ಜೇಸನ್ ರಾಯ್
![](http://upload.wikimedia.org/wikipedia/commons/thumb/e/ed/Jason_Roy_with_the_Sydney_Sixers.jpg/220px-Jason_Roy_with_the_Sydney_Sixers.jpg)
ಜೇಸನ್ ಜೊನಾಥನ್ ರಾಯ್ (ಜನನ ೨೧ ಜುಲೈ ೧೯೯೦) ಒಬ್ಬ ಇಂಗ್ಲಿಷ ಅಂತರಷ್ಟ್ರೀಯ ಕ್ರಿಕೆಟಿಗ. ಅವರು ದೇಶೀಯ ಕ್ರಿಕೆಟ್ನಲ್ಲಿ ಸರ್ರೆ(Surrey) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಆಡುತ್ತಾರೆ. ಪ್ರಸ್ತುತ ಅವರು ಏಕದಿನ ಬ್ಯಾಟಿಂಗ್ನಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ ಮತ್ತು ಐಸಿಸಿ ೨೦-೨೦ ಯಲ್ಲಿ ಅಂತಾರಾಷ್ಟ್ರೀಯ ಬ್ಯಾಟಿಂಗ್ನಲ್ಲಿ ಹದಿನೇಳನೇ ಸ್ಥಾನದಲ್ಲಿದ್ದಾರೆ. ಇವರು ೨೦೧೯ನೆ ಕ್ರಿಕೆಟ್ ವಿಶ್ವಕಪ್ ಗೆದ್ದಾ ತಂಡದ ಬಾಗವಾಗಿದರು.[೧]
ಅವರು ೧೦ ವರ್ಷ ವಯಸ್ಸಿನವರಾಗಿದ್ದಾಗ ದಕ್ಷಿಣ ಆಫ್ರಿಕಾದಿಂದ ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್ ಗೆ ತೆರಳಿದರು. ಅವರು ಬಲಗೈ ಬ್ಯಾಟ್ಸ್ಮನ್. ಸೀಮಿತ ಓವರ ಕ್ರಿಕೆಟನಲ್ಲಿ ಅವರು ಆರಂಭಿಕ ಬ್ಯಾಟ್ಸ್ಮನ್ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮದ್ಯಮ್ ಕ್ರಮಾಂಕದಲ್ಲಿ ಮದ್ಯಮ್ ಕ್ರಮಂಕದಲ್ಲಿ ಆಡುತ್ತಾರೆ. [೨] ಅವರು ಸೆಪ್ಟೆಂಬರ್ ೨೦೧೪ರಲ್ಲಿ ಭಾರತ ವಿರುದ್ಧ ಅಂತಾರಾಷ್ಟ್ರೀಯ ಟಿ-೨೦ಯಲ್ಲಿ ಚೊಚ್ಚಲ ಪಂದ್ಯವನ್ನು ಮತ್ತು ೨೦೧೫ರ ಮೇನಲ್ಲಿ ಐರ್ಲೆಂಡ್ ವಿರುದ್ಧದ ತಮ್ಮ ಪ್ರಥಮ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು.[೩]
ದೇಶೀಯ ವೃತ್ತಿ
[ಬದಲಾಯಿಸಿ]ಅವರು ಜೂನ್ ೨೭,೨೦೦೮ ರಂದು ಮಿಡ್ಲ್ಸೆಕ್ಸ್ ವಿರುದ್ಧದ ಟ್ವೆಂಟಿ-೨೦ ಕಪ್ ಪಂದ್ಯದಲ್ಲಿ ಸರ್ರೆಯ ಮೊದಲ ತಂಡಕೆ ಪಾದಾರ್ಪಣೆ ಮಾಡಿದರು ಮತ್ತು ೨೦೦೮ರ ಜುಲೈ ೨೦ ರಂದು ಯಾರ್ಕ್ಷೈರ್ ವಿರುದ್ಧದ ನ್ಯಾಟ್ವೆಸ್ಟ ಪ್ರೊ ೪೦ ಲೇಗ್ ಪಂದ್ಯಗಳಲ್ಲಿ ತಮ್ಮ ೧೮ನೇ ಹುಟ್ಟುಹಬ್ಬದ ಹಿಂದಿನ ದಿನ ತಮ್ಮ ಲಿಸ್ಟ ಎ ಚೊಚ್ಚಲ ಪ್ರವೇಶ ಮಾಡಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]ರಾಯ್ ೨೦೦೮ರಲ್ಲಿ ಕ್ರೀಡಾ ವಿಜ್ಞಾನ ಮತ್ತು ವ್ಯವಹಾರದಲ್ಲಿ ಎ-ಲೆವೆಲ್ ಪರೀಕ್ಷೆಗಳನ್ನು ತೆಗೆದುಕೊಂಡರು. ಅವರು ಸೇಂಟ ಮೇರಿಸ್ ಯೂನಿವರ್ಸಿಟಿ ಕಾಲೇಜಿನಲ್ಲಿ ಸ್ಥಾನ ಪಡೆದರು. ಆದರೆ ಅವರು ಕ್ರಿಕೆಟ್ ನಲ್ಲಿ ಗಮನ ಹರಿಸುವ ಸಲುವಾಗಿ ಅವರು ಈ ಅವಕಾಶವನ್ನು ತಿರಸ್ಕರಿಸಿದರೂ. [೪] ಅಕ್ಟೋಬರ್ ೭,೨೦೧೭ ರಂದು ರಾಯ್ ಎಲ್ಲಿ ಮೂರ್ ಅವರನ್ನು ವಿವಾಹವಾದರು. ಮಾರ್ಚ್ ೨೦೧೯ರಂದು ಅವರು ತಮ್ಮ ಮೊದಲ ಮಗುವನ್ನು ಹೊಂದಿದ್ದರು. [೫]
ಅಂತಾರಾಷ್ಟ್ರೀಯ ದಾಖಲೆಗಳು
[ಬದಲಾಯಿಸಿ]- ರಾಯ್ ೨೦೧೬ರಲ್ಲಿ ಶ್ರೀಲಂಕಾ ವಿರುದ್ಧ ಅಲೆಕ್ಸ್ ಹೇಲ್ಸ್ ಅವರೊಂದಿಗೆ ೨೫೬ ರನ್ ಗಳ ಆರಂಬಿಕ ಪಾಲುದಾರಿಕೆಯ ಬಾಗವಾಗಿದ್ದರು. ಇದು ಏಕದಿನ ಪಂದ್ಯಗಳಲ್ಲಿ ಯಾವುದೆ ವಿಕೆಟ್ ಕಳೆದುಕೊಳ್ಳದೆ ಅತ್ಯಂತ ಯಶಸ್ವಿ ರನ್ ಚೇಸ್ ಆಗಿತು. [೬][೭] ಏಕದಿನ ಪಂದ್ಯಗಳಲ್ಲಿ ಯಾವುದೆ ವಿಕೆಟಗೆ ಇಂಗ್ಲೆಂಡಗೆ ಇದು ಅತ್ಯದಿಕ ಪಾಲುದಾರಿಕೆ.[೮]
- ರಾಯ್ ಮತ್ತು ಜೋ ರೂಟ್(೨೨೧ ರನ್,೨೨೦ ಎಸೆತಗಳು) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಪರ ಮೂರನೇ ವಿಕೆಟಿಗೆ ಅತ್ಯದಿಕ ಪಾಲುದಾರಿಕೆ ಮಾಡಿದರು. [೯]
ಉಲ್ಲೇಖಗಳು
[ಬದಲಾಯಿಸಿ]- ↑ https://www.standard.co.uk/sport/cricket/england-cricket-world-cup-player-ratings-how-every-star-fared-on-the-road-to-glory-a4189706.html
- ↑ http://www.espncricinfo.com/england/content/player/298438.html
- ↑ https://www.espncricinfo.com/series/10718/report/1031433/england-vs-south-africa-2nd-t20i-sa-tour-of-england-2017
- ↑ https://www.thisislocallondon.co.uk/sport/londonsport/3587822.whitgift-schoolboy-makes-england-debut/
- ↑ https://web.archive.org/web/20190530105007/http://morungexpress.com/from-hospital-to-hundred-jason-roy-hits-special-ton/
- ↑ https://archive.cricketnmore.com/cricket-news/statistcis-in-record-10-wicket-victory-for-england-against-sri-lanka-in-the-2nd-odi--17167
- ↑ https://www.espncricinfo.com/story/_/id/16486493/record-win-england-their-highest-partnership
- ↑ http://stats.espncricinfo.com/ci/engine/records/fow/highest_partnerships_for_any_wicket.html?class=2;id=1;type=team
- ↑ https://www.espncricinfo.com/series/10883/scorecard/1072310/australia-vs-england-1st-odi-eng-tour-of-aus-and-nz-2017-18