ಫ್ರೆಂಡ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಫ಼್ರೆಂಡ್ಸ್
The title screen, featuring a sofa in front of a fountain in a park
ಶೈಲಿ ಸಾಂದರ್ಭಿಕ ಹಾಸ್ಯ
ರಚನಾಕಾರರು ಡೇವಿಡ್ ಕ್ರೇನ್
ಮಾರ್ಟಾ ಕಾಫ಼್ಮಾನ್
ನಟರು ಜೆನಿಫ಼ರ್ ಆನಿಸ್ಟನ್
ಕೋರ್ಟ್ನಿ ಕಾಕ್ಸ್
ಲೀಸಾ ಕುಡ್ರೋ
ಮ್ಯಾಟ್ ಲಬ್ಲಾಂಕ್
ಮ್ಯಾತ್ಯೂ ಪೆರಿ
ಡೇವಿಡ್ ಶ್ವಿಮ್ಮರ್
ನಿರೂಪಣಾ ಸಂಗೀತಕಾರ ಮೈಕಲ್ ಸ್ಕ್ಲಾಫ಼್
ಎಲೀ ವಿಲ್ಲಿಸ್
ನಿರೂಪಣಾ ಗೀತೆ "ಐ'ಲ್ ಬಿ ದೇರ್ ಫ಼ಾರ್ ಯೂ"
ದ ರೆಂಬ್ರಾಂಡ್ಸ್ ರಿಂದ ರಚಿತ
ದೇಶ ಯುನೈಟೆಡ್ ಸ್ಟೇಟ್ಸ್
ಭಾಷೆ(ಗಳು) ಇಂಗ್ಲಿಷ್
ಒಟ್ಟು ಸರಣಿಗಳು ೧೦
ಒಟ್ಟು ಸಂಚಿಕೆಗಳು ೨೩೬
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು) ಡೇವಿಡ್ ಕ್ರೇನ್
ಮಾರ್ಟಾ ಕಾಫ಼್ಮಾನ್
ಕೆವಿನ್ ಬ್ರೈಟ್
ಮೈಕಲ್ ಬಾರ್ಕೊ (ಸರಣಿ ೪)
ಮೈಕಲ್ ಕರ್ಟಿಸ್ (ಸರಣಿ ೫)
ಆಡಮ್ ಚೇಸ್ (ಸರಣಿ ೫-೬)
ಗ್ರೆಗ್ ಮಾಲಿನ್ಸ್ (ಸರಣಿ ೫-೭)
ವಿಲ್ ಕಾಲ್ಹೌನ್ (ಸರಣಿ ೭)
ಸ್ಕಾಟ್ ಸಿಲ್ವೇರಿ (ಸರಣಿ ೮-೧೦)
ಶನಾ ಗೋಲ್ಡ್ ಬರ್ಗ್-ಮೀಹನ್ (ಸರಣಿ ೮-೧೦)
ಆಂಡ್ರ್ಯೂ ರೇಚ್ (ಸರಣಿ ೮-೧೦)
ಟೆಡ್ ಕೊಹೆನ್ (ಸರಣಿ ೮-೧೦)
ಸ್ಥಳ(ಗಳು) ವಾರ್ನರ್ ಬ್ರದರ್ಸ್ ಸ್ಟುಡಿಯೋಗಳು, ಬರ್ಬಂಕ್ ಕ್ಯಾಲಿಫ಼ೋರ್ನಿಯಾ
ಸಮಯ ೨೦-೨೨ ನಿಮಿಷಗಳು (ಪ್ರತಿ ಸಂಚಿಕೆ)
೨೨-೬೫ ನಿಮಿಷಗಳು (ಡಿ.ವಿ.ಡಿ ಸಂಚಿಕೆಗಳು)
ನಿರ್ಮಾಣ ಸಂಸ್ಥೆ(ಗಳು) ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಷನ್ಸ್
ವಾರ್ನರ್ ಬ್ರದರ್ಸ್ ಟೆಲಿವಿಶನ್
ವಿತರಕರು ಎನ್.ಬಿ.ಸಿ
ವಾರ್ನರ್ ಬ್ರದರ್ಸ್ ಟೆಲಿವಿಶನ್(ಜಗತ್ತಿನಾದ್ಯಂತ)
ಪ್ರಸಾರಣೆ
ಮೂಲ ವಾಹಿನಿ ಎನ್.ಬಿ.ಸಿ
ಚಿತ್ರ ಶೈಲಿ 480i
1080i
ಮೂಲ ಪ್ರಸಾರಣಾ ಸಮಯ ಸೆಪ್ಟಂಬರ್ ೨೨, ೧೯೯೪ – ಮೇ ೬, ೨೦೦೪
ಕಾಲಕ್ರಮ
ನಂತರ 'ಜೋಯಿ' (೨೦೦೪-೨೦೦೬)
ಹೊರ ಕೊಂಡಿಗಳು
ತಾಣ

ಡೇವಿಡ್ ಕ್ರೇನ್ ಹಾಗೂ ಮಾರ್ಟಾ ಕಾಫ಼್ಮಾನ್ ರಿಂದ ತಯಾರಿತ ಫ಼್ರೆಂಡ್ಸ್, ಅಮೇರಿಕಾದ ಒಂದು ಧಾರಾವಾಹಿಯಾಗಿದೆ. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು ಎನ್.ಬಿ.ಸಿ ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. ಮೆನ್ಹಾಟನ್ ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್ ನ ಸಹಯೋಗದೊಂದಿಗೆ ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್ ನಿಂದ ನಿರ್ಮಿಸಲ್ಪಟ್ಟಿದೆ. ಕ್ರೇನ್, ಕಾಫ಼್ಮಾನ್ ಹಾಗೂ ಬ್ರೈಟ್ ಇದರ ಪ್ರಾರಂಭಿಕ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು. ನಂತರದ ಸರಣಿಗಳಲ್ಲಿ ಹಲವಾರು ಇತರರನ್ನು ಈ ಹುದ್ದೆಗೆ ಏರಿಸಲಾಯಿತು.

ಕಾಫ಼್ಮಾನ್ ಹಾಗೂ ಕ್ರೇನ್, ೧೯೯೩ ನವೆಂಬರ್/ಡಿಸಂಬರ್ ನಲ್ಲಿ ಇನ್ಸೋಮ್ನಿಯ ಕಫ಼ೆ ಎಂಬ ಶೀಷಿಕೆಯಡಿಯಲ್ಲಿ ಈ ಧಾರಾವಾಹಿಯನ್ನು ಬರೆಯಲು ಆರಂಭಿಸಿದರು. ತಮ್ಮ ಈ ವಿಚಾರವನ್ನು ಅವರು ಬ್ರೈಟ್ ಅವರಿಗೆ ಪ್ರಸ್ತುತ ಪಡಿಸಿದ ನಂತರ ಮೂವರೂ ಸೇರಿ ಈ ಕಥೆಯ ೭ ಪುಟಗಳ ಕರಡನ್ನು ಎನ್.ಬಿ.ಸಿ ವಾಹಿನಿಗೆ ಒಪ್ಪಿಸಿದರು. ಕಥೆಯ ಹಲವಾರು ಮರುಬರಹ ಹಾಗೂ ಬದಲಾವಣೆಗಳ ನಂತರ ಶೀರ್ಷಿಕೆಯನ್ನು ಫ಼್ರೆಂಡ್ಸ್ ಲೈಕ್ ಅಸ್ ಎಂದೂ ನಂತರ ಕೊನೆಯದಾಗಿ ಫ಼್ರೆಂಡ್ಸ್ ಎಂದೂ ಮರುನಾಮಕರಣ ಮಾಡಿದ ನಂತರ ಇದು ಎನ್.ಬಿ.ಸಿ ಯ ಪ್ರತಿಷ್ಠಿತ ಗುರುವಾರ ಸಂಜೆ ೮:೩೦ರ ಸಮಯದಲ್ಲಿ ಪ್ರಸಾರಗೊಂಡಿತು. ಸರಣಿಯ ಚಿತ್ರೀಕರಣವು ಬರ್ಬಂಕ್ ಕ್ಯಾಲಿಫ಼ೋರ್ನಿಯಾವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿ ನೇರ ಶ್ರೋತೃಗಳ ಮುಂದೆ ನಡೆಯಿತು. ವಾಹಿನಿಯಲ್ಲಿ ಹತ್ತು ಸರಣಿಗಳ ನಂತರ ಎನ್.ಬಿ.ಸಿ ವಾಹಿನಿಯು ಸಂಚಿಕೆಯ ಅಂತ್ಯ ಭಾಗದ ಪ್ರಚಾರವನ್ನು ಬಹಳ ಅಬ್ಬರದಿಂದಲೇ ಮಾಡಿತು. ಅಮೆರಿಕಾದೆಲ್ಲೆಡೆ ವೀಕ್ಷಣಾ ಸಮಾರಂಭಗಳನ್ನು ಏರ್ಪಡಿಸಲಾಯಿತು. ಮೇ ೬, ೨೦೦೪ರಲ್ಲಿ ಪ್ರಸಾರವಾದ ಸಂಚಿಕೆಯ ಕೊನೆಯ ಭಾಗವು (೨೩೬ನೇ) ಅಮೇರಿಕಾದ ೫.೧೧ ಕೋಟಿ ವೀಕ್ಷಕರಿಂದ[೧] ವೀಕ್ಷಿಸಲ್ಪಟ್ಟಿತು. ಧಾರಾವಾಹಿಗಳ ಇತಿಹಾಸದಲ್ಲೇ ನಾಲ್ಕನೇ 'ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಂಚಿಕಾ ಅಂತ್ಯ ಭಾಗ'[೨][೩] ಹಾಗೂ 'ದಶಕದ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಭಾಗ'[೪] ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

ತನ್ನ ಪ್ರಸಾರಣಾ ಸಮಯದುದ್ದಕೂ ಧನಾತ್ಮಕ ವಿಮರ್ಶೆಗಳನ್ನು ಗಳಿಸಿದ ಫ಼್ರೆಂಡ್ಸ್ ಸರಣಿಯು ಅತ್ಯಂತ ಜನಪ್ರಿಯ ಸರ್ವಕಾಲಿಕ ಸರಣಿಗಳಲ್ಲಿ ಒಂದೆನಿಸಿತು. ಹಲವಾರು ಪ್ರಶಶ್ತಿಗಳನ್ನು ಗೆದ್ದುಕೊಂಡ ಈ ಸರಣಿಯು ೬೩ ಪ್ರೈಮ್ ಟೈಮ್ ಎಮ್ಮಿ ಅವಾರ್ಡ್ಸ್ ಗಳಿಗೆ ನಾಮಾಂಕಿತಗೊಂಡಿತು. ತನ್ನ ರಂಗಪ್ರವೇಶದ ಸಮಯದಿಂದಲೇ ಯಶಸ್ವಿಯಾದ ಈ ಸರಣಿಯು ಜನಪ್ರಿಯತೆಯಲ್ಲೂ ಮುಂಚೂಣಿಯಲ್ಲಿತ್ತು ಹಾಗೂ ವರ್ಷಾಂತ್ಯದ ಪ್ರೈಮ್ ಟೈಮ್ ರೇಟೀಂಗ್ ನಲ್ಲಿ ಯಾವಾಗಲೂ ಅಗ್ರ ಹತ್ತನೇ ಶ್ರೇಣಿಯಲ್ಲಿತ್ತು. ಟಿ.ವಿ ಗೈಡ್ ನ ಜೊತೆಗೆ ಹಲವಾರು ವಿಮರ್ಶಕರು ಈಗ ಈ ಸರಣಿಯನ್ನು ದೂರದರ್ಶನ ಇತಿಹಾಸದ ಅತ್ಯಂತ ಶ್ರೇಷ್ಠ ಸರಣಿಗಳಲ್ಲೊಂದು ಎಂದು ಪರಿಗಣಿಸುತ್ತಾರೆ. 'ಟಿ.ವಿ ಗೈಡ್' ಇದನ್ನು 'ಸರ್ವಕಾಲಿಕ ೫೦ ಶ್ರೇಷ್ಠ ದೂರದರ್ಶನ ಸರಣಿ'ಗಳ ಪಟ್ಟಿಯಲ್ಲಿ ೨೧ನೆ ಸ್ಥಾನದಲ್ಲಿ ಇರಿಸಿತು[೫][೬][೭]. ೧೯೯೭ರಲ್ಲಿ ದ ವನ್ ವಿದ್ ದ ಪ್ರಾಮ್ ವಿಡಿಯೋ ಭಾಗವು 'ಟಿ.ವಿ ಗೈಡ್' ನ 'ಸರ್ವಕಾಲಿಕ ೧೦೦ ಅತ್ಯಂತ ಶ್ರೇಷ್ಠ ಸಂಚಿಕೆ'ಗಳ ಪಟ್ಟಿಯಲ್ಲಿ ೧೦೦ನೇ ಸ್ಥಾನದಲ್ಲಿರಿಸಲ್ಪಟ್ಟಿತು[೮] . ಈ ಸರಣಿಯು ಇಂದಿಗೂ ಮುಂದುವರೆಯುತ್ತಿರುವ ಮಹತ್ತರವಾದ ಸಾಂಸ್ಕೃತಿಕ ಪ್ರಭಾವವನ್ನು ಬೀರಿತು. ಸರಣಿಯಲ್ಲಿ ಪ್ರಧಾನವಾಗಿ ಚಿತ್ರಿಸಲ್ಪಟ್ಟ ಸೆಂಟ್ರಲ್ ಪರ್ಕ್ ಕಾಫ಼ಿ ಗೃಹವು ಜಗತ್ತಿನುದ್ದಕ್ಕೂ ಹಲವಾರು ಅನುಕರಣೆಗಳಿಗೆ ಸ್ಪೂರ್ತಿಯಿತ್ತಿದೆ. ಭಾರತವನ್ನೂ ಸೇರಿಸಿ ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ಇದು ಈಗಲೂ ಮರಪ್ರಸಾರಗೊಳ್ಳುತ್ತಿದೆ. ಇದರ ಎಲ್ಲಾ ೧೦ ಸಂಚಿಕೆಗಳೂ ಡಿ.ವಿ.ಡಿ ಯಲ್ಲಿ ಲಭ್ಯವಿವೆ. ಈ ಸರಣಿಯ ಒಂದು ಪಾತ್ರವನ್ನು ಆಧರಿತ ಜೋಯಿ ಎನ್ನುವ ಸರಣಿಯನ್ನು ಇದನ್ನು ಅನುಸರಿಸಲು ತಯಾರಿಸಲಾಯಿತು.


ಪಾತ್ರಗಳು[ಬದಲಾಯಿಸಿ]

ತನ್ನ ಪ್ರಸಾರ ಸಮಯದಲ್ಲಿ ಈ ಸರಣಿಯು ಆರು ಪ್ರಮುಖ ಪಾತ್ರಗಳನ್ನು ಪ್ರಧಾನವಾಗಿ ಚಿತ್ರಿಸಿತು. ಹಾಗೆಯೇ ಹಲವಾರು ಆವರ್ತ ಪಾತ್ರಗಳೂ ಇದರ ಹತ್ತು ಸರಣಿಗಳುದ್ದಕ್ಕೂ ಕಾಣಿಸಿಕೊಂಡವು.

 • ಜೆನಿಫರ್ ಆನಿಸ್ಟನ್ ರೇಚಲ್ ಗ್ರೀನ್ ನ ಪಾತ್ರವನ್ನು ವಹಿಸಿದ್ದಾರೆ. ಫ್ಯಾಷನ್ ಬಗ್ಗೆ ಆಸಕ್ತಿಯುಳ್ಳ ರೇಚಲ್ ಗ್ರೀನ್, ಶಾಲಾ ದಿನಗಳಿಂದಲೂ ಮೋನಿಕಾ ಗೆಲ್ಲರ್ ಳ ಆಪ್ತ ಸ್ನೇಹಿತೆ. ರೇಚಲ್ ಮತ್ತು ರಾಸ್ ಗೆಲ್ಲರ್ ಸರಣಿಯುದ್ದಕ್ಕೂ ಈಗ-ಇದೆ-ಇನ್ನೊಮ್ಮೆ-ಇಲ್ಲ ಎನ್ನುವಂತಹ ಸಂಬಂಧದಲ್ಲಿ ಇರುತ್ತಾರೆ. ಆರಂಭದಲ್ಲಿ ಸೆಂಟ್ರಲ್ ಪರ್ಕ್ ಕಾಫಿಗೃಹದಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುವ ರೇಚಲ್ ನಂತರ ೩ನೇ ಸರಣಿಯಲ್ಲಿ ಬ್ಲೂಮಿಂಗ್ಡೇಲ್ಸ್ ನಲ್ಲಿ ಸಹಾಯಕ ಖರೀದಿದಾರಳಾಗುತ್ತಾಳೆ. ನಂತರ ೫ನೇ ಸರಣಿಯಲ್ಲಿ ರಾಲ್ಫ್ ಲೌರಿನ್ ನಲ್ಲಿ ಖರೀದಿದಾರಳಾಗಿ ನೇಮಕಗೊಳ್ಳುತ್ತಾಳೆ. ೮ನೇ ಸರಣಿಯ ಕೊನೆಯಲ್ಲಿ ರೇಚಲ್ ಹಾಗೂ ರಾಸ್ ಗೆ ಎಮ್ಮಾ ಎನ್ನುವ ಮಗಳು ಜನಿಸುತ್ತಾಳೆ.
 • ಕೋರ್ಟ್ನಿ ಕಾಕ್ಸ್ ಮೋನಿಕಾ ಗೆಲ್ಲರ್ ನ ಪಾತ್ರವನ್ನು ನಿಭಾಯಿಸಿದ್ದಾರೆ. ವೃತ್ತಿಯಲ್ಲಿ ಶೆಫ್[೯] ಆಗಿರುವ ಮೋನಿಕಾ ತನ್ನ ಅತಿ ನಿರ್ಬಂಧ ಹಾಗೂ ಸ್ಪರ್ಧಾ ಸ್ವಭಾವಕ್ಕಾಗಿ ಪರಿಚಿತಳಾಗಿರುತ್ತಾಳೆ.[೧೦][೧೧] ಬಾಲ್ಯದಲ್ಲಿ ಅತಿಯಾಗಿ ಸ್ಥೂಲಕಾಯಿಯಾಗಿದ್ದುದಕ್ಕಾಗಿ ಇತರರು, ಮುಖ್ಯವಾಗಿ ಅವಳ ಅಣ್ಣ ರಾಸ್ ಇವಳನ್ನು ಆಗಾಗ ತಮಾಷೆಯಾಗಿ ರೇಗಿಸುತ್ತಿರುತ್ತಾರೆ. ಸರಣಿಯುದ್ದಕ್ಕೂ ಹಲವಾರು ರೆಸ್ಟೋರಂಟ್ ಗಳಲ್ಲಿ ಶೆಫ್ ಆಗಿ ಕೆಲಸ ಮಾಡುವ ಮೋನಿಕಾ, ಏಳನೇ ಸರಣಿಯ ಅಂತ್ಯದಲ್ಲಿ ಚಾಂಡ್ಲರ್ ಬಿಂಗ್ ಅನ್ನು ಮದುವೆಯಾಗುತ್ತಾಳೆ.[೧೨]
 • ಲೀಸಾ ಕುಡ್ರೋ ಫೀಬಿ ಬುಫೆ ಪಾತ್ರವನ್ನು ವಹಿಸಿದ್ದಾರೆ. ಸ್ವೇಚ್ಛಾ ಸ್ವಭಾವದ ಫೀಬಿ ವೃತ್ತಿಯಲ್ಲಿ ಅಂಗಮರ್ದಕಿ ಹಾಗೆಯೇ ಸ್ವಯಂ ಬೋಧಿತ ಸಂಗೀತಗಾರ್ತಿ. ಹೆಚ್ಚು ತಿಳುವಳಿಕೆಯಿಲ್ಲದಂತೆ ಕಂಡರೂ ಫೀಬಿ ತುಂಬಾ ತೀಕ್ಷ್ಣ ಹಾಗೂ ಚುರುಕು. ತನ್ನ ವಿಭಿನ್ನ ವೈಖರಿ ಹಾಗೂ ಮೋಡಿಯ ಹಾಡುಗಳನ್ನು ಸ್ವತಃ ಬರೆದು ತನ್ನ ಗಿಟಾರಿನ ಜೊತೆ ಸೇರಿಸಿ (ಅಹಿತಕರವಾಗಿ) ಹಾಡುತ್ತಾಳೆ. ಅವಳಿಗೆ ಅರ್ಸೂಲಾ ಎಂಬ ಹೆಸರಿನ ಒಬ್ಬ 'ಕೆಟ್ಟ' ತದ್ರೂಪ ಅವಳಿಯಿದ್ದಾಳೆ. ಕೊನೆಯ ಸರಣಿಯಲ್ಲಿ ಫೀಬಿ ಮೈಕ್ ಹ್ಯಾನಿಗನ್ ನನ್ನು ವಿವಾಹವಾಗುತ್ತಾಳೆ.[೧೨][೧೩]
 • ಮ್ಯಾಟ್ ಲಬ್ಲಾಂಕ್ ಜೋಯಿ ಟ್ರಿಬಿಯಾನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಒಬ್ಬ ನಟ ಹಾಗೂ ಭೋಜನಪ್ರಿಯನಾಗಿರುವ ಜೋಯಿ, ಡೇಸ್ ಆಫ್ ಆವರ್ ಲೈವ್ಸ್ ಧಾರಾವಾಹಿಯ ಡಾ| ಡ್ರೇಕ್ ರೆಮೋರೇ ಎಂಬ ಪಾತ್ರದಿಂದಾಗಿ ಪ್ರಸಿದ್ಧನಾಗುತ್ತಾನೆ. ಸರಳ ಮನಸ್ಸಿನ ಸ್ತ್ರೀವಿಲಾಸಿಯಾಗಿರುವ ಜೋಯಿ ಸರಣಿಯುದ್ದಕ್ಕೂ ಹಲವಾರು ಅಲ್ಪಾವಧಿಯ ಗೆಳತಿಯರನ್ನು ಹೊಂದಿರುತ್ತಾನೆ. ಎಂಟನೇ ಸರಣಿಯಲ್ಲಿ ರೇಚಲ್ ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ.[೧೪]
 • ಮ್ಯಾತ್ಯೂ ಪೆರಿ ಚ್ಯಾಂಡ್ಲರ್ ಬಿಂಗ್ ನ ಪಾತ್ರವನ್ನು ವಹಿಸಿದ್ದಾರೆ. ಚ್ಯಾಂಡ್ಲರ್ ಒಂದು ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಅಂಕೆ ಅಂಶ ವಿಶ್ಲೇಷಣೆ ಹಾಗೂ ಮಾಹಿತಿ ಮರುವಿನ್ಯಾಸ ಕಾರ್ಯಗಳ ಕಾರ್ಯನಿರ್ವಾಹಕನಾಗಿರುತ್ತಾನೆ. ಒಂಭತ್ತನೇ ಸರಣಿಯಲ್ಲಿ ಚ್ಯಾಂಡ್ಲರ್ ಈ ಕೆಲಸವನ್ನು ಬಿಟ್ಟು ಜಾಹೀರಾತು ಸಂಸ್ಥೆಯೊಂದರಲ್ಲಿ ಜಾಹೀರಾತು ಪ್ರಚಾರ ಸಲಹೆಗಾರನಾಗಿ ಸೇರಿಕೊಳ್ಳುತ್ತಾನೆ. ಇವನು ತನ್ನ ವ್ಯಂಗ್ಯ ಹಾಸ್ಯಪ್ರಜ್ಞೆ ಹಾಗೂ ಸಂಬಂಧಗಳಲ್ಲಿ ದುರಾದೃಷ್ಟತೆಗಾಗಿ ಪರಿಚಿತನಾಗಿರುತ್ತಾನೆ.[೧೫] ಏಳನೇ ಸರಣಿಯ ಕೊನೆಯಲ್ಲಿ ಚ್ಯಾಂಡ್ಲರ್, ಮೋನಿಕಾಳನ್ನು ಮದುವೆಯಾಗುತ್ತಾನೆ, ನಂತರ ಹತ್ತನೇ ಸರಣಿಯಲ್ಲಿ ಅವರು ಅವಳಿ ಮಕ್ಕಳನ್ನು ದತ್ತು ಪಡೆಯುತ್ತಾರೆ.
 • ಡೇವಿಡ್ ಶ್ವಿಮ್ಮರ್ ರಾಸ್ ಗೆಲ್ಲರ್ನ ಪಾತ್ರವನ್ನು ವಹಿಸಿದ್ದಾರೆ. ರಾಸ್, ಮೋನಿಕಾ ಗೆಲ್ಲರ್ ಳ ಅಣ್ಣ ಹಾಗೂ ಜೀವಾಶ್ಮ ವಿಜ್ಞಾನಿ. ಆರಂಭದಲ್ಲಿ ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯದಲ್ಲಿ ಕೆಲಸ ಮಾಡುವ ರಾಸ್ ನಂತರ ನ್ಯೂ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಜೀವಾಶ್ಮಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಾನೆ. ಸರಣಿಯುದ್ದಕ್ಕೂ ರಾಸ್, ರೇಚಲ್ ಜೊತೆಗೆ ಈಗ-ಇದೆ-ಇನ್ನೊಮ್ಮೆ-ಇಲ್ಲ ಎನ್ನುವಂತಹ ಸಂಬಂಧದಲ್ಲಿ ಇರುತ್ತಾನೆ. ಇವನು ಈ ಸರಣಿಗಳ ಅವಧಿಯಲ್ಲಿ ಕ್ಯಾರಲ್, ಎಮಿಲಿ ಹಾಗೂ ರೇಚಲ್ ಜೊತೆಗೆ ಮೂರು ವಿಫಲ ವಿವಾಹಗಳನ್ನು ಹೊಂದುತ್ತಾನೆ. ರಾಸ್, ಕ್ಯಾರಲ್ ಳಿಂದ ಬೆನ್ ಎಂಬ ಮಗನನ್ನೂ, ರೇಚಲ್ ಳಿಂದ ಎಮ್ಮಾ ಎಂಬ ಮಗಳನ್ನು ಪಡೆಯುತ್ತಾನೆ.

ನಟನಾ ವರ್ಗ[ಬದಲಾಯಿಸಿ]

ಪ್ರಥಮ ಸರಣಿಯಲ್ಲಿ ಫ್ರೆಂಡ್ಸ್ ನಟನಾ ವರ್ಗ. ಮುಂದೆ: ಕಾಕ್ಸ್, ಆನಿಸ್ಟನ್. ಹಿಂದೆ: ಲಬ್ಲಾಂಕ್, ಕುಡ್ರೋ, ಪೆರಿ

ಫ್ರೆಂಡ್ಸ್ ಸರಣಿಯ ಪ್ರಮುಖ ನಟ ನಟಿಯರು ದೂರದರ್ಶನ ವೀಕ್ಷಕರಿಗೆ ಅವರ ಫ್ರೆಂಡ್ಸ್ ಪಾತ್ರಗಳಿಗಿಂತ ಮೊದಲೇ ಪರಿಚಿತರಾಗಿದ್ದರೂ ಅವರನ್ನು ತಾರೆಗಳೆಂದು ಪರಿಗಣಿಸಲಾಗುತ್ತಿರಲಿಲ್ಲ.[೧೨] ಆರಂಭದಲ್ಲಿ ಪಾತ್ರ ನಟನೆಗೆ ಆಯ್ಕೆಗೊಂಡಾಗ ಕಾಕ್ಸ್, ಪ್ರಮುಖ ನಟನಾ ವರ್ಗದಲ್ಲಿ ಅತ್ಯಂತ ಎತ್ತರದ ವೈಯಕ್ತಿಕ ವೃತ್ತಿಜೀವನವನ್ನು ಹೊಂದಿದ್ದರು. ಅವರು ಆಗಾಗಲೇ ಏಸ್ ವೆಂಚುರಾ: ಪೆಟ್ ಡಿಟೆಕ್ಟಿವ್ ಹಾಗೂ ಫ್ಯಾಮಿಲಿ ಟೈಸ್ ಎಂಬ ಹಲವಾರು ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು.[೧೨] ಕುಡ್ರೋ ಫ್ರೆಂಡ್ಸ್ ಪೂರ್ವದಲ್ಲಿ ಮ್ಯಾಡ್ ಎಬೌಟ್ ಯೂ ಸರಣಿಯಲ್ಲಿ ಅರ್ಸೂಲಾ ಬುಫೆ ಪಾತ್ರವನ್ನು ನಿರ್ವಹಿಸಿದ್ದರು. ನಂತರ ಫ್ರೆಂಡ್ಸ್ ನಲ್ಲಿ ಅರ್ಸೂಲ ಎಂಬ ಅವಳಿ ಸಹೋದರಿಯ ದ್ವಂದ್ವ ಪಾತ್ರವನ್ನು ಹಲವಾರು ಸಂಚಿಕೆಗಳಲ್ಲಿ ಆವರ್ತ ಪಾತ್ರವಾಗಿ ನಿರ್ವಹಿಸಿದರು.[೧೨] ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರವನ್ನು ವಹಿಸಿಕೊಳ್ಳುವುದಕ್ಕಿಂತ ಮೊದಲು, ಅವರು ತಮ್ಮ ತಂದೆಯ ಕಛೇರಿ ನಿರ್ವಾಹಕಿ ಹಾಗೂ ಸಂಶೋಧಕಿಯಾಗಿದ್ದರು.[೧೬] ಲಬ್ಲಾಂಕ್, ಮ್ಯಾರೀಡ್... ವಿದ್ ಚಿಲ್ಡ್ರನ್ ಧಾರಾವಾಹಿಯಲ್ಲಿ ಒಂದು ಕಿರು ಪಾತ್ರದಲ್ಲಿ ಹಾಗೂ ಅದರ ಆಧರಿತ ಸರಣಿಗಳಾದ ಟಾಪ್ ಆಫ್ ದ ಹೀಪ್ ಹಾಗೂ ವಿನ್ನೀ & ಬಾಬ್ಬಿ ಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.[೧೭] ಫ್ರೆಂಡ್ಸ್ ನಲ್ಲಿ ಪಾತ್ರಗಳನ್ನು ಗಳಿಸುವ ಮೊದಲು ಪೆರಿ ಹಾಗೂ ಆನಿಸ್ಟನ್ ಹಲವಾರು ಧಾರಾವಾಹಿಗಳ ವಿಫಲ ಪ್ರಾಯೋಗಿಕ ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದರು.[೧೨][೧೮] ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರಕ್ಕಿಂತ ಮೊದಲು ಶ್ವಿಮ್ಮರ್ ದ ವಂಡರ್ ಈಯರ್ಸ್ ಹಾಗೂ ಎನ್.ವೈ.ಪಿ.ಡಿ ಬ್ಲೂ ಸರಣಿಗಳಲ್ಲಿ ಕಿರು ಪಾತ್ರಗಳನ್ನು ನಿರ್ವಹಿಸಿದ್ದರು.[೧೨] ಧಾರಾವಾಹಿಯ ಹತ್ತು ಸರಣಿಗಳ ಪ್ರಸಾರದ ಅವಧಿಯಲ್ಲಿ ಈ ಎಲ್ಲಾ ನಟ ನಟಿಯರು ಅಮೇರಿಕಾದ ಮನೆಮಾತಾಗಿ ಹೋದರು.[೧೯]

ಪ್ರಥಮ ಸರಣಿಯ ಮೂಲ ಒಪ್ಪಂದದ ಪ್ರಕಾರ, ನಟನಾವರ್ಗದ ಪ್ರತಿ ಸದಸ್ಯನಿಗೂ ಪ್ರತಿ ಸಂಚಿಕೆಗೆ $೨೨,೫೦೦ ವೇತನ ನೀಡಲಾಯಿತು.[೨೦] ಏರಡನೇ ಸರಣಿಯಲ್ಲಿ ನಟನಾವರ್ಗವು ಪ್ರತಿ ಸಂಚಿಕೆಗೆ $೨೦,೦೦೦ ದಿಂದ $೪೦,೦೦೦ ದವರೆಗೆ ಬೇರೆ ಬೇರೆ ವೇತನಗಳನ್ನು ಪಡೆಯಿತು.[೨೦][೨೧] ತಮ್ಮ ಮೂರನೇ ಸರಣಿಯ ವೇತನ ನಿರ್ಧಾರಕ್ಕಿಂತ ಮೊದಲು, ವಾರ್ನರ್ ಬ್ರದರ್ಸ್ನ ಪ್ರತ್ಯೇಕ ವೈಯಕ್ತಿಕ ಒಪ್ಪಂದದ ಆದ್ಯತೆಯ ಬದಲಾಗಿಯೂ, ನಟನಾವರ್ಗ ಸಾಮೂಹಿಕ ವೇತನಾ ನಿರ್ಧಾರಕ್ಕೆ ಪ್ರವೇಶಿಸಲು ನಿರ್ಧರಿಸಿತು.[೨೨] ನಟನಾವರ್ಗಕ್ಕೆ ಅತ್ಯಂತ ಕಡಿಮೆ ಗಳಿಸುವ ಸದಸ್ಯನ ವೇತನವನ್ನು ನೀಡಲಾಯಿತು. ಅಂದರೆ ಆನಿಸ್ಟನ್ ಹಾಗೂ ಶ್ವಿಮ್ಮೆರ್ ರವರ ವೇತನಗಳು ಕಡಿಮೆಗೊಂಡವು. ನಟನಾವರ್ಗಕ್ಕೆ ಮೂರನೇ ಸರಣಿಯಲ್ಲಿ $೭೫,೦೦೦ ಪ್ರತಿ ಸಂಚಿಕೆಯಂತೆ, ನಾಲ್ಕನೇ ಸರಣಿಯಲ್ಲಿ $೮೫,೦೦೦ ಪ್ರತಿ ಸಂಚಿಕೆಯಂತೆ, ಐದನೆ ಸಂಚಿಕೆಯಲ್ಲಿ $೧,೦೦,೦೦೦ ಪ್ರತಿ ಸಂಚಿಕೆಯಂತೆ, ಆರನೇ ಸಂಚಿಕೆಯಲ್ಲಿ $೧,೨೫,೦೦೦ ಪ್ರತಿ ಸಂಚಿಕೆಯಂತೆ, ಏಳು ಹಾಗೂ ಎಂಟನೆ ಸರಣಿಗಳಲ್ಲಿ $೭,೫೦,೦೦೦ ಪ್ರತಿ ಸಂಚಿಕೆಯಂತೆ, ಒಂಭತ್ತು ಹಾಗೂ ಹತ್ತನೇ ಸರಣಿಗಳಲ್ಲಿ $೧೦,೦೦,೦೦೦ ಪ್ರತಿ ಸಂಚಿಕೆಯಂತೆ ವೇತನವನ್ನು ನೀಡಲಾಯಿತು.[೧೮][೨೩] ಐದನೇ ಸರಣಿಯಿಂದ ನಟನಾವರ್ಗವು ಮರುಪ್ರಸಾರಣೆಯ ಗೌರವಧನವನ್ನೂ ಪಡೆಯಲಾರಂಭಿಸಿತು.[೨೧]

ಸರಣಿ ರಚನಾಕಾರ ಡೇವಿಡ್ ಕ್ರೇನ್ ಎಲ್ಲಾ ಆರು ಪಾತ್ರಗಳೂ ಸಮಾನ ರೂಪದಲ್ಲಿ ಮಹತ್ವಪೂರ್ಣವಾಗಿರಬೇಕೆಂದು ಬಯಸಿದ್ದರು[೨೪] ಹಾಗೂ ಸರಣಿಯು 'ಪ್ರಥಮ ನೈಜ ಸಮಗ್ರ ಪ್ರದರ್ಶನ' ಎಂಬ ಪ್ರಶಂಸೆಗೂ ಪಾತ್ರವಾಯಿತು.[೨೫] ನಟನಾವರ್ಗದ ಪ್ರತಿಯೊಬ್ಬ ಸದಸ್ಯನೂ ಇತರರಿಗಿಂತ ಹೆಚ್ಚು ಪ್ರಭಾವಿಯಾಗಿರದಂತೆ ಇದ್ದು,[೨೫] ಸರಣಿಯ ಸಮಗ್ರ ಅಭಿನಯ ಪ್ರಾರೂಪವನ್ನು ಕಾಯ್ದಿರಿಸಲು ಪ್ರಯತ್ನವನ್ನು ಮಾಡಿದರು. ಪುರಸ್ಕಾರಗಳಿಗಾಗಿ ಅವರು ಒಂದೇ ಅಭಿನಯ ವರ್ಗದಲ್ಲಿ ಪಾಲ್ಗೊಂಡರು,[೨೬] ಸಾಮೂಹಿಕ ವೇತನಾ ನಿರ್ಧಾರವನ್ನು ಆರಿಸಿಕೊಂಡರು,[೨೫] ಹಾಗೂ ಪ್ರಥಮ ಸರಣಿಯಲ್ಲಿ ನಿಯತಕಾಲಿಕೆಯ ಮುಖಪುಟದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಕೇಳಿಕೊಂಡರು.[೨೭] ತೆರೆ ಹಿಂದೆಯೂ ಫ್ರೆಂಡ್ಸ್ ಕಲಾಕಾರರು ಉತ್ತಮ ಸ್ನೇಹಿತರಾದರು[೧೬] ಆದರೆ ಅತಿಥಿ ತಾರೆ ಟಾಮ್ ಸೆಲೆಕ್ ಕೆಲವೊಮ್ಮೆ ಮಿತ್ರ ವರ್ಗದಿಂದ ಹೊರಗುಳಿದುದಾಗಿ ಹೇಳಿಕೊಳ್ಳುತ್ತಾರೆ.[೨೮] ಸರಣಿಯ ಪ್ರಸಾರದ ನಂತರವೂ ನಟನಾವರ್ಗದ ಸದಸ್ಯರು ಉತ್ತಮ ಸ್ನೇಹಿತರಾಗಿ ಉಳಿದರು, ವಿಶೇಷವಾಗಿ ಕಾಕ್ಸ್ ಮತ್ತು ಆನಿಸ್ಟನ್. ಆನಿಸ್ಟನ್, ಕಾಕ್ಸ್ ಮತ್ತು ಡೇವಿಡ್ ಅರ್ಕೆಟ್ ರ ಮಗಳು ಕೋಕೋ ಳ ಧರ್ಮಮಾತೆಯಾದರು.[೨೯] ಅಧಿಕೃತ ವಿದಾಯ ಸಂಸ್ಮರಣಾ ಪುಸ್ತಕ ಫ್ರೆಂಡ್ಸ್ ಟಿಲ್ ದ ಎಂಡ್ ನಲ್ಲಿ ಪ್ರತಿಯೊಬ್ಬ ಕಲಾಕಾರನೂ ಫ್ರೆಂಡ್ಸ್ ನಟನಾವರ್ಗವು ತಮ್ಮ ಪರಿವಾರದಂತೆಯೇ ಆಗಿದ್ದಾರೆಂದು ಸ್ಮರಿಸಿದ್ದಾರೆ.[೩೦]

ಸರಣಿ ಸಾರಾಂಶ[ಬದಲಾಯಿಸಿ]

ಪ್ರಥಮ ಸರಣಿಯು ಪ್ರಮುಖ ಪಾತ್ರಗಳಾದ ರೇಚಲ್, ಮೋನಿಕಾ, ಫೀಬಿ, ಜೋಯಿ, ಚ್ಯಾಂಡ್ಲರ್ ಹಾಗೂ ರಾಸ್ ರನ್ನು ಪರಿಚಯಿಸುತ್ತದೆ. ರೇಚಲ್ ತನ್ನ ಭಾವೀ ಪತಿ ಬ್ಯಾರಿಯನ್ನು ವಿವಾಹ ವೇದಿಕೆಯಲ್ಲಿ ಬಿಟ್ಟು ಸೆಂಟ್ರಲ್ ಪರ್ಕ್ ಕಾಫಿ ಗೃಹಕ್ಕೆ ಬರುತ್ತಾಳೆ, ನಂತರ ಮೋನಿಕಾ ಜೊತೆ ಅವಳ ಮನೆಗೆ ಸ್ಥಳಾಂತರಿಸಿಕೊಳ್ಳುತ್ತಾಳೆ. ರಾಸ್ ನಿರಂತರವಾಗಿ ರೇಚಲ್ ಗೆ ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಲು ಪ್ರಯತ್ನಿಸುತ್ತಾನೆ. ಅದೇ ಸಮಯದಲ್ಲಿ ರಾಸ್ ನ ಸಲಿಂಗಕಾಮಿ ಮಾಜಿ ಪತ್ನಿ ಕ್ಯಾರಲ್ ಅವನ ಮಗುವಿನ ಜನನವನ್ನು ನಿರೀಕ್ಷಿಸುತ್ತಿದ್ದಾಳೆ. ಜೋಯಿ ಹೋರಾಟ ನಡೆಸುವ ಒಬ್ಬ ಉದಯೋನ್ಮುಖ ನಟನಾಗಿ ತೋರಿಸಲ್ಪಟ್ಟಿದ್ದಾನೆ. ಫೀಬಿ ಅಂಗಮರ್ದಕಿಯಾಗಿ ಕೆಲಸ ಮಾಡುತ್ತಾಳೆ. ಚ್ಯಾಂಡ್ಲರ್ ತನ್ನ ಪ್ರೇಯಸಿ ಜ್ಯಾನಿಸ್ಳಿಂದ ದೂರವಾಗುತ್ತಾನೆ. ಜ್ಯಾನಿಸ್ ಮುಂದಿನ ಸರಣಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾಳೆ. ಸರಣಿಯ ಕೊನೆಯಲ್ಲಿ ಚ್ಯಾಂಡ್ಲರ್ ಆಕಸ್ಮಿಕವಾಗಿ ರಾಸ್ ರೇಚಲ್ ಳನ್ನು ಪ್ರೀತಿಸುತ್ತಿದ್ದಾನೆಂದು ಬಹಿರಂಗಪಡಿಸುತ್ತಾನೆ. ರೇಚಲ್ ಕೂಡಾ ತಾನು ರಾಸ್ ನನ್ನು ಪ್ರೀತಿಸುತ್ತಿರುವುದಾಗಿ ಅರಿತುಕೊಳ್ಳುತ್ತಾಳೆ.

ತನ್ನ ಪಾತ್ರ ರಿಚರ್ಡ್ ಗಾಗಿ ಟಾಮ್ ಸೆಲೆಕ್ ರವರು ವರ್ಷ ೨೦೦೦ದ ಎಮ್ಮಿ ನಾಮಾಂಕನವನ್ನು ಪಡೆದರು.[೩೧]

ರಾಸ್ ಜೂಲಿಯನ್ನು ಡೇಟಿಂಗ್ ಮಾಡುತ್ತಿರುವುದನ್ನು ರೇಚಲ್ ಅರಿತುಕೊಳ್ಳುವುದರೊಂದಿಗೆ ಎರಡನೇ ಸರಣಿಯು ಆರಂಭವಾಗುತ್ತದೆ. ರಾಸ್ ಸ್ನಾತಕ ವಿದ್ಯಾಲಯದಿಂದಲೇ ಜೂಲಿಯ ಪರಿಚಯ ಹೊಂದಿರುತ್ತಾನೆ. ರಾಸ್ ನನ್ನು ಇಷ್ಟಪಡುತ್ತಿರುವುದಾಗಿ ಹೇಳಲು ರೇಚಲ್ ನಡೆಸುವ ಪ್ರಯತ್ನಗಳು ಪ್ರಥಮ ಸರಣಿಯಲ್ಲಿನ ರಾಸ್ ನ ಪ್ರಯತ್ನಗಳಿಗೆ ಕನ್ನಡಿ ಹಿಡಿಯುತ್ತವೆ. ಆದರೆ ಕ್ರಮೇಣ ಅವರು ಒಂದು ಸಂಬಂಧವನ್ನು ರೂಪಿಸಿಕೊಳ್ಳುತ್ತಾರೆ. ಜೋಯಿ ಡೇಸ್ ಆಫ್ ಆರ್ ಲೈವ್ಸ್ ಧಾರಾವಾಹಿಯ ಕಾಲ್ಪನಿಕ ಆವೃತ್ತಿಯಲ್ಲಿ ಒಂದು ಪಾತ್ರವನ್ನು ಗಳಿಸುತ್ತಾನೆ. ಆದರೆ ಅವನು ತನ್ನ ಹಲವು ವಾಕ್ಯಗಳನ್ನು ತಾನೇ ಬರೆಯುತ್ತಾನೆಂದು ತಿಳಿಯಪಡಿಸಿದ ನಂತರ ಅವನ ಪಾತ್ರವು ಧಾರಾವಾಹಿಯಲ್ಲಿ ಕೊಲ್ಲಲ್ಪಡುತ್ತದೆ. ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿರುವ ಹಾಗೂ ತನಗಿಂತ ೨೧ ವರ್ಷ ದೊಡ್ಡವನಾದ ರಿಚರ್ಡ್ನನ್ನು ಮೋನಿಕಾ ಡೇಟಿಂಗ್ ಮಾಡಲು ಆರಂಭಿಸುತ್ತಾಳೆ. ರಿಚರ್ಡ್ ಗೆ ಮಕ್ಕಳು ಬೇಡವೆಂದು ತಿಳಿದ ನಂತರ ಮೋನಿಕಾ ಅವನಿಂದ ದೂರವಾಗುತ್ತಾಳೆ.

ಮೂರನೇ ಸರಣಿಯು ಅಧಿಕ ಗಮನಾರ್ಹವಾದ ಒಂದು ಧಾರಾವಾಹಿಕ ಶೈಲಿಯನ್ನು ಅಳವಡಿಸಿಕೊಳ್ಳುತ್ತದೆ. ರೇಚಲ್ ಬ್ಲೂಮಿಂಗ್ಡೇಲ್ಸ್ನಲ್ಲಿ ಕೆಲಸ ಮಾಡಲು ಆರಂಭಿಸುತ್ತಾಳೆ. ರಾಸ್ ಗೆ ರೇಚಲ್ ಹಾಗೂ ಅವಳ ಸಹೋದ್ಯೋಗಿ ಮಾರ್ಕ್ ರ ನಿಕಟತೆ ಅಹಿತಕರವೆನಿಸುತ್ತದೆ. ರೇಚಲ್ ತಮ್ಮ ಸಂಬಂಧಕ್ಕೆ ಒಂದು ಸಣ್ಣ ವಿರಾಮ ಕೊಡಲು ನಿರ್ಧರಿಸುತ್ತಾಳೆ. ಇದರಿಂದ ಮನನೊಂದ, ಪಾನಮತ್ತ ರಾಸ್ ಇನ್ನೊಬ್ಬಳೊಂದಿಗೆ ಮಲಗುತ್ತಾನೆ. ಇದನ್ನು ತಿಳಿದ ರೇಚಲ್ ರಾಸ್ ನೊಂದಿಗಿನ ತನ್ನ ಸಂಬಂಧವನ್ನು ಮುರಿದು ಹಾಕಿಕೊಳ್ಳುತ್ತಾಳೆ. ತನ್ನ ಅವಳಿ ಅಕ್ಕ ಅರ್ಸೂಲಾ ಳನ್ನು ಬಿಟ್ಟು ತನಗೆ ಬೇರೆ ಕುಟುಂಬವಿಲ್ಲವೆಂದೇ ನಂಬಿದ್ದ ಫೀಬಿ, ತನ್ನ ತಂದೆಯ ಎರಡನೇ ಹೆಂಡತಿಯ ಮಗನನ್ನು (ತನ್ನ ಅರೆ ಸಹೋದರ) ಹಾಗೂ ತನಗೆ ಜನ್ಮಕೊಟ್ಟ ತಾಯಿಯನ್ನೂ ಭೇಟಿಯಾಗುತ್ತಾಳೆ ಮತ್ತು ಅವರೊಂದಿಗೆ ಪರಿಚಿತಳಾಗುತ್ತಾಳೆ. ಜೋಯಿ ತನ್ನ ಸಹನಟಿ ಕೇಟ್ ಜೊತೆ ಸಂಬಂಧವನ್ನು ಬೆಳೆಸುತ್ತಾನೆ ಹಾಗೂ ಮೋನಿಕಾ ಮಿಲಿಯಾಧಿಪತಿ ಪೀಟ್ ಬೆಕ್ಕರ್ ಜೊತೆ ಸಂಬಂಧವನ್ನು ಆರಂಭಿಸುತ್ತಾಳೆ.

ನಾಲ್ಕನೇ ಸರಣಿಯ ಪ್ರಥಮ ಸಂಚಿಕೆಯಲ್ಲಿ ರಾಸ್ ಮತ್ತು ರೇಚಲ್ ಸ್ವಲ್ಪ ಸಮಯಕ್ಕೆ ಜೊತೆಗೂಡುತ್ತಾರೆ ನಂತರ ಪುನಃ ದೂರವಾಗುತ್ತಾರೆ. ರಾಸ್ ಯಾವಾಗಲೂ ಅವರಿಬ್ಬರೂ ಸಂಬಂಧ ವಿರಾಮದಲ್ಲಿದ್ದರೆಂದು ಒತ್ತಿ ಹೇಳುತ್ತಿರುತ್ತಾನೆ. ಜೋಯಿ ರಂಗನಟಿ ಕ್ಯಾಥಿ ಯನ್ನು ಡೇಟ್ ಮಾಡುತ್ತಾನೆ, ಆದರೆ ಚ್ಯಾಂಡ್ಲರ್ ಅವಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಅವಳು ಇನ್ನೊಬ್ಬ ನಟನೊಂದಿಗೆ ಸಂಬಂಧವಿರಿಸಿಕೊಂಡು ಮೋಸ ಮಾಡುತ್ತಿರುವಿದು ತಿಳಿದಾಗ ಅವಳಿಂದ ದೂರವಾಗುತ್ತಾನೆ. ಫೀಬಿಯು ತನ್ನ ತಮ್ಮ ಹಾಗೂ ಅವನ ಪತ್ನಿ ಆಲಿಸ್ರ ಮಕ್ಕಳಿಗೆ ಬದಲಿ/ಬಾಡಿಗೆ ತಾಯಿಯಾಗುತ್ತಾಳೆ. ಪಣವೊಂದರಲ್ಲಿ ಸೋತ ನಂತರ ಮೋನಿಕಾ ಹಾಗೂ ರೇಚಲ್, ಜೋಯಿ ಮತ್ತು ಚ್ಯಾಂಡ್ಲರ್ ರೊಂದಿಗೆ ಮನೆಯನ್ನು ಬದಲಾಯಿಸಿಕೊಳ್ಳುತ್ತಾರೆ. ನಂತರ ನಿಕ್ಸ್ ಸರಣಿ ಟಿಕೆಟ್ ಗಳಿಂದ ಹಾಗೂ ಮೋನಿಕಾ ರೇಚಲ್ ರ ಮಧ್ಯದ ಒಂದು ನಿಮಿಷದ ಚುಂಬನದಿಂದ (ತೆರೆಮರೆಯಲ್ಲಿ) ತಮ್ಮ ಮನೆಯನ್ನು ಪುನಃ ಹಿಂಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ರಾಸ್, ಎಮಿಲಿ ಎನ್ನುವ ಇಂಗ್ಲಿಷ್ ಮಹಿಳೆಯನ್ನು ಡೇಟ್ ಮಾಡಲು ಆರಂಭಿಸುತ್ತಾನೆ. ಸರಣಿಯ ಕೊನೆಯ ಸಂಚಿಕೆಯು ಲಂಡನ್ ನಲ್ಲಿಯ ಇವರ ಮದುವೆ ಸಮಾರಂಭವನ್ನು ಪ್ರಧಾನವಾಗಿ ಚಿತ್ರಿಸುತ್ತದೆ. ಚ್ಯಾಂಡ್ಲರ್ ಮತ್ತು ಮೋನಿಕಾ ಒಟ್ಟಿಗೆ ಮಲಗುತ್ತಾರೆ ಹಾಗೂ ರೇಚಲ್, ರಾಸ್ ಮತ್ತು ಎಮಿಲಿಯರ ಮದುವೆಗೆ ಹೋಗಲು ನಿರ್ಧರಿಸುತ್ತಾಳೆ. ವಿವಾಹ ವೇದಿಕೆಯಲ್ಲಿ ಶಪಥಗಳನ್ನು ಉಚ್ಛರಿಸುವಾಗ ರಾಸ್ ತಪ್ಪು ಹೆಸರನ್ನು(ರೇಚಲ್ ಳ) ಹೇಳುತ್ತಾನೆ. ಇದರಿಂದ ಅವನ ವಧು ಹಾಗೂ ಅತಿಥಿಗಳು ಆಘಾತಗೊಳ್ಳುತ್ತಾರೆ.

ಚ್ಯಾಂಡ್ಲರ್ ಮತ್ತು ಮೋನಿಕಾ ತಮ್ಮ ಹೊಸ ಸಂಬಂಧವನ್ನು ಇತರರಿಂದ ರಹಸ್ಯವಾಗಿಡಲು ನಡೆಸುವ ಪ್ರಯತ್ನವನ್ನು ಐದನೇ ಸರಣಿಯು ಪ್ರಮುಖವಾಗಿ ಚಿತ್ರಿಸುತ್ತದೆ. ಸರಣಿಯ ೧೦೦ನೇ ಸಂಚಿಕೆಯಲ್ಲಿ ಫೀಬಿ ತ್ರಿವಳಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ. ಮೊದಲ ಗಂಡು ಮಗುವಿಗೆ ಫ್ರ್ಯಾಂಕ್ ಜೂನಿಯರ್ ಜೂನಿಯರ್ ಎಂದೂ ನಂತರದ ಎರಡು ಹೆಣ್ಣು ಮಕ್ಕಳಿಗೆ ಲೆಸ್ಲಿ ಹಾಗೂ ಚ್ಯಾಂಡ್ಲರ್ ಎಂದೂ ಹೆಸರಿಡುತ್ತಾರೆ. (ಆರಂಭದಲ್ಲಿ ಅವರು ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಎಂದು ಭಾವಿಸಿಕೊಂಡಿರುತ್ತಾರೆ ಆದರೆ ನಂತರ ಅದರಲ್ಲಿ ಒಂದು ಮಗು ಹೆಣ್ಣು ಎಂದು ಗೊತ್ತಾದ ಬಳಿಕವೂ ಚ್ಯಾಂಡ್ಲರ್ ಎಂಬ ಹೆಸರನ್ನೇ ಇಡಲು ನಿರ್ಧರಿಸುತ್ತಾರೆ.) ಎಮಿಲಿಯು ರೇಚಲ್ ಳನ್ನು ಇಷ್ಟಪಡದ ಕಾರಣ ಹಾಗೂ ರಾಸ್ ರೇಚಲ್ ನೊಂದಿಗಿನ ತನ್ನ ಸ್ನೇಹವನ್ನು ಬಿಟ್ಟು ಕೊಡಲು ಸಿದ್ಧನಿರದ ಕಾರಣ ರಾಸ್ ಮತ್ತು ಎಮಿಲಿಯ ಮದುವೆಯು ಮುರಿದುಬೀಳುತ್ತದೆ. ಫೀಬಿ ಪೋಲಿಸ್ ಅಧಿಕಾರಿ ಗ್ಯಾರಿಯೊಂದಿಗೆ ಸಂಬಂಧವನ್ನು ಆರಂಭಿಸುತ್ತಾಳೆ. ಮೋನಿಕಾ ಮತ್ತು ಚ್ಯಾಂಡ್ಲರ್ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗಪಡಿದಾಗ ಇತರರು ಮೊದಲಿಗೆ ಅಚ್ಚರಿಪಟ್ಟುಕೊಳ್ಳುತ್ತಾರೆ ಆದರೆ ನಂತರ ಸಂತೋಷಪಟ್ಟುಕೊಳ್ಳುತ್ತಾರೆ. ಅವರು ಲಾಸ್ ವೇಗಸ್ ನ ಪ್ರವಾಸದಲ್ಲಿರುವಾಗ ಮದುವೆಯಾಗಲು ತೀರ್ಮಾನಿಸುತ್ತಾರೆ. ಆದರೆ ರಾಸ್ ಹಾಗೂ ರೇಚಲ್ ರನ್ನು ಪಾನಮತ್ತರಾಗಿ ಚರ್ಚಿನಿಂದ ಮದುವೆಯಾಗಿ ಹೊರಬರುತ್ತಿರುವುದನ್ನು ನೋಡಿದ ನಂತರ ತಮ್ಮ ನಿರ್ಣಯವನ್ನು ಬದಲಾಯಿಸುತ್ತಾರೆ.

ಆರನೇ ಸರಣಿಯ ಪ್ರಥಮ ಸಂಚಿಕೆಯಲ್ಲಿ ರಾಸ್ ಹಾಗೂ ರೇಚಲ್ ರ ಮದುವೆಯು ಮದ್ಯದ ಅಮಲಿನಲ್ಲಿ ನಡೆದ ಒಂದು ತಪ್ಪೆಂದು ಪ್ರಚುರವಾಗುತ್ತದೆ ಮತ್ತು ಕೆಲವು ಸಂಚಿಕೆಗಳ ನಂತರ ಅವರು ವಿಚ್ಛೇದನ ಪಡೆದುಕೊಳ್ಳುತ್ತಾರೆ. ಚಾಂಡ್ಲರ್ ಮತ್ತು ಮೋನಿಕಾ ಜೊತೆಗೆ ಇರಲು ಪ್ರಾರಂಭಿಸುತ್ತಾರೆ. ಇದರಿಂದ ರೇಚಲ್, ಫೀಬಿಯ ಮನೆಗೆ ತನ್ನ ವಾಸವನ್ನು ಬದಲಾಯಿಸಿಕೊಳ್ಳುತ್ತಾಳೆ. ಜೋಯಿಗೆ 'ಮ್ಯಾಕ್ ಆಂಡ್ ಚೀಸ್' ಎಂಬ ಕೇಬಲ್ ಟಿ.ವಿ ಸರಣಿಯಲ್ಲಿ ಪಾತ್ರವೊಂದು ಸಿಗುತ್ತದೆ ಮತ್ತು ಅಲ್ಲಿ ಅವನು ಓಂದು ರೋಬೋಟಿನೊಂದಿಗೆ ಅಭಿನಯಿಸುತ್ತಾನೆ. ರಾಸ್ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪ್ರ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರುತ್ತಾನೆ ಹಾಗೂ ತನ್ನ ವಿದ್ಯಾರ್ಥಿಗಳಲ್ಲಿ ಒಬ್ಬಳದ ಎಲಿಜ಼ಬೆತ್ ಳನ್ನು ಡೇಟ್ ಮಾಡಲು ಆರಂಭಿಸುತ್ತಾನೆ. ತಮ್ಮ ವಯಸ್ಸಿನ ಪ್ರೌಢತೆಯ ಅಂತರದಿಂದಾಗಿ ಆ ಸಂಬಂಧವು ಮುರಿದು ಬೀಳುತ್ತದೆ. ಬೆಂಕಿ ತಗುಲಿ ರೇಚಲ್ ಫೀಬಿಯರ ಅಪಾರ್ಟ್ಮೆಂಟ್ ಸುಟ್ಟುಹೋಗುತ್ತದೆ. ಇದರಿಂದಾಗಿ ರೇಚಲ್ ಜೋಯಿಯ ಮನೆಗೂ, ಫೀಬಿ ಚಾಂಡ್ಲರ್-ಮೋನಿಕಾ ಮನೆಗೂ ತಮ್ಮ ವಾಸವನ್ನು ಬದಲಾಯಿಸಿಕೊಳ್ಳುತ್ತಾರೆ. ಚಾಂಡ್ಲರ್ ಮೋನಿಕಾಳನ್ನು ಮದುವೆಯಾಗಲು ಕೇಳಿಕೊಳ್ಳುತ್ತಾನೆ. ತನ್ನ ಹಳೆಯ ಗೆಳೆಯನಾದ ರಿಚರ್ಡ್ ತನ್ನ ಪ್ರೀತಿಯನ್ನು ಒಪ್ಪಿಕೊಂಡರೂ, ಚಾಂಡ್ಲರ್ ಜೊತೆ ತನ್ನ ಮದುವೆಗೆ ಮೋನಿಕಾ ಒಪ್ಪಿಗೆ ನೀಡುತ್ತಾಳೆ.

ಫೀಬಿಯ ಪ್ರೇಮಿ ಹಾಗೂ ನಂತರ ಗಂಡನ ಪಾತ್ರವನ್ನು ನಿರ್ವಹಿಸಿದ ಪಾಲ್ ರುಡ್ ತಮ್ಮ ಪಾತ್ರವು ಆವರ್ತಗೊಳ್ಳಲು ಶುರುವಾದಾಗ ಆಶ್ಚರ್ಯಗೊಂಡರು.[೩೨]

ನಿರ್ಮಾಣ[ಬದಲಾಯಿಸಿ]

ಕಲ್ಪನೆ[ಬದಲಾಯಿಸಿ]

ನಟರ ನೇಮಕ[ಬದಲಾಯಿಸಿ]

ಬರಹ[ಬದಲಾಯಿಸಿ]

ಚಿತ್ರೀಕರಣ[ಬದಲಾಯಿಸಿ]

ಸರಣಿ ಅಂತ್ಯ[ಬದಲಾಯಿಸಿ]

ಪ್ರಭಾವ[ಬದಲಾಯಿಸಿ]

ವಿಮರ್ಶೆ[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

ಸ್ಥಾನ[ಬದಲಾಯಿಸಿ]

ಸಾಂಸ್ಕೃತಿಕ ಪ್ರಭಾವ[ಬದಲಾಯಿಸಿ]

ವಿತರಣೆ[ಬದಲಾಯಿಸಿ]

ಪ್ರಸಾರಣೆ[ಬದಲಾಯಿಸಿ]

ಅಂತಾರಾಷ್ಟೀಯ[ಬದಲಾಯಿಸಿ]

ಮಾರುಕಟ್ಟೆ[ಬದಲಾಯಿಸಿ]

ಆಧರಿತ ಸರಣಿಗಳು[ಬದಲಾಯಿಸಿ]

ಜೋಯಿ[ಬದಲಾಯಿಸಿ]

ಚಲನಚಿತ್ರ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. "TV Guide Names Top 50 Shows". CBS News. April 26, 2002. 
 6. "The 100 Best Tv Shows Of All-Time". Time. September 6, 2007. 
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ೧೨.೬ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. ೧೬.೦ ೧೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. ೧೮.೦ ೧೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. ೨೦.೦ ೨೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. ೨೧.೦ ೨೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. ೨೫.೦ ೨೫.೧ ೨೫.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Wild, David (2004). Friends 'Til the End: The Official Celebration of All Ten Years. Time Warner. ISBN 1932273190. 
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು[ಬದಲಾಯಿಸಿ]