ವಿಷಯಕ್ಕೆ ಹೋಗು

ಮಾಸ್ತಿ ವೆಂಕಟೇಶ ಅಯ್ಯಂಗಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಾಸ್ತಿ ಶ್ರೀ ವೆಂಕಟೇಶ್ ಅಯ್ಯಂಗರ್ ಇಂದ ಪುನರ್ನಿರ್ದೇಶಿತ)
ಮಾಸ್ತಿ ವೆಂಕಟೇಶ ಅಯ್ಯಂಗಾರ್
(MASTI VENKATESHA IYENGAR)
ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್
ಜನನ(೧೮೯೧-೦೬-೦೬)೬ ಜೂನ್ ೧೮೯೧
ಹೊಂಗೆನಹಳ್ಳಿ, ಮಾಲೂರು, ಕೋಲಾರ, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ. (ಈಗಿನ ಕರ್ನಾಟಕ, ಭಾರತ)
ಮರಣ೬ ಜೂನ್ ೧೯೮೬
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿಜಿಲ್ಲಾಧಿಕಾರಿ, ಪ್ರೊಫೆಸರ್, ಲೇಖಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಾದಂಬರಿ
ವಿಷಯಕನ್ನಡ ಸಾಹಿತ್ಯ
ಸಾಹಿತ್ಯ ಚಳುವಳಿನವೋದಯ

ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ - ಜೂನ್ ೧೯೮೬)-ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಭಾರತದಲ್ಲಿ[] ನೀಡಲಾಗುವ ಅತ್ಯುನ್ನತ ಸಾಹಿತ್ಯಿಕ ಗೌರವವಾದ ಜ್ಞಾನಪೀಠ ಪ್ರಶಸ್ತಿ[] ಯನ್ನು ನೀಡಿ ಗೌರವಿಸಲ್ಪಟ್ಟ ಕನ್ನಡ ಲೇಖಕರಲ್ಲಿ ಇವರು ನಾಲ್ಕನೆಯವರಾಗಿದ್ದರು. ಇವರನ್ನು ಜನಪ್ರಿಯವಾಗಿ ಮಾಸ್ತಿ ಕನ್ನಡದ ಆಸ್ತಿ ಎಂದು ಕರೆಯಲಾಗುತ್ತಿತ್ತು ಅಂದರೆ "ಮಾಸ್ತಿ ಕನ್ನಡದ ಸಂಪತ್ತು" ಎಂದರ್ಥ. ಇವರು ಶ್ರೀನಿವಾಸ್ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು.[] ಇವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯುತ್ತಾರೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರಾಜಸೇವಾಸಕ್ತ ಎಂಬ ಬಿರುದು ನೀಡಿ ಗೌರವಿಸಿದ್ದರು.

ಬಾಲ್ಯ ಜೀವನ

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಂಗೇನಹಳ್ಳಿಯಲ್ಲಿ ತಮಿಳು ಮಾತನಾಡುವ ಶ್ರೀ ವೈಷ್ಣವ ಅಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ ಜೂನ್ ೬ ೧೮೯೧ ರಂದು ಜನಿಸಿದರು.[] ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಕಡು ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಆಂಗ್ಲ ಭಾಷೆಯಲ್ಲಿ ಎಂ.ಎ ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿಯವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು.[] ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು.[]

ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು. ಮೆಟ್ರಿಕ್ಯುಲೇಷನ್(೧೯೦೭), ಎಫ್.ಎ (೧೯೦೯), ಬಿ.ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು.[] ಸಣ್ಣಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಮಧ್ಯ ವಯಸ್ಸಿನಲ್ಲಿರುವಾಗ ಇರುವ ಚಿತ್ರ

ಸಾಹಿತ್ಯ

ಮಾಸ್ತಿಯವರು ಕನ್ನಡಿಗರಿಗೆ ಒಂದು ಆದರ್ಶವಾಗಿದ್ದರೆ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದ ರೀತಿ ಪ್ರತಿಯೊಬ್ಬರು ಕಲಿತುಕೊಳ್ಳಬೇಕಾಗಿರುವಂತದ್ದು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಮಾಸ್ತಿಯವರು ಆದರ್ಶರಾಗಿದ್ದರು. ೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ'[] ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩.[] ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ೨೦ನೆಯ ಶತಮಾನದ ಆರಂಭದ ಕಾಲದಲ್ಲಿ ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು.


ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. *ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. "ಸುಬ್ಬಣ್ಣ" ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದ ರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. "ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ.ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ. ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ". "ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥಮುಖ್ಯ ಕೃತಿಗಳು,

ನಿಧನ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ೧೯೮೬ ರಲ್ಲಿ ತಮ್ಮ ೯೫ ನೇ ಹುಟ್ಟುಹಬ್ಬದಂದು ನಿಧನರಾದರು.

ಸ್ಮರಣಾರ್ಥಗಳು

೧೯೯೩ ರಿಂದ ಅವರ ಹೆಸರಿನಲ್ಲಿ "ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ" ಎಂಬ ಪ್ರಶಸ್ತಿಯನ್ನು ಕರ್ನಾಟಕದ ಪ್ರಸಿದ್ಧ ಬರಹಗಾರರಿಗೆ ನೀಡಲಾಗುತ್ತಿದೆ.[] ಮಾಲೂರು ತಾಲ್ಲೂಕಿನ (ಕೋಲಾರ ಜಿಲ್ಲೆ) ಮಾಸ್ತಿ ಗ್ರಾಮದಲ್ಲಿರುವ ಅವರ ಮನೆಯನ್ನು ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ.[] ಕರ್ನಾಟಕ ಸರ್ಕಾರವು ಅದರ ಕಾರ್ಯ ನಿರ್ವಹಿಸುತ್ತಿದೆ.[][] ಮಾಸ್ತಿ ವಸತಿ ಶಾಲೆಯನ್ನು ೨೦೦೬-೦೭ ರಲ್ಲಿ ಅವರ ನೆನಪಿಗಾಗಿ ಹತ್ತಿರದ ಸ್ಥಳದಲ್ಲಿ ಪ್ರಾರಂಭಿಸಲಾಯಿತು.[]

ಗ್ರಂಥಸೂಚಿ

ಮಹಾಕಾವ್ಯಗಳು

  • ಶ್ರೀರಾಮ ಪಟ್ಟಾಭಿಷೇಕ (ಶ್ರೀರಾಮನ ಪಟ್ಟಾಭಿಷೇಕ)

ಸಣ್ಣ ಕಥೆ ಸಂಗ್ರಹ

  • ಸಣ್ಣಕತೆಗಳ(೫ ಪುಟಗಳು)
  • ರಂಗನ ಮದುವೆ
  • ಮಾತುಗಾರ ರಾಮ

ನೀಳ್ಗತೆ

ಕಾವ್ಯ ಸಂಕಲನಗಳು

ಜೀವನ ಚರಿತ್ರೆ

ಪ್ರಬಂಧ

ನಾಟಕ

  • ಶಾಂತಾ, ಸಾವಿತ್ರಿ, ಉಷಾ (೧೯೨೩)
  • ತಾಳೀಕೋಟೆ(೧೯೨೯)
  • ಶಿವಛತ್ರಪತಿ(೧೯೩೨)
  • ಯಶೋಧರಾ(೧೯೩೩)
  • ಕಾಕನಕೋಟೆ(೧೯೩೮)
  • ಲಿಯರ್ ಮಾಹಾರಾಜ
  • ಚಂಡಮಾರುತ, ದ್ವಾದಶರಾತ್ರಿ
  • ಹ್ಯಾಮ್ಲೆಟ್
  • ಶೇಕ್ಸ್ ಪಿಯರ್ ದೃಶ್ಯಗಳು ೧,೨,೩
  • ಪುರಂದರದಾಸ
  • ಕನಕಣ್ಣ
  • ಕಾಳಿದಾಸ
  • ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್
  • ಬಾನುಲಿ ದೃಶ್ಯಗಳು

ಕಾದಂಬರಿ

ಪ್ರಶಸ್ತಿಗಳು

ಗೌರವಗಳು

ಉಲ್ಲೇಖಗಳು

  1. "Jnanapeeth Awards". Ekavi. Archived from the original on 27 ಏಪ್ರಿಲ್ 2006. Retrieved 31 ಅಕ್ಟೋಬರ್ 2006.
  2. "Jnanapeeth Awards". Ekavi. Archived from the original on 27 ಏಪ್ರಿಲ್ 2006. Retrieved 31 ಅಕ್ಟೋಬರ್ 2006.
  3. ೩.೦ ೩.೧ ೩.೨ "Man of letters". The Hindu. 1 October 2010. Retrieved 3 October 2013.
  4. Iyengar, Masti Venkatesha; Sharma, Ramachandra (August 2019). Masti (in ಇಂಗ್ಲಿಷ್). Katha. ISBN 978-81-87649-50-2.
  5. ೫.೦ ೫.೧ ೫.೨ Ramachandra Sharama Ed., Masti Venkatesha Iyengar (2004). Masti. New Delhi: Katha. ISBN 9788187649502.
  6. ೬.೦ ೬.೧ "Masti Venkatesh Iyengar Award presented to Nisar Ahmed". The Hindu. 26 June 2006. Retrieved 3 October 2013.
  7. ೭.೦ ೭.೧ "Jnanpith writer Masti's house made into a library". Deccan Herald. 16 October 2011. Retrieved 3 October 2013.
  8. "Masti school bereft of building, staff". Deccan Herald. 28 May 2010. Retrieved 3 October 2013.