ಪ್ರೇಸಿಯೊಡೈಮಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೇಸಿಯೊಡೈಮಿಯಮ್ ಒಂದು ಮೂಲಧಾತು ಲೋಹ. ಇದರ ಪರಮಾಣು ಸಂಖ್ಯೆ ೫೯ ಮತ್ತು ಸಂಕೇತ Pr. ಇದು ಲ್ಯಾಂಥನೊಯ್ಡ್ ಗುಂಪಿನ ಬೆಳ್ಳಿಯಂತೆ ಹೊಳಪುಳ್ಳ ಮೃದುವಾದ, ಬಡಿದು ತಗಡಾಗಿಸಬಲ್ಲ, ತಂತುಕರಣೀಯ ಲೋಹ. ಇದು ಗಾಳಿಯಲ್ಲಿ ರಾಸಾಯನಿಕ ಸವೆತಕ್ಕೆ (ಕರೋಶನ್) ಯೂರೋಪಿಯಮ್, ಲ್ಯಾಂಥನಮ್, ಸೀರಿಯಮ್, ಅಥವಾ ನೀಯೋಡಿಮಿಯಮ್‍‍ಗಳಿಗಿಂತ ಕೊಂಚಮಟ್ಟಿಗೆ ಹೆಚ್ಚು ಪ್ರತಿರೋಧಕವಾಗಿದೆಯಾದರೂ ಗಾಳಿಗೆ ಒಡ್ಡಲ್ಪಟ್ಟಾಗ ಬಿಲ್ಲೆಗಳಾಗಿ ಉದುರುವ ಹಸಿರು ಆಕ್ಸೈಡ್ ಲೇಪನ ಕಾಣಿಸಿಕೊಂಡು ಹೆಚ್ಚು ಲೋಹವು ಉತ್ಕರ್ಷಣಕ್ಕೆ ಒಡ್ಡಲ್ಪಡುತ್ತದೆ.ಇದನ್ನು ೧೮೪೧ರಲ್ಲಿ ಆಸ್ಟ್ರಿಯದೇಶದ ವಿಜ್ಞಾನಿ ಕಂಡುಹಿಡಿದರು.ಇದನ್ನು ವಿಮಾನದ ಇಂಜಿನ್ನಿನ ಕೆಲವು ಭಾಗಗಳಲ್ಲಿ,ಗಾಜಿನ ಕೈಗಾರಿಕೆಯಲ್ಲಿ,ಕೆಲವು ಮಿಶ್ರಧಾತುಗಳಲ್ಲಿ ಉಪಯೋಗಿಸುತ್ತಾರೆ.