ಆಕ್ಸೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕ್ಸೈಡ್ ತನ್ನ ರಾಸಾಯನಿಕ ಸೂತ್ರದಲ್ಲಿ ಕನಿಷ್ಠ ಪಕ್ಷ ಒಂದು ಆಕ್ಸಿಜನ್ ಪರಮಾಣು ಮತ್ತು ಒಂದು ಇತರ ಮೂಲಧಾತುವನ್ನು[೧] ಹೊಂದಿರುವ ಒಂದು ರಾಸಾಯನಿಕ ಸಂಯುಕ್ತ.

ಲೋಹಗಳೂ ಅಲೋಹಗಳೂ ಆಕ್ಸಿಜನ್‌ನೊಂದಿಗೆ ಸೇರಿದಾಗ ಆಕ್ಸೈಡುಗಳು ಉತ್ಪತ್ತಿಯಾಗುತ್ತವೆ. ಆಕ್ಸಿಜನ್ನಿನ ಪ್ರಮಾಣವನ್ನನುಸರಿಸಿ ಒಂದೇ ಲೋಹದ ಅಥವಾ ಅಲೋಹದ ಹಲವು ಆಕ್ಸೈಡುಗಳು ಇರಬಹುದು. ಉದಾಹರಣೆ ಸಲ್ಫರ್ ಡೈಆಕ್ಸೈಡ್ (SO2), ಸಲ್ಫರ್ ಟ್ರೈ ಆಕ್ಸೈಡ್ (SO3). ನಿಸರ್ಗದಲ್ಲಿ ಹಲವು ಲೋಹಾಲೋಹಗಳ ಆಕ್ಸೈಡುಗಳು ಸಿಗುತ್ತವೆ. ಉದಾಹರಣೆ ಸಿಲಿಕಾನ್ ಡೈಆಕ್ಸೈಡ್ (SiO2-ಮರಳು). ಅಲ್ಯೂಮಿನಿಯಂ ಆಕ್ಸೈಡ್ (Al2O3) ಕಬ್ಬಿಣದ ಆಕ್ಸೈಡ್ (Fe2O3-ಕಬ್ಬಿಣದ ಅದುರು), ಇಂಗಾಲಾಮ್ಲ (CO2), ನೀರು (H2O). ಸಾಕಷ್ಟು ಉಷ್ಣ ಮತ್ತು ಆಕ್ಸಿಜನ್‌ನ ಸಂವರ್ಧ ಇದ್ದರೆ  ಅನೇಕ ಲೋಹಾಲೋಹಗಳು ಆಕ್ಸೆಡುಗಳಾಗಿ ಮಾರ್ಪಡುತ್ತವೆ. ಜಡ ಸ್ವಭಾವವುಳ್ಳ ಉತ್ಕೃಷ್ಟ ಅನಿಲಗಳು (ನೋಬಲ್ ಗ್ಯಾಸಸ್), ಚಿನ್ನ ಮುಂತಾದುವು ಇದಕ್ಕೆ ಹೊರತು. ನೇರವಾಗಿ ಆಕ್ಸಿಜನ್ನಿನೊಂದಿಗೆ ಕೂಡಿಸುವುದಲ್ಲದೆ, ಕಾರ್ಬೊನೆಟ್, ಹೈಡ್ರಾಕ್ಸೈಡ್ ಮುಂತಾದ ಸಂಯುಕ್ತಗಳನ್ನು ಉಷ್ಣದಿಂದ ವಿಭಜಿಸುವುದರಿಂದಲೂ ಆಕ್ಸೈಡುಗಳನ್ನು ಪಡೆಯಬಹುದು.

 CaCO3   → CaO + CO2
ಸುಣ್ಣಕಲ್ಲು    ಸುಣ್ಣ[೨]
   2Au(OH)3    →      Au2O3       + 3H2O
ಚಿನ್ನದ ಹೈಡ್ರಾಕ್ಸೈಡ್     ಚಿನ್ನದ ಆಕ್ಸೈಡ್

ಅಲೋಹಗಳ ಆಕ್ಸೈಡುಗಳು ನೀರಿನೊಂದಿಗೆ ಕೂಡಿದಾಗ ಆಮ್ಲಗಳೂ ಲೋಹಗಳ ಆಕ್ಸೈಡುಗಳು ನೀರಿನೊಂದಿಗೆ ಕೂಡಿದಾಗ ಕ್ಷಾರಗಳೂ ಉತ್ಪತ್ತಿಯಾಗುತ್ತವೆ.

    Na2O        + H2O   →  2NaOH
ಸೋಡಿಯಂ ಆಕ್ಸೈಡ್         ಸೋಡಿಯಂ ಹೈಡ್ರಾಕ್ಸೈಡ್     
      SO3       + H2O  →     H2SO4
ಸಲ್ಫರ್ ಟ್ರೈ ಆಕ್ಸೈಡ್          ಸಲ್ಫ್ಯೂರಿಕ್ ಆಮ್ಲ

ಉಲ್ಲೇಖಗಳು[ಬದಲಾಯಿಸಿ]

  1. Hein, Morris; Arena, Susan (2006). Foundations of College Chemistry (12th ed.). Wiley. ISBN 9780471741534.
  2. Greenwood, N. N.; & Earnshaw, A. (1997). Chemistry of the Elements (2nd Edn.), Oxford:Butterworth-Heinemann. ISBN 0-7506-3365-4.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆಕ್ಸೈಡ್&oldid=1167136" ಇಂದ ಪಡೆಯಲ್ಪಟ್ಟಿದೆ