ಬಿ.ಎಮ್.ಹೆಗ್ಡೆ

ವಿಕಿಪೀಡಿಯ ಇಂದ
Jump to navigation Jump to search
Belle Monappa Hegde
BelleMonappaHegde.JPG
Hegde in 2005
ಜನನ August 18, 1938
South Canara,
Madras Presidency,
British India
(now in Udupi District, Karnataka, India)
Medical career
Profession medical scientist,educationist and author
Institutions Manipal University
Bharatiya Vidya Bhavan
Notable prizes Dr. B. C. Roy Award(1999)
Padma Bhushan (2010)
B M Hegde being conferred an honorary doctorate by Kiran Kumar Reddy

ಬಿ ಎಮ್ ಹೆಗ್ಡೆ ( ಬೆಳ್ಳೆ ಮೊನಪ್ಪ ಹೆಗ್ಡೆ ) ಇವರು ಖ್ಯಾತ ಹೃದ್ರೋಗ ತಜ್ಞರಲ್ಲೊಬ್ಬರು. ಇವರು ೧೮ ಆಗಸ್ಟ್ ೧೯೩೮ರಲ್ಲಿ ಜನಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಹಿರಿಯಡಕದ ಬೊರ್ಡ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಉಡುಪಿಯ ಎಂ ಜಿ ಎಮ್ ಕಾಲೇಜ್ ನಲ್ಲಿ ಇಂಟರಮೀಡಿಯೇಟ್ ಶಿಕ್ಷಣವನ್ನು ಮುಗಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವೈದ್ಯ (ಎಂಬಿಬಿಎಸ್) ಪದವಿಯನ್ನು ೧೯೬೦ರಲ್ಲಿಪಡೆದರು.

ಕರ್ನಾಟಕ, ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ವಿರಳ ವೈದ್ಯರಲ್ಲಿ ಡಾ. ಬೆಳ್ಳಿ ಮೋನಪ್ಪ ಹೆಗ್ಡೆ ಅಗ್ರಗಣ್ಯರು. ಡಾ.ಬಿ.ಎಂ.ಹೆಗ್ಡೆ ಎಂದು ಹೆಸರಾಗಿರುವ ಗಣ್ಯರು ಹೃದ್ರೋಗ ತಜ್ಞರು. ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಲೇಖಕರಾಗಿ, ಶಿಕ್ಷಣ ತಜ್ಞರಾಗಿ, ಉಪಕುಲಪತಿಗಳಾಗಿ, ಎಲ್ಲಕ್ಕೂ ಮಿಗಿಲಾಗಿ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಇವರು ಸಲ್ಲಿಸುತ್ತಿರುವ ಸೇವೆ ಅದ್ವಿತೀಯ. ಭಾರತೀಯ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ|ಬಿ.ಸಿ.ರಾಯ್ ಪ್ರಶಸ್ತಿಯನ್ನು ೧೯೯೯ರಲ್ಲಿ ಪಡೆದ ಹೆಗ್ಡೆಯವರಿಗೆ ಭಾರತ ಸರ್ಕಾರವು ೨೦೧೦ ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಹೆಗ್ಡೆಯವರು ಪ್ರಸ್ತುತ ಭಾರತೀಯ ವಿದ್ಯಾಭವನ ಮಂಗಳೂರು ಘಟಕದ ಮುಖ್ಯಸ್ಥರಾಗಿರುವರು.

ಜನನ: ಬೆಳ್ಳೆ ಮೋನಪ್ಪ ಹೆಗ್ಡೆಯವರು ಆಗಸ್ಟ್ ೧೮, ೧೯೩೮ ರಂದು ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದರು.

ವಿದ್ಯಾಭ್ಯಾಸ: ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್ ಪದವಿ. ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂ.ಡಿ.ಪದವಿ. ಹೆಗ್ಡೆಯವರು ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿ, ಅಲ್ಲಿರುವ ಎಲ್ಲಾ ರಾಯಲ್ ಕಾಲೇಜುಗಳ ಫೆಲೋ ಆದ ಪ್ರಪ್ರಥಮ ಹಾಗೂ ಏಕೈಕ ಕನ್ನಡಿಗ ಹಾಗೂ ಭಾರತೀಯನೆನಿಸಿಕೊಂಡರು. ಪ್ರೊ. ಬೆರ್ನಾರ್ಡ್ ಲೋವ್ನ್ ನಂತಹ ನೋಬೆಲ್ ಪಾರಿತೋಷಕ ಪುರಸ್ಕೃತ ವೈದ್ಯರ ಹತ್ತಿರ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂ.ಆರ್.ಸಿ.ಪಿ ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯರಾಗಿರುವರು. ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಪರೀಕ್ಷಕರಾಗಿ ದಕ್ಷಿಣ ಅಮೇರಿಕ ಒಂದನ್ನು ಬಿಟ್ಟು ಜಗತ್ತಿನ ಉಳಿದ ಎಲ್ಲಾ ಖಂಡಗಳ ಪ್ರಮುಖ ವಿ.ವಿ.ಗಳಿಗೆ ಹೋಗಿರುವರು. ೧೯೮೨ ರಿಂದ ಲಂಡನ್ ವಿ.ವಿ ಯ ಶಾಶ್ವತ ಸಂದರ್ಶನ ಪ್ರಾಧ್ಯಪಕರಾಗಿ ಕೆಲಸ ಮಾಡುತ್ತಿರುವ ಗಣ್ಯರು, ಕಸ್ತೂರಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿ ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ಮಂಗಳೂರಿನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿರುವರು.

ಡಾ.ಬಿ.ಎಂ.ಹೆಗ್ಡೆಯವರು ಆಸ್ತಿಕರು. ಭಾರತೀಯ ವಿದ್ಯಾಭವನದೊಡನೆ ನಿಕಟ ಸಂಪರ್ಕ ಹೊಂದಿರುವ ಡಾ.ಬಿ.ಎಂ.ಹೆಗ್ಡೆಯವರು ಆಯುರ್ವೇದದ ಸತ್ವವನ್ನು ಮನಗಂಡು ಲಂಡನ್ನಿನ ಥೇಮ್ಸ್ ವ್ಯಾಲಿ ವಿ.ವಿಯ ಆಶ್ರಯದಲ್ಲಿ ಒಂದು ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಕಾರಣರಾಗಿರುವರು.

ನಿಷ್ಠೂರವಾದಿ: ಡಾ.ಬಿ.ಎಂ.ಹೆಗ್ಡೆ ಅವರು ಯಾವುದೇ ರೀತಿಯ ಸಂಕೋಚವಿಲ್ಲದೆ ವೈದ್ಯಕೀಯ ರಂಗದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಬಲ್ಲ ಸತ್ಯಪ್ರಿಯ ನಿಷ್ಠೂರವಾದಿಗಳು. ಆಧುನಿಕ ವೈದ್ಯಕೀಯದಲ್ಲಿರುವ ಅನಗತ್ಯ ತಪಾಸಣೆಗಳ, ಅನಗತ್ಯ ಔಷಧಗಳ ಹಾಗೂ ಅನಗತ್ಯ ಚಿಕಿತ್ಸೆಗಳ ಬಗ್ಗೆ ಉಗ್ರವಾಗಿ ಖಂಡಿಸುವ ಪ್ರವೃತ್ತಿ ರಕ್ತಗತವಾಗಿ ಬಂದಿದೆ. ಹಾಗಾಗಿ ಇವರಿಗೆ ಸಾಕಷ್ಟು ಹಿತಶತ್ರುಗಳಿರುವರು. ಅನೇಕ ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಗಣ್ಯರು ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ (ಭಾರತ, ಬ್ರಿಟನ್, ಅಮೆರಿಕ, ಜರ್ಮನಿ, ಕುವೈಟ್, ಚೈನಾ) ಸಂಪಾದಕ ಮಡಳಿಯಲ್ಲಿ ಹಾಗೂ ಸಲಹಾಮಂಡಳಿಯಲ್ಲಿರುವರು ಹಾಗೂ ಪ್ರತಿಷ್ಟಿತ ಬ್ರಿಟಿಶ್ ಮೆಡಿಕಲ್ ಜರ್ನಲ್ (ಬಿ.ಎಂ.ಜೆ) ‘ರೆಫ್ರಿ‘ಯಾಗಿಯೂ ಕೆಲಸ ಮಾಡುತ್ತಿರುವರು.

ಬರಹಗಾರರು: ಡಾ.ಬಿ.ಎಂ.ಹೆಗ್ಡೆ ಅವರು ಅತ್ಯುತ್ತಮ ಭಾಷಣಕಾರರು. ಇದುವರೆಗೆ ಅನೇಕ ಚಿನ್ನದ ಪದಕಗಳನ್ನು ಒಳಗೊಂಡ ೮೦ ಜಾಗತಿಕ ದತ್ತಿ ಭಾಷಣಗಳನ್ನು ನೀಡಿರುವರು. ತಜ್ಞ ವೈದ್ಯರಿಗೆ ಹೇಗೆ ಲೀಲಾ ಜಾಲವಾಗಿ ಬರೆಯಬಲ್ಲರೋ, ಮಾತನಾಡಬಲ್ಲರೋ ಹಾಗೆಯೇ ಜನಸಾಮಾನ್ಯರಿಗೂ ಮಾಡಬಲ್ಲರು. ಆಕಾಶವಾಣಿ, ದೂರದರ್ಶನ, ಜ಼ೀ ಟಿವಿ ಲಂಡನ್, ಬಿಬಿಸಿ ಮುಂತಾದ ವಾಹಿನಿಗಳ ಮೂಲಕ ಆರೋಗ್ಯ ಕಾರ್ಯಕ್ರಮಗಳನ್ನು ನೀಡಿರುವರು. ಏಳು ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುವ ಸಾಮರ್ಥ್ಯವಿರುವ ಹೆಗ್ಡೆಯವರು ಇಂಗ್ಲೀಷಿನಲ್ಲಿ ಹಾಗೂ ಕನ್ನಡದಲ್ಲಿ ೩೦ ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿರುವರು.

ಪ್ರಶಸ್ತಿಗಳು: ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಲಭಿಸಿರುವ ಕೆಲವು ಪ್ರಮುಖ ಪ್ರಶಸ್ತಿಗಳು: ೧. ಕರ್ನಾಟಕ ರಾಜ್ಯೋತ್ಸವರ ಪ್ರಶಸ್ತಿ: ೧೯೯೭ ೨. ಡಾ.ಬಿ.ಸಿ.ರಾಯ್ ಅವರ ರಾಷ್ಟ್ರೀಯ ಪ್ರಶಸ್ತಿ (ಅತ್ಯುತ್ತಮ ಶಿಕ್ಷಕ) ೧೯೯೯ ೩. ಪದ್ಮಭೂಷಣ ೨೦೧೦.