ಪರಮಾತ್ಮ(ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಪರಮಾತ್ಮ
Paramathma 1.jpg
Theatrical poster
ನಿರ್ದೇಶನಯೋಗರಾಜ್ ಭಟ್
ನಿರ್ಮಾಪಕ
 • ಜಯಣ್ಣ
 • ಭೋಗೇಂದ್ರ
ಲೇಖಕ
ಪಾತ್ರವರ್ಗ
ಸಂಗೀತವಿ. ಹರಿಕೃಷ್ಣ
ಛಾಯಾಗ್ರಹಣಸಂತೋಷ್ ರಾಜ್ ಪತಂಜೆ
ಸಂಕಲನದೀಪು ಎಸ್ ಕುಮಾರ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
 • 6 ಅಕ್ಟೋಬರ್ 2011 (2011-10-06)
ದೇಶಭಾರತ
ಭಾಷೆಕನ್ನಡ
ಬಾಕ್ಸ್ ಆಫೀಸ್೩೨ ಕೋಟಿ (ಯುಎಸ್$೭.೧ ದಶಲಕ್ಷ)[೨]

ಪರಮಾತ್ಮ 2011ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಯೋಗರಾಜ್ ಭಟ್ ರವರು ಈ ಚಿತ್ರಕ್ಕೆ ನಿರ್ದೇಶನ ಮತ್ತು ಸಹ ನಿರ್ಮಾಣ ಮಾಡಿದ್ದಾರೆ.[೩]ಇದರಲ್ಲಿಪುನೀತ್ ರಾಜ್‌ಕುಮಾರ್ ಮತ್ತು ದೀಪಾ ಸನ್ನಿಧಿ ಮುಖ್ಯ ಪಾತ್ರಗಳಲ್ಲಿ[೪]ನಟಿಸಿದ್ದಾರೆ.ಈ ಚಿತ್ರವು 6 ಅಕ್ಟೋಬರ್ 2011 ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು.[೫][೬] ನಿರ್ಮಾಣ ಹಂತದಲ್ಲಿದ್ದಾಗಲೇ ಚಿತ್ರದ ಟಿವಿ ಹಕ್ಕುಗಳು ದಾಖಲೆಯ  3.5 ಕೋಟಿಗೆ ಮಾರಾಟವಾಯಿತು.[೭][೮]ಬಿಡುಗಡೆಗೆ ಮುಂಚೆಯೇ,ಚಿತ್ರವು ಪ್ರಸಾರ ಮತ್ತು ವಿತರಣಾ ಹಕ್ಕುಗಳನ್ನು ಒಳಗೊಂಡಂತೆ 25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿತು. [೨]

ಪಾತ್ರವರ್ಗ[ಬದಲಾಯಿಸಿ]

 • ಪರಮತ್ಮಾ/ಕರಡಿ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
 • ದೀಪಾ/ತಿಥಿ ವಡೆ ಪಾತ್ರದಲ್ಲಿ ದೀಪಾ ಸನ್ನಿಧಿ
 • ಸಾನ್ವಿ/ಪಸೀನಾ ಪಾತ್ರದಲ್ಲಿ ಐಂದ್ರಿತಾ ರೇ
 • ಜಯಂತ್ ಪಾತ್ರದಲ್ಲಿ ಅನಂತ್ ನಾಗ್
 • ರಮ್ಯಾ ಬಾರ್ನಾ
 • ಶ್ರೀನಿವಾಸ್ ಪಾತ್ರದಲ್ಲಿ ಅವಿನಾಶ್
 • ಅಣ್ಣಯ್ಯ ಪಾತ್ರದಲ್ಲಿ ರಂಗಾಯಣ ರಘು
 • ಅಪ್ಪಣ್ಣ ಪಾತ್ರದಲ್ಲಿ ದತ್ತಣ್ಣ
 • ರಾಜು ತಾಳಿಕೋಟೆ
 • ಕೆರೋಸಿನ್ ಪಾತ್ರದಲ್ಲಿ ಶ್ವೇತಾ ಪಂಡಿತ್

ನಿರ್ಮಾಣ[ಬದಲಾಯಿಸಿ]

ಪುನೀತ್ ರಾಜ್‌ಕುಮಾರ್ ಅಭಿನಯದ ಲಗೋರಿ ಹೆಸರಿನ ಚಲನಚಿತ್ರವನ್ನು 2009 ರಲ್ಲಿ ಚಿತ್ರೀಕರಿಸಬೇಕಾಗಿತ್ತು, ಆದರೆ ನಿರ್ಮಾಣದ ವೆಚ್ಚವು ಹೆಚ್ಚಿಸಿರುವುದರಿಂದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದಿಂದ ಹಿಂದೆ ಸರಿದರು, ನಂತರ ಅದು ಸ್ಥಗಿತಗೊಂಡಿತು. 2011 ರಲ್ಲಿ, ಭಟ್ ಅವರ 2010 ರ ನಿರ್ಮಿತ ಚಿತ್ರ ಪಂಚರಂಗಿಯ ಯಶಸ್ಸಿನ ನಂತರ, ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ಪರಮಾತ್ಮ ಚಿತ್ರವನ್ನು ನಿರ್ಮಾಪಕ ಜಯಣ್ಣ ರವರೊಂದಿಗೆ ಸಹ ನಿರ್ಮಾಣ ಮಾಡುತ್ತಿದ್ದಾರೆ. [೯] ಚಿತ್ರದ ಕಥೆಯ ಪ್ರಕಾರ  ಮೂವರು ನಟಿಯರು ನಟಿಸಬೇಕಿದೆ, ಅವರೇ: ದೀಪ ಸನ್ನಿಧಿ ಐಂದ್ರಿತಾ ರೈ ಮತ್ತು ರಮ್ಯಾ ಬಾರ್ನಾ . [೧೦] ಚಿತ್ರದ ಚಿತ್ರೀಕರಣ ಮಾರ್ಚ್ 3 ರಂದು ಸಕಲೇಶಪುರದಲ್ಲಿ ಪ್ರಾರಂಭವಾಯಿತು,ಚಿತ್ರವು ಅಕ್ಟೋಬರ್ 6, 2011 ರಂದು ಬಿಡುಗಡೆಯಾಗುತ್ತಿದೆ. [೧೧] [೧೨] ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸುತ್ತ ಮುತ್ತ ಚಿತ್ರೀಕರಣ ನಡೆಯಿತು. [೧೩]

ಉಲ್ಲೇಖಗಳು[ಬದಲಾಯಿಸಿ]

 1. "ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರಿಗೆ ಸೂರಿ ಸಾಥ್ ನೀಡಿದ್ದಾರೆ". Archived from the original on 29 September 2011. Retrieved 22 July 2011.
 2. ೨.೦ ೨.೧ Puneet Rajkumar's Paramathma creates history
 3. The Hindu – In the name of God
 4. The Hindu – Deepa Sannidhi in "Paramatma" of Puneet Rajkumar
 5. Rock and Muni – Relatives at the Helm
 6. "Chitraloka – Paramathma Gets U certificate – Release On Oct 6"
 7. 'Paramathma will be Puneet's best film' – The Times of India
 8. Paramathma strikes gold – Bangalore Mirror
 9. Yogaraj-Puneet first combo movie titled Paramathma
 10. Three heroines for Parmathma
 11. "Paramathma From March 3rd"
 12. Puneeth and Yogaraj Bhat in 'Paramathma'
 13. Paramathma has a low key start