ವಿಷಯಕ್ಕೆ ಹೋಗು

ಪುನರುತ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓರೆ ಅಕ್ಷರಗಳುಟೆಂಪ್ಲೇಟು:ವಿಸ್ತಾಋ

ಒರ್ವಿಯೆಟೊ, ಡುಯೊಮೊ, ಸ್ಯಾನ್ ಬ್ರಿಝಿಯೊದ ಲ್ಯೂಕಾ ಸಿಗ್ನೊರೆಲ್ಲಿಚಾಪೆಲ್ ಅವರು ರಚಿಸಿರುವ ಫ್ಲೆಷ್ (1499-1502) ಫ್ರೆಸ್ಕೊ ಪುನರುತ್ಥಾನದ ಚಿತ್ರ

ಪುನರುತ್ಥಾನ ಮರಣಹೊಂದಿದ ಮಾನವರ ಪುನರುತ್ಥಾನ ಎಂಬುದು ಕ್ರೈಸ್ತ, ಯೆಹೂದಿ, ಮತ್ತು ಇಸ್ಲಾಂ ಧರ್ಮಗಳಲ್ಲಿ ಕಂಡು ಬರುವ ಒಂದು ಪ್ರಮುಖ ಸಿದ್ಧಾಂತವಾಗಿದೆ. ಜೈವಿಕವಾಗಿ ಮೃತ ಹೊಂದಿದ ಒಂದು ಶವವು ದೈವಿಕ ಶಕ್ತಿಯ ಮೂಲಕ ಪುನಃ ಜೀವ ಪಡೆಯುವುದು ಎಂಬುದು ಈ ಪದದ ವಾಸ್ತವ ಅರ್ಥವಾಗಿದೆ. ಅಥವಾ ಇನ್ನೊಂದು ವಿಧದಲ್ಲಿ ಹೇಳುವುದಾದರೆ ಇದು ಒಂದು ಆತ್ಮಿಕ ಪುನರುತ್ಥಾನವಾಗಿದ್ದು(ಆತ್ಮಿಕವಾದ ಅಂಧಕಾರದಲ್ಲಿರುವ ಮಾನವರು ಮೋಕ್ಷವನ್ನು ಪಡೆಯುವ ಮಾರ್ಗವಾಗಿದೆ) ಸತ್ತ ಮಾನವರು ತಮ್ಮ ಆತ್ಮಿಕ ಜಾಗೃತಿಯ ಮೂಲಕ ಪವಿತ್ರ ಜೀವನಕ್ಕೆ ರೂಪಾಂತರಗೊಳ್ಳುವುದಾಗಿದೆ. (ಕ್ರೈಸ್ತ ಧರ್ಮದಲ್ಲಿನಿತ್ಯಜೀವ ) ಇದನ್ನು ವಿಶೇಷವಾಗಿ ವ್ಯಕ್ತಿಗಳಿಗೆ ಅಥವಾಮಾನವರ ಪುನರುತ್ಥಾನದ ಬಗ್ಗೆ ಸಾಮಾನ್ಯವಾಗಿ ಇರುವ ನಂಬಿಕೆ ಇವೆರಡಕೂ ಬಳಸಲಾಗುತ್ತದೆ.

ಪುನರುತ್ಥಾನದ ಕುರಿತಾಗಿ ಪ್ರಮುಖವಾಗಿ ಯೆಹೂದಿ, ಕ್ರೈಸ್ತ ಮತ್ತು ಇಸ್ಲಾಂ ಧರ್ಮ ಗ್ರಂಥಗಳಲ್ಲಿ ಕಾಣಬಹುದು. ಧರ್ಮ ಶಾಸ್ತ್ರದ ಗ್ರಂಥಗಳಲ್ಲಿ ಹೆಚ್ಚಾಗಿ ಕಂಡು ಬಂದರೂ ಸಹ ,ತನಾಖ್‌ನ ಕೆಲವು ಟಿಪ್ಪಣಿಗಳಲ್ಲಿ ಪುನರುತ್ಥಾನದ ಬಗ್ಗೆ ಕೆಲವು ಉಲ್ಲೇಖಗಳನ್ನು ಕಾಣಬಹುದು. ಪುನರುತ್ಥಾನದ ಪರಿಕಲ್ಪನೆಯು ಕೆಲವು ಸಂದರ್ಭಗಳಲ್ಲಿ ಯೇಸುವಿನ ಪುನರುತ್ಥಾನಕ್ಕೆ ಅನ್ವಯವಾಗುತ್ತದೆ ಯೇಸುವಿನ ಪುನರುತ್ಥಾನವನ್ನು ಹೊಸಒಡಂಬಡಿಕೆಯ ಎಲ್ಲಾ ಪುಸ್ತಕಗಳಲ್ಲಿ ವ್ಯಾಪಕವಾಗಿ ವಿವರಿಸಲಾಗಿದೆ. ಈಸ್ಟರ್ ಎನ್ನುವ ರಜಾದಿನವು ಜೀಸಸ್‌ನ ಪುನರುತ್ಥಾನದ ಆಚರಣೆಯಾಗಿದೆ.

ಯೆಹೂದ್ಯ ಧರ್ಮ

[ಬದಲಾಯಿಸಿ]

ಇಬ್ರಿಯಾ ಬೈಬಲ್ (ತಾನಾಖ್)

[ಬದಲಾಯಿಸಿ]
ನೋಡಿ: ಯೆಹೂದಿ ಅಂತಿಮಗತಿಶಾಸ್ತ್ರ

ಪುನರುತ್ಥಾನದ ನಂಬಿಕೆಯು ತಾನಾಖ್, ನಲ್ಲಿ ಉಲ್ಲೇಖಿಸಲಾಗಿದ್ದರೂ, ಇದು ಶರೀರಕ್ಕೆ ಸಂಬಂಧಿಸಿದ ಪುನರುತ್ಥಾನವೇ ಅಥವಾ ಕೇವಲ ಆತ್ಮದ ಪುನರುತ್ಥಾನವೇ ಇಲ್ಲವೆ ಕೆಲವು ಆತ್ಮೀಕ ಶರೀರಕ್ಕೆ ಸಂಬಂಧಿಸಿದ್ದೆ ಎಂಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ಇನ್ನೂ ದೊರೆತಿಲ್ಲ. ತನಾಖ್ನ ಐದು ಪುಸ್ತಕಗಳಾದ ತೋರಾದಲ್ಲಿ ಜೀವನ ನಂತರದ ಕೆಲವು ಉಲ್ಲೇಖಗಳಿದ್ದು ಪುನರುತ್ಥಾನದ ಬಗ್ಗೆ ಯಾವುದೇ ವಿವರಣೆಗಳಿಲ್ಲ. ಉದಾಹರಣೆಗೆ ಯಾಕೋಬನು ಮರಣಹೊಂದುವ ಸಮಯದಲ್ಲಿ ,"ನಾನು ನನ್ನ ಪಿತೃಗಳ ಬಳಿಗೆ ಸೇರಬೇಕಾದ ಕಾಲ ಸಮೀಪಿಸಿತು.ಹಿತ್ತೀಯನಾದ ಎಪ್ರೋನನ ಭೂಮಿಯಲ್ಲಿರುವ ಗವಿಯೊಳಗೆ ನನಗೆ ಸಮಾಧಿ ಮಾಡಬೇಕು" ಎಂದು ಹೇಳಿದನು (ಆದಿಕಾಂಡ49:29). ಯೆಹೂದಿಗಳ ಎಲ್ಲಾ ಮನೆಯ ಯಜಮಾನ ಮತ್ತು ಯಜಮಾನತಿರನ್ನೂ (ರೇಚಲ್‌ಳನ್ನು ಹೊರತುಪಡಿಸಿ) ತಮ್ಮ ಕುಟುಂಬದ ಗವಿಗಳಲ್ಲಿ ಸಮಾಧಿ ಮಾಡಲಾಯಿತು, ಅದೇ ರೀತಿಯಲ್ಲಿ ಅರಸನಾದ ಸೌಲ ಮತು ಅರಸನಾದ ದಾವೀದನನ್ನು ಒಳಗೊಂಡಂತೆ ಬೈಬಲ್ ನ ಹಲವಾರು ವ್ಯಕ್ತಿಗಳನ್ನು ಈ ರೀತಿಯಲ್ಲಿ ಸಮಾಧಿ ಮಾಡಲಾಯಿತು.

ಇಬ್ರಿಯಾ ಬೈಬಲ್‌ನಲ್ಲಿ ಪಾತಾಳ ಎಂಬ ಪದವನ್ನು ಬಳಸಲಾಗಿದ್ದು, ಇದನ್ನು ಸಾಂಪ್ರದಾಯಿಕ ಯೆಹೂದತ್ವದಲ್ಲಿ "ಗೋರಿ" ಎಂದು ಸರಳವಾಗಿ ಭಾಷಾಂತರ ಮಾಡಲಾಗಿದೆ. ಇದನ್ನು ತಾತ್ಕಾಲಿಕ ಒಂದು ಸ್ಥಿತಿಯಾಗಿ ಅವಲೋಕಿಸಲಾಗಿದೆ. ವಿಮರ್ಶಾತ್ಮಕ ದೃಷ್ಟಿಕೋನಗಳು (ಕೆಳಗೆ ನೊಡಿರಿ) ಇದನ್ನು ಒಂದು ಶಾಶ್ವತವಾದ ಅಂಧಕಾರವುಳ್ಳ ಭೂಗತ ಪ್ರಪಂಚ ಎಂದು ವಿವರಿಸುತ್ತವೆ. ಬೈಬಲ್ ನಲ್ಲಿ ಪಾತಾಳದ ಉಲ್ಲೇಖವು ಆದಿಕಾಂಡ42:38, ಯೆಶಾಯ14:11, ಕೀರ್ತನೆ141:7, ಜ್ಞಾನೋಕ್ತಿ7:27 ಮತ್ತು ಯೋಬ10:21-22,ಹಾಗೂ ಯೋಬ17:16, ಇತರ ಪುಸ್ತಕಗಳಲ್ಲಿ ಕಾಣಬಹುದು. ಪ್ರಾಯಶಃ ಈ ಪಾತಾಳ ಲೋಕದಿಂದ ಸತ್ತವರು ಎದ್ದು ಬರಬಹುದು.

ಮನುಷ್ಯರು ಸತ್ತದ್ದರಿಂದ ತಿರುಗಿ ಪುನರುಜ್ಜೀವನ ಪಡೆದುಕೊಳ್ಳುವುದಕ್ಕೆ ಇಬ್ರಿಯಾ ಬೈಬಲ್‌ನಲ್ಲಿ ಮೂರು ಸ್ಪಷ್ಟ ಉದಾಹರಣೆಗಳಿವೆ.

  • ಪ್ರವಾದಿಯಾದ ಏಲೀಜಾನು ದೇವರನ್ನು ಪ್ರಾರ್ಥಿಸಿದಾಗ ಒಬ್ಬ ಮರಣಹೊಂದಿದ್ದ ಒಬ್ಬ ಯುವಕನು ಮತ್ತೆ ಜೀವದಿಂದೆದ್ದು ಬರುತ್ತಾನೆ (1 ಅರಸುಗಳು 17:17-24)
  • ರೀತಿಯಲ್ಲಿ ಪ್ರವಾದಿಯಾದ ಏಲಿಯನು ಶೂನ್ಯೇಮ ಸ್ತ್ರೀಯ ಸತ್ತ ಮಗನನ್ನು ಬದುಕಿಸುತ್ತಾನೆ (2 ಅರಸುಗಳು4:32-37); ಇದೇ ಬಾಲಕನ ಜನನದ ಬಗ್ಗೆ ಈ ಪ್ರವಾದಿಯು ಮುಂಚೆಯೇ ತಿಳಿಸಿರುತ್ತಾನೆ (2 ಅರಸುಗಳು4:8-16)
  • ಸತ್ತ ಒಬ್ಬ ಮನುಷ್ಯನನ್ನು ಏಲೀಷಾನ ಸಮಾಧಿಯಲ್ಲಿ ಹೂಣಿಟ್ಟಾಗ ಅದು ಆ ಪ್ರವಾದಿಯ ಮೂಳೆಗಳನ್ನು ತಾಕಿದ ಕೂಡಲೇ ಜೀವವನ್ನು ಪಡೆಯಿತು(2 ಅರಸು13:21)

ಪುನರುತ್ಥಾನದ ಬಗ್ಗೆ ಇಬ್ರಿಯಾ ಬೈಬಲ್‌ನಲ್ಲಿ ಕಂಡು ಬರುವ ಇನ್ನಿತರ ಉದಾಹರಣೆಗಳೆಂದರೆ:

  • ಪ್ರವಾದಿಯಾದ ಯೆಹೆಜ್ಕೇಕಲನು ಒಣ ಮೂಳೆಗಳು ಒಂದು ಜೀವಂತ ಸೈನ್ಯವಾಗಿ ಪುನರುಜ್ಜೀವನ ಪಡೆದುಕೊಳ್ಳುವುದನ್ನು ಕಾಣುವ ಒಂದು ದರ್ಶನ. ಇದು ಸಾಮನ್ಯವಾಗಿ ಒಂದು ಅಲಂಕಾರಿಕ ಪ್ರವಾದನೆಯಾಗದ್ದು ಎಲ್ಲಾ ದೇಶಗಳಲ್ಲಿ ಚದುರಿ ಹೋಗಿರುವ ಇಸ್ರಾಯೇಲರನ್ನು ಒಂದುಕಡೆ ಒಗ್ಗೂಡಿಸಿ ಮತ್ತೊಮ್ಮೆ ತಮ್ಮ ತವರು ನೆಲವಾದ ಇಸ್ರಾಯೇಲ್ನಲ್ಲಿ ವಾಸಿಸುವಂತೆ ಮಾಡುವುದನ್ನು ಸೂಚಿಸುತ್ತದೆ.

ಆದರೆ ಹಲವಾರು ವೇದ ಪಂಡಿತರ ಪ್ರಕಾರ ಈ ಉಲ್ಲೇಖವು ಭವಿಷ್ಯತ್ತಿನ ಪುನರುತ್ಥಾನದಲ್ಲಿ ನಂಬಿಕೆಯನ್ನು ಉಂಟುಮಾಡುವಂತದ್ದು ಎಂದು ಅಭಿಪ್ರಾಯ ಪಡುವುದಿಲ್ಲ.

ಆಗ ಆತನು ನನಗೆ, ನರಪುತ್ರನೇ, ನೀನು ಶ್ವಾಸಕ್ಕೆ ನುಡಿ, ನುಡಿ;"ಶ್ವಾಸವೇ ಕರ್ತನಾದ ದೇವರು ಇಂತೆನ್ನುತ್ತಾನೆ, ನೀನು ಚತುರ್ದಿಕ್ಕುಗಳಿಂದ ಬೀಸಿ ಹತಶರೀರಗಳು ಬದುಕುವಂತೆ ಅವುಗಳ ಮೇಲೆ ಸುಳಿ" ಎಂದು ಶ್ವಾಸಕ್ಕೆ ಅಪ್ಪಣೆಕೊಡು ಎಂದನು.

ಆದ್ದರಿಂದ ನಾನು ಅಪ್ಪಣೆಯಂತೆ ನುಡಿದೆನು. ಇಗೋ, ಶ್ವಾಸವು ಅವುಗಳಲ್ಲಿ ಹೊಕ್ಕಿತು,ಬದುಕಿದವು ,ಕಾಲೂರಿ ನಿಂತವು ಅತ್ಯಂತ ದೊಡ್ಡ ಸೈನ್ಯವಾದವು. ಆತನು ನನಗೆ ಹೀಗೆ ಹೇಳಿದನು, "ನರಪುತ್ರನೇ, ಈ ಎಲುಬುಗಳು ಇಸ್ರಾಯೇಲಿನ ಪೂರ್ಣವಂಶವು;ಇಗೋ, ಆ ವಂಶೀಯರು-ಅಯ್ಯೋ ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆಯು ಹಾಳಾಯಿತು ನಾವು ಬುಡನಾಶವಾದೆವು ಅಂದುಕೊಳ್ಳುತ್ತಿದ್ದಾರೆ. ಆದಕಾರಣ ನೀನು ಈ ದೈವೊಕ್ತಿಯನ್ನು ಅವರಿಗೆ ನುಡಿ, "ಕರ್ತನಾದ ದೇವರು ಇಂತೆನ್ನುತ್ತಾನೆ-ನನ್ನ ಜನರೇ ನೋಡಿರಿ, ನಾನು ನಿಮ್ಮ ಗೋರಿಗಳನ್ನು ತೆರೆದು ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ ಇಸ್ರಾಯೇಲ್ ದೇಶಕ್ಕೆ ಸೇರಮಾಡುವೆನು." (ಎಝೆಕಿಯಲ್ 37:9-12)

  • ಸ್ಯಾಮುಯಲ್ - "ದೇವರು ಕೊಂದರೂ ಬದುಕಿಸಲು ಶಕ್ತನಾಗಿದ್ದಾನೆ; ಆತನು ಪಾತಾಳಕ್ಕೆ ನೂಕಿದರೂ ಎಬ್ಬಿಸಲು ಶಕ್ತನಾಗಿದ್ದಾನೆ".

(1 ಸ್ಯಾಮುಯಲ್ 2:6)

  • ಯೋಬ - "ನನ್ನ ಚರ್ಮವು ಬಿರಿದು ಹಾಳಾದ ಬಳಿಕವೂ, ನಿರ್ದೇಹನಾಗಿ ದೇವರನ್ನು ನೋಡುವೆನು" (ಯೋಬ19:26)
  • ಯೆಶಾಯ-" ನಿಮ್ಮ ಸತ್ತವರು ಬದುಕುವರು ; ಅವರ ಶವಗಳು ಎದ್ದೇಳುವವು

ಧೂಳಿನಲ್ಲಿ ಬಿದ್ದಿರುವವರೇ, ಎದ್ದು ಹರ್ಷದ್ವನಿಗೈಯಿರಿ, ಏಕೆಂದರೆ ನಿಮ್ಮ ಹಿಮವು ಮುಂಜಾನೆ ಬೀಳುವ ಹಿಮದಂತಿದೆ ಮತ್ತು ಭೂಮಿಯು ಅಗಲಿದ ಆತ್ಮಗಳನ್ನು ಹಿಂದಿರುಗಿಸುತ್ತದೆ". (ಇಸಯ್ಯ 26:19)

  • ಪ್ರವಾದಿಯಾದ ದಾನಿಯೇಲನಿಗೆ ತನ್ನ ದರ್ಶನದಲ್ಲಿ ಒಬ್ಬ ದೇವದೂತನು ರಹಸ್ಯವಾಗಿ ಹೀಗೆ ಹೇಳುತ್ತಾನೆ,"ದೂಳಿನ ನೆಲದೊಳಗೆ ದೀರ್ಘ ನಿದ್ರೆ ಮಾಡುವವರಲ್ಲಿ ಅನೇಕರು ಎಚ್ಚೆತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದೆ ತಿರಸ್ಕಾರಗಳನ್ನು ಅನುಭವಿಸುವರು."

(ಡೇನಿಯಲ್ 12:2)

ಪರಿಸಾಯರು ಮತ್ತು ಸದ್ದುಕಾಯರ ದೃಷ್ಟಿ ಕೋನಗಳು

[ಬದಲಾಯಿಸಿ]

ಹಲವಾರು ಆಧುನಿಕ ವೇದ ಪಂಡಿತರು ಕೆಲವು ಕ್ರೈಸ್ತ ಮೂಲಗಳ ಪ್ರಕಾರ ಮುಂದಿನ ಪುನರುತ್ಥಾನವನ್ನು ನಂಬುವ ಪರಿಸಾಯರು ಮತ್ತು ಇದನ್ನು ನಂಬದೇ ಇದ್ದ ಸದ್ದುಕಾಯರ ನಡುವಣ ಕ್ರಿಸ್ತಪೂರ್ವ ಮೊದಲನೇ ಶತಮಾನದ ಚರ್ಚೆಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಸದ್ದು ಕಾಯರಿಗೆ ಪುನರುತ್ಥಾನದ ಮೇಲೆ ಯಾವುದೇ ರೀತಿಯ ನಂಬಿಕೆ ಇರಲಿಲ್ಲ.[] ಇಂತಹ ಒಂದು ದ್ವಂದ್ವನ್ನು ಖಾತ್ರಿ ಪಡಿಸುತ್ತಾ, ಸ್ವತಃ ಪರಿಸಾಯನಾದ ಜೋಸೆಪ್, ಪರಿಸಾಯರು ಆತ್ಮ ಮತ್ತು ಪುನರುತ್ಥಾನದ ಅಮರತ್ವದ ಮೇಲೆ ನಂಬಿಕೆ ಇಡುತ್ತಾರೆ ಎಂದು ಅಭಿಪ್ರಾಯಪಡುತ್ತಾನೆ. (ಜೋಸೆಫಸ್ ಬಿಜೆ 2.8.14, 3.8.5; ಜೋಸೆಫಸ್ ವಿಟಾ 2). ರಾಜಕೀಯವಾಗಿ ಪ್ರಭಲ ಧಾರ್ಮಿಕ ನಾಯಕರಾಗಿದ್ದ ಸದ್ದುಕಾಯರು, ಪರಿಸಾಯರ ಮೌಖಿಕ ನಿಯಮ, ಮರಣಾನಂತರದ ಜೀವನ , ದೇವದೂತರು ಮತ್ತು ದೆವ್ವಗಳ ಕುರಿತ ವಿಚಾರಗಳನ್ನು ನಿರಾಕರಿಸಿ , ತೋರಾ ಗ್ರಂಥವನ್ನು ಸಾಹಿತ್ಯಕ ದೃಷ್ಟಿಕೋನದಲ್ಲಿ ಕಂಡರು. ಪರಿಸಾಯರ ಅಭಿಪ್ರಾಯಗಳು ರಬ್ಬಿನಿಕಲ್ ಯೆಹೂದತ್ವ ಆಧಾರಿತವಾಗಿದ್ದು , ನಂತರ ಈ ಚರ್ಚೆಯಲ್ಲಿ ಗೆಲುವು ಸಾಧಿಸಿದರು. ಕರಾಯಿತ್ ಯೆಹೂದತ್ವದಲ್ಲಿ ಅಲ್ಪಸಂಖ್ಯಾತವೆನಿಸಿದರೂ, ಕೆಲವರು ಮುಂದಿನ ಪುನರುತ್ಥಾನ ಅಥವ ಮರಣಾನಂತರದ ಬದುಕಿನ ಬಗ್ಗೆ ನಂಬುವುದಿಲ್ಲ.[] ಆಡಮ್ ಮತ್ತು ಈವ್‍‍ರ ಜೀವನ , c 100 BC ಮತ್ತು 2ಮಕ್ಕಾಬೀಸ್, c 124 BC.[] ನಂತಹ ಯೆಹೂದಿಗಳ ಕೆಲವು ಗ್ರಂಥಗಳಲ್ಲಿ ಪುನರುತ್ಥಾನದ ವಾಗ್ದಾನದ ಕುರಿತು ಹೇಳಲಾಗಿದೆ.

ಆರ್ಥಾಡಾಕ್ಸ್ ಜೂಡಾಯಿಸಮ್

[ಬದಲಾಯಿಸಿ]

ಸಾಂಪ್ರದಾಯಿಕ ಯೆಹೂದತ್ವವು ಪುನರುತ್ಥಾನವನ್ನು ರಬ್ಬಿನಿಕಲ್ ಯೆಹೂದತ್ವದ ಮೂಲಭೂತ ತತ್ವಗಳಲ್ಲಿ ಒಂದು ಎಂದು ಅಭಿಪ್ರಾಯಪಡುತ್ತಾರೆ. ಯೆಹೂದತ್ವದ ಹಲಾಕಿಕ್ ಅಧಿಕಾರವಾದ ಮೆಮೊನಿಡ್ ಗಳು ಈ ಮೊದಲುನಿಂದಲೂ ಎಲ್ಲಾ ಸಾಂಪ್ರದಾಯಿಕ ಸಿದ್ದುರ್ಇಮ್ (ಪ್ರಾರ್ಥನಾ ಗ್ರಂಥಗಳು) ಪ್ರಮುಖ ಹದಿಮೂರು ಯೆಹೂದ ನಂಬಿಕೆಯ ತತ್ವಗಳನ್ನು ರೂಪಿಸಿವೆ. ಪುನರುತ್ಥಾನವು ಹದಿಮೂರನೆಯ ತತ್ವವಾಗಿದೆ:

" ಟೆಕಿಯಟ್ ಹೇಮೆಟಿಂಎಂಬ ಸತ್ತವರ ಪುನರುಜ್ಜೀವನ ಉಂಟೆಂಬುದನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ, ದೇವರ ಚಿತ್ತವಿರುವುದಾದರೆ,ಅವನು ಆಶಿರ್ವದಿಸಲ್ಪಟ್ಟು ಎಬ್ಬಿಸಲ್ಪಡುತ್ತಾನೆ.

ದೇವರ ನಾಮವು ಆಶಿರ್ವದಿಸಲ್ಪಡಲಿ ಮತ್ತು ಆತನ ನೆನಪು ಸದಾಕಾಲ ಇರಲಿ."[]

ಯೆಹೂದ್ಯರ ಧರ್ಮಶಾಸ್ತ್ರವು ಯೆಹೂದಿಗಳ ಹಲವಾರು ನಂಬಿಕೆಗಳಲ್ಲಿ ಅಗತ್ಯವಾದ ಕೆಲವೆ ಅಂತಹ ನಂಬಿಕೆಗಳಲ್ಲಿ ಒಂದು ಎಂದರೆ,"ಎಲ್ಲಾ ಇಸ್ರಾಯೇಲರೂ ಮುಂದೆ ಬರಲಿರುವ ಲೋಕದಲ್ಲಿ ಪಾಲು ಹೊಂದುತ್ತಾರೆ ,ಆದರೆ ಯಾರುಸತ್ತವರ ಪುನರುತ್ಥಾನದಲ್ಲಿ ನಂಬಿಕೆ ಇಡುವುದಿಲ್ಲವೋ ಅಂತಹವರಿಗೆ ಮುಂದಣ ಲೋಕದಲ್ಲಿ ಪಾಲು ಇಲ್ಲ" ಎಂದು ಹೇಳುತ್ತದೆ. (ಸ್ಯಾನಿಡ್ರಿನ್ 98a).

ಯೆಹೂದಿಗಳ ಪ್ರತಿದಿನದ ಮೂರಾವರ್ತಿ ಪ್ರಾರ್ಥನೆಯ ಅಮಿದಾನ ಎರಡನೇ ಆಶಿರ್ವಾದವನ್ನು Tehiyyat ha-Metim (ಸತ್ತವರ ಪುನರುತ್ಥಾನ) ಎನ್ನುವರು, ಈ ಪ್ರಾರ್ಥನೆಯು m'chayei hameitim (ಸತ್ತವರಿಗೆ ಪುನರುತ್ಥಾನ ಕೊಡುವವನು) ಎಂಬ ಪದಗಳ ಮೂಲಕ ಅಂತ್ಯಗೊಳ್ಳುತ್ತದೆ. ಅಮಿದಾ ಎಂಬುದನ್ನು ಎಜ್ರನ ಮಹಾಸಭೆಗೆ ಸಾಂಪ್ರದಾಯಿಕವಾಗಿ ಹೇಳಲಾಗುತ್ತದೆ; ಇದರ ಮೂಲ ಗ್ರಂಥವನ್ನು ಸುಮಾರು ಮೊದಲನೇ ಶತಮಾನ CE ಯಲ್ಲಿ ಈಗಿನ ಸ್ವರೂಪಕ್ಕೆ ಅಂತಿಮಗೊಳಿಸಲಾಯಿತು.

ಸಂಪ್ರದಾಯವಾದಿ ಯೆಹೂದಿ ಧರ್ಮ

[ಬದಲಾಯಿಸಿ]

ಸಂರಕ್ಷಣಾ ಯೆಹೂದತ್ವ'ದ ಪ್ರಾರ್ಥನಾ ವಿಧಾನವು ಸಾಂಪ್ರದಾಯಿಕ ಇಬ್ರಿಯಾ ಗ್ರಂಥದ ಶಾರೀರಿಕ ಪುನರುತ್ಥಾನದ ನಂಬಿಕೆಯನ್ನು ಒಳಗೊಂಡಿದೆ. ಆದರೆ ಇದರ ಚಿಂತಕರು ವಿಭಜಿಸಲ್ಪಟ್ಟಿದ್ದಾರೆ. ಹಲವಾರು ಸಂರಕ್ಷಣಾ ಪ್ರಾರ್ಥನೆ ಪುಸ್ತಕಗಳು ಆಂಗ್ಲ ಭಾಷೆಗೆ ಅಸ್ಪಷ್ಟವಾಗಿ ಭಾಷಾಂತರಿಸಲ್ಪಟ್ಟಿದ್ದು ಮುಕ್ತ ಅವಕಾಶವನ್ನು ಕಲ್ಪಿಸಿಕೊಡುತ್ತವೆ ,ಆದರೆ ಪುನರುತ್ಥಾನದ ನಂಬಿಕೆಯ ಬಗ್ಗೆ ಯಾವುದೇ ರೀತಿಯ ಅಗತ್ಯತೆಯನ್ನು ಒತ್ತಿಹೇಳುವುದಿಲ್ಲ.[]

ಸುಧಾರಣಾ ಮತ್ತು ಪುನರಚನಾ ಯೆಹೂದತ್ವ

[ಬದಲಾಯಿಸಿ]

ಸುಧಾರಣಾ ಯೆಹೂದತ್ವಮತ್ತು ಪುನರಚನಾ ಯೆಹೂದತ್ವಗಳು ಪುನರುತ್ಥಾನವನ್ನು ನಿರಾಕರಿಸುತ್ತವೆ. ಇದಕ್ಕನುಸಾರವಾಗಿ ಅವರು ಧರ್ಮಗ್ರಂಥವನ್ನು m'chayei hakol (ಎಲ್ಲರಿಗೂ ಜೀವವನ್ನು ಕೊಡುವವನು) ಎಂದು ಓದಲು ಅನುಕೂಲವಾಗುವಂತೆರೂಪಾಂತರ ಗೊಳಿಸಿದ್ದಾರೆ. ಯೆಹೂದತ್ವ ಚಳುವಳಿ ಬಿಡುಗಡೆ ಮಾಡಿರುವ ಪ್ರಾರ್ಥನಾ ಪುಸ್ತಕದಲ್ಲಿ , ಅವರು ಪುನಃ ಸತ್ತವರ ಪುನರುತ್ಥಾನದ ಸಾಂಪ್ರದಾಯಿಕ ಪ್ರಾರ್ಥನೆಗೆ ಮರಳಿರುವುದನ್ನು ಕಾಣಬಹುದು.[]

ಮಧ್ಯ ಪೂರ್ವದ ಪುರಾತನ ಅಬ್ರಾಹಮಿಕ್ ಅಲ್ಲದ ಧರ್ಮಗಳು

[ಬದಲಾಯಿಸಿ]

ಪುನರುತ್ಥಾನದ ಪರಿಕಲ್ಪನೆಯು ಮಧ್ಯ ಏಷ್ಯಿಯಾದ ಅಬ್ರಹಾಮನ ಧರ್ಮಗಳನ್ನು ಹೊರತುಪಡಿಸಿದ ಬರಹಗಳಲ್ಲಿ ಕಾಣಬಹುದಾಗಿದೆ. ಆದರೆ ಇದು ಮಾನವರ ಪುನರುತ್ಥಾನಕ್ಕೆ ಸಂಬಂಧಿಸಿದ್ದಲ್ಲ. ಇಂದಿಗೂ ಚಾಲ್ತಿಯಲ್ಲಿರುವ ಕೆಲವು ಈಜಿಪ್ಟ್ ಮತ್ತು ಕಾನಾನ್ ಬರಹಗಳು ಒಸಿರಿಸ್ ಮತ್ತು ಬಾಳ್ ರಂತಹ ಸಾಯುವ ಮತ್ತು ಪುನಃ ಬದುಕುವ ದೇವರುಗಳ ಬಗ್ಗೆ ಪ್ರಸ್ತಾಪನೆ ಮಾಡುತ್ತವೆ. ಆದರೆ ಮತ್ತೊಮ್ಮೆ ಈ ಲೇಖನವು ಮಾನವನ ಜೀವನದ ಪುನಶ್ಚೇತನದ ಬಗ್ಗೆ ವಿವರಿಸುತ್ತದೆ. ಸರ್ ಜೇಮ್ಸ್ ಫ್ರೇಜರ್ ತನ್ನ ಪುಸ್ತಕವಾದ ದಿ ಗೋಲ್ಡನ್ ಬೋ ನಲ್ಲಿ ಈ ಸಾಕ್ಷಾಧಾರವಿಲ್ಲದ ಈ ದೇವರುಗಳ ಸಾವು ಮತ್ತು ಪುನರ್ಜನನದ ಬಗ್ಗೆ ಉಲ್ಲೇಖಿಸಿದ್ದಾನೆ, ಆದರೆ ಅನೇಕ ಪಂಡಿತರ ಪ್ರಕಾರ ಈತನ ದುಷ್ಟಾಂತಗಳು ಮೂಲಗಳನ್ನು ವಿರೂಪಗೊಳಿಸುತ್ತವೆ.[]

ಪುರಾತನ ಗ್ರೀಕ್ ಧರ್ಮ

[ಬದಲಾಯಿಸಿ]

ಪುರಾತನ ಗ್ರೀಕ್ ಧರ್ಮದಲ್ಲಿ ಸತ್ತ ಪುರುಷರ ಮತ್ತು ಸ್ತ್ರೀಯರ ಹಲವಾರು ದೇಹಗಳನ್ನು, ಪುನರುತ್ಥಾನವಾದ ನಂತರ ಭೌತಿಕವಾಗಿ ಅಮರರನ್ನಾಗಿ ಮಾಡಲಾಗುತ್ತಿತ್ತು. ಅಸ್ಲೀಪಿಯಸ್, ತಾನು ಪುನರುತ್ಥಾನ ಹೊಂದಿ ,ಒಬ್ಬ ಪ್ರಮುಖ ದೇವರಾಗಿ ರೂಪಾಂತರ ಹೊಂದುವುದಕ್ಕೋಸ್ಕರ ಝೀಯಸ್ ನಿಂದ ಕೊಲ್ಲಲ್ಪಟ್ಟನು. ಅಚಿಲ್ಲೆಸ್ ಸತ್ತ ನಂತರ ದೈವ ಭಕ್ತಳಾದ ಆತನ ತಾಯಿಯಾದ ಥೀಟಿಸ್ ಆತನ ಕಳೇಬರವನ್ನು ಚಿತೆಯಿಂದ ಕಿತ್ತುಕೊಂಡಳು.ಪುನರುತ್ಥಾನ ಹೊಂದಿದ ಈತನು ಅಮರತ್ವವನ್ನು ಪಡೆದುಕೊಂಡು ಲ್ಯೂಸ್, ಎಲಿಶಿಯನ್ ಮೈದಾನಗಳು ಅಥವಾ ಶುಭಕರವಾದ ದ್ವೀಪಗಳಲ್ಲಿ ವಾಸಿಸಲು ಆರಂಭಿಸಿದನು. ಮೆಮ್ನಾನ್ ಅಚಿಲ್ಲೆಸ್‌ನಿಂದ ಕೊಲ್ಲಲ್ಪಟ್ಟ ನಂತರ ಇದೇ ಸ್ಥಿತಿಯನ್ನು ಪಡೆದನು. ಆಲ್ಸಿಮೀನ್, ಕಾಸ್ಟರ್, ಹಿರಾಕಲ್ಸ್, ಮತ್ತು ಮೆಲಿಸರ್ಟ್ಸ್, ಪುನರುತ್ಥಾನವನ್ನು ಹೊಂದಿ ಭೌತಿಕ ಅಮರತ್ವವನ್ನು ಪಡೆದವರಲ್ಲಿ ಕೆಲವರು ಎಂದು ಪರಿಗಣಿಸಲಾಗುತ್ತದೆ. ಹೆರೋಡೊಟಸ್ ಚರಿತ್ರೆಗಳ ಪ್ರಕಾರ, ಕ್ರಿಸ್ತ ಪೂರ್ವ ಏಳನೇ ಶತಮಾನದಲ್ಲಿ ವಾಸಿಸುತ್ತಿದ್ದ ಪ್ರೊಕೊನೆಸಸ್‌ನ ಏರಿಸ್ಟಿಯಾಸ್ ಎಂಬ ಋಷಿಯು ಸತ್ತ ನಂತರ ಆತನ ಶವವನ್ನು ಒಂದು ಕೊಠಡಿಯಲ್ಲಿ ಬೀಗ ಹಾಕಿ ಇಡಲಾಗಿತ್ತು.ಆದರೆ ನಂತರ ಆತನ ದೇಹವು ಅಲ್ಲಿಂದ ಮಾಯವಾದದ್ದು ಕಂಡು ಬಂದಿತು. ನಂತರ ಆತನು ಪುನರುತ್ಥಾನವನ್ನು ಪಡೆದದ್ದು ಅಷ್ಟೇ ಅಲ್ಲದೆ ಅಮರತ್ವವನ್ನೂ ಸಹ ಪಡೆದನು ಎಂದು ಹೇಳಲಾಗುತ್ತದೆ. ಮೆನೆಲಸ್, ಮತ್ತು ಐತಿಹಾಸಿಕ ಮಲ್ಲಯುದ್ಧ ಪಟುವಾದ ಆಸ್ಟಪಾಲಿಯಾದ ಕ್ಲಿಯೊಮೆಡೆಸ್ ನಂತಹ ಟ್ರೋಜನ್ ಮತ್ತು ಥೀಬಾನ್ ಮಹಾಸಮರಗಳಲ್ಲಿ ಹೋರಾಡಿದ ಅನೇಕರು ,ತಮ್ಮ ತವರು ನೆಲದಲ್ಲಿ ಸಾಯದೇ ಭೌತಿಕ ಅಮರತ್ವ ಹೊಂದಿದರು ಎಂದು ನಂಬಲಾಗಿದೆ. ವಾಸ್ತವಗಾಗಿ ಗ್ರೀಕರ ಧರ್ಮದಲ್ಲಿ , ಅಮರತ್ವವು ಯಾವಾಗಲೂ ಶರೀರ ಮತ್ತು ಆತ್ಮಗಳ ನಿತ್ಯ ನಿರಂತರ ಸಂಬಂಧವಾಗಿದೆ. ಆತ್ಮದ ಅಮರತ್ವವು ತಾತ್ವಿಕ ಯೋಚನೆಯ ನಂತರದ ಒಂದು ಅನ್ವೇಷಣೆಯಾಗಿದ್ದು, ಇದು ಅತ್ಯಂತ ಪ್ರಭಾವಶಾಲಿಯಾಗಿದ್ದರೂ ಸಹ ಗ್ರೀಕ್ ಪ್ರಪಂಚದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಕ್ರೈಸ್ತ ಯುಗದಲ್ಲಿ ನಡೆದ ಘಟನೆಯ ಕುರಿತು ಸಾಕ್ಷಿ ಹೇಳುವಂತೆ ಮತ್ತು ಹಲವಾರು ತತ್ವ ಜ್ಞಾನಿಗಳು ಜನಪ್ರಿಯವಾದ ನಂಬಿಕೆಗಳ ಬಗ್ಗೆ ತಿಳಿಸುವಂತೆ , ಸಾಂಪ್ರದಾಯಿಕ ಗ್ರೀಕ್ ವಿಶ್ವಾಸಿಗಳು ಕೆಲವು ವ್ಯಕ್ತಿಗಳು ಸತ್ತವರೊಳಗಿಂದ ಪುನರುತ್ಥಾನವಾದದ್ದುಮತ್ತು ಭೌತಿಕವಾಗಿ ಅಮರತ್ವವನ್ನು ಪಡೆದದ್ದನ್ನು ನಂಬುತ್ತಾ ಉಳಿದ ನಾವುಗಳು ಸತ್ತ ಆತ್ಮಗಳ ಮತ್ತು ನಶಿಸಿದ ದೇಹಗಳಿಗಾಗಿ ಎದುರು ನೋಡುತ್ತಿದ್ದೇವೆ.[]

ಭೌತಿಕ ಅಮರತ್ವದ ಇಂತಹ ಸಾಂಪ್ರದಾಯಿಕ ನಂಬಿಕೆಯನ್ನು ಸಾಮಾನ್ಯವಾಗಿ ಗ್ರೀಕ್ ತತ್ವ ಜ್ಞಾನಿಗಳು ತಳ್ಳಿ ಹಾಕುತ್ತಾರೆ. ಕ್ರಿಸ್ತ ಪೂರ್ವ ಮೊದಲನೇ ಶತಮಾನದಲ್ಲಿ , ಮಧ್ಯ ಪ್ಲಾಟೋನಿಕ್ ತತ್ವ ಜ್ಞಾನಿಯಾದ ಪ್ಲುಟಾರ್ಕ್ ತನ್ನ ಪುಸ್ತಕವಾದ ಲೈವ್ಸ್ ಆಫ್ ಇಲುಸ್ಟ್ರಸ್ ಮೆನ್ (ಸಮಾನಾಂತರ ಜೀವನಗಳು)ನ ರೋಮುಲಸ್ಎಂಬ ಅಧ್ಯಾಯದಲ್ಲಿ ಒಬ್ಬ ಮನುಷ್ಯನ ನಿಗೂಢವಾದ ಕಣ್ಮರೆಯ ಬಗ್ಗೆ ವಿವರಿಸುತ್ತಾನೆ.ಇದನ್ನು ಗ್ರೀಕರ ಸಾಂಪ್ರದಾಯಿಕ ನಂಬಿಕೆಗಳಾದ ಆಲ್ಸೆಮಿನ್ ಮತ್ತು ಪ್ರೊಕೊನ್ನೇಸಿಯನ್ ಆರಿಸ್ಟಿಯಾಸ್ ನ ಪುನರುತ್ಥಾನ ಹಾಗೂ ಭೌತಿಕ ಅಮರತ್ವಕ್ಕೆ ಹೋಲಿಸುತ್ತಾನೆ.ಏಕೆಂದರೆ ಅವರ ಪ್ರಕಾರ ಆರಿಸ್ಟೇಸಿಯಾಸ್ ಒಂದು ಕಾರ್ಯಗಾರದಲ್ಲಿ ಮೃತ ಹೊಂದಿದ್ದು, ಆತನ ಗೆಳೆಯರು ಬಂದು ನೋಡುವಾಗ ಮೃತ ದೇಹ ನಾಪತ್ತೆಯಾಗಿರುವುದನ್ನು ಕಂಡರು.ನಂತರ ಕೆಲವರು ಹೇಳುವಂತೆ ಆತನು ಕ್ರೋಟಾನ್ ಕಡೆಗೆ ಪ್ರಯಾಣ ಮಾಡುತ್ತಿದ್ದನು. ಪ್ಲೇಟೊನಿಕ್ ಪ್ಲುಟಾರ್ಕ್ ಸಾಂಪ್ರದಾಯಿಕ ಪುರಾತನ ಧರ್ಮದಲ್ಲಿದ್ದ ಅಂತಹ ನಂಬಿಕೆಗಳನ್ನು ತಿರಸ್ಕರಿಸಿದನು. ಆತನ ಬರಹದಲ್ಲಿ ಹೇಳಿರುವಂತೆ , "ಸೃಷ್ಟಿಯ ನೈಸರ್ಗಿಕ ನಾಶನವನ್ನು ಎದುರಿಸಲಾಗದೆ ಇಂತಹ ಅಸಾಧ್ಯತೆಗಳನ್ನು ನಿಮ್ಮ ಕಾಲ್ಪನಿಕ ಬರಹಗಾರರು ಹುಟ್ಟುಹಾಕಿದ್ದಾರೆ".

ಈ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಯೇಸುವಿನ ಪುನರುತ್ಥಾನದ ನಂತರದ ವಿಚಾರಗಳು ಆದಿ ಕ್ರೈಸ್ತರಲ್ಲಿ ಬಹಳ ಕಾಲ ಉಳಿಯಲಿಲ್ಲ. ಜಸ್ಟಿನ್ ಮಾರ್ಟಿರ್ ವಾದಿಸುವಂತೆ:" ನಮ್ಮ ಗುರುವಾದ ಯೇಸು ಕ್ರಿಸ್ತನು ಶಿಲುಬೆಗೆ ಏರಿಸಲ್ಪಟ್ಟು ಸತ್ತು ,ಪುನಃ ತಿರುಗಿ ಎದ್ದು ಬಂದು, ಸ್ವರ್ಗಾ ರೋಹಣವಾದನು ಎಂದು ನಾವು ಹೇಳುವುದಾದರೆ, ಝೀಯಸ್‌ನ ಮಕ್ಕಳ ವಿಚಾರದಲ್ಲಿಯೂ ನೀವು ಇಟ್ಟಿರುವ ನಂಬಿಕೆಗಳಿಗೆ ಯಾವ ವ್ಯತ್ಯಾಸವೂ ಇಲ್ಲ". (1 Apol. 21). ಆದರೆ, ಇದು ಪುರಾತನ ಗ್ರೀಕ್ ಧರ್ಮದಲ್ಲಿ ಪುನರುತ್ಥಾನದ ಬಗ್ಗೆ ಇರುವ ಸಾಮಾನ್ಯ ನಂಬಿಕೆಯನ್ನು ನಿರಾಕರಿಸುತ್ತದೆ.ಏಕೆಂದರೆ ಗ್ರೀಕ್ ನಂಬಿಕೆಯ ಪ್ರಕಾರ ಕೊಳೆತ ,ಸುಡಲ್ಪಟ್ಟ ಆಥವಾ ಭುಜಿಸಲ್ಪಟ್ಟ ಯಾವುದೇ ದೇಹಕ್ಕೆ ಪುನರುಜ್ಜೀವನ ಕೊಡಲು ದೇವತೆಗಳಿಂದಲೂ ಸಾಧ್ಯವಿಲ್ಲ . ಸತ್ತವರ ಪುನರುತ್ಥಾನದ ಬಗ್ಗೆ ಇರುವ ಅಭಿಪ್ರಾಯವು ಆದ್ದರಿಂದ ಗ್ರೀಕರಿಗೆ ಒಂದು ಅಸಂಬದ್ಧ ಸಂಗತಿಯಂತೆ ಕಂಡುಬರುತ್ತದೆ. ಇದು ಪೌಲನಏರಿಯೊಫಾಗಸ್ ಪ್ರವಚನದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ ಮೊದಲು ಯೇಸುವಿನ ಪುನರುತ್ಥಾನದ ಬಗ್ಗೆ ಹೇಳಿದ ನಂತರ, ಅನೇಕ ಅಥೆನ್ಸ್ ರು ಇನ್ನೂ ಹೆಚ್ಚು ಕೇಳುವುದರಲ್ಲಿ ಆಸಕ್ತಿಯನ್ನು ತೋರಿಸಿದರು, ಆಗ ಪೌಲನು ಈ ಸನ್ನಿವೇಶವನ್ನು ಸತ್ತವರ ಪುನರುತ್ಥಾನದಕುರಿತು ವಿವರಿಸಲು ಉಪಯೊಗಿಸಿದನು:

ಅಪೋಸ್ತಲರ ಕಾರ್ಯಗಳು17:30-32 " ಆ ಅಜ್ಞಾನ ಕಾಲಗಳನ್ನು ದೇವರು ಲಕ್ಷಕ್ಕೆ ತರಲಿಲ್ಲ , ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ.ಯಾಕಂದರೆ ಆತನು ನಿಷ್ಕರ್ಷೆ ಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯ ವಿಚಾರಣೆ ಮಾಡುವುದಕ್ಕೆ ಒಂದು ದಿವಸವನ್ನು ಗೊತ್ತು ಮಾಡಿದ್ದಾನೆ.ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ" ಅಂದನು.

ಸತ್ತವರು ಎದ್ದು ಬರುವ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯ ಮಾಡಿದರು; ಬೇರೆ ಕೆಲವರು , ನೀನು ಈ ವಿಷಯದಲ್ಲಿ ಹೇಳುವುದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಎಂದರು.

ಕ್ರೈಸ್ತ ಧರ್ಮ

[ಬದಲಾಯಿಸಿ]

ಕ್ರೈಸ್ತ ಧರ್ಮದಲ್ಲಿ, ಪುನರುತ್ಥಾನ ಎಂಬುದು ಅತ್ಯಂತ ಹೆಚ್ಚಾಗಿ ಯೇಸುವಿನ ಪುನರುತ್ಥಾನ ಕ್ಕೆ ಸಂಬಂಧಿಸಿದ್ದಾಗಿದೆ.ಅಷ್ಟೇ ಅಲ್ಲದೆ ನೈಸೀಯ ವಿಶ್ವಾಸ, ವನ್ನು ನಂಬುವ ಹಾಗೂ ಯೇಸುವಿನ ಮತ್ತು ಹಳೇ ಒಡಂಬಡಿಕೆವಾದಿಗಳ ಅದ್ಬುತಗಳನ್ನು ನಂಬುವ ಕ್ರೈಸ್ತರಸತ್ತವರ ಪುನರುತ್ಥಾನ ಎಂಬುವ ನ್ಯಾಯ ತೀರ್ಪಿನ ಪುನರುತ್ಥಾನವನ್ನೂ ಒಳಗೊಂಡಿದೆ.

ಜೀಸಸ್‌ನ ಪುನರುತ್ಥಾನ

[ಬದಲಾಯಿಸಿ]

ಕ್ರಿಶ್ಚಿಯನ್ ಧರ್ಮದಲ್ಲಿ ಹೆಚ್ಚಿನ ಕ್ರಿಶ್ಚಿಯನ್ನರು ಜೀಸಸ್‌ನ ಪುನರುತ್ಥಾನವನ್ನು ಬೋಧನೆಯೆಂದು ತಿಳಿಯುತ್ತಾರೆ. ಇತರರರು ಯೇಸುವಿನ ಅವತಾರವನ್ನು ಅತ್ಯಂತ ಪ್ರಾಮುಖ್ಯ ಎಂದು ಭಾವಿಸುತ್ತಾರೆ;ಆದರೆ ಅದ್ಬುತಗಳು ವಿಶೇಷವಾಗಿ ಆತನ ಪುನರುತ್ಥಾನ ಆತನ ಅವತಾರಕ್ಕೆ ಹೆಚ್ಚು ಬೆಲೆಯನ್ನು ತಂದುಕೊಡುತ್ತದೆ. ಅಪೂಸ್ತಲ್ ಪೌಲನು ಕೊರಿಂಥದವರಿಗೆ ಬರೆದ ಮೊದಲನೇ ಪತ್ರದಲ್ಲಿ ಈ ರೀತಿಯಲ್ಲಿ ಬರೆಯುತ್ತಾನೆ:

ಈ ಜೀವಮಾನ ಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದೇ ಹೊರತು ಮತ್ತೇನು ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ.

ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದು ನಿದ್ರೆ ಹೊಂದಿದವರಲ್ಲಿ ಪ್ರಥಮ ಫಲವಾದನು. (ಕೊರಿಂಥಿಯಾನ್ಸ್ 15:19-20)

ಪೌಲನ ಪ್ರಕಾರ, ಇಡೀ ಕ್ರೈಸ್ತ ನಂಬಿಕೆ ಯು ಯೇಸು ಮೂರನೇ ದಿನದಲ್ಲಿ ಮೃತ್ಯುಂಜಯನಾಗಿ ಎದ್ದು ಬಂದದ್ದರ ಮೇಲೆ ಆಧಾರವಾಗಿದ್ದು ,ನಮ್ಮ ಮರಣಾನಂತರದ ನಿರೀಕ್ಷೆಯಾಗಿದೆ. ಕ್ರೈಸ್ತರು ಪ್ರತಿ ವರ್ಷ ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನವನ್ನು ಆಚರಿಸುತ್ತಾರೆ.

ಕ್ರೈಸ್ತರಲ್ಲಿ ಬಹುಪಾಲು -ಕ್ಯಾಥೋಲಿಕ್, ಸಂಪ್ರದಾಯಸ್ಥರು ಮತ್ತು ಪ್ರೊಟೆಸ್ಟಂಟ್ ಹಾಗೂ ಪೂರ್ವದ ಅಶೇರಿಯನ್ ಸಭೆಯ ಹಿಂಬಾಲಕರು -ಎಲ್ಲರೂ ಯೇಸುವಿನ ಪುನರುತ್ಥಾನವನ್ನು ಒಂದು ಐತಿಹಾಸಿಕ ಘಟನೆ ಎಂದು ಒಪ್ಪುತ್ತಾರೆ ಮತ್ತು ಶಾರೀರಿಕ ಪುನರುತ್ಥಾನದ ವಾಸ್ತವವನ್ನು ನಿರಾಕರಿಸುವುದು ಒಂದು ನಾಸ್ತಿಕತೆ ಎಂದು ನಂಬುತ್ತಾರೆ. ಡೋಸೆಟಿಸಂ ಎಂಬ ನಾಸ್ತಿಕ ತತ್ವವು ಯೇಸುವಿನ ಪುನರುತ್ಥಾನವು ಆತನು ದೇವರಾಗಿದ್ದು ,ಮಾನವನಲ್ಲ ಎಂಬ ಅಭಿಪ್ರಾಯವನ್ನು ನಿರಾಕರಿಸುತ್ತದೆ.ಆದರೆ ಮೊದಲನೇ ಶತಮಾನದ ಕೊನೆಯಲ್ಲಿ ಮತ್ತು ಎರಡನೇ ಶತಮಾನದ ಆರಂಭದಲ್ಲಿ ಪ್ರೋಟೋ-ಸಾಂಪ್ರದಾಯಿಕ ಕ್ರೈಸ್ತತ್ವವು[who?] ಇದನ್ನು ವ್ಯಾಪಕವಾಗಿ ವಿರೋಧಿಸಿತು.

ಮರಣ ಹೊಂದಿದವರ ಪುನರುತ್ಥಾನ

[ಬದಲಾಯಿಸಿ]

ಕ್ರೈಸ್ತ ಧರ್ಮವು ಮೊದಲನೇ ಶತಮಾನದ ಯೆಹೂದತ್ವದಲ್ಲಿ ಒಂದು ಧಾರ್ಮಿಕ ಚಳುವಳಿಯನ್ನು ಪ್ರಾರಂಭಿಸಿತು. ಇದು ಮೊದಲನೇ ಶತಮಾನದ ಸತ್ತವರ ಪುನರುತ್ಥಾನದ ನಂಬಿಕೆಯನ್ನು ಉಳಿಸಿಕೊಂಡಿತು. ಆದರೆ ಇದು ಯೆಹೂದತ್ವದ ಅಂತ್ಯ ಸಮಯದಲ್ಲಿ ಇಟ್ಟುಕೊಂಡಿದ್ದ ಅನೇಕ ನಂಬಿಕೆಗಳಲ್ಲಿ ಏಕೈಕ ನಂಬಿಕೆಯಾಗಿದೆ.ಈ ನಂಬಿಕೆಯು ಕ್ರೈಸ್ತ ಧರ್ಮದಲ್ಲಿ ಪ್ರಭಲವಾಗಿ ಬೆಳೆದು, ಶೀಘ್ರದಲ್ಲೇ ಯೆಹೂದತ್ವದಲ್ಲಿ ವಿರಳವಾಗಿದ್ದ ದೇಹದ ಪುನರುತ್ಥಾನದ ಬಗ್ಗೆ ಹೆಚ್ಚು ಒತ್ತು ಕೊಟ್ಟಿತು. ಪೌಲನು ತನ್ನ ಪ್ರವಾದನೆಯಲ್ಲಿ ಹೇಳಿದಂತೆ ,---" ಆತನು ಭೂಮಿಗೆ ನ್ಯಾಯ ತೀರಿಸಲು ಒಂದು ದಿನವನ್ನು ಗೊತ್ತು ಮಾಡಿದ್ದಾನೆ...." ಎಂಬ ಮಾತಿನಂತೆ ಬಹುಪಾಲು ಕ್ರೈಸ್ತ ಸಭೆಗಳು ಅಂತ್ಯಕಾಲ", ದಲ್ಲಿ ಸತ್ತವರಿಗೆ ಪುನರುತ್ಥಾನವಿದೆ ಎಂಬ ನಂಬಿಕೆಯನ್ನು ಎತ್ತಿ ಹಿಡಿಯುತ್ತವೆ. (ಅಪೋಸ್ತಲರ ಕಾರ್ಯಗಳು 17:31 KJV)ಮತ್ತು ..." ನೀತಿವಂತರು ಮತ್ತು ಅನೀತಿವಂತರಿಗಿಬ್ಬರಿಗೂ ಮರಣಾನಂತರ ಪುನರುತ್ಥಾನವಿದೆ. (Acts 24:15 KJV). ಕ್ರಿಸ್ತನ ಪಾಪ ನಿವೇದನಾ ಕಾರ್ಯದ ಕಾರ‍ಣದಿಂದ ಮಾತ್ರವೇ, ನಂಬಿಕೆಯ ಮೂಲಕ ಉಂಟಾಗುವ ಕೃಪೆಯಿಂದ ಜನರು ನ್ಯಾಯ ತೀರ್ಪಿನಲ್ಲಿ ಆಗುವ ನಿತ್ಯ ನರಕದಿಂದ ತಪ್ಪಿಸಿಕೊಳ್ಳಲು ಶಕ್ತರಾಗಿದ್ದಾರೆ.

ಸತ್ತವರ ಪುನರುತ್ಥಾನದ ಮೇಲಿನ ನಂಬಿಕೆ ಮತ್ತು ಮರಣದ ನ್ಯಾಯ ಸ್ಥಾಪಕನಾಗಿ ಯೇಸು ಕ್ರಿಸ್ತನ ಪಾತ್ರ ವನ್ನು ಅಪೋಸ್ತಲರ ವಿಶ್ವಾಸದಲ್ಲಿ ಉಲ್ಲೇಖಿಸಲಾಗಿದ್ದು ಕ್ರೈಸ್ತ ದೀಕ್ಷಾ ಸ್ಥಾನದ ಮೂಲಭೂತ ವಿಶ್ವಾಸವಾಗಿದೆ. ಪ್ರಕಟಣೆಯ ಗ್ರಂಥದಲ್ಲೂ ಸಹ ಸತ್ತವರು ಎಬ್ಬಿಸಲ್ಪಟ್ಟಾಗ ನಡೆಯುವ ನ್ಯಾಯ ತೀರ್ಪಿನ ದಿನದ ಬಗ್ಗೆ ಹಲವಾರು ವಿವರಣೆಗಳಿವೆ.

ಪುನರುತ್ಥಾನದ ಕೌತುಕಗಳು

[ಬದಲಾಯಿಸಿ]
1857ರಲ್ಲಿ ಫ್ರಾನ್ಸ್‌ನ ಲಿಯನ್ ಬೊನ್ನಟ್ ರಚಿಸಿರುವ ವರ್ಣಚಿತ್ರ, ಲಝಾರಸ್‌ನ ಪುನರುತ್ಥಾನ.

ಯೇಸು ಕ್ರಿಸ್ತನು ಪುನರುತ್ಥಾನ ಹೊಂದಿದ ನಂತರ ತನ್ನ ಶಿಷ್ಯರಿಗೆ, ಇತರ ಸಂಗತಿಗಳೊಂದಿಗೆ ಸತ್ತವರನ್ನು ಎಬ್ಬಿಸುವ ಅಧಿಕಾರವನ್ನೂ ಸಹ ಕೊಟ್ಟನು.

ಬೈಬಲ್‌ನ ಹೊಸ ಒಡಂಬಡಿಕೆಯಲ್ಲಿ, ಯೇಸುವು ಸತ್ತ ಅನೇಕರನ್ನು ಎಬ್ಬಿಸಿದನೆಂದು ಹೇಳಲಾಗಿದೆ,ಆದರೆ ಇವರಾರೂ ಸ್ವತಃ ಯೇಸುವಿನಂತೆ ಅಮರತ್ವವವನ್ನು ಪಡೆದಿಲ್ಲ. ಇದು ಅಂತ್ಯ ದಿನಗಳಲ್ಲಿ ಇದನ್ನು ಎಲ್ಲಾ ಜನರಿಗೂ ದಯಪಾಲಿಸಲಾಗುವುದು. ಯಾಯೀರನ ಸತ್ತ ಮಗಳು ಬದುಕುವುದು, ತನ್ನದೇ ಅಂತ್ಯ ಸಂಸ್ಕಾರದ ಮೆರವಣಿಗೆಯಲ್ಲಿ ಯುವಕನು ಮೇಲೇಳುವುದು ಮತ್ತು ಸತ್ತು ನಾಲ್ಕು ದಿನಗಳ ನಂತರ ಲಾಜರನು ಸಮಾಧಿಯಿಂದ ಎದ್ದು ಬರುವುದು ಮುಂತಾದವು ಈ ಪುನರುತ್ಥಾನಗಳನ್ನು ಒಳಗೊಂಡಿದೆ. ಮತ್ತಾಯನು ಬರೆದ ಸುವಾರ್ತೆಯಪ್ರಕಾರ, ಯೇಸುವಿನ ಪುನರುತ್ಥಾನದ ನಂತರ, ಅನೇಕ ಮೃತ ಹೊಂದಿದ ಸಂತರು ಸಮಾಧಿಗಳಿಂದ ಎದ್ದು ಬಂದುಯೆರುಸಲೇಮನ್ನು ಪ್ರವೇಶಿದ ನಂತರ ಅನೇಕರಿಗೆ ಕಾಣಿಸಿಕೊಂಡರು. ಕೆಲವು ವೇದ ಪಂಡಿತರು ಈ ವಿವರಣೆಯನ್ನು ವಾಸ್ತವ ಘಟನೆ ಎನ್ನುವುದಕ್ಕಿಂತ ಒಂದು ಕಟ್ಟು ಕಥೆ ಎಂದು ಅರ್ಥೈಸುತ್ತಾರೆ.[]

ಇದೇ ರೀತಿಯ ಪುನರುತ್ಥಾನಗಳು ಕ್ರೈಸ್ತ ಅಪೋಸ್ತಲರ ಮತ್ತು ಸಂತರಿಗೂ ಸಹ ಅನ್ವಯಿಸುತ್ತವೆ. ಪೇತ್ರನು ದೋರ್ಕಾಸ್ (ತಬಿತಾ) ಎಂಬ ಸ್ತ್ರೀಯನ್ನು ನಿಗೂಢವಾಗಿ ಬದುಕಿಸಿದನು ಹಾಗೂ ಅಪೋಸ್ತಲರ ಕೃತ್ಯಗಳಲ್ಲಿ ಇರುವಂತೆ, ಯೂತೀಕನೆಂಬ ಯುವಕನು ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ಕಿಟಕಿಯ ಮೇಲಿನಿಂದ ಕೆಳಕ್ಕೆ ಬಿದ್ದು ಸತ್ತಾಗ ಪೌಲನು ಆತನನ್ನು ಬದುಕಿಸುತ್ತಾನೆ. ಅಪೊಸ್ತಲರ ಯುಗವು ಮುಂದುವರೆದಂತೆ, ಸಾಂಪ್ರದಯಿಕ ಕ್ರೈಸ್ತ ಸಂತರ ಜೀವನ ಚರಿತ್ರೆಯಲ್ಲಿ ದಾಖಲಾದಂತೆ ಅನೇಕ ಸಂತರು ತಮ್ಮ ಮರಣದ ನಂತರ ಪುನರುತ್ಥಾನ ಹೊಂದಿದರು ಎಂದು ಹೇಳಲಾಗಿದೆ. ಫಾದರ್ ಆಲ್ಫ್ರೆಡ್ ಜೆ. ಹರ್ಬರ್ಟ್[[, Raised from the Dead: True Stories of 400 Resurrection Miracles, ]] ರವರು ಬರೆದಿರುವ ಒಂದು ಪುಸ್ತಕದಲ್ಲಿ ಸ್ವರ್ಗ, ನರಕ ಮತ್ತು ಮರಣಾನಂತರದ ಜೀವನದ ಬಗ್ಗೆ ಸತ್ತು ಬದುಕಿದ ಕೆಲವು ವ್ಯಕ್ತಿಗಳ ವಿವರಣೆಗಳನ್ನು ಒಳಗೊಂಡಂತೆ ಇಂತಹ ಅನೇಕ ಅದ್ಬುತಗಳ ಬಗ್ಗೆ ವಿವರಣೆ ನೀಡುತ್ತಾರೆ.

ಶಾರೀರಿಕ ಪುನರುತ್ಥಾನದ ಎದುರಿಗೆ ಪ್ಲಾಟೋನಿಕ್ ತತ್ವಜ್ಞಾನ

[ಬದಲಾಯಿಸಿ]

ಪ್ಲಾಟೋನಿಕ್ ತತ್ವ ಜ್ಞಾನ ಮತ್ತು ಇತರೆ ತತ್ವಜ್ಞಾನದ ಪ್ರಕಾರ, ಸಾವಿನ ನಂತರ ಅತ್ಮವು ನಶ್ವರವಾದ ಈ ದೇಹವನ್ನು ತ್ಯಜಿಸುತ್ತದೆ. ಯೇಸು ಕ್ರಿಸ್ತನು ಶಾರೀರಿಕ ಪುನರುತ್ಥಾನಕ್ಕಿಂತ ಆತ್ಮಿಕವಾದ ಪುನರುತ್ಥಾನವನ್ನು ಹೊಂದಿದ್ದಾನೆ ಎಂಬ ಅಂಶವು ಕೆಲವು ಕ್ರೈಸ್ತ ಮತ ಬೋಧಕರಿಗೆ ಜನಪ್ರಿಯತೆಯನ್ನು ತಂದು ಕೊಟ್ಟವು.ಇಂತಹವರನ್ನು 1ಯೋಹಾನದ ಕರ್ತೃ ಅಂತಿಕ್ರೈಸ್ತರು ಎಂದು ಕರೆದಿದ್ದಾನೆ. ಜ್ಞಾನ ಸಂಬಂಧಿಯಂತಹ ಆದಿ ಕ್ರೈಸ್ತ ಸಭೆಯಲ್ಲೂ ಸಹ ಇಂಥಹದ್ದೇ ನಂಬಿಕೆಗಳು ಕಾಣಿಸಿಕೊಂಡವು. ಆದರೆ ಲೂಕನು ಬರೆದ ಸುವಾರ್ತೆ 24:39ರಲ್ಲಿ ಯೇಸುವು ಸ್ಪಷ್ಟವಾಗೆ ಹೀಗೆ ಹೇಳುತ್ತಾನೆ, "ನನ್ನನ್ನು ಮುಟ್ಟಿ ನೋಡಿರಿ, ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು ಅವು ಭೂತಗಳಿಗೆ ಇರುವುದಿಲ್ಲ" ಎಂದು ಹೇಳಿದನು. ಆದರೆ ಪುರಾತನ ಗ್ರೀಕ್ ಧರ್ಮಕ್ಕೆ ಹೆಚ್ಚಾಗಿ ಅಂಟಿಕೊಂಡಿರುವ ಗ್ರೀಕರು ,ಭೌತಿಕ ಪುನರುತ್ಥಾನದ ಈ ಸನ್ನಿವೇಶವನ್ನು ವಿಭಿನ್ನ ದೃಷ್ಟಿಕೋನದಲ್ಲಿ ಕಾಣುತ್ತಾರೆ, ಏಕೆಂದರೆ ಅವರ ಪ್ರಕಾರ ದೇಹ ಮತ್ತು ಅತ್ಮದ ನಿತ್ಯ ಸಮ್ಮಿಲನದಿಂದ ಮಾತ್ರವೇ ಅಮರತ್ವವನ್ನು ಪಡೆಯಲು ಸಾಧ್ಯ.

ಸಮಕಾಲೀನ ಬೈಬಲ್‌ನ ವಿಮರ್ಶೆ

[ಬದಲಾಯಿಸಿ]

ಹರ್ಬರ್ಟ್ ಸಿ. ಬ್ರಿಕ್ಟೋತ್ ರವರು ಬರೆದಿರುವ ಹಿಬ್ರೂ ಯೂನಿಯನ್ ಕಾಲೇಜ್ನ ವಾರ್ಷಿಕ ಪತ್ರಿಕೆಯಲ್ಲಿನ ಒಂದು ಲೇಖನದ ಪ್ರಕಾರ, ಬೈಬಲ್ ನಲ್ಲಿರುವ ಬದುಕಿನ ನಂತರದ ದೃಷ್ಟಿ ಕೋನಗಳನ್ನು ಅರ್ಥ ಮಾಡಿಕೊಳ್ಳಲು ಕುಟುಂಬದ ಸಮಾಧಿಗಳು ಕೇಂದ್ರ ಬಿಂದುವಾಗಿವೆ. ಬ್ರಿಕ್ಟೋತ್ ಹೇಳುವಂತೆ, "ಇದು ಕೇವಲ ಭೌತಿಕ ಅಸ್ತಿತ್ವಕ್ಕೆ ತೋರಿಸುವ ಗೌರವವಲ್ಲ ಬದಲಾಗಿ....ಸಂಪ್ರದಾಯವನ್ನು ಉಳಿಸಿಕೊಳ್ಳುವುದಕ್ಕಿಂತಲೂ ,ಸೂಕ್ತವಾದ ಶವಸಂಸ್ಕಾರ ಮತ್ತು ಸತ್ತವರ ಮರಣಾನಂತರದ ಜೀವನದ ಕುರಿತು ಪಡುವ ಸಂತೋಷದ ನಡುವೆ ಇರುವ ಸಂಬಂಧವು ಪ್ರಾಮುಖ್ಯವಾಗಿದೆ". ಬ್ರಿಕ್ಟೋತ್ ರವರ ಪ್ರಕಾರ, ಆದಿ ಇಸ್ರಾಯೇಲರು ತಮ್ಮ ಕುಟುಂಬದ ಗೋರಿಗಳ ಅಥವಾ ಪಂಗಡ, ಒಂದಾಗಿರುವುದರ ಮೇಲೆ ಇಟ್ಟಿದ್ದ ನಂಬಿಕೆಯು, ಬೈಬಲ್‌ನ ಹಿಬ್ರೂ ಪದವಾದಪಾತಾಳವನ್ನು ಸೂಚಿಸುತ್ತದೆ. ತಾನಾಖ್‌ನಲ್ಲಿ ಇದರ ಕುರಿತು ಸ್ಪಷ್ಟವಾಗಿ ವಿವರಿಸದೇ ಇದ್ದರೂ, ಈ ದೃಷ್ಟಿ ಕೋನದಲ್ಲಿ ಪಾತಾಳವು ದೇಹವು ಮೃತ ಹೊಂದಿದ ನಂತರ ಸತ್ತ ಆತ್ಮಗಳು ಹೋಗಿ ಸೇರುವ ಭೂಗರ್ಭದ ಒಂದು ಸ್ಥಳವಾಗಿದೆ. ಬ್ಯಾಬಿಲೋನಿಯನ್ನರು ಅರಲು ಎಂಬ ಇಂತಹದ್ದೇ ಆದ ಭೂಗತ ಲೋಕವನ್ನು ಹೊಂದಿದ್ದರು ಹಾಗೂ ಗ್ರೀಕರು ಹೇಡ್ಸ್ ಎಂಬ ಭೂಗತ ಲೋಕವನ್ನು ಹೊಂದಿದ್ದರು. ಶಿಯೊಲ್‌ಗೆ ಬೈಬ್ಲಿಕಲ್ ಉಲ್ಲೇಖಗಳು ಇತರರಲ್ಲಿ ನೋಡಿ: ಜೆನೆಸಿಸ್ 42:38, ಇಸಯ್ಯ 14:11, ಸಾಲ್ಮ್ 141:7, ಡೇನಿಯಲ್ 12:2, ಪ್ರಾವರ್ಬ್ಸ್ 7:27 ಮತ್ತು ಜಾಬ್ 10:21,22, ಮತ್ತು 17:16. ಬ್ರಿಚ್ಟೊತ್ ಪ್ರಕಾರ, ಶಿಯೊಲ್‌ನ ಇತರೆ ಬೈಬ್ಲಿಕಲ್ ಹೆಸರುಗಳೆಂದರೆ: ಅಬಡ್ಡನ್ (ರುಯಿನ್), ಸಾಲ್ಮ್ 88:11, ಜಾಬ್ 28:22 ಮತ್ತು ಪ್ರೊವರ್ಬ್ಸ್ 15:11; ಬೊರ್ (ದಿ ಪಿಟ್), ಇಸಯ್ಯದಲ್ಲಿ ಸಿಕ್ಕಿದ್ದು 14:15, 24:22, ಎಝೆಕಿಯೆಲ್ 26:20; ಮತ್ತು ಶಖಟ್ (ಭ್ರಷ್ಟಾಚಾರ), ಇಸಯ್ಯದಲ್ಲಿ ದೊರೆತದ್ದು 38:17, ಎಝೆಕಿಯಲ್ 28:8.[೧೦]

ಮೋರ್ಮೊನಿಸಮ್

[ಬದಲಾಯಿಸಿ]

ದಿ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್-ಡೇ ಸೇಂಟ್ಸ್ (ಸಾಮಾನ್ಯವಾಗಿ ಮೊರ್ಮನ್ಸ್ಎನ್ನುವರು) ಮರಣದ ನಂತರ ನೀತಿವಂತರ ಆತ್ಮಗಳು ಸ್ವರ್ಗಕ್ಕೂ, ಆದರೆ ಪಶ್ಚಾತಾಪ ಪಡದೇ ಇರುವವರ ಆತ್ಮಗಳು ನರಕಕ್ಕೂ ಹೋಗುತ್ತವೆ ಎಂದು ಬೊಧಿಸುತ್ತದೆ. ಕ್ರಿಸ್ತನನ್ನು ನಿದರ್ಶನವಾಗಿ ಇಟ್ಟುಕೊಂಡು ಅನೀತಿವಂತರಿಗೆ ಸುವಾರ್ತೆಯನ್ನು ಸಾರುವುದಕ್ಕೆ ಬದ್ಧರಾಗಿದ್ದಾರೆ. (1ಪೇತ್ರ3:18-20).[೧೧] ಎಲ್‌ಡಿಎಸ್ ದೇವಾಲಯಗಳಲ್ಲಿ ಕಂಡು ಬರುವ ಜೀವಂತ ಸಂಸ್ಕಾರವೆಂದರೆ, ಸ್ವರ್ಗ ಮತ್ತು ನರಕದ ಹಾದಿಯಲ್ಲಿರುವ ಆತ್ಮಗಳಿಗೆ, ಕೇವಲ ಶರೀರಕ್ಕೆ ಮಾತ್ರ ನೀಡಬಹುದಾದಂತಹ (1ಪೇತ್ರ4:6) ದೀಕ್ಷಾಸ್ನಾನದಂತಹ (1 ಕೊರಿಂಥ 15:29ನೋಡಿರಿ) ಧಾರ್ಮಿಕ ವಿಧಿಗಳನ್ನು ನೀಡುವುದು.[೧೨] ಇದು ಆತ್ಮಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ತಿಳಿಸುತ್ತದೆ. ಮೊರ್ಮಾನ್ ಗ್ರಂಥವು ಸ್ವರ್ಗದ ಆತ್ಮಗಳು ಮತ್ತು ನರಕದ ಆತ್ಮಗಳು ಒಂದು ತಾತ್ಕಾಲಿಕ ಸ್ಥಿತಿಯಾಗಿದ್ದು, ಪುನರುತ್ಥಾನ ಮತ್ತು ಕಡೆಯ ನ್ಯಾಯ ತೀರ್ಪಿನ ಮುಂಚಿನ ಸ್ಥಿತಿಗಳಾಗಿವೆ ಎಂದು ವಿವರಿಸುತ್ತದೆ.[೧೩] ಪುನರುತ್ಥಾನದ ಸಮಯವು ಬಂದಾಗ, ಜೀವಿಸಿದ ಪ್ರತಿಯೊಬ್ಬರ ಆತ್ಮವೂ ತಮ್ಮ ಶರೀರಗಳೊಂದಿಗೆ ಒಂದಾಗುತ್ತದೆ. ಒಬ್ಬ ವ್ಯಕ್ತಿಯು ಜೀವಿಸಿದ ಅವನ ಅಥವಾ ಅವಳ ನೀತಿವಂತಿಕೆ ಅಥವಾ ಅನೀತಿವಂತಿಕೆಯ (ಹಾಗೂ ಅವರ ಪಾಲಿಸಿದ ಧಾರ್ಮಿಕ ವಿಧಿ ವಿಧಾನಗಳು) ಮಟ್ಟವು, ಅವರ ಶರೀರವು ಪಡೆಯಬಹುದಾದ ಪುನರುತ್ಥಾನದ (ಮಹಿಮೆ) ಸ್ಥಿತಿಯನ್ನು ನಿರ್ಧರಿಸುತ್ತವೆ. ಅದು ಸೂರ್ಯನ ಮಹಿಮೆ (ದೈವಿಕ ಶರೀರ), ಚಂದ್ರನ ಮಹಿಮೆ (ಲೌಕಿಕ ಶರೀರ) ಅಥವಾ ನಕ್ಷತ್ರಗಳ ಮಹಿಮೆ (ಬಾಹ್ಯ ಶರೀರ) (1ಕೊರಿಂಥ15:39-42)ವಾಗಿರಬಹುದು.[೧೪] ಒಬ್ಬ ವ್ಯಕ್ತಿಯ ನೈತಿಕತೆಯ ಮಟ್ಟವು ತಾನು ಅಂತಿಮ ನ್ಯಾಯತೀರ್ಪಿನ ನಂತರ ಸೇರಬಹುದಾದ ಮಹಿಮೆಯ ಸಾಮ್ರಾಜ್ಯವನ್ನು (ಸ್ವರ್ಗೀಯ,ಭೌಮಿಕ ಅಥವಾ ಬಾಹ್ಯ ಸಮ್ರಾಜ್ಯಗಳು) ನಿರ್ಧರಿಸುತ್ತದೆ.[೧೫] ಬೋಧನೆಗಳು (1ಕೊರಿಂಥ 15, ಸಿದ್ಧಾಂತಗಳು ಮತ್ತು ಸಂಪ್ರದಾಯಗಳು 76) ಪುನರುತ್ಥಾನವು ಬೇರೆ ಬೇರೆ ಸಮಯಗಳಲ್ಲಿ ಆಗುತ್ತವೆ ಎಂಬುದನ್ನೂ ಹೇಳುತ್ತವೆ. ನೀತಿವಂತರು ಮೊದಲು ಪುನರುತ್ಥಾನ ಹೊಂದುವರು ,ನಂತರ ದುಷ್ಟರು ಶತಮಾನದ ಅಂತ್ಯದಲ್ಲಿ ಪಡೆಯುವರು.

ಇಸ್ಲಾಂ

[ಬದಲಾಯಿಸಿ]

ತತ್ವ

ಇಸ್ಲಾಂ ಧರ್ಮದ ಪ್ರಕಾರ ಪುನರುತ್ಥಾನದ ದಿನವು ನ್ಯಾಯ ತೀರ್ಪಿನ ದಿನವಾಗಿದೆ. ಆ ದಿನದಂದು ಯಾವ ಸ್ನೇಹಿತನೂ ಸಹಾಯ ಮಾಡುವುದಿಲ್ಲ ಅಥವಾ ಸಹಾಯ ಪಡೆಯಲೂ ಸಾಧ್ಯವಿಲ್ಲ. ಆಕಾಶವು ಮೋಡವನ್ನು ತಂದಾಗ, ಭೂಮಿಯು ಶೂನ್ಯವಾಗಿ ಮಾರ್ಪಾಡಾಗುವುದು; ಚಂದ್ರ ಮತ್ತು ಸೂರ್ಯ ಇದೇ ರೀತಿಯಲ್ಲಿ ಒಟ್ಟಾಗಿ ಸೇರುವರು. ತುತೂರಿಯು ಊದಲ್ಪಡುವಾಗ ಮೃತ ಹೊಂದಿದ ಎಲ್ಲಾ ಜನರು ಎದ್ದೇಳುವರು. ನಂತರ ಇಂದಿನ ಮತ್ತು ಹಿಂದಿನ ಎಲ್ಲಾ ಜನರನ್ನು ಒಳಗೊಂಡಂತೆ ಎಲ್ಲಾ ಜೀವರಾಶಿಗಳೂ ಶ್ವಾಸವನ್ನು ಪಡೆಯುವವು. ಆ ದಿನ ಎಲ್ಲಾ ಜನರೂ ನ್ಯಾಯ ತೀರ್ಪಿಗೆ ಒಳಗಾಗುವರು.

ಸಂಭವಗಳು

ಇಸ್ಲಾಂ ಧರ್ಮದ ಪ್ರಕಾರ, ಎಲ್ಲಾ ಮನುಕುಲದವರೂ ತಮ್ಮ ಕೃತ್ಯಗಳಿಗನುಸಾರವಾಗಿ ನ್ಯಾಯತೀರ್ಪಿಗೆ ಒಳಗಾಗುತ್ತಾರೆ; ಒಂದು ಚಿಕ್ಕ ಒಳ್ಳೆಯತನ ಮತ್ತು ಚಿಕ್ಕ ಕೆಟ್ಟತನವೂ ಸಹ ಖಂಡಿತವಾಗಿ ಗಣನೆಗೆ ಬರುವುದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ದಿನದಂದು ದೇವರನ್ನು ದೂಷಿಸಿದವರೂ ಹಾಗೂ ಬಹುದೇವ ಆರಾಧಕರೂ ನರಕದ ಬೆಂಕಿಯಲ್ಲಿ ಹಾಕಲ್ಪಡುವರು. ಸರ್ವಶಕ್ತನ ಪ್ರವಾದಿಗಳನ್ನೂ ಮತ್ತು ಪ್ರಕಟಣೆಗಳನ್ನೂ ಬೇಕೆಂದೇ ನಿರಾಕರಿಸಿದವರು ಅದಕ್ಕೆ ತಕ್ಕ ಪ್ರತಿಫಲ ಹೊಂದುವರು. ಆ ದಿನವು ಪ್ರತ್ಯೇಕಿಸುವ ದಿನವಾಗಿದ್ದು, ನೈಜ ವಿಶ್ವಾಸಿಗಳು ಮತ್ತು ಕಪಟಿಗಳ ಬೇರ್ಪಡಿಸುವಿಕೆ ನಡೆಯುತ್ತದೆ. ಅವರ ನಡುವೆ ಒಂದು ಗೋಡೆಯನ್ನು ಇಡಲಾಗುವುದು-ಒಳಭಾಗದಲ್ಲಿ ಕೃಪೆ ಹಾಗೂ ಹೊರ ಭಾಗದಲ್ಲಿ ಹಿಂಸೆ ಇರುತ್ತದೆ. ಸ್ವರ್ಗವು ನೀತಿವಂತರ ಸ್ಥಳವಾಗಿದ್ದು, ನರಕವು ಪಾಪಿಗಳ ಲೋಕವಾಗಿದೆ.

ಖುರಾನ್‌ನ ಆಧಾರಗಳು

"ಕೆಲವರ ಮುಖಗಳು ಕಾಂತಿಯಿಂದ ಹೊಳೆಯುತ್ತಾ ದೇವರ ಕಡೆಗೆ ನೋಡುತ್ತಿರುತ್ತವೆ, ಇನ್ನು ಕೆಲವರ ಮುಖಗಳು ಕತ್ತಲಿನಿಂದ ತುಂಬಿದ್ದು ಭಯಂಕರವಾದ ಯಾವುದೋ ಸಂಗತಿ ತಮಗೆ ಸಂಭವಿಸಲಿದೆಯೆಂದು ಆತಂಕದಿಂದ ನೋಡುತ್ತಿರುತ್ತಾರೆ" (ಖುರಾನ್:ಪ್ರಕಟಣೆ :22-25)

"ಆ ದಿನದಂದು ಮನುಷ್ಯರು ಚಿಟ್ಟೆಗಳಂತೆ ಚದುರಿ ಹೋಗುವರು ಮತ್ತು ಪರ್ವತಗಳು ಹಸನು ಮಾಡಿದ ಉಣ್ಣೆಯಂತಾಗುವವು". ಏಕೆಂದರೆ ಯಾರ ತಕ್ಕಡಿಯು ಭಾರವಾಗಿದೆಯೋ ಅವನು ಆಶಿಸಿದ ಪರಮಾನಂದವನ್ನು ಹೊಂದುತ್ತಾನೆ , ಯಾರ ತಕ್ಕಡಿಯು ಹಗುರವಾಗಿದೆಯೋ ಅವನು ಅಂಧಕಾರವನ್ನು ಪ್ರವೇಶಿಸುತ್ತಾನೆ. ಬೆಂಕಿಯು ಅದರ ಆಧಾರವಾಗಿರುತ್ತದೆ. (ಖುರಾನ್ :ದುರಂತ:4-11)

ಝೆನ್ ಬುದ್ಧ ಧರ್ಮ

[ಬದಲಾಯಿಸಿ]

ಬೌದ್ಧ ಧರ್ಮದಲ್ಲಿ ಪುನರುತ್ಥಾನದ ಶಕ್ತಿಯನ್ನು ಸೂಚಿಸುವ ಅನೇಕ ಕಥೆಗಳಿವೆ. ಅಂತಹ ಕಥೆಗಳಲ್ಲಿ ಪ್ರಸಿದ್ಧವಾದ ಎರಡು ಸನ್ನಿವೇಶಗಳೆಂದರೆ ಚಾನ್ ಅಥವಾ ಜೆನ್ ಎಂಬುವ ಭೌದ್ಧಿಕ ಸಂಪ್ರದಾಯ. ಇಂತಹ ಜನಪ್ರಿಯ ಕಥೆಗಳಲ್ಲಿ ಒಂದು ಎಂದರೆ ಭಾರತದ ಏಕಾಯನ ಶಾಲೆಯನ್ನು ಚಿನಾ ದೇಶಕ್ಕೆ ಕೊಂಡೊಯ್ದ ಭಾರತದ ಉಪಾದ್ಯಾಯನಾದ ಬೋಧಿಧರ್ಮನಂತರ ಇದು ಚಾನ್ ಭೌದ್ಧ ಧರ್ಮವಾಗಿ ಪರಿವರ್ತನೆ ಹೊಂದಿತು.

ಇನ್ನೊಂದು ಎಂದರೆ ಚೀನಾದ ಚಾನ್ ಉಪಾದ್ಯಾಯನಾದ ಪುಹುವಾ ( ಜೆ.ಫೂಕ್)ನ ಉತ್ತೀರ್ಣ. ಲಿಂಜಿ (ಜೆ.ರಿಂಜಾಯ್)ನ ದಾಖಲೆಗಳಲ್ಲಿ ಇದು ಪುನರ್ ಎಣಿಕೆಯಾಗಿದೆ. ಪುಹುವಾ ತನ್ನ ಅಸಾಧರಣವದ ಅಥವಾ ಉನ್ಮಾದದ ನಡತೆ ಮತ್ತು ಬೋಧನಾ ಶೈಲಿಗೆ ಪ್ರಸಿದ್ದನಾಗಿದ್ದನು.ಆದ್ದರಿಂದ ಆತನು ಇಂಥಹ ಶಕ್ತಿಗಳ ಮೂಲಕ ಸ್ವಾಭಾವಿಕ ವಿಚಾರಗಳನ್ನೂ ಅಸಹಜವಾಗಿ ಮಾಡುವುದರಲ್ಲಿ ಆಶ್ಚರ್ಯವೇನೂ ಕಾಣುತ್ತಿರಲಿಲ್ಲ. ಇರ್ಮ ಗಾರ್ಡ್ ಶಾಲೆಯ "ದಿ ಜೆನ್ ಟೀಚಿಂಗ್ ಆಫ್ ರಾಂಜೈ"ನ ಒಂದು ಸನ್ನಿವೇಶ ಇಲ್ಲಿ ಕೊಡಲಾಗಿದೆ.

65. ಒಂದು ದಿನ ಮಾರುಕಟ್ಟೆಯ ಬೀದಿಗಳಲ್ಲಿ ಫ್ಯೂಕ್ ತನಗೊಂದು ನಿಲುವಂಗಿ ಬೇಕು ಎಂದು ವಿಧವಿಧವಾಗಿ ಎಲ್ಲರನ್ನೂ ಬೇಡುತ್ತಾ ಹೊರಟನು. ಎಲ್ಲಾ ಜನರು ಒಂದೊಂದು ನಿಲುವಂಗಿಯನ್ನು ಕೊಟ್ಟರು, ಆದರೆ ಪ್ಯೂಕ್ ಎಲ್ಲರ ಕೊಡುಗೆಯನ್ನೂ ನಿರಾಕರಿಸಿದನು. ಉಪಾದ್ಯಾಯನಾದ ಲಿಂಜಿಯು ಒಂದು ಅದ್ಬುತವಾದ ಶವಪೆಟ್ಟಿಗೆಯನ್ನು ಮಾಡಿ, ಪ್ಯೂಕ್ ತನ್ನ ಕಡೆ ನೋಡಿದಾಗ: "ನಿನಗಾಗಿ ಸಿದ್ಧ ಪಡಿಸಿದ ನಿಲುವಂಗಿಯು ಇಲ್ಲಿದೆ" ಎಂದನು. ಪ್ಯೂಕ್ ಶವ ಪೆಟ್ಟಿಗೆಯನ್ನು ತನ್ನ ಹೆಗಲ ಮೇಲೆ ಹೊತ್ತು, ಮಾರುಕಟ್ಟೆಯ ಬೀದಿಯಲ್ಲಿ, "ರಿಂಜೈ ನನಗಾಗಿ ಈ ನಿಲುವಂಗಿಯನ್ನು ತಯಾರಿಸಿದ್ದಾನೆ" . ನಾನು ರೂಪಾಂತರ ಗೊಳ್ಳುವುದಕ್ಕಾಗಿ (ಸಾಯುವುದಕ್ಕೆ) ಪೂರ್ವದ ಬಾಗಿಲನ್ನು ಪ್ರವೇಶಿಸುತ್ತೇನೆ" ಎಂದು ಜೋರಾಗಿ ಕೂಗುತ್ತಾ ಹೊರಟನು ಮಾರುಕಟ್ಟೆಯ ಜನರು ಅತನನ್ನು ನೋಡುವ ಕಾತರದಿಂದ ಆತನ ಸುತ್ತಲೂ ಮುಗಿಬಿದ್ದರು. ಫ್ಯೂಕ್ ಹೇಳುತ್ತಾನೆ: "ಇಲ್ಲ, ಇಂದು ಅಲ್ಲ. ನಾಳೆ ನಾನು ರೂಪಾಂತರ ಗೊಳ್ಳಲು ದಕ್ಷಿಣದ ಬಾಗಿಲನ್ನು ಪ್ರವೇಶಿಸುತ್ತೇನೆ". ಹಾಗೂ ಇಲ್ಲಿಯವರೆಗೆ ಮೂರು ದಿನಗಳು. ಯಾರೂ ನಂಬುವುದಿಲ್ಲ. ನಾಲ್ಕನೆಯ ದಿನ, ಯಾವುದೇ ಪ್ರೇಕ್ಷರರಿಲ್ಲದೇ, ಪ್ಯೂಕ್ ನಗರದ ಪೌಳಿ ಗೋಡೆಗಳನ್ನು ದಾಟಿ ಹೊರಟನು. ಅಲ್ಲಿ ತನ್ನ ಶವಪೆಟ್ಟಿಗೆಯಲ್ಲಿ ತಾನೇ ಮಲಗಿದನು. ಅಲ್ಲೇ ಹೋಗುತ್ತಿದ್ದ ಪ್ರಯಾಣಿಕನೊಬ್ಬನಿಗೆ ಶವ ಪೆಟ್ಟಿಗೆಯ ಮುಚ್ಚಳವನ್ನು ಮುಚ್ಚಿ ಮೊಳೆಗಳನ್ನು ಬಿಗಿಯುವಂತೆ ಕೇಳಿದನು.

ಈ ಸುದ್ದಿಯು ಎಲ್ಲಾ ಕಡೆಗೂ ಒಂದೇ ಸಾರಿ ಹರಡಿದ್ದರಿಂದ ಮಾರುಕಟ್ಟೆಯ ಜನರು ಅಲ್ಲಿಗೆ ಮುಗಿ ಬಿದ್ದರು. ಶವ ಪೆಟ್ಟಿಗೆಯನ್ನು ತೆರೆದಾಗ ಅಲ್ಲಿ ಆತನ ದೇಹವು ಅದೃಶ್ಯವಾಗಿರುವುದನ್ನು ಕಂಡರು, ಆದರೆ ಅವರು ಆಕಾಶದ ಕಡೆಯಿಂದ ಆತನ ಕೈಯಲ್ಲಿರುವ ಘಂಟೆಯು ಮೊಳಗುವುದನ್ನು ಕೇಳಿಸಿಕೊಂಡರು.[೧೬]

ಅದೃಶ್ಯಗಳು (ಪುನರುತ್ಥಾನಕ್ಕಿಂತ ಭಿನ್ನವಾಗಿರುವುದು)

[ಬದಲಾಯಿಸಿ]

ಬೇರೆ ಬೇರೆ ಧರ್ಮಗಳ ಜ್ಞಾನವು ಬೆಳೆದಂತೆಲ್ಲಾ, ಕೆಲವು ಧಾರ್ಮಿಕ ಹಾಗೂ ಪೌರಾಣಿಕ ವ್ಯಕ್ತಿಗಳ ದೇಹವು ಅದೃಶ್ಯವಾಗುವುದನ್ನು ಹೆಚ್ಚು ವಿವರಿಸುತ್ತವೆ. ಪುರಾತನ ಗ್ರೀಕ್ ಧರ್ಮದಲ್ಲಿ ಇದೇ ರೀತಿಯಲ್ಲಿ ದೇವತೆಗಳು ಕ್ಲೀಟಸ್ ಗ್ಯಾನಿಮೇಡ್, ಮೆನೆಲಾಸ್, ಮತ್ತು ತಿಥೋನಸ್ ನಂತಹ ಕೆಲವು ವ್ಯಕ್ತಿಗಳ ದೇಹಗಳನ್ನು ಅಮರವಾಗುವಂತೆ ಮಾಡಿದವು.[೧೭] ತತ್ವ ಜ್ಞಾನಿಯಾದ ಪ್ಲುಟಾರ್ಕ್ ತನ್ನ ಪ್ಯಾರಲಲ್ ಲೈವ್ಸ್ ಪುಸ್ತಕದ ರೊಮುಲಸ್ ಎಂಬ ಅಧ್ಯಾಯದಲ್ಲಿ ,ರೊಮುಲಸ್ ನ ಐತಿಹಾಸಿಕ ಪುರುಷರಾದ ಆಸ್ಟಿಪೆಲಿಯಾದಕ್ಲಿಯೋಮೆಡೆಸ್ ಮತ್ತು ಕ್ರೋಸಿಸ್ನ ನಿಗೂಢ ಅದೃಶ್ಯಗಳ ಬಗ್ಗೆ ವಿವರಿಸುತ್ತಾ, ಇಂತಹ ಅದೃಶ್ಯಗಳ ಬಗ್ಗೆ ಇರುವ ನಿರಂತರವಾದ ನಂಬಿಕೆಗಳ ಬಗ್ಗೆ ಟೀಕಿಸುತ್ತಾನೆ. ಜಸ್ಟಿನ್ ಮಾರ್ಟಿರ್ ರಂತಹ ಆದಿ ಕ್ರೈಸ್ತ ಬರಹಗಾರರು, ಪುರಾತನ ಕಾಲದ ಪಾಗನ್ ಸಮರೂಪಗಳನ್ನು, ಸೈತಾನ ಮತ್ತು ದೆವ್ವಗಳು ಕ್ರೈಸ್ತರು ತಮ್ಮ ಸನ್ಮಾರ್ಗವನ್ನು ಬಿಟ್ಟು ಹೋಗುವ ಉದ್ದೇಶಕ್ಕಾಗಿ ಮಾಡುತ್ತಿರುವ ಕಾರ್ಯಗಳ ಬಗ್ಗೆ ವಿವರಿಸುತ್ತಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಕಂಡುಬಂದಂತೆ ಟಿಬೆಟ್ನ ರಕ್ಷಕನಾದ ಗೆಸಾರ್, ಕೊನೆಯ ಕ್ಷಣದಲ್ಲಿ ಪರ್ವತದ ತುದಿಯಲ್ಲಿ ಮಂತ್ರ ಪಠಣವನ್ನು ಮಾಡುವಾಗ ಆತನ ಖಾಲಿಯಾದ ವಸ್ತ್ರಗಳು ನೆಲದ ಮೇಲೆ ಬಿದ್ದವು.[೧೮] ಸಿಕ್ಕರ ಮೊದಲ ಗುರುವಾದ ಗುರುನಾನಕ್ ದೇವ್ರವರ ಪಾರ್ಥೀವ ಶರೀರವು ಅದೃಶ್ಯವಾಗಿ, ಅದರ ಸ್ಥಳದಲ್ಲಿ ಹೂವುಗಳು ಕಾಣಿಸಿಕೊಂಡವು ಎಂದು ಹೇಳಲಾಗುತ್ತದೆ. ಪ್ರವಾದಿಯಾದ ಮಹಮ್ಮದ್ ಮತ್ತು ಆತನ ಕುದುರೆ ಪರ್ವತವನ್ನು ಹತ್ತುವಾಗ ಸ್ವರ್ಗಾರೋಹಣವಾದ ಒಂದು ಸ್ಥಳವು ಯೆರುಸಲೇ‌ಮ್‌ನಲ್ಲಿದೆ.

ಲಾರ್ಡ್ ರಾಗ್ಲನ್'ರವರ ಹೀರೋನ ಪಟ್ಟಿಯಲ್ಲಿ ಅನೇಕ ಧಾರ್ಮಿಕ ವ್ಯಕ್ತಿಗಳ ದೇಹಗಳು ಅದೃಶ್ಯವಾಗಿರುವುದು ಅಥವಾ ಒಂದಕ್ಕಿಂತ ಹೆಚ್ಚು ಸಮಾಧಿಗಳನ್ನು ಹೊಂದಿರುವ ವಿವರಗಳಿವೆ.[೧೯] ದಿ ಟ್ರಜರ್ ಆಫ್ ಸಿರ್ರಾ ಮೇಡರ್ ನ ಲೇಖಕರಾದ ಬಿ.ಟ್ರಾವೆನ್ ಇಂಕಾ ವಿರೊಕೊಚಾ ಸಮುದ್ರದ ಮೇಲೆ ನಡೆಯುತ್ತಾ ಅದೃಶ್ಯರಾದರು ಎಂದು ವಿವರಿಸುತ್ತಾರೆ.[೨೦] ಹೀರೋ ಮಾನವ ಶರೀರದ ಪವಿತ್ರತೆ ಹಾಗೂ ಭ್ರಷ್ಟರಹಿತ ಬೋಧಗಳು ಈ ವಿದ್ಯಾಮನಕ್ಕೆ ಒಂದು ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಭಾವಿಸಲಾಗಿದೆ. ಪ್ರಾಯಶಃ, ಇದು ಹಿರೋ ಅವಶೇಷಗಳನ್ನು ಸಂಗ್ರಹಿಸುವ ಹಾಗು ಅಡಚಣೆಪಡಿಸುವ ಆಚರಣೆಗಳನ್ನು ಹಿಮ್ಮೆಟ್ಟಿಸುವ ಆಲೋಚನೆಯಾಗಿದೆ. ಅವರು ಅದೃಶ್ಯರಾಗಿದ್ದಾರೆಂದರೆ ಸುರಕ್ಷಿತವಾಗಿದ್ದಾರೆ.[೨೧]

ಡಿಯುಟೆರೊನಮಿಯಲ್ಲಿ (34:6) ಮೋಸೆಸ್ ಅನ್ನು ಗೌಪ್ಯವಾಗಿ ಹೂಳಲಾಗುತ್ತದೆ. ಸುಂಟರಗಾಳಿ 2 ರಾಜರುದಲ್ಲಿ ಎಲಿಜಾಹ್ ಮಾಯವಾಗುತ್ತದೆ (2:11). ನೂರು ವರ್ಷಗಳ ನಂಟರ ಇಬ್ಬರು ಬೈಬಲ್ ನಾಯಕರು ಮತ್ತು ಕಾಣಿಸಿಕೊಂಡರು, ಮತ್ತು ಜೀಸಸ್ ಜೊತೆಯಲ್ಲಿ ನಡೆದಾಡುತ್ತಿರುವಂತೆ ಕಂಡರು. ನಂತರ ಮತ್ತೆ ಮಾಯವಾದರು. ಮಾರ್ಕ್ (9:2-8), ಮ್ಯಾಥ್ಯೂ (17:1-8) ಮತ್ತು ಲ್ಯೂಕ್ (9:28-33). ಕೊನೆಯ ಸಮಯದಲ್ಲಿ ಅವನು ಕಾಣಿಸಿಕೊಂಡಿದ್ದು, ಲ್ಯೂಕ್ (24:51) ಒಬ್ಬನೇ ಜೀಸಸನ ಅನುಯಾಯಿಗಳಲ್ಲಿ ಒಬ್ಬನಾಗಿ ಹೇಳಿದ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕ್ರಿಶ್ಚಿಯನ್ ಎಸ್ಟೋಲಾಜಿ
  • ಝೊಂಬೀ

ಉಲ್ಲೇಖಗಳು

[ಬದಲಾಯಿಸಿ]
  1. Pecorino, Philip (2001). "Section 3. The Resurrection of the Body". Philosophy of Religion. Dr. Philip A. Pecorino. Archived from the original on 2013-06-02. Retrieved 2007-09-13.
  2. "Karaite FAQ: Frequently Asked Questions About Karaism". Karaite-korner.org. 2008-05-22. Retrieved 2010-05-28.
  3. [234] ^ ಹ್ಯಾರಿಸ್, ಸ್ಟೀಫನ್ ಎಲ್., ಅಂಡರ್ಸ್ಟ್ಯಾಂಡಿಂಗ್ ದಿ ಬೈಬಲ್. ಪಾಲೊ ಆಲ್ಟೋ: ಮೇಫೀಲ್ಡ್. 1985.
  4. Mermelstein, Marc. "Principle #13,". Maimonides’ 13 Foundations of Judaism. Retrieved 2009-04-29.
  5. "ದಿ ಆಫ್ಟರ್‌ಲೈಫ್: ಆಧುನಿಕ ಸಂವೇದನ ಶಕ್ತಿಗಳ ಪ್ರಕಾರ ಪುನರುತ್ಥಾನವನ್ನು ಸೂಚಿಸುವಂತಹ ಆಧುನಿಕ ಧರ್ಮಾಚರಣೆಗೆ ಸಂಬಂಧಿಸಿದ ಪ್ರಾರ್ಥನೆಗಳು". Archived from the original on 2009-01-26. Retrieved 2010-11-18.
  6. "ರಿಫಾರ್ಮ್ ಸೆಟ್ ಟು ಇಂಟ್ರೊಡ್ಯೂಸ್ ನ್ಯೂ ಸಿದ್ದುರ್". Archived from the original on 2008-04-30. Retrieved 2010-11-18.
  7. ಜೋನಾಥನ್ ಝಡ್. ಸ್ಮಿತ್ “ಡೈಯಿಂಗ್ ಅಂಡ್ ರೈಸಿಂಗ್ ಗಾಡ್ಸ್” ಮಿರ್ಸಿಯಾ ಎಲಿಯೇಡ್ (ಆವೃತ್ತಿ)ನಲ್ಲಿ ದಿ ಎನ್‌ಸೈಕ್ಲೋಪೀಡಿಯಾ ಆಫ್ ರಿಲಿಜನ್: ಸಂಪುಟ. 3 . ನ್ಯೂಯಾರ್ಕ್: ಸಿಮನ್ & ಶುಸ್ಟರ್ ಮೆಕ್‌ಮಿಲ್ಲನ್ 1995: 521-27.
  8. ಎರ್ವಿನ್ ರೊಹ್ಡ್ ಸೈಕ್: ದಿ ಕಲ್ಟ್ ಆಫ್ ಸೂಲ್ಸ್ ಅಂಡ್ ಬಿಲೀಫ್ ಇನ್ ಇಮ್ಮಾರ್ಟಾಲಿಟಿ ಅಮಾಂಗ್ ಗ್ರೀಕ್ಸ್ . ನ್ಯೂಯಾರ್ಕ್: ಹಾರ್ಪರ್ & ರೋ 1925 [1921]; Dag Øistein Endsjø. ಗ್ರೀಕ್ ರಿಸರೆಕ್ಷನ್ ಬಿಲೀಫ್ಸ್ ಅಂಡ್ ದಿ ಸಕ್ಸೆಸ್ ಆಫ್ ಕ್ರಿಶ್ಚಿಯಾನಿಟಿ. ನ್ಯೂಯಾರ್ಕ್: ಪಾಲ್‌ಗ್ರೇವ್ ಮೆಕ್‌ಮಿಲ್ಲನ್ 2009.
  9. ದಿ ರಿಸರೆಕ್ಷನ್ ಆಫ್ ಮ್ಯಾಥ್ಯೂ 27:52-53
  10. ಹರ್ಬರ್ಟ್ ಚನನ್ ಬ್ರಿಚ್ಟೊ "ಕಿನ್, ಕಲ್ಟ್, ಲ್ಯಾಂಡ್ ಅಂಡ್ ಆಫ್ಟರ್‌ಲೈಫ್ - ಎ ಬೈಬ್ಲಿಕಲ್ ಕಾಂಪ್ಲೆಕ್ಸ್", ಇಬ್ರು ಯೂನಿಯನ್ ಕಾಲೇಜ್ ವಾರ್ಷಿಕ 44, ಪು.8 (1973)
  11. 18 ಕ್ರಿಸ್ತನೂ ಕೂಡ ಒಮ್ಮೆ ಆತನ ಪಾಪಗಳನ್ನು ಅನುಭವಿಸಿದ್ದ, ಅನ್ಯಾಯಕ್ಕೆ ನ್ಯಾಯವಾದ , ನಮ್ಮನ್ನೂ ಆತ ದೇವರಿರುವಲ್ಲಿಗೆ ಕರೆದೊಯ್ಯಬಲ್ಲ, ಆದರೆ ಆತ್ಮದಿಂದ ಸಜೀವವಾಯಿತು: 19 ಖೈದಿಯಾಗಿದ್ದ ಆತ್ಮಗಳನ್ನು ಹೋಗಿ ಚುಚ್ಚಿದ; 20 ಅವು ಕೆಲವು ಸಲ ವಿಧೇಯವಾಗಿರುತ್ತಿರಲಿಲ್ಲ, ನೀರಿನಿಂದ ಎಂಟು ಆತ್ಮಗಳನ್ನು ರಕ್ಷಿಸಲಾಯಿತು.
  12. 6 ಈ ಕಾರಣಕ್ಕಾಗಿ ಸತ್ತವರನ್ನು ಚುಚ್ಚಿ ನೋಡಿದ್ದು, ಅವರು ಮಾಂಸದೊಳಗಿನ ಮಾನವರು ಎಂದು ತಿಳಿಯುತ್ತದೆ, ಆದರೆ ಅವು ಆತ್ಮದೊಳಗಿನ ದೇವರಂತೆ ಜೀವಿಸುತ್ತವೆ.
  13. "Alma 40:11-14". Book of Mormon. Now, concerning the state of the soul between death and the resurrection-Behold it has been made known unto me by an angel, that the spirits of all men, as soon as they are departed from this mortal body, yea, the spirits of all men, whether they be good or evil, are taken home to that God who gave them life. And then shall it come to pass, that the spirits of those who are righteous are received into a state of happiness, which is called paradise, a state of rest, a state of peace, where they shall rest from all their troubles and from all care, and sorrow. And then shall it come to pass, that the spirits of the wicked, yea who are evil...shall be cast out into outer darkness; there shall be weeping, and wailing, and gnashing of teeth, and this because of their own iniquity, being led captive by the will of the devil...thus they remain in this state, as well as the righteous in paradise, until the time of their resurrection. {{cite book}}: Cite has empty unknown parameter: |chapterurl= (help)
  14. 39 ಎಲ್ಲಾ ಮಾಂಸಗಳು ಒಂದೇ ಆಗಿರುವುದಿಲ್ಲ: ಮಾನವರ ಮಾಂಸ ಒಂದು ರೀತಿಯದ್ದು, ಇನ್ನೊಂದು ಮಾಂಸ ಪಶುಗಳದ್ದು, ಇನ್ನೊಂದು ಮೀನುಗಳದ್ದು ಮತ್ತು ಪಕ್ಷಿಗಳದ್ದು ಇನ್ನೊಂದು ರೀತಿಯದ್ದಾಗಿರುತ್ತದೆ. 40 ಆಕಾಶದಲ್ಲಿರುವ ದೇಹಗಳೂ ಇವೆ, ಮತ್ತು ಭೂಮಿಯಲ್ಲಿ ವಾಸಿಸುವ ದೇಹಗಳೂ ಇವೆ: ಆದರೆ ಆಕಾಶದಲ್ಲಿ ಹಾರಾಡುವುದರ ಘನತೆ ಒಂದು, ಮತ್ತು ಭೂಮಿಯ ಮೇಲೆ ವಾಸಿಸುವ ದೇಹಗಳ ಘನತೆಯೇ ಇನ್ನೊಂದು. 41 ಸೂರ್ಯನ ಘನತೆಯು ಒಂದಾದರೆ, ಚಂದ್ರನದು ಇನ್ನೊಂದು, ಮತ್ತು ನಕ್ಷತ್ರಗಳ ಘನತೆಯು ಬೇರೆಯದೇ ಆಗಿರುವುದು: ಒಂದು ನಕ್ಷತ್ರದ ಘನತೆಯು ಇನ್ನೊಂದಕ್ಕಿಂತ ವಿಭಿನ್ನವಾಗಿರುವುದು. 42 ಹಾಗೆಯೇ ಸತ್ತವರ ಪುನರುತ್ಥಾನವೂ ಇನ್ನೊಂದು ರೀತಿಯದ್ದಾಗಿರುತ್ತದೆ. ಇದನ್ನು ಭ್ರಷ್ಟಾಚಾರವೆಂದು ತೋರಿಸಲಾಗುತ್ತದೆ; ಭ್ರಷ್ಟಾಚಾರವಿಲ್ಲದೆ ಬೆಳೆಸಲಾಗುತ್ತದೆ:
  15. "Alma 11:42-44". Book of Mormon. Now, there is a death which is a called a temporal death; and the death of Christ shall loose the bands of this temporal death, that all shall be raised from this temporal death. The spirit and the body shall be reunited again in its perfect form; both limb and joint shall be restored to its proper frame, and we shall be brought to stand before God, knowing even as we know now, and have a bright recollection of all our guilt. Now, this restoration shall come to all, both old and young, both bond and free, both male and female, both the wicked and the righteous; and even there shall not so much as a hair of their heads be lost; but every thing shall be restored to it s perfect frame, as it is now, or in the body... {{cite book}}: Cite has empty unknown parameter: |chapterurl= (help)
  16. ಶ್ಲೋಯೆಗ್, ಇರ್ಮ್ಗಾರ್ಡ್; tr. "ದಿ ಝೆನ್ ತೀಚಿಂಗ್ ಆಫ್ ರಿಂಜಾಯ್". ಶಂಬಲ ಪಬ್ಲಿಕೇಷನ್ಸ್, ಇಂಕ್., ಬರ್ಕ್ಲೇ, 1976. ಪುಟ 349.. ಐಎಸ್‌ಬಿಎನ್ 0-912616-87-3.
  17. ಎರ್ವಿನ್ ರೊಹ್ಡ್ ಸೈಕ್: ದಿ ಕಲ್ಟ್ ಆಫ್ ಸೋಲ್ಸ್ ಅಂಡ್ ಬಿಲೀಫ್ ಇನ್ ಇಮ್ಮಾರ್ಟಾಲಿಟಿ ಅಮಾಂಗ್ ದಿ ಗ್ರೀಕ್ಸ್ . ನ್ಯೂಯಾರ್ಕ್: ಹಾರ್ಪರ್ & ರೋ 1966.[1921]; ಡ್ಯಾಗ್ ಒಯಿಸ್ಟೀನ್ ಎಂಡ್ಸ್‌ಜೊ. ಗ್ರೀಕ್ ರಿಸರೆಕ್ಷನ್ ಬಿಲೀಫ್ಸ್ ಅಂಡ್ ದಿ ಸಕ್ಸಸ್ ಆಫ್ ಕ್ರಿಶ್ಚಿಯಾನಿಟಿ. ನ್ಯೂಯಾರ್ಕ್: ಪಾಲ್‌ಗ್ರೇವ್ ಮೆಕ್‌ಮಿಲನ್ 2009.
  18. ಅಲೆಕ್ಸಾಂಡ್ರಿಯಾ ಡೇವಿಡ್-ನೀಲ್,ಮತ್ತು ಲಾಮಾ ಯೊಂಗ್ಡೆನ್, ದಿ ಸೂಪರ್‌ಮ್ಯಾನ್ ಲೈಫ್ ಆಫ್ ಗೇಸರ್ ಆಫ್ ಲಿಂಗ್ , ರೈಡರ್, 1933.
  19. ಒಟ್ಟೊ ರ್ಯಾಂಕ್, ಲಾರ್ಡ್ ರಾಗ್ಲನ್, ಮತ್ತು ಅಲನ್ ಡುಂಡೆಸ್, ಇನ್ ಕ್ವೆಸ್ಟ್ ಆಫ್ ದಿ ಹೀರೊ, ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್, 1990
  20. ಬಿ. ಟ್ರಾವೆನ್, ದಿ ಕ್ರಿಯೇಷನ್ ಆಫ್ ದಿ ಸನ್ ಅಂಡ್ ಮೂನ್, ಲಾರೆನ್ಸ್ ಹಿಲ್ ಬುಕ್ಸ್, 1977
  21. ನೋಡಿ: ಮೈಕೇಲ್ ಪೆಟರ್ನಿಟಿ, ಡ್ರೈವಿಂಗ್ ಮಿ. ಆಲ್ಬರ್ಟ್: ಎ ಟ್ರಿಪ್ ಅಕ್ರಾಸ್ ಅಮೇರಿಕಾ ವಿತ್ ಐನ್‌ಸ್ಟೀನ್ಸ್ ಬ್ರೈನ್, ದಿ ಡಯಲ್ ಪ್ರೆಸ್, 2000

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಆಸ್ಕರ್ ಕಲ್ಮನ್. “ಆತ್ಮವು ಅಮರವಾಗುವುದು ಅಥವಾ ಸತ್ತವರ ಪುನರುತ್ಥಾನ?” ಎಂಬುದರ ಬಗ್ಗೆ ಇಮ್ಮಾರ್ಟಾಲಿಟಿ ಅಂಡ್ ರಿಸರೆಕ್ಷನ್ ಆವೃತ್ತಿ. ಕ್ರಿಸ್ಟರ್ ಸ್ಟೆಂದಾಲ್ . ನ್ಯೂಯಾರ್ಕ್: 1965. ಪುಟಗಳು. 9–35. (available online )
  • ಡ್ಯಾಗ್ ಕಿಸ್ಟೀನ್ ಎಂಡ್ಸ್‌ಜೊ. ಗ್ರೀಕ್ ರಿಸರೆಕ್ಷನ್ ಬಿಲೀಫ್ಸ್ ಅಂಡ್ ದಿ ಸಕ್ಸೆಸ್ ಆಫ್ ಕ್ರಿಶ್ಚಿಯಾನಿಟಿ. ನ್ಯೂಯಾರ್ಕ್: ಪಾಲ್‌ಗ್ರೇವ್ ಮ್ಯಾಕ್‌ಮಿಲ್ಲನ್, 2009.
  • ನಿಕೊಲಾಯ್ ಫಿಡೊರೊವಿಚ್ ಫಿಯೊಡೊರೊವ್ . ಫಿಲಾಸಫಿ ಆಫ್ ಫಿಸಿಕಲ್ ರಿಸರೆಕ್ಷನ್ 1906.
  • ಎಡ್ವಿನ್ ಹ್ಯಾಚ್. ಇನ್‌ಫ್ಲುಯೆನ್ಸ್ ಆಫ್ ಗ್ರೀಕ್ ಐಡಿಯಾಸ್ ಅಂಡ್ ಯೂಸೇಜಸ್ ಅಪಾನ್ ದಿ ಕ್ರಿಶ್ಚಿಯನ್ ಚರ್ಚ್ (1888 ಹಿಬ್ಬರ್ಟ್ ಲೆಕ್ಚರ್ಸ್).
  • ರಿಚರ್ಡ್ ಲಾಂಗ್‌ನೆಕರ್, ಸಂಪಾದಕ. ಲೈಫ್ ಇನ್ ದಿ ಫೇಸ್ ಆಫ್ ಡೆತ್: ದಿ ರಿಸರೆಕ್ಷನ್ ಮೆಸೇಜ್ ಆಫ್ ದಿ ನ್ಯೂ ಟೆಸ್ಟೇಮೆಂಟ್ . ಗ್ರಾಂಡ್ ರಪಿಡ್ಸ್: ಎರ್ಡಮನ್ಸ್, 2004)
  • ಫ್ರಾಂಕ್ ಮಾರಿಸನ್. ಹು ಮೂವ್ಡ್ ದಿ ಸ್ಟೋನ್? . ಲಂಡನ್: ಫೇಬರ್ ಅಂಡ್ ಫೇಬರ್, 1930. (ಆನ್‌ಲೈನ್ ಲಭ್ಯವಿದೆ )
  • ಮಾರ್ಕಸ್ ಮುಹ್ಲಿಂಗ್. ಗ್ರಂಡ್‌ಇನ್ಫಾರ್ಮೇಶನ್ ಎಶ್ಚಾಟಾಲಜಿ. ಸಿಸ್ಟಮಾಟಿಸ್ಚ್ ಥಿಯಾಲಜಿ ಆಸ್ ದೆರ್ ಪರ್ಸ್‌ಪೆಕ್ಟಿವ್ ದೆರ್ ಹಾಫ್ನಂಗ್ . ಗೊಟ್ಟಿಜೆನ್: ವಂದೆನ್‌ಹೋಕ್ & ರುಪ್ರೆಶ್ಟ್, 2007, ಐಎಸ್‌ಬಿಎನ್ 978-3-8252-2918-4, 242–262.
  • ಜಾರ್ಜ್ ನಿಕೆಲ್ಸ್‌ಬರ್ಗ್. ರಿಸರೆಕ್ಷನ್, ಇಮ್ಮಾರ್ಟಾಲಿಟಿ, ಅಂಡ್ ಎಟರ್ನಲ್ ಲೈಫ್ ಇನ್ ಇಂಟರ್‌ಟೆಸ್ಟೆಮೆಂಟಲ್ ಜುದಾಯಿಸ್ಮ್ . ಕ್ಯಾಂಬ್ರಿಡ್ಜ್:ಝಾರ್ವರ್ಡ್ ಯುನಿವೆರ್ಸಿಟಿ ಪ್ರೆಸ್ಸ್ (1983).
  • ಫೆಮೆ ಪರ್ಕಿನ್ಸ್. "ರಿಸರೆಕ್ಷನ್: ನ್ಯೂ ಟೆಸ್ಟೇಮೆಂಟ್ ವಿಟ್ನೆಸ್ ಅಂಡ್ ಕಂಟೆಂಪರರಿ ರಿಫ್ಲೆಕ್ಷನ್." ಗಾರ್ಡನ್ ಸಿಟಿ: ಡಬಲ್‌ಡೇ & ಕಂಪನಿ, 1984.
  • ಜೇಮ್ಸ್ ಮೆಕ್‌ಕೊಂಕೇ ರಾಬಿನ್ಸನ್, ಸಂಪಾದಕ. ದಿ ನಾಗ್ ಹಮ್ಮಡಿ ಲೈಬ್ರರಿ ಇನ್ ಇಂಗ್ಲಿಷ್ . ನ್ಯೂಯಾರ್ಕ್: ಹಾರ್ಪರ್ ಕಾಲಿನ್ಸ್, 1977.
  • ಎರ್ವಿನ್ ರೊಹ್ಡ್ ಸೈಕ್: ದಿ ಕಲ್ಟ್ ಆಫ್ ಸೋಲ್ಸ್ ಅಂಡ್ ಬಿಲೀಫ್ ಇನ್ ಇಮ್ಮಾರ್ಟಾಲಿಟಿ ಅಮಾಂಗ್ ದಿ ಗ್ರೀಕ್ಸ್ . ನ್ಯೂಯಾರ್ಕ್: ಹಾರ್ಪರ್ & ರೋ, 1925 [1921].
  • ಚಾರ್ಲ್ಸ್ ಎಚ್ ಟಾಲ್ಬರ್ಟ್. ದಿ ಕಾನ್ಸೆಪ್ಟ್ ಆಫ್ ಇಮ್ಮಾರ್ಟಲ್ಸ್ ಇನ್ ಮೆಡಿಟರೇನಿಯನ್ ಆಂಟಿಕ್ವಿಟಿ , ಜರ್ನಲ್ ಆಫ್ ಬೈಬ್ಲಿಕಲ್ ಲಿಟರೇಚರ್, ಸಂಪುಟ 94, 1975, ಪುಟಗಳು 419–436
  • ಚಾರ್ಲ್ಸ್ ಎಚ್. ಟಲ್ಬರ್ಟ್. ದಿ ಮಿತ್ ಆಫ್ ಎ ಡಿಸೆಂಡಿಂಗ್-ಅಸೆಂಡಿಂಗ್ ರಿಡೀಮರ್ ಇನ್ ಮೆಡಿಟರೇನಿಯನ್ ಆಂಟಿಕ್ವಿಟಿ , ನ್ಯೂ ಟೆಸ್ಟೆಮೆಂಟ್ ಸ್ಟಡೀಸ್, 22, 1975/76, ಪುಟಗಳು 418–440
  • ಎನ್.ಟಿ. ರೈಟ್. ದಿ ರಿಸರೆಕ್ಷನ್ ಆಫ್ ದಿ ಸನ್ ಆಫ್ ಗಾಡ್ . ಮಿನ್ನೆಯಪೊಲಿಸ್: ಫೋರ್ಟ್ರೆಸ್ ಪ್ರೆಸ್, 2003.
  • ಫಾದರ್ ಆಲ್‌ಫ್ರೆಡ್ ಜೆ ಹೆಬರ್ಟ್. ರೈಸ್ಡ್ ಫ್ರಂ ದಿ ಡೆಡ್: ಟ್ರೂ ಸ್ಟೋರೀಸ್ ಆಫ್ 400 ರಿಸರೆಕ್ಷನ್ ಮಿರ್ಯಾಕಲ್ಸ್
  • ಹರ್ಬರ್ಟ್ ವೊಲ್ಮನ್. ದಿ ಎಮ್ಟಿ ಟೋಂಬ್ Archived 2010-12-02 ವೇಬ್ಯಾಕ್ ಮೆಷಿನ್ ನಲ್ಲಿ..

ಬಾಹ್ಯ ಕೊಂಡಿಗಳು

[ಬದಲಾಯಿಸಿ]