ಬೆನ್ನು ನೋವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನ್ನು ನೋವು
Classification and external resources
ಬೆನ್ನುಮೂಳೆಯ ಕಾಲಮ್ನ ವಿವಿಧ ಪ್ರದೇಶಗಳು (ವಕ್ರತೆಗಳು).
ICD-10M54
ICD-9724.5
DiseasesDB15544
MeSHD001416

ಬೆನ್ನು ನೋವು ("ಡೊರ್‌ಸಾಲ್ಜಿಯ " ಎಂದೂ ಕರೆಯುತ್ತಾರೆ) ಎನ್ನುವುದು ಮಾಂಸಖಂಡಗಳು, ನರಗಳು, ಮೂಳೆಗಳು, ಕೀಲುಗಳು ಅಥವಾ ಬೆನ್ನೆಲುಬಿನ ಇನ್ನಾವುದೇ ರಚನೆಯಿಂದ ಹುಟ್ಟಿ ಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವು.

ಈ ನೋವನ್ನು ಅನೇಕ ವೇಳೆ ಕತ್ತು ನೋವು, ಬೆನ್ನಿನ ಮೇಲ್ಭಾಗ ನೋವು, ಬೆನ್ನಿನ ಕೆಳಭಾಗ ನೋವು ಅಥವಾ ಮೂಳೆತುದಿ ನೋವು ಎಂದು ವಿಂಗಡಿಸಬಹುದು. ಅದು ಇದ್ದಕ್ಕಿದ್ದಂತೆ ಬರಬಹುದು ಅಥವಾ ದೀರ್ಘಕಾಲದ ನೋವು ಆಗಿರಬಹುದು; ಅದು ನಿರಂತರವಾಗಿ ಇರಬಹುದು ಅಥವಾ ಆಗಾಗ್ಗೆ ಬರಬಹುದು, ಒಂದೇ ಜಾಗದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಬೇರೆ ಭಾಗಗಳಿಗೆ ಹರಡಬಹುದು. ಅದು ಸಣ್ಣ ನೋವಿರಬಹುದು, ಅಥವಾ ತೀಕ್ಷ್ಣವಾದ ನೋವಿರಬಹುದು ಅಥವಾ ಚುಚ್ಚುವ ಅಥವಾ ಉರಿ ಅನುಭವವಾಗಬಹುದು. ನೋವು ತೋಳು ಮತ್ತು ಕೈಗಳಿಗೂ, ಬೆನ್ನಿನ ಮೇಲ್ಭಾಗ ಅಥವಾ ಬೆನ್ನಿನ ಕೆಳಭಾಗಗಳಿಗೂ ಹರಡಬಹುದು, (ಕಾಲು ಅಥವಾ ಪಾದಕ್ಕೂ ಹರಡಬಹುದು), ಮತ್ತು ನೋವಷ್ಟೇ ಅಲ್ಲದೇ ಸುಸ್ತು, ಜೋಮು ಅಥವಾ ನರಗಳ ಹಾರುವಿಕೆ ಮುಂತಾದ ಲಕ್ಷಣಗಳನ್ನು ಹೊಂದಿರಬಹುದು.

ಮನುಷ್ಯರನ್ನು ಅತಿ ಹೆಚ್ಚಾಗಿ ಕಾಡುವುದೆಂದರೆ ತಲೆನೋವು. ಯು.ಎಸ್‌.ನಲ್ಲಿ, ವೈದ್ಯರನ್ನು ಭೇಟಿಮಾಡಲು ತೀವ್ರವಾದ ಬೆನ್ನಿನ ಕೆಳಭಾಗ ನೋವು (ಲಂಬ್ಯಾಗೋ ಎಂತಲೂ ಕರೆಯುತ್ತಾರೆ) ಐದನೇ ಅತಿ ಸಾಮಾನ್ಯ ಕಾರಣ. ಹತ್ತರಲ್ಲಿ ಒಂಭತ್ತು ಜನ ವಯಸ್ಕರು ತಮ್ಮ ಜೀವನದ ಒಂದು ಹಂತದಲ್ಲಿ ಬೆನ್ನು ನೋವನ್ನು ಅನುಭವಿಸುತ್ತಾರೆ, ಮತ್ತು ಹತ್ತ ಜನ ಉದ್ಯೋಗಸ್ಥರಲ್ಲಿ ಐದು ಜನರಿಗೆ ಪ್ರತಿವರ್ಷ ಬೆನ್ನುನೋವು ಬರುತ್ತದೆ.[೧]

ಬೆನ್ನುಲುಬು ನರಗಳು, ಕೀಲುಗಳು, ಮಾಂಸಖಂಡಗಳು, ಸ್ನಾಯು ಮತ್ತು ಕಟ್ಟುಗಳನ್ನು ಒಂದಕ್ಕೊಂದು ಸೇರಿಸುವ ಒಂದು ಸಂಕೀರ್ಣ ಜಾಲಬಂಧ. ಹಾಗೂ ಇವೆಲ್ಲವೂ ನೋವು ತರಬಹುದು. ಬೆನ್ನೆಲುಬಿನಲ್ಲಿ ಹುಟ್ಟಿ ಕಾಲುಗಳು ಮತ್ತು ತೋಳುಗಳ ಕಡೆಗೆ ಹೋಗುವ ದೊಡ್ಡ ನರಗಳು ಕೈ ಕಾಲುಗಳವರೆಗೂ ನೋವನ್ನು ಹರಡಬಹುದು.

ವರ್ಗೀಕರಣ[ಬದಲಾಯಿಸಿ]

ಶರೀರ ರಚನಾ ಶಾಸ್ತ್ರದ ಪ್ರಕಾರ ಬೆನ್ನು ನೋವನ್ನು ಹೀಗೆ ವಿಂಗಡಿಸಬಹುದು: ಕತ್ತಿನ ನೋವು, ಬೆನ್ನಿನ ಮೇಲ್ಭಾಗ ನೋವು, ಬೆನ್ನಿನ ಕೆಳಭಾಗ ನೋವು ಅಥವಾ ಮೂಳೆತುದಿ ನೋವು.

ಅವಧಿಯ ಮೇಲೆ ಹೀಗೆ ವಿಂಗಡಿಸಬಹುದು: ತೀವ್ರ (4 ವಾರಗಳಿಗಿಂತ ಕೆಳಗೆ), ಅರ್ಧತೀವ್ರ (4 – 12 ವಾರಗಳು), ದೀರ್ಘಾವಧಿ (12 ವಾರಗಳಿಗಿಂತ ಹೆಚ್ಚು).

ಅದರ ಕಾರಣದ ಮೇಲೆ: ಎಂಎಸ್‌ಕೆ, ಸಾಂಕ್ರಾಮಿಕ, ಕ್ಯಾನ್ಸರ್‌, ಮುಂತಾದವು.

ಸಂಬಂಧಿತ ರೋಗಸ್ಥಿತಿಗಳು[ಬದಲಾಯಿಸಿ]

ಬೆನ್ನುನೋವು ಗಂಭೀರ ವೈದ್ಯಕೀಯ ಸಮಸ್ಯೆಯ ಸೂಚನೆಯಾಗಿರಬಹುದು, ಆದರೆ ಸದಾ ಅದೇ ಕಾರಣವಾಗಿರಬೇಕೆಂತೇನೂ ಇಲ್ಲ:

  • ಜೀವ-ಭಯವನ್ನು ಸೂಚಿಸುವ ತೊಂದರೆಯ ಸಾಮಾನ್ಯ ಲಕ್ಷಣಗಳೆಂದರೆ ಕರುಳು ಮತ್ತು/ಅಥವಾ ಮೂತ್ರಕೋಶ ಅಸಂಯಮ ಅಥವಾ ಕಾಲುಗಳಲ್ಲಿ ಹೆಚ್ಚುವ ನಿಶ್ಶಕ್ತಿ.
  • ತೀವ್ರ ಅನಾರೋಗ್ಯದ ಲಕ್ಷಣಗಳನ್ನೊಳಗೊಂಡ (ಉದಾಹರಣೆಗೆ ಜ್ವರ, ಕಾರಣ ತಿಳಿಯದೆ ತೂಕ ಕಡಿಮೆ ಆಗುವುದು) ತೀವ್ರ ಬೆನ್ನುನೋವು (ನಿದ್ದೆಗೆಡಿಸುವಷ್ಟು ನೋವು) ಅಡಗಿರುವ ಗಂಭೀರ ರೋಗಸ್ಥಿತಿಯನ್ನು ಸೂಚಿಸುತ್ತಿರಬಹುದು.
  • ಕಾರು ಅಪಘಾತ ಅಥವಾ ಬಿದ್ದಾಗ ಕಾಣಿಸಿಕೊಳ್ಳುವ ಬೆನ್ನುನೋವು ಮೂಳೆ ಮುರಿತ ಅಥವಾ ಬೇರಾವುದೇ ಪೆಟ್ಟನ್ನು ಸೂಚಿಸುತ್ತಿರಬಹುದು.
  • ಬೆನ್ನುನೋವು ಎಲುಬುಗಳ ಮುರಿತ ಅಥವಾ ಬಹುಮಯಲೋಮಾ ಮುಂತಾದ ಬೆನ್ನುಹುರಿ ಮುರಿಯುವ ರೋಗಗಳಿಗೆ ಕಾರಣವಾಗಬಹುದು. ಕೂಡಲೇ ವೈದ್ಯರನ್ನು ಕಾಣುವುದು ಅತ್ಯವಶ್ಯ.
  • ಕ್ಯಾನ್ಸರ್‌ ಇರುವ ವ್ಯಕ್ತಿಗಳಿಗೆ ಬೆನ್ನುನೋವು ಬಂದಲ್ಲಿ ಬೆನ್ನುಹುರಿಯ ಹರಡುರೋಗಗಳು (ವಿಶೇಷವಾಗಿ ಎದೆಗೆ ಹರಡುವ ರೋಗಗಳು, ಶ್ವಾಸಕೋಶ ಮತ್ತು ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್‌) ಇಲ್ಲ ಎಂಬುದನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕು.

ಸಾಮಾನ್ಯವಾಗಿ ಬೆನ್ನುನೋವಿಗೆ ತಕ್ಷಣ ಮದ್ದು ಮಾಡುವುದು ಬೇಕಾಗುವುದಿಲ್ಲ. ಅನೇಕ ವೇಳೆ ಬೆನ್ನುನೋವು ಅಷ್ಟರಲ್ಲೇ ಉಳಿಯುತ್ತದೆ ಮತ್ತು ಹೆಚ್ಚಾಗುವುದಿಲ್ಲ. ಬಹುತೇಕ ಬೆನ್ನು ನೋವು ಉರಿಯುವಿಕೆಯಿಂದ ಆಗುತ್ತದೆ, ವಿಶೇಷವಾಗಿ ತೀವ್ರವಾದಾಗ. ಇದು ಎರಡು ವಾರಗಳಿಂದ ಮೂರು ತಿಂಗಳವರೆಗೆ ಇರಬಹುದು.

ಬೆನ್ನುನೋವಿಗೆ ಕಾರಣವಾಗುವ ಎರಡು ರೋಗಸ್ಥಿತಿಗಳು ಅಂದರೆ ಕಟಿ ಡಿಸ್ಕ್‌ ಹರ್ನಿಯೇಷನ್‌ ಮತ್ತು ಡಿಜೆನರೆಟಿವ್‌ ಡಿಸ್ಕ್‌ ರೋಗಗಳು ಸಾಮಾನ್ಯ ಜನರಿಗಿಂತ ಬೆನ್ನುನೋವು ಇರುವವರಿಗೆ ಹೆಚ್ಚಾಗಿ ಇರಲಾರದೆಂದು, ಆದರೆ ಈ ಸ್ಥಿತಿಗಳು ಯಾವ ರೀತಿ ನೋವನ್ನು ತರುತ್ತದೆಂಬುದು ತಿಳಿದಿಲ್ಲ ಎಂದು ಕೆಲವು ಸಮೀಕ್ಷಣಾ ಅಧ್ಯಯನಗಳು ಹೇಳುತ್ತದೆ.[೨][೩][೪][೫] ಬೇರೆ ಅಧ್ಯಯನಗಳ ಪ್ರಕಾರ 85% ಸಂದರ್ಭಗಳಲ್ಲಿ, ಯಾವುದೇ ಶಾರೀರಿಕ ಕಾರಣಗಳನ್ನು ತೋರಿಸುವುದಕ್ಕಾಗುವುದಿಲ್ಲ.[೬][೭]

ಇನ್ನೂ ಕೆಲವು ಅಧ್ಯಯನಗಳ ಪ್ರಕಾರ, ಕ್ಷ-ಕಿರಣಗಳೋ ಅಥವಾ ಇನ್ಯಾವುದಾದರೂ ವೈದ್ಯಕೀಯ ಚಿತ್ರಣಗಳು ತೋರುವ ಶರೀರ ರಚನೆಯ ವಿಕೃತಿಗಳಿಗಿಂತ ಮನೋಸಾಮಾಜಿಕ ಕಾರಣಗಳು ಉದಾಹರಣೆಗೆ ಕೆಲಸದ ಒತ್ತಡಗಳು ಮತ್ತು ನಿಷ್ಕ್ರಿಯ ಕೌಟುಂಬಿಕ ಸಂಬಂಧಗಳು ಬೆನ್ನುನೋವಿಗೆ ಸಂಬಂಧಿಸಿರುತ್ತವೆ ಎಂದು ಹೇಳಲಾಗುತ್ತದೆ.[೮][೯][೧೦][೧೧]

ಸಾಂದರ್ಭಿಕ ವ್ಯಾಧಿ ನಿರ್ಣಯ[ಬದಲಾಯಿಸಿ]

ಬೆನ್ನುನೋವಿಗೆ ಹಲವು ಮೂಲಗಳು ಮತ್ತು ಕಾರಣಗಳಿರಬಹುದು.[೧೨] ಆದಾಗ್ಯೂ, ಬೆನ್ನುಹುರಿಯ ಪ್ರತ್ಯೇಕ ಅಂಗಾಂಶಗಳನ್ನು ಪರೀಕ್ಷಿಸುವುದರಿಂದ ತೊಂದರೆ ಏನು ಎಂದು ತಿಳಿಯುತ್ತದೆ. ಇದೇಕೆಂದರೆ, ಬೇರೆ ಬೇರೆ ಅಂಗಾಂಶಗಳಿಂದ ಹುಟ್ಟುವ ಲಕ್ಷಣಗಳು ಒಂದೇ ರೀತಿಯಾಗಿ ಕಾಣಬಹುದು ಮತ್ತು ಸ್ಥಳೀಯ ಅರವಳಿಕೆ ಮದ್ದಿನ ತಡೆಗಳಂತಹ ಪ್ರಕ್ರಿಯೆಗಳಂತಹ ವ್ಯಾಪಿಸುವ ವ್ಯಾಧಿ ನಿರ್ಣಯ ವಿಧಾನಗಳನ್ನು ಬಳಸಿಕೊಳ್ಳದೇ ಬೇರ್ಪಡಿಸುವುದು ಬಹಳ ಕಷ್ಟ.

ಬೆನ್ನಿನ ನೋವಿನ ಒಂದು ಮೂಲವೆಂದರೆ ಬೆನ್ನಿನ ಅಸ್ಥಿ ಮಾಂಸಖಂಡ. ಮಾಂಸಖಂಡದ ಅಂಗಾಂಶಗಳಲ್ಲಿ ನೋವು ಬರವುದಕ್ಕೆ ಕಾರಣಗಳೆಂದರೆ ಮಾಂಸಖಂಡ ಚಳಕು (ಮಾಂಸಖಂಡಗಳ ಎಳೆತ), ಮಾಂಸಖಂಡ ಸೆಳವು, ಮತ್ತು ಮಾಂಸಖಂಡ ಅಸಮತೋಲನ. ಆದರೆ, ಬೆನ್ನುನೋವಿನ ಹಲವು ಸಂದರ್ಭಗಳಲ್ಲಿ ವೈದ್ಯಕೀಯ ಚಿತ್ರಣಗಳು ಮಾಂಸಖಂಡಕ್ಕೆ ಹಾನಿಯಾಗಿರುವುದನ್ನು ತಿಳಿಸುವುದಿಲ್ಲ, ಮತ್ತು ಮಾಂಸಖಂಡ ಸೆಳವಿನ ಮತ್ತು ಮಾಂಸಖಂಡಗಳ ಅಸಮತೋಲನದ ನರಶರೀರಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ.

ಬೆನ್ನಿನ ಕೆಳಭಾಗ ನೋವಿಗೆ ಮತ್ತೊಂದು ಕಾರಣವೆಂದರೆ ಬೆನ್ನುಹುರಿಯ ಸೈನೋವಿಯಲ್ ಕೀಲುಗಳು (ಉದಾಹರಣೆಗೆ ಜೈಗಪೋಫಿಸಿಯಲ್ ಕೀಲುಗಳು). ಬೆನ್ನಿನ ಕೆಳಭಾಗ ನೋವು, ಬಹುತೇಕ ಸಂದರ್ಭಗಳಲ್ಲಿ ನೋವಿನ ನಂತರ ವಿಪ್‌ಲ್ಯಾಶ್‌ಗೆ ತಿರುಗುವ ಸ್ಥಿತಿಯಿರುವ ಮೂರರಲ್ಲಿ ಒಬ್ಬರ ನೋವಿಗೆ ಇವುಗಳನ್ನು ಪ್ರಾಥಮಿಕ ಮೂಲಗಳೆಂದು ಗುರುತಿಸಲಾಗುತ್ತದೆ.[೧೨] ಆದರೆ, ಜೈಗಪೋಫಿಸಿಯಲ್ ಕೀಲು ನೋವಿನ ಕಾರಣವನ್ನು ಪೂರ್ತಿಯಾಗಿ ಅರ್ಥಮಾಡಿಕೊಂಡಿಲ್ಲ. ವಿಪ್‌ಲ್ಯಾಶ್‌ಗೆ ತಿರುಗುವ ಕತ್ತಿನ ನೋವಿಗೆ ಕ್ಯಾಪ್ಸುಲ್‌ ಅಂಗಾಂಶ ಹಾನಿ ಕಾರಣ ಎಂದು ಪ್ರಸ್ತಾಪ ಮಾಡಲಾಗಿದೆ. ಜೈಗಪೋಫಿಸಿಯಲ್ ಕೀಲುಗಳಿಂದ ಹುಟ್ಟುವ ಬೆನ್ನು ನೋವನ್ನು ಹೊಂದಿರುವ ಜನರಲ್ಲಿ, ಒಂದು ಸಿದ್ಧಾಂತವೆಂದರೆ ಅವುಗಳ ಸೈನೋವಿಯಲ್‌ ಪದರಗಳ ಮತ್ತು ಫೈಬ್ರೋ-ಅಡಿಪೋಸ್ ಮೆನಿಸಾಯಿಡ್ಸ್‌ಗಳಂತಹ ಅಂತರ್-ಕೀಲಿನ ಅಂಗಾಂಶಗಳು (ಇದು ಕುಶನ್ ಹಾಗೆ ಕಾರ್ಯ ನಿರ್ವಹಿಸುತ್ತಿದ್ದು ಮೂಳೆಗಳಿಗೆ ಸುಲಭವಾಗಿ ಒಂದರ ಮೇಲೊಂದು ಚಲಿಸಲು ಸಹಾಯ ಮಾಡುತ್ತದೆ) ಸ್ಥಾನಪಲ್ಲಟಗೊಳ್ಳಬಹುದು, ಹಿಂಜಿಕೊಳ್ಳಬಹುದು ಅಥವಾ ಹಿಡಿದುಕೊಂಡಿರಬಹುದು, ಮತ್ತು ಕ್ರಮೇಣವಾಗಿ ಅದು ನೊಸಿಸೆಪ್ಶನ್‌ಗೆ ಕಾರಣವಾಗುತ್ತದೆ.

ಬೆನ್ನುನೋವಿಗೆ ಹಲವಾರು ಸಾಮಾನ್ಯ ಮೂಲಗಳು ಮತ್ತು ಕಾರಣಗಳು ಇವೆ: ಅವೆಂದರೆ ಬೆನ್ನುಹುರಿ ಡಿಸ್ಕ್‌ ಹರ್ನಿಯೇಷನ್‌ ಮತ್ತು ಡಿಜೆನರೆಟಿವ್‌ ಡಿಸ್ಕ್‌ ರೋಗ ಅಥವಾ ಇಸ್ಥ್‌ಮಿಕ್‌ ಸ್ಪಾಂಡಿಲೋಲಿಸ್ಥೆಸಿಸ್‌, ಆಸ್ಟಿಯೋಆರ್ತ್ರಿಟಿಸ್‌(ಡಿಜೆನೆರೆಟಿವ್‌ ಕೀಲು ರೋಗ) ಮತ್ತು ಬೆನ್ನುಹುರಿ ಸ್ಟೆನೋಸಿಸ್‌, ಪೆಟ್ಟು, ಕ್ಯಾನ್ಸರ್‌, ಸೋಂಕು, ಮುರಿತಗಳು, ಮತ್ತು ಉರಿ ಖಾಯಿಲೆಗಳು[೨].

ನರಮೂಲ ನೋವನ್ನು (ಸಿಯಾಟಿಕ) 'ಅಪ್ರತ್ಯೇಕ' ಬೆನ್ನು ನೋವಿನಿಂದ ಬೇರ್ಪಡಿಸಲಾಗಿದೆ, ಇದನ್ನು ಶಸ್ರ್ತೀಯ ವ್ಯಾಧಿ ನಿರ್ಣಯ ಪರೀಕ್ಷೆಗಳಿಲ್ಲದೆಯೂ ಗುರುತಿಸಬಹುದಾಗಿದೆ.

ಈಗ ನಾನ್-ಡಿಸ್ಕೋಜೆನಿಕ್ ಬೆನ್ನುನೋವಿ ನ ಕಡೆಗೆ ಹೆಚ್ಚು ಗಮನ ಹರಿಸಲಾಗಿದೆ, ಇಲ್ಲಿ ರೋಗಿಗಳು ಸಾಮಾನ್ಯ ಅಥವಾ ಸಾಮಾನ್ಯಕ್ಕೆ ಹತ್ತಿರವಾದ ಎಂ‌ಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಹೊಸ ಅನ್ವೇಷಣೆಗಳಲ್ಲಿ ಒಂದು ರೋಗಿಗಳಲ್ಲಿ, ಯಾವುದೇ ರೇಡಿಯೋಗ್ರಾಫಿಕ್ ವಿಕೃತಿಗಳಿಲ್ಲದ ಡಾರ್ಸಲ್ ರಾಮಸ್ನ ಪಾತ್ರದ ಕಡೆಗೆ ಗಮನ ಹರಿಸುತ್ತದೆ. ನೋಡಿ ಮುಂದಿನ ರಾಮಿ ರೋಗಸಮೂಹ ಲಕ್ಷಣ.

ನಿರ್ವಹಣೆ[ಬದಲಾಯಿಸಿ]

ಬೆನ್ನುನೋವಿನ ಚಿಕಿತ್ಸೆಯ ನಿರ್ವಹಣಾ ಧ್ಯೇಯಗಳೆಂದರೆ ಎಷ್ಟು ವೇಗವಾಗಿ ಸಾಧ್ಯವಾದರೆ ಅಷ್ಟು ವೇಗವಾಗಿ ನೋವಿನ ತೀವ್ರತೆಯನ್ನು ಕಡಿಮೆ ಮಾಡುವುದು; ದಿನನಿತ್ಯದ ಚಟುವಟಿಕೆಗಳನ್ನು ಮಾಡುವಲ್ಲಿ ವ್ಯಕ್ತಿಯ ಸಾಮರ್ಥ್ಯವನ್ನು ಮರಳಿಸುವುದು; ಉಳಿಯುವ ನೋವನ್ನು ನಿಭಾಯಿಸಲು ರೋಗಿಗೆ ಸಹಾಯ ಮಾಡುವುದು; ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ವಿಶ್ಲೇಷಿಸುವುದು; ಮತ್ತು ರೋಗಿಯು ಗುಣಮುಕ್ತನಾಗಲು ಅಡ್ಡಬರುವ ನ್ಯಾಯಿಕ ಮತ್ತು ಸಾಮಾಜಿಕ-ಆರ್ಥಿಕ ತೊಂದರೆಗಳನ್ನು ಮೀರಿ ನಡೆಯಲು ಅನುಕೂಲ ಮಾಡಿಕೊಡುವುದು. ಹಲವರಿಗೆ ಪೂರ್ವಸ್ಥಿತಿಗೆ ಮರಳುವ ಉದ್ದೇಶದಿಂದ ನೋವನ್ನು ಒಂದು ನಿರ್ವಹಣಾ ಮಟ್ಟದಲ್ಲಿ ಇರಿಸಿಕೊಳ್ಳುವುದೇ ಧ್ಯೇಯವಾಗಿರುತ್ತದೆ, ಇದರಿಂದ ಮುಂದಕ್ಕೆ ದೀರ್ಘಕಾಲದ ಆರಾಮವನ್ನು ಪಡೆಯಬಹುದು. ಹಾಗೆಯೇ, ಕೆಲವರಿಗೆ ಶಸ್ತ್ರಚಿಕಿತ್ಸೆಯಿಲ್ಲದೆಯೇ ನೋವನ್ನು ನಿರ್ವಹಿಸುವ ಮತ್ತು ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ತಪ್ಪಿಸಿಕೊಳ್ಳುವುದೇ ಧ್ಯೇಯ, ಇನ್ನೂ ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಆರಾಮ ಪಡೆಯುವ ಸುಲಭೋಪಾಯ.

ಎಲ್ಲಾ ಚಿಕಿತ್ಸೆಗಳೂ ಎಲ್ಲಾ ಸಂದರ್ಭದಲ್ಲೂ ಎಲ್ಲರಿಗೂ ಕೆಲಸ ಮಾಡುವುದಿಲ್ಲ. ಹಲವರು ತಮಗೆ ಯಾವ ಚಿಕಿತ್ಸೆ ಅತ್ಯಂತ ಸೂಕ್ತ ಎಂದು ಕಂಡುಹಿಡಿಯಲು ಹಲವು ಚಿಕಿತ್ಸಾ ಆಯ್ಕೆಗಳನ್ನು ಪ್ರಯತ್ನಿಸಿ ನೋಡಬೇಕೆನ್ನುತ್ತಾರೆ. ಸದ್ಯದ ಸ್ಥಿತಿ (ತೀವ್ರ ಅಥವಾ ದೀರ್ಘಕಾಲ) ಏನು ಎಂಬುದೂ ಚಿಕಿತ್ಸೆಯ ಆಯ್ಕೆ ಮಾಡುವಲ್ಲಿ ನಿರ್ಣಾಯಕ ಅಂಶವಾಗುತ್ತದೆ. ಬೆನ್ನು ನೋವು ರೋಗಿಗಳಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ಶಸ್ತ್ರಚಿಕಿತ್ಸೆ ಆವಶ್ಯಕವಾಗಿರುತ್ತದೆ(ಹಲವರು 1% - 10% ಮಾತ್ರ ಎಂದು ಅಂದಾಜು ಮಾಡುತ್ತಾರೆ).

ಅಲ್ಪಾವಧಿ ಆರಾಮ[ಬದಲಾಯಿಸಿ]

ಸಾಂಪ್ರದಾಯಿಕ ಚಿಕಿತ್ಸೆಗಳು[ಬದಲಾಯಿಸಿ]

  • ನೋವನ್ನು ಕಡಿಮೆ ಮಾಡಲು ವ್ಯಾಯಾಮ ಪರಿಣಾಮಕಾರಿ ಮಾರ್ಗವಾಗಬಹುದು, ಆದರೆ ಅಧಿಕೃತ ಆರೋಗ್ಯೋದ್ಯೋಗಿಯ ಮೇಲ್ವಿಚಾರಣೆಯೊಂದಿಗೆ ಮಾಡುವುದು ಉತ್ತಮ. ಸಾಮಾನ್ಯವಾಗಿ, ಯಾವುದಾದರೂ ಒಂದು ರೀತಿಯಲ್ಲಿ ಚಾಚುವುದು ಮತ್ತು ವ್ಯಾಯಮ, ಇವು ಬಹುತೇಕ ಬೆನ್ನುನೋವು ಚಿಕಿತ್ಸೆಗಳ ಅತ್ಯಗತ್ಯ ಭಾಗವೆಂದು ಹೇಳಲಾಗುತ್ತದೆ. ಒಂದು ಅಧ್ಯಯನದ ಪ್ರಕಾರ ವ್ಯಾಯಾಮವು ದೀರ್ಘಕಾಲದ ಬೆನ್ನುನೋವಿನ ಮೇಲೂ ಪರಿಣಾಮಕಾರಿ ಆದರೆ ತೀವ್ರ ಬೆನ್ನುನೋವಿನ ಮೇಲೆ ಪರಿಣಾಮ ಬೀರಲಾರದು.[೨೦] ಮತ್ತೊಂದು ಅಧ್ಯಯನದ ಪ್ರಕಾರ, ತೀವ್ರ ನೋವಿದ್ದಾಗ ತಡೆಯುವಷ್ಟು ಸಾಮಾನ್ಯ ಚಟುವಟಿಕೆಗಳನ್ನು ಮಾಡುವುದಕ್ಕಿಂತ ಬೆನ್ನು ಆಡಿಸುವ ವ್ಯಾಯಾಮಗಳು ಕಡಿಮೆ ಪರಿಣಾಮಕಾರಿ .[೨೧]
  • ಚಾಚುವುದು ಮತ್ತು ಬಲಪಡಿಸುವುದೂ ಸೇರಿದಂತೆ ಶಾರೀರಿಕ ನಿರ್ವಹಣೆ ಮತ್ತು ವ್ಯಾಯಾಮವನ್ನೊಳಗೊಂಡ ಶಾರೀರಿಕ ಚಿಕಿತ್ಸೆ (ವಿಶೇಷವಾಗಿ ಬೆನ್ನುಹುರಿಗೆ ಆಧಾರ ನೀಡುವ ಮಾಂಸಖಂಡಗಳ ಮೇಲೆ ಗಮನಹರಿಸಲಾಗುತ್ತದೆ). 'ಬ್ಯಾಕ್‌ ಸ್ಕೂಲ್ಸ್‌’[೨೨] ಔದ್ಯೋಗಿಕ ಸಂದರ್ಭಗಳಲ್ಲಿ ಪ್ರಯೋಜನಕಾರಿಯೆನಿಸಿದೆ. ಸ್ಕೋಲಿಯೋಸಿಸ್‌, ಕೈಫೋಸಿಸ್‌, ಸ್ಪಾಂಡಿಲೋಲಿಸ್‌ಥೀಸೀಸ್‌, ಮತ್ತು ಸಂಬಂಧಿತ ಬೆನ್ನುಹುರಿ ತೊಂದರೆಗಳಿಗೆ ವಿಶೇಷ ಶಾರೀರಿಕ ವ್ಯಾಯಮ ಚಿಕಿತ್ಸೆ ಸ್ಕ್ರಾಚ್‌ ವಿಧಾನ. ಸ್ಕ್ರಾಚ್‌ ವಿಧಾನವು ಸ್ಕೋಲಿಯೋಸಿಸ್‌ ಇರುವ ವಯಸ್ಕರಿಗೆ ಬೆನ್ನುನೋವಿನ ತೀವ್ರತೆ ಮತ್ತು ಪದೇ ಪದೇ ಬರುವುದನ್ನು ಕಡಿಮೆ ಮಾಡುತ್ತದೆ.[೨೩]
  • ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟಿಸಿರುವ ಒಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗದಿಂದ ಅಲೆಕ್ಸ್ಯಾಂಡರ್‌ ತಂತ್ರವು ದೀರ್ಘಕಾಲದ ಬೆನ್ನುನೋವಿಗೆ ಪ್ರಯೋಜನಕಾರಿ ಎಂದು ತಿಳಿದು ಬಂತು.[೨೪]. ಇದರ ನಂತರ ಬಂದ ಸಮೀಕ್ಷೆಯು 'ಅಲೆಕ್ಸಾಂಡರ್‌ ತಂತ್ರದ ಆರು ಸರಣಿ ಪಾಠಗಳು ಜೊತೆಗೆ ವ್ಯಾಯಾಮದ ನಿರ್ದೇಶಗಳು ಅತ್ಯಂತ ಪರಿಣಾಮಕಾರಿ ಎಂದು ಕಾಣುತ್ತದೆ ಮತ್ತು ಬೆನ್ನು ನೋವಿಗೆ ಪ್ರಾಥಮಿಕ ಚಿಕಿತ್ಸೆ ನೀಡುವಾಗ ಕಡಿಮೆ ಖರ್ಚಿನಲ್ಲಿಯೂ ಆಗುತ್ತದೆ’ ಎಂದು ನಿರ್ಧರಿಸಿತು.[೧೮].
  • ಶಾರೀರಿಕ ನಿರ್ವಹಣೆಯ ಅಧ್ಯಯನಗಳ ಪ್ರಕಾರ, ಈ ಮಾರ್ಗವು ಉಳಿದ ಚಿಕಿತ್ಸೆಗಳಷ್ಟೇ ಪ್ರಯೋಜನಕಾರಿ ಮತ್ತು ಪ್ಲೇಸೆಬೋಗಿಂತ ಉತ್ತಮ.[೨೫][೨೬]
  • ಆಕ್ಯುಪಂಕ್ಚರ್‌ನಿಂದ ಬೆನ್ನುನೋವಿಗೆ ಪ್ರಯೋಜನವಿದೆ ಎಂದು ಸಾಬೀತಾಗಿದೆ[೨೭]; ಆದರೆ, ಇತ್ತೀಚಿನ ಒಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗವು ರಿಯಲ್‌ ಮತ್ತು ಶಾಮ್‌ ಆಕ್ಯುಪಂಕ್ಚರ್‌ಗಳ ನಡುವೆ ಏನೂ ವ್ಯತ್ಯಾಸವಿಲ್ಲವೆಂದು ಸೂಚಿಸುತ್ತದೆ.[೨೮].
  • ಮಾನಸಿಕ ಅಥವಾ ಭಾವನಾತ್ಮಕ ಕಾರಣಗಳ ಮೇಲೆ ಬೆಳಕು ಚೆಲ್ಲಲು[೨೯] ಶಿಕ್ಷಣ, ಮತ್ತು ಮನೋಧರ್ಮ ಬದಲಾವಣೆ - ಪ್ರತಿವಾದಿ-ತಿಳಿವಳಿ ಚಿಕಿತ್ಸೆ ಮತ್ತು ಸುಧಾರಣಾ ಆರಾಮ ಚಿಕಿತ್ಸೆಗಳು ದೀರ್ಘಕಾಲದ ನೋವನ್ನು ಕಡಿಮೆ ಮಾಡಬಹುದು.[೩೦]

ಶಸ್ತ್ರಚಿಕಿತ್ಸೆ[ಬದಲಾಯಿಸಿ]

ಈ ರೋಗಲಕ್ಷಣವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಕೆಲವು ಸಂದರ್ಭದಲ್ಲಿ ಸೂಕ್ತವೆನಿಸಬಹುದು:

ಕನಿಷ್ಠ ಪ್ರಮಾಣದ ಶಸ್ತ್ರಚಿಕಿತ್ಸೆಯು ಬೆನ್ನುನೋವಿನ ಹಲವು ಕಾರಣಗಳು ಮತ್ತು ಲಕ್ಷಣಗಳಿಗೆ ಪರಿಹಾರ. ಈ ವಿಧದ ಪ್ರಕ್ರಿಯೆಗಳು ಸಾಂಪ್ರದಾಯಿಕ ಬೆನ್ನುಹುರಿ ಶಸ್ತ್ರಚಿಕಿತ್ಸೆಗಿಂತಲೂ ಹೆಚ್ಚಿನ ಅನುಕೂಲಗಳನ್ನು ಕೊಡುತ್ತದೆ, ಉದಾಹರಣೆಗೆ ಹೆಚ್ಚು ನಿಖರವಾದ ವ್ಯಾಧಿ ನಿರ್ಣಯ ಮತ್ತು ಕಡಿಮೆ ಅವಧಿಯಲ್ಲಿ ರೋಗನಿವಾರಣೆ.[೩೧]

ಪೂರ್ಣಪ್ರಯೋಜನ ಎಂಬುದು ಸಂದೇಹಾಸ್ಪದ[ಬದಲಾಯಿಸಿ]

  • ಪ್ರಯಾಸಗೊಂಡಿರುವ ಬೆನ್ನು ಅಥವಾ ದೀರ್ಘಾವಧಿ ಬೆನ್ನು ನೋವು ಇರುವವರಿಗೆ ನೋವು ಮತ್ತು ಉರಿಯನ್ನು ಕಡಿಮೆ ಮಾಡಲು ತಂಪು ಕಂಪ್ರೆಷನ್‌ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ, ವಿಶೇಷವಾಗಿ ಗಾಲ್ಫ್‌, ತೋಟಗಾರಿಕೆ ಅಥವಾ ಭಾರ ಎತ್ತುವಂತಹ ಆಯಾಸದ ಕೆಲಸಗಳನ್ನು ಮಾಡಿದ ನಂತರ. ಆದರೆ, ಯಾದೃಚ್ಛಿಕ ನಿಯಂತ್ರಿತ ಪ್ರಯೋಗಮೇಟಾ-ವಿಶ್ಲೇಷಣೆ ಮಾಡಿದ ಕೋಕ್ರೇನ್‌ ಕೊಲ್ಯಾಬೊರೇಷನ್‌ "ಕೇವಲ ಮೂರು ಕಳಪೆ ಗುಣಮಟ್ಟದ ಅಧ್ಯಯನಗಳು ಇರುವುದರಿಂದ ಬೆನ್ನಿನ ಕೆಳಭಾಗ ನೋವಿಗೆ ತಂಪು ಚಿಕಿತ್ಸೆ ಕೊಡುವುದು ಸದ್ಯಕ್ಕೆ ಅಸಾಧ್ಯವೇ. ಬೆನ್ನಿನ ಕೆಳಭಾಗ ನೋವಿಗೆ ತಂಪು ಚಿಕಿತ್ಸೆಯನ್ನು ಬಳಸುವ ಬಗ್ಗೆ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ" ಎಂಬ ತೀರ್ಮಾನಕ್ಕೆ ಬಂದಿತು.[೧೩]
  • ರೋಗಲಕ್ಷಣಗಳನ್ನು ಹೆಚ್ಚು ಮಾಡಬಹುದಾದ್ದರಿಂದ ಸಂಪೂರ್ಣ ವಿಶ್ರಾಂತಿಯನ್ನು ಅನುಮೋದಿಸುವುದಿಲ್ಲ,[೩೨] ಆದರೆ ಹಾಗೆ ಅನುಮೋದಿಸಿದರೆ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾಗಿರುತ್ತದೆ. ಹೆಚ್ಚು ಕಾಲ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ಅಥವಾ ಚಟುವಟಿಕೆಯಿಲ್ಲದೇ ಇರುವುದು ಪ್ರತಿನಿರ್ಮಾಪಕ, ಇದರಿಂದ ಉಂಟಾಗುವ ಪೆಡಸುತನದಿಂದ ನೋವು ಹೆಚ್ಚಾಗುತ್ತದೆ.
  • ವಿದ್ಯುದ್ಚಿಕಿತ್ಸೆ, ಉದಾಹರಣೆಗೆ ಟ್ರಾನ್ಸಾಕ್ಯುಟೇನಿಯಸ್‌ ಎಲೆಕ್ಟ್ರಿಕಲ್‌ ನರ್ವ್‌ ಸ್ಟಿಮ್ಯುಲೇಷನ್‌ (TENS)ಅನ್ನು ಪ್ರಸ್ತಾಪಿಸಲಾಗಿದೆ. ಇದರ ಎರಡು ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳು ತದ್ವಿರುದ್ಧ ಫಲಿತಾಂಶಗಳನ್ನು ಕಂಡವು.[೩೩][೩೪] ಇದರಿಂದ ಕೋಕ್ರೇನ್‌ ಕೊಲ್ಯಾಬೋರೇಷನ್‌ ಟಿಇಎನ್‌ಎಸ್‌ (TENS) ಬಳಕೆಯನ್ನು ಬೆಂಬಲಿಸಲು ಸಮಂಜಸವಾದ ಸಾಕ್ಷ್ಯ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಯಿತು.[೩೫] ಜೊತೆಗೆ ಬೆನ್ನುಹುರಿ ಉದ್ದೀಪನ, ಇಲ್ಲಿ ಒಂದು ವಿದ್ಯುತ್‌ ಉಪಕರಣವನ್ನು ಬಳಸಿಕೊಂಡು ಮೆದುಳಿಗೆ ರವಾನೆಯಾಗುವ ನೋವಿನ ತರಂಗಗಳನ್ನು ಭೇದಿಸಲಾಗುತ್ತದೆ ಮತ್ತು ಬೆನ್ನು ನೋವಿನ ಅನೇಕ ಕಾರಣಗಳನ್ನು ಕಂಡುಹಿಡಿಯಲು ಬಳಸಲಾಗಿದೆ.
  • ತಲೆಕೆಳಗು ಚಿಕಿತ್ಸೆಯು ಅಂಗಕರ್ಷಣ ವಿಧಾನ ಅಥವಾ (ಈ ಸಂದರ್ಭದಲ್ಲಿ) ಗುರುತ್ವದ ಮೂಲಕ ಬೆನ್ನಿನ ಕಶೇರುಗಳನ್ನು ಹರಡುವುದರಿಂದ ತಾತ್ಕಲಿಕ ಆರಾಮ ಕೊಡುವುದು ಸಾಧ್ಯ. ಈ ಬೇರ್ಪಡಿಕೆ ಆಗುವವರೆಗೂ ರೋಗಿಯು ಕಾಲುಗಳ ಮೇಲೆ ಅಥವಾ ಮಂಡಿಯ ಮೇಲೆ ತಲೆಕೆಳಗಾಗಿ ನೇತಾಡುತ್ತಿರುತ್ತಾನೆ. ಸಂಪೂರ್ಣ ನೇರಕೋನ(90 ಡಿಗ್ರಿ)ದಲ್ಲಿ ನೇತಾಡದಿದ್ದರೂ ಸಹ ಪರಿಣಾಮವನ್ನು ಕಾಣಬಹುದು, 10ರಿಂದ 45 ಡಿಗ್ರಿಗಳಷ್ಟು ಕಡಿಮೆ ಕೋನದಲ್ಲಿಯೂ ಗಮನೀಯ ಲಾಭಗಳನ್ನು ಕಾಣಬಹುದು.[ಸೂಕ್ತ ಉಲ್ಲೇಖನ ಬೇಕು]
  • ಅತಿವ್ಯಾಪ್ರ ಶಬ್ದ ತರಂಗದಿಂದ ಪ್ರಯೋಜನವಿಲ್ಲವೆಂದು ತಿಳಿದುಬಂದಿದೆ.[೩೬]

ಗರ್ಭಾವಸ್ಥೆ[ಬದಲಾಯಿಸಿ]

50% ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆನ್ನಿನ ಕೆಳಭಾಗ ನೋವನ್ನು ಅನುಭವಿಸುತ್ತಾರೆ.[೩೭] ಗರ್ಭಾವಸ್ಥೆಯಲ್ಲಿ ಬೆನ್ನುನೋವು ಬಹಳ ನೋವನ್ನು ಮತ್ತು ಅಂಗವಿಕಲತೆಯನ್ನು ತರುವಷ್ಟು ತೀವ್ರವಾಗಿರಬಹುದು. ಮುಂದಿನ ಗರ್ಭಾವಸ್ಥೆಯಲ್ಲಿಯೂ ಬೆನು ನೋವು ಕಾಣಿಸಿಕೊಳ್ಳಬಹುದು. ತಾಯಿಯ ತೂಕ ಹೆಚ್ಚುವುದು, ವ್ಯಾಯಾಮ, ಕೆಲಸದಲಿ ತೃಪ್ತಿ, ಅಥವಾ ಗರ್ಭಾವಸ್ಥೆಯ ನಂತರದ ಅಂಶಗಳಾದ ಹುಟ್ಟು ತೂಕ, ಹುಟ್ಟು ಉದ್ದ, ಮತ್ತು ಅಪ್‌ಗರ್‌ ಮಾನಗಳಿಗೆ ಸಂಬಂಧಿಸಿದಂತೆ ಬೆನ್ನು ನೋವು ಹೆಚ್ಚಾಗುವುದು ಕಂಡುಬಂದಿಲ್ಲ.

ಗರ್ಭಾವಸ್ಥೆಯಲ್ಲಿನ ಬೆನ್ನಿನ ಕೆಳಭಾಗ ನೋವಿಗೆ ಕಾರಣವಾಗುವ ಜೀವ-ಯಾಂತ್ರಿಕ ಕಾರಣಗಳೆಂದರೆ ಹೊಟ್ಟೆ ಸ್ಯಾಜಿಟ್ಟಾಲ್‌ ಮತ್ತು ವ್ಯತ್ಯಸ್ತ ವ್ಯಾಸ ಮತ್ತು ಕಟಿಯ ಆರ್ಡೋಸಿಸ್‌ನ ಆಳ. ಗರ್ಭಾವಸ್ಥೆಯ ಬೆನ್ನುನೋವನ್ನು ಬಿಗಡಾಯಿಸುವ ಸಾಮಾನ್ಯ ಅಂಶಗಳೆಂದರೆ ನಿಲ್ಲುವುದು, ಕುಳಿತುಕೊಳ್ಳುವುದು, ಮುಂದಕ್ಕೆ ಬಾಗುವುದು, ಭಾರ ಎತ್ತುವುದು, ಮತ್ತು ನಡೆಯುವುದು. ಗರ್ಭಾವಸ್ಥೆಯ ಬೆನ್ನುನೋವು ತೊಡೆ ಮತ್ತು ಪೃಷ್ಠಗಳಿಗೂ ಹರಡಬಹುದು, ರಾತ್ರಿಯ ಹೊತ್ತು ಬರುವ ನೋವು ರೋಗಿಯ ನಿದ್ದೆಗೆಡಿಸಬಹುದು, ರಾತ್ರಿಯ ಹೊತ್ತು ನೋವು ಹೆಚ್ಚಾಗಬಹುದು ಅಥವಾ ಬೆಳಗಿನ ಹೊತ್ತು ನೋವು ಹೆಚ್ಚಾಗಬಹುದು. ಹೆಚ್ಚು ಪ್ರಭಾವ ಬೀರುವ, ತೂಕ ಹೊರುವ ಮತ್ತು ಮತ್ತು ವಿಶೇಷವಾಗಿ ಇದರಲ್ಲಿ ಸೇರಿದ ರಚನೆಗಳನ್ನು ಅಸಮಂಜಸವಾಗಿ ತುಂಬುವಂತಹವು, ಉದಾಹರಣೆಗೆ: ಎತ್ತುವ ಜೊತೆಗೆ ಅಧಿಕ ತಿರುವು, ಒಂದೇ ಕಾಲಿನಲ್ಲಿ ನಿಲ್ಲುವ ಭಂಗಿಗಳು, ಮೆಟ್ಟಿಲು ಹತ್ತುವುದು, ಮತ್ತು ಬೆನ್ನು ಅಥವಾ ಪೃಷ್ಠದಲ್ಲಿ ಅಥವಾ ಅದರ ಅಂಚಿನಲ್ಲಿ ಪುನರಾವರ್ತಿತ ಚಲನೆಗಳನ್ನು ಮಾಡುವುದು - ಈ ಚಟುವಟಿಕೆಗಳನ್ನು ತಪ್ಪಿಸುವುದರಿಂದ ನೋವು ಕಡಿಮೆಯಾಗುವುದು. ಮೊಣಕಾಲು ಬಗ್ಗಿಸದೇ ನೇರವಾಗಿ ನೆಲಕ್ಕೆ ಬಗ್ಗುವುದು ಗರ್ಭಾವಸ್ಥೆಯಲ್ಲಿ ಬೆನ್ನಿನ ಕೆಳಭಾಗದ ಮೇಲೆ ಅಧಿಕ ಪರಿಣಾಮ ಉಂಟುಮಾಡುತ್ತದೆ ಮತ್ತು ಸಾಮಾನ್ಯರಲ್ಲಿ ಪ್ರಯಾಸಕ್ಕೆ ಕಾರಣವಾಗುತ್ತದೆ; ವಿಶೇಷವಾಗಿ ಲಂಬೋ-ಸ್ಯಾಕ್ರಲ್‌ ಭಾಗದಲ್ಲಿ, ಇದು ಮಲ್ಟಿಫೀಡಸ್‌ನ ಪ್ರಯಾಸಕ್ಕೆ ಕಾರಣವಾಗುತ್ತದೆ.

ಆರ್ಥಿಕತೆ[ಬದಲಾಯಿಸಿ]

ರಾಷ್ಟ್ರೀಯ ಸರ್ಕಾರಗಳು ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುವುದಕ್ಕೆ ಬೆನ್ನುನೋವು ಅನೇಕ ವೇಳೆ ಕಾರಣ ಎನ್ನುತ್ತವೆ. ಕಾಯಿಲೆ ರಜಾದ ಮೂಲಕ ಕಾರ್ಮಿಕರ ನಷ್ಟವಾಗುವುದು ಇದಕ್ಕೆ ಕಾರಣ. ಕೆಲವು ರಾಷ್ಟ್ರೀಯ ಸರ್ಕಾರಗಳು, ಗಮನೀಯವಾಗಿ ಆಸ್ಟ್ರೇಲಿಯಾ ಮತ್ತು ಯುನೈಟೆಡ್‌ ಕಿಂಗ್‌ಡಮ್‌ಗಳು ಈ ತೊಂದರೆಯನ್ನು ಎದುರಿಸಲು ಸಾರ್ವಜನಿಕ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಉದಾಹರಣೆಗೆ ಹೆಲ್ತ್‌ ಮತ್ತು ಸೇಫ್ಟಿ ಎಕ್ಸಿಕ್ಯೂಟಿವ್‌ಬೆಟರ್‌ ಬ್ಯಾಕ್ಸ್‌ ಚಳುವಳಿ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಬೆನ್ನಿನ ಕೆಳಭಾಗ ನೋವಿನ ಆರ್ಥಿಕ ಪರಿಣಾಮ ಏನು ಹೇಳುತ್ತದೆಂದರೆ 45 ವರ್ಷಕ್ಕಿಂತ ಕೆಳಗಿನವರು ತಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸಲು ಮೊದಲ ಕಾರಣ ಬೆನ್ನುನೋವು, ವೈದ್ಯರ ಬಳಿ ಬರುವ ಎರಡನೇ ಅತಿ ಹೆಚ್ಚು ದೂರು, ಆಸ್ಪತ್ರೆಗೆ ದಾಖಲಾಗಲು ಐದನೇ ಸಾಮಾನ್ಯ ಕಾರಣ, ಮತ್ತು ಶಸ್ತ್ರ-ಚಿಕಿತ್ಸೆ ಮಾಡಿಸಿಕೊಳ್ಳಲು ಮೂರನೇ ಪ್ರಮುಖ ಕಾರಣ.

ಸಂಶೋಧನೆ[ಬದಲಾಯಿಸಿ]

ಚಿಕಿತ್ಸಾ ಪ್ರಯೋಗಗಳು[ಬದಲಾಯಿಸಿ]

ಉದ್ಯಮದಿಂದ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಂದ ಪ್ರಾಯೋಜಿತಗೊಂಡ ಹಲವು ಚಿಕಿತ್ಸಾ ಪ್ರಯೋಗಗಳಿವೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಪ್ರಾಯೋಜಿಸಿರುವ ಬೆನ್ನು ನೋವಿಗೆ ಸಂಬಂಧಿಸಿದ ಚಿಕಿತ್ಸಾ ಪ್ರಯೋಗಗಳನ್ನು ಇಲ್ಲಿ ನೋಡಬಹುದು: ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಬೆನ್ನು ನೋವು ಚಿಕಿತ್ಸಾ ಪ್ರಯೋಗಗಳು

ನೋವು ಎನ್ನುವುದು ವ್ಯಕ್ತಿನಿಷ್ಠವಾಗಿದ್ದು ಅದನ್ನು ವಸ್ತುನಿಷ್ಠವಾಗಿ ಪರೀಕ್ಷಿಸುವುದು ಅಸಾಧ್ಯ. ವಸ್ತುನಿಷ್ಠವಾಗಿ ಪ್ರಮಾಣೀಕರಿಸಲು ಯಾವ ಚಿಕಿತ್ಸಾ ಪರೀಕ್ಷೆಗಳು ಇಲ್ಲ. ಚಿಕಿತ್ಸಾ ಪ್ರಯೋಗಗಳು ರೋಗಿಯ ನೋವಿನ ತೀವ್ರತೆಯ ವರದಿಯನ್ನು 1ರಿಂದ 10ರ ಮಾಪನದಲ್ಲಿ ಬಳಸಿಕೊಳ್ಳುತ್ತವೆ. ಕೆಲವೊಮ್ಮೆ, ವಿಶೇಷವಾಗಿ ಮಕ್ಕಳನ್ನು ಪರೀಕ್ಷಿಸುವಾಗ ರೋಗಿಗೆ ಹಲವಾರು ಎಮೋಟಿಕಾನ್‌ಗಳನ್ನು ತೋರಿಸಲಾಗುತ್ತದೆ ಮತ್ತು ಯಾವುದಾದರೂ ಒಂದು ಎಮೋಟಿಕಾನ್‌ಅನ್ನು ತೋರಿಸಲು ಹೇಳಲಾಗುತ್ತದೆ. ಚಿಕಿತ್ಸಾ ಪ್ರಯೋಗಗಳು ಉತ್ಪನ್ನಗಳಿಗೆ ಕಾನೂನು ಪರವಾನಗಿಯನ್ನು ಪಡೆಯಲು ಸಹಾಯ ಮಾಡುತ್ತವಾದರೂ, ಈ ಚಿಕಿತ್ಸೆಯು ಹೆಚ್ಚು ಫಲಕಾರಿ ಅಥವಾ ಕೇವಲ ಫಲಕಾರಿ ಎಂದು ಹೇಳುವುದಕ್ಕೆ ಸಹ ಈ ಪ್ರಯೋಗಗಳು ಆಧಾರವಲ್ಲ. ಎಲ್ಲಾ ಪರೀಕ್ಷೆಗಳೂ ರೋಗಿಯ ಗ್ರಹಿಕೆಯನ್ನೇ ಅವಲಂಬಿಸಿರುತ್ತದೆ. ಒಬ್ಬ ವೈದ್ಯನು ಒಂದು ರೋಗಿಯ ಅಂಕ 5, 1 ಅಥವಾ 10ಕ್ಕಿಂತ ಸಮರ್ಪಕವೇ ಎಂದಾಗಲೀ, ಒಬ್ಬ ರೋಗಿಯ 5 ಅಂಕಗಳನ್ನು ಮತ್ತೊಬ್ಬ ರೋಗಿಯ 5 ಅಂಕಗಳಿಗೆ ಹೋಲಿಸಬಹುದೇ ಎಂದಾಗಲೀ ನಿರ್ಧರಿಸಲಾಗುವುದಿಲ್ಲ.

2008ರ ಯಾದೃಚ್ಛಿಕ ನಿಯಂತ್ರಿತ ಪ್ರಯೋಗವು ಅಲೆಕ್ಸಾಂಡರ್‌ ತಂತ್ರದೊಂದಿಗೆ ಬೆನ್ನು ನೋವನ್ನು ನಿವಾರಿಸುವಲ್ಲಿ ಗಮನೀಯ ಸುಧಾರಣೆಯನ್ನು ಕಂಡಿತು. ವ್ಯಾಯಾಮ ಮತ್ತು ಎಟಿ(AT)ಯ 6 ಪಾಠಗಳು 72% ಬೆನ್ನು ನೋವನ್ನು ಕಡಿಮೆ ಮಾಡಿತು, ಇದು 24 ಎಟಿ ಪಾಠಗಳಿಗೆ ಸಮ. 21 ದಿನಗಳ ನಿಯಂತ್ರಣ ಮಧ್ಯವರ್ತಿಗಿಂತ 24 ಪಾಠಗಳನ್ನು ಪಡೆಯುತ್ತಿರುವವರು 18 ಕಡಿಮೆ ದಿನಗಳಷ್ಟು ಬೆನ್ನು ನೋವನ್ನು ಹೊಂದಿರುತ್ತಾರೆ.[೨೪]

ಆಕರಗಳು[ಬದಲಾಯಿಸಿ]

  1. ಎ.ಟಿ. ಪಟೇಲ್, ಎ.ಎ. ಓಗ್ಲೆ. "ಡಯಾಗ್ನೈಸಿಸ್ ಅಂಡ್ ಮ್ಯಾನೇಜ್‌ಮೆಂಟ್ ಆಫ್ ಅಕ್ಯೂಟ್ ಲೋ ಬ್ಯಾಕ್ ಪೇಯ್ನ್ Archived 2011-10-26 ವೇಬ್ಯಾಕ್ ಮೆಷಿನ್ ನಲ್ಲಿ.". ಅಮೇರಿಕನ್ ಅಕಾಡೆಮಿ ಆಫ್ ಫ್ಯಾಮಿಲಿ ಫಿಸಿಶಿಯನ್ಸ್. ಮಾರ್ಚ್ 27, 2007ರಲ್ಲಿ ಮರುಸಂಪಾದಿಸಲಾಗಿದೆ.
  2. Borenstein DG, O'Mara JW, Boden SD; et al. (2001). "The value of magnetic resonance imaging of the lumbar spine to predict low-back pain in asymptomatic subjects : a seven-year follow-up study". The Journal of bone and joint surgery. American volume. 83-A (9): 1306–11. PMID 11568190. {{cite journal}}: Explicit use of et al. in: |author= (help)CS1 maint: multiple names: authors list (link)
  3. Savage RA, Whitehouse GH, Roberts N (1997). "The relationship between the magnetic resonance imaging appearance of the lumbar spine and low back pain, age and occupation in males". European spine journal : official publication of the European Spine Society, the European Spinal Deformity Society, and the European Section of the Cervical Spine Research Society. 6 (2): 106–14. PMID 9209878.{{cite journal}}: CS1 maint: multiple names: authors list (link)
  4. Jensen MC, Brant-Zawadzki MN, Obuchowski N, Modic MT, Malkasian D, Ross JS (1994). "Magnetic resonance imaging of the lumbar spine in people without back pain". N. Engl. J. Med. 331 (2): 69–73. doi:10.1056/NEJM199407143310201. PMID 8208267.{{cite journal}}: CS1 maint: multiple names: authors list (link)
  5. Kleinstück F, Dvorak J, Mannion AF (2006). "Are "structural abnormalities" on magnetic resonance imaging a contraindication to the successful conservative treatment of chronic nonspecific low back pain?". Spine. 31 (19): 2250–7. doi:10.1097/01.brs.0000232802.95773.89. PMID 16946663.{{cite journal}}: CS1 maint: multiple names: authors list (link)
  6. White AA, Gordon SL (1982). "Synopsis: workshop on idiopathic low-back pain". Spine. 7 (2): 141–9. doi:10.1097/00007632-198203000-00009. PMID 6211779.
  7. van den Bosch MA, Hollingworth W, Kinmonth AL, Dixon AK (2004). "Evidence against the use of lumbar spine radiography for low back pain". Clinical radiology. 59 (1): 69–76. doi:10.1016/j.crad.2003.08.012. PMID 14697378.{{cite journal}}: CS1 maint: multiple names: authors list (link)
  8. Burton AK, Tillotson KM, Main CJ, Hollis S (1995). "Psychosocial predictors of outcome in acute and subchronic low back trouble". Spine. 20 (6): 722–8. doi:10.1097/00007632-199503150-00014. PMID 7604349.{{cite journal}}: CS1 maint: multiple names: authors list (link)
  9. Carragee EJ, Alamin TF, Miller JL, Carragee JM (2005). "Discographic, MRI and psychosocial determinants of low back pain disability and remission: a prospective study in subjects with benign persistent back pain". The spine journal : official journal of the North American Spine Society. 5 (1): 24–35. doi:10.1016/j.spinee.2004.05.250. PMID 15653082.{{cite journal}}: CS1 maint: multiple names: authors list (link)
  10. Hurwitz EL, Morgenstern H, Yu F (2003). "Cross-sectional and longitudinal associations of low-back pain and related disability with psychological distress among patients enrolled in the UCLA Low-Back Pain Study". Journal of clinical epidemiology. 56 (5): 463–71. doi:10.1016/S0895-4356(03)00010-6. PMID 12812821.{{cite journal}}: CS1 maint: multiple names: authors list (link)
  11. Dionne CE (2005). "Psychological distress confirmed as predictor of long-term back-related functional limitations in primary care settings". Journal of clinical epidemiology. 58 (7): 714–8. doi:10.1016/j.jclinepi.2004.12.005. PMID 15939223.
  12. ೧೨.೦ ೧೨.೧ ಬಾಗ್‌ಡುಕ್ ಎನ್ | ಕ್ಲಿನಿಕಲ್ ಅನಾಟಮಿ ಆಫ್ ದ ಲಂಬರ್ ಸ್ಪೈನ್ ಅಂಡ್ ಸ್ಯಾಕ್ರಮ್, 4ನೇ ಆವೃತ್ತಿ. | ಏಡಿನ್‌ಬರೋ: ಚರ್ಚಿಲ್ ಲಿವಿಂಗ್‌ಸ್ಟೋನ್ | 2005
  13. ೧೩.೦ ೧೩.೧ French S, Cameron M, Walker B, Reggars J, Esterman A (2006). "A Cochrane review of superficial heat or cold for low back pain". Spine. 31 (9): 998–1006. doi:10.1097/01.brs.0000214881.10814.64. PMID 16641776.{{cite journal}}: CS1 maint: multiple names: authors list (link)
  14. van Tulder M, Touray T, Furlan A, Solway S, Bouter L (2003). "Muscle relaxants for non-specific low back pain". Cochrane Database Syst Rev (2): CD004252. doi:10.1002/14651858.CD004252. PMID 12804507.{{cite journal}}: CS1 maint: multiple names: authors list (link)
  15. van Tulder M, Scholten R, Koes B, Deyo R (2000). "Non-steroidal anti-inflammatory drugs for low back pain". Cochrane Database Syst Rev (2): CD000396. doi:10.1002/14651858.CD000396. PMID 10796356.{{cite journal}}: CS1 maint: multiple names: authors list (link)
  16. Nelemans P, de Bie R, de Vet H, Sturmans F (1999). "Injection therapy for subacute and chronic benign low back pain". Cochrane Database Syst Rev (2): CD001824. doi:10.1002/14651858.CD001824. PMID 10796449.{{cite journal}}: CS1 maint: multiple names: authors list (link)
  17. Friedman B, Holden L, Esses D, Bijur P, Choi H, Solorzano C, Paternoster J, Gallagher E (2006). "Parenteral corticosteroids for Emergency Department patients with non-radicular low back pain". J Emerg Med. 31 (4): 365–70. doi:10.1016/j.jemermed.2005.09.023. PMID 17046475.{{cite journal}}: CS1 maint: multiple names: authors list (link)
  18. ೧೮.೦ ೧೮.೧ ಸಾಂಡ್ರಾ ಹೋಲಿಂಗ್‌ಹರ್ಸ್ಟ್ ಎಟ್ ಆಲ್.,ರೇಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ ಆಫ್ ಅಲೆಕ್ಸಾಂಡರ್ ಟೆಕ್ನಿಕ್ ಲೆಸನ್ಸ್, ಎಕ್ಸರ್ಸೈಸ್, ಅಂಡ್ ಮಸಾಜ್ (ATEAM) ಫಾರ್ ಕ್ರೋನಿಕ್ ಅಂಡ್ ರಿಕರಂಟ್ ಬ್ಯಾಕ್ ಪೇಯ್ನ್: ಎಕನಾಮಿಕ್ ಇವ್ಯಾಲುಯೇಶನ್, ಬ್ರಿಟೀಷ್ ಮೆಡಿಕಲ್ ಜರ್ನಲ್, 11 ಡಿಸೆಂಬರ್ 2008.
  19. Furlan A, Brosseau L, Imamura M, Irvin E (2002). "Massage for low back pain". Cochrane Database Syst Rev (2): CD001929. doi:10.1002/14651858.CD001929. PMID 12076429.{{cite journal}}: CS1 maint: multiple names: authors list (link)
  20. Hayden J, van Tulder M, Malmivaara A, Koes B (2005). "Exercise therapy for treatment of non-specific low back pain". Cochrane Database Syst Rev (3): CD000335. doi:10.1002/14651858.CD000335.pub2. PMID 16034851.{{cite journal}}: CS1 maint: multiple names: authors list (link)
  21. Malmivaara A, Häkkinen U, Aro T, Heinrichs M, Koskenniemi L, Kuosma E, Lappi S, Paloheimo R, Servo C, Vaaranen V (1995). "The treatment of acute low back pain--bed rest, exercises, or ordinary activity?". N Engl J Med. 332 (6): 351–5. doi:10.1056/NEJM199502093320602. PMID 7823996.{{cite journal}}: CS1 maint: multiple names: authors list (link)
  22. Heymans M, van Tulder M, Esmail R, Bombardier C, Koes B (2004). "Back schools for non-specific low-back pain". Cochrane Database Syst Rev (4): CD000261. doi:10.1002/14651858.CD000261.pub2. PMID 15494995.{{cite journal}}: CS1 maint: multiple names: authors list (link)
  23. ವೇಇಸ್ ಎಚ್‌ಆರ್, ಸ್ಕೋಲಿಯೋಸಿಸ್-ರಿಲೇಟೆಡ್ ಪೇಯ್ನ್ ಇನ್ ಅಡಲ್ಟ್ಸ್: ಟ್ರೀಟ್‌ಮೆಂಟ್ ಇನ್‌ಫ್ಲುಯೆನ್ಸಸ್. Eur J Phys Med Rehabil 1993; 3(3):91-94.
  24. ೨೪.೦ ೨೪.೧ ಪಾಲ್ ಲಿಟಲ್ ಎಟ್ ಆಲ್.,ರೇಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ ಆಫ್ ಅಲೆಕ್ಸಾಂಡರ್ ಟೆಕ್ನಿಕ್ ಲೆಸನ್ಸ್, ಎಕ್ಸರ್ಸೈಸ್, ಅಂಡ್ ಮಸಾಜ್ (ATEAM) ಫಾರ್ ಕ್ರೋನಿಕ್ ಅಂಡ್ ರಿಕರಂಟ್ ಬ್ಯಾಕ್ ಪೇಯ್ನ್: ಎಕನಾಮಿಕ್ ಇವ್ಯಾಲುಯೇಶನ್, ಬ್ರಿಟೀಷ್ ಮೆಡಿಕಲ್ ಜರ್ನಲ್, 19 ಅಗಸ್ಟ್ 2008.
  25. Assendelft W, Morton S, Yu E, Suttorp M, Shekelle P (2004). "Spinal manipulative therapy for low back pain". Cochrane Database Syst Rev (1): CD000447. doi:10.1002/14651858.CD000447.pub2. PMID 14973958.{{cite journal}}: CS1 maint: multiple names: authors list (link)
  26. Cherkin D, Sherman K, Deyo R, Shekelle P (2003). "A review of the evidence for the effectiveness, safety, and cost of acupuncture, massage therapy, and spinal manipulation for back pain". Ann Intern Med. 138 (11): 898–906. PMID 12779300.{{cite journal}}: CS1 maint: multiple names: authors list (link)
  27. [೧]
  28. "ಆರ್ಕೈವ್ ನಕಲು". Archived from the original on 2009-12-14. Retrieved 2010-05-24.
  29. Sarno, John E. (1991). Healing Back Pain: The Mind-Body Connection. Warner Books. ISBN 0-446-39320-8. {{cite book}}: Check |isbn= value: checksum (help)
  30. Ostelo R, van Tulder M, Vlaeyen J, Linton S, Morley S, Assendelft W (2005). "Behavioural treatment for chronic low-back pain". Cochrane Database Syst Rev (1): CD002014. doi:10.1002/14651858.CD002014.pub2. PMID 15674889.{{cite journal}}: CS1 maint: multiple names: authors list (link)
  31. "Compare Procedures - North American Spine". Retrieved 2010-03-31.
  32. Hagen K, Hilde G, Jamtvedt G, Winnem M (2004). "Bed rest for acute low-back pain and sciatica". Cochrane Database Syst Rev (4): CD001254. doi:10.1002/14651858.CD001254.pub2. PMID 15495012.{{cite journal}}: CS1 maint: multiple names: authors list (link)
  33. Cheing GL, Hui-Chan CW (1999). "Transcutaneous electrical nerve stimulation: nonparallel antinociceptive effects on chronic clinical pain and acute experimental pain". Archives of physical medicine and rehabilitation. 80 (3): 305–12. doi:10.1016/S0003-9993(99)90142-9. PMID 10084439.
  34. Deyo RA, Walsh NE, Martin DC, Schoenfeld LS, Ramamurthy S (1990). "A controlled trial of transcutaneous electrical nerve stimulation (TENS) and exercise for chronic low back pain". N. Engl. J. Med. 322 (23): 1627–34. PMID 2140432.{{cite journal}}: CS1 maint: multiple names: authors list (link)
  35. Khadilkar A, Milne S, Brosseau L; et al. (2005). "Transcutaneous electrical nerve stimulation (TENS) for chronic low-back pain". Cochrane database of systematic reviews (Online) (3): CD003008. doi:10.1002/14651858.CD003008.pub2. PMID 16034883. {{cite journal}}: Explicit use of et al. in: |author= (help)CS1 maint: multiple names: authors list (link)
  36. ಎ ರಿವ್ಯೂ ಆಫ್ ಥೆರಪ್ಯೂಟೀಕ್ ಅಲ್ಟ್ರಾಸೌಂಡ್: ಎಫೆಕ್ಟಿವ್‌ನೆಸ್ ಸ್ಟಡೀಸ್, ವಾಲ್ಮಾ ಜೆ ರಾಬರ್ಟ್‌ಸನ್, ಕೆರ್ರಿ ಜಿ ಬೇಕರ್, ಫಿಸಿಕಲ್ ಥೆರಪಿ. ಸಂಪುಟ 81 . ನಂಬರ್ 7 . ಜುಲೈ 2007.
  37. ಓಸ್ಟ್‌ಗಾರ್ಡ್ ಎಚ್‌ಸಿ, ಅಂಡರ್ಸನ್ ಜಿಬಿಜೆ, ಕಾರ್ಲ್ಸನ್ ಕೆ. ಪ್ರಿವಲನ್ಸ್ ಆಫ್ ಬ್ಯಾಕ್ ಪೇಯ್ನ್ ಇನ್ ಪ್ರೆಗ್ನನ್ಸಿ. ಸ್ಪೈನ್ 1991;16:549-52.
  38. ೩೮.೦ ೩೮.೧ ಯುಸೈಲರ್ ಎನ್, ಸೊಮ್ಮರ್ ಸಿ. ಸೈಟೋಕಿನ್-ಇಂಡ್ಯೂಸ್ಡ್ ಪೇಯ್ನ್: ಬೇಸಿಕ್ ಸೈನ್ಸ್ ಅಂಡ್ ಕ್ಲಿನಿಕಲ್ ಇಂಪ್ಲಿಕೇಶನ್ಸ್. ರಿವ್ಯೂಸ್ ಇನ್ ಅನಾಲ್ಜೇಸಿಯಾ 2007;9(2):87-103.

ಹೊರಗಿನ ಕೊಂಡಿಗಳು[ಬದಲಾಯಿಸಿ]