ಬೈಚುಂಗ್ ಭುಟಿಯಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೈಚುಂಗ್ ಭುಟಿಯಾ
Personal information
Full name ಬೈಚುಂಗ್ ಭುಟಿಯಾ[೧]
Date of birth (1976-12-15) ೧೫ ಡಿಸೆಂಬರ್ ೧೯೭೬(ವಯಸ್ಸು ೪೦)
Place of birth ಟಿಂಕಿಟಮ್, ಸಿಕ್ಕಿಮ್, ಭಾರತ[೨]
Height 1.73 m (5 ft 8 in)[೨]
Playing position Striker
Club information
Current club East Bengal Club
Number 15
Senior career*
Years Team Apps (Gls)
1993–1995 East Bengal Club ? (?)
1995–1997 JCT Mills ? (?)
1997–1999 East Bengal Club 31 (15)
1999–2002 Bury 37 (3)
2002–2003 Mohun Bagan 11 (6)
2003–2006 East Bengal Club 54 (33)
2006 Perak FA (loan) 8 (4)
2006–2009 Mohun Bagan 44 (24)
2009– East Bengal Club 3 (0)
National team
1995– India 102 (43)
 • Senior club appearances and goals counted for the domestic league only and correct as of 14 October 2009.

† Appearances (Goals).

‡ National team caps and goals correct as of 24 August 2009

ಬೈಚುಂಗ್ ಭುಟಿಯಾ (ಹಿಂದಿ:बाईचुंग भुटिया) (೧೯೭೬ ಡಿಸೆಂಬರ್ ೧೫ರಂದು ಜನಿಸಿದರು) ಭಾರತದ ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟ ಪಂದ್ಯಗಳಲ್ಲಿ ಭಾರತದ ಟಾರ್ಚ್ ಬೇರರ್ (ದೀವಟಿಗೆ ಹಿಡಿದವರು) ಎಂದೇ ಪರಿಗಣಿಸಲ್ಪಡುತ್ತಿದ್ದರು.[೩] ಪ್ರಸ್ತುತ ಭಾರತ ತಂಡದ ನಾಯಕರಾಗಿದ್ದು,[೪] ಪೂರ್ವಬಂಗಾಳ ಕ್ಲಬ್ ಪರವಾಗಿ ಆಟವಾಡುತ್ತಿದ್ದಾರೆ. ಸಿಕ್ಕಿಮೀಸ್ ಸ್ನಿಪರ್ (Sikkimese Sniper) ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಾರೆ. ಏಕೆಂದರೆ ಪುಟ್ಬಾಲ್ ನಲ್ಲಿ ಇವರ ಶೂಟಿಂಗ್ ಕಲೆಯಿಂದಾಗಿ ಈ ಹೆಸರು ಬಂದಿದೆ.[೫][೬] ಇವರು ಮೂರು ಬಾರಿ ಭಾರತದ ವರ್ಷದ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ‘ಭಾರತ ತಂಡಕ್ಕೆ ಭುಟಿಯಾ ದೇವರು ಕೊಟ್ಟ ಕೊಡುಗೆ’ ಎಂದು ಐ.ಎಂ. ವಿಜಯನ್ ಬಣ್ಣಿಸಿದ್ದಾರೆ.[೭]

ಭುಟಿಯಾ ಈಸ್ಟ್ ಬೆಂಗಾಲ್ ಕ್ಲಬ್‌ನ ಐ-ಲೀಗ್ ಫೂಟ್‌ಬಾಲ್ ತಂಡದಲ್ಲಿ ನಾಲ್ಕು ಸ್ಪೆಲ್ ಹೊಂದಿದ್ದು, ಈ ಕ್ಲಬ್ ಮೂಲಕ ಇವರು ತಮ್ಮ ಆಟವನ್ನು ಪ್ರಾರಂಭಿಸಿದರು. ೧೯೯೯ರಲ್ಲಿ ದಿ ಇಂಗ್ಲಿಷ್ ಕ್ಲಬ್ ಬ್ಯೂರಿ ಎಫ್.ಸಿ. ಪರವಾಗಿ ಆಟವಾಡಲು ಪ್ರಾರಂಭಿಸಿದರು. ಆಗ ಯುರೋಪ್ ನಲ್ಲಿ ಮೊದಲ ವೃತ್ತಿಪರ ಫುಟ್ಬಾಲ್ ಆಟಗಾರರಾಗಿ ಹೊರಹೊಮ್ಮಿದರು. ಇದರ ನಂತರ ಕೆಲಕಾಲ ಮಲೇಷ್ಯನ್ ಫುಟ್ಬಾಲ್ ಕ್ಲಬ್‌ನ ಪೆರಾಕ್ ಎಫ್‌ಎ ತಂಡದ ಪರವಾಗಿ ಆಡಿದರು. ಅದೇ ರೀತಿ ಜೆಸಿಟಿ ಮಿಲ್ಸ್ ಪರವಾಗಿ ಆಟವಾಡಿದರು ಮತ್ತು ಆ ಸಂದರ್ಭದಲ್ಲಿ ಈ ತಂಡವು ಲೀಗ್ ಪಂದ್ಯವನ್ನು ಗೆದ್ದುಕೊಂಡಿತ್ತು ಮತ್ತು ಅವರು ಮೋಹನ್‌ ಬಗನ್‌ ತಂಡದೊಂದಿಗೂ ಆಡಿದ್ದು, ಅವರ ಎರಡು ಸ್ಪೆಲ್‌ಗಳಲ್ಲಿ ಭಾರತದಲ್ಲಿ ಯಾವುದೇ ಲೀಗ್‌ ಅನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇವರ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಾದ ನೆಹರು ಕಪ್, ಎಲ್ ಜಿ ಕಪ್, ಸೌಥ್ ಏಷ್ಯನ್ ಫುಟ್ಬಾಲ್ ಫೆಡರೇಶನ್ (ಎಸ್ ಎ ಎಫ್ ಎಫ್) ಚಾಂಪಿಯನ್‌ಶಿಪ್ ಅನ್ನು ಮೂರು ಬಾರಿ ಗೆದ್ದಿರುವುದು ಮತ್ತು ಏಷ್ಯನ್ ಫೂಟ್‌ಬಾಲ್ ಕಾನ್ಫಿಡರೇಶನ್ ಚಾಲೆಂಜ್ ಕಪ್ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಟ್ಟಿದೆ. ಮತ್ತು ೨೦೦೯ರ ನೆಹರೂ ಕಪ್‌ನಲ್ಲಿ ಇವರು ೧೦೦ನೇ ಅಂತಾರಾಷ್ಟ್ರೀಯ ಪಂದ್ಯದ ಕ್ಯಾಪ್ ಅನ್ನು ಪಡೆದರು.

ಕ್ರೀಡೆಯ ಹೊರತಾಗಿ ಭುಟಿಯಾ ರಿಯಾಲಿಟಿ ಟಿವಿ ಕಾರ್ಯಕ್ರಮವಾದ "ಜಲಕ್ ದಿಖಲಾಜಾ"ದಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಇದು ಕೆಲವು ಈ ಮೊದಲು ಆಡುತ್ತಿದ್ದ ಮೋಹನ್ ಬಗಾನ್ ಕ್ಲಬ್ ಜತೆ ಕೆಲ ವಿವಾದಗಳಿಗೆ ಕಾರಣವಾಯಿತು. ಮತ್ತು ಇವರು ಟಿಬೇಟ್ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದ ಕಾರಣ ಒಲಂಪಿಕ್ ರಿಲೆಯ ಜ್ಯೋತಿಯನ್ನು ಹಿಡಿಯಲು ನಿರಾಕರಣೆಗೆ ಒಳಗಾದ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದಾರೆ. ಭಾರತೀಯ ಫುಟ್ಬಾಲ್ ಕ್ಷೇತ್ರಕ್ಕೆ ಭುಟಿಯಾ ನೀಡಿದ ಕೊಡುಗೆಯನ್ನು ಆಧರಿಸಿ ಫುಟ್ಬಾಲ್ ಕ್ರೀಡಾಂಗಣವೊಂದಕ್ಕೆ ಅವರ ಹೆಸರನ್ನು ಇಡಲಾಗಿದೆ. ಇದರ ಜೊತೆಗೆ ಹಲವು ಪ್ರಶಸ್ತಿಯನ್ನೂ ಪಡೆದುಕೊಂಡಿದ್ದು, ಅವುಗಳಲ್ಲಿ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪ್ರಮುಖವಾಗಿವೆ.

ಭುಟಿಯಾ ಟಿಂಕಿಟಮ್ ನಲ್ಲಿ ೧೯೭೬ ಡಿಸೆಂಬರ್ ೧೫ರಂದು ದೋರ್ಜಿ ದೋರ್ಮಾ ಮತ್ತು ಸೋನಮ್ ಥೋಪ್ಡೆನ್ ಎಂಬುವರ ಮಗರಾಗಿ ಜನಿಸಿದರು.[೮][೯] ಇವರ ಹಿರಿಯಣ್ಣ ಸ್ಥಳೀಯ ಮಟ್ಟದಲ್ಲಿ ಫುಟ್ಬಾಲ್ ಆಟಗಾರರಾಗಿದ್ದರು.[೯] ಬೈಚುಂಗ್ ತನ್ನ ಶಾಲಾ ದಿನಗಳಲ್ಲಿ ಫುಟ್ಬಾಲ್ ಜೊತೆ ಜೊತೆಗೆ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಮತ್ತು ಅಥ್ಲೆಟಿಕ್ಸ್‌ನ್ನು ಆಡುತ್ತಿದ್ದರು.[೧೦] ಇವರ ಪಾಲಕರು ಸಿಕ್ಕಿಂನಲ್ಲಿ ಕೃಷಿಕರಾಗಿದ್ದರು. ಇವರು ಭುಟಿಯಾ ಅವರ ಅತಿ ಕ್ರೀಡಾಸಕ್ತಿ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರಲಿಲ್ಲ.‍[೧೧] ಆದಾಗ್ಯೂ ಇವರ ಚಿಕ್ಕಪ್ಪ ಕರ್ಮಾ ಭುಟಿಯಾ ಅವರ ಪ್ರೋತ್ಸಾಹದಿಂದ ಪೂರ್ವ ಸಿಕ್ಕಿಂನ ಪಾಕ್ ಯಾಂಗ್ ನ ಸೇಂಟ್ ಕ್ಸಾವಿಯರ್ಸ್ ಶಾಲೆಯಲ್ಲಿ ಶಿಕ್ಷಣ ಪ್ರಾರಂಭಿಸಿದರು. ಮತ್ತು ೯ನೇ ವರ್ಷದವರಾಗಿದ್ದ ಸಂದರ್ಭದಲ್ಲಿ ಎಸ್‌ಎಐನಿಂದ ಫುಟ್ಬಾಲ್ ಸ್ಕಾಲರ್‌ಶಿಪ್ (ಶಿಷ್ಯವೇತನ) ಪಡೆದು ಗ್ಯಾಂಗ್ಟಾಕ್ ನ ತಾಶಿ ನಾಮ್ಗ್ಯಾಲ್ ಅಕಾಡೆಮಿಗೆ ಸೇರಿದರು.[೧೧][೧೨]

೨೦೧೦ ಅಕ್ಟೋಬರ್ ೨೮ರಂದು ದಿಲ್ಲಿಯಲ್ಲಿ ಕಾರ್ಲೋಸ್ ಕ್ವೈರೋಸ್ ಮತ್ತು ನೈಕ್ ಇನ್‌ಕಾರ್ಪೊರೇಟ್, ಜೊತೆಗೂಡಿ ಬೈಚುಂಗ್ ಭುಟಿಯಾ ಸಾಕರ್ ಸ್ಕೂಲ್ ಪ್ರಾರಂಭಿಸಿದರು.

ಕ್ಲಬ್‌ ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಇವರ ರಾಜ್ಯವಾದ ಸಿಕ್ಕಿಂನಲ್ಲಿ ಹಲವು ಶಾಲೆಗಳಲ್ಲಿ ಮತ್ತು ಸ್ಥಳೀಯ ಕ್ಲಬ್‌ಗಳ ಜೊತೆ ಆಟವಾಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಗ್ಯಾಂಗ್ಟಾಕ್‌ನ ಬಾಯ್ಸ್ ಕ್ಲಬ್‌ನಲ್ಲೂ ಆಟವಾಡಿದ್ದರು. ಆಗ ಕರ್ಮಾ ಭುಟಿಯಾ ಕೋಚ್ ಆಗಿದ್ದರು.[೧೦] ೧೯೯೨ರಲ್ಲಿ ನಡೆದ ಸುಬ್ರೋಟೊ ಕಪ್ ಪಂದ್ಯದಲ್ಲಿ ಉತ್ತಮ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಇದರಿಂದಾಗಿ ಇವರು ಫುಟ್ಬಾಲ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಲ್ಲಿ ಸಹಾಯಕವಾಯಿತು. ಭಾರತ ಫುಟ್ಬಾಲ್ ತಂಡದ ಮಾಜಿ ಗೋಲ್ ಕೀಪರ್ ಭಾಸ್ಕರ್ ಗಂಗೂಲಿ ಇವರ ನೈಪುಣ್ಯವನ್ನು ಗುರುತಿಸಿದ್ದಲ್ಲದೇ ಕೋಲ್ಕತ್ತಾ ಫುಟ್ಬಾಲ್‌ನಲ್ಲಿ ಸೇರಲು ಸಹಾಯ ಮಾಡಿದರು.[೧೨]

ವೃತ್ತಿಜೀವನ[ಬದಲಾಯಿಸಿ]

ಯುವ ಭಾರತಿ ಕ್ರೀಡಾಂಗಣ- ಈಸ್ಟ್ ಬೆಂಗಾಲ್ ಕ್ಲಬ್ ಮತ್ತು ಮೋಹನ್ ಬಗಾನ್‌ ಸಂಸ್ಥೆಯ ತವರು ಕ್ರೀಡಾಂಗಣ

೧೯೯೩ರಲ್ಲಿ ಇವರ ೧೬ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು ಕೋಲ್ಕತ್ತಾದ ವೃತ್ತಿಪರ ಈಸ್ಟ್ ಬೆಂಗಾಲ್ ಕ್ಲಬ್‌ಗೆ ಸೇರಿಕೊಂಡರು.[೯] ಎರಡು ವರ್ಷಗಳ ನಂತರ ಇವರು ಜೆಸಿಟಿ ಮಿಲ್ಸ್ ಫಾಗ್ವಾರಾಕ್ಕೆ ವರ್ಗಾವಣೆಗೊಂಡರು. ಇಲ್ಲಿಂದ ೧೯೯೬-೯೭ರಲ್ಲಿ ಭಾರತ ರಾಷ್ಟ್ರೀಯ ಫುಟ್ಬಾಲ್ ಲೀಗ್‌ನಲ್ಲಿ ಪಾಲ್ಗೊಂಡು ಜಯಗಳಿಸಿದರು.[೧೦][೧೩] ಈ ಲೀಗ್ ಪಂದ್ಯದಲ್ಲಿ ಭುಟಿಯಾ ಅತಿ ಹೆಚ್ಚು ಗೋಲ್ ಸ್ಕೋರ್ ಮಾಡಿದವರಾಗಿದ್ದರು. ಮತ್ತು ಈ ಕಾರಣಕ್ಕಾಗಿ ಇವರನ್ನು ಅಂತಾರಾಷ್ಟ್ರೀಯ ಮಟ್ಟದ ನೆಹರೂ ಕಪ್‌ಗೆ ಆಯ್ಕೆ ಮಾಡಲಾಯಿತು.[೧೧] ೧೯೯೬ರಲ್ಲಿ ಇವರನ್ನು ಭಾರತದ ವರ್ಷದ ಆಟಗಾರರಾಗಿ ಹೆಸರಿಸಲಾಯಿತು.[೧೧][೧೨]

೧೯೯೭ರಲ್ಲಿ ಈಸ್ಟ್ ಬೆಂಗಾಲ್ ಕ್ಲಬ್‌ಗೆ ವಾಪಾಸಾದರು.[೧೦] ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ನಡುವೆ ನಡೆದ ಸ್ಥಳೀಯ ಡರ್ಬಿ ಪಂದ್ಯದಲ್ಲಿ ಭುಟಿಯಾ ಹ್ಯಾಟ್ರಿಕ್ ಗೋಲ್ ಬಾರಿಸುವ ಮೂಲಕ ಉತ್ತಮ ಅಂಕವನ್ನು ಕಲೆಹಾಕಿದರು. ೧೯೯೭ರ ಫೆಡರೇಶನ್ ಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಇವರ ತಂಡ ೪-೧ ಗೋಲ್ ಗಳಿಸುವ ಮೂಲಕ ಜಯ ಸಾಧಿಸಿತು.[೧೪] ೧೯೯೮-೯೯ರ ಋತು[೧೦] ವಿಲ್ಲಿ ನಾಯಕರಾಗಿ ಆಯ್ಕೆಯಾದರು. ಆಗ ಈಸ್ಟ್ ಬೆಂಗಾಲ್ ತಂಡವು ಸಾಲ್ಗೋಕರ್ ತಂಡದ ವಿರುದ್ಧ ಎರಡನೇ ಸ್ಥಾನವನ್ನು ಪಡೆಯಿತು.[೧೫] ನಂತರ ಇವರು ೧೯೯೯ರಲ್ಲಿ ಅರ್ಜುನ್ ಪ್ರಶಸ್ತಿ ಪಡೆದ ೧೯ನೇ ಫುಟ್ಬಾಲ್ ಆಟಗಾರರೆನಿಸಿದ್ದಾರೆ. ಇದು ಭಾರತ ಸರ್ಕಾರ ರಾಷ್ಟ್ರೀಯ ಕ್ರೀಡೆಯಲ್ಲಿ ಗಣನೀಯ ಸಾಧನೆ ತೋರಿದ ಪ್ರತಿಭಾವಂತ ಆಟಗಾರರಿಗೆ ನೀಡುವ ಪ್ರಶಸ್ತಿಯಾಗಿದೆ.[೧೧][೧೨]

ಬ್ಯೂರಿ[ಬದಲಾಯಿಸಿ]

"His presence will be a big boost to the confidence of many Asian youngsters."

Piara Power, Let's Kick Racism Out Of Football campaign co-ordinator, after Bhutia signed for Bury.[೧೬]

ಭುಟಿಯಾ ಅವರಿಗೆ ಕ್ರೀಡೆಯಲ್ಲಿ ಕೆಲವೇ ಕೆಲವು ಅವಕಾಶಗಳು ಸಿಕ್ಕಿದ್ದವು. ೧೯೯೯ ಸೆಪ್ಟೆಂಬರ್ ೩೦ರಂದು ಭುಟಿಯಾ ಬ್ಯೂರಿ ಫುಟ್ಬಾಲ್ ಕ್ಲಬ್‌ಗೆ ಗ್ರೇಟರ್ ಮ್ಯಾಂಚೆಸ್ಟರ್, ಇಂಗ್ಲೆಂಡ್ ತಂಡದ ಪರವಾಗಿ ಆಡಲು ಮೂರು ವರ್ಷದ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಮತ್ತು ಯುರೋಪ್‍ನಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರರಾಗಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.[೧೬] ಇದರ ನಂತರ ಭುಟಿಯಾ ಫುಲ್‌ಹ್ಯಾಮ್ ಫುಟ್ಬಾಲ್ ಕ್ಲಬ್, ವೆಸ್ಟ್ ಬ್ರೋಂವಿಚ್ ಅಲ್ಬಿಯೋನ್ ಫುಟ್ಬಾಲ್ ಕ್ಲಬ್ ಮತ್ತು ಆಸ್ಟನ್ ವಿಲ್ಲಾ ಫುಟ್ಬಾಲ್ ಕ್ಲಬ್ ಜತೆ ಮಾಡಿದ ಪ್ರಯೋಗಗಳು ಯಶಸ್ವಿಯಾಗಲಿಲ್ಲ.[೧೭][೧೮] ವಿಸಾ ಪಡೆಯಲು ಕೆಲ ತೊಂದರೆಗಳನ್ನು ಅನುಭವಿಸಬೇಕಾಯಿತು. ಇದರಿಂದ ೧೯೯೯ ಅಕ್ಟೋಬರ್ ೩ರ ವರೆಗೆ ಕಾರ್ಡಿಫ್ ಸಿಟಿ ಫುಟ್ಬಾಲ್ ಕ್ಲಬ್ ವಿರುದ್ಧ ಪ್ರಥಮವಾಗಿ ಆಟವಾಡಲು ಸಾಧ್ಯವಾಗಿರಲಿಲ್ಲ.[೧೯][೨೦] ಈ ಪಂದ್ಯದಲ್ಲಿ ಭುಟಿಯಾ ಇಯಾನ್ ಲಾಸನ್ ಎಂಬ ಆಟಗಾರನ ಬದಲಾಗಿ ಬ್ಯೂರಿ ತಂಡಕ್ಕೆ ಸೇರ್ಪಡೆಯಾದರು. ಆಗ ಭುಟಿಯಾರ ವಾಲಿ ಹೊಡೆತ (ಚೆಂಡು ನೆಲಕ್ಕೆ ತಾಕದಂತೆ ಹೊಡೆದ)ವನ್ನು ಡಾರೆನ್ ಬುಲ್ಲಕ್ ಎರಡನೇ ಗೋಲ್ ಆಗಿ ಪರಿವರ್ತಿಸಿದರು.[೨೧] ೨೦೦೦ನೇ ಇಸ್ವಿಯ ಏಪ್ರಿಲ್ ೧೫ರಂದು ಚೆಸ್ಟರ್ ಫೀಲ್ಡ್ ತಂಡದ ವಿರುದ್ಧದ ಇಂಗ್ಲಿಷ್ ಲೀಗ್ ಪಂದ್ಯದಲ್ಲಿ ಪ್ರಥಮ ಗೋಲ್‌ನ್ನು ಗಳಿಸಿದರು.[೨೨] ಇವರ ಮೊಣಕಾಲು ಗಾಯ ಮರುಕಳಿಸಿದ್ದರಿಂದ ಕೊನೆಯ ಋತುವಿನಲ್ಲಿ ಕೇವಲ ಮೂರು ಪಂದ್ಯಗಳಿಗೆ ಸೀಮಿತಗೊಳಿಸಲಾಯಿತು. ಮತ್ತು ಇವರನ್ನು ಆಡಳಿತ ವಿಭಾಗಕ್ಕೆ ನೇಮಿಸಿ ಆಟದಿಂದ ನಿಯುಕ್ತಿ ನೀಡಲಾಯಿತು.[೨೩] ೨೦೦೧ ಆಗಸ್ಟ್ ೨೭ರಂದು ಇವರು ಆಡಿದ ಅಂತಿಮ ಪಂದ್ಯದಲ್ಲಿ ೩-೦ ಅಂತರದಿಂದ ಸ್ವಿಂಡನ್ ಟೌನ್ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು.[೨೩]

ಹಿಂದಿರುಗಿ ಭಾರತಕ್ಕೆ[ಬದಲಾಯಿಸಿ]

ಇವರು ೨೦೦೨ರಲ್ಲಿ ಭಾರತಕ್ಕೆ ವಾಪಸು ಬಂದು ಮೋಹನ್ ಬಗಾನ್ ಎಸಿ ತಂಡದ ಪರವಾಗಿ ಒಂದು ವರ್ಷ ಕಾಲ ಆಟವಾಡಿದರು.[೨೪] ಭುಟಿಯಾ ಆ ಋತುವಿನ ಆರಂಭದಲ್ಲಿ ಗಾಯಗೊಂಡಿದ್ದರಿಂದ ಆಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಮೋಹನ್ ಬಗಾನ್ ಮಾತ್ರ ಆಲ್ ಏರ್‌ಲೈನ್ಸ್ ಗೋಲ್ಡ್ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.[೨೪] ನಂತರ ಮತ್ತೆ ಈಸ್ಟ್ ಬೆಂಗಾಲ್ ಕ್ಲಬ್[೧೨]‌ಗೆ ಹಿಂದಿರುಗಿ ೨೦೦೩ ಎ‌ಎಸ್‌ಇ‌ಎ‌ಎನ್ (ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್) ಕಪ್ ಗೆಲ್ಲಲು ಸಹಾಯಕರಾದರು. ಕೊನೆಯ ಪಂದ್ಯದಲ್ಲಿ ಭುಟಿಯಾ ಬಿಇಸಿ ಟೆರೊ ಸಸಾನಾ ವಿರುದ್ಧ ೩–೧ ಗೋಲುಗಳಿಸಿ ತಂಡದ ಗೆಲುವಿಗೆ ಕಾರಣರಾಗಿ,"ಪಂದ್ಯ ಪುರುಷೋತ್ತಮ" ಪ್ರಶಸ್ತಿಯನ್ನು ಪಡೆದುಕೊಂಡರು. ಒಂಭತ್ತು ಗೋಲುಗಳನ್ನು ಪಡೆದು ಚಾಂಪಿಯನ್‌ಶಿಪ್‌ನಲ್ಲಿ ಮೊದಲಿಗರಾದರು.[೨೫] ಭುಟಿಯಾ ಪೆಟ್ರೊಕಿಮಿಯಾ ಪುತ್ರಾ ವಿರುದ್ಧ ೧–೧ ಗೋಲುಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು ಮತ್ತು ಇದೇ ಪಂದ್ಯಾವಳಿಯಲ್ಲಿ ಫಿಲಿಫೈನ್ಸ್ ಆರ್ಮಿ ಎಫ್‌ಸಿವಿರುದ್ಧ ೬–೦ ಗೋಲಿನಲ್ಲಿ ಐದು ಗೋಲನ್ನು ಪಡೆದರು.[೨೬][೨೭]

ಮಲೇಷಿಯಾದ ಚಾಂಪಿಯನ್‌ಶಿಪ್ ಕ್ಲಬ್ ಪೆರಕ್ ಎಫ್‌ಎ,ಪರವಾಗಿ ೨೦೦೩ರ ಅಗಸ್ಟ್‌ನಿಂದ ಅಕ್ಟೋಬರ್‌ವರೆಗೆ ತಾತ್ಕಾಲಿಕವಾಗಿ ಆಟವಾಡಲು ಸಹಿ ಹಾಕಿದರು, ಮತ್ತು ನಿಯಮಿತ ಋತುವಿಗಾಗಿ ಈಸ್ಟ್ ಬೆಂಗಾಲ್ ಕ್ಲಬ್‌ಗೆ ಹಿಂದಿರುಗಿದರು.[೨೮] ಪೆರಕ್ ಎಫ್‌ಎಯಲ್ಲಿ ನಿಯಮಿತ ಕಾಲದ ಕೆಲಸವಾಗಿದ್ದರೂ ಮಲೇಷಿಯಾ ಕಪ್ ಸೆಮಿ-ಫೈನಲ್‌ನಲ್ಲಿ ಸಭಾ ಎಫ್‌ಎ ವಿರುದ್ಧ ೩–೧ ಗೋಲಿನಿಂದ ಸೋತರು, ತದನಂತರ ಭುಟಿಯಾ ತಮ್ಮನ್ನು ತಾವು "ವಿಭಾಗದ ಅಪರಾಧಿ" ಎಂದು ವಿಮರ್ಶಿಸಿಕೊಂಡರು.[೨೯] ೨೦೦೩–೦೪ ಋತುವಿನಲ್ಲಿ ಈಸ್ಟ್ ಬೆಂಗಾಲ್ ಪರವಾಗಿ ಭುಟಿಯಾ ೧೨ ಗೋಲುಗಳನ್ನು ಪಡೆದು ನಾಲ್ಕು ಪಾಯಿಂಟುಗಳಿಂದ ಲೀಗ್‌ ಗೆದ್ದುಕೊಂಡಿದ್ದರಿಂದ ಡೆಂಪೊ ಎಸ್‌ಸಿ ಎರಡನೇಯ ಸ್ಥಾನಕ್ಕೆ ತಳ್ಳಲ್ಪಟ್ಟಿತು.[೩೦][೩೧] ೨೦೦೪–೦೫ ಋತುವಿನಲ್ಲಿ, ಭುಟಿಯಾ ಈಸ್ಟ್ ಬೆಂಗಾಲ್ ಪರವಾಗಿ ಒಂಭತ್ತು ಗೋಲು ಪಡೆದಿದ್ದರಿಂದ, ಎಸ್‌‍ಸಿ ಗೋವಾ ಮತ್ತು ವಿಜೇತ ಡೆಂಪೊ[೩೨] ತಂಡಗಳು ಮೂರನೇಯ ಸ್ಥಾನವನ್ನು ಪಡೆದುಕೊಂಡವು. ೨೦೦೫–೦೬ ಋತುವಿನ ಕೊನೆಯವರೆಗೆ ಇವರು ಈಸ್ಟ್ ಬೆಂಗಾಲ್ ಪರವಾಗಿ ಆಟವಾಡುತ್ತಿದ್ದರು. ಒಂದು ಋತುವಿನಲ್ಲಿ ಹನ್ನೆರಡು ಗೋಲುಗಳನ್ನು ಪಡೆದಿದ್ದಕ್ಕಾಗಿ ಇವರ ಕೊನೆಯ ಋತುವಿನಲ್ಲಿ ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ(ಎ‌ಐಎಫ್‌ಎಫ್)ವು "ಪ್ಲೇಯರ್ ಆಫ್ ದ ನ್ಯಾಷನಲ್ ಫುಟ್ಬಾಲ್ ಲೀಗ್" ಪ್ರಶಸ್ತಿ ನೀಡಿ ಗೌರವಿಸಿತು.[೩೩] ಆದರೂ ಲೀಗ್‌ನಲ್ಲಿ ಈಸ್ಟ್ ಬೆಂಗಾಲ್ ಮಹಿಂದ್ರಾ ಯುನೈಟೆಡ್‌ಗೆ ರನ್ನರ್-ಅಪ್ ಆಯಿತು.[೩೪]

"I will try to live up to the expectations of Mohun Bagan supporters and bring success to the team this time."

Baichung Bhutia, on signing for Mohun Bagan a second time.[೩೫]

ಜೂನ್ ೧೫ ೨೦೦೬ರಂದು, ಇವರು ಮೋಹನ್ ಬಗಾನ್ ಎಸಿ ತಂಡವನ್ನು ಸೇರಿಕೊಂಡರು, ಮತ್ತು ಜೋಸ್ ರೆಮಿರೆಜ್ ಬಾರೆಟೊನೊಂದಿಗೆ ಆಟದ ತಂತ್ರವನ್ನು ರೂಪಿಸಿದರು.[೩೫] ಆದರೆ ೨೦೦೬–೦೭ ಋತುವಿನ ಲೀಗ್‌ನಲ್ಲಿ ಭುಟಿಯಾ ಮತ್ತು ಮೋಹನ್ ಬಗಾನ್ ಕಳಪೆ ಪ್ರದರ್ಶನ ನೀಡಿ ಎಂಟನೇಯ ಸ್ಥಾನ ಪಡೆದುಕೊಂಡರು, ಪದಾವನತಿಯಿಂದ ಕೇವಲ ಒಂದು ಸ್ಥಾನ ಮೇಲಿದ್ದರು.[೩೬] ೨೦೦೭–೦೮ ಋತುವಿನಲ್ಲಿ (ಈ ಲೀಗನ್ನು ಈಗ I-ಲೀಗ್ಎಂದು ಕರೆಯಲಾಗುತ್ತದೆ), ಭುಟಿಯಾ ೧೮ ಪಂದ್ಯಗಳಲ್ಲಿ ೧೦ ಗೋಲನ್ನು ಪಡೆದರು, ಮತ್ತು ಮೋಹನ್ ಬಗಾನ್, ಲೀಗ್‌ನಲ್ಲಿ ಸ್ವಲ್ಪ ಮೇಲಿನ ಸ್ಥಾನಕ್ಕೇರಿ ನಾಲ್ಕನೇಯ ಸ್ಥಾನ ಪಡೆದುಕೊಂಡಿತು.[೩೭] ಭುಟಿಯಾ ೨೦೦೮ರಲ್ಲಿ ಎರಡನೇಯ ಬಾರಿಗೆ ವರ್ಷದ ಭಾರತೀಯ ಆಟಗಾರ ಪ್ರಶಸ್ತಿ ಪಡೆದುಕೊಂಡರು.[೩೮] ಒಂದಕ್ಕಿಂತ ಹೆಚ್ಚಿನ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದ ಎರಡನೇಯ ಫುಟ್ಬಾಲ್ ಆಟಗಾರ: ಇನ್ನೊಬ್ಬರು ಐ.ಎಂ. ವಿಜಯನ್.[೩೯] ೨೦೦೮–೦೯ ಋತುವಿನಲ್ಲಿ, ಮಹಿಂದ್ರಾ ಯುನೈಟೆಡ್ ವಿರುದ್ಧ ಕೊನೆಯ ದಿನದ ಆಟದಲ್ಲಿ ಸೋತಿದ್ದರಿಂದ ಚರ್ಚಿಲ್ ಬ್ರದರ್ಸ್‌ಗಿಂತ ಹಿಂದಿನ ಸ್ಥಾನ ಪಡೆಯಿತು.[೪೦] ಭುಟಿಯಾ ಆರು ಗೋಲು ಪಡೆಯುವ ಮೂಲಕ ಆ ಋತು ಕೊನೆಯಾಯಿತು.[೪೧]

ಕ್ಲಬ್‌ನ ಅಧಿಕಾರಿಗಳು ಇವರ ಫುಟ್ಬಾಲ್ ಬದ್ಧತೆಯನ್ನು ಪ್ರಶ್ನಿಸಿದ್ದರಿಂದ ಮೇ ೧೮ ೨೦೦೯ರಂದು, ಭುಟಿಯಾ ಮೋಹನ್ ಬಗಾನ್ ತಂಡವನ್ನು ಬಿಡುವ ಬಗ್ಗೆ ಪ್ರಕಟಿಸಿದರು.[೪೨] "ಜಲಕ್ ದಿಖಲಾಜಾ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಣಾಮವಾಗಿ ಮೋಹನ್ ಬಗಾನ್ ಇವರನ್ನು ಆರು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿತು.[೪೩] ಭುಟಿಯಾ ಈ ರೀತಿ ಹೇಳಿದರು "ಮೋಹನ್ ಬಗಾನ್ ಇನ್ನೊಂದು ಋತುವಿಗಾಗಿ ತಮ್ಮನ್ನು ಇಟ್ಟುಕೊಳ್ಳಲು ಮಾಡಿದ ತಂತ್ರವಾಗಿದೆ. ಆದರೆ ನಾನು ಅವರಿಗಾಗಿ ಎಂದಿಗೂ ಆಟವಾಡಲಾರೆ."[೪೪]

ಈಸ್ಟ್ ಬೆಂಗಾಲ್ "ಮರಳಿಗೂಡಿಗೆ"[ಬದಲಾಯಿಸಿ]

"I want to tell the millions of East Bengal supporters that I am going to finish my career here. It is not going to be a matter of [a] few months but for the rest of my life."

Baichung Bhutia, on signing for East Bengal a fourth time.[೪೫]

ಜೂನ್ ೨೨ ೨೦೦೯ರಂದು ಭುಟಿಯಾ ಈಸ್ಟ್ ಬೆಂಗಾಲ್ ಪರವಾಗಿ ಆಟವಾಡಲು ಅಧೀಕೃತವಾಗಿ ಒಂದು ವರ್ಷದ ಒಪ್ಪಂದಕ್ಕಾಗಿ ಸಹಿ ಹಾಕಿದರು, ಮತ್ತು ತನ್ನ ಕ್ರೀಡಾ ವೃತ್ತಿಯನ್ನು ಇದೆ ಕ್ಲಬ್ಬಿನಲ್ಲಿ ಕೊನೆಗೊಳಿಸುವುದಾಗಿ ಪ್ರಕಟಿಸಿದರು.[೪೬] ಈಸ್ಟ್ ಬೆಂಗಾಲ್‌ಗೆ ಸಹಿ ಮಾಡಿದ ನಂತರ, ಭುಟಿಯಾ ಇದು ತನ್ನ ಪುನರಾಗಮನ, "ನಿಜವಾಗಿಯೂ ಇದು ನನ್ನ ಪುನರಾಗಮನ ಎಂದು ಹೇಳಿಕೆ ನೀಡಿದರು. ಈ ಕ್ಲಬ್ಬಿನಲ್ಲೆ ಎಲ್ಲಾ ಆರಂಭವಾಗಿದ್ದು ಮತ್ತು ಕೊನೆ ಕೂಡ ಇಲ್ಲೆ."[೪೫] ಆದರೆ ಪರಿಸ್ಥಿತಿಯು ಇನ್ನೂ ಹೆಚ್ಚು ಕ್ಲಿಷ್ಟಕರವಾಯಿತು, ಮೋಹನ್ ಬಗಾನ್ ತಂಡದ ಪ್ರಧಾನ ಕಾರ್ಯದರ್ಶಿ ಅಂಜನ್ ಮಿಶ್ರಾ ಈ ರೀತಿ ಹೇಳಿದರು "ಬೈಚುಂಗ್‌ನ ಜೊತೆಗೆ ನಮ್ಮ ಒಪ್ಪಂದ ಕಾನೂನು ಪ್ರಕಾರವಾಗಿದ್ದು ನಮ್ಮ ಜೊತೆಗೆ ಇನ್ನೂ ಒಂದು ವರ್ಷದ ಒಪ್ಪಂದವನ್ನು ಹೊಂದಿದ್ದಾರೆ."[೪೭] ಭುಟಿಯಾರ ವಕೀಲರಾದ ಉಷಾನಾಥ್ ಬ್ಯಾನರ್ಜಿ ಇದನ್ನು ವಿರೋಧಿಸಿ ಈ ರೀತಿ ಹೇಳಿದರು, "ನಾನು ಬಗಾನ್‌ನ ಒಪ್ಪಂದದ ನ್ಯಾಯಬದ್ಧತೆಯ ಬಗ್ಗೆ ಸಂಶಯ ಹೊಂದಿದ್ದೇನೆ. ಹೀಗಿದ್ದರೂ,ಫಿಫಾ ಮತ್ತು ಎಐಎಫ್‌ಎಫ್ ನಿಯಮದ ಪ್ರಕಾರ ಇಪ್ಪತ್ತೆಂಟು ವರ್ಷದ ನಂತರ ಆತನ ಕರಾರಿನ ಮೂರನೆಯ ವರ್ಷದಲ್ಲಿ ಯಾವುದೇ ಕ್ಲಬ್ ಆರಿಸಿಕೊಳ್ಳಲು ಸ್ವತಂತ್ರರಾಗಿರುತ್ತಾನೆ".[೪೭] ಭುಟಿಯಾ ಮತ್ತು ಮೋಹನ್ ಬಗಾನ್ ತಮ್ಮ ಮನಸ್ತಾಪವನ್ನು ಬಗೆಹರಿಸಿಕೊಳ್ಳಲು ಅಗಸ್ಟ್ ೧೭ರಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಅಲ್ಬೆರ್ಟೊ ಕೋಲಾಕೊ ನೇತೃತ್ವದಲ್ಲಿ ಎಐಎಫ್‌ಎಫ್ ಕೇಂದ್ರ ಕಛೇರಿಯಲ್ಲಿ ಭೇಟಿಯಾದರು.[೪೭] ವಿಷಯವು ಇನ್ನೂ ತೀರ್ಮಾನವಾಗಿಲ್ಲ, ಮತ್ತು ನಿರ್ಗಮಿಸುತ್ತಿರುವ ಕೊಲಾಕೊ ಭುಟಿಯಾರನ್ನು ಅಗಸ್ಟ್ ೩೦ರಂದು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಅಗಸ್ಟ್ ೨೯ರಂದು ಹೇಳಿಕೆ ನೀಡಲಾಯಿತು.[೪೮] ಆದರೂ ಯಾವುದೇ ಒಪ್ಪಂದಕ್ಕೂ ಬರಲಾಗಲಿಲ್ಲ, ಈ ವಿಮಾದವನ್ನು ಬಗೆಹರಿಸಲು ಸೆಪ್ಟೆಂಬರ್ ೫ರಂದು ಮಾಜಿ ಸಾಲಿಸಿಟರ್ ಜನರಲ್ ಅಮ್ರೆಂದರ್ ಶರಣ್‌ರನ್ನು ನೇಮಿಸಲಾಯಿತು.[೪೯] "ತನ್ನ ಯಶಸ್ಸು ಹಾಳುಗೆಡವಲು ಪ್ರಯತ್ನಿಸಿದ್ದಾರೆ" ಇದಕ್ಕೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕೆಂದು ಎಂದು ಸೆಪ್ಟೆಂಬರ್ ೧೦ರಂದು ಭುಟಿಯಾ ಮೋಹನ್ ಬಗಾನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದರು.[೫೦] ಸೆಪ್ಟೆಂಬರ್ ೨೬ರಂದು ಭುಟಿಯಾರಿಗೆ ಬೇರೆಡೆ ಆಟವಾಡಲು ಮಧ್ಯಂತರ ಬಿಡುಗಡೆ ದೊರೆಯಿತು, ಆದರೆ ಮೋಹನ್ ಬಗಾನ್ ಮತ್ತು ಭುಟಿಯಾ ನಡುವಿನ ಪ್ರಕರಣವು ಅಂತಿಮ ತೀರ್ಪು ಬರುವವರೆಗೆ ಮುಂದುವರೆಯುತ್ತದೆ.[೫೧] ನವೆಂಬರ್ ೪ರಂದು ಮೋಹನ್ ಬಗಾನ್ ಭುಟಿಯಾ ಜೊತೆಗಿನ ವಿವಾದವನ್ನು ಬಗೆಹರಿಸಲು ಫುಟ್ಬಾಲ್‌ನ ಆಡಳಿತ ಮಂಡಳಿ ಫೀಫಾವನ್ನು ಮಧ್ಯಪ್ರವೇಶಿಸಲು ಕೇಳಿಕೊಂಡಿತು.[೫೨]

೨೦೧೦/೧೧ ಋತುವಿನ ಪ್ರಾರಂಭದಲ್ಲಿ ನವೆಂಬರ್‌ನಿಂದ ಜನವರಿಯವರೆಗೆ ನಡೆಯುವ ಏಷಿಯನ್ ಕಪ್‌ನಲ್ಲಿ ತಯಾರಿ ನಡೆಸಲು ಮತ್ತು ಭಾಗವಹಿಸಲು ಭಾರತೀಯ ರಾಷ್ಟ್ರೀಯ ತಂಡವು ಜನವರಿ ಕೊನೆಯ ತನಕ ಭುಟಿಯಾರನ್ನು ಸೇರಿಸಿಕೊಳ್ಳುವಂತಿಲ್ಲ.

ಅಂತಾರಾಷ್ಟ್ರೀಯ ವೃತ್ತಿಜೀವನ[ಬದಲಾಯಿಸಿ]

2007ರ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಅರ್ಹತೆಯನ್ನು ಪಡೆದಿತ್ತು.ಬಲತುದಿಯಲ್ಲಿ ನಿಂತಿರುವ ಭುಟಿಯಾ

೧೯೯೫ರಲ್ಲಿ ಭುಟಿಯಾ ತನ್ನ ಮೊದಲ ಅಂತರಾಷ್ಟ್ರೀಯ ಪಂದ್ಯ ನೆಹರು ಕಪ್‌ನಲ್ಲಿ ಭಾರತದ ಪರವಾಗಿ ಉಜ್ಬೆಕಿಸ್ತಾನ್‌ ವಿರುದ್ಧ ಪ್ರಾರಂಭಿಸಿದರು ಮತ್ತು ಇವರು ಭಾರತದ ಅತ್ಯಂತ ಯುವ ಗೋಲ್‌ಕೀಪರ್, ಆಗ ಇವರ ವಯಸ್ಸು ೧೯.[೫೩] ೧೯೯೭ ಎಸ್‌ಎ‌ಎಫ್‌ಎಫ್ ಚಾಂಪಿಯನ್‌ಶಿಪ್‌ನಲ್ಲಿನ ಕೊನೆಯ ಪಂದ್ಯದಲ್ಲಿ ಭಾರತವು ಮಾಲ್ಡೀವ್ಸ್ ದೇಶವನ್ನು ೫–೧ ಗೋಲಿನಿಂದ ಸೋಲಿಸಿತು, ಇದರಲ್ಲಿ ಭುಟಿಯಾ ಒಂದು ಗೋಲು ಹೊಡೆದರು.[೫೪] ಎರಡು ವರ್ಷದ ನಂತರ ಗೋವಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು ಕೊನೆಯ ಪಂದ್ಯದಲ್ಲಿ ೨–೦ ಗೋಲುಗಳಿಂದ ಸೋಲಿಸಿ ತನ್ನ ಸ್ಥಾನವನ್ನು ಉಳಿಸಿಕೊಂಡಿತು. ಬ್ರುನೊ ಕೊಟಿನ್‌ಹೊ ಭಾರತದ ಪರವಾಗಿ ಮೊದಲ ಗೋಲು ಪಡೆದಿದ್ದರು ಎರಡನೇಯ ಗೋಲನ್ನು ಬೈಚುಂಗ್ ಭುಟಿಯಾ ಪಡೆದು ಪಂದ್ಯಾವಳಿಯನ್ನು ಗೆದ್ದು ಕೊಳ್ಳಲು ಕಾರಣರಾದರು ಮತ್ತು ಭುಟಿಯಾ ಪಂದ್ಯಾವಳಿಯ ಬಹು ಮುಖ್ಯ ಆಟಗಾರರಾಗಿ ಹೊರಹೊಮ್ಮಿದರು.[೫೫]

೨೦೦೨ರಲ್ಲಿ ವಿಯೆಟ್ನಾಂನಲ್ಲಿ ನಡೆದ ಎಲ್‌ಜಿ ಕಪ್ ಪಂದ್ಯಾವಳಿಯಲ್ಲಿ ಆತಿಥೇಯ ರಾಷ್ಟ್ರವನ್ನು ಭಾರತವು ೩–೨ ಗೋಲುಗಳಿಂದ ಸೋಲಿಸಿತು, ಭುಟಿಯಾರ ಎರಡು ಗೋಲುಗಳು ಆಟದ ಮಧ್ಯಂತರ ವಿರಾಮದ ಮೊದಲು ಮತ್ತು ನಂತರ ಬಂದಿತು.[೫೬] ೨೦೦೩ ಏಪ್ರೊ ಏಷಿಯನ್ ಗೇಮ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಉಜ್ಬೆಕಿಸ್ತಾನ್ ವಿಜಯಿಯಾಗಿ ಭಾರತ ರನ್ನರ್-ಅಪ್ ಆಯಿತು. ಪಂದ್ಯಾವಳಿಯಲ್ಲಿ ಭುಟಿಯಾ ಎರಡು ಗೋಲುಗಳನ್ನು ಪಡೆದರು, ಇವೆರಡು ಜಿಂಬಾಬ್ವೆ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ ಬಂದಿದ್ದು ಈ ಪಂದ್ಯಾವಳಿಯಲ್ಲಿ ಭಾರತವು ವಿಜಯಿಯಾಯಿತು.[೫೭] ೨೦೦೭ ನೆಹರು ಕಪ್‌ನ ಆರಂಭಿಕ ಪಂದ್ಯಾವಳಿಯಲ್ಲಿ, ಭುಟಿಯಾ ಪೆನಾಲ್ಟಿ ಗೋಲನ್ನು ಹೊಡೆದು ಕೊಲಂಬಿಯಾ ವಿರುದ್ಧ ೬–೦ ಗೋಲುಗಳಿಂದ ವಿಜಯಿಯಾದರು.[೫೮] ಬಾಂಗ್ಲಾದೇಶ[೫೯] ದ ವಿರುದ್ಧ ೧–೦ ದಿಂದ ಮತ್ತು ಕಿರ್ಗಿಸ್ತಾನ್ ವಿರುದ್ಧ ೩–೦ ಗೋಲನ್ನು ಹೊಡೆದು ಗೆಲುವು ಸಾಧಿಸಿದರು.[೬೦] ಸಿರಿಯಾ ವಿರುದ್ಧ ಎನ್.ಪಿ.ಪ್ರದೀಪ್‌ನ ವಿಜಯಿ ಗೋಲಿನ ಜೊತೆಗೆ ಭುಟಿಯಾ ಕೂಡ ಕೊನೆಯ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿ ಭಾರತವು ೧–೦ ಗೋಲಿಗಳಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗಲು ಸಹಕಾರಿಯಾರಿಯಾದರು.[೬೧]

೨೦೦೫ರಲ್ಲಿ ನಡೆದ ಯಶಸ್ವಿ ಎಸ್‌ಎ‌ಎಫ್‌ಎಫ್ ಚಾಂಪಿಯನ್‌ಶಿಪ್‌ನಲ್ಲಿ ಭುಟಿಯಾ ತಂಡದ ಕ್ಯಾಪ್ಟನ್ ಆಗಿದ್ದರು, ಗ್ರುಪ್ ಸ್ಟೇಜ್‌ನಲ್ಲಿ ಗೋಲನ್ನು ಹೊಡೆದರು, ಇದರಲ್ಲಿ ಭೂತಾನ್ ವಿರುದ್ಧ ೩–೦ ಗೋಲುಗಳಿಂದ ವಿಜಯ ಸಾಧಿಸಿದ್ದಾರೆ, ಆದರೆ ಮುಂದಿನ ಎರಡು ಪಂದ್ಯದಲ್ಲಿ ಯಾವುದೇ ಗೋಲನ್ನು ಪಡೆಯಲಿಲ್ಲ.[೬೨] ಭಾರತವು ಮುನ್ನಡೆದು ಸೆಮಿ- ಫೈನಲ್ ಪಂದ್ಯಾವಳಿಯಲ್ಲಿ ಭುಟಿಯಾ ಆಟವಾಡಿ ಮಾಲ್ಡೀವ್ಸ್ ವಿರುದ್ಧ ೧–೦ ಗೋಲುಗಳಿಂದ ಗೆದ್ದರು.[೬೨] ೧೯೯೯ರ ಕೊನೆಯ ಪಂದ್ಯಾವಳಿಯಲ್ಲಿ ಮತ್ತೆ ಭಾರತ ಮತ್ತು ಕೊಲಂಬಿಯಾ ಮುಖಾಮುಖಿಯಾದವು, ಇದರಲ್ಲಿ ಮತ್ತೆ ಭಾರತ ೨–೦ ಗೋಲುಗಳಿಂದ ವಿಜಯಿಯಾಯಿತು, ಮೆಹ್ರಾಜುದ್ದಿನ್ ವೊಡೊ ೩೩ನೇಯ ನಿಮಿಷದಲ್ಲಿ ಹೊಡೆದ ಪ್ರಾರಂಭಿಕ ಗೋಲಿನ ನಂತರ ೮೧ನೇಯ ನಿಮಿಷದಲ್ಲಿ ಭುಟಿಯಾ ತುಂಬಾ ಹತ್ತಿರದಿಂದ ಎರಡನೇಯ ಗೋಲನ್ನು ಹೊಡೆದರು.[೬೩] ತುಂಬಾ ಮಹತ್ವವಾದ ಆಟಗಾರ ಮತ್ತು ಫೇರ್ ಪ್ಲೇ ಟ್ರೋಫಿ ಪಡೆದುಕೊಂಡರು.[೬೩] ೨೦೦೮ ಎಸ್‌ಎ‌ಎಫ್‌ಎಫ್ ಚಾಂಪಿಯನ್‌ಶಿಪ್‌ನಲ್ಲಿ ನೆರೆಯ ನೇಪಾಳದ ವಿರುದ್ಧದ ಪ್ರಾರಂಭಿಕ ಪಂದ್ಯದಲ್ಲಿ ೪–೦ ಗೋಲು ಪಡೆದು ವಿಜಯಿಯಾದರು, ಪಂದ್ಯದ ೩೪ನೇಯ ನಿಮಿಷದಲ್ಲಿ ಭುಟಿಯಾ ಎರಡನೆಯ ಗೋಲನ್ನು ಹೊಡೆದರು.[೬೪] ಈ ಪಂದ್ಯಾವಳಿಯಲ್ಲಿ ಭುಟಿಯಾ ಪಡೆದದ್ದು ಕೇವಲ ಒಂದೇ ಗೋಲು, ಆದರೆ ಭೂತಾನ್ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ ಗೋಲನ್ನು ಪಡೆಯಲು ಹಲವಾರು ಅವಕಾಶಗಳು ಲಭ್ಯವಿದ್ದವು, ಭಾರತ ಕೊನೆಯ ಪಂದ್ಯವನ್ನು ತಲುಪಲು ೨–೧ ಗೋಲುಗಳ ಅವಶ್ಯಕತೆ ಇತ್ತು.[೬೫] ಕೊನೆಯ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ ೧–೦ ಗೋಲನ್ನು ಪಡೆದು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲವಾಯಿತು.[೬೬]

೨೦೦೮ ಎ‌ಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ತುರ್ಕ್ಮೆನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸೆಮಿ ಫೈನಲ್ ತಲುಪಲು ೨–೧ ಗೋಲುಗಳಲ್ಲಿ ಎರಡನ್ನು ಭುಟಿಯಾರೇ ಹೊಡೆದರು.[೬೭] ಸಿಕ್ಕಿಮೀಸ್ ಸ್ನಿಪ್ಪರ್ ತಜಕಿಸ್ತಾನ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಒಂದು ಗೋಲನ್ನು ಪಡೆದರು ಮತ್ತು ಸುನೀಲ್ ಚೆತ್ರಿ ಹ್ಯಾಟ್ರಿಕ್[೬೮] ಪಡೆದು ಭಾರತವು ೪–೧ ಗೋಲುಗಳಿಂದ ಭಾರತವು ಗೆಲುವು ಸಾಧಿಸಿತು ಇದಲ್ಲದೆ ಈ ಗೆಲುವಿನಿಂದಾಗಿ ೨೦೧೧ ಎ‌ಎಫ್‌ಸಿ ಏಷಿಯನ್ ಕಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿತು.[೬೯] ಮೂರು ಗೋಲು ಪಡೆದು ಪಂದ್ಯಾವಳಿಯ ಮಹತ್ವದ ಆಟಗಾರರಾಗಿ ಹೊರಹೊಮ್ಮಿದರು.[೩೯][೬೯]

೨೦೦೯ ನೆಹರು ಕಪ್ ಭುಟಿಯಾ ಪಾಲಿಗೆ ಬಹು ಮಹತ್ವದ ಪಂದ್ಯಾವಳಿಯಾಗಿದ್ದು ಕಿರ್ಗಿಸ್ತಾನದ ವಿರುದ್ಧ ೨–೧ ಗೋಲುಗಳಿಂದ ಗೆಲುವು ಪಡೆದುಕೊಂಡು ಭಾರತದ ಪರವಾಗಿ ೧೦೦ನೇಯ ಕ್ಯಾಪ್ ಪಡೆದುಕೊಂಡು ಈ ಮೈಲಿಗಲ್ಲನ್ನು ತಲುಪಿದ ಭಾರತದ ಮೊತ್ತಮೊದಲ ಆಟಗಾರರಾದರು.[೭] ಲೆಬನಾನ್ ವಿರುದ್ಧದ ಮೊದಲ ದಿನ ಇವರು ಹೊಡೆದ ಮೊದಲ ಗೋಲು ಭಾರತ ಚೇತರಿಸಿಕೊಳ್ಳಲು ಸಹಾಯವಾಯಿತು.[೭೦] ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ಭುಟಿಯಾ ಹೊಡೆದ ಮೊದಲ ಗೋಲು ಭಾರತ ೩–೧ ರಿಂದ ಗೆಲುವು ಪಡೆಯಲು ಸಹಾಯವಾಯಿತು ಮತ್ತು ಕೊನೆಯ ಪಂದ್ಯವನ್ನು ತಲುಪುವುದು ಖಚಿತವಾಯಿತು. ಇವರ ಪ್ರದರ್ಶನಕ್ಕಾಗಿ "ಪಂದ್ಯ ಪುರುಷೋತ್ತಮ" ಪ್ರಶಸ್ತಿ ನೀಡಲಾಯಿತು.[೭೧] ಭುಟಿಯಾ ರೌಂಡ್-ರಾಬಿನ್ ಕೊನೆಯ ಪಂದ್ಯದಲ್ಲಿ ಆಟವಾಡಲು ಸಾಧ್ಯವಾಗಲಿಲ್ಲ, ಆದರೆ ಭಾರತವು ನಿರ್ಧಾರಕ ಪಂದ್ಯದಲ್ಲಿ ಆಯ್ಕೆಯಾಗುವ ಭರವಸೆ ಇತ್ತು. ನಿರ್ಧಾರಕ ಪಂದ್ಯದಲ್ಲಿ ಸಿರಿಯಾವನ್ನು ಪೆನಾಲ್ಟಿ ಶೂಟ್‌ಔಟ್‌ ಮೂಲಕ ಸೋಲಿಸಿದ್ದರಿಂದ ಮತ್ತು ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮವಾದ ಪ್ರದರ್ಶನ ನೀಡಿದ್ದರಿಂದಾಗಿ "ಪಂದ್ಯಾವಳಿಯ ಆಟಗಾರ" ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.[೭೨][೭೩]

ಫುಟ್ಬಾಲ್ ಹೊರತಾದ ಜೀವನ[ಬದಲಾಯಿಸಿ]

Alt= ಬಲ ಭಾಗದಲ್ಲಿ ಬೂದು ಬಣ್ಣದ ಟೋಪಿ ಮತ್ತು ಬಿಳಿ ಬಣ್ಣದ ಜಾಕೆಟ್ ಧರಿಸಿದ ಭುಟಿಯಾರ ಎಡ ಭಾಗದಲ್ಲಿ ಬಿಳಿ ಬಣ್ಣದ ಜಾಕೆಟ್ ಧರಿಸಿದ ಟಿಪ್ನಿಸ್ ಕುಳಿತಿದ್ದಾರೆ.ದಂಪತಿಗಳು ನಗುತ್ತಿದ್ದು, ಅವರ ಬಲಗೈ ಸ್ಪರ್ಷಿಸುತ್ತಿದೆ.

ಮೋಹನ್ ಬಗಾನ್ ಅಂಗಣದಲ್ಲಿ ಭುಟಿಯಾ ಜೊತೆಗೆ ಆತನ ಹೆಂಡತಿ ಮಾಧುರಿ ಟಿಪ್ನಿಸ್

ಭುಟಿಯಾರ ಅಡ್ಡ ಹೆಸರು ಇವರು ಬೌದ್ಧ ಭುಟಿಯಾ ಹಿನ್ನೆಲೆಯುಳ್ಳವನು ಎಂಬುದನ್ನು ಸೂಚಿಸುತ್ತದೆ, ಆದಾಗ್ಯೂ ಇವರು ನಿರೀಶ್ವರವಾದದಲ್ಲಿ ಗಾಢವಾದ ನಂಬಿಕೆಯನ್ನು ಹೊಂದಿದ್ದಾರೆ.[೭೪] "ಬೈಚುಂಗ್" ಎಂಬುದರ ಶಬ್ದಶಃ ಅರ್ಥ "ಚಿಕ್ಕ ಸಹೋದರ".[೭೫] ಇವರು ಡಿಸೆಂಬರ್ ೩೦ ೨೦೦೪ರಂದು ದಕ್ಷಿಣ ಸಿಕ್ಕಿಂನಲ್ಲಿರುವ ತನ್ನ ಜನ್ಮಸ್ಥಳ ಟಿನ್ಕಿತಂ ಹಳ್ಳಿಯ ಫ್ರೊಫೆಶನ್ ಹೋಟೆಲ್‌ನಲ್ಲಿ ದೀರ್ಘಕಾಲದ ಗೆಳತಿ ಮಾಧುರಿ ಟಿಪ್ನಿಸ್‌ಳನ್ನು ಮದುವೆಯಾಗಿದ್ದಾರೆ. ಏಪ್ರಿಲ್ ೮ ೨೦೧೦ರಂದು ಹೆಂಡತಿ ಮಾಧುರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾಳೆ.[೭೬] ಅಯಾನ್ ರಾಂಡ್‌ನ ಕಾದಂಬರಿ ದಿ ಫೌಟೇನ್‌ಹೆಡ್‌ನಲ್ಲಿ ಬರುವ ಹೋವಾರ್ಡ್ ರೋರ್ಕ್ ಇತನ ಕಾಲ್ಪನಿಕ ನಾಯಕ, ಮತ್ತು ಇವರು ತಮ್ಮ ತೋಳಿನ ಮೇಲೆ ಫುಟ್ಬಾಲ್ ಆಟಗಾರನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ.[೭೭] ಭುಟಿಯಾರ ಗೌರವಾರ್ಥವಾಗಿ ಸಿಕ್ಕಿಂ ಸರ್ಕಾರ ನಂಚಿಯಲ್ಲಿ ಬೈಚುಂಗ್ ಕ್ರೀಡಾಂಗಣ ನಿರ್ಮಿಸಿದೆ.[೩][೭೮] ಸಿಕ್ಕಿಂ ರಾಜ್ಯದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದು ಸಿಕ್ಕಿಮರು ಮತ್ತು ಭಾರತದ ಇತರೆ ರಾಜ್ಯಗಳಲ್ಲಿನ ಜನರು ಭುಟಿಯಾರನ್ನು ಮಾದರಿ ವ್ಯಕ್ತಿಯಾಗಿ ಪರಿಗಣಿಸಿದ್ದಾರೆ.[೭೯] ಭಾರತದ ಫುಟ್ಬಾಲ್‌ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜನವರಿ ೨೩ ೨೦೦೮ರಂದು ಭುಟಿಯಾರನ್ನು ಪದ್ಮಶ್ರೀ, ನಾಲ್ಕನೇಯು ಅತ್ಯುತ್ತಮ ನಾಗರಿಕ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಯಿತು.[೮೦][೮೧] ಇದಾದ ಮೂರು ದಿನಗಳ ನಂತರ ಜನವರಿ ೨೬ ಭಾರತದ ಗಣರಾಜ್ಯ ದಿನದಂದು, ರಾಷ್ಟ್ರೀಯ ಈಜು ವಿಜೇತೆ ಬುಲಾ ಚೌಧರಿಯ ಜೊತೆಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದರು.[೮೨]

ಜುಲೈ ೧೨ ೨೦೦೮ರಂದು ಮ್ಯೂನಿಚ್‌ನ ಅಲಿಯಾನ್ಜ್ ಅರೆನಾದಲ್ಲಿ ಆಯೋಜಿಸಿದ್ದ ಗೋಲ್ ೪ ಆಫ್ರಿಕಾ ಪಂದ್ಯದಲ್ಲಿ ಇದು ತಂಡದ ಪರವಾಗಿ ಭಾಗವಹಿಸಿ ಎರಡು ಗೋಲು ಹೊಡೆದರು, ತಂಡದ ನೇತೃತ್ವವನ್ನು ಕ್ಲಾರೆನ್ಸ್ ಸೋಡೊರ್ಫ್ ವಹಿಸಿದ್ದರು.[೮೩] ೨೦೦೯ರಲ್ಲಿ, ಭುಟಿಯಾ ಗಾಯಗೊಂಡ ಫುಟ್ಬಾಲ್ ಆಟಗಾರಗಿಗೆ ಸಹಾಯ ಮಾಡುವ ಉದ್ದೇಶದಿಂದ "ಇಂಡಿಯನ್ ಸ್ಪೋರ್ಟ್ಸ್ ಫೆಡರೇಶನ್ ಸ್ಥಾಪಿಸಿದರು.[೮೪] ಇವರು ಫುಟ್ಬಾಲ್ ಪ್ಲೇಯರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ(ಎಫ್‌ಪಿಎ‌ಐ)[೮೪] ಅಧ್ಯಕ್ಷರು ಕೂಡ. ಈ ಸಂಸ್ಥೆಯು ಭಾರತೀಯ ಫುಟ್ಬಾಲ್ ಆಟಗಾರರಿಗೆ ಪಿಂಚಣಿ ಯೋಜನೆಯಂತಹ ಆರ್ಥಿಕ ವಿಷಯಗಳ ಕುರಿತಾಗಿ "ನ್ಯಾಯ ಒದಗಿಸುವ" ಭರವಸೆ ನೀಡಿದೆ.[೮೫] ಇಂಗ್ಲೆಂಡ್‌ನಲ್ಲಿ ಫ್ರೊಫೆಶನಲ್ ಫುಟ್ಬಾಲ್ ಅಸೋಸಿಯೇಶನ್ ನೋಡಿದ ನಂತರ ಎಫ್‌ಪಿಎಐ ರಚಿಸಿದರು.[೮೬]

ಭುಟಿಯಾ ಟಿಬೆಟನ್ ಸ್ವತಂತ್ರ ಚಳುವಳಿಯ ಬೆಂಬಲಿಗರಾಗಿದ್ದಾರೆ

೨೦೦೩ರ ನವೆಂಬರ್‌ನಲ್ಲಿ ಇವರು ಅಡಿಡಾಸ್ ಪ್ರಚಾರಕನಾಗಲು ಒಪ್ಪಿ ಅಡಿಡಾಸ್ ಇಂಡಿಯಾ ಮಾರ್ಕೆಟಿಂಗ್ ಪ್ರೈ.ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.[೮೭] ಪ್ರಸ್ತುತನೈಕಿಯ ಭಾರತದ ರಾಯಭಾರಿಯಾಗಿದ್ದಾರೆ.[೮೮] ನೈಕಿ ಉತ್ಪನ್ನದ ಭಾರತೀಯ ರಾಯಭಾರಿ ಒಪ್ಪಂದದ ನಂತರ, ನೈಕಿಯು ದೇಶದ ಕ್ರೀಡಾಭಿವೃದ್ಧಿಗೆ ಸಹಾಯ ಹಸ್ತ ಚಾಚಲಿದೆ ಎಂದು ಭುಟಿಯಾ ತಿಳಿಸಿದರು.[೮೯]

೨೦೦೮ರಲ್ಲಿ ಒಲಂಪಿಕ್ ಜ್ಯೋತಿಯನ್ನು ಭಾರತದಲ್ಲಿ ಹೊತ್ತೊಯ್ಯುವ ಅವಕಾಶವೂ ಭುಟಿಯಾರಿಗೆ ಲಭಿಸಿತ್ತು, ಆದರೆ ಟಿಬೆಟಿಯನ್ನರ ಸ್ವತಂತ್ರ ಚಳುವಳಿಗೆ ಬೆಂಬಲ ಸೂಚಿಸುವ ಸಲುವಾಗಿ ಈ ಕ್ರೀಡಾ ಜ್ಯೋತಿ ಹೊತ್ತೊಯ್ಯುವ ಅವಕಾಶವನ್ನು ಭುಟಿಯಾ ನಿರಾಕರಿಸಿದರು. "ನಾನು ಟಿಬೆಟನ್ನರ ಕಾರಣವಾಗಿ ಸಹಾನುಭೂತಿಯನ್ನು ಹೊಂದಿದ್ದೇನೆ. ನಾನು ಹಿಂಸೆಯ ವಿರೋಧಿಯಾಗಿದ್ದರೂ ಟಿಬೆಟಿನ ಜನರ ಅಲ್ಲಿನ ಹೋರಾಟಕ್ಕೆ ಸ್ಪಂದಿಸಬೇಕೆಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ" ಎಂದು ಭುಟಿಯಾ ಹೇಳಿದ್ದರು.[೯೦] ಇವರು ಒಲಂಪಿಕ್ ಜ್ಯೋತಿಯನ್ನು ಹೊತ್ತೊಯ್ಯಲು ನಿರಾಕರಿಸಿದ ಪ್ರಥಮ ಭಾರತೀಯ ಕ್ರೀಡಾಪಟುವಾಗಿದ್ದಾರೆ.[೯೦] ಈ ನಡೆಯಿಂದ ಭಾರತದಲ್ಲಿ ತನ್ನ ಸಹೋದ್ಯೋಗಿಗಳಿಂದ ಸ್ವಲ್ಪ ಮಟ್ಟಿಗಿನ ಪ್ರಶಂಸೆಯನ್ನು ಪಡೆದರೂ, ರಾಜಕೀಯ ಮತ್ತು ಕ್ರೀಡೆಯನ್ನು ಬೆರೆಸಿದ್ದಕ್ಕಾಗಿ ಟೀಕಿಸಲ್ಪಟ್ಟಿದ್ದಾರೆ.[೯೧]

ಬೈಚುಂಗ್ ಭುಟಿಯಾ ಫುಟ್ಬಾಲ್ ಶಾಲೆ[ಬದಲಾಯಿಸಿ]

ಅಕ್ಟೋಬರ್ ೨೮ರಂದು ಬೈಚುಂಗ್ ಭುಟಿಯಾ ಫುಟ್ಬಾಲ್ ಆಟದ ಶಾಲೆಯನ್ನು ಕಾರ್ಲೊಸ್ ಕ್ವಯಿರೊಝ್‌ನ ಫುಟ್ಬಾಲ್‌ ಪಾಲುಗಾರಿಕೆಯೊಂದಿಗೆ ದೆಹಲಿಯಲ್ಲಿ ಪ್ರಾರಂಭಿಸಿದರು. ಇದೀಗ ರೆಯಾನ್ ಅಂತರಾಷ್ಟ್ರೀಯ ಶಾಲೆಯ ಮೈದಾನದಲ್ಲಿದ್ದು ಭುಟಿಯಾ ಇದನ್ನು ರಾಷ್ಟ್ರದಾದ್ಯಂತ ವಿಸ್ತರಿಸುವ ಯೋಜನೆಯಲ್ಲಿದ್ದಾರೆ. ಇದು ಭಾರತಯ ಫುಟ್ಬಾಲ್‌ನಲ್ಲಿನ ಕೊರತೆ ನೀಗಿಸಲು ಅನ್ಯದೇಶದ ತರಬೇತುದಾರರನ್ನು, ಮತ್ತು ಅತ್ಯಾಧುನಿಕ ಸೌಲಭ್ಯರ್ಯಗಳನ್ನು ಹೊಂದಿದೆ. ಸಮಾಜಕ್ಕೆ ಏನನ್ನಾದರೂ ಮರಳಿ ನೀಡಬೇಕೆಂದುಕೊಂಡ ಭುಟಿಯಾ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮಕ್ಕಳಿಗೆ ಉಚಿತ ತರಬೇತಿ ನೀಡುವುದಾಗಿ ಘೋಷಿಸಿದರು. ಆದರೆ ಹಣದ ಕೊರತೆಯಿಂದಾಗಿ ಅವರ ಕನಸು ಅಪೂರ್ಣವಾಗಿಯೇ ಉಳಿಯಿತು. ಅದೇನೇ ಇದ್ದರೂ ಇದೊಂದು ಪರಿಪೂರ್ಣ ಫುಟ್ಬಾಲ್ ಸಂಸ್ಥೆಯಾಗಿರಲಿಲ್ಲ. ವಿಶೇಷವಾದ ನೈಪುಣ್ಯತೆ ಇರುವವರು ಉತ್ತಮ ಸಂಸ್ಥೆಯಲ್ಲಿ ತರಭೇತಿಯನ್ನು ಪಡೆದುಕೊಳ್ಳಬಹುದು, ಈ ನಿಟ್ಟಿನಲ್ಲಿ ಭಾರತೀಯ ಚಲನಚಿತ್ರ ತಾರೆ ಜಾನ್ ಅಬ್ರಾಹಂನೊಂದಿಗೆ ಉತ್ತಮ ಸಂಸ್ಥೆಯನ್ನು ಪ್ರಾರಂಭಿಸುವುದಾಗಿ ಹೇಳಿಕೊಂಡಿದ್ದರು.ಶಾಲೆಯ ಉಡುಗೆ ತೊಡುಗೆಗಳ ಪಾಲುದಾರರಾಗಿ ನೈಕ್,ಇಂಕ್. ಸಂಸ್ಥೆಗಳು ಮುಂದಾಗಿದ್ದು ಫುಟ್ಬಾಲ್ ಆಸಕ್ತರ ಮನ್ನಣೆಗೆ ಪಾತ್ರವಾಗಿದೆ, ಅಲ್ಲದೆ ಸಾಧ್ಯವಾದಷ್ಟು ಬೇಗ ಭಾರತದ ರಾಷ್ಟ್ರೀಯ ಪುಟ್ಬಾಲ್ ತಂಡವು ಮುಂಬರುವ ಫಿಫಾ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗುವಂತೆ ಬಯಕೆ ಹೊತ್ತವರಲ್ಲಿ ಇದು ಹೊಸ ಭರವಸೆಯನ್ನು ಮೂಡಿಸಿದೆ.

ಜಲಕ್ ದಿಖಲಾಜಾ[ಬದಲಾಯಿಸಿ]

೨೦೦೯ರಲ್ಲಿ ನೃತ್ಯನಿರೂಪಕಿ ಸೋನಿಯಾ ಜಾಫರ್,[೯೨] ಜೊತೆಗೆ ಅಂತರಾಷ್ಟ್ರೀಯ ಸರಣಿ, ತಾರೆಗಳೊಂದಿಗೆ ನೃತ್ಯ ಜಲಕ್ ದಿಕಲಾಜಾದ, ಮೂರನೇ ಋತುವಿನಲ್ಲಿ ವಿಜೇತರಾಗಿದ್ದರು. ಕರಣ್ ಸಿಂಗ್ ಗ್ರೊವರ್ ಮತ್ತು ಗೌಹರ್ ಖಾನ್ ಅವರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿ ಭುಟಿಯಾ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ೪ಮಿಲಿಯನ್‌ಗಳಷ್ಟು ಹಣವನ್ನು ತಮ್ಮದಾಗಿಸಿಕೊಂಡರು.[೯೩] ಭುಟಿಯಾ ಒಟ್ಟು ಮೊತ್ತದ ಅರ್ಧದಷ್ಟನ್ನು ದತ್ತಿ ಸಂಸ್ಥೆಗೆ ನೀಡಿದರು, ಮತ್ತು ಇನ್ನರ್ಧದಷ್ಟು ಹಣವನ್ನು ತಮ್ಮ ನೃತ್ಯನಿರೂಪರೊಂದಿಗೆ ಹಂಚಿಕೊಂಡರು, ಹಾಗೂ ಸ್ವಲ್ಪ ಮೊತ್ತವನ್ನು ಐಲಾ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಕೊಡುವುದಾಗಿ ಹೇಳಿದ್ದರು.[೯೪] ಎಸ್‌ಎಮ್‌ಎಸ್ ಮೂಲಕ ಮತ ಚಲಾವಣೆ ಮಾಡುವ ಪ್ರವೃತ್ತಿಯು ಭುಟಿಯಾರನ್ನು ಗೆಲ್ಲಲು ಸಹಕರಿಸಿತ್ತು, ಸಿಕ್ಕಿಮ್‌ನಲ್ಲಿ ನಡೆಸಲಾದ ಸಾಮೂಹಿಕ ಮತ ಚಲಾವಣೆಯ ಪ್ರಕ್ರಿಯೆಯು(ಮೊಬೈಲ್ ಕ್ಯಾಶ್ ಕಾರ್ಡ್‌ಗಳನ್ನು ಕೊಳ್ಳುವವರು ಸಹ ಎಸ್‌ಎಮ್‌ಎಸ್ ಮೂಲಕ ಮತ ಹಾಕಬಹುದಿತ್ತು)ಭುಟಿಯಾ ಬಹುಮಾನ ಗೆಲ್ಲುವ ಅವಕಾಶವನ್ನು ಹೆಚ್ಚಿಸಿದ್ದವು.[೯೫][೯೬] ರಿಯಾಲಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಮ್ಮ ಪ್ರದರ್ಶನ ಪಂದ್ಯ ಮತ್ತು ಅಭ್ಯಾಸಾವಧಿಯಿಂದಲೂ ದೂರವಿರಬೇಕಾಯಿತು ಇದರಿಂದಾಗಿ ಭುಟಿಯಾ ಮತ್ತು ಮೋಹನ್ ಬಗಾನ್ ಕ್ರೀಡಾ ಸಂಸ್ಥೆಯೊಂದಿಗಿನ ಸಂಬಂಧವು ಇಕ್ಕಟ್ಟಿಗೆ ಸಿಲುಕಿತು.[೯೭]

ಪ್ರಶಸ್ತಿಗಳು[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

 • ಬೈಚುಂಗ್ ಕ್ರೀಡಾಂಗಣ

ಉಲ್ಲೇಖಗಳು[ಬದಲಾಯಿಸಿ]

 1. Hugman, Barry J. (2005). The PFA Premier & Football League Players' Records 1946-2005. Queen Anne Press. p. 59. ISBN 1852916656. 
 2. ೨.೦ ೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. ೭.೦ ೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. ೯.೦ ೯.೧ ೯.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. ೧೦.೦ ೧೦.೧ ೧೦.೨ ೧೦.೩ ೧೦.೪ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ೧೧.೦ ೧೧.೧ ೧೧.೨ ೧೧.೩ ೧೧.೪ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. ೧೨.೦ ೧೨.೧ ೧೨.೨ ೧೨.೩ ೧೨.೪ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. ೧೬.೦ ೧೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. ೨೩.೦ ೨೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. ೨೪.೦ ೨೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. ೩೫.೦ ೩೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. ೩೯.೦ ೩೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. ೪೫.೦ ೪೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. ೪೭.೦ ೪೭.೧ ೪೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. ೬೨.೦ ೬೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. ೬೩.೦ ೬೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 68. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 69. ೬೯.೦ ೬೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 72. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 73. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. ೮೪.೦ ೮೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 86. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 87. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 88. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 89. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 90. ೯೦.೦ ೯೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 91. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 92. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 93. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 94. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 95. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 96. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 97. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು[ಬದಲಾಯಿಸಿ]

 1. REDIRECT Template:NFT player
 1. REDIRECT Template:East Bengal F.C. squad