ವಿಷಯಕ್ಕೆ ಹೋಗು

ಐಂದ್ರಿತಾ ರೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐ೦ದ್ರಿತಾ ರೇ ಇಂದ ಪುನರ್ನಿರ್ದೇಶಿತ)
Aindrita Ray CCL

ಐಂದ್ರಿತಾ ರೇ ರವರು ಭಾರತೀಯ ನಟಿ[] ಅದರಲ್ಲಿ ಮೊದಲು ಕನ್ನಡ ಹಾಗೂ ಬೆಂಗಾಲಿ ಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. ಅವರು ೨೦೦೭ ರಲ್ಲಿ ಮೆರವಣಿಗೆ ಚಿತ್ರದಲ್ಲಿ ನಟಿಸಿ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ.[]

ಆರ೦ಭಿಕ ಜೀವನ ಮತ್ತು ಹಿನ್ನಲೆ

[ಬದಲಾಯಿಸಿ]

ಐಂದ್ರಿತಾ ರವರು ರಾಜಸ್ಥಾನಉದಯಪುರ ದಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ನಂತರ ತಮ್ಮ ಬಾಲ್ಯವನ್ನು ಮುಂಬಯಿ ನಲ್ಲಿ ಕಳೆದರು. ಇವರು "ಬಾಲ್ಡ್ವನ್ ಗರ್ಲ್ಸ್ ಹೈ ಸ್ಕೂಲ್" ನಲ್ಲಿ ತಮ್ಮ ವಿದ್ಯಾಭ್ಯಾಸ ವನ್ನು ಮಾಡಿದರು. ನಂತರ ಬೆಂಗಳೂರಿನಲ್ಲಿ "ಬಿ.ಆರ್ ಅಂಬೇಡ್ಕರ್ ಡೆಂಟಲ್" ಕಾಲೇಜಿನಲ್ಲಿ ದಂತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಮುಂದಿನ ಅಧ್ಯಯನ ಮಾಡುವಾಗ ಉಳಿದ ಸಮಯದಲ್ಲಿ ಮಾಡೆಲಿಂಗ್ ಮಾಡಿದರು, ದೂರದರ್ಶನದ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು, ಹಾಗೂ ಚಿತ್ರರಂಗಕ್ಕೆ ಪ್ರವೇಶಿಸಿದರು.

ನಟನಾ ವೃತ್ತಿಜೀವನ

[ಬದಲಾಯಿಸಿ]

೨೦೦೬ ರಲ್ಲಿ ಮೊದಲು "ಜಾಕ್ಪಾಟ್" ಎಂಬ ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.[] ನಂತರ ೨೦೦೮ ರಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಮೆರವಣಿಗೆ ಚಿತ್ರದಲ್ಲಿ ನಟಿಸಿದರು ಹಾಗೂ ಅದೇ ವರ್ಷದಲ್ಲಿ "ಮಸ್ತ್ ಮಜಾ ಮಾಡಿ" ಚಿತ್ರದಲ್ಲಿ ಕಾಣಿಸಿಕೊಂಡರು. ೨೦೦೯ ರಲ್ಲಿ ಚಿರಂಜೀವಿ ಸರ್ಜಾ ರವರ ಜೊತೆ ವಾಯುಪುತ್ರ ಎಂಬ ಚಿತ್ರದಲ್ಲಿ ಅಭಿನಯಿಸಿದರು. ನಂತರ ಲವ್ ಗುರು ಹಾಗೂ ದುನಿಯಾ ವಿಜಯ್ ಜೊತೆ ಜಂಗ್ಲಿ ಚಿತ್ರವನ್ನು ಮಾಡಿದರು. ನಂತರ ೨೦೧೦ ರಲ್ಲಿ ೫ ಚಿತ್ರಗಳಲ್ಲಿ ಅಭಿನಯಿಸಿದರು,"ವೀರ ಪರಂಪರೆ", "ಜನುಮ ಜನುಮದಲ್ಲೂ", "ನೂರು ಜನ್ಮಕು", ಮತ್ತು ಹಿಂದಿಯಲ್ಲಿ "ಎ ಫ್ಲಾಟ್". ಇದಾದ ನಂತರ ಪುನೀತ್ ರಾಜ್‌ಕುಮಾರ್ ಜೊತೆ "ಪರಮಾತ್ಮ" ಚಿತ್ರದಲ್ಲಿ ನಟಿಸಿದರು. ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಐ೦ದ್ರಿತಾರವರು ೧೨, ಡಿಸೆ೦ಬರ್ ೨೦೧೮ ರ೦ದು ನಟ ದಿಗಂತ್ ರವರನ್ನು ಮದುವೆಯಾದರು.[][][]

ಸಿನಿಮಾಗಳು

[ಬದಲಾಯಿಸಿ]
ಕ್ರ.ಸಂಚಿತ್ರಪಾತ್ರವರ್ಷ
೦೧ಮೆರವಣಿಗೆನಂದಿನಿ೨೦೦೮
೦೨ಮಾಸ್ತ್ ಮಜಾ ಮಾಡಿಅತಿಥಿ ಪಾತ್ರ೨೦೦೮
೦೩ಜಂಗ್ಲಿಪದ್ಮಾ೨೦೦೯
೦೪ವಾಯುಪುತ್ರದಿವ್ಯಾ೨೦೦೯
೦೫ಲವ್ ಗುರು-೨೦೦೯
೦೬ಮನಸಾರೆದೇವಿಕಾ೨೦೦೯
೦೭ನನ್ನವನುಸಂಜನಾ೨೦೧೦
೦೮ವೀರ ಪರಂಪರೆ ಪೂಜಾ೨೦೧೦
೦೯ಜನುಮ ಜನುಮದಲ್ಲೂ-೨೦೧೧
೧೦ಧೂಳ್ ಪ್ರಿಯಾ೨೦೧೧
೧೧ಪರಮಾತ್ಮಸಾನ್ವಿ೨೦೧೧
೧೨ಮನಸಿನ ಮಾತು ಸಹನಾ೨೦೧೧
೧೩ಪಾರಿಜಾತ ಚಂದ್ರಿಕಾ೨೦೧೨
೧೪ಪ್ರೇಮ್ ಅಡ್ಡ -೨೦೧೨
೧೫ರಜಿನಿ ಕಾಂತ ಪ್ರಿಯಾ೨೦೧೩
೧೬ಕಡ್ಡಿಪುಡಿ ದೇಸಿ೨೦೧೩
೧೭ಟೋನಿ ಪಮ್ಮಿ೨೦೧೩
೧೮ಭಜರಂಗಿ ಗೀತಾ೨೦೧೩
೧೯ಅತಿ ಅಪರೂಪಅಪರ್ಣಾ೨೦೧೪
೨೦ಶಾರ್ಪ್ ಶೂಟರ್ ಅತಿಥಿ ಪಾತ್ರ೨೦೧೫
೨೧ಮುಂಗಾರು ಮಳೆ ೨ಶ್ರೇಯಾ೨೦೧೬
೨೨ಜಾನ್ ಜಾನಿ ಜನಾರ್ಧನ್ಅತಿಥಿ ಪಾತ್ರ೨೦೧೬
೨೩ನಿರುತ್ತರಶ್ರವ್ಯಾ೨೦೧೬
೨೪ಚೌಕ ಪುಷ್ಪ೨೦೧೭
೨೫ಮೇಲುಕೋಟೆ ಮಂಜ -೨೦೧೭

ಉಲ್ಲೇಖಗಳು

[ಬದಲಾಯಿಸಿ]