ಪೀಠಾ
ಪೀಠಾ ಭಾರತೀಯ ಉಪಖಂಡದ ಪೂರ್ವದ ಪ್ರದೇಶಗಳಿಂದ ಹುಟ್ಟಿಕೊಂಡ ಅಕ್ಕಿಯ ಒಂದು ಬಗೆಯ ಕೇಕ್ ಆಗಿದೆ ಮತ್ತು ಬಾಂಗ್ಲಾದೇಶ, ನೇಪಾಳ ಹಾಗೂ ಭಾರತದಲ್ಲಿ ಜನಪ್ರಿಯವಾಗಿದೆ. ಇದು ವಿಶೇಷವಾಗಿ ಭಾರತದ ಪೂರ್ವ ರಾಜ್ಯಗಳಾದ ಬಿಹಾರ್, ಝಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಮತ್ತು ಭಾರತದ ದಕ್ಷಿಣದ ರಾಜ್ಯವಾದ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ, ವಿಶೇಷವಾಗಿ ಅಸ್ಸಾಂನಲ್ಲಿ ಜನಪ್ರಿಯವಾಗಿದೆ. ಪೀಠಾಗಳನ್ನು ಸಾಮಾನ್ಯವಾಗಿ ಅಕ್ಕಿ ಹಿಟ್ಟಿನಿಂದ ಮಾಡಲಾಗುತ್ತದೆ, ಆದರೆ ಗೋಧಿ ಹಿಟ್ಟಿನಿಂದ ತಯಾರಿಸಲಾಗುವ ಕೆಲವು ಬಗೆಯ ಪೀಠಾಗಳಿವೆ. ಕಡಿಮೆ ಸಾಮಾನ್ಯವಾಗಿ ಸುವರ್ಣ ಗೆಡ್ಡೆ ಅಥವಾ ತಾಳೆಯಿಂದ ತಯಾರಿಸಲಾಗುತ್ತದೆ.
ತಯಾರಿಕೆ
[ಬದಲಾಯಿಸಿ]ಕಣಕದ ಒಳಗೆ ಸಿಹಿ ಅಥವಾ ಖಾರದ ಘಟಕಾಂಶಗಳನ್ನು ತುಂಬಿಸಬಹುದು.
ಹೂರಣ ತುಂಬಿದ ತರಕಾರಿ ಪೀಠಾಗಳಿಗಾಗಿ ಹೂಕೋಸು, ಎಲೆಕೋಸು, ಮೂಲಂಗಿ ಅಥವಾ ಆಲೂಗಡ್ಡೆಯಂತಹ ಘಟಕಾಂಶಗಳನ್ನು ಕರಿದು ಅಥವಾ ಬೇಯಿಸಿ ಅಥವಾ ಹಬೆಯಲ್ಲಿ ಬೇಯಿಸಿ, ನಂತರ ಹಿಸುಕಿ ತಂಪಾಗಿಸಿ, ಸಣ್ಣ ಉಂಡೆಗಳನ್ನು ಮಾಡಿ ಹೂರಣವಾಗಿ ಪೀಠಾದಲ್ಲಿ ತುಂಬಿಸಲಾಗುತ್ತದೆ.
ಸಿಹಿ ಪೀಠಾಗಳು ಸಾಮಾನ್ಯವಾಗಿ ಸಕ್ಕರೆ, ಬೆಲ್ಲ, ಖರ್ಜೂರದ ರಸ ಅಥವಾ ತಾಳೆಯ ರಸವನ್ನು ಹೊಂದಿರುತ್ತವೆ ಮತ್ತು ಇವುಗಳೊಳಗೆ ಕಾಯಿ ತುರಿ, ಗೋಡಂಬಿ, ಪಿಸ್ತಾ, ಸಿಹಿಯಾಗಿಸಿದ ತರಕಾರಿಗಳು ಅಥವಾ ಹಣ್ಣುಗಳನ್ನು ತುಂಬಿಸಬಹುದು.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Traditional Pitha Recipes from Odisha Archived 2021-06-25 ವೇಬ್ಯಾಕ್ ಮೆಷಿನ್ ನಲ್ಲಿ.
- Varieties of Pitha Recipes Archived 2012-03-07 ವೇಬ್ಯಾಕ್ ಮೆಷಿನ್ ನಲ್ಲಿ.