನ್‌ಗೆ ವಾಪಸಾಗಲು ಅನುಮತಿಯಿದೆ ಎಂದು ವಾಲ್ಟ್ ಡಿಸ್ನಿ ಫ್ಲಾಯ್ಡ್‌ಗೆ ಭರವಸೆ ನೀಡಬೇಕಾಯಿತು. ಫ್ಲಾಯ್ಡ್ ಇದಕ್ಕೆ ಒಪ್ಪಿಕೊಂಡರು; ಆದರೆ, ಅವರ ಈ 'ತಾತ್ಕಾಲಿಕ' ಹುದ್ದೆಯನ್ನು 5 ಮೇ 1930ರಿಂದ 15 ನವೆಂಬರ್ 1975ರ ತನಕ ಇಟ್ಟುಕೊಂಡರು.
ವಾಲ್ಟ್ ಡಿಸ್ನಿ ರಚಿಸಿದ ಅಂತಿಮ ಕಥೆಯನ್ನು ಅಧರಿಸಿದ ಈ ಕಾಮಿಕ್ ಸರಣಿ 17 ಮೇ 1930ರಂದು ಪ್ರಕಟವಾಯಿತು.[೧೩] ದಿನಾಂಕ 1 ಏಪ್ರಿಲ್ 1930ರಂದು ವಾಲ್ಟ್ ಡಿಸ್ನಿ ಆರಂಭಿಸಿದ ಕಥೆಯನ್ನು ಸಂಪೂರ್ಣಗೊಳಿಸುವುದು ಫ್ಲಾಯ್ಡ್ ಗಾಟ್‌ಫ್ರೆಡ್ಸನ್‌ರ ಮೊದಲ ಕಾರ್ಯವಾಗಿತ್ತು. ಈ ಕಥಾವಸ್ತು 20 ಸೆಪ್ಟೆಂಬರ್ 1930ರಂದು ಸಂಪೂರ್ಣಗೊಂಡು, ಆನಂತರ 'ಮಿಕ್ಕಿ ಮೌಸ್ ಇನ್ ಡೆತ್ ವ್ಯಾಲಿ ' ಎಂಬ ಕಾಮಿಕ್ ಬುಕ್ ರೂಪದಲ್ಲಿ ಪುನರ್ಮುದ್ರಣಗೊಂಡಿತು. ಇದುವರೆಗೂ ಕೇವಲ ಮಿಕ್ಕಿ ಹಾಗೂ ಮಿನ್ನಿ ಇವರಿಬ್ಬರನ್ನೇ ಒಳಗೊಂಡಿದ್ದ ಕಾಮಿಕ್ ಸರಣಿಗೆ, ಈ ಆರಂಭಿಕ ಸಾಹಸಕಥೆಯು ಪಾತ್ರವರ್ಗವನ್ನು ಇನ್ನಷ್ಟು ವಿಸ್ತರಿಸಿತು. ಕಾಮಿಕ್ ಸರಣಿಯಲ್ಲಿ ರಂಗಪ್ರವೇಶ ಮಾಡಿದ ಪಾತ್ರಗಳ ಪೈಕಿ ಕ್ಲಾರಾಬೆಲ್ ಕವ್, ಹಾರೇಸ್ ಹಾರ್ಸ್‌ಕಾಲರ್ ಹಾಗೂ ಬ್ಲ್ಯಾಕ್ ಪೀಟ್. ಇವುಗಳ ಜೊತೆಗೆ ಭ್ರಷ್ಟ ವಕೀಲ ಸಿಲ್ವೆಸ್ಟರ್ ಷೈಸ್ಟರ್ ಹಾಗೂ ಮಿನ್ನೀಯ ಸಹೋದರಮಾವ ಮಾರ್ಟಿಮರ್ ಮೌಸ್ ಇದ್ದವು. ದಿ ಡೆತ್ ವ್ಯಾಲಿ ಕಥೆಯ ನಂತರ, ಮಿಸ್ಟರ್ ಸ್ಲಿಕರ್ ಅಂಡ್ ದಿ ಎಗ್ ರಾಬರ್ಸ್ ಪ್ರಕಟಿತವಾಯಿತು. ಇದನ್ನು ಮೊದಲ ಬಾರಿಗೆ 22 ಸೆಪ್ಟೆಂಬರ್ 1930ರಿಂದ 26 ಡಿಸೆಂಬರ್ 1930ರ ತನಕ ಮುದ್ರಿಸಲಾಯಿತು. ಇದರಲ್ಲಿ ಮಾರ್ಕಸ್ ಮೌಸ್ ಮತ್ತು ಅವನ ಪತ್ನಿಯನ್ನು ಮಿನ್ನೀಯ ತಾಯಿ-ತಂದೆಯಾಗಿ ಪರಿಚಯಿಸಲಾಯಿತು.
ಇವೆರಡೂ ಆರಂಭಿಕ ಕಾಮಿಕ್ ಸರಣಿಯ ಕಥೆಗಳೊಂದಿಗೆ ಆರಂಭಗೊಂಡು, ಆನಿಮೇಷನ್ ಮತ್ತು ಕಾಮಿಕ್ ಸರಣಿಯ ಆವೃತ್ತಿಗಳು ಪರಸ್ಪರ ದಿಕ್ಚ್ಯುತಿ ಹೊಂದಿದವೆಂದು ಪರಿಗಣಿಸಲಾಗಿದೆ. ಒಂದೆಡೆ ವಾಲ್ಟ್ ಡಿಸ್ನಿ ಹಾಗೂ ಅವರ ಕಿರು-ವ್ಯಂಗ್ಯಚಲನಚಿತ್ರಗಳು ಹಾಸ್ಯದ ಮೇಲೆ ಕೇಂದ್ರೀಕೃತವಾಗಿದ್ದರೆ, ಇನ್ನೊಂದೆಡೆ ಕಾಮಿಕ್ ಸರಣಿಗಳಲ್ಲಿ ಹಾಸ್ಯದೊಂದಿಗೆ ಸಾಹಸವನ್ನು ಸೇರಿಸಲಾಗುತ್ತಿತ್ತು. ಮಿಕ್ಕಿಯ ಈ ಸಾಹಸ-ಪ್ರಧಾನ ಆವೃತ್ತಿಯು ಕಾಮಿಕ್ ಸರಣಿಗಳಲ್ಲಿ ಪ್ರಕಟವಾಗುತ್ತಲಿದ್ದು, ಆನಂತರ 20ನೆಯ ಶತಮಾನದುದ್ದಕ್ಕೂ ಹಾಗೂ 21ನೆಯ ಶತಮಾನದ ಆರಂಭದಲ್ಲಿ, ಕಾಮಿಕ್ ಪುಸ್ತಕಗಳ ರೂಪದಲ್ಲಿ ಇಂದಿಗೂ ಪ್ರಕಟವಾಗುತ್ತಿವೆ.
ಮಿಕ್ಕಿ ಮೌಸ್ ಜಾಯಿನ್ಸ್ ದಿ ಫಾರೀನ್ ಲೀಜಿಯನ್ (1936) ಹಾಗೂ ದಿ ಗ್ಲೀಮ್ (1942) ಇಂತಹ ಕಥೆಗಳನ್ನು ರಚಿಸಿದ ಫ್ಲಾಯ್ಡ್ ಗಾಟ್‌ಫ್ರೆಡ್ಸನ್ ತಮ್ಮದೇ ಆದ ಛಾಪು ಮೂಡಿಸಿದರು.
ಜೊತೆಗೆ, ಅವರು ಫ್ಯಾಂಟಮ್ ಬ್ಲಾಟ್, ಈಗಾ ಬೀವಾ, ಮಾರ್ಟಿ ಅಂಡ್ ಫರ್ಡಿ, ಕ್ಯಾಪ್ಟನ್ ಚರ್ಚ್‌ಮೌಸ್ ಹಾಗೂ ಬುಚ್ ಕಥೆಗಳನ್ನು ರಚಿಸಿದರು. ಫ್ಲಾಯ್ಡ್ ಗಾಟ್‌ಫ್ರೆಡ್ಸನ್‌ರ ಜೊತೆಗೆ, ರೋಮನ್ ಅರಾಂಬುಲಾ, ರಿಕ್ ಹೂವರ್, ಮ್ಯಾನುಯೆಲ್ ಗಾಂಜೇಲೆಸ್, ಕಾರ್ಸನ್ ವಾನ್ ಆಸ್ಟೆನ್, ಜಿಮ್ ಎಂಜೆಲ್, ಬಿಲ್ ರೈಟ್, ಟೆಡ್ ಥ್ವೇಯ್ಲ್ಸ್ ಹಾಗೂ ಡಾನ್ ಜಿಪ್ಸ್ ಸೇರಿದಂತೆ, ಕಾಲಾನಂತರದಲ್ಲಿ ಕಾಮಿಕ್ ಸರಣಿಗಾಗಿ ಹಲವರು ಕಲಾ-ಕೊಡುಗೆ ನೀಡಿದರು. ಕಥೆಗಾರರಲ್ಲಿ ಟೆಡ್ ಆಸ್ಬಾರ್ನ್, ಮೆರಿಲ್ ಡಿ ಮ್ಯಾರಿಸ್, ಬಿಲ್ ವಾಲ್ಷ್, ಡಿಕ್ ಷಾ, ರಾಯ್ ವಿಲಿಯಮ್ಸ್, ಡೆಲ್ ಕಾನೆಲ್ ಮತ್ತು ಫ್ಲಾಯ್ಡ್ ನಾರ್ಮನ್ ಸೇರಿದ್ದರು.
ಡೆಲ್ ಕಾಮಿಕ್ಸ್‌ನ ಪಾಲ್ ಮರ್ರಿ ಈ ಪಾತ್ರದ ಮೇಲೆ ಛಾಪು ಮೂಡಿಸಿದ ಇನ್ನೊಬ್ಬ ಕಲಾವಿದರಾಗಿದ್ದರು. ಅವರ ಮೊದಲ ಮಿಕ್ಕಿ ಕಥೆಯು 1950ರಲ್ಲಿ ಪ್ರಕಟಿತವಾಯಿತು. ಆದರೆ, 1953ರಲ್ಲಿ ವಾಲ್ಟ್ ಡಿಸ್ನೀಸ್ ಕಾಮಿಕ್ಸ್ ಅಂಡ್ ಸ್ಟೋರೀಸ್ ಗಾಗಿ ಪಾಲ್ ಮರ್ರಿಯವರ ಮೊದಲ ಸರಣಿ ದಿ ಲಾಸ್ಟ್ ರಿಸಾರ್ಟ್ ಬಿಡುಗಡೆಯಾದ ತನಕ ಮಿಕ್ಕಿ ಯಾವುದೇ ವಿಶೇಷ ಪಾತ್ರವಾಗಲಿಲ್ಲ. ಇದೇ ಸಮಯದಲ್ಲಿ ಇಟಲಿಯಲ್ಲಿ ರೊಮನೊ ಸ್ಕ್ಯಾರ್ಪಾ, ಫ್ಯಾಂಟಮ್ ಬ್ಲಾಟ್ ಹಾಗೂ ಈಗಾ ಬೀವಾ ಹಾಗೂ ಹೊಸ ರಚನೆಗಳೊಂದಿಗೆ, ಆಟೊಮೊ ಬ್ಲೀಪ್-ಬ್ಲೀಪ್‌ನಂತಹ ಹೊಸ ಸೃಷ್ಟಿಗಳೊಂದಿಗೆ ಮಿಕ್ಕಿಗೆ ಪುನಶ್ಚೇತನ ನೀಡಲಾರಂಭಿಸಿದರು. ರಜತ ಯುಗದಲ್ಲಿ ವೆಸ್ಟರ್ನ್ ಪಬ್ಲಿಷಿಂಗ್‌ನಲ್ಲಿ ಪ್ರಕಟವಾದ ಕಥೆಗಳಲ್ಲಿ ಮಿಕ್ಕಿಯನ್ನು ಷರ್ಲಾಕ್ ಹೋಮ್ಸ್ ಶೈಲಿಯಲ್ಲಿ ಒಬ್ಬ ಪತ್ತೆದಾರಿಯಾಗಿ ನಿರೂಪಿಸಿದರೆ, ಆಧುನಿಕ ಯುಗದಲ್ಲಿ ಹಲವು ಸಂಪಾದಕರು ಮತ್ತು ರಚನಾಕಾರರು ಫ್ಲಾಯ್ಡ್ ಗಾಟ್‌ಫ್ರೆಡ್ಸನ್ ರಚಿಸಿದ ಸಾಹಸ ಕಥೆಗಳಲ್ಲಿ ನಿರೂಪಿಸಿದಂತೆ ಇನ್ನಷ್ಟು ಚುರುಕಾಗಿ ಮಿಕ್ಕಿಯನ್ನು ಬಿಂಬಿಸಲು ಯತ್ನಿಸಿದ್ದಾರೆ. ಬೈರೊನ್ ಎರಿಕ್ಸನ್, ಡೇವಿಡ್ ಗರ್ಸ್ಟೀನ್, ನೊಯೆಲ್ ವಾನ್ ಹಾರ್ನ್, ಮೈಕಲ್ ಟಿ. ಜಿಲ್ಬರ್ಟ್ ಹಾಗೂ ಸೀಸರ್ ಫರಿಯೊಲಿ ಈ ಪುನಶ್ಚೇತನದ ಮುಂಚೂಣಿಯಲ್ಲಿದ್ದರು.
ಯುರೋಪ್‌ನಲ್ಲಿ, ಮಿಕ್ಕಿ ಮೌಸ್ ಹಲವಾರು ಕಾಮಿಕ್ ಪತ್ರಿಕೆಗಳ ಪ್ರಧಾನ ಆಕರ್ಷಣೆಯಾಗಿದ್ದ. ಇವುಗಳಲ್ಲಿ 1932ರಿಂದ ಇಟಲಿಯಲ್ಲಿ ಟೊಪೊಲಿನೊ ಹಾಗೂ 1934ರಿಂದ ಫ್ರಾನ್ಸ್‌ನಲ್ಲಿ ಲೇ ಜರ್ನಲ್ ಡಿ ಮಿಕ್ಕಿ ಪ್ರಮುಖವಾದದ್ದು.
ಇಸವಿ 1999ರಿಂದ 2001ರ ತನಕ ಇಟಲಿಯಲ್ಲಿ ಪ್ರಕಟಗೊಂಡ MM ಮಿಕ್ಕಿ ಮೌಸ್ ಮಿಸ್ಟರಿ ಮ್ಯಾಗಜೀನ್‌ನಲ್ಲಿ ಮಿಕ್ಕಿ ಪ್ರಧಾನ ಪಾತ್ರವಾಗಿದ್ದನು.
ಆನಂತರದ ಇತಿಹಾಸ
[ಬದಲಾಯಿಸಿ]ಇತ್ತೀಚಿನ ಇತಿಹಾಸ
[ಬದಲಾಯಿಸಿ]ದಿನಾಂಕ 18 ನವೆಂಬರ್ 1978ರಂದು, ಅವನ 50ನೆಯ ಹುಟ್ಟುಹಬ್ಬದ ಗೌರವಾರ್ಥ ಮಿಕ್ಕಿ ಮೌಸ್ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಒಂದು ನಕ್ಷತ್ರ ಗೌರವ ಗಳಿಸುವ ಮೊಟ್ಟಮೊದಲ ವ್ಯಂಗ್ಯಚಿತ್ರ ಪಾತ್ರವಾದನು. ಈ ನಕ್ಷತ್ರವು 6925, ಹಾಲಿವುಡ್ ಬೂಲವಾರ್ಡ್‌ನಲ್ಲಿದೆ.
ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ವಾರ್ಷಿಕ ಮೂಂಬಾ ಉತ್ಸವ ಬೀದಿ ಮೆರವಣಿಗೆ ನಡೆಯುತ್ತದೆ. ಇದರಲ್ಲಿ ಮಿಕ್ಕಿ ಮೌಸ್‌ನ್ನು ಕಿಂಗ್ ಆಫ್ ಮೂಂಬಾ ಎಂದು ನೇಮಿಸಲಾಗಿದೆ (1977).[೨೦] ಮಕ್ಕಳೊಂದಿಗೆ ಅಪಾರ ಜನಪ್ರಿಯತೆ ಗಳಿಸಿದರೂ ಸಹ, ಈ ನೇಮಕಾತಿಯು ವಿವಾದದಲ್ಲಿ ಸಿಲುಕಿತು. ಸ್ಥಳೀಯ ಪಾತ್ರವೊಂದನ್ನು ಉದಾಹರಣೆಗೆ ಬ್ಲಿಂಕಿ ಬಿಲ್‌ನ್ನು ನೇಮಿಸಬೇಕು ಎಂದು ಕೆಲವು ಮೆಲ್ಬೊರ್ನ್‌ವಾಸಿಗಳು ಆಗ್ರಹಿಸಿದರು. ಪ್ಯಾಟ್ರಿಷಿಯ ಒ'ಕ್ಯಾರೊಲ್ (ಡಿಸ್ನಿಲೆಂಡ್‌ನ 'ಡಿಸ್ನಿ ಆನ್ ಪೆರೇಡ್ ಷೋ') ಮಿಕ್ಕಿ ಪಾತ್ರ ನಿರ್ವಹಿಸುವುದು ಬಹಿರಂಗಗೊಂಡಾಗ, ಆಸ್ಟ್ರೇಲಿಯಾದ ಪತ್ರಿಕೆಗಳು 'Mickey Mouse is really a girl!' (ಮಿಕ್ಕಿ ಮೌಸ್ ನಿಜಕ್ಕೂ ಒಬ್ಬ ಹುಡುಗಿ!) ಎಂದು ವರದಿ ಮಾಡಿದವು.[೨೧]
ದಶಕಗಳ ಕಾಲ, ಅತಿ ಜನಪ್ರಿಯ ಆನಿಮೇಟೆಡ್ ಪಾತ್ರ ಸ್ಥಾನಕ್ಕಾಗಿ ಮಿಕ್ಕಿ ಮೌಸ್ ವಾರ್ನರ್ ಬ್ರದರ್ಸ್‌ರ ಬಗ್ಸ್ ಬನ್ನಿಯೊಂದಿಗೆ ಪೈಪೋಟಿ ನಡೆಸಿತ್ತು. ಆದರೆ, 1988ರಲ್ಲಿ, ಚಲನಚಿತ್ರದ ಇತಿಹಾಸದಲ್ಲಿ ಐತಿಹಾಸಿಕ ಘಟನೆಯೊಂದು ನಡೆಯಿತು. ರಾಬರ್ಟ್ ಜೆಮೆಕಿಸ್ ನಿರ್ದೇಶಿಸಿದ, ಡಿಸ್ನಿ/ಆಂಬ್ಲಿನ್ ಜಂಟಿ ನಿರ್ಮಾಣದ ಚಲನಚಿತ್ರ 'ಹೂ ಫ್ರೇಮ್ಡ್ ರೊಜರ್ ರ‌್ಯಾಬಿಟ್ 'ನಲ್ಲಿ ಮಿಕ್ಕಿ ಮೌಸ್ ಮತ್ತು ಬಗ್ಸ್ ಬನ್ನಿ ಪಾತ್ರಗಳು ಪರದೆಯ ಮೇಲೆ ಒಟ್ಟಿಗೆ ಕಾಣಿಸಿದವು. ಡಿಸ್ನಿ ಮತ್ತು ವಾರ್ನರ್ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿ, ಕೊನೆಯ ಮೈಕ್ರೊಸೆಕೆಂಡ್‌ತನಕ, ಮಿಕ್ಕಿ ಮತ್ತು ಬನ್ನಿ ನಿಖರವಾಗಿ ಅಷ್ಟೇ ಸಮಾನ ಪ್ರಮಾಣದ ಪರದೆಯ ಸಮಯ ಹಂಚಿಕೊಳ್ಳುತ್ತಾರೆ ಎಂದು ನಿರ್ಣಯಿಸಲಾಯಿತು.
ರೋಜರ್ ರ‌್ಯಾಬಿಟ್ ನಂತಹ ಪೂರ್ಣಪ್ರಮಾಣದ ಚಲನಚಿತ್ರದಲ್ಲಿ ಮಿಕ್ಕಿ ಮೌಸ್‌ನಂತಹ ಆನಿಮೇಟೆಡ್ ಸೇರ್ಪಡೆಯಂತೆ, 1990ರಲ್ಲಿ ಪ್ರಸಾರವಾದ ದೂರದರ್ಶನ ವಿಶೇಷ ಕಾರ್ಯಕ್ರಮ 'ದಿ ಮಪ್ಪೆಟ್ಸ್ ಅಟ್ ವಾಲ್ಟ್ ಡಿಸ್ನಿ ವರ್ಲ್ಡ್ 'ನಲ್ಲಿ ಮಿಕ್ಕಿ ಕಾಣಿಸಿಕೊಳ್ಳುತ್ತಾನೆ. ಇದರಲ್ಲಿ ಅವನು 'ಕರ್ಮಿಟ್ ದಿ ಫ್ರಾಗ್' ಪಾತ್ರವನ್ನು ಭೇಟಿಯಾಗುತ್ತಾನೆ. ಕಥೆಯಲ್ಲಿ ಇವರಿಬ್ಬರೂ ಹಳೆಯ ಸ್ನೇಹಿತರೆಂದು ನಿರೂಪಿಸಲಾಗಿದೆ. ಇದನ್ನು ಬಿಟ್ಟರೆ, 1970ರ ದಶಕದಿಂದಲೂ ದಿ ಮಪೆಟ್ಸ್ ಮಿಕ್ಕಿಯನ್ನು ಸುಮಾರು ಡಜನ್‌ಗಿಂತಲೂ ಹೆಚ್ಚು ಬಾರಿ ಅನುಕರಿಸಿ, ಉಲ್ಲೇಖಿಸಿವೆ. ಅಂತಿಮವಾಗಿ, ವಾಲ್ಟ್ ಡಿಸ್ನಿ ಸಂಸ್ಥೆಯು ದಿ ಮಪೆಟ್ಸ್‌ನ್ನು ಇಸವಿ 2004ರಲ್ಲಿ ಖರೀದಿಸಿ ತನ್ನ ಸ್ವಾಮ್ಯಕ್ಕೆ ಸೇರಿಸಿಕೊಂಡಿತು.
ವಾಲ್ಟ್ ಡಿಸ್ನಿ ಹೋಮ್ ಎಂಟರ್ಟೇನ್ಮೆಂಟ್‌ಗಾಗಿ ಮಿಕ್ಕಿ ಹಲವು ಆನಿಮೇಟೆಡ್ ಲಾಂಛನಗಳಲ್ಲಿ ಕಾಣಿಸಿಕೊಂಡನು. ಮೊದಲಿಗೆ ಚಾಲಿತವಾದದ್ದು 'ನಿಯಾನ್ ಮಿಕ್ಕಿ' ಲಾಂಛನ, ಆನಂತರ ಸಾಮಾನ್ಯ ಹಾಗು ಕ್ಲ್ಯಾಸಿಕ್ಸ್ ಬಿಡುಗಡೆ ಶೀರ್ಷಿಕೆಗಳಿಗಾಗಿ 'ಸಾರ್ಸರರ್ ಮಿಕ್ಕಿ' ಲಾಂಛನವನ್ನು ಚಾಲಿತಗೊಳಿಸಲಾಯಿತು. 1980ರ ದಶಕದಲ್ಲಿ ಮಿಕ್ಕಿ ವೀಡಿಯೋ ಬಾಕ್ಸ್‌ಗಳ ಮೇಲೂ ಕಾಣಿಸಿಕೊಂಡನು.
ಇಸವಿ 1995ರಲ್ಲಿ ಬಿಡುಗಡೆಯಾದ ಕಿರು-ವ್ಯಂಗ್ಯಚಲನಚಿತ್ರ ರನವೇ ಬ್ರೇಯ್ನ್ , ಅವನ ಇತ್ತೀಚಿನ ಅಭಿನಯದ ವ್ಯಂಗ್ಯಚಲನಚಿತ್ರವಾಗಿತ್ತು. 1999-2004 ಅವಧಿಯಲ್ಲಿ ವೀಡಿಯೊಗಾಗಿ ತಯಾರಿಸಲಾದ ಮಿಕ್ಕಿ'ಸ್ ಒನ್ಸ್ ಅಪಾನ್ ಎ ಕ್ರಿಸ್ಮಸ್ , Mickey, Donald, Goofy: The Three Musketeers ಹಾಗೂ ಕಂಪ್ಯೂಟರ್ ಮೂಲಕ ಆನಿಮೇಟ್ ಆದ ಮಿಕ್ಕಿ'ಸ್ ಟ್ವೈಸ್ ಅಪಾನ್ ಎ ಕ್ರಿಸ್ಮಸ್ ನಲ್ಲಿ ಅವನು ಗೋಚರಿಸಿದನು. ಯಾವುದೇ ಶಾಸ್ತ್ರೀಯವಲ್ಲದ ಕಥೆಯನ್ನು ಆಧರಿಸಿದ, ಮೂಲ ಡಿಸ್ನಿ ಚಲನಚಿತ್ರದಲ್ಲಿ ಮಿಕ್ಕಿ ಇನ್ನೂ ಕಾಣಬೇಕಿದೆ.
ಮಿಕ್ಕಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹಲವು ದೂರದರ್ಶನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇದರಲ್ಲಿ ಇತ್ತೀಚಿನವು ಮಿಕ್ಕಿ ಮೌಸ್ ವರ್ಕ್ಸ್ (1999—2000), ಡಿಸ್ನಿ'ಸ್ ಹೌಸ್ ಆಫ್ ಮೌಸ್ (2001—2003) ಹಾಗೂ ಮಿಕ್ಕಿ ಮೌಸ್ ಕ್ಲಬ್‌ಹೌಸ್ (2006). ಇವೆಲ್ಲದಕ್ಕೂ ಮುಂಚೆ, ಬಾಂಕರ್ಸ್ ನ ಸಂಚಿಕೆ 'ಯು ಆಟ್ಟಾ ಬಿ ಇನ್ ಟೂನ್ಸ್'ನಲ್ಲಿ ಮಿಕ್ಕಿಯದು ಅದೃಶ್ಯ ಪಾತ್ರವಾಗಿತ್ತು.
ಇಸವಿ 2005ರ ಹೊಸ ವರ್ಷಾರಂಭ ದಿನದಂದು ಮಿಕ್ಕಿ ಗ್ರ್ಯಾಂಡ್ ಮಾರ್ಷಲ್ ಆಫ್ ದಿ ಟೋರ್ನಮೆಂಟ್ ಆಫ್ ರೋಸಸ್ ಪೆರೇಡ್ ಆಗಿದ್ದ.
ಡಿಸ್ನಿ ಆನ್ ಐಸ್ ನಾಟಕ ಡಿಸ್ನಿ ಪ್ರೆಸೆಂಟ್ಸ್ ಪಿಕ್ಸಾರ್ಸ್ 'ದಿ ಇಂಕ್ರೆಡಿಬಲ್ಸ್ ಇನ್ ಎ ಮ್ಯಾಜಿಕ್ ಕಿಂಗ್ಡಮ್/ ಡಿಸ್ನಿಲೆಂಡ್ ಅಡ್ವೆಂಚರ್' ನಲ್ಲಿ, ಮಿಕ್ಕಿ ಮತ್ತು ಮಿನ್ನೀ ಇಬ್ಬರನ್ನು ಸಿಂಡ್ರೊಮ್‌ನ ಪ್ರತಿರೂಪ ಯಂತ್ರಮಾನವ ಅಪಹರಿಸುತ್ತಾನೆ. ವಾಲ್ಟ್ ಡಿಸ್ನಿ ವರ್ಲ್ಡ್/ ಡಿಸ್ನಿಲೆಂಡ್ ಸ್ಥಳದಲ್ಲಿ ತನ್ನದೇ ಆದ ಥೀಮ್ ಪಾರ್ಕ್‌ನ್ನು ರಚಿಸಲು ಹವಣಿಸುತ್ತಾನೆ. 'ಪೈರೇಟ್ಸ್ ಆಫ್ ದಿ ಕೆರಿಬಿಯನ್' ಆಕರ್ಷಣೀಯ ಸ್ಥಳದ ಕಾರಾಗೃಹದಲ್ಲಿ ಮಿಕ್ಕಿ ಮತ್ತು ಮಿನ್ನೀಯನ್ನು ಕೆಲ ಕಾಲ ಬಂಧಿಸಿಡಲಾಗುತ್ತದೆ. 'ಇಂಕ್ರೀಡಿಬಲ್ ಫ್ಯಾಮಿಲಿ' ಸೇನೆಯು ಯಂತ್ರಮಾನವ ಸಿಂಡ್ರೊಮ್ ಮೇಲೆ ಧಾಳಿ ನಡೆಸಿ, ಬಂಧಿತರನ್ನು ಲೇಸರ್ ಕಾರಾಗೃಹದಲ್ಲಿ ಇಡುವಂತೆ ಮಾಡುತ್ತದೆ. ಏತನ್ಮಧ್ಯೆ, ಯಂತ್ರಮಾನವ ಜ್ವಾಲಾಪ್ರಕ್ಷೇಪಕವನ್ನು ಬಳಸಿ ಭವಿಷ್ಯದ ಅತಿಮಾನವ ರಕ್ಷಕರನ್ನು ಸುಟ್ಟುಬಿಡುವ ವಿಫಲ ಯತ್ನವೂ ನಡೆಯುತ್ತದೆ. ಫ್ರೊಜೋನ್ ಯಂತ್ರಮಾನವ ಸಿಂಡ್ರೋಮ್‌ನ್ನು ಹೆಪ್ಪುಗಟ್ಟಿಸಿದ ನಂತರ, ಮಿಕ್ಕಿ ಮತ್ತು ಮಿನ್ನೀ ಅಂತಿಮವಾಗಿ ಬಿಡುಗಡೆಯಾಗುತ್ತಾರೆ. ವಾಲ್ಟ್ ಡಿಸ್ನಿ ವರ್ಲ್ಡ್/ಡಿಸ್ನಿಲೆಂಡ್ ರೆಸಾರ್ಟ್‌ನ ಹರ್ಷಮಯ ವಾತಾವರಣ ಮರಳುತ್ತದೆ. ಇಂಕ್ರೀಡಿಬಲ್ಸ್ ಸೇನಾ ಸದಸ್ಯರು ಮಿಕ್ಕಿ ಮತ್ತು ಮಿನ್ನೀಯ ಹೊಸ ಸ್ನೇಹಿತರಾಗುತ್ತಾರೆ.
ವಿಡಿಯೋ ಆಟಗಳು
[ಬದಲಾಯಿಸಿ]ಹಲವು ಜನಪ್ರಿಯ ಪಾತ್ರಗಳಂತೆ, ಮಿಕ್ಕಿಯೂ ಸಹ ಹಲವು ವೀಡಿಯೊ ಆಟಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾನೆ. ಇವುಗಳಲ್ಲಿ ನೈನ್ಟೆಂಡೊ ಎಂಟರ್ಟೇನ್ಮೆಂಟ್ ಸಿಸ್ಟೆಮ್‌ನಲ್ಲಿ 'ಮಿಕ್ಕಿ ಮೌಸ್ಕೆಪೇಡ್ ', Mickey Mania: The Timeless Adventures of Mickey Mouse ', ಸೂಪರ್ ನೈನ್ಟೆಂಡೊ ಎಂಟರ್ಟೇನ್ಮೆಂಟ್ ಸಿಸ್ಟೆಮ್‌ನಲ್ಲಿ 'ಮಿಕ್ಕಿ'ಸ್ ಅಲ್ಟಿಮೇಟ್ ಚಾಲೆಂಜ್' ಹಾಗೂ ಡಿಸ್ನಿ'ಸ್ ಮ್ಯಾಜಿಕಲ್ ಕ್ವೆಸ್ಟ್ ', ಮೆಗಾ ಡ್ರೈವ್/ಜೆನೆಸಿಸ್‌ನಲ್ಲಿ ಕ್ಯಾಸ್ಲ್ ಆಫ್ ಇಲ್ಯುಷನ್ ಸ್ಟಾರಿಂಗ್ ಮಿಕ್ಕಿ ಮೌಸ್ ', ಗೇಮ್ ಬಾಯ್‌ನಲ್ಲಿ ಮಿಕ್ಕಿ ಮೌಸ್: ಮ್ಯಾಜಿಕ್ ವ್ಯಾಂಡ್ಸ್ ' ಹಾಗೂ ಇತರೆ ಆಟಗಳು ಸೇರಿದಂತೆ ಹಲವು 'ಮಿಕ್ಕಿ-ಪ್ರಧಾನ' ವೀಡಿಯೊ ಆಟಗಳು ಜನಪ್ರಿಯವಾಗಿವೆ. 2000ದ ದಶಕದಲ್ಲಿ, ಡಿಸ್ನಿ'ಸ್ ಮ್ಯಾಜಿಕಲ್ ಕ್ವೆಸ್ಟ್ ಸರಣಿಯನ್ನು ಗೇಮ್ ಬಾಯ್ ಅಡ್ವಾನ್ಸ್ ಉಪಕರಣಕ್ಕೂ ಹೊಂದುವಂತೆ ಮಾಡಲಾಯಿತು. ಯುವ ಪ್ರೇಕ್ಷಕರಿಗಾಗಿ ನೈನ್ಟೆಂಡೊ ಗೇಮ್ಕ್ಯೂಬ್‌ನಲ್ಲಿ ಡಿಸ್ನಿ'ಸ್ ಮ್ಯಾಜಿಕಲ್ ಮಿರರ್ ಸ್ಟಾರಿಂಗ್ ಮಿಕ್ಕಿ ಮೌಸ್ ವೀಡಿಯೊ ಆಟದಲ್ಲಿ ಮಿಕ್ಕಿ ಮೌಸ್ ಆರನೆಯ ತಲೆಮಾರಿನ ಯುಗದ ಪ್ರಥಮ ರಂಗಪ್ರವೇಶ ಮಾಡಿದನು. ಕಿಂಗ್ಡಮ್ ಹಾರ್ಟ್ಸ್ ಸರಣಿಯಲ್ಲಿ ಮಿಕ್ಕಿ ಪ್ರಮುಖ ಪಾತ್ರ ವಹಿಸುತ್ತಾನೆ. ಇದರಲ್ಲಿ ಅವನು ಡಿಸ್ನಿ ಕ್ಯಾಸ್ಲ್ (ಡಿಸ್ನಿ ಕೋಟೆ)ಯ ರಾಜ ಹಾಗೂ ಮುಖ್ಯಪಾತ್ರ ಸೊರಾಗೆ ಸಹಯೋಗಿಯಾಗಿರುತ್ತಾನೆ. ರಾಜ ಮಿಕ್ಕಿ, ಬೀಗದಕೈ ಆಕಾರದ, ಎಂತಹದ್ದೇ ಬೀಗವನ್ನು ತೆರೆದು ಕತ್ತಲನ್ನು ಹೋಗಲಾಡಿಸುವ ಸಾಮರ್ಥ್ಯವುಳ್ಳ ಕೀಬ್ಲೇಡ್ ಎಂಬ ಆಯುಧವನ್ನು ಹೊಂದಿರುತ್ತಾನೆ. ಡಿಸ್ನಿ ಬ್ರಹ್ಮಾಂಡದ ಇನ್ನಷ್ಟು ಕತ್ತಲಿನ ಆವೃತ್ತಿಯನ್ನು ತೋರಿಸುವ ಎಪಿಕ್ ಮಿಕ್ಕಿ ಎಂಬ ವೀಡಿಯೊ ಆಟವು 2010ರಲ್ಲಿ ವೀ (Wii) ಗಾಗಿ ಬಿಡುಗಡೆಯಾಗಲಿದೆ.
ಆಟಿಕೆಗಳು ಮತ್ತು ಆಟಗಳು
[ಬದಲಾಯಿಸಿ]ಮಿಕ್ಕಿ ಮೌಸ್ ಅತಿಥೇಯನಾಗಿ ಕಾಣಿಸಿಕೊಳ್ಳುವ ಮೂರು ವಿಧಾನಗಳುಳ್ಳ ವಿದ್ಯುನ್ಮಾನ-ಮಾತನಾಡುವ 'ಮಿಕ್ಕಿ ಸೇಯ್ಸ್ ' ಎಂಬ ಆಟವನ್ನು ಮಿಲ್ಟನ್ ಬ್ರ್ಯಾಡ್ಲೇ 1989ರಲ್ಲಿ ಬಿಡುಗಡೆಗೊಳಿಸಿದರು. ಮಿಕ್ಕಿ ಇತರೆ ಆಟಿಕೆ ಮತ್ತು ಆಟಗಳಲ್ಲಿಯೂ ಸಹ ಕಾಣಿಸಿಕೊಂಡನು. ಇದರಲ್ಲಿ ವರ್ಲ್ಡ್ಸ್ ಆಫ್ ವಂಡರ್-ಬಿಡುಗಡೆಗೊಳಿಸಿದ ಟಾಕಿಂಗ್ ಮಿಕ್ಕಿ ಮೌಸ್ ಸಹ ಸೇರಿವೆ.
ವಿನ್ಯಾಸ ಮತ್ತು ಧ್ವನಿ
[ಬದಲಾಯಿಸಿ]ಮಿಕ್ಕಿ ಮೌಸ್ ಪಾತ್ರವು ತಾನು ಮೊದಲ ಬಾರಿ ಕಾಣಿಸಿಕೊಂಡಾಗಿನಿಂದಲೂ ಪ್ರಮುಖ ಬದಲಾವಣೆಗಳನ್ನು ಕಂಡಿದೆ. ಇಸವಿ 1939ರಲ್ಲಿ ಬಿಡುಗಡೆಯಾದ ದಿ ಪಾಯಿಂಟರ್ ' ಹಾಗೂ 1940ರಲ್ಲಿ ಬಿಡುಗಡೆಯಾದ ಫ್ಯಾಂಟಸಿಯಾ ದ ದಿ ಸಾರ್ಸೆರರ್ಸ್ ಅಪ್ರೆಂಟಿಸ್ 'ವಿಭಾಗದಲ್ಲಿ ಮೊದಲ ಬಾರಿಗೆ ಮಿಕ್ಕಿ ಮೌಸ್‌ಗೆ ಕಣ್ಣುಗಳಲ್ಲಿ ಪಾಪೆ, ಕಾಕೇಷಿಯನ್ ವರ್ಣದ ಮುಖ ಹಾಗೂ ಪೇರು ಹಣ್ಣಿನ ಆಕಾರದ ಶರೀರವನ್ನು ರೂಪಿಸಲಾಯಿತು. 1940ರ ದಶಕದಲ್ಲಿ, 'ದಿ ಲಿಟ್ಲ್ ವರ್ಲ್‌ವಿಂಡ್'ನಲ್ಲಿ ಮಿಕ್ಕಿ ಪುನಃ ಬದಲಾದನು. ಈ ವ್ಯಂಗ್ಯಚಲನಚಿತ್ರದಲ್ಲಿ ಮಿಕ್ಕಿ ತನ್ನ ಮಾರಾಟಮುದ್ರೆ ಷರಾಯಿಗಳನ್ನು ಕಡೆಯ ಬಾರಿಗೆ ಧರಿಸಿದ್ದಲ್ಲದೆ, ತನ್ನ ಬಾಲ ಕಳಚಿ, ಇನ್ನಷ್ಟು ಸಹಜವಾದ ಕಿವಿಗಳನ್ನು ಹೊಂದಿದನು. ಶರೀರದಲ್ಲಿ ಮಾರ್ಪಾಡುಗಳಿಗೆ ಅನುಗುಣವಾಗಿ ಕಿವಿಗಳ ಆಕಾರವೂ ಬದಲಾಯಿತು. ಆದರೆ ಈ ಬದಲಾಣೆಯು ಅಲ್ಪಾವಧಿಯ ಕಾಲದ್ದಾಗಿತ್ತು. ತನ್ನ ಷರಾಯಿಯ ಹೊರತುಪಡಿಸಿ, 'ದಿ ಪಾಯಿಂಟರ್ ' ಚಿತ್ರದಲ್ಲಿನ ತನ್ನ ಅವತಾರಕ್ಕೆ ವಾಪಸಾದನು. 1950ರ ದಶಕದ ಅಂತಿಮ ನಾಟಕೀಯ ವ್ಯಂಗ್ಯಚಿತ್ರಗಳಲ್ಲಿ ಮಿಕ್ಕಿಗೆ ಹುಬ್ಬುಗಳನ್ನು ನೀಡಲಾಗಿತ್ತು, ಆದರೆ ಇನ್ನಷ್ಟು ಇತ್ತೀಚೆಗಿನ ವ್ಯಂಗ್ಯಚಿತ್ರಗಳಲ್ಲಿ ಹುಬ್ಬುಗಳನ್ನು ಅಳಿಸಲಾಯಿತು.
ಮಿಕ್ಕಿಯ ಅತಿ ವಿಶಿಷ್ಟ ಗುರುತು ಎಂದರೆ ತನ್ನ ಕಿವಿಗಳು. ಅವು ಡಿಸ್ನಿ ಉದ್ದಿಮೆಯ ಒಟ್ಟಾರೆ ಟ್ರೇಡ್‌ಮಾರ್ಕ್ ಸಹ ಆಗಿವೆ. ದುಂಡಗಿರುವ ತಲೆಯ ಮೇಲ್ಭಾಗಕ್ಕೆ ದುಂಡನೆಯ ಎರಡು ಕಿವಿಗಳು ಜೋಡಿಸಿರುವುದು ಮಿಕ್ಕಿಯ ಕಿವಿಗಳ ಮೂಲಭೂತ ವಿನ್ಯಾಸವಾಗಿದೆ. 1940ರ ದಶಕದ ಮಿಕ್ಕಿಯ ಹೊರತುಪಡಿಸಿ, ಮಿಕ್ಕಿ ಮತ್ತು ಮಿನ್ನೀ ಯಾವ ಕಡೆ ತಲೆ ತಿರುಗಿಸಿದರೂ, ಅವರ ಕಿವಿಗಳು ಅಷ್ಟೇ ಸಮ್ಮಿತಿಯೊಂದಿಗೆ ಕಾಣಬಹುದಾಗಿದೆ. ಇದು ಪ್ರಮುಖ ಹಾಗೂ ಅಸಾಮಾನ್ಯ ಗುಣಲಕ್ಷಣ ಎನ್ನಬಹುದಾಗಿದೆ. ಅರ್ಥಾತ್, ಮಿಕ್ಕಿ ಮತ್ತು ಮಿನ್ನೀ ಎದುರು ನೋಡಿದಾಗ ಅವರ ಕಿವಿಗಳು ಅದೇ ಸ್ಥಿತಿಯಲ್ಲಿ ಕಂಡುಬಂದು, ಎಡಕ್ಕೋ ಬಲಕ್ಕೋ ತಿರುಗಿದಾಗ ಪಾರ್ಶ್ವನೋಟ ಬೀರಿದಂತಿರುತ್ತವೆ.
ತನ್ನ ದಾಕ್ಷಿಣ್ಯದ, ಕೀರಲು ಧ್ವನಿಯು ಮಿಕ್ಕಿಯ ಪರದೆಯ ವ್ಯಕ್ತಿತ್ವದ ಬಹುಪಾಲು ಲಕ್ಷಣವಾಗಿದೆ. ದಿ ಕಾರ್ನಿವಾಲ್ ಕಿಡ್ ನಲ್ಲಿ ಮೊದಲ ಬಾರಿಗೆ ಮಾತನಾಡುವ ಪಾತ್ರದಿಂದ ಆರಂಭಗೊಂಡು, ಸ್ವತಃ ವಾಲ್ಟ್ ಡಿಸ್ನಿಯವರೇ ಮಿಕ್ಕಿಗೆ ಧ್ವನಿದಾನ ಮಾಡಿದರು. ಈ ಕಾರ್ಯ ಕುರಿತು ವಾಲ್ಟ್ ಡಿಸ್ನಿ ವೈಯಕ್ತಿಕವಾಗಿ ಹೆಮ್ಮೆ ಪಟ್ಟಿದ್ದರು. (ಕೆಲವು ಆರಂಭಿಕ ಕಿರು-ವ್ಯಂಗ್ಯಚಲನಚಿತ್ರಗಳಲ್ಲಿ ಕಾರ್ಲ್ ಸ್ಟ್ಯಾಲಿಂಗ್ ಮತ್ತು ಕ್ಲಾರೆನ್ಸ್ ನ್ಯಾಷ್ ಸಹ ಮಿಕ್ಕಿಗೆ ಮನ್ನಣೆಗಳಿಸದ ADR (ಧ್ವನಿದಾನ) ನೀಡಿದ್ದರೆಂದು ಹೇಳಲಾಗಿದೆ.) ಆದರೆ, 1946ರೊಳಗೆ ವಾಲ್ಟ್ ಡಿಸ್ನಿ ತಮ್ಮ ಉದ್ದಿಮೆಯನ್ನು ನಡೆಸುವಲ್ಲೇ ಬಹಳ ವ್ಯಸ್ಥರಾಗುತ್ತಿದ್ದರು. ಇದರಿಂದಾಗಿ ಅವರು ಧ್ವನಿದಾನ ಮಾಡಲು ಸಮಯದ ಅಭಾವವಿತ್ತು (ಅವರು ಹಲವು ವರ್ಷಗಳಿಂದ ವಿಪರೀತ ಸಿಗರೇಟ್ ಸೇದುತ್ತಿದ್ದದ್ದು ಅವರ ಧ್ವನಿ ಕೆಡಲು ಕಾರಣ ಎಂದೂ ಹೇಳಲಾಗಿದೆ). ಫನ್ ಅಂಡ್ ಫ್ಯಾನ್ಸಿ ಫ್ರೀ ವ್ಯಂಗ್ಯಚಲನಚಿತ್ರ ಮಿಕ್ಕಿ ಅಂಡ್ ದಿ ಬೀನ್‌ಸ್ಟಾಕ್ ಸಂಚಿಕೆಯಲ್ಲಿ, ಮಿಕ್ಕಿಗೆ ಧ್ವನಿದಾನ ನೀಡುವ ಜವಾಬ್ದಾರಿಯನ್ನು ಹಿರಿಯ ಡಿಸ್ನಿ ವಾದ್ಯಸಂಗೀತಗಾರ ಮತ್ತು ನಟಜಿಮ್ಮಿ ಮೆಕ್ಡೊನಾಲ್ಡ್ ಹಸ್ತಾಂತರಿಸಿದರು. (ಅಂತಿಮ ಧ್ವನಿಪಥದಲ್ಲಿ, ವಾಲ್ಟ್ ಡಿಸ್ನಿ ಮತ್ತು ಜಿಮ್ಮಿ ಮೆಕ್ಡೊನಾಲ್ಡ್‌ರ ಧ್ವನಿಗಳನ್ನೂ ಆಲಿಸಬಹುದಾಗಿದೆ.) ಉಳಿದ ಕಿರು-ವ್ಯಂಗ್ಯಚಲನಚಿತ್ರಗಳು, ವಿವಿಧ ದೂರದರ್ಶನ ಹಾಗೂ ಜಾಹೀರಾತುಗಳಲ್ಲಿ ಮಿಕ್ಕಿಗೆ ಮೆಕ್ಡೊನಾಲ್ಡ್ ಧ್ವನಿದಾನ ಮಾಡಿದರು. ಅವರು 1970ರ ಮಧ್ಯದಲ್ಲಿ ನಿವೃತ್ತರಾದರು. 1954ರಿಂದ 1959ರ ಅವಧಿಯಲ್ಲಿ ಮೂಲತಃ ಮಿಕ್ಕಿ ಮೌಸ್ ಕ್ಲಬ್ ದೂರದರ್ಶನ ಸರಣಿಗಳು ಹಾಗೂ 11 ಸೆಪ್ಟೆಂಬರ್ 1958ರಂದು ಪ್ರಸಾರಗೊಂಡ 'ಡಿಸ್ನಿಲೆಂಡ್' TV ಸರಣಿಯ 'ಫೋರ್ತ್ ಆನಿವರ್ಸರಿ ಷೋ'ನಲ್ಲಿ ಸ್ವತಃ ವಾಲ್ಟ್ ಡಿಸ್ನಿಯವರೆ ಧ್ವನಿದಾನ ಮಾಡಿದ್ದರು. ಇಸವಿ 1983ರಲ್ಲಿ ಮಿಕ್ಕಿ'ಸ್ ಕ್ರಿಸ್ಮಸ್ ಕ್ಯೆರೊಲ್ ಮೂಲಕ ದಿವಂಗತ ವೇಯ್ನ್ ಅಲ್ವಿನ್ ಮಿಕ್‌ಮೌಸ್ ಆಗಿ ನಾಟಕವೇದಿಕೆಯ ಪ್ರವೇಶದ ಗುರುತಾಗಿದೆ. ಇಸವಿ 2009 [೨೨] ರಲ್ಲಿ ಇವರ ಸಾವಿನ ತನಕ ಮಿಕ್ಕಿ ಮೌಸ್‌ಗೆ ಧ್ವನಿದಾನ ಮಾಡಿದ್ದರು. ಕಾಳತಾಳಿಯವಾಗಿ ಎಂಬಂತೆ, ವೇಯ್ನ್ ಆಲ್ವಿನ್, ಸದ್ಯ ಮಿನ್ನೀ ಮೌಸ್‌ಗೆ ಧ್ವನಿದಾನ ಮಾಡುತ್ತಿರುವ ರುಸ್ಸಿ ಟೇಯ್ಲರ್‌ರನ್ನು ವಿವಾಹವಾಗಿದ್ದರು. ಇಸವಿ 1987ರಲ್ಲಿ ಬಿಡುಗಡೆಯಾದ TV ವಿಶೇಷ ಡೌನ್ ಅಂಡ್ ಔಟ್ ವಿತ್ ಡೊನಾಲ್ಡ್ ಡಕ್ ಕಾರ್ಯಕ್ರಮದಲ್ಲಿ ಲೆಸ್ ಪರ್ಕಿನ್ಸ್ ಮಿಕ್ಕಿಗೆ ಧ್ವನಿದಾನ ಮಾಡಿದ್ದರು.
ಮುಂಚೆ ಹಾಲ್ಮಾರ್ಕ್ ಸಂಸ್ಥೆಯಲ್ಲಿ ಶುಭಾಶಯ ಪತ್ರ ಕಲಾವಿದರಾಗಿದ್ದ ಬ್ರೆಟ್ ಇವಾನ್, ಈಗ ಮಿಕ್ಕಿಯ ಹೊಸ ಧ್ವನಿ ನಿರೂಪಿಸಲು ಆಯ್ಕೆಯಾಗಿದ್ದಾರೆ. ಮಿಕ್ಕಿ ಆಟಿಕೆ ಹಾಗೂ ಡಿಸ್ನಿ ಕ್ರೂಯಿಸ್ ಲೈನ್ ಉತ್ತೇಜನಾ ಜಾಹೀರಾತುಗಳಿಗಾಗಿ ಅವರ ಮೊದಲ ನಟನಾ ಕಾರ್ಯ ಆರಂಭಗೊಂಡಿತ್ತು. ಅದು ಡಿಸ್ನಿ ಆನ್ ಐಸ್: ಸೆಲೆಬ್ರೇಷನ್ಸ್! ಐಸ್ ಶೋನಲ್ಲಿ ಅದು ಕಾಣಿಸಿಕೊಳ್ಳಲಿದೆ[೨೩] . ಮುಂದೆ, ಪ್ಲೇಸ್ಟೇಷನ್ ಪೋರ್ಟಬಲ್‌ಗಾಗಿ ನಿರ್ಮಾಣವಾಗಲಿರುವ 'ಕಿಂಗ್ಡಮ್ ಹಾರ್ಟ್ಸ್ ಬರ್ತ್ ಬೈ ಸ್ಲೀಪ್ ' ಎಂಬ ವೀಡಿಯೊ ಆಟದಲ್ಲಿ ಮಿಕ್ಕಿ ಮೌಸ್‌ಗಾಗಿ ಅವರ ಮೊದಲ ಅಧಿಕೃತ ಧ್ವನಿದಾನ ಕಾರ್ಯ ನಡೆಯಲಿದೆ. ಕಿಂಗ್ಡಮ್ ಹಾರ್ಟ್ಸ್ ಸೀರೀಸ್‌ನ ಮುಂದಿನ ಆಟಗಳಲ್ಲಿಯೂ ಸಹ ಅವರು ಮಿಕ್ಕಿ ಮೌಸ್‌ಗಾಗಿ ಧ್ವನಿದಾನ ಮಾಡುವರೆಂಬ ಮಾತುಗಳು ಕೇಳಿಬರುತ್ತಿವೆ.
ಇತರೆ ಭಾಷೆಗಳಲ್ಲಿ ಧ್ವನಿಗಳು
[ಬದಲಾಯಿಸಿ]- ಬಲ್ಗೇರಿಯನ್
- ನಿಕೊಲಾ ಕೊಲೆವ್: ಹೌಸ್ ಆಫ್ ಮೌಸ್ ನಲ್ಲಿ (2003–2004, ಹಾಗೂ ಬಹುಶಃ ಅದಕ್ಕೂ ಮುಂಚೆ ಮಿಕ್ಕಿ ಮೌಸ್ ವರ್ಕ್ಸ್ ನಲ್ಲಿ)
- ಜಾರ್ಜಿ ಸ್ಟೊಯನೊವ್: ಮಿಕ್ಕಿ ಮೌಸ್ ಕ್ಲಬ್‌ಹೌಸ್ ನಲ್ಲಿ (2009ರಿಂದಲೂ)
- ಚೀನೀ ಭಾಷೆ
- ಜಿನ್ ಯಂಗ್ಗ್ಯಾಂಗ್: ಮಿಕ್ಕಿ ಮೌಸ್ ಕ್ಲಬ್‌ಹೌಸ್ ನಲ್ಲಿ (ಚೀನೀ ಭಾಷಾ ಆವೃತ್ತಿ)
- ಫ್ರೆಂಚ್ ಭಾಷೆ
- ಜ್ಯಾಕ್ಸ್ ಬೊಡೊಯಿನ್: ಫನ್ ಅಂಡ್ ಫ್ಯಾನ್ಸಿ ಫ್ರೀ (ಮೂಲ ಆವೃತ್ತಿ)
- ಜೀನ್-ಫ್ರಾಂಕೊಯಿ-ಕೊಫ್: ಫನ್ ಅಂಡ್ ಫ್ಯಾನ್ಸಿ ಫ್ರೀ ನಲ್ಲಿ (ಪುನಃ ಪ್ರಕಟಿಸಲಾದ ಆವೃತ್ತಿ), ಮಿಕ್ಕಿ'ಸ್ ಕ್ರಿಸ್ಮಸ್ ಕೆರೊಲ್ (ಪುನಃ ಪ್ರಕಟಿಸಲಾದ ಆವೃತ್ತಿ)
- ರೊಜರ್ ಕೆರೆಲ್: 1973 - 1980ರ ದಶಕದ ತನಕ (ಫ್ರ್ಯಾನ್ಸ್)
- ಮಾರ್ಕ್ ಫ್ರ್ಯಾಂಕೊಯಿ: 1980ರ ದಶಕದಲ್ಲಿ (ಫ್ರ್ಯಾನ್ಸ್)
- ವಿನ್ಸೆಂಟ್ ವಯೊಲೆಟ್: 1980ರ ದಶಕದ ಅಪರಾರ್ಧ - 1990ರ ಪೂರ್ವಾರ್ಧದ ತನಕ (ಫ್ರ್ಯಾನ್ಸ್)
- ಜೀನ್-ಪಾಲ್ ಆಡ್ರೇನ್: 1990ರ ದಶಕದಲ್ಲಿ (ಫ್ರ್ಯಾನ್ಸ್)
- ಲಾರೆಂಟ್ ಪಾಸ್ಕ್ವಯರ್: 2000ದಿಂದ ಇಂದಿನ ವರೆಗೆ (ಫ್ರ್ಯಾನ್ಸ್)
- ಡೇನಿಯಲ್ ಪಿಕಾರ್ಡ್: 2000 (ಫ್ರೆಂಚ್ ಕೆನಡಾ)
- ಜರ್ಮನ್
- ಮಾರಿಯೊ ವೊನ್ ಜಷರಫ್: 1990ರ ಅಪರಾರ್ಧದಿಂದ ಇಂದಿನ ತನಕ
- ಇಟಾಲಿಯನ್
- ಒರೆಸ್ಟ್ ಲಯೊನೆಲೊ: ಅಜ್ಞಾತ
- ಕ್ಲಾಡಿಯೊ ಟ್ರಯೊನ್ಫಿ: ಅಜ್ಞಾತ
- ಗಿಟನೊ ವಾರ್ಕೆಸಿಯಾ: ಅಜ್ಞಾತ
- ಅಲೆಸಾಂಡ್ರೊ ಕ್ವಾರ್ಟಾ: 1990ರ ಅಪರಾರ್ಧದಿಂದ ಇಂದಿನ ತನಕ
- ಜಪಾನಿ ಭಾಷೆ
- ಇಕೂ ಸಕಾಕಿಬಾರಾ: 1970ರ ದಶಕ (TV)
- ಈಕೊ ಯಮಾಡಾ: 1980ರ ದಶಕ
- ಮಸೂಮಿ ಗೊಟೂ: 1990ರ ಪೂರ್ವಾರ್ಧದಲ್ಲಿ
- ಟಕಾಷಿ ಅವೊಯಗಿ: 1990ರ ಅಪರಾರ್ಧದಿಂದ ಇಂದಿನ ತನಕ
- ಸ್ಪಾನಿಷ್
- ವಾಲ್ಟ್ ಡಿಸ್ನಿ: ಫ್ಯಾಂಟೆಸಿಯಾ
- ಎಡ್ಮಂಡೊ ಸ್ಯಾಂಟೊಸ್: ಫನ್ ಅಂಡ್ ಫ್ಯಾನ್ಸಿ ಫ್ರೀ ಯಿಂದ ಹಿಡಿದು ಮೂಲ ಕಿರು-ವ್ಯಂಗ್ಯಚಲನಚಿತ್ರಗಳು
- ಫ್ರ್ಯಾನ್ಸಿಸ್ಕೊ ಕೊಲ್ಮೆನೆರೊ: ಇತರೆ ಕಿರು-ವ್ಯಂಗ್ಯಚಲನಚಿತ್ರಗಳು
- ರಾವುಲ್ ಅಲ್ಡಾನಾ: ಇತರೆ ಕಿರು-ವ್ಯಂಗ್ಯಚಿತ್ರಗಳು, ದಿ ಪ್ರಿನ್ಸ್ ಅಂಡ್ ದಿ ಪಾಪರ್ ತನಕ
- ಜುಯಾನ್ ಅಲ್ಫೊನ್ಸೊ ಕೆರ್ರಾಲೆರೊ: ಹೂ ಫ್ರೇಮ್ಡ್ ರೊಜರ್ ರ‌್ಯಾಬಿಟ್ (ಲ್ಯಾಟೀನ್ ಅಮೆರಿಕನ್ ಆವೃತ್ತಿ)
- ರಫೆಲ್ ಅಲೊನ್ಸೊ ನರಾಂಜೊ ಜೂನಿಯರ್: ಹೂ ಫ್ರೇಮ್ಡ್ ರೊಜರ್ ರ‌್ಯಾಬಿಟ್ (ಯುರೋಪಿಯನ್ ಆವೃತ್ತಿ)
- ರುಬೆನ್ ಸರ್ಡಾ: 1990ರ ದಶಕದಿಂದ ಇಂದಿನ ತನಕ (ಲ್ಯಾಟೀನ್ ಅಮೆರಿಕನ್ ಆವೃತ್ತಿ)
- ಜೋಸೆ ಪಡಿಲ್ಲಾ: 1990ರ ದಶಕದಿಂದ ಇಂದಿನ ತನಕ (ಯುರೋಪಿಯನ್ ಆವೃತ್ತಿ)
- ಸ್ವೀಡಿಶ್
- ರೂನ್ ಹಲ್ವರ್ಸನ್: ಫನ್ ಅಂಡ್ ಫ್ಯಾನ್ಸಿ ಫ್ರೀ (ಮೂಲತಃ)
- ಆಂಡರ್ಸ್ ಒಜೆಬೊ: 1990ರ ಅಪರಾರ್ಧದಿಂದ ಇಂದಿನ ತನಕ ಫನ್ ಅಂಡ್ ಫ್ಯಾನ್ಸಿ ಫ್ರೀ (ಪುನಃ ಧ್ವನಿ ಸಂಯೋಜನೆ)
ಸಾಮಾಜಿಕ ಪರಿಣಾಮ
[ಬದಲಾಯಿಸಿ]ರಾಜಕೀಯದಲ್ಲಿ ಬಳಕೆ
[ಬದಲಾಯಿಸಿ]ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ನಿರ್ದಿಷ್ಟ ಮತಚೀಟಿಯಲ್ಲಿ ನಮೂದಿಸಲಾದ ಅಭ್ಯರ್ಥಿಗಳ ಕುರಿತು, ಅಥವಾ, ನಿರ್ದಿಷ್ಟ ಮತದಾನ ವಿಧಾನದ ಅಸಮರ್ಪಕತೆಗಳ ಬಗ್ಗೆ ಗಮನಸೆಳೆಯಲು ಪ್ರತಿಭಟನಾ ಮತದಾನದ ವ್ಯವಸ್ಥೆ ಮಾಡಲಾಗಿದೆ. ಹಲವು ರಾಜ್ಯಗಳ ಮತದಾನ ವ್ಯವಸ್ಥೆಗಳಲ್ಲಿ ಖಾಲಿ ಮತಚೀಟಿ ಅಥವಾ 'ಇವರಲ್ಲಿ ಯಾರೂ ಹಿತವರಲ್ಲ' ಎಂಬುದನ್ನು ನಮೂದಿಸಲು ಅವಕಾಶವಿಲ್ಲದ ಕಾರಣ, ಬಹುತೇಕ ಪ್ರತಿಭಟನೆ ಮತಗಳು ಸ್ಪಷ್ಟವಾಗಿ ಗಂಭೀರವಲ್ಲದ ಅಭ್ಯರ್ಥಿಯ ಹೆಸರು ರೈಟ್-ಇನ್ ಓಟ್ ಸ್ವರೂಪವನ್ನು ಪಡೆಯುತ್ತದೆ.. ಈ ಉದ್ದೇಶಕ್ಕಾಗಿ ವ್ಯಂಗ್ಯಚಿತ್ರ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. [ಸೂಕ್ತ ಉಲ್ಲೇಖನ ಬೇಕು] ಮಿಕ್ಕಿ ಮೌಸ್ ಅಮೆರಿಕಾದಲ್ಲಿ ಅತಿ ಚಿರಪರಿಚಿತ ಮತ್ತು ಅತಿ ಜನಪ್ರಿಯ ಪಾತ್ರವಾಗಿರುವ ಕಾರಣ, ಮಿಕ್ಕಿ ಮೌಸ್ ಹೆಸರನ್ನು ಬಳಸಲಾಗುತ್ತದೆ. (ಇತರೆ ಜನಪ್ರಿಯ ಆಯ್ಕೆಗಳ ಪೈಕಿ ಡೊನಾಲ್ಡ್ ಡಕ್ ಹಾಗೂ ಬಗ್ಸ್ ಬನ್ನಿ ಸಹ ಉಂಟು). ಈ ವಿದ್ಯಮಾನದ ಫಲವಾಗಿ, ಇದುವರೆಗೂ ನಡೆದ ಬಹುಶಃ ಎಲ್ಲಾ U.S. ರಾಷ್ಟ್ರಾಧ್ಯಕ್ಷ ಚುನಾವಣೆಗಳಲ್ಲಿಯೂ ಮಿಕ್ಕಿ ಮೌಸ್ ಸಣ್ಣ ಪ್ರಮಾಣದ, ಆದರೆ ಬಹಳ ಕಾಲದಿಂದ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಯಾಗುವ ವಿಡಂಬನಾತ್ಮಕ ಪರಿಣಾಮ ಉಂಟಾಗಿದೆ. [ಸೂಕ್ತ ಉಲ್ಲೇಖನ ಬೇಕು] ಇದೇ ರೀತಿಯ ವಿದ್ಯಮಾನವು ಫಿನ್ಲೆಂಡ್ ಹಾಗೂ ಸ್ವೀಡೆನ್ ದೇಶಗಳ ಸಂಸತ್ ಚುನಾವಣೆಗಳಲ್ಲಿ ಸಂಭವಿಸುತ್ತದೆ. ಇದರಲ್ಲಿ ಫಿನ್ ಹಾಗೂ ಸ್ವೀಡನ್ ಜನರು ಸಾಮಾನ್ಯವಾಗಿ ಡೊನಾಲ್ಡ್ ಡಕ್ ಅಥವಾ ಡೊನಾಲ್ಡ್ ಡಕ್ ಪಾರ್ಟಿ ಎಂದು ಮತಚೀಟಿಯಲ್ಲಿ ಬರೆದು ಪ್ರತಿಭಟನಾ ಮತದಾನ ಮಾಡುವುದುಂಟು.
ಇತ್ತೀಚೆಗೆ ನಡೆದ 2008ರ U.S. ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ, ಮಿಕ್ಕಿ ಮೌಸ್‌ನ ಹೆಸರು ಮತದಾರರ ಪಟ್ಟಿಯಲ್ಲಿ ವಂಚನೆಯಿಂದ ಗೋಚರಿಸಿತ್ತು.[೨೪][೨೫]
ಮಿಕ್ಕಿಯ ಹೆಸರಿನ ಹೀನಾರ್ಥಕ ಬಳಕೆ
[ಬದಲಾಯಿಸಿ]'ಮಿಕ್ಕಿ ಮೌಸ್ ' ಎಂಬ ಉಕ್ತಿಯು 'ಸಾಧಾರಣ' ಅಥವಾ ಅಕುಶಲವಾದ' ಅಥವಾ 'ಅಲ್ಪ ಬೆಲೆಯ' ಎಂಬ ಅಶಿಷ್ಟ ಅರ್ಥ ನೀಡುತ್ತದೆ. UK ಹಾಗೂ ಐರ್ಲೆಂಡ್ ದೇಶಗಳಲ್ಲಿ, ಇದು 'ಅತಿ ಕಳಪೆ ಗುಣಮಟ್ಟ' ಅಥವಾ 'ನಕಲು' ಎಂಬ ಅರ್ಥ ನೀಡುತ್ತದೆ.
- The Godfather: Part II ರಲ್ಲಿ, ಫ್ರೆಡೊ ಮೈಕಲ್‌ಗೆ ದ್ರೋಹ ಮಾಡುವುದನ್ನು ಸಮರ್ಥಿಸಿಕೊಳ್ಳುವ ಫ್ರೆಡೊ ಪ್ರಕಾರ, ಕುಟುಂಬದಲ್ಲಿ ಆತನ (ಮೈಕಲ್‌ನ) ಆದೇಶಗಳು ಸಾಮಾನ್ಯವಾಗಿ, 'ಈ ಕೆಲಸಾನ ಮಾಡೋಕೆ ಫ್ರೆಡೊನ ಕಳಿಸು, ಆ ಕೆಲಸಾನ ಮಾಡೋಕೆ ಫ್ರೆಡೊನ ಕಳಿಸು! ಫ್ರೆಡೊ ಎಲ್ಲಿಯಾದರೂ ಯಾವುದೋ ಒಂದು ಮಿಕ್ಕಿ ಮೌಸ್ ರಾತ್ರಿ ಕ್ಲಬ್ ನೋಡಿಕೊಳ್ಳಲಿ!'
ಹೆಚ್ಚು ಅರ್ಥಪೂರ್ಣವಾದ ಕಸುಬುಗಳಿಗೆ ವಿರೋಧವಿತ್ತು.
- ಇಸವಿ 1984ರಲ್ಲಿ ನಡೆದ ಹಿಮ-ಹಾಕಿ ಪಂದ್ಯವೊಂದರಲ್ಲಿ, ವೇಯ್ನ್ ಗ್ರೆಟ್ಜ್‌ಕಿಯವರ ಎಡ್ಮಂಟನ್ ಆಯಿಲರ್ಸ್ ನ್ಯೂ ಜರ್ಸೀ ಡೆವಿಲ್ಸ್‌ನ್ನು 13-4 ಅಂತರದಿಂದ ಸೋಲಿಸಿದ ನಂತರ, ಸುದ್ದಿಗಾರರೊಬ್ಬರಿಗೆ ಗ್ರೆಟ್ಜ್‌ಕಿ ಹೀಗೆ ಹೇಳಿದಂತೆ ವರದಿಯಾಗಿತ್ತು. 'ಅವರು ಸರಿಯಾಗಿ ಆಟ ಸುಧಾರಿಸಿದಷ್ಟು ಒಳ್ಳೆಯದು.ಇಡೀ ಲೀಗನ್ನು ಅವರು ಹಾಳುಮಾಡುತ್ತಿದ್ದಾರೆ. ಅವರು ಸುಮ್ಮನೆ ಒಂದು ಮಿಕ್ಕಿ ಮೌಸ್ ಸಂಘಟನೆ (ಕಳಪೆ ತಂಡ) ಯನ್ನು ನಡೆಸಿ ಇನ್ನಷ್ಟು ಹಾನಿ ಮಾಡದಂತೆ ತಡೆಯಬೇಕು.' [೨೬] ಗ್ರೆಟ್ಜ್‌ಕಿಯವರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ಆಯ್ಲರ್ಸ್ ತಂಡವು ನ್ಯೂಜರ್ಸಿ ತಲುಪಿದೊಡನೆ, ಡೆವಿಲ್ಸ್ ತಂಡದ ಅಭಿಮಾನಿಗಳು ಮಿಕ್ಕಿ ಮೌಸ್ ವೇಷಭೂಷಣಗಳನ್ನು ಧರಿಸಿದರು.
- ಇಸವಿ 1993ರಲ್ಲಿ ಬಿಡುಗಡೆಯಾದ ವಾರ್ನರ್ ಬ್ರದರ್ಸ್‌ರ ಚಲನಚಿತ್ರ 'ಡೆಮಾಲಿಷನ್ ಮ್ಯಾನ್ 'ನಲ್ಲಿ, ಸಿಲ್ವೆಸ್ಟರ್ ಸ್ಟಾಲೊನ್ ರ ಪಾತ್ರ ತಾನು ಓಡಿಸುತ್ತಿರುವ ಪೊಲೀಸ್ ಕಾರ್ ಹತೋಟಿ ತಪ್ಪಿ, ಕೆಟ್ಟುಹೋಗಿರುವ AI ವ್ಯವಸ್ಥೆ ವಿರುದ್ಧ ಹೆಣಗುತ್ತಾ, 'Brake!
! Brake! [೨೭] Brake, now, you Mickey Mouse piece of shit !"
- ಇಸವಿ 1996ರಲ್ಲಿ ಬಿಡುಗಡೆಯಾದ ವಾರ್ನರ್ ಬ್ರದರ್ಸ್‌ರ ಚಲನಚಿತ್ರ ಸ್ಪೇಸ್ ಜ್ಯಾಮ್ ನಲ್ಲಿ, ಬಗ್ಸ್ ಬನ್ನಿ ತಮ್ಮ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಹೆಸರಿಸಲು ಡ್ಯಾಫಿ ಡಕ್ ಕಲ್ಪನೆಯ ಬಗ್ಗೆ ಹೀನಾಯವಾಗಿ ಉಲ್ಲೇಖಿಸಿ 'ಅದೆಂತಹ ಮಿಕ್ಕಿ ಮೌಸ್ ಸಂಘಟನೆಯು ತನ್ನ ತಂಡಕ್ಕೆ 'ದಿ ಡಕ್ಸ್ ' ಎಂದು ಕರೆಯುತ್ತದೆ?' ಎಂದಿದ್ದುಂಟು. (ಅಂದು ಡಿಸ್ನಿ ಸಂಸ್ಥೆಯ ಸ್ವಾಮ್ಯದಲ್ಲಿದ್ದ NHL ತಂಡ ಮೈಟಿ ಡಕ್ಸ್ ಆಫ್ ಅನಾಹೀಮ್‌ನತ್ತ ಉಲ್ಲೇಖಿಸಿತು.)
- ಅಮೆರಿಕಾ ಸಂಯುಕ್ತ ಸಂಸ್ಥಾನದ ಸಶಸ್ತ್ರ ಸೇನೆಗಳಲ್ಲಿ, ಕೇವಲ ಮೇಲ್ಮೈಗೆ ಆಕರ್ಷಕವೆನಿಸುವ, ಆದರೆ ಯಾವುದೇ ಪ್ರಾಯೋಗಿಕ ಬಳಕೆಯಿಲ್ಲದ ಕಸಬುಗಳನ್ನು (ವಿಶಿಷ್ಟವಾಗಿ, ಮೂಲಭೂತ ತರಬೇತಿಯಲ್ಲಿ ಹಾಸಿಗೆಗಳನ್ನು ಸಿದ್ಧಪಡಿಸುವುದು, ಅಥವಾ ಹಡಗಿನಲ್ಲಿ ಹಿತ್ತಾಳೆ ಭಾಗಗಳನ್ನು ಒರೆಸುವುದು)ಸಾಮಾನ್ಯವಾಗಿ 'ಮಿಕ್ಕಿ ಮೌಸ್ ಕೆಲಸ' ಎನ್ನಲಾಗುತ್ತದೆ.
- ಶಾಲೆಗಳಲ್ಲಿ, 'ಮಿಕ್ಕಿ ಮೌಸ್ ವಿಷಯ' ಅಥವಾ 'ಮಿಕ್ಕಿ ಮೌಸ್ ಪ್ರಮುಖ ವಿಷಯ' ಎಂಬುದು ತರಗತಿ ಅಥವಾ ಕಾಲೇಜಿನ ಪ್ರಮುಖ ವಿಷಯವಾಗಿದೆ. ಇದರಲ್ಲಿ ಅತ್ಯುತ್ತಮ ಫಲಿತಾಂಶ (ಸಾಮಾನ್ಯವಾಗಿ A) ಗಳಿಸಲು ಬಹಳ ಕಡಿಮೆ ಶ್ರಮ ಅಗತ್ಯ, ಹಾಗೂ ಅಂತಹ ತರಗತಿಯ ವಿಷಯವು ಕಾರ್ಮಿಕ ಮಾರುಕಟ್ಟೆಯಲ್ಲಿ ಯಾವುದೇ ಗಮನಾರ್ಹ ಪ್ರಾಮುಖ್ಯತೆ ಗಳಿಸದು.[೨೮]
- ಚಲನಚಿತ್ರಗಳಲ್ಲಿ ಪರದೆಯ ಮೇಲಿನ ಸಾಹಸವನ್ನು ಸುಮ್ಮನೆ ಅನುಸರಿಸುವ ಹಿನ್ನೆಲೆ ಸಂಗೀತವನ್ನು 'ಮಿಕ್ಕಿ ಮೌಸಿಂಗ್' (ಮಿಕಿ ಮೌಸಿಂಗ್ ಅಥವಾ (mickey-mousing ಅಥವಾ mickeymousing ) ಎನ್ನಲಾಗುತ್ತದೆ.[೨೯]
- ತಂತ್ರಾಂಶ ತಯಾರಕ ಮೈಕ್ರೊಸಾಫ್ಟ್ ಸಂಸ್ಥೆಯನ್ನು ಮಿಕ್ಕಿಸಾಫ್ಟ್ ಎಂದು ಲೇವಡಿ ಮಾಡಲಾಗಿದೆ.[೩೦]
- WWII (ಎರಡನೆಯ ವಿಶ್ವಸಮರ) ಕಾಲದಲ್ಲಿ, ಬ್ರಿಟಿಷ್ ರಾಯಲ್ ನೇವಲ್ ಪ್ಯಾಟ್ರೊಲ್ ಸರ್ವಿಸ್ ಬಳಸುತ್ತಿದ್ದ ಮೊಟಾರ್ ಮೈನ್‌ಸ್ವೀಪರ್ಸ್‌ಗಳನ್ನು ಅನಧಿಕೃತವಾಗಿ "ಮಿಕ್ಕಿ ಮೌಸಸ್" ಎನ್ನಲಾಗುತ್ತಿತ್ತು.
- 1980ರ ದಶಕದ ಆರಂಭದಲ್ಲಿ, ಬ್ರಿಟನ್‌ನ ಅಂದಿನ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಒಮ್ಮೆ ಯುರೋಪಿಯನ್ ಸಂಸತ್‌ನ್ನು 'ಮಿಕ್ಕಿ ಮೌಸ್ ಸಂಸತ್' (ಅರ್ಥಾತ್ ಯಾವುದೇ ಪ್ರಭಾವ ಬೀರದ ಚರ್ಚಾ ಸಮುದಾಯ) ಎಂದು ಲೇವಡಿ ಮಾಡಿದ್ದರು.[೩೧]
- ರೆಡ್ ಡ್ವೊಫ್ ಎಂಬ ಬ್ರಿಟಿಷ್ ಸಾಂದರ್ಭಿಕ ಹಾಸ್ಯ ಧಾರಾವಾಹಿ ರೆಡ್ ಡ್ವೊಫ್ ನ
'ಕ್ವಾರೆಂಟೀನ್' ಎಂಬ ಒಂದು ಸಂಚಿಕೆಯಲ್ಲಿ, ತಂಡದ ಕಳಪೆ ಉಪಕರಣಗಳಿಂದ ಜೀವಕ್ಕೇ ಅಪಾಯದ ಸ್ಥಿತಿ ತಂದಿಟ್ಟ ಮೇಲೆ, "We're a real Mickey Mouse operation, aren't we?" ಎಂದು ಲಿಸ್ಟರ್ (ಪಾತ್ರದ ಹೆಸರು) ಹೇಳುತ್ತಾನೆ. ಕ್ಯಾಟ್ ಉತ್ತರಿಸುತ್ತದೆ ""Mickey Mouse? We ain't even Betty Boop !"
- ಡಿಸ್ನಿ ಉದ್ದಿಮೆಯ ಪ್ರಮುಖ ಲಾಂಛನ ಹಾಗೂ ಸಾಂಕೇತಿಕ ಪಾತ್ರವಾಗಿರುವುದರಿಂದ, ಮಿಕ್ಕಿ ಮೌಸ್‌ನ್ನು ವಿಡಂಬನಾತ್ಮಕವಾಗಿ ವಾಲ್ಟ್ ಡಿಸ್ನಿ ಕಂಪನಿಯ ಒಡೆಯ ಎನ್ನಲಾಗುತ್ತದೆ. 'We work for the Mouse' (ನಾವು ಮಿಕ್ಕಿ ಮೌಸ್‌ಗಾಗಿ ಕೆಲಸ ಮಾಡುತ್ತಿರುವೆವು) ಎಂದು ಡಿಸ್ನಿ ಉದ್ಯೋಗಿಗಳು ಕೆಲವೊಮ್ಮೆ ಹೇಳುವುದುಂಟು.[೩೨][೩೩] ಸೌತ್ ಪಾರ್ಕ್ 13ನೆಯ ಋತುವಿನ ಸಂಚಿಕೆ 'ದಿ ರಿಂಗ್,'ನಲ್ಲಿ ಮಿಕ್ಕಿ ಮೌಸ್ ಒಬ್ಬ ದುರಾಸೆಯ, ಹಿಂಸಾನಂದದ, ಹೊಲಸು ಬಾಯಿಯುಳ್ಳ ಸ್ಟುಡಿಯೊ ಮಾಲಿಕನಾಗಿರುತ್ತಾನೆ. ಅವನ ಶುದ್ಧತಾ ಉಂಗುರಗಳು ತಮ್ಮ ಸಂಗೀತವನ್ನು ಮಂಕಾಗಿಸುತ್ತಿದೆ ಎಂದು ದೂರಿದ ಜೊನಸ್ ಬ್ರದರ್ಸ್ನ್ನು ಮಿಕ್ಕಿ ಬಾಯಿಗೆ ಬಂದಂತೆ ಬಯ್ಯುತ್ತಾನೆ ಮತ್ತು ಹೊಡೆಯುತ್ತಾನೆ.
- ಲಾಸ್ ಏಂಜಲೀಸ್ ಲೇಕರ್ಸ್ ಹಾಗೂ ಆರ್ಲೆಂಡೊ ಮ್ಯಾಜಿಕ್ ತಂಡಗಳ ನಡುವೆ ನಡೆದ 2009 NBA (ಬ್ಯಾಸ್ಕೆಟ್‌ಬಾಲ್) ಫೈನಲ್ ಪಂದ್ಯವನ್ನು 'ಮಿಕ್ಕಿ ಮೌಸ್ ಸರಣಿ' [೩೪] ಎನ್ನಲಾಗಿದೆ. ಏಕೆಂದರೆ, ಲಾಸ್ ಏಂಜಲೀಸ್ ಹಾಗೂ ಆರ್ಲೆಂಡೊ ನಗರಗಳ ಬಳಿ ಡಿಸ್ನಿ ಥೀಮ್ ಪಾರ್ಕ್ಗಳಿವೆ (ಕ್ರಮವಾಗಿ ಡಿಸ್ನಿಲೆಂಡ್ ಮತ್ತು ವಾಲ್ಟ್ ಡಿಸ್ನಿ ವರ್ಲ್ಡ್). ಜೊತೆಗೆ, ಫೈನಲ್ ಪಂದ್ಯವನ್ನು ಪ್ರಸಾರ ಮಾಡಿದ ABC ವಾಹಿನಿಯು ಡಿಸ್ನಿ ಮಾಲೀಕತ್ವದಲ್ಲಿದೆ.
ವಿಡಂಬನೆಗಳು ಹಾಗೂ ಟೀಕೆಗಳು
[ಬದಲಾಯಿಸಿ]ಮಿಕ್ಕಿ ಮೌಸ್‌ನದು ಮೂಲತಃ ಒಬ್ಬ ಅಲೆಮಾರಿ ಗಾಯಕನ ಪಾತ್ರವಾಗಿತ್ತು. ಇಸವಿ 1929ರಿಂದ 1930ರ ದಶಕದ ವರೆಗೂ, ಮಿಕ್ಕಿ ಮೌಸ್‌ನ ಪಾತ್ರವನ್ನು ಒಬ್ಬ 'ಅಲೆಮಾರಿ ಗಾಯಕ' ಎಂದು ಅರ್ಥೈಸಿ, ಮುಕ್ತವಾಗಿ ವಿವರಿಸಲಾಗುತ್ತಿತ್ತು.[೩೫] ಇಂತಹ ಪಾತ್ರಗಳನ್ನು ಮಿಕ್ಕಿ ಮೌಸ್‌ನ ಆರಂಭಿಕ ಚಿತ್ರಗಳಾದ ಸ್ಟೀಮ್‌ಬೋಟ್ ವಿಲ್ಲೀ [೩೬] ಹಾಗೂ ಮಿಕ್ಕಿ'ಸ್ ಮೆಲರ್‌ಡ್ರಮರ್‌ನಲ್ಲಿ ನಿರೂಪಿಸಲಾಯಿತು. ಜಾಹೀರಾತಿನಲ್ಲಿ ಮಿಕ್ಕಿ ಕಪ್ಪುಚಹರೆಯುಳ್ಳವನು ಹಾಗೂ ಎದ್ದುಕಾಣುವಂತಹ ಮುಖ-ಲಕ್ಷಣಗಳನ್ನು ಹೊಂದಿದ್ದನು. ಈ ರೀತಿಯ ಲಕ್ಷಣಗಳು 1930ರ ದಶಕದಲ್ಲಿ ಆಫ್ರಿಕನ್-ಅಮೆರಿಕನ್ ಅಣಕಚಿತ್ರಗಳನ್ನು ಹೋಲುವಂತಿತ್ತು.[೩೭]
ಮಿಕ್ಕಿ ಮೌಸ್‌ನ ವಿಶ್ವಾದ್ಯಂತ ಜನಪ್ರಿಯತೆಯು ತನ್ನನ್ನು ವಾಲ್ಟ್ ಡಿಸ್ನಿ ಕಂಪೆನಿಯ ಲಾಂಛನವಲ್ಲದೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಚಿರಪರಿಚಿತ ಲಾಂಛನಗಳಲ್ಲಿಯೂ ಸಹ ಒಂದಾಗಿಸಿತು. ಈ ಕಾರಣಕ್ಕಾಗಿ, ಮಿಕ್ಕಿಯನ್ನು ಅಮೆರಿಕಾ-ವಿರೋಧಿ ವಿಡಂಬನೆಯಲ್ಲಿ ಬಳಸಿಕೊಳ್ಳಲಾಗಿದೆ. ಇದರಲ್ಲಿ ಅಪಖ್ಯಾತಿಯ ಭೂಗತ ವ್ಯಂಗ್ಯಚಿತ್ರ 'ಮಿಕ್ಕಿ ಮೌಸ್ ಇನ್ ವಿಯೆಟ್ನಾಮ್ ' ಸಹ ಸೇರಿದೆ. ಮಿಕ್ಕಿ ಮೌಸ್ ಕುರಿತು ಹಲವು ವಿಡಂಬನೆಗಳಿವೆ. ಇವುಗಳಲ್ಲಿ, ಮ್ಯಾಡ್ ಮ್ಯಾಗಜೀನ್ ಪತ್ರಿಕೆಯಲ್ಲಿ ವಿಲ್ ಎಲ್ಡರ್ ರಚಿಸಿದ ಮಿಕ್ಕಿ ರೊಡೆಂಟ್ ಎಂಬ ವಿಡಂಬನೆಯಿದೆ. ಇದರಲ್ಲಿ, ಮಿಕ್ಕಿ ಮೌಸ್ ಕುರುಚಲು ಗಡ್ಡಧಾರಿಯಾಗಿದ್ದು, ತನಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿದ ಡೊನಾಲ್ಡ್ ಡಕ್ ಬಗ್ಗೆ ಅತೀವ ಮಾತ್ಸರ್ಯವುಂಟಾಗಿ ಡೊನಾಲ್ಡ್‌ನ್ನು ಜೈಲಿನೊಳಗೆ ಹಾಕುತ್ತಾನೆ.[೩೮] ಮಿಕ್ಕಿ ಮೌಸ್‌ನ್ನು ದ್ವೇಷಿಸುತ್ತಿದ್ದ ಎಡ್ 'ಬಿಗ್ ಡ್ಯಾಡಿ' ರಾಥ್ ವಿಕಾರವಾದ ರಾಟ್ ಫಿಂಕ್ ಪಾತ್ರವನ್ನು ಸೃಷ್ಟಿಸಿದರು. ದಿ ಸಿಂಪ್ಸನ್ಸ್ ಮೂವೀ ನಲ್ಲಿ, ಬಾರ್ಟ್ ಸಿಂಪ್ಸನ್ ಮಿಕ್ಕಿ ಮೌಸ್‌ನ್ನು ಅಣಕಿಸಲು ಕಪ್ಪುಬಣ್ಣದ ಬ್ರಾ ತಲೆಯ ಮೇಲಿರಿಸಿ, 'I'm the mascot of an evil corporation!' ('ನಾನು ಒಂದು ದುಷ್ಟ ಉದ್ದಿಮೆಯ ಶುಭಕಾರಿ ಸಂಕೇತ!') ಎಂದು ಉದ್ಗರಿಸುತ್ತಾನೆ.[೩೯] ಸೌತ್ ಪಾರ್ಕ್ ಸರಣಿಯ 'ದಿ ರಿಂಗ್' ಎಂಬ ಸಂಚಿಕೆಯಲ್ಲಿ ಮಿಕ್ಕಿ ಮೌಸ್ ವಾಲ್ಟ್ ಡಿಸ್ನಿ ಕಂಪೆನಿಯ ಮಾಲೀಕನಾಗಿದ್ದು, ಹಿಂಸಾನಂದದ, ಕೇವಲ ದುಡ್ಡಿನಲ್ಲಿ ಮಾತ್ರ ಆಸಕ್ತಿ ಹೊಂದಿದ, ದುರಾಸೆಯುಳ್ಳವನಾಗಿ ನಿರೂಪಿತನಾಗಿರುತ್ತಾನೆ.
ಆರೊನ್ ವಿಲಿಯಮ್ಸ್‌ರ 'ಫುಲ್ ಫ್ರಾಂಟಲ್ ನರ್ಡಿಟಿ' ಸಂಚಿಕೆಯಲ್ಲಿ ಮಿಕ್ಕಿ ತನ್ನ ಕಂಪ್ಯೂಟರ್‌ನಿಂದ ಮಿರಾಮ್ಯಾಕ್ಸ್‌ನ್ನು ಅನ್ಲೋಡ್ (ತಂತ್ರಾಂಶ ಮಾಡಲು ಹತಾಶೆಯಿದಂ ಯತ್ನಿಸುತ್ತಾನೆ.[೪೦]
ಷಾರಿಯಾ (ಇಸ್ಲಾಮ್ ಧಾರ್ಮಿಕ) ನಿಯಮದ ಪ್ರಕಾರ ಇಲಿಗಳು ಅಪಾಯಕಾರಿ ಪೀಡೆಗಳು; ಇಲಿಗಳು ಜನಪ್ರಿಯತೆ ಗಳಿಸಲು ಕಾರಣವಾದ 'ಮಿಕ್ಕಿ ಮೌಸ್' ಮತ್ತು ಟಾಮ್ & ಜೆರಿ ಸರಣಿಯ 'ಜೆರಿ' ಪಾತ್ರಗಳನ್ನು ದೂಷಿಸಬೇಕಾಗಿದೆ ಎಂದು ಷೇಕ್ ಮುಹಮ್ಮದ್ ಅಲ್-ಮುನಾಜಿದ್ 20 ಸೆಪ್ಟೆಂಬರ್ 2008ರಂದು ಹೇಳಿಕೊಂಡಿದ್ದರು. ಇದರ ಫಲವಾಗಿ ಅವರು ಮಿಕ್ಕಿಯ ವಿರುದ್ಧ ಫತ್ವಾ ಹೊರಡಿಸಿದ್ದೂ ಉಂಟು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿ, ಸಾಕಷ್ಟು ವಿವಾದ-ಲೇವಡಿಗಳಿಗೆ ತುತ್ತಾಯಿತು. ತಮ್ಮ ಹೇಳಿಕೆಯನ್ನು ತಿರುಚಿ, ತಪ್ಪಾಗಿ ತರ್ಜುಮೆ ಮಾಡಲಾಯಿತು ಎಂದು ಷೇಕ್ ಮುಹಮ್ಮದ್ ಅಲ್-ಮುನಾಜಿದ್ ಆನಂತರ ಸ್ಪಷ್ಟೀಕರಣ ನೀಡಿದರು. [ಸೂಕ್ತ ಉಲ್ಲೇಖನ ಬೇಕು]
ಕಾರ್ಮಿಕ ವಿಚಾರಗಳು
[ಬದಲಾಯಿಸಿ]ಜನವರಿ 1936ರಲ್ಲಿ, ಮಿಕ್ಕಿ ಮೌಸ್ ಬೊಂಬೆಗಳನ್ನು ತಯಾರಿಸುವ ಉತ್ಪಾದನಾ ಘಟಕದಲ್ಲಿ ಸಂಘಟನೆಗೆ ಪ್ರಯತ್ನಿಸಿದ ಕಾರ್ಮಿಕ ಸಂಘ ಸದಸ್ಯ ಜೂಲಿಯಸ್ ಹರ್ಸ್ಕೊವಿಟ್ಜ್‌ರ ಮೇಲೆ ಅಜ್ಞಾತ ವ್ಯಕ್ತಿಯಿಂದ ಹಲ್ಲೆ ನಡೆದು, ಆ ಏಟಿನಿಂದ ಅವರ ತಲೆಬುರುಡೆ ಒಡೆದಿತ್ತು. ಅವನ ಕೈಗಾರಿಕೆಯ ಮಾಲೀಕರು ಅವರಿಗೆ ಬೆದರಿಕೆ ಹಾಕಿದ್ದರಂತೆ.[೪೧]
ಕಾನೂನಿನ ವಿಚಾರಗಳು
[ಬದಲಾಯಿಸಿ]ಮಿಕ್ಕಿ ಮೌಸ್ ಪಾತ್ರದ ಕುರಿತು ಕೇವಲ ಕೃತಿಸ್ವಾಮ್ಯ ಹಕ್ಕು ಪಡೆಯಲಾಗಿದೆ ಎಂದು ಕೆಲವೊಮ್ಮೆ ತಪ್ಪಾಗಿ ತಿಳಿಸಲಾಗಿದೆ. ಇತರೆ ಪ್ರಮುಖ ಡಿಸ್ನಿ ಪಾತ್ರಗಳಂತೆಯೇ, ಮಿಕ್ಕಿ ಮೌಸ್ ಸಹ ಟ್ರೇಡ್‌ಮಾರ್ಕ್ ಆಗಿದ್ದು, ಇದರ ಮಾಲೀಕ (ಡಿಸ್ನಿ ಸಂಸ್ಥೆ) ವಾಣಿಜ್ಯವಾಗಿ ಬಳಸಿಕೊಳ್ಳುವ ವರೆಗೂ ಈ ಲಾಂಛನವು ಶಾಶ್ವತವಾಗಿ ಚಾಲ್ತಿಯಲ್ಲಿರುತ್ತದೆ. ಆದ್ದರಿಂದ, ವಿಶಿಷ್ಟ ಡಿಸ್ನಿ ವ್ಯಂಗ್ಯಚಿತ್ರವು ಸಾರ್ವಜನಿಕ ವ್ಯಾಪ್ತಿಯಲ್ಲಿ ಹೋಗುತ್ತದೋ ಇಲ್ಲವೋ, ಡಿಸ್ನಿ ಸಂಸ್ಥೆಯ ಅನುಮತಿಯಿಲ್ಲದೆ ಪಾತ್ರಗಳನ್ನು ಟ್ರೇಡ್‌ಮಾರ್ಕ್‌ಗಳನ್ನಾಗಿ ಬಳಸುವಂತಿಲ್ಲ. ಆದರೆ, ಅಮೆರಿಕಾ ಸಂಯುಕ್ತ ಸಂಸ್ಥಾನ, ಯುರೋಪಿಯನ್ ಒಕ್ಕೂಟ ಮತ್ತು ಇತರೆ ವಲಯಗಳಲ್ಲಿ, ಕಾಪಿರೈಟ್ ಟರ್ಮ್ ಎಕ್ಸ್‌ಟೆನ್‌ಷನ್ ಆಕ್ಟ್ (ಕೃತಿಸ್ವಾಮ್ಯ ಅವಧಿ ವಿಸ್ತರಣಾ ಕಾಯಿದೆ)(ಡಿಸ್ನಿ ಸಂಸ್ಥೆಯು ಕೃತಿಸ್ವಾಮ್ಯ ವಿಸ್ತರಣೆಗಾಗಿ ಬಹಳಷ್ಟು ಲಾಬ್ಬಿ ನಡೆಸಿದಕ್ಕಾಗಿ, ಕೆಲವೊಮ್ಮೆ ಈ ಕಾಯಿದೆಯನ್ನು ಮಿಕ್ಕಿ ಮೌಸ್ ರಕ್ಷಣಾ ಕಾಯಿದೆ ಎನ್ನಲಾಗಿದೆ). ಹಾಗೂ ಇದೇ ರೀತಿಯ ಶಾಸನದಲ್ಲಿ ವಿಧಿಸಿದಂತೆ, ಆರಂಭಿಕ ಮಿಕ್ಕಿ ಮೌಸ್ ವ್ಯಂಗ್ಯಚಿತ್ರಗಳು ಕನಿಷ್ಟಪಕ್ಷ 2023ರ ತನಕ ಕೃತಿಸ್ವಾಮ್ಯದಲ್ಲಿರುವುದನ್ನು ಖಾತರಿಪಡಿಸಿದೆ. ಆದರೂ, ಆರಂಭಿಕ ಚಲನಚಿತ್ರಗಳಲ್ಲಿ ದ್ವಂದಾರ್ಥತೆ ಮತ್ತು ಅಖಚಿತತೆಯ ವಿಚಾರಗಳು ಕಾಪಿರೈಟ್ ಹಕ್ಕುಗಳಿಗೆ ಮನ್ನಣೆ ನೀಡುತ್ತದೆ. ಮಿಕ್ಕಿ ಪಾತ್ರದ ಆರಂಭಿಕ ಆವೃತ್ತಿಯ ಮೇಲೆ ಡಿಸ್ನಿ ಸಂಸ್ಥೆಯ ಕೃತಿಸ್ವಾಮ್ಯವನ್ನು ಅನೂರ್ಜಿತಗೊಳಿಸಬಹುದು ಎಂದು ಲಾಸ್ ಏಂಜಲೀಸ್ ಟೈಮ್ಸ್ ಅಂಕಣದಲ್ಲಿ ವಿವರಿಸಲಾಗಿದೆ.[೪೨]
ವಾಲ್ಟ್ ಡಿಸ್ನಿ ಸಂಸ್ಥೆಯು ಮಿಕ್ಕಿ ಮೌಸ್ ಪಾತ್ರದ ಮೇಲೆ ತನ್ನ ಟ್ರೇಡ್‌ಮಾರ್ಕ್‌ನ್ನು ರಕ್ಷಿಸಿಕೊಳ್ಳಲು ಬಹಳಷ್ಟು ಹೆಸರಾಗಿದೆ. ಸಂಸ್ಥೆಯೊಡನೆ ಅದರ ಪ್ರತಿರೂಪ ನಿರ್ದಿಷ್ಟ ಉತ್ಸಾಹದೊಂದಿಗೆ ನಿಕಟ ಸಂಬಂಧ ಹೊಂದಿದೆ. ತಮ್ಮ ಗೋಡೆಗಳ ಮೇಲೆ ಮಿಕ್ಕಿ ಮೌಸ್ ಮತ್ತು ಇತರೆ ಡಿಸ್ನಿ ಚಿತ್ರಗಳನ್ನು ಬಿಡಿಸಿದ್ದಕ್ಕೆ ಡಿಸ್ನಿ ಸಂಸ್ಥೆಯು 1989ರಲ್ಲಿ ಫ್ಲಾರಿಡಾದ ಮೂರು ಶಿಶುವಿಹಾರ ಕೇಂದ್ರಗಳ ವಿರುದ್ಧ ಮೊಕದ್ದಮೆ ಹೂಡಲು ಬೆದರಿಕೆ ಹಾಕಿತ್ತು. ಈ ಪಾತ್ರಗಳನ್ನು ತೆಗೆಯಲಾಯಿತು. ಈ ಡಿಸ್ನಿ ಪಾತ್ರಗಳ ಸ್ಥಾನದಲ್ಲಿ ಪ್ರತಿಸ್ಪರ್ಧಿ ಯುನಿವರ್ಸಲ್ ಸ್ಟುಡಿಯೊಸ್ ಯುನಿವರ್ಸಲ್ ವ್ಯಂಗ್ಯಚಿತ್ರ ಪಾತ್ರಗಳನ್ನು ಸ್ಥಾಪಿಸಿತು.[೪೩]
ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ವಿರುದ್ಧ ಏರ್ ಪೈರೇಟ್ಸ್
[ಬದಲಾಯಿಸಿ]ಆರಂಭಿಕ ಮಿಕ್ಕಿ ಮೌಸ್ ಚಿತ್ರಗಳಲ್ಲಿ ಖಳಪಾತ್ರಗಳ ಗುಂಪುಗಳನ್ನಾಧರಿಸಿದ ಭೂಗತ ವ್ಯಂಗ್ಯಚಿತ್ರಕಾರರ ಸಮುದಾಯವು ತನ್ನನ್ನು 'ಏರ್ ಪೈರೇಟ್ಸ್' ಎಂದು ಕರೆದುಕೊಂಡಿತು. ಇದು 1971ರಲ್ಲಿ 'ಏರ್ ಪೈರೇಡ್ಸ್ ಫನೀಸ್ ' ಎಂಬ ಕಾಮಿಕ್ ಸರಣಿಯನ್ನು ನಿರ್ಮಿಸಿತು. ಮೊದಲ ಸಂಚಿಕೆಯಲ್ಲಿ, ವ್ಯಂಗ್ಯಚಿತ್ರಕಾರ ಡ್ಯಾನ್ ಒ'ನೀಲ್ ಮಿಕ್ಕಿ ಮತ್ತು ಮಿನ್ನೀ ಮೌಸ್ ವ್ಯಕ್ತ ಲೈಂಗಿಕ ವರ್ತನೆಯಲ್ಲಿ ತೊಡಗಿ, ಮಾದಕವಸ್ತು ಸೇವನೆಯಲ್ಲಿ ತೊಡಗಿರುವಂತೆ ನಿರೂಪಿಸಿದ. ಒ'ನೀಲ್ ವಿವರಿಸಿದಂತೆ, 'ಏರ್ ಪೈರೇಟ್ಸ್ ಎಂಬುದು ಒಂದು ರೀತಿಯ ವಿಚಿತ್ರ ಕಲ್ಪನೆಯಾಗಿತ್ತು, ಗಾಳಿಯನ್ನು ಕಸಿಯುವುದು, ಗಾಳಿಯನ್ನೇ ಕೃತಿಚೌರ್ಯ ಮಾಡುವುದು, ಮಾಧ್ಯಮವನ್ನೇ ಕದಿಯುವುದು... ನಾವು ವ್ಯಂಗ್ಯಚಿತ್ರಕಾರರಾಗಿದ್ದರಿಂದ, ಡಿಸ್ನಿ ನಮ್ಮ ಗುರಿಯಾಗಿತ್ತು.' [೪೪] ಪಾತ್ರದ ರೂಪ ಅಥವಾ ಹೆಸರು ಬದಲಾಯಿಸಿದರೆ ವಿಕಟಾನುಕರಣವು ಪ್ರಭಾವಿಯಾಗಿರದು ಎಂದು ತಿಳಿದ ಒ'ನೀಲ್, ಏರ್ ಪೈರೇಟ್ಸ್ ಫನೀಸ್‌ನಲ್ಲಿ ಬಿಂಬಿಸಲಾದ ಇಲಿಯು 'ಮಿಕ್ಕಿ ಮೌಸ್'ನಂತೇ ಕಂಡಿದ್ದರಿಂದ ಮಿಕ್ಕಿಮೌಸ್ ಎಂದು ಹೆಸರಿಸಲಾಯಿತು. ಡಿಸ್ನಿ ಈ ವ್ಯಂಗ್ಯಚಿತ್ರಕಾರರ ವಿರುದ್ಧ ಕೃತಿಸ್ವಾಮ್ಯದ ಉಲ್ಲಂಘನಾ ಮೊಕದ್ದಮೆ ಹೂಡಿದರು. ಅಪೀಲುಗಳ ಸರಣಿಗಳ ನಂತರ, ಅಂತಿಮವಾಗಿ ಡಿಸ್ನಿಗೆ ನ್ಯಾಯ ದೊರಕಿ, ಒ'ನೀಲ್ ಡಿಸ್ನಿಗೆ $1.9 ದಶಲಕ್ಷದ ಮೊತ್ತ ಪರಿಹಾರ ನೀಡಲು ಆದೇಶಿಸಲಾಯಿತು. ಮುಕ್ತತೆಯ ಪ್ರತಿಪಾದಿಗಳಲ್ಲಿ ಈ ಮೊಕದ್ದಮೆಯ ತೀರ್ಪು ಇಂದಿಗೂ ವಿವಾದಗ್ರಸ್ಥವಾಗಿ ಉಳಿದಿದೆ. '[ಏರ್ ಪೈರೇಟ್ಸ್ ಸಮುದಾಯವು ವಿಡಂಬನೆಯನ್ನು ಇನ್ನೂ ಇಪ್ಪತ್ತು ವರ್ಷ ಹಿಂದಕ್ಕೆ ತಳ್ಳಿದೆ' [೪೫] ಎಂದು ನ್ಯೂಯಾರ್ಕ್ ಕಾನೂನು ವಿದ್ಯಾಲಯದ ಪ್ರಾಧ್ಯಾಪಕ ಎಡ್ವರ್ಡ್ ಸ್ಯಾಮ್ಯೂಯಲ್ಸ್ ತಿಳಿಸಿದರು.
ಸೆನ್ಸರ್ ಮಾಡುವುದು
[ಬದಲಾಯಿಸಿ]ಇಸವಿ 1930ರಲ್ಲಿ ಜರ್ಮನ್ ಚಲನಚಿತ್ರ ಸೆನ್ಸರ್ ಮಂಡಳಿಯು ಒಂದು ಮಿಕ್ಕಿ ಮೌಸ್ ಚಿತ್ರದ ಪ್ರದರ್ಶನವನ್ನು ನಿಷೇಧಿಸಿತ್ತು. ಏಕೆಂದರೆ, ಮೇಲ್ಭಾಗ ಚಪ್ದಟೆಯಾಗಿರುವ ಟೋಪಿ ಧರಿಸಿದ ಮಿಕ್ಕಿ ಜರ್ಮನರನ್ನು ನಕಾರಾತ್ಮಕ ರೀತಿಯಲ್ಲಿ ಬಿಂಬಿಸುತ್ತದೆ, "ಯುದ್ಧದ ನಂತರ ವಿದೇಶಗಳಲ್ಲಿ ಜರ್ಮನ್ ವಿರೋಧಿ ಭಾವನೆಗಳನ್ನು ಇನ್ನಷ್ಟು ಪ್ರಚೋದಿಸುವ ಸಾಧ್ಯತೆಯಿದೆ" ಎಂದು ಮಂಡಳಿಯು ಅಭಿಪ್ರಾಯಪಟ್ಟಿತು.[೪೬] 1930ರ ದಶಕದಲ್ಲಿ ಜರ್ಮನ್ ಪತ್ರಿಕೆಯೊಂದು ಈ ರೀತಿ ಪ್ರಕಟಿಸಿತ್ತು:
"ಮಿಕ್ಕಿ ಮೌಸ್ ಇದುವರೆಗೂ ಅತಿ ದರಿದ್ರ ಕಲ್ಪನೆಯಾಗಿದೆ ... ಪ್ರತಿಯೊಬ್ಬ ಸ್ವತಂತ್ರ ಹಾಗೂ ಮರ್ಯಾದಸ್ಥ ಯುವಕನಿಗೆ ಆರೋಗ್ಯಕರ ಭಾವನೆಗಳು ಹೇಳುವುದೇನೆಂದರೆ, ಈ ಕೊಳಕು-ಕಚ್ಚಡ ಭರಿತ ಇಲಿ, ಪ್ರಾಣಿಗಳ ಪ್ರಪಂಚದಲ್ಲೇ ಅತಿ ದೊಡ್ಡ ಬ್ಯಾಕ್ಟೀರಿಯಾ ವಾಹಕ ಇಲಿಯು ಇಂತಹ ಆದರ್ಶ ಪ್ರಾಣಿಯಾಗಲು ಸಾಧ್ಯವೇ ಇಲ್ಲ ... ಯಹೂದ್ಯರಿಂದ ಜನರ ಚಿತ್ರಹಿಂಸೆಯು ಇನ್ನು ತೊಲಗಲಿ! ಮಿಕ್ಕಿ ಮೌಸ್‌ಗೆ ಧಿಕ್ಕಾರ! ಸ್ವಸ್ತಿಕಾ ಶಿಲುಬೆಯನ್ನು ಧರಿಸಿ!"[೪೭][೪೮][೪೯]
ತಮ್ಮ ಕಾಮಿಕ್ ಮಾವುಸ್ IIರ ಎರಡನೆಯ ಸಂಪುಟದ ಮೊದಲ ಪುಟದಲ್ಲಿ ಆರ್ಟ್ ಸ್ಪೀಗಲ್ಮನ್ ಈ ಉಕ್ತಿಯನ್ನು ಬಳಸಿದರು.
'ಚಿತ್ರಮಂದಿರಗಳಲ್ಲಿ ಹತ್ತು ಅಡಿ ಎತ್ತರದ ಇಲಿಯನ್ನು ನೋಡಿದ ಮಕ್ಕಳು ಹೆದರುತ್ತಾರೆ' ಎಂದು ತಳಮಳ ವ್ಯಕ್ತಪಡಿಸಿದ ರೊಮಾನಿಯನ್ ಅಧಿಕಾರಿಗಳು, ಚಲನಚಿತ್ರಮಂದಿರಗಳಲ್ಲಿ ಮಿಕ್ಕಿ ಮೌಸ್ ಚಲನಚಿತ್ರಗಳ ಪ್ರದರ್ಶನಕ್ಕೆ 1935ರಲ್ಲಿ ನಿಷೇಧವಿಧಿಸಿದರು.[೫೦] ಫ್ಯಾಸಿಸ್ಟ್ ಕ್ರಾಂತಿಯ ದೃಢ ಮತ್ತು ಸಾಮ್ರಾಜ್ಯಶಾಹಿ ಮನೋಭಾವದಲ್ಲಿ ಮಕ್ಕಳನ್ನು ಪಾಲನೆ ಮಾಡಲು ಸುಧಾರಣೆಯ ಅಗತ್ಯವಿದೆಯೆಂದು ಜನಪ್ರಿಯ ಸಂಸ್ಕೃತಿ ಮಂತ್ರಾಲಯದ ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ, ಇಟಲಿಯನ್ ಸರ್ಕಾರವು ಮಿಕ್ಕಿ ಹಾಗೂ ಇತರೆ ವಿದೇಶೀ ಮಕ್ಕಳ ಸಾಹಿತ್ಯಗಳನ್ನು 1938ರಲ್ಲಿ ನಿಷೇಧಿಸಿತು.[೫೧]
ಚಲನಚಿತ್ರ ಪಟ್ಟಿ
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]- ಡಿಸ್ನಿ ಸಂಸ್ಥೆಯ ಸಹಪಾತ್ರ ಎಂದು ಚಿರಪರಿಚಿತವಾದ ಮಿನ್ನೀ ಮೌಸ್, ಹಲವು ಆನಿಮೇಟೆಡ್ ಕಿರು-ವ್ಯಂಗ್ಯ ಚಲನಚಿತ್ರಗಳಲ್ಲಿ ಮಿಕ್ಕಿಯ ಸಖಿಯೆಂದು ನಿರೂಪಿಸಲಾಗಿದೆ.
- ಡಿಸ್ನಿಯ ಆನಿಮೇಟೆಡ್ ಕಿರು-ವ್ಯಂಗ್ಯಚಲನಚಿತ್ರ ಸರಣಿಗಳಲ್ಲಿ ಪ್ಲುಟೊ ಎಂಬ ನಾಯಿಯ ಪಾತ್ರವನ್ನು ಮಿಕ್ಕಿಯ ನಾಯಿ ಎಂದು ಆಗಾಗ್ಗೆ ನಿರೂಪಿಸಲಾಗುತ್ತದೆ.
- ಮಿಕ್ಕಿ ಮೌಸ್ ಸರಣಿ ಮತ್ತು ಇತರೆ ಸಂಬಂಧಿತ ಪಾತ್ರಗಳಿಂದ ಹೊರಬಂದ ಮಿಕ್ಕಿ ಮೌಸ್ ಬ್ರಹ್ಮಾಂಡ ಎಂಬ ವಿದ್ಯಮಾನ.
- ಮಿಕ್ಕಿ ಮೌಸ್‌ಗೆ ಸಂಬಂಧಿಸಿದ ಹಸ್ತಕೃತಿಗಳು ಮತ್ತು ಚಿರಸ್ಮರಣೀಯ ವಸ್ತುಗಳನ್ನು ಪ್ರದರ್ಶಿಸುವ ಮೌಸ್ ಮ್ಯೂಸಿಯಮ್
- ಮಿಕ್ಕಿ ಮೌಸ್ ಅಡ್ವೆಂಚರ್ಸ್ ಮಿಕ್ಕಿ ಮೌಸ್ ಪ್ರಧಾನ ಪಾತ್ರದಲ್ಲಿರುವ ಅಲ್ಪಾವಧಿಯ ಕಾಮಿಕ್ ಸರಣಿ.
- ಹಿಡೆನ್ ಮಿಕ್ಕಿ ಡಿಸ್ನಿ ಚಿತ್ರಗಳು,ಥೀಮ್ ಪಾರ್ಕ್‌ಗಳು ಮತ್ತು ಮಾರಾಟದ ಸರಕುಗಳುದ್ದಕ್ಕೂ ಕಾಣಸಿಗುವ ಒಂದು ವಿದ್ಯಮಾನವಾಗಿದೆ. ಇದರಲ್ಲಿ ಮಿಕ್ಕಿಯ ತಲೆ ಮತ್ತು ಕಿವಿಗಳ ನೆರಳುರೇಖಾಚಿತ್ರಗಳನ್ನು ಹೋಲುವ
ಮರೆಮಾಚುವ ಚಿತ್ರಗಳನ್ನು ಒಳಗೊಂಡಿದೆ. ಸಂಬಂಧವಿರದ ಸ್ಥಳಗಳಲ್ಲಿ ಇದು ಡಿಸ್ನಿ ಸರಣಿಯ ಇನ್ನೊಂದು ಟ್ರೇಡ್‌ಮಾರ್ಕ್ ಆಗಿದೆ.
- ಸೆಲೆಬ್ರೇಷನ್ ಮಿಕ್ಕಿ, ಇದು ಎರಡು ಅಡಿ ಎತ್ತರದ, 100 lb (45 kg)., 24-ಕ್ಯಾರಟ್ ಅಪ್ಪಟ ಚಿನ್ನದ ಮಿಕ್ಕಿ ಮೌಸ್ ಪ್ರತಿಮೆ; ಇದನ್ನು ವಿನ್ಯಾಸ ಮಾಡಿದವರು ಡಿಸ್ನಿ ಕಲಾವಿದ ಮಾರ್ಕ್ ಡೆಲ್. ವಾಲ್ಟ್ ಡಿಸ್ನಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಇದನ್ನು 2001ರಲ್ಲಿ ನಿರ್ಮಿಸಲಾಯಿತು. ಇದನ್ನು ಡಿಸ್ನಿಲೆಂಡ್ ರೆಸಾರ್ಟ್ ಅಧಿಕಾರಿಗಳಿಂದ 'ಸಾಚಾ ಹಾಗೂ ಮಾದರಿ ಪ್ರತಿಮೆ' ಎಂದು ದೃಢೀಕರಿಸಲಾಯಿತು. ಡಿಸ್ನಿ ಕಂಪೆನಿಯ ಇತಿಹಾಸದಲ್ಲೇ ಅತಿ ದೊಡ್ಡ ಚಿನ್ನದ ಪ್ರತಿಮೆಯಾಗಿದೆ.
ಅಕರಗಳು
[ಬದಲಾಯಿಸಿ]- ಟಿಪ್ಪಣಿಗಳು
- ↑ ಸಿಂಫೊನಿ ಹಾವರ್ ಹಾಗೂ ಹೌಸ್ ಆಫ್ ಮೌಸ್ ನ ಸಂಚಿಕೆ 'ಮಿಕ್ಕಿ ಆಂಡ್ ದಿ ಕಲ್ಚರ್ ಕ್ಲ್ಯಾಷ್' ಕಿರು-ವ್ಯಂಗ್ಯಚಲನಚಿತ್ರಗಳಲ್ಲಿ ಅವನ ಪೂರ್ಣಹೆಸರನ್ನು ನಮೂದಿಸಲಾಗಿದೆ.
- ↑ ೨.೦ ೨.೧ ೨.೨ Kenworthy, John (2001). The Hand Behind the Mouse (Disney ed.). New York. pp. 53–54.
{{cite book}}
: CS1 maint: location missing publisher (link) - ↑ "Disney Online Guest Services". Disney Online. Archived from the original on 2008-12-01. Retrieved 2006-08-31.
- ↑ Barrier, Michael (2008). The Animated Man: A Life of Walt Disney. University of California Press. p. 56. ISBN 978-0520256194.
- ↑ "ಮಿಕ್ಕಿ ಮೌಸ್'ಸ್ ಮ್ಯಾಜಿಕ್ - ಟ್ವೀನ್‌ಟೈಮ್ಸ್ - ಇಂಡಿಯಾಟೈಮ್ಸ್". Archived from the original on 2004-01-13. Retrieved 2010-07-01.
- ↑ » ಮಿಕ್ಕಿ ಮೌಸ್ ಮಾರ್ಟಿಮರ್ ಮೌಸ್ ಆಗಲು ಹೊರಟಿದ್ದ ... Archived 2009-04-17 ವೇಬ್ಯಾಕ್ ಮೆಷಿನ್ ನಲ್ಲಿ.ಅಯೋಗ್ಯ ಜ್ಞಾನವಿದು Archived 2009-04-17 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Albin, Kira (1995). "Mickey Rooney: Hollywood, Religion and His Latest Show". GrandTimes.com. Senior Magazine.
- ↑ justdisney.com
- ↑ toontracker.com
- ↑ "ಫೆಲಿಕ್ಸ್ ದಿ ಕ್ಯಾಟ್ | ಸೇಂಟ್ ಜೇಮ್ಸ್ ಎನ್ಸೈಕ್ಲೊಪಿಡಿಯಾ ಆಫ್ ಪಾಪ್ ಕಲ್ಚರ್ |". Archived from the original on 2012-07-14. Retrieved 2012-07-14.
- ↑ ಮಿಕ್ಕಿ ಮೌಸ್ ಟ್ರೇಡ್‌ಮಾರ್ಕ್
- ↑ "ಡಿಸ್ನಿ ಟೈಮ್ಲೈನ್: ಎ ಮೌಸ್ ಈಸ್ ಬಾರ್ನ್!!". Archived from the original on 2004-04-08. Retrieved 2004-04-08.
- ↑ ೧೩.೦ ೧೩.೧ ಕಾರ್ಕಿಸ್, ಜಿಮ್. Archived 2010-02-02 ವೇಬ್ಯಾಕ್ ಮೆಷಿನ್ ನಲ್ಲಿ."ದಿ ಅನ್ಸೆನ್ಸಾರ್ಡ್ ಮೌಸ್". Archived 2010-02-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೧೪.೦ ೧೪.೧ ೧೪.೨ Charles Solomon. "The Golden Age of Mickey Mouse". Disney.com guest services.
- ↑ ವಾಲ್ಟ್ ಡಿಸ್ನಿ ಕಂಪೆನಿಯ ಕಾಲಗಣನೆ (1935)
- ↑ "GAC ಫೊರಮ್ಸ್ - ಪಾಪ್‌ಐಯ್‌ಸ್ ಪಾಪ್ಯುಲರಿಟಿ - ಆರ್ಟಿಕಲ್ ಫ್ರಮ್ 1935". Archived from the original on 2011-07-11. Retrieved 2010-07-01.
- ↑ ದಿ ಗೋಲ್ಡನ್ ಏಜ್ ಆಫ್ ಮಿಕ್ಕಿ ಮೌಸ್
- ↑ ಫ್ರೇ ಕಾರ್ಟೂನ್ ರಿವ್ಯೂಸ್ ಆಫ್ ಫ್ಯಾಂಟೆಸಿಯಾ
- ↑ Charles Solomon. "Mickey in the Post-War Era". Disney.com guest services.
- ↑ Craig Bellamy, Gordon Chisholm, Hilary Eriksen (17 February 2006). "Moomba: A festival for the people (pp 17-22)" (PDF). Archived from the original (PDF) on 25 ಆಗಸ್ಟ್ 2006. Retrieved 1 ಜುಲೈ 2010.
{{cite web}}
: CS1 maint: multiple names: authors list (link) - ↑ Craig Bellamy, Gordon Chisholm, Hilary Eriksen (17 February 2006). "Moomba: A festival for the people (pp 19-20)" (PDF). Archived from the original (PDF) on 25 ಆಗಸ್ಟ್ 2006. Retrieved 1 ಜುಲೈ 2010.
{{cite web}}
: CS1 maint: multiple names: authors list (link) - ↑ ಡಿಸ್ನಿ ಲೆಜೆಂಡ್ಸ್ - ವೇಯ್ನ್ ಆಲ್ವಿನ್
- ↑ ಡಿಸ್ನಿ ಆನ್ ಐಸ್ ಉತ್ಸವದಲ್ಲಿ ಕಾಣಿಸಿಕೊಂಡಿರುವ ರಾಜಕುಮಾರಿ ಟಿಯಾನಾ ಹಾಗೂ ಮಿಕ್ಕಿಯ ಹೊಸ ಧ್ವನಿ, ಬ್ರೆಟ್ ಇವಾನ್ - ದಿ ಲೇಟೆಸ್ಟ್ - LaughingPlace.com: ಡಿಸ್ನಿ ವರ್ಲ್ಡ್, ಡಿಸ್ನಿಲೆಂಡ್ ಅಂಡ್ ಮೋರ್
- ↑ ವೋಟ್ ಡ್ರೈವ್ಸ್ ಡಿಫೆಂಡೆಡ್, ಡಿಸ್ಪೈಟ್ ಫೇಕ್ ನೇಮ್ಸ್ - ಸೇಂಟ್ ಪೀಟರ್ಸ್‌ಬರ್ಗ್ ಟೈಮ್ಸ್
- ↑ "The ACORN investigations". October 16, 2008.
- ↑ "1983-84: ಗ್ರೋಯಿಂಗ್ ಪೇನ್ಸ್ ಲೀಡ್ ಟು ಪ್ರಾಮಿಸ್". Archived from the original on 2007-07-04. Retrieved 2010-07-01.
- ↑ script-o-rama.com
- ↑ "'Irresponsible' Hodge under fire". BBC News. January 14, 2003. Retrieved May 12, 2010.
- ↑ Holm, Peter. "The Cottage: Review". Music From The Movies. Archived from the original on 2008-08-12. Retrieved 2008-08-12.
- ↑ ರಿಚರ್ಡ್ ಫೊರ್ನೊ. ""ಮೈಕ್ರೊಸಾಫ್ಟ್", ನಂ. " Archived 2001-11-28 at the Library of Congressಮಿಕ್ಕಿಸಾಫ್ಟ್", ಯೆಸ್. Archived 2001-11-28 at the Library of Congress" 28 ನವೆಂಬರ್ 2001ರಂದು ಪ್ರಕಟಿಸಲಾಯಿತು; 7 ನವೆಂಬರ್ 2006ರಂದು ಪುನಃ ಪಡೆಯಲಾಯಿತು.
- ↑ "What does Mickey Mouse Have To Do With The European Parliament?". EU-Oplysnigen (Denmark). Archived from the original on 2008-05-07. Retrieved 2008-08-12.
- ↑ "ವರ್ಕಿಂಗ್ ಫಾರ್ ದಿ ಮೌಸ್". Archived from the original on 2010-09-04. Retrieved 2010-07-01.
- ↑ ವರ್ಕಿಂಗ್ ಫಾರ್ ದಿ ಮೌಸ್ - ಡಿಸ್ನಿ (ಅನಧಿಕೃತ) - Families.com
- ↑ "The Mickey Mouse Series". FanNation. May 30, 2009. Retrieved June 1, 2009.
- ↑ Ye Olden Days @ ಐ ಎಮ್ ಡಿ ಬಿ
- ↑ Steamboat Willie @ ಐ ಎಮ್ ಡಿ ಬಿ
- ↑ "ಮಿಕ್ಕಿಯ ಮೆಲರ್‌ಡ್ರಮ್ಮರ್ ಚಲನಚಿತ್ರ ಭಿತ್ತಿಪತ್ರ". Archived from the original on 2011-07-07. Retrieved 2010-07-01.
- ↑ "ಮಿಕ್ಕಿ ರೊಡೆಂಟ್!" (ಮ್ಯಾಡ್ #19)
- ↑ ದಿ ಸಿಂಪ್ಸನ್ಸ್ ಮೂವೀ (2007) - ಮೆಮೊರಬಲ್ ಕ್ವೋಟ್ಸ್. ದಿ ಇಂಟರ್ನೆಟ್ ಮೂವೀ ಡೇಟಾಬೇಸ್ (IMDb). 2 ಮಾರ್ಚ್ 2007ರಂದು ಮರುಸಂಪಾದಿಸಲಾಗಿದೆ. 2 ಮಾರ್ಚ್ 2007ರಂದು ಮರುಸಂಪಾದಿಸಲಾಗಿದೆ.
- ↑ PS 238 - ಪ್ರಕಟಣೆ 44, ಮೇ 2010
- ↑ ವರ್ಕರ್ಸ್ ಏಜ್ ಸಂಪುಟ. V #7 1 ಫೆಬ್ರವರಿ 1936
- ↑ Joseph Menn (2008-08-22). "Disney's rights to young Mickey Mouse may be wrong". Los Angeles Times.com. Retrieved 2008-08-22.
- ↑ ಡೇಕೇರ್ ಸೆಂಟರ್ ಮ್ಯುರಲ್ಸ್, Snopes.com
- ↑ Mann, Ron (1989). Comic Book Confidential. Sphinx Productions.
- ↑ Levin, Bob (2003). The Pirates and the Mouse: Disney's War Against the Counterculture. Fantagraphics Books. ISBN 156097530X.
- ↑ ಡಿ ಟೈಮ್ಸ್ (1930-7-14). "ಮಿಕ್ಕಿ ಮೌಸ್ ಇನ್ ಟ್ರಬಲ್ (ಜರ್ಮನ್ ಸೆನ್ಸಾರ್ಷಿಪ್)", ದಿ ಟೈಮ್ಸ್ ಆರ್ಕೈವ್ (archive.timesonline.co.uk) 19 ನವೆಂಬರ್ 2008ರಂದು ಸಂಕಲಿಸಲಾಯಿತು.
- ↑ Hungerford, Amy (January 15, 2003). The Holocaust of Texts. University Of Chicago Press. p. 206. ISBN 0226360768.
- ↑ LaCapra, Dominick (March 1998). History and Memory After Auschwitz. Cornell University Press. p. 214. ISBN 0801484960.
- ↑ Rosenthal, Jack (1992-08-02). "ON LANGUAGE; Mickey-Mousing". New York Times, The. Retrieved 2008-12-30.
- ↑ ಕಾನ್ನರ್, ಫ್ಲಾಯ್ಡ್. ಹಾಲಿವುಡ್'ಸ್ ಮೋಸ್ಟ್ ವಾಂಟೆಡ್: ದಿ ಟಾಪ್ 10 ಬುಕ್ ಆಫ್ ಲಕ್ಕಿ ಬ್ರೇಕ್ಸ್, ಪ್ರೈಮಾ ಡೊನ್ನಾಸ್, ಬಾಕ್ಸ್ ಆಫೀಸ್ ಬಾಂಬ್ಸ್ ಅಂಡ್ ಅದರ್ ಆಡಿಟೀಸ್. ಇಲುಸ್ಟ್ರೇಟೆಡ್. ಬ್ರಾಸೀ'ಸ್, 2002.(pg 243)
- ↑ ದಿ ಟೈಮ್ಸ್ (1938-11-16). "ದಿ ಬ್ಯಾನಿಂಗ್ ಆಫ್ ಅ ಮೌಸ್", ದಿ ಟೈಮ್ಸ್ ಆರ್ಕೈವ್ (archive.timesonline.co.uk) 19 ನವೆಂಬರ್ 2008ರಂದು ಸಂಕಲಿಸಲಾಯಿತು.
ಬಾಹ್ಯಕೊಂಡಿಗಳು
[ಬದಲಾಯಿಸಿ]- IMDb ವ್ಯಕ್ತಿ-ಪರಿಚಯ Archived 2017-07-25 ವೇಬ್ಯಾಕ್ ಮೆಷಿನ್ ನಲ್ಲಿ.
- ಟೂನೊಪೀಡಿಯಾ: ಮಿಕ್ಕಿ ಮೌಸ್
- ಮಿಕ್ಕಿ ಮೌಸ್‌ನ ಜಾಹೀರಾತು ಅಂತರಜಾಲತಾಣ
- ಡಿಸ್ನಿಯ ಮಿಕ್ಕಿ ಮೌಸ್ ಪಾತ್ರ ಜಾಲಪುಟ
- ಡಿಸ್ನಿಯ ಮಿಕ್ಕಿ ಮೌಸ್ ಪಾತ್ರ ಜಾಲಪುಟ Archived 2009-09-18 ವೇಬ್ಯಾಕ್ ಮೆಷಿನ್ ನಲ್ಲಿ. (Japanese)
- ವೇಯ್ನ್ ಆಲ್ವಿನ್ - ಡೈಲಿ ಟೆಲೆಗ್ರಾಫ್ ಮೃತಿಪ್ರಕಟಣೆ
- CS1 maint: location missing publisher
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: multiple names: authors list
- Webarchive template other archives
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from May 2007
- Articles with invalid date parameter in template
- Articles with unsourced statements from April 2010
- Commons link is locally defined
- ಮಿಕ್ಕಿ ಮೌಸ್
- ಮಿಕ್ಕಿ ಮೌಸ್ ಬ್ರಹ್ಮಾಂಡ ಪಾತ್ರಗಳು
- ಡಿಸ್ನಿ ಕಾಮಿಕ್ಸ್ ಪಾತ್ರಗಳು
- ಡಿಸ್ನಿ ಪ್ಯಾಕೇಜ್ ಚಲನಚಿತ್ರಗಳಲ್ಲಿ ಪಾತ್ರಗಳು
- ಸಾಂಸ್ಥಿಕ ಲಾಂಛನಗಳು
- ಕಾಲ್ಪನಿಕ ಹೆಗ್ಗಣಗಳು ಮತ್ತು ಇಲಿಗಳು
- ಆನಿಮೇಟೆಡ್ ಚಲನಚಿತ್ರ ಸರಣಿಗಳು
- ಕಿಂಗ್ಡಮ್ ಹಾರ್ಟ್ಸ್ ಪಾತ್ರಗಳು
- ಅಜ್ಞಾತ ಕಲ್ಪಿತನಾಮಗಳು
- ಕಾಲ್ಪನಿಕ ರಾಜಕುಮಾರರು