ವಿಷಯಕ್ಕೆ ಹೋಗು

ಭಾರತಿ ಶಿವಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತಿ ಶಿವಾಜಿ
Born೧೯೪೮
ಕುಂಭಕೋಣಂ, ತಂಜಾವೂರು ಜಿಲ್ಲೆ, ತಮಿಳುನಾಡು, ಭಾರತ
Occupationಶಾಸ್ತ್ರೀಯ ನೃತ್ಯಗಾರ್ತಿ
Known forಮೋಹಿನಿಯಾಟ್ಟಂ
Awardsಪದ್ಮಶ್ರೀ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ಲಾಸ್ಯ ಲಕ್ಶ್ಮಿ
ಸಾಹಿತ್ಯ ಕಲಾ ಪರಿಷತ್ತು ಸಮ್ಮಾನ್
ನೃತ್ಯ ಚೂಡಮಣಿ

ಭಾರತಿ ಶಿವಾಜಿಯವರು ಮೋಹಿನಿಯಾಟ್ಟಂನ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, [] ನೃತ್ಯ ಸಂಯೋಜಕಿ ಮತ್ತು ಲೇಖಕಿ. ಇವರು ಪ್ರದರ್ಶನ, ಸಂಶೋಧನೆ ಮತ್ತು ಪ್ರಚಾರದ ಮೂಲಕ ಕಲಾ ಪ್ರಕಾರಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. [] ಇವರು ಮೋಹಿನಿಯಾಟ್ಟಂ [] ಅನ್ನು ಉತ್ತೇಜಿಸುವ ನೃತ್ಯ ಅಕಾಡೆಮಿಯಾದ ಸೆಂಟರ್ ಫಾರ್ ಮೋಹಿನಿಯಾಟ್ಟಂನ ಸಂಸ್ಥಾಪಕಿ ಮತ್ತು ಆರ್ಟ್ ಆಫ್ ಮೋಹಿನಿಯಾಟ್ಟಂ [] ಮತ್ತು ಮೋಹಿನಿಯಾಟ್ಟಂ ಎಂಬ ಎರಡು ಪುಸ್ತಕಗಳ ಸಹ ಲೇಖಕಿಯಗಿದ್ದಾರೆ. [] ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ [] ಮತ್ತು ಸಾಹಿತ್ಯ ಕಲಾ ಪರಿಷತ್ ಸಮ್ಮಾನ್‌ಗೆ ಭಾಜನರಾಗಿದ್ದಾರೆ. [] ಭಾರತಿ ಶಿವಾಜಿಯವರು ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ೨೦೦೪ ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಯನ್ನು ನೀಡಿ ಗೌರವಿಸಿತು. []

ಜೀವನಚರಿತ್ರೆ

[ಬದಲಾಯಿಸಿ]

  ಭಾರತಿ ಶಿವಾಜಿಯವರು ೧೯೪೮ ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನ ದೇವಾಲಯ ಪಟ್ಟಣದಲ್ಲಿ ಜನಿಸಿದರು.[] ಲಲಿತಾ ಶಾಸ್ತ್ರಿ ಅವರಲ್ಲಿ ಭರತನಾಟ್ಯದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು [೧೦] ಮತ್ತು ಕೇಲುಚರಣ್ ಮೊಹಾಪಾತ್ರ ಅವರ ಅಡಿಯಲ್ಲಿ ಒಡಿಸ್ಸಿ ಕಲಿತರು . [೧೧] ನಂತರ, ಪ್ರಸಿದ್ಧ ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಸಲಹೆಯ ಮೇರೆಗೆ, ಅವರು ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಮೋಹಿನಿಯಾಟ್ಟಂ ಕುರಿತು ಸಂಶೋಧನೆಯನ್ನು ಕೈಗೊಂಡರು. [] ಸಂಗೀತ ನಾಟಕ ಅಕಾಡೆಮಿಯಿಂದ ಸಂಶೋಧನಾ ಫೆಲೋಶಿಪ್ ಪಡೆದ ನಂತರ, ಅವರು ಕೇರಳಕ್ಕೆ ಪ್ರಯಾಣ ಬೆಳೆಸಿದರು. ಕೇರಳದ ಟೆಂಪಲ್ ಆರ್ಟ್ಸ್‌ನ ವಿದ್ವಾಂಸರು ಮತ್ತು ಸಂಗೀತ ನಾಟಕ ಅಕಾಡೆಮಿಯ ಮಾಜಿ ಉಪಾಧ್ಯಕ್ಷರಾದ ಕಾವಲಂ ನಾರಾಯಣ ಪಣಿಕ್ಕರ್ ಅವರ ಅಡಿಯಲ್ಲಿ ಸಂಶೋಧನೆ ನಡೆಸಿದರು. [೧೨] ಭರತನಾಟ್ಯಂ ಮತ್ತು ಒಡಿಸ್ಸಿಯಿಂದ ತಮ್ಮ ಗಮನವನ್ನು ಬದಲಾಯಿಸುತ್ತಾ, [೧೦] ಅವರು ರಾಧಾ ಮಾರಾರ್ ಅವರ ಅಡಿಯಲ್ಲಿ ಮೋಹಿನಿಯಾಟ್ಟಂ ತರಬೇತಿಯನ್ನು ಪ್ರಾರಂಭಿಸಿದರು. ತದ ನಂತರ ಕಲಾಮಂಡಲಂ ಸತ್ಯಭಾಮಾ ಅವರ ಅಡಿಯಲ್ಲಿ ತರಬೇತಿ ಪಡೆದರು ಮತ್ತು ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಅವರಲ್ಲಿ ತರಬೇತಿಯನ್ನು ಪಡೆದರು. [] ಅನೇಕರು ಭಾರತಿ ಶಿವಾಜಿಯವರನ್ನು ಮೋಹಿನಿಯಾಟ್ಟಂನ ತಾಯಿ ಎಂದು ಪರಿಗಣಿಸುತ್ತಾರೆ. [೧೩]

ಪರಂಪರೆ

[ಬದಲಾಯಿಸಿ]

ನವದೆಹಲಿಗೆ ತೆರಳಿದ ಭಾರತಿ ಶಿವಾಜಿಯವರು ನೃತ್ಯ ಅಕಾಡೆಮಿ, ಸೆಂಟರ್ ಫಾರ್ ಮೋಹಿನಿಯಾಟ್ಟಂ ಅನ್ನು ಸ್ಥಾಪಿಸಿದರು. ಇದು ನೃತ್ಯ ಪ್ರಕಾರವನ್ನು ಉತ್ತೇಜಿಸಲು ಮೀಸಲಾದ ಸಂಸ್ಥೆಯಾಗಿದೆ. [] [೧೦] ಅವರು ಬ್ಯಾಲೆಯಂತಹ ಇತರ ನೃತ್ಯ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೃತ್ಯ ಸಂಪ್ರದಾಯದ ವಿಕಾಸಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಭಾರತಿ ಶಿವಾಜಿಯವರ ಮೋಹಿನಿಯಾಟ್ಟಂ ಅಳವಡಿಕೆಯ ಸ್ವಾನ್ ಲೇಕ್ ಆಫ್ ಟ್ಚೈಕೋವ್ಸ್ಕಿ, ಅವರ ಮಗಳಾದ ವಿಜಯಲಕ್ಷ್ಮಿ ಜೊತೆಗಿನ ನೃತ್ಯ ಸಂಯೋಜನೆಯಾಗಿದೆ.[೧೪] ಅವರ ನಿರ್ಮಾಣಗಳಲ್ಲಿ ರವೀಂದ್ರನಾಥ ಟ್ಯಾಗೋರರ ಭಾನುಸಿಂಗರ್ ಪಡಾವಳಿ, [೧೫] ಮಣಿಪ್ರವಾಳದ ಚಂದ್ರೋತ್ಸವ, ಋಗ್ವೇದದಿಂದ ಸೋಮಸ್ತುತಿ ಮತ್ತು ಅಷ್ಟಪದಿಯಿಂದ ದೇವಗೀತದ ರೂಪಾಂತರಗಳು ಒಳಗೊಂಡಿದೆ. [] ಅವರು ಕೇರಳದ ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಒಟ್ಟಂತುಲ್ಲಾಲ್, ಕೈಕೊಟ್ಟಿಕಲಿ, ತಾಯಂಬಕ ಮತ್ತು ಕೃಷ್ಣನಟ್ಟಂಗಳಿಂದ ಭಂಗಿಗಳು, ಚಲನೆಗಳು ಮತ್ತು ಸಂಗೀತವನ್ನು ಮೋಹಿನಿಯಾಟ್ಟಂನಲ್ಲಿ ಸಂಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಕಾವಳಂ ನಾರಾಯಣ ಪಣಿಕ್ಕರ್ ಅವರ ಶಿಕ್ಷಣದಿಂದ ಬಂದ ಪರಂಪರೆಯಾಗಿದೆ. [೧೬]

೧೯೮೬ ರಲ್ಲಿ, ಭಾರತಿ ಶಿವಾಜಿಯವರು ತಮ್ಮ ಮೊದಲ ಪುಸ್ತಕ, ಆರ್ಟ್ ಆಫ್ ಮೋಹಿನಿಯಾಟ್ಟಂಅನ್ನು ಪ್ರಕಟಿಸಿದರು. ಅವಿನಾಶ್ ಪಾಸ್ರಿಚಾ ಇದರ ಸಹ-ಲೇಖಕ. [] ಪುಸ್ತಕವು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಅಡಿಯಲ್ಲಿ ಅವರ ಸಂಶೋಧನೆಗಳನ್ನು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಸಂಸ್ಕೃತಿ ಇಲಾಖೆಯಿಂದ ನಂತರದ ಹಿರಿಯ ಫೆಲೋಶಿಪ್ ಅನ್ನು ದಾಖಲಿಸುತ್ತದೆ ಮತ್ತು ಇದು ಒಂದು ಉಲ್ಲೇಖ ಪುಸ್ತಕವಾಗಿದೆ. [] ಅವರು ಮೋಹಿನಿಯಾಟ್ಟಂ ಎಂಬ ಮತ್ತೊಂದು ಪುಸ್ತಕವನ್ನು ಪ್ರಕಟಿಸಿದರು. ಇದನ್ನು ಸ್ವತಃ ಪ್ರಸಿದ್ಧ ಮೋಹಿನಿಯಾಟ್ಟಂ ಕಲಾವಿದೆ, ಭಾರತಿ ಶಿವಾಜಿಯವರ ಮಗಳು ವಿಜಯಲಕ್ಷ್ಮಿ ಸಹ-ಬರೆದಿದ್ದಾರೆ. [] ಪುಸ್ತಕವು ಕಲಾ ಪ್ರಕಾರದ ಇತಿಹಾಸ ಮತ್ತು ವಿಕಸನದೊಂದಿಗೆ ವ್ಯವಹರಿಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಶೈಲಿಗಳು ಮತ್ತು ತಂತ್ರಗಳು, ಸಂಗ್ರಹ, ಸಂಗೀತ, ವೇಷಭೂಷಣಗಳು ಮತ್ತು ಆಭರಣಗಳ ಬಗ್ಗೆ ಅಭಿಪ್ರಾಯಗಳನ್ನು ನೀಡುತ್ತದೆ. [] ಶಿವಾಜಿಯವರು ಭಾರತದಲ್ಲಿ [೧೭] [೧೮] ಮತ್ತು ವಿದೇಶಗಳಲ್ಲಿ [೧೯] ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅದರೊಂದಿಗೆ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ನೃತ್ಯ ಕಲೆಯನ್ನು ಕಲಿಸಿದ್ದಾರೆ. [೨೦] ಭಾರತಿ ಶಿವಾಜಿಯವರು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಾರೆ. ಸೆಮಿನಾರ್‌ಗಳಲ್ಲಿ ನೃತ್ಯ ಪ್ರಕಾರದ ಕುರಿತು ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು ನೀಡುತ್ತಾರೆ. [೧೫]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

ಶಿವಾಜಿ ಅವರಿಗೆ ೧೯೯೯-೨೦೦೦ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. [] ನಾಲ್ಕು ವರ್ಷಗಳ ನಂತರ, ಭಾರತ ಸರ್ಕಾರವು ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ೨೦೦೪ ರ ಗಣರಾಜ್ಯೋತ್ಸವದ ಗೌರವಗಳ ಪಟ್ಟಿಯಲ್ಲಿ ಅವರನ್ನು ಸೇರಿಸಿತು. [] ಶಿವಾಜಿಯವರು ಸಾಹಿತ್ಯ ಕಲಾ ಪರಿಷತ್ತಿನ ಸಮ್ಮಾನ್, ಕೇರಳದ ಕುಂಚನ್ ನಂಬಿಯಾರ್ ಸ್ಮಾರಕ ಟ್ರಸ್ಟ್‌ನಿಂದ ಲಾಸ್ಯ ಲಕ್ಷ್ಮಿ ಬಿರುದು ಮತ್ತು ಚೆನ್ನೈನ ಕೃಷ್ಣ ಗಾನ ಸಭಾದಿಂದ ನೃತ್ಯ ಚೂಡಾಮಣಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. [೨೧] ಅವರು ೨೦೧೭ ರಲ್ಲಿ ಕೇರಳ ಸರ್ಕಾರದ ನಿಶಾಗಂಧಿ ಪುರಸ್ಕಾರದೊಂದಿಗೆ ಗೌರವಿಸಲ್ಪಟ್ಟಿದ್ದಾರೆ. [೨೨]

ಸಾರಾ ಮತ್ತು ಉರ್ಸ್ ಬೌರ್, ಇಬ್ಬರು ಅಮೇರಿಕನ್ ಚಲನಚಿತ್ರ ನಿರ್ಮಾಪಕರು, ಮೋಹಿನಿಯಾಟ್ಟಂ ಮತ್ತು ಶಿವಾಜಿ ಕಲೆಯ ಮೇಲೆ ಬಿಯಾಂಡ್ ಗ್ರೇಸ್ ಎಂಬ ಸಾಕ್ಷ್ಯಚಿತ್ರವನ್ನು ಮಾಡಿದ್ದಾರೆ, ಇದರಲ್ಲಿ ಅವರ ಮಗಳು ವಿಜಯಲಕ್ಷ್ಮಿ ಕೂಡ ಕಾಣಿಸಿಕೊಂಡಿದ್ದಾರೆ. [೨೩]ಇದು ತಾಯಿ-ಮಗಳ ಸಂಯೋಜನೆಯ ಕೆಲಸವನ್ನು ವಿವರಿಸುವ ೭೮ ನಿಮಿಷಗಳ ಚಲನಚಿತ್ರ. [೨೪] ೯ ಜುಲೈ ೨೦೧೧ ರಂದು ಹಾಲಿವುಡ್, ಲಾಸ್ ಏಂಜಲೀಸ್‌ನ ರಾಲಿ ಥಿಯೇಟರ್‌ನಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನಗೊಂಡಿತು. [೨೩]

ಗ್ರಂಥಸೂಚಿ

[ಬದಲಾಯಿಸಿ]
  • Bharati Shivaji, Avinash Pasricha (1986). Art of Mohiniyattam. Lancer, India. p. 107. ISBN 978-8170620037.
  • Bharati Shivaji, Vijayalakshmi (2003). Mohiniyattam. Wisdom Tree. ISBN 9788186685365. 

ಉಲ್ಲೇಖಗಳು

[ಬದಲಾಯಿಸಿ]
  1. "Heritage Club IIT Roorkee". Heritage Club IIT Roorkee. 2015. Archived from the original on 2015-11-26. Retrieved 26 November 2015.
  2. ೨.೦ ೨.೧ "Mohiniyattam (Bharati Shivaji and Vijayalakshmi)". Exotic India Art. 2015. Retrieved 26 November 2015.
  3. ೩.೦ ೩.೧ ೩.೨ "Classical Dancers of India". Classical dancers. 2015. Retrieved 26 November 2015.
  4. ೪.೦ ೪.೧ Bharati Shivaji, Avinash Pasricha (1986). Art of Mohiniyattam. Lancer, India. p. 107. ISBN 978-8170620037.
  5. ೫.೦ ೫.೧ Bharati Shivaji, Vijayalakshmi (2003). Mohiniyattam. Wisdom Tree. ISBN 9788186685365.
  6. ೬.೦ ೬.೧ "Sangeet Natak Akademi Puraskar". Sangeet Natak Akademi. 2015. Archived from the original on 31 March 2016. Retrieved 25 November 2015.
  7. ೭.೦ ೭.೧ ೭.೨ ೭.೩ "Padmashri Bharati Shivaji". Thiraseela. 2015. Retrieved 26 November 2015.
  8. ೮.೦ ೮.೧ "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.
  9. "Performers of Indian dances and music". Indian Embassy, Russia. 2015. Archived from the original on 27 November 2015. Retrieved 26 November 2015.
  10. ೧೦.೦ ೧೦.೧ ೧೦.೨ "Bound to Kerala by Mohiniyattam". 17 May 2012. Retrieved 26 November 2015.
  11. "Time for Samvaad". 16 November 2014. Retrieved 26 November 2015.
  12. "From law to theatre". 31 October 2004. Archived from the original on 26 February 2018. Retrieved 26 November 2015.
  13. "Kalamandalam Kalyanikutty Amma". Smith Rajan. 2015. Retrieved 26 November 2015.
  14. "The power of grace". The Acorn. 2015. Archived from the original on 27 November 2015. Retrieved 26 November 2015.
  15. ೧೫.೦ ೧೫.೧ "A seeker's odyssey". 16 April 2015. Retrieved 26 November 2015.
  16. "Mohiniattam Style". Kuchipudi. 2015. Archived from the original on 4 December 2015. Retrieved 26 November 2015.
  17. "BVB celebrates Munshi's birthday". 7 May 2013. Retrieved 26 November 2015.
  18. "Bharati Shivaji to perform today". Tribune. 18 October 2002. Retrieved 26 November 2015.
  19. "Bollywood meets Holyrood". 22 August 2002. Retrieved 26 November 2015.
  20. "Russian belle dons role of Radha in Kerala's Mohiniattam". South Asia Mail. 30 April 2008. Archived from the original on 27 November 2015. Retrieved 26 November 2015.
  21. "Profile of Padmashree Bharti Shiwaji". Spicmacay. 2015. Retrieved 26 November 2015.
  22. "Nishagandhi Award for Bharati Shivaji". 2017-01-20. Archived from the original on 2017-01-21. Retrieved 2017-01-21.
  23. ೨೩.೦ ೨೩.೧ "Docu on Mohiniyattam exponents to be screened". Indian Express. 7 July 2011. Archived from the original on 27 ನವೆಂಬರ್ 2015. Retrieved 26 November 2015.
  24. "Beyond Grace". Beyond Grace the Movie. 2015. Archived from the original on 27 November 2015. Retrieved 26 November 2015.


ಹೆಚ್ಚಿನ ಓದುವಿಕೆ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]