ಪ್ಯಾರಾಸಿಟಮಾಲ್
ಇದನ್ನು ಅಸಿಟಮಿನೋಫಿನ್ ಎಂದು ಕರೆಯುತ್ತರೆ. ಈ ಮಾತ್ರೆ ಜ್ವರವನ್ನು ಗುಣಪಡಿಸುತ್ತದೆ ಹಾಗು ನೋವನ್ನು ನಿವಾರಿಸುತ್ತದೆ. ಮಕ್ಕಳ ಜ್ವರವನ್ನು ಈ ಮಾತ್ರೆ ಗುಣಪಡಿಸುವುದಿಲ್ಲ. ಈ ಮಾತ್ರೆಯನ್ನು ತಲೆ ನೋವು, ಬೆನ್ನು ನೋವು ಹಲ್ಲು ನೋವು, ಸಂಧಿವಾತ, ನೆಗಡಿ ಮತ್ತು ಜ್ವರವನ್ನು ವಾಸಿಮಾಡಲು ವೈದ್ಯರು ನೀಡುತ್ತಾರೆ. ಸಂಧಿವಾತದಿಂದ ಆಗುವ ಸೊಂಟ, ಕೈ ಅಥವಾ ಮೊಣಕಾಲಿನಲ್ಲಿ ಉಂಟಾಗುವ ಹಾಗು ಆಯಾಮದಿಂದ ಅಥವ ತೂಕದ ಇಳಿಕೆ ಇಂದ ನಿವಾರಿಸಲಾಗದ ನೋವನ್ನು ಈ ಮಾತ್ರೆ ನಿವಾರಿಸುತ್ತದೆ. ಇದು ಸಂಧಿವಾತದ ನೋವನ್ನು ನಿವಾರಿಸಿದರೂ ಈ ಮಾತ್ರೆ ಸಂಧಿವಾತಕ್ಕೆ ಕಡಿಮೆ ಪರಿಣಾಮ ಬೀರುತ್ತದೆ. ಆದರೆ ಕೀಲಿನ ಊತದ ಮೇಲೆ ಇದು ಪರಿಣಾಮ ಬೀರುವುದಿಲ್ಲ.ಇದನ್ನು ಸಾಮಾನ್ಯವಾಗಿ ಕ್ಯಾನ್ಸರ್ ಇದ್ದವರಿಗೆ ನೀಡಲಾಗುತ್ತದೆ. ಈ ಔಷಧಿ ಮೈಗ್ರನ್ ನೋವನ್ನು ನಿವಾರಿಸುತ್ತದೆ. ೩೯% ಜನರ ನೋವನ್ನು ಸಂಪೂರ್ಣವಾಗಿ ಪರಿಹಾರಿಸುತ್ತದೆ ಹಾಗು ೨೦% ಜನರ ನೋವನ್ನು ಕಡಿಮೆ ಮಾಡುತ್ತದೆ. ಈ ಮಾತ್ರೆಯ ಪರಿಣಾಮ ಎರಡರಿಂದ ನಾಲ್ಕು ಗಂಟೆಯ ಕಾಲ ಇರುತ್ತದೆ. ಬೇರೆ ನೋವು ನಿವಾರಕ ಮಾತ್ರೆಗಳಿಗ ಹೋಲಿಸಿದರೆ ಪ್ಯಾರಸಿಟಮಾಲ್ ಉರಿಯೂತದ ಚಟುವಟಿಕೆಯನ್ನು ಹೆಚ್ಚು ಹೊಂದಿಲ್ಲ ಆದರೆ ಐಬುಪ್ರೊಫೇನ್ ಮತ್ತು ಪ್ಯಾರಸಿಟಮಾಲ್ ತಲೆ ನೋವಿಗೆ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ. ಇದರ ನೋವು ಶಾಮಕ ಗುಣಗಳನ್ನು ಆಸ್ಪರಿನ್ನ್ನಿ ಗೆ ಹೋಲಿಸಬಹುದು ಆದರೆ ಇದರ ಉರಿಯೂತ ಆಸ್ಪರಿನ್ಗಿಂತ ಕಡಿಮೆ. ಐಬುಪ್ರೊಫೇನ್ ಮಾತ್ರೆ ಮಕ್ಕಳಿಗೆ ಜ್ವರ ಬಂದಾಗ ನೀಡಿದರೆ ಪ್ಯಾರಾಸಿಟಮಾಲ್ ಮಾತ್ರೆಗಿಂತ ಹೆಚ್ಚು ಪರಿಣಾಮ ಬೀರುತ್ತದೆ. ಮಾತ್ರೆಯನ್ನು ೧೮೭೭ನಲ್ಲಿ ಕಂಡುಹಿಡಿಯಲಾಯಿತು. ಈ ಮಾತ್ರೆಯನ್ನು ಅಮೇರಿಕಾ ಮತ್ತು ಯುರೋಪ್ನಿಲ್ಲಿ ಹೆಚ್ಚು ಬಳಸಲಾಗುತ್ತದೆ. ಈ ಮಾತ್ರೆಯನ್ನು ಟೈಲೆನೋಲ್ ಮತ್ತು ಪಾನಾಡೋಲ್ ಎಂಬ ಹೆಸರಿನಲ್ಲಿ ವ್ಯಾಪಾರ ಮಾಡಲಾಗುತ್ತದೆ.ಇದನ್ನು ತಯಾರಿಸಲು ಸಗಟು ಬೆಲೆ ೦.೦೧ ಡಾಲರ್ಗ್ಳಾಗುತ್ತದೆ. ಅಮೇರಿಕಾದಲ್ಲಿ ತಯಾರಿಸಲು ೦.೦೪ ಡಾಲರ್ಗ್ಳಾಗುತ್ತದೆ.[೧]
ರಾಸಾಯನಿಕ ಗುಣಲಕ್ಷಣಗಳು
[ಬದಲಾಯಿಸಿ]ಪ್ಯಾರಸಿಟಮಾಲ್ ಅನಲೀನ್ ಅನಾಲ್ಜಸಿಕ್ಸನ ಭಾಗವಾಗಿದೆ. ಪ್ಯಾರಾಸಿಟಮಾಲ್ ಒಳಬಾಗದಲ್ಲಿ ಬೆಂಜೀನ್ ರಿಂಗ್ ಒಳಗೊಂಡಿದೆ. ಹೈಡ್ರಾಕ್ಸಿಲ್ ಗುಂಪು ಮತ್ತು ಅಮೈಡ್ ಗುಂಪು ಪರ್ಯಾಯವಾಗಿ ಪ್ಯಾರಾ ಮಾದರಿಯಲ್ಲಿ ಒಳಗೊಂಡಿದೆ. ಅಮೈಡ್ ಗುಂಪು ಅಸಿಟಮೈಡ್ ಆಗಿದೆ. ಇದು ವ್ಯಾಪಕವಾಗಿ ಸಂಯೋಗಗೊಂಡ ವ್ಯವಸ್ಥೆ. ಹೈಡ್ರಾಕ್ಸಿಲ್ ಹಾಗು ನೈಟ್ರೊಜನ್ನ್ಲ್ಲಿ ಎಲೆಕ್ಟ್ರಾನ್ಗಳ ಏಕೈಕ ಜೊಡಿ ಇದೆ. ಎರಡು ಸಕ್ರಿಯಗೊಳಿಸುವ ಗುಂಪುಗಳನ್ನು ಹೊಂದಿರುವುದರಿಂದ ಎಲೆಕ್ಟ್ರೊಫಿಲಿಕ್ ಆರೊಮ್ಯಾಟಿಕ್ ಪರ್ಯಾಯಕ್ಕೆ ಹೆಚ್ಚು ಪ್ರತಿಕ್ರಿಯಾತ್ಮಕವಾಗಿದೆ. ಪರ್ಯಾಯವಾಗಿರು ಗುಂಪು ಆರ್ಥೊ ಮತ್ತು ಪಾರಾ ಕಡೆಗಿರುವುದರಿಂದ ಎಲ್ಲಾ ಸ್ಥಾನಗಳು ಹೆಚ್ಚು ಕಮ್ಮಿ ಒಂದೇ ಸಮಾನವಾಗಿ ಪ್ರತಿಕ್ರಿಯಾತ್ಮಕವಾಗಿದೆ. ಆಖ್ಯಾತ ಸಾರಜನಕ ಮತ್ತು ಆಮ್ಲಜನಕದ ಬೆಸಿಸಿಟಿಯನ್ನು ಕಡಿಮೆ ಮಾಡುತ್ತದೆ.[೨]
ಮಿಥಿಮೀರಿದ ಸೇವನೆ
[ಬದಲಾಯಿಸಿ]ವಯಸ್ಕರು ಒಂದು ದಿನಕ್ಕೆ ೪೦೦೦ ಗ್ರಂ ಗಿಂತ ಹೆಚ್ಚು ಈ ಮಾತ್ರೆಯನ್ನು ತೆಗೆದುಕೊಳ್ಳಬಾರದು. ಇದಕ್ಕಿಂತ ಹೆಚ್ಚು ಈ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಯಕೃತ್ತಿಗೆ(ಲಿವರ್) ಹಾನಿಯಾಗಬಹುದು. ನೀವು ಸಾರಾಯಿ ಸೇವನೆ ಮಾಡುತ್ತಿದರೆ ಅಥವ ನಿಮಗೆ ಯಕೃತ್ತಿನ ಕಾಯಿಲೆ ಇದ್ದರೆ ಅಥವ ನೀವು ಗರ್ಭಿಣಿ ಆಗಿದ್ದರೆ ಅದನ್ನು ನಿಮ್ಮ ವೈದ್ಯರಿಗೆ ತಿಳಿಸಿ ಹಾಗು ೨೦೦೦ ಗ್ರಾಂ ಗಿಂತ ಹೆಚ್ಚು ಈ ಮಾತ್ರೆಯನ್ನು ತೆಗೆದುಕೊಳ್ಳಬೇಡಿ. ಪ್ಯಾರಸಿಟಮಾಲ್ ಮಿತಿಮೀರಿ ತೆಗೆದುಕೊಂಡರೆ ಮೊದಲು ಹಸಿವಾಗುವುದಿಲ್ಲ, ವಾಕರಿಕೆ, ವಾಂತಿ, ಹೊಟ್ಟೆ ನೋವು, ಬೆವರುವುದು ಮತ್ತು ಗೊಂದಲ ಅಥವಾ ನಿಶಕ್ತಿ ಉಂಟಾಗುತ್ತದೆ. ನಂತರೆ ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು, ಮೂತ್ರದ ಬಣ್ಣಾ ಗಾಡವಾಗುತ್ತದೆ ಹಾಗು ನಿಮ್ಮ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತರೆ ಮತ್ತು ಕಣ್ಣು ಬಿಳಿಯಾಗುತ್ತದೆ.ಅಸೆಟಾಮಿನೋಫೆನ್ ಅಥವಾ ಪ್ಯಾರಸಿಟಮಾಲ್ ಮಾತ್ರೆಗಳಿಗೆ ನೀಮಗೆ ಮೈನೊರತೆ ಇದ್ದರೆ ನೀವು ಈ ಮಾತ್ರೆಯನ್ನು ತೆಗೆದುಕೊಳ್ಳಬೇಡಿ. ಎರಡು ವರ್ಷಕಿಂತ ಕಿರಿಯ ಮಕ್ಕಳಿಗೆ ವೈದ್ಯರ ಸಲಹೆ ಕೇಳದೆ ಈ ಮಾತ್ರೆಯನ್ನು ಕೊಡಬೇಡಿ. ಪರಸಿಟಮಾಲ್ ದ್ರವವನ್ನು ನೀಡುವ ಮುನ್ನ ಅದನ್ನು ವೈದ್ಯರು ಹೇಳಿರುವ ಪ್ರಮಾಣವನ್ನು ಅಳೆಯಿರಿ. ಬಳಕೆ ಮೊದಲು ಚೆನ್ನಾಗಿ ಕುಲುಕಿಸ. ನಿಮ್ಮ ಜ್ವರ ಈ ಮಾತ್ರೆ ತೆಗೆದುಕೊಂಡು ಮೂರು ದಿನವಾದರೂ ಕಡಿಮೆಯಾಗದಿದ್ದರೆ ಅಥವ ನೋವು ಏಳು ದಿನವಾದರೂ ಕಡಿಮೆಯಾಗದಿದ್ದರೆ ವೈದರ ಬಳಿ ಹೋಗಿ. ನಿಮಗೆ ಸಕ್ಕರೆ ಕಾಯಿಲೆ ಇದ್ದು ಈ ಮಾತ್ರೆಯನ್ನು ತೆಗೆದುಕೊಳ್ಳುವ ಮೂಲಕ ದೇಹದಲ್ಲಿರು ಸಕ್ಕರೆ ಪ್ರಮಾಣ ಬದಲಾಗುತ್ತಿದರೆ ನಿಮ್ಮ ವೈದ್ಯರ ಜೊತೆ ಮಾತನಾಡಿರಿ. ನೀವು ವೈದರು ಹೇಳಿದ ಪ್ರಮಾಣದಷ್ಟು ಮಾತ್ರೆಯನ್ನು ಒಂದು ಬಾರಿ ತೆಗೆದುಕೊಳ್ಳಲಾಗದಿದ್ದರೆ ಮುಂದಿನ ಬಾರಿ ಹೆಚ್ಚು ಮಾತ್ರೆಯನ್ನು ತೆಗೆದುಕೊಳ್ಳಬೇಡಿ. ಹೆಚ್ಚು ಮಾತ್ರೆಗಳನ್ನು ಒಟ್ಟಿಗೆ ಸೇವಿಸುವಾಗ ಒಂದು ಬಾರಿ ಮಾತ್ರೆಯಲ್ಲಿರು ಅಂಶಗಳನ್ನು ನೋಡಿರಿ. ನೀವು ಸೇವಿಸುವ ಎರಡು ಅಥವ ಮೂರು ಮಾತ್ರೆಗಳಲ್ಲಿ ಪ್ಯಾರಾಸಿಟಮಾಲ್ ಇದ್ದರೆ ಅದನ್ನು ಸೇವಿಸಬೇಡಿ. ಅಡ್ಡ ಪರಿಣಾಮಗಳು - ರಕ್ತಸಿಕ್ತ ಮೂತ್ರ, ರಕ್ತಸಿಕ್ತ ಮಲ, ಜ್ವರ, ಕೆಳ ಬೆನ್ನು ನೋವು, ಚರ್ಮದ ಮೇಲೆ ಕೆಂಪು ಪಟ್ಟೆಗಳು, ಚರ್ಮದ ಮೇಲೆ ಗುಳ್ಳೆಗಳು, ತುರಿಕೆ, ಗಟಲು ನೋವು, ಹುಣ್ಣು, ಮೂತ್ರದ ಪ್ರಮಾಣದ ಇಳಿಕೆ, ಅಸಾಮಾನ್ಯ ರಕ್ತಸ್ರಾವ ಅಥವಾ ಮೂಗೇಟುಗಳು, ದಣಿವು ಅಥವಾ ದೌರ್ಬಲ್ಯ, ಕಣ್ಣು ಮತ್ತು ಚರ್ಮ ಹಳದಿಯಾಗುವುದು.
ಪಶು ವೈದ್ಯದಲ್ಲಿ ಬಳಕೆ
[ಬದಲಾಯಿಸಿ]ಬೆಕ್ಕು- ಇದನ್ನು ಜೀರ್ಣಗೊಳಿಸಲು ಅಗತ್ಯವಿರುವ ಗ್ಲುಕನೊರಿಲ್ ಟ್ರಾನ್ಸ್ಫರೇಸ್ ಕಿಣ್ವಗಳು ಕೊರತೆ ಇರುವುದರಿಂದ ಬೆಕ್ಕುಗಳಿಗೆ ಪ್ಯಾರಾಸಿಟಮಾಲ್ ಮಾತ್ರೆ ವಿಶಕಾರಿಯಾಗುತ್ತದೆ. ಈ ಮಾತ್ರೆಯನ್ನು ಬೆಕ್ಕುಗಳಿಗೆ ನೀಡಿದರೆ ವಾಂತಿ, ಜೊಲ್ಲು ಸುರಿಸುವುದು, ಮತ್ತು ನಾಲಿಗೆ ಮತ್ತು ಒಸಡುಗಳು ಬಣ್ಣ ಬದಲಾವಣೆಯಾಗುತ್ತದೆ. ಮನುಷ್ಯರ ಹಾಗೆ ಬೆಕ್ಕುಗಳಿಗೆ ಯಕೃತಿಯ(ಲಿವರ್) ಹಾನಿಯಾಗುವುದಿಲ್ಲ.
ನಾಯಿ - ಈ ಔಷದಿ ಉರಿಯೂತಕ್ಕೆ ಪರಿಣಾಮ ಬೀರುವುದಿಲ್ಲ. ಇದನ್ನು ಮಾಂಸಕಂಡದ ನೋವಿನ ಚಿಕಿತ್ಸೆಗೆ ನೀಡಲಾಗುತ್ತದ್ದೆ. ಪ್ಯಾರಸಿಟಮಾಲ್-ಕೊಡೈನ್ ಎಂಬ ಔಷಧಿಯನ್ನು ಅಮೇರಿಕಾದಲ್ಲಿ ನಾಯಿಗಳಿಗೆ ಉಪಯೋಗಿಸಲು ಪರವಾನಗಿ ನೀಡಲಾಗಿದೆ.
ಹಾವು- ಈ ಔಷದಿ ಹಾವುಗಳಿಗೂ ವಿಶಕಾರಿ.
ಉಲ್ಲೇಖಗಳು
[ಬದಲಾಯಿಸಿ]