ಪ್ರಸಿದ್ಧ ಕೃಷ್ಣ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: {{{unsourced}}}

ಪ್ರಸಿದ್ದ ಕೃಷ್ಣ ರವರು ದಿನಾಂಕ ೧೯-೦೨-೧೯೯೬ ರಲ್ಲಿ ಜನಿಸಿದರು.ಇವರು ಭಾರತದ ಕ್ರಿಕೇಟ್ ಆಟಗಾರ.ಇವರು ತಮ್ಮ ವಾಸ ಸ್ಥಾನವಾದ ಕರ್ನಾಟಕಕ್ಕಾಗಿ ಕ್ರಿಕೇಟ್ ಆಡುತ್ತಾರೆ.ಇವರು ವೇಗಾವಾಗಿ ಎಸೆಯುವ ಬೋಲರ್ ಆಗಿದ್ದಾರೆ.ಇವರು ಮೊದಲ ಬಾರಿಗೆ ದಿನಾಂಕ ೨೩-೦೩-೨೦೨೧ ರಂದು ಭಾರತದ ಒಂದು ದಿನದ ಅಂತರಾಷ್ತ್ರೀಯ ಕ್ರಿಕೇಟ್ (ಒಡಿಐ) ತಂಡದಲ್ಲಿ ಕಾಣಿಸಿಕೊಂಡರು.ಮತ್ತು ಇವರು ತಮ್ಮ ಮೊದಲನೆ ಒಡಿಐ ನಲ್ಲೆ ೪ ವಿಕೆಟ್ ಪಡೆದುಕೊಂಡ ಭಾರತದ ಮೊದಲ ಬೋಲರ್.

ವೃತ್ತಿ[ಬದಲಾಯಿಸಿ]

೨೦೧೫ರಲ್ಲಿ ನಡೆದ ಟೂರ್ ಆಫ಼್‌ ಇಂಡಿಯ ಕ್ರಿಕೇಟ್ ಪಂದ್ಯದಲ್ಲಿ ಭಾರತವನ್ನು ಪ್ರವಾಸಿ ಸುತ್ತಿದ್ದ ಬಾಂಗ್ಲದೇಶ್ ಎ ತಂಡದ ವಿರುದ್ದ ಕರ್ನಾಟಕ ತಂಡವನ್ನು ಪ್ರತಿನಿದಿಸುತ್ತ ಪ್ರಸಿದ್ದ ಕೃಷ್ಣ ರವರು ೪೯ ರನ್ನುಗಳಿಗೆ ೫ ವಿಕೆಟ್ ಪಡೆದುಕೊಳ್ಳುವುದರ ಮೂಲಕ ಬೆಳಕಿಗೆ ಬಂದ.ಇವರು ತಮ್ಮ ಮೊದಲನೆ ಬಾಲಿಗೆ ರಾನಿ ತಲುಕ್ದಾರ್ ಅವರ ವಿಕೆಟ್ ಪಡೆದುಕೊಳ್ಳುತ್ತಾರೆ. ನಂತರ ಅನಮಲ್ ಹಕ್ಯು, ಶೌಮ್ಯ ಶರ್ಕಾರ್ ಮತ್ತು ನಾಸಿರ್ ಹುಸ್ಸೇನ್ ಎಂಬುವವರ ವಿಕೆಟ್ ಪಡೆಯುತ್ತಾರೆ.

ಇವರು ೨೫-೦೨-೨೦೧೭ ರಲ್ಲಿ ವಿಜಯ್ ಹಜಾರೆ ಟ್ರೋಫಿಗೆ ಭಾಗವಹಿಸಿದ್ದ ಕರ್ನಾಟಕ ಲಿಸ್ಟ್ ಎ ತಂಡಕ್ಕೆ ಮೊದಲ ಪ್ರವೇಶ ಮಾಡಿದ್ದರು. ಹಾಗೂ ೨೧-೦೧-೨೦೧೮ ರಲ್ಲಿ ೨೦೧೭-೧೮ರ ಸೈಯಾದ್ ಮುಶ್ತಕ್ ಅಲಿ ಟ್ರೋಫಿಗೆ ಭಾಗವಹಿಸಿದ್ದ ಕರ್ನಾಟಕ ೨೦-೨೦ ತಂಡಕ್ಕೆ ಮೊದಲ ಪ್ರವೇಶ ಮಾಡಿದ್ದರು.

ಇವರು ೨೦೧೮-೧೯ ರಲ್ಲಿ ವಿಜಯ್ ಹಜಾರೆ ಟ್ರೋಫಿಗೆ ನಡೆದ ಪಂದ್ಯದಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಒಟ್ಟು ೭ ಪಂದ್ಯದಲ್ಲಿ ೧೩ ವಿಕೆಟ್ ಪಡೆದಿದ್ದರು.

೨೦೧೮ ಏಫ್ರಿಲ್ ರಂದು ನಡೆಯುತ್ತಿದ್ದ ೨೦೧೮ ಐಪಿಎಲ್ ಸೀಜನ್ ನಲ್ಲಿ ಕಲಕತ್ತ ನೈಟ್ ರೈಡರ್ಸ್ ತಂಡವು ಗಾಯಗೊಂಡಿದ್ದ ಕಮಲೇಶ್ ನಾಗರ್ ಕೋಟಿ ಬದಲಿಗೆ ಇವರನ್ನು ಸೆರ್ಪಡೆ ಮಾಡಿಕೊಂಡಿತ್ತು.

ಇವರು ಆಗಸ್ಟ್ ೨೦೧೮ ರಂದು ಭಾರತದ ಎ ಟೀಮ್ ಕ್ವಾಡ್ರಂಗುಲ ಸೀರಿಸ್ ಗೆ ಆಡುತ್ತಿದ್ದ,ಭಾರತದ ಎ ತಂಡಕ್ಕೆ ನೇಮಕಗೊಂಡರು. ಮತ್ತು ಡಿಸೆಂಬರ್ ೨೦೧೮ ರಂದು ಎಸಿಸಿ ಎಮರ್ಜಿಂಗ್ ಟೀಮ್ ಏಷ್ಯ ಕಪ್ ಗೆ ಆಡುತಿದ್ದ ಭಾರತದ ತಂಡಕ್ಕೆ ನೇಮಕಗೊಂಡರು.

ಇವರು ೨೩-೦೩-೨೦೨೧ ರಂದು ನಡೆದ ಒಡಿಐ ಕ್ರಿಕೇಟ್ ಪಂದ್ಯದಲ್ಲಿ ಪ್ರವಾಸಿಸುತ್ತಿದ್ದ ಇಂಗ್ಲಾಂಡ್ ವಿರುದ್ದದ ಆಟದಲ್ಲಿ, ಜೇಸನ್ ರಾಯ್ ರವರನ್ನು ತಮ್ಮ ಮೊದಲ ಒಡಿಐ ವಿಕೆಟಾಗಿ ಪಡೆದರು ನಂತರದಲ್ಲಿ ಮೂರು ವಿಕೆಟ್ ಗಳನ್ನು ಪಡೆದು ಭಾರತ ೬೬ ರನ್ನುಗಳಿಂದ ಗೆಲುವನ್ನು ಪಡೆಯಲು ಸಹಕಾರಿಯಾದರು.