ಪಂಚರಂಗಿ (ಚಲನಚಿತ್ರ)
ಪಂಚರಂಗಿ | |
---|---|
ನಿರ್ದೇಶನ | ಯೋಗರಾಜ್ ಭಟ್ |
ನಿರ್ಮಾಪಕ | ಯೋಗರಾಜ್ ಭಟ್ |
ಪಾತ್ರವರ್ಗ | ದಿಗಂತ್,ನಿಧಿ ಸುಬ್ಬಯ್ಯ |
ಸಂಗೀತ | ಮನೋ ಮೂರ್ತಿ |
ಬಿಡುಗಡೆಯಾಗಿದ್ದು | ೦೩.೦೯.೨೦೧೦ |
ಭಾಷೆ | ಕನ್ನಡ |
ಪಂಚರಂಗಿ ೨೦೧೦ ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಚಲನಚಿತ್ರ, ಈ ಚಲನಚಿತ್ರದ ನಿರ್ದೇಶಕ ಹಾಗು ನಿರ್ಮಾಪಕ ಯೋಗರಾಜ್ ಭಟ್, ಮುಖ್ಯ ಪಾತ್ರದಲ್ಲಿ ದಿಗಂತ್ಹಾಗು ನಿಧಿ ಸುಬ್ಬಯ್ಯ ಕಾಣಿಸಿಕೊಂಡಿದ್ದಾರೆ.
ಕಥಾವಸ್ತು[ಬದಲಾಯಿಸಿ]
ಮನೆಯ ಹಿರಿಯ ಮಗನಿಗೆ(ಲಕ್ಕಿ) ಹೆಣ್ಣು ನೋಡಲು ಒಂದು ಮನೆಯವರು ಮಂಗಳೂರಿಗೆ ಹೋಗುತ್ತಾರೆ. ಹುಡುಗಿಯ(ಲತಾ)ಮನೆಯಲ್ಲಿ ತಂಗುತ್ತಾರೆ.
ಲಕ್ಕಿಯಾ ತಮ್ಮ, ಭರತ್ ಕುಮಾರನಿಗೆ(ದಿಗಂತ್)ಜೀವನದ ಬಗ್ಗೆ ಒಂದಿಷ್ಟು ಚಿಂತೆ ಇರುವುದಿಲ್ಲ, ಇವನು ಹುಡುಗಿಯ ಚಿಕ್ಕಮ್ಮನ ಮಗಳಾದ ಅಂಬಿಕಾಳನ್ನುಇಲ್ಲಿ ಭೇಟಿಯಾಗುತ್ತಾನೆ.ಲಕ್ಕಿ ಹಾಗೂ ಭರತ್ ತಮಗೆ ಇಷ್ಟವಾದ ಹುಡುಗಿಯರನ್ನು ಮದುವೆಯಾಗಲು ಸಾಧ್ಯವೇ ಅಥವಾ ತಮ್ಮ ತಂದೆ ತಾಯಿಯ ಒತ್ತಡಕ್ಕೆ ಸಿಕ್ಕಿ ಬೀಳುತ್ತಾರೆಯೇ? ಇದು ಚಿತ್ರದ ಕಥೆ.
ಇದು ಯೋಗರಾಜ್ ಭಟ್ಟರ ನಿರೂಪಣಾ ಶೈಲಿಯನ್ನು ಮಾತ್ರ ಬಂಡವಾಳವಾಗಿಟ್ಟುಕೊಂಡು ಗೆದ್ದ ಚಿತ್ರ.ಭರತ್ ಕುಮಾರ್, ಮಕ್ಕಳ ಮನಸ್ಸನ್ನು ಅರಿಯದೆ ತಮ್ಮ ಮನಸ್ಸಿಗೆ ಬಂದಂತೆ ಅವರ ಬದುಕನ್ನು ರೂಪಿಸುವ ತಂದೆ ತಾಯಿಯರಿಗೆ ಒಂದು ಸವಾಲು.
ಪಾತ್ರವರ್ಗ[ಬದಲಾಯಿಸಿ]
ಧ್ವನಿಪಥ[ಬದಲಾಯಿಸಿ]
ಪಂಚರಂಗಿ | |
---|---|
ಮನೋ ಮೂರ್ತಿ ಅವರ ಧ್ವನಿಸುರಳಿ ಸಂಪುಟ | |
ಬಿಡುಗಡೆ | ೨೦೧೦-೦೮-೧೪ |
ಶೈಲಿ | ವಿಶೇಷ ಸಿನೆಮಾ ಸಂಗೀತ |
ಮುದ್ರಣ ಸಂಸ್ಥೆ | ಆನಂದ್ ಆಡಿಯೋ |
ಚಿತ್ರಕ್ಕೆ ಸಂಗೀತ ಮನೋ ಮೂರ್ತಿಯವರು ಕೊಟ್ಟಿದಾರೆ.
ಹಾಡು | ಗಾಯಕ/ಗಾಯಕಿ | ಗೀತರಚನಕಾರ |
---|---|---|
"ಲೈಫು ಇಷ್ಟೇನೆ" | ಚೇತನ್ ಸೋಸ್ಕಾ, ಯೋಗರಾಜ್ ಭಟ್, ಅನನ್ಯ ಭಗತ್, ಅಕ್ಷತ ರಾಮನಾಥ್ | ಯೋಗರಾಜ ಭಟ್ |
"ಉದಿಸುವೆ ಬೆಳಕಿನ ಸೀರೆಯ" | ಸೋನು ನಿಗಮ್ | ಜಯಂತ್ ಕಾಯ್ಕಿಣಿ |
"ಹುಡುಗರು ಬೇಕು" | ಶ್ರೇಯಾ ಘೋಷಾಲ್, ಚೇತನ್ ಸೋಸ್ಕಾ | ಯೋಗರಾಜ ಭಟ್ |
"ಅರೆ ರೆ ರೆ ಪಂಚರಂಗಿ" | ಅಕ್ಷತ ರಾಮನಾಥ್, ಅನುರಾಧ ಭಟ್, ಕೇಶವ ಪ್ರಸಾದ್, ಬಂಟಿ, ಚೇತನ್ ಸೋಸ್ಕಾ | ಜಯಂತ್ ಕಾಯ್ಕಿಣಿ |
"ಲೈಫು ಇಷ್ಟೇನೆ" (ಶ್ಲೋಕ) | ಚೇತನ್ ಸೋಸ್ಕಾ | ಯೋಗರಾಜ ಭಟ್ |
"ನಿನ್ನಯ ನಲುಮೆಯ" | ಶ್ರೇಯಾ ಘೋಷಾಲ್ | ಜಯಂತ್ ಕಾಯ್ಕಿಣಿ |
"ಪಂಚರಂಗಿ ಹಾಡುಗಳು" | ಹೇಮಂತ್, ಯೋಗರಾಜ ಭಟ್ | ಯೋಗರಾಜ ಭಟ್ |
ತಯಾರಿಕೆ[ಬದಲಾಯಿಸಿ]
ಪಂಚರಂಗಿ ಚಿತ್ರವನ್ನು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಚಿತ್ರಿಸಲಾಗಿದೆ.
ಉಲ್ಲೇಖಗಳು[ಬದಲಾಯಿಸಿ]
ಬಾಹ್ಯ ಸಂಪರ್ಕ[ಬದಲಾಯಿಸಿ]
- "ಪಂಚರಂಗಿ is all about Life Istene," says Yogaraj ಭಟ್ Oneindia
- ಸೋನು ನಿಗಮ್, Puneet unveil ಪಂಚರಂಗಿ audio
![]() |
ಈ ಲೇಖನ related to a Kannada film ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |