ಪ್ರಸಿದ್ಧ ಕೊಡವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ ಪ್ರಸಿದ್ಧಿಗೆ ಹಾತೊರೆಯದ ಜನಾಂಗವಾದರೂ "ಕೊಡವರು" ಪೂರ್ವದಿಂದಲೂ ತಮ್ಮ ಧೈರ್ಯ, ಶೌರ್ಯ, ನಿಷ್ಠೆ, ಸತ್ಯಸಂಧತೆ ಹಾಗೂ ನೇರನಡೆನುಡಿಗಳಿಗೆ ಖ್ಯಾತರಾದವರು. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಕೊಡಗನ್ನು ಆಳಿದ ನಾಯಕರ, ಲಿಂಗಾಯತ ಪಾಳೇಗಾರರ ಮತ್ತು ಆಂಗ್ಲರ ಕಾಲಗಳಲ್ಲಿ ಅನೇಕ ಕೊಡವ ವೀರರ ಕತೆಗಳನ್ನು ಕಾಣಬಹುದು. ನಾಯಕರ ಮತ್ತು ಪಾಳೇಗಾರರ ಸಮಯದಲ್ಲಿ ಈರ್ಷ್ಯೆ, ಪಿತೂರಿ, ಒಳಸಂಚುಗಳಿಗೆ ಒಳಗಾಗಿ ದುಷ್ಟತನವನ್ನು ತೋರಿದವರಿರುವಂತೆಯೇ, ಸತ್ಯ ಮತ್ತು ನ್ಯಾಯವನ್ನು ನಂಬಿ, ಈ ತೆರನ ವಂಚನೆಗಳನ್ನು ಕಾಣದೆ ಧೈರ್ಯದಿಂದ ಸೆಣೆಸಿ ಪ್ರಾಣತೆತ್ತವರನ್ನೂ ನೋಡಬಹುದು. ಹತ್ತೊಂಭತ್ತು ಮತ್ತು ಇಪ್ಪತ್ತನೇ ಶತಮಾನದ ಆಂಗ್ಲರ ಆಡಳಿತದಲ್ಲಿ ಸೈನ್ಯದಲ್ಲಿ ಮಾತ್ರವಲ್ಲದೆ ಆಡಳಿತ, ವೈದ್ಯಕೀಯ ಮತ್ತು ಶಿಕ್ಷಣ, ಸ್ಪರ್ಧಾತ್ಮಕ ಕ್ರೀಡೆ, ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಪದವಿಗಳನ್ನು ಪಡೆದು ಹೆಸರುಗಳಿಸಿದ ಕೊಡವರು ಅಗಣಿತ ಸಂಖ್ಯೆಯಲ್ಲಿದ್ದಾರೆ.

ಪ್ರಸಿದ್ಧರಾದ ಕೊಡವ ಪುರುಷ ಹಾಗೂ ಸ್ತ್ರೀ(ಕೊಡವತಿ)[ಬದಲಾಯಿಸಿ]

ಈ ರೀತಿಯಲ್ಲಿ ಪ್ರಸಿದ್ಧರಾದ ಕೊಡವ ಪುರುಷ ಹಾಗೂ ಸ್ತ್ರೀ(ಕೊಡವತಿ)ಯರನ್ನು ಕುರಿತು ಬರೆಯುವಾಗ ಅವರನ್ನು ಆರಿಸುವದಕ್ಕಾಗಿ ಕೆಲವು ಅಳತೆಗೋಲುಗಳನ್ನು, ನ್ಯಾಯ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠವಾಗಿ ಈ ಕೆಳಗಿನಂತೆ ರೂಪಿಸಿಕೊಳ್ಳಲಾಗಿದೆ:

  1. ತಾವು ಆರಿಸಿಕೊಂಡ ಕ್ಷೇತ್ರದಲ್ಲಿ ತೀವ್ರ ತೆರನ ಸ್ಪರ್ಧೆಗಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಿಸಿ ಗಳಿಸಿದ ಗೆಲುವು, ಕೀರ್ತಿ ಮತ್ತು ಗೌರವ;
  2. ತಮ್ಮ ಕ್ಷೇತ್ರದಲ್ಲಿ ಹಲವು ಬಗೆಯ ಎಡರು-ತೊಡರುಗಳನ್ನು ದಾಟಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡೆದ ಪ್ರಶಸ್ತಿ ಮತ್ತು ಪ್ರಸಿದ್ಧಿ;
  3. ಕೈಗಾರಿಕೆ, ವಿದ್ಯೆ, ವೈದ್ಯಕೀಯ, ಮನೋರಂಜನೆ, ಅತಿಥಿಸತ್ಕಾರ, ಮೊದಲಾದ ಸಾಹಸೋದ್ಯಮ (enterprise) ಮತ್ತು ಉದ್ಯಮಸಾಹಸ(enterpreneurship)ಗಳಲ್ಲಿ ಪ್ರಥಮವಾಗಿ ಸಾಧಿಸಿ ಪಡೆದ ಗೆಲುವು. ಈ ರೀತಿಯಲ್ಲಿ ಆರಿಸುವಾಗ ಕೆಲವರನ್ನು ಬಿಟ್ಟಿರಬಹುದು; ಕೆಲವರನ್ನು ಕುರಿತು ವಿಶದೀಕರಿಸಬಹುದಿತ್ತು; ಎಂದಿತ್ಯಾದಿ ಅನ್ನಿಸಿಕೆಗಳು ಉದ್ಭವಿಸಿದರೆ ಈ ಮುಕ್ತ ವಿಶ್ವಕೋಶವನ್ನು ಸೂಕ್ತವಾಗಿ ತಿದ್ದಿ ಅಭಿವೃದ್ಧಿಪಡಿಸಬಹುದು. ಹೀಗೆ ಆರಿಸಲಾದ ಪ್ರಸಿದ್ಧ ಕೊಡವರ ಪಟ್ಟಿ ಈ ಕೆಳಗಿದೆ-
  4. ಅಪ್ಪಚ್ಚ ಕವಿ
  5. ನಡಿಕೇರಿಯಂಡ ಚಿಣ್ಣಪ್ಪ
  6. ಬಿ ಡಿ ಗಣಪತಿ
  7. ಫೀಲ್ಡ್ ಮಾರ್ಷಲ್ ಕಾರಿಯಪ್ಪ
  8. ಜನರಲ್ ಕೆ ಎಸ್ ತಿಮ್ಮಯ್ಯ
  9. ಲೆಫ್ಟಿನಂಟ್ ಜನರಲ್ ಅಪ್ಪಾರಂಡ ಸಿ ಅಯ್ಯಪ್ಪ
  10. ಲೆ ಜನರಲ್ ಸಿ ಎನ್ ಸೋಮಣ್ಣ
  11. ಲೆ ಜ ಬಿದ್ದಂಡ ಸಿ ನಂದ
  12. ಕ್ಯಾ(ನೌಕಾ) ಬಿ ಎಮ್ ಮುದ್ದಯ್ಯ
  13. ಏರ್ ಮಾರ್ಶಲ್ ಕೊಡಂದೆರ ಸಿ ಕಾರ್ಯಪ್ಪ
  14. ಸ್ಕ್ವಾ ಲೀ ಎ ಬಿ ದೇವಯ್ಯ
  15. ಸಿ ಬಿ ಮುತ್ತಮ್ಮ
  16. ಪಿ ಕೆ ಮೊಣ್ಣಪ್ಪ
  17. ಜಸ್ಟೀಸ್ ಪಾಲೆಕಂಡ ಬೋಪಣ್ಣ
  18. ಪಂದಿಕುತ್ತಿರ ಎಮ್ ಚಂಗಪ್ಪ
  19. ಕೋದಂಡ ಎಮ್ ಕಾರ್ಯಪ್ಪ
  20. ಚಕ್ಕೆರ ಬಿ ಮೋಟಯ್ಯ
  21. ಕೀಕಿರ ಎ ತಮ್ಮಯ್ಯ
  22. ಬಿದ್ದಂಡ ಬಿ ಅಶೋಕ್ ಕುಮಾರ್
  23. ಸಿ ಎಮ್ ಪೂಣಚ್ಚ
  24. ಎ ಎನ್ ಸೋಮಯ್ಯ
  25. ಎ ಪಿ ಅಪ್ಪಣ್ಣ
  26. ಎ ಎಮ್ ಬೆಳ್ಯಪ್ಪ
  27. ಎಮ್ ಸಿ ನಾಣಯ್ಯ
  28. ಪ್ರೇಮಾ ಕಾರ್ಯಪ್ಪ
  29. ಡಾ ಕೋದಂಡ ಎಮ್ ಮುತ್ತಯ್ಯ
  30. ಎಮ್ ಪಿ ಗಣೇಶ್
  31. ಎಮ್ ಎಮ್ ಸೋಮಯ್ಯ
  32. ಅಶ್ವಿನಿ ನಾಚಪ್ಪ
  33. ಜೋಶ್ನಾ ಚಿಣ್ಣಪ್ಪ
  34. ರೋಹನ್ ಬೋಪಣ್ಣ
  35. ಚೆಪ್ಪುಡಿರ ಎಸ್ ಪೂಣಚ್ಚ
  36. ನಿರ್ಮಲಾ ಉತ್ತಯ್ಯ
  37. ಆರತಿ ಪೊನ್ನಪ್ಪ
  38. ರೀತ್ ಅಬ್ರಹಾಮ್
  39. ಪಾಲಂದಿರ ಪಿ ದೇವಯ್ಯ
  40. ಬಿದ್ದು ಅಪ್ಪಯ್ಯ
  41. ಪ್ರಸಾದ್ ಬಿದ್ದಪ್ಪ
  42. ಎ ಟಿ ರಘು
  43. ಗುಲ್ಶನ್ ದೇವಯ್ಯ
  44. ನಿಧಿ ಸುಬ್ಬಯ್ಯ
  45. ಡೈಸಿ ಬೋಪಣ್ಣ
  46. ಹರ್ಷಿತ ಪೂಣಚ್ಚ