ಜಿ.ಪಿ.ರಾಜರತ್ನಂ
ಜಿ.ಪಿ.ರಾಜರತ್ನಂ | |
---|---|
ಜನನ | 5 ಡಿಸೇಂಬರ್ 1909 closepete (Ramanagara) , Ramanagara, Karnataka, India |
ಮರಣ | 1979 (aged 70) |
ಕಾವ್ಯನಾಮ | Bhramara |
ವೃತ್ತಿ | ಕತೆಗಾರ, ಗೀತರಚನೆ, ಬರಹಗಾರ, ಕವಿ, ನುಡಿಮಾರ್ಪುಗಾರ, ಸಂಪಾದಕ |
ಭಾಷೆ | ಕನ್ನಡ, ಪಾಲಿ, ಪ್ರಾಕೃತ, ಇಂಗ್ಲಿಷ್ |
ರಾಷ್ಟ್ರೀಯತೆ | Indian |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | Master of Arts |
ಪ್ರಕಾರ/ಶೈಲಿ | Children's literature, Biography criticism, interpretation, fiction, prayers and devotions, poetry |
ಪ್ರಮುಖ ಕೆಲಸ(ಗಳು) | ರತ್ನನ ಪದಗಳು, ನಾಗನ ಪದಗಳು |
ಬಾಳ ಸಂಗಾತಿ | ಲಲಿತಮ್ಮ, ಸೀತಮ್ಮ |
ಸಂಬಂಧಿಗಳು | Sridhar (son)Shaila Sridhar Rajarathnam (daughter-in-law)Srimathi Sampathkumar (daughter) and Srilata Vijayakumar (daughter)[೧] |
ಬಾಲ್ಯ
[ಬದಲಾಯಿಸಿ]'ಜಿ. ಪಿ. ರಾಜರತ್ನಂ'(೧೯೦೯-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ "ನಾಗಪಟ್ಟಣ"ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೯ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್.. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶುಗೀತೆ ಸಂಕಲನ '. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.
ಮಡದಿಯ ಸಾವಿನಿಂದ ಧೃತಿಗೆಟ್ಟರು
[ಬದಲಾಯಿಸಿ]ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
[ಬದಲಾಯಿಸಿ]- ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು.
- ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು.
- ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
- ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.
- ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು.
- ೧೯೭೮ರಲ್ಲಿ 'ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ',
- ೧೯೭೮ ರಲ್ಲಿ ಮಡಿಕೇರಿಯ 50ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
- ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ.
ಕಾವ್ಯನಾಮ
[ಬದಲಾಯಿಸಿ]"ಭ್ರಮರ" ಎಂಬುದು ಇವರ ಕಾವ್ಯನಾಮವಾಗಿತ್ತು.
ಕೃತಿಗಳು
[ಬದಲಾಯಿಸಿ]—G.P. Rajaratnam, on his love of singing in mother tongue, as quoted in The Hindu[೨]
ಪುಸ್ತಕ | ವರ್ಷ | ಪ್ರಕಾಶಕರು | Ref |
---|---|---|---|
ಸೂರ್ಯಮಿತ್ರ ಮೊದಲಾದ ಜೈನರ ಕಥೆಗಳು
(ಅರ್ಥ: ಸೂರ್ಯಮಿತ್ರ ಮತ್ತು ಇತರ ಜೈನರ ಕಥೆಗಳು) |
1975 | ಸಪ್ನಾ ಬುಕ್ ಹೌಸ್,
ಬೆಂಗಳೂರು |
[೩] |
ಹತ್ತು ವರುಷ
(ಅರ್ಥ: ಹತ್ತು ವರ್ಷಗಳು) |
1939 | ಮನೋಹರ ಗ್ರಂಥ ಪ್ರಕಾಶನ ಸಮಿತಿ
ಧಾರವಾಡ |
[೪] |
ನಮ್ಮ ಒಡೆಯರ ಕಥೆಗಳು
(ಅರ್ಥ: ನಮ್ಮ ರಾಜರ ಕಥೆಗಳು) |
1974 | ಸ್ಟಾಂಡರ್ಡ ಪುಸ್ತಕ ಡಿಪೋ
ಬೆಂಗಳೂರು |
[೫] |
ಚಕ್ರವರ್ತಿ ವಜ್ರ
(ಅರ್ಥ: ಚಕ್ರವರ್ತಿಯ ವಜ್ರ) |
1974 | ಶ್ರೀ ರಾಜರತ್ನಂ ಬಳಗ,
ಬೆಂಗಳೂರು |
[೬] |
ನಾಗನ ಪದಗಳು | 1952 | ಕರ್ಣಾಟಕ ಸಂಘ,
ಬೆಂಗಳೂರು |
[೭] |
ರತ್ನನ ಪದಗಳು | 1945 | ಸತ್ಯಶೋಧನ ಪ್ರಕಾಶನ ಮಂದಿರ,
ಬೆಂಗಳೂರು |
[೮] |
Śānti (Meaning: Female saint) |
1934 | Rāma Mōhana Kampeni, Bengaluru |
[೯] |
Śrīmān Ḍi. Vi. Ji. avaru citrisiruva Śrī Rāmacandra Prabhu (Meaning: Sri Ramachandra Prabhu as pictured by D. V. Gundappa (DVG)) |
1977 | Videha, Bengaluru |
[೧೦] |
Hanigaḷu (Meaning: Drops) |
1933 | Karṇāṭaka Saṅgha, Śivamogga |
[೧೧] |
Kailāsaṃ nenapu mattu Kailāsa kathana (Meaning: Kailasam memories and kailasa stories) |
1948 | Ji. Pi. Rājaratnaṃ, Bengaluru |
[೧೨] |
Mahākavi puruṣa Sarasvati (Meaning: Great poet Sarasvathi) |
1940 | Satyaśōdhana Prakaṭaṇa Mandira ivaru idannu māruvaru, Bengaluru |
[೧೩] |
Svatantrabhāratada Aśōkacakra dhvaja (Meaning: Independent India's Ashoka Chakra flag) |
1948 | Hind Kitābs, Bombāyi |
[೧೪] |
Śrī Harṣa | 1936 | Satyaśōdhana Prakaṭana Mandira, Bengaluru |
[೧೫] |
Nanna Jainamatadharmasāhityasēve (Meaning: My literature work on Jain religion) |
1994 | Śākya Sāhitya Maṇṭapa, Bengaluru |
[೧೬] |
Gautama Buddha | 1936 | Satyaśōdhana Prakaṭana Mandira, Bengaluru |
[೧೭] |
Yēsu Krista (Meaning: Jesus Christ) |
1941 | Bi. Bi. Ḍi. Pavar Pres, Bengaluru |
[೧೮] |
Gaṇḍugoḍali mattu Sambhavāmi yugē yugē |
1968 | -NA- | [೧೯] |
Narakada nyāya modalāda nālku nāṭakagaḷu (Meaning: Justice of hell and four other dramas) |
2008 | Sapna book house, Bengaluru |
[೨೦] |
Vīramārtaṇḍa Cāvuṇḍarāya |
1974 | Śākya Sāhitya Maṇṭapa, Bengaluru |
[೨೧] |
Pampabhārata sāra emba Pampana Vikramārjuna vijaya saṅgrahada Hosagannaḍa gadyānuvāda (Meaning: Pampa's Vikramarjuna vijaya collection's prose translation called Pampabharatha's essence) |
1948 | Hind Kitābs, Bombāyi |
[೨೨] |
Ratnana dōsti ratna, atava, Bēvārsiya barāvu (Meaning: Ratna's friend ratna (gem) or orphan's sweat) |
1934 | Rāma Mōhana Kampeni, Bengaluru |
[೨೩] |
Dharma, sāhitya, dr̥ṣṭi (Meaning: Religion, literature, view) |
1937 | Śākya Sāhitya Maṇṭapa, Bengaluru |
[೨೪] |
Sarvadēvanamaskāra (Meaning: Salutations to all gods) |
1970 | -NA- | [೨೫] |
Saṃsa kaviya Vigaḍa Vikrama carita (Meaning: Samsa's sarcastic courage epic) |
1948 | Mārāṭagāraru Satyaśōdhana Pustaka Bhaṇḍāra in Beṇgaḷūru |
[೨೬] |
Vicārataraṅga (Meaning: Creepy shape wave) |
1967 | -NA- | [೨೭] |
Rannana rasaghaṭṭa emba Rannana Gadāyuddha kāvya saṅgrahada hosagannada gadyānuvāda (Meaning: Ranna’s Gadhayuddha poetry collection (in new-kannada) prose translation called, Ranna's juicy time) |
1948 | Hind Kitābs, Bombāyi |
[೨೮] |
Dharmadāni Buddha (Meaning: Religion donator Buddha) |
1933 | Rāma Mōhana Kampeni, Beṇgaḷūru |
[೨೯] |
Cuṭaka | 1940 | Prōgres Buk Sṭāl, Maisūru |
.[೩೦] |
Vicāra raśmi (Meaning: Creepy shaped rays) |
1985 | Śākya Sāhitya Maṇṭapa, Beṅgaḷūru |
[೩೧] |
Śrī Sāyicintana (Meaning: Sathya Sai Baba thoughts) |
1969 | Vidēha, Beṅgaḷūru |
[೩೨] |
Svārasya (Meaning: Interesting) |
1993 | Śākya Sāhitya Maṇṭapa, Beṅgaḷūru |
[೩೩] |
Kailāsa kathana, athavā, Guṇḍū bhaṇḍāra mathana (Meaning: Kailasa story or Gundu repository thinking) |
1945 | Bi. Bi. Ḍi. Pavar Pres, Beṅgaḷūru |
[೩೪] |
Śr̥ṅgāravallari (Meaning: Decorated Vallari) |
1973 | -NA- | [೩೫] |
Namma nagegāraru (Meaning: Our comedians) |
-NA- | Satyaśōdhana Prakaṭana Mandira, Bengaluru |
[೩೬] |
Mātina malli (Meaning: Lady speech expert) |
1951 | Ānand Bradars, Bengaluru |
[೩೭] |
Śri Kailāsam avara Ēkalavya (Meaning: Kailasam's novel Ekalavya) |
1969 | -NA- | [೩೮] |
Kariya kambaḷi mattu itara kategaḷu (Meaning: Black blanket and other stories) |
1951 | Ānand Bradars, Bengaluru |
[೩೯] |
Apakathā vallari | 1939 | Satyaśōdhana Prakaṭana Mandira, Bengaluru |
[೪೦] |
Kavi Gōvinda Pai (Meaning: Poet Govinda Pai) |
1949 | Jīvana Kāryālaya, Bengaluru |
[೪೧] |
Boppaṇa Paṇḍita racisiruva Gommaṭajinastuti (Meaning: Boppaṇa Paṇḍita structured Gommaṭa Jain praise) |
1974 | s.n.,Bengaluru | [೪೨] |
Tuttūri (Meaning: Trumpet) |
1940 | Prōgres Buk Sṭāl Maisūru |
[೪೩] |
Nanna Śrīvaiṣṇava kaiṅkarya (Meaning: My Vaishnava infrastructure) |
1971 | -NA- | [೪೪] |
Kandana kāvyamāle (Meaning: Baby's poem garland) |
2008 | Sapna book house, Bengaluru |
[೪೫] |
Kannaḍada sētuve (Meaning: Kannada's bridge) |
1971 | Videha, Bengaluru |
[೪೬] |
Nanna nenapina bīru (Meaning: My memories cupboard) |
1998 | Kannaḍa Saṅgha, Bengaluru |
[೪೭] |
Cīnādēśada Bauddha yātrikaru |
1932 | Kannaḍa Saṅgha, Bengaluru |
[೪೮] |
Nītiratnakaraṇḍa | 1971 | -NA- | [೪೯] |
Nūru puṭāṇi (Meaning: 100 child) |
1940 | Bi. Bi. Ḍi. Pavar Pres, Bengaluru |
[೫೦] |
Snēhada dīpa (Meaning: Friendship's lamp) |
1972 | -NA- | [೫೧] |
Śrī Bāhubali vijayaṃ (Meaning: Baahubali's triumph) |
1953 | Gōkhale Sārvajanika Vicārasaṃstheya Vyāsaṅga Gōnsṭhi,Beṅgaḷūru |
[೫೨] |
Citrāṅgadā citrakūṭa | 1949 | -NA- | [೫೩] |
Kallina kāmaṇṇa (Meaning: Stone's kamanna ) |
1952 | Ānand Bradars, Bengaluru |
[೫೪] |
Kallusakkare (Meaning: Sugarstones) |
1935 | Satyaśōdhana Prakaṭana Mandira, Bengaluru |
[೫೫] |
Buddhana kālada tīrthakarū tīrthakararū (Meaning: Buddha era's monks) |
1937 | Śākya Sāhitya Maṇṭapa, Bengaluru |
[೫೬] |
Nūru varṣaṣagaḷa accumeccu (Meaning: 100 years’ favourite) |
1971 | -NA- | [೫೭] |
Śrī Gōmaṭēśvara (Meaning: Gommateshwara) |
1938 | Śākya Sāhitya Maṇṭapa, Bengaluru |
[೫೮] |
Nakkaḷā tāyi (Meaning: Smiled that mother) |
1944 | Manōhara Grantha Prakāśana Samiti Dhāravāḍa |
[೫೯] |
Śakārana śārōṭu mattu itara dr̥śyagaḷu (Meaning: Sankara's carriage and other views) |
1943 | Kannaḍa Saṅgha, Bengaluru |
[೬೦] |
Japānina Himagiri mattu itara kavanagaḷu (Meaning: Japan’s mist mountains and other poems) |
1971 | -NA- | [೬೧] |
- ತುತ್ತೂರಿ
- ರತ್ನನ ಪದಗಳು
- ಎಂಡಕುಡುಕ ರತ್ನ
- ನಾಗನ ಪದಗಳು
- ಬುದ್ಧನ ಜಾತಕಗಳು
- ಧರ್ಮದಾನಿ ಬುದ್ಧ
- ಭಗವಾನ್ ಮಹಾವೀರ
- ಮಹಾವೀರನ ಮಾತುಕತೆ
- ಕಡಲೆಪುರಿ
- ಗುಲಗಂಜಿ
- ಕಂದನ ಕಾವ್ಯ ಮಾಲೆ
ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ.ಪಿ.ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. [೬೨]
ಹೆಚ್ಚಿಗೆ ಓದಲು
[ಬದಲಾಯಿಸಿ]ಕೆಲವು ಪದ್ಯದ ಸಾಲುಗಳು
[ಬದಲಾಯಿಸಿ]ಮಕ್ಕಳ ಕವನ
[ಬದಲಾಯಿಸಿ]ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು..
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು.
ಕನ್ನಡ ಪದಗೊಳ್ bharatha
[ಬದಲಾಯಿಸಿ]ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!
ಬಗವಂತ ಏನ್ರ ಬೂಮೀಗ್ ಇಳಿದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು
ಬಕ್ತನ್ ಮೇಲ್ ಔನ್ ಕಣ್ಣು!
--@--
ರತ್ನನ್ ಪರ್ಪಂಚ
[ಬದಲಾಯಿಸಿ]ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಭೂಮ್ತಾಯಿ ಮಂಚ
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ
---. ---
ಬಾಹ್ಯಸಂಪರ್ಕಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "25 works of children's writer G.P. Rajarathnam released". thehindu.com. Archived from the original on 9 ಜೂನ್ 2018.
- ↑ "Kriyative theatre to present Ratnan Parpancha". thehindu.com. 11 ಅಕ್ಟೋಬರ್ 2014. Archived from the original on 9 ಜೂನ್ 2018.
- ↑ Sūryamitra modalāda Jainara kategaḷu. OL 23615601M.
- ↑ Hattu varuṣa. OL 331132M.
- ↑ Namma Oḍeyara kathegaḷu. OL 14384195M.
- ↑ Cakravarti vajra. OL 15000742M.
- ↑ Nāgana padagaḷu. OL 329356M.
- ↑ "Ratnana padagaḷu". openlibrary.org. Archived from the original on 11 ಮಾರ್ಚ್ 2018.
- ↑ Śānti. OL 513271M.
- ↑ Śrīmān Ḍi. Vi. Ji. avaru citrisiruva Śrī Rāmacandra Prabhu. OL 14384438M.
- ↑ Hanigaḷu. OL 328170M.
- ↑ Kailāsaṃ nenapu mattu Kailāsa kathana. OL 331269M.
- ↑ Mahākavi puruṣa Sarasvati. OL 331311M.
- ↑ "Svatantrabhāratada Aśōkacakra dhvaja". openlibrary.org. Archived from the original on 11 ಮಾರ್ಚ್ 2018.
- ↑ "Śrī Harṣa". openlibrary.org. Archived from the original on 11 ಮಾರ್ಚ್ 2018.
- ↑ "Nanna Jainamatadharmasāhityasēve". openlibrary.org. Archived from the original on 11 ಮಾರ್ಚ್ 2018.
- ↑ "Gautama Buddha". openlibrary.org. Archived from the original on 11 ಮಾರ್ಚ್ 2018.
- ↑ "Yēsu Krista". openlibrary.org. Archived from the original on 11 ಮಾರ್ಚ್ 2018.
- ↑ "Gaṇḍugoḍali mattu Sambhavāmi yugē yugē". openlibrary.org. Archived from the original on 9 ಜೂನ್ 2018.
- ↑ "Narakada nyāya modalāda nālku nāṭakagaḷu". openlibrary.org. Archived from the original on 11 ಮಾರ್ಚ್ 2018.
- ↑ "Vīramārtaṇḍa Cāvuṇḍarāya". openlibrary.org. Archived from the original on 11 ಮಾರ್ಚ್ 2018.
- ↑ "Pampabhārata sāra emba Pampana Vikramārjuna vijaya saṅgrahada Hosagannaḍa gadyānuvāda". openlibrary.org. Archived from the original on 11 ಮಾರ್ಚ್ 2018.
- ↑ "Ratnana dōsti ratna, atava, Bēvārsiya barāvu". openlibrary.org. Archived from the original on 12 ಮಾರ್ಚ್ 2018.
- ↑ "Dharma, sāhitya, dr̥ṣṭi". openlibrary.org. Archived from the original on 12 ಮಾರ್ಚ್ 2018.
- ↑ "Sarvadēvanamaskāra". openlibrary.org. Archived from the original on 12 ಮಾರ್ಚ್ 2018.
- ↑ "Saṃsa kaviya Vigaḍa Vikrama carita". openlibrary.org. Archived from the original on 12 ಮಾರ್ಚ್ 2018.
- ↑ "Vicārataraṅga". openlibrary.org. Archived from the original on 12 ಮಾರ್ಚ್ 2018.
- ↑ "Rannana rasaghaṭṭa emba Rannana Gadāyuddha kāvya saṅgrahada hosagannada gadyānuvāda". openlibrary.org. Archived from the original on 12 ಮಾರ್ಚ್ 2018.
- ↑ "Dharmadāni Buddha". openlibrary.org. Archived from the original on 12 ಮಾರ್ಚ್ 2018.
- ↑ "Cuṭaka". openlibrary.org. Archived from the original on 12 ಮಾರ್ಚ್ 2018.
- ↑ "Vicāra raśmi". openlibrary.org. Archived from the original on 12 ಮಾರ್ಚ್ 2018.
- ↑ "Śrī Sāyicintana". openlibrary.org. Archived from the original on 12 ಮಾರ್ಚ್ 2018.
- ↑ "Svārasya". openlibrary.org. Archived from the original on 12 ಮಾರ್ಚ್ 2018.
- ↑ "Kailāsa kathana, athavā, Guṇḍū bhaṇḍāra mathana". openlibrary.org. Archived from the original on 12 ಮಾರ್ಚ್ 2018.
- ↑ "Śr̥ṅgāravallari". openlibrary.org. Archived from the original on 12 ಮಾರ್ಚ್ 2018.
- ↑ "Namma nagegāraru". openlibrary.org. Archived from the original on 12 ಮಾರ್ಚ್ 2018.
- ↑ "Mātina malli". openlibrary.org. Archived from the original on 12 ಮಾರ್ಚ್ 2018.
- ↑ "Śri Kailāsam avara Ēkalavya". openlibrary.org. Archived from the original on 12 ಮಾರ್ಚ್ 2018.
- ↑ "Kariya kambaḷi mattu itara kategaḷu". openlibrary.org. Archived from the original on 12 ಮಾರ್ಚ್ 2018.
- ↑ "Apakathā vallari". openlibrary.org. Archived from the original on 12 ಮಾರ್ಚ್ 2018.
- ↑ "Kavi Gōvinda Pai". openlibrary.org. Archived from the original on 12 ಮಾರ್ಚ್ 2018.
- ↑ "Boppaṇa Paṇḍita racisiruva Gommaṭajinastuti". openlibrary.org. Archived from the original on 12 ಮಾರ್ಚ್ 2018.
- ↑ "Tuttūri". openlibrary.org. Archived from the original on 12 ಮಾರ್ಚ್ 2018.
- ↑ "Nanna Śrīvaiṣṇava kaiṅkarya". openlibrary.org. Archived from the original on 12 ಮಾರ್ಚ್ 2018.
- ↑ "Kandana kāvyamāle". openlibrary.org. Archived from the original on 12 ಮಾರ್ಚ್ 2018.
- ↑ "Kannaḍada sētuve". openlibrary.org. Archived from the original on 12 ಮಾರ್ಚ್ 2018.
- ↑ "Nanna nenapina bīru". openlibrary.org. Archived from the original on 12 ಮಾರ್ಚ್ 2018.
- ↑ "Cīnādēśada Bauddha yātrikaru". openlibrary.org. Archived from the original on 12 ಮಾರ್ಚ್ 2018.
- ↑ "Nītiratnakaraṇḍa". openlibrary.org. Archived from the original on 12 ಮಾರ್ಚ್ 2018.
- ↑ "Nūru puṭāṇi". openlibrary.org. Archived from the original on 12 ಮಾರ್ಚ್ 2018.
- ↑ "Snēhada dīpa". openlibrary.org. Archived from the original on 13 ಮಾರ್ಚ್ 2018.
- ↑ "Śrī Bāhubali vijayaṃ". openlibrary.org. Archived from the original on 9 ಜೂನ್ 2018.
- ↑ "Citrāṅgadā citrakūṭa". openlibrary.org. Archived from the original on 14 ಮಾರ್ಚ್ 2018.
- ↑ "Kallina kāmaṇṇa". openlibrary.org. Archived from the original on 12 ಮಾರ್ಚ್ 2018.
- ↑ "Kallusakkare". openlibrary.org. Archived from the original on 13 ಮಾರ್ಚ್ 2018.
- ↑ "Buddhana kālada tīrthakarū tīrthakararū". openlibrary.org.
- ↑ "Nūru varṣaṣagaḷa accumeccu". openlibrary.org. Archived from the original on 13 ಮಾರ್ಚ್ 2018.
- ↑ "Śrī Gōmaṭēśvara". openlibrary.org. Archived from the original on 13 ಮಾರ್ಚ್ 2018.
- ↑ "Nakkaḷā tāyi". openlibrary.org. Archived from the original on 12 ಮಾರ್ಚ್ 2018.
- ↑ "Śakārana śārōṭu mattu itara dr̥śyagaḷu". openlibrary.org. Archived from the original on 12 ಮಾರ್ಚ್ 2018.
- ↑ "Japānina Himagiri mattu itara kavanagaḷu". openlibrary.org. Archived from the original on 13 ಮಾರ್ಚ್ 2018.
- ↑ ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....