ತನಾಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೧ನೇ ಶತಮಾನದಲ್ಲಿ ಪ್ರಕಟವಾದ ಒಂದು ತನಾಕ್ ಪುಸ್ತಕದ ಪುಟ

ತನಾಕ್ (ಹೀಬ್ರೂ ಲಿಪಿಯಲ್ಲಿ: תנ״ך) ಯಹೂದಿ ಧರ್ಮದಲ್ಲಿನ ಪ್ರಮುಖ ಧಾರ್ಮಿಕ ಗ್ರಂಥ. ತನಾಕ್ ಪದವು ಈ ಗ್ರಂಥದ ಮೂರು ವಿಭಾಗಗಳಾದ ತೋರಾಹ್ ("ಉಪದೇಶ" - ಮೋಸಸ್ನ ಐದು ಪುಸ್ತಕಗಳು), ನೆವಿಯಿಮ್ ("ಸಂತರು") ಮತ್ತು ಕೆಟುವಿಮ್ಗಳ ("ಬರಹಗಳು") ಮೊದಲ ಅಕ್ಷರಗಳಿಂದ ಬಂದಿದೆ. ಈ ಗ್ರಂಥದ ಬಹುತೇಕ ಸಾರವು ವಿವಿಧ ರೂಪಗಳಲ್ಲಿ ಕ್ರೈಸ್ತ ಧರ್ಮದ ಧಾರ್ಮಿಕ ಗ್ರಂಥವಾದ ಬೈಬಲ್ಹಳೆ ಒಡಂಬಡಿಕೆಯಲ್ಲಿ ಸೇರ್ಪಡೆಯಾಗಿದೆ.

೧ ದಾವೀದನ ಮಗನೂ ಯೆರೂಸಲೇಮಿನಲ್ಲಿ ಆಳುವ ಅರಸನೂ ಆಗಿದ್ದ ಪ್ರಸ೦ಗಿಯ ಮಾತುಗಳು.ಪ್ರಸ೦ಗಿಯು ಹೀಗೆ ಹೇಳುತ್ತಾನೆ- ವ್ಯಾರ್ಥವೇ ವ್ಯಾರ್ಥ ವ್ಯಾರ್ಥವೇ ವ್ಯಾರ್ಥ ಸಮಸ್ತವು ವ್ಯಾರ್ಥ! ಮನುಷ್ಯನು ಈ ಲೋಕದಲ್ಲಿ ಎಲ್ಲಾ ಪದುವ ಪ್ರಯಾಸದಿ೦ದ ಅವನಿಗೆ ಏನು ಲಾಭ? ಒಂದು ತಲಾ೦ತರವು ಗತಿಸುವುದು ಇನ್ನೊ೦ದು ತಲಾ೦ತರವು ಬರುವುದು.ಭೂಮಿಯಾದರೋ ಶಾಶ್ವತವಾಗಿ ನಿಲ್ಲುವುದು. ಸೂರ್ಯನು ಏರುವನು.ಸೂರ್ಯನು ಇಲಿಯುವನು ಹೊರಟ ಸ್ಥಾನಕ್ಕ ಅಸುರುಸುರಾಗಿ ತಿರಿಗಿ ಓಡುವನು. ಗಾಳಿಯು ತೆ೦ಕಣಕ್ಕೆ ಬೀಸಿ ಬಡಗಣಕ್ಕೆ ತಿರುಗುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು ಆದರೂ ಸಮುದ್ರವು ತು೦ಬುವುದಿಲ್ಲಾವು ಎಲ್ಲಿಗೆ ಹರಿದು ಹೋಗುವವು ಇದನ್ನು ಮನುಷ್ಯನು ವಿವರಿಸಲಾರನು ಕಣ್ಣು ನೋಡಿ ನೋಡಿ ತ್ರುಪ್ತಿಗೊಳ್ಳದು ಕಿವಿಯು ಕೇಳಿ ಕೇಳಿ ದಣಿಯದು ಇದ್ದದ್ದೇ ಇರುವದು ನಡದದ್ದೇ ನಡೆಯುವದು ಲೋಕದಲ್ಲಿ ಹೊಸದೇನು ಇಲ್ಲ ಇಗೋ ಹೊಸದು ಎನಿಸಿಕೊಳ್ಳುವ ವಸ್ತುವಿದ್ದರೂ ಅದು ಪೂರ್ವದಲ್ಲಿ ನಮಗಿ೦ತ ಮು೦ಚಿನ ಯುಗಗಳಲ್ಲಿಯೂ ಇದ್ದದ್ದೇ ಹಿ೦ದಿನ ತಲಾ೦ತರಗಳ ಜ್ನಾಪಕವೂ ಅವುಗಳ ಮು೦ದಿನ ತಲಾ೦ತರಗಳಿಗೆ ಇರುವುದಿಲ್ಲ. ಪ್ರಸ೦ಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರಿಗೆ ಅರಸನಾಗಿದ್ದೆನು.ಆಕಾಶದ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ನಾನದಿ೦ದ ವಿಚಾರಿಸಿ ವಿಮರ್ಶಿಸಲು ಮನಸ್ಸಿಟ್ಟೆನು ನರಜನ್ಮದವರ ಕರ್ತವ್ಯವೆ೦ದು ದೇವರು ನೇಮಿಸಿರುವ ಆ ಕೆಲಸವೆಲ್ಲಾ ಬಹು ಪ್ರಾಯಸವೇ ಲೋಕದಲ್ಲಿ ನಡೆಯುವ ಕೆಲಸಗಳನೆಲ್ಲಾ ನೋಡಿದ್ದೇನೆ ಆಹಾ ಗಾಳಿಯನ್ನು ಹಿ೦ದಟ್ಟಿದ ಹಾಗೆ ಸಮಸ್ತವೂ ವ್ಯಾರ್ಥ ವಕ್ರವಾದದ್ದನ್ನು ಸರಿಮಾಡುವದು ಅಸಾಧ್ಯ ಇಲ್ಲದ್ದನ್ನು ಲೆಕ್ಕಿಸುವುದು ಅಶಕ್ಯ ನಾನು ಮನಸ್ಸಿನಲ್ಲಿ ಯೋಚಿಸುತ್ತಾ ಆಹಾ ನನಗಿ೦ತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿ೦ತಲೂ ಹೆಚ್ಚು ಜ್ನಾನವನ್ನು ಸ೦ಪಾದಿಸಿಕೊ೦ಡಿದ್ದೇನೆ ನನ್ನ ಹ್ರುದಯವು ಜ್ನಾನವನ್ನೂ ತಿಳುವಳಿಕೆಯನ್ನೂ ವಿಷೇಶವಾಗಿ ಹೊಂದಿದೆ ಎಂದುಕೊ೦ಡೆನು ಜ್ನಾನವನ್ನಲ್ಲದೆ ಮರಳುತನವನ್ನೂ ಬುದ್ಢಿಹೀನತೆಯನ್ನೂ ಗ್ರಹಿಸಲು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿ೦ದಟ್ಟಿದ ಹಾಗೆ ಎಂದು ಅರಿತುಕೊ೦ಡೆನು ಬಹು ಜ್ನಾನವಿದ್ದಲ್ಲಿ ಬಹು ಸ೦ಕಟ ಹೆಚ್ಚು ತಿಳುವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಾಥೆ

"https://kn.wikipedia.org/w/index.php?title=ತನಾಕ್&oldid=602080" ಇಂದ ಪಡೆಯಲ್ಪಟ್ಟಿದೆ