ವಿಷಯಕ್ಕೆ ಹೋಗು

ನೇಪಾಳದ ಧ್ವಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Federal Democratic Republic of Nepal
ಹೆಸರುTriangle Flag
ಬಳಕೆರಾಷ್ಟ್ರ ಧ್ವಜ ಚಿತ್ರ:FIAV mirror.svg
ಅನುಪಾತsee below
ಸ್ವೀಕರಿಸಿದ್ದು16 ಡಿಸೆಂಬರ್ 1962; 22650 ದಿನ ಗಳ ಹಿಂದೆ (1962-೧೨-16)
ವಿನ್ಯಾಸTwo juxtaposed triangular figures creating an irregular pentagon with a red-coloured base and deep blue borders, there being a white emblem of the crescent moon with eight rays visible out of sixteen in the upper part and a white emblem of a twelve rayed sun in the lower part[]
ವಿನ್ಯಾಸಗೊಳಿಸಿದವರುPrithvi Narayan Shah (original)
Shankar Nath Rimal
(modern)

ನೇಪಾಳ ರಾಷ್ಟ್ರೀಯ ಧ್ವಜವು ವಿಶ್ವದ ಏಕೈಕ ಆಯತಾಕಾರವಲ್ಲದ ಧ್ವಜವಾಗಿದ್ದು ಇದನ್ನು ಸಾರ್ವಭೌಮ ದೇಶವಾದ ನೇಪಾಳದ ರಾಜ್ಯ ಮತ್ತು ನಾಗರಿಕ ಧ್ವಜ ವಾಗಿ ಬಳಸಲಾಗುತ್ತದೆ.[lower-alpha ೧] ಧ್ವಜವು ಡಬಲ್-ಪೆನ್ನಾನ್ ಎಂದು ಕರೆಯಲ್ಪಡುವ ಎರಡು ಏಕ ಪೆನ್ನಂಟ್ಗಳ ಸರಳೀಕೃತ ಸಂಯೋಜನೆಯಾಗಿದೆ. ಇದರ ಕಡುಗೆಂಪು ಬಣ್ಣವು ಶೌರ್ಯದ ಸಂಕೇತವಾಗಿದೆ ಮತ್ತು ಇದು ನೇಪಾಳದ ರಾಷ್ಟ್ರೀಯ ಹೂವಿನ ರೋಡೋಡೆಂಡ್ರಾನ್ ಬಣ್ಣವನ್ನು ಪ್ರತಿನಿಧಿಸುತ್ತದೆ. ಇದರ ನೀಲಿ ಅಂಚು ಶಾಂತಿಯ ಬಣ್ಣವಾಗಿದೆ. 1962ರವರೆಗೆ ಧ್ವಜದ ಚಿಹ್ನೆಗಳು ಸೂರ್ಯ ಮತ್ತು ಅರ್ಧಚಂದ್ರ ಹಾಗೂ ಮಾನವ ಮುಖಗಳನ್ನು ಹೊಂದಿದ್ದವು. ಆದರೆ ಧ್ವಜವನ್ನು ಆಧುನೀಕರಿಸಲು ಅವುಗಳನ್ನು ತೆಗೆದುಹಾಕಲಾಯಿತು.

ಹೊಸ ಸಾಂವಿಧಾನಿಕ ಸರ್ಕಾರದ ರಚನೆಯೊಂದಿಗೆ ಪ್ರಸ್ತುತ ಧ್ವಜವನ್ನು ಡಿಸೆಂಬರ್ 16,1962 ರಂದು ಅಂಗೀಕರಿಸಲಾಯಿತು []. ಸಿವಿಲ್ ಇಂಜಿನಿಯರ್ ಆಗಿದ್ದ ಶಂಕರ್ ನಾಥ್ ರಿಮಲ್ ಅವರು ರಾಜ ಮಹೇಂದ್ರ[]ಆವರ ಕೋರಿಕೆಯ ಮೇರೆಗೆ ಧ್ವಜವನ್ನು ಈಗಿನ ವಿನ್ಯಾಸಕ್ಕೆ ತಂದರು. ಇದು 19 ಮತ್ತು 20ನೇ ಶತಮಾನಗಳಾದ್ಯಂತ ಬಳಸಲಾದ ಮೂಲ, ಸಾಂಪ್ರದಾಯಿಕ ವಿನ್ಯಾಸದಿಂದ ಎರವಲು ಪಡೆದಿದೆ ಮತ್ತು ಇದು ಆಡಳಿತ ರಾಜವಂಶದ ಪ್ರತಿಸ್ಪರ್ಧಿ ಶಾಖೆಗಳು ಬಳಸುವ ಎರಡು ಪ್ರತ್ಯೇಕ ಪೆನ್ನಾನ್ಗಳ ಸಂಯೋಜನೆಯಾಗಿದೆ.[]

ಇತಿಹಾಸ

[ಬದಲಾಯಿಸಿ]
ಕುರುಕ್ಷೇತ್ರ ಯುದ್ಧ ಸಮಯದಲ್ಲಿ ಕೃಷ್ಣ ಮತ್ತು ಅರ್ಜುನ ಮಹಾಭಾರತ ರಥದಲ್ಲಿ ಬಳಸಿದ ಇದೇ ರೀತಿಯ (ಬಲ ಧ್ವಜ) ಧ್ವಜವನ್ನು ನೇಪಾಳ ಬಳಸುತ್ತಿತ್ತು. ಸಾಂಪ್ರದಾಯಿಕವಾಗಿ ನೇಪಾಳದ ರಾಜರು ಹಿಂದೂಗಳಾಗಿದ್ದರು ಮತ್ತು ವಿಷ್ಣು ಪುನರ್ಜನ್ಮ ಪರಿಗಣಿಸಲಾಗಿತ್ತು.
ನೇಪಾಳದ ಧ್ವಜ (ಕ್ರಿ. ಶ. 1856-ಕ್ರಿ. ಶ )
ನೇಪಾಳದ ಧ್ವಜ (1930-1962)

ಐತಿಹಾಸಿಕವಾಗಿ ದಕ್ಷಿಣ ಏಷ್ಯಾದಲ್ಲಿ ತ್ರಿಕೋನ ಆಕಾರದ ಧ್ವಜಗಳು ಬಹಳ ಸಾಮಾನ್ಯವಾಗಿದ್ದವು. ಏಕೆಂದರೆ ಇದು ಗಾತ್ರದಲ್ಲಿ ಸಾಂದ್ರವಾಗಿರುವುದರಿಂದ ಧ್ವಜವು ಕಡಿಮೆ ಗಾಳಿಯೊಂದಿಗೆ ಸಹ ಹಾರಾಡುತ್ತಿತ್ತು. ಹೀಗಾಗಿ ಇದು ದೂರದವರೆಗೆ ಗೋಚರಿಸುತ್ತಿತ್ತು,   [ಉಲ್ಲೇಖದ ಅಗತ್ಯವಿದೆ] ತ್ರಿಕೋನ ಧ್ವಜಗಳ ಕುರುಹುಗಳನ್ನು ಹಿಂದೂ ಧರ್ಮದಲ್ಲಿ ಕಾಣಬಹುದು. ಧ್ವಜದ ಇತಿಹಾಸ ಅಸ್ಪಷ್ಟವಾಗಿದೆ ಮತ್ತು ಅದರ ಸೃಷ್ಟಿಕರ್ತನ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳಿಲ್ಲ. ನೇಪಾಳವು ಐತಿಹಾಸಿಕವಾಗಿ ತನ್ನ ಇತಿಹಾಸದುದ್ದಕ್ಕೂ ಚತುರ್ಭುಜ ಧ್ವಜಗಳು ಮತ್ತು ಚತುಷ್ಕೋಣವಲ್ಲದ ಧ್ವಜಗಳನ್ನು ಬಳಸಿದೆ.[]

ದಕ್ಷಿಣ ಏಷ್ಯಾದ ಬಹುತೇಕ ಎಲ್ಲಾ ರಾಜ್ಯಗಳ ಧ್ವಜಗಳು ಒಂದು ಕಾಲದಲ್ಲಿ ತ್ರಿಕೋನವಾಗಿದ್ದವು. ನೇಪಾಳದ ಬಗ್ಗೆ 1928 ರ ಫ್ರೆಂಚ್ ಪುಸ್ತಕವು ಆಧುನಿಕ ನೀಲಿ ಬಣ್ಣಕ್ಕಿಂತ ಹಸಿರು ಅಂಚಿನೊಂದಿಗೆ ಎರಡು ಪೆನ್ನಂಟ್ ಧ್ವಜವನ್ನು ತೋರಿಸುತ್ತದೆ. ನೇಪಾಳದ ಸುತ್ತಮುತ್ತಲಿನ ಹಿಂದೂ ಮತ್ತು ಬೌದ್ಧ ದೇವಾಲಯಗಳಲ್ಲಿ ಹೆಚ್ಚಾಗಿ ಬಳಸಲಾಗುವ ಇತರ ರೀತಿಯ ಧ್ವಜಗಳಿವೆ.

ಅನೇಕ ದಾಖಲೆಗಳು ರಾಜ ಪೃಥ್ವಿ ನಾರಾಯಣ್ ಷಾನ ಎರಡು-ದಂಡದ ರಚನೆಯ ದಿನಾಂಕವನ್ನು ಸೂಚಿಸುತ್ತವೆ. ಪ್ರಾಚೀನ ಗೂರ್ಖಾ ಸಾಮ್ರಾಜ್ಯದ ಧ್ವಜವು ಕೆಂಪು ಬಣ್ಣವನ್ನು ಹೊಂದಿದ್ದ ಮತ್ತು ಧ್ವಜದಲ್ಲಿ ವಿವಿಧ ದೇವತೆಗಳು ಮತ್ತು ಇತರ ಚಿಹ್ನೆಗಳನ್ನು ಸಂಕೇತವಾಗಿ ಹೊಂದಿದ್ದ ಷಾ ರಾಜರ ಏಕೈಕ ತ್ರಿಕೋನ ಯುದ್ಧ ಧ್ವಜವಾಗಿ ಪ್ರಾರಂಭವಾಯಿತು. ಪೃಥ್ವಿ ನಾರಾಯಣ್ ಷಾ ನೇಪಾಳದ ಎಲ್ಲಾ ಸಣ್ಣ ಸಂಸ್ಥಾನಗಳನ್ನು ಒಗ್ಗೂಡಿಸಿದ ನಂತರ, ಎರಡು-ಪೆನ್ನಾನ್ ಧ್ವಜವು ಪ್ರಮಾಣಿತ ಧ್ವಜವಾಯಿತು. ಕೆಲವು ಇತಿಹಾಸಕಾರರ ಪ್ರಕಾರ, ರಾಣಾ ರಾಜ ಜಂಗ್ ಬಹದ್ದೂರ್ ಸೂರ್ಯ ಮತ್ತು ಚಂದ್ರನ ಚಿಹ್ನೆಗಳನ್ನು ಚಂದ್ರ ರಾಜವಂಶದ ರಜಪೂತರಾಗಿ ಮತ್ತು ರಾಣರೇ ಸೌರ ರಾಜವಂಶದ ರಜಪೂತರು ಎಂದು ಸಂಕೇತಿಸುತ್ತಾ ಸೂರ್ಯ ಮತ್ತು ಚಂದ್ರರ ಮುಖಗಳಾಗಿ ಬದಲಾಯಿಸಿದನು. ನೇಪಾಳವು ತನ್ನ ಪ್ರಾಚೀನ ಸಂಪ್ರದಾಯವನ್ನು ಸರಳವಾಗಿ ಉಳಿಸಿಕೊಂಡಿದೆ. ಆದರೆ ಇತರ ಎಲ್ಲ ರಾಜ್ಯಗಳು ಯುರೋಪಿಯನ್ ವೆಕ್ಸಿಲೋಲಾಜಿಕಲ್ ಸಂಪ್ರದಾಯದಲ್ಲಿ ಆಯತಾಕಾರದ ಅಥವಾ ಚೌಕಾಕಾರದ ಆವೃತ್ತಿಯನ್ನು ಅಳವಡಿಸಿಕೊಂಡಿವೆ.[]

ನೇಪಾಳದ ಧ್ವಜ (1927-1930)

ನೇಪಾಳದ ಪ್ರಸ್ತುತ ಧ್ವಜವನ್ನು 1962ರ ಡಿಸೆಂಬರ್ 16ರಂದು ಅಂಗೀಕರಿಸಲಾದ ನೇಪಾಳದ ಸಂವಿಧಾನದ ಅಡಿಯಲ್ಲಿ ಅಂಗೀಕರಿಸಲಾಯಿತು. ಆಧುನಿಕ ಧ್ವಜವು ಪ್ರಾಚೀನ ಮುಸ್ತಾಂಗ್ ಸಾಮ್ರಾಜ್ಯ ಧ್ವಜ ಮತ್ತು ಹಿಂದಿನ ಗೂರ್ಖಾ ಸಾಮ್ರಾಜ್ಯ ಬಳಸುತ್ತಿದ್ದ ಧ್ವಜದ ಸಂಯೋಜನೆಯಾಗಿದೆ ಎಂದು ತೋರುತ್ತದೆ. ಬಣ್ಣದ ಇಳಿಜಾರುಗಳನ್ನು ಮುಸ್ತಾಂಗ್ ಸಾಮ್ರಾಜ್ಯದಿಂದ ಅಳವಡಿಸಿಕೊಳ್ಳಲಾಗಿದೆ. 1962ಕ್ಕಿಂತ ಮೊದಲು, ಧ್ವಜದ ಮೇಲಿನ ಸೂರ್ಯ ಮತ್ತು ಚಂದ್ರನ ಎರಡೂ ಚಿಹ್ನೆಗಳು ಮಾನವ ಮುಖಗಳನ್ನು ಹೊಂದಿದ್ದವು. ಜನರು ಅದನ್ನು ತಪ್ಪಾಗಿ ಚಿತ್ರಿಸುತ್ತಿದ್ದ ಕಾರಣ, ಸಂವಿಧಾನವು ಧ್ವಜದ ನಿಖರವಾದ ಗಾತ್ರ ಮತ್ತು ಆಕಾರಕ್ಕೆ ಸಂಪೂರ್ಣ ವಿಭಾಗವನ್ನು ಮೀಸಲಿಟ್ಟಿತು. ಈ ಅವಧಿಯಲ್ಲಿ ದೇಶದಲ್ಲಿ ಅನೇಕ ಸಂವಿಧಾನಗಳನ್ನು ಪರಿಚಯಿಸಲಾಗಿದ್ದರೂ ಈ ವಿಭಾಗವು ಇಂದಿಗೂ ಮುಂದುವರೆದಿದೆ.   [citation needed]

ಮೇ 2008 ರಲ್ಲಿ ಹೊಸ ಸಂವಿಧಾನದ ಕರಡು ತಯಾರಿಕೆಯ ಸಮಯದಲ್ಲಿ, ವಿವಿಧ ರಾಜಕೀಯ ಪಕ್ಷಗಳು ಧ್ವಜದ ವಿನ್ಯಾಸದಲ್ಲಿ ಬದಲಾವಣೆಗಳನ್ನು ಕೋರಿದ್ದವು. ಏಕೆಂದರೆ ಇದು ಹಿಂದೂ ಧರ್ಮ ಮತ್ತು ರಾಜಪ್ರಭುತ್ವವನ್ನು ಸಂಕೇತಿಸುತ್ತದೆ ಎಂಬುದು ಅವರ ನಿಲುವಾಗಿತ್ತು. ಆದರೆ ಈ ಪ್ರಸ್ತಾಪವನ್ನು ತಿರಸ್ಕರಿಸಲಾಯಿತು.[]

ನೇಪಾಳ-ಟಿಬೆಟ್ ಯುದ್ಧ, ನೇಪಾಳ-ಬ್ರಿಟಿಷ್ ಯುದ್ಧ ಮತ್ತು ಎರಡೂ ವಿಶ್ವ ಯುದ್ಧಗಳ ಸಮಯದಲ್ಲಿ ಬಳಸಲಾದ ಧ್ವಜ

ಸಾಂಕೇತಿಕತೆ

[ಬದಲಾಯಿಸಿ]

ಆಧುನಿಕ ಕಾಲದಲ್ಲಿ ಧ್ವಜದ ಸಂಕೇತವು ಹಲವಾರು ಅರ್ಥಗಳನ್ನು ಅಳವಡಿಸಲು ವಿಕಸನಗೊಂಡಿದೆ. ಕೆಂಪು ಬಣ್ಣವು ನೇಪಾಳಿ ಜನರ ಶೌರ್ಯವನ್ನು ಸೂಚಿಸುತ್ತದೆ ಮತ್ತು ಇದು ದೇಶದ ರಾಷ್ಟ್ರೀಯ ಬಣ್ಣವಾಗಿದೆ ಮತ್ತು ನೀಲಿ ಗಡಿಯು ಶಾಂತಿ ಮತ್ತು ಸಾಮರಸ್ಯವನ್ನು ಪ್ರತಿನಿಧಿಸುತ್ತದೆ. ಈ ಬಣ್ಣಗಳು ನೇಪಾಳಿ ಅಲಂಕಾರ ಮತ್ತು ಕಲಾಕೃತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಒಂದು ಸಿದ್ಧಾಂತದ ಪ್ರಕಾರ, ಈ ಎರಡು ಅಂಶಗಳು ಕ್ರಮವಾಗಿ ಚಂದ್ರ ಮತ್ತು ಸೂರ್ಯನ ಚಿಹ್ನೆಗಳನ್ನು ಬಳಸಿಕೊಂಡು ಶಾಂತಿ ಮತ್ತು ಕಠಿಣ ಪರಿಶ್ರಮವನ್ನು ಪ್ರತಿನಿಧಿಸುತ್ತವೆ. ಸಾಂಪ್ರದಾಯಿಕವಾಗಿ ನೇಪಾಳದ ಧ್ವಜವು ಹಿಂದೂ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿರುವ ಹಿಂದೂ ಧರ್ಮದಿಂದ ಬಂದಿದೆ. ಆದಾಗ್ಯೂ, ಆಧುನಿಕ ಮತ್ತು ಸರ್ಕಾರ-ಅನುಮೋದಿತ ಪ್ರಾತಿನಿಧ್ಯವು ದೇಶದ ಪ್ರಮುಖ ಧರ್ಮಗಳಾದ ಹಿಂದೂ ಧರ್ಮ ಮತ್ತು ಬೌದ್ಧ ಧರ್ಮಗಳದ್ದಾಗಿದೆ.[]

ಧ್ವಜದ ವಿನ್ಯಾಸ

[ಬದಲಾಯಿಸಿ]

ನೇಪಾಳದ ರಾಷ್ಟ್ರೀಯ ಧ್ವಜದ ನಿಖರವಾದ ಜ್ಯಾಮಿತೀಯ ವಿವರಣೆಯನ್ನು 1990ರ ನವೆಂಬರ್ 9ರಂದು ಅಂಗೀಕರಿಸಲಾದ ನೇಪಾಳ ಸಾಮ್ರಾಜ್ಯದ ಹಿಂದಿನ ಸಂವಿಧಾನದ ಪರಿಚ್ಛೇದ 5, ವೇಳಾಪಟ್ಟಿ 1ರಲ್ಲಿ ನಿರ್ದಿಷ್ಟಪಡಿಸಲಾಗಿದೆ. 20 ಸೆಪ್ಟೆಂಬರ್ 2015 ರಂದು ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನ ವೇಳಾಪಟ್ಟಿ 1, ನೇಪಾಳದ ರಾಷ್ಟ್ರಧ್ವಜವನ್ನು ತಯಾರಿಸುವ ನಿರ್ದಿಷ್ಟ ವಿಧಾನವನ್ನು ವಿವರಿಸುತ್ತದೆ.[]

Overview about the construction of Nepal's flag
ನೇಪಾಳದ ಧ್ವಜದ ನಿರ್ಮಾಣದ ಅವಲೋಕನ

ಆಕಾರ ಅನುಪಾತ

[ಬದಲಾಯಿಸಿ]

ಹೇಳಲಾದ ಜ್ಯಾಮಿತೀಯ ನಿರ್ಮಾಣ ಕಾನೂನಿನ ಪ್ರಕಾರ ನಿರ್ಮಿಸಿದಾಗ, ಧ್ವಜದ ಎತ್ತರ ಮತ್ತು ಉದ್ದದ ಅಗಲದ ಅನುಪಾತ ಅಭಾಗಲಬ್ಧ ಸಂಖ್ಯೆ. ತ್ರಿಕೋನಗಳ ಹೈಪೊಟೆನ್ಯೂಸ್ಗೆ ಇದು ಸಾಮಾನ್ಯವಾಗಿದೆ.

ಒಲಿಂಪಿಕ್ಸ್ನಲ್ಲಿ ಬದಲಾವಣೆಗಳು

[ಬದಲಾಯಿಸಿ]
2016ರ ಕೆಲವು ಒಲಿಂಪಿಕ್ ಸ್ಥಳಗಳಲ್ಲಿ ನೇಪಾಳಕ್ಕೆ ಬಳಸಲಾದ ಧ್ವಜ.

ನೇಪಾಳದ ಧ್ವಜದ ನಿಖರವಾದ ಅನುಪಾತದಿಂದಾಗಿ ದೊಡ್ಡ ಪ್ರಮಾಣದ ಉತ್ಪಾದನೆಯು ಕಷ್ಟಕರವಾಗಿದೆ ಮತ್ತು ದೊಡ್ಡ ಘಟನೆಗಳ ಸಮಯದಲ್ಲಿ ಅದು ಸಂಪೂರ್ಣವಾಗಿ ಆಕಾರದಿಂದ ಹೊರಗುಳಿಯುವುದು ಸಾಮಾನ್ಯವಾಗಿದೆ. ಪ್ರಸ್ತುತ ಒಲಿಂಪಿಕ್ ಶಿಷ್ಟಾಚಾರವು ಕ್ರೀಡಾಕೂಟದಲ್ಲಿ ಬಳಸುವ ಎಲ್ಲಾ ಧ್ವಜಗಳನ್ನು 2:3 ಅನುಪಾತದಲ್ಲಿ ತಯಾರಿಸಬೇಕು ಎಂದು ನಿರ್ಧರಿಸುತ್ತದೆ. 2016ರ ಬೇಸಿಗೆ ಒಲಿಂಪಿಕ್ಸ್ನ ಕೆಲವು ಸ್ಥಳಗಳಲ್ಲಿ ಪ್ರದರ್ಶಿಸಲಾದ ಧ್ವಜಗಳಂತಹ ಕೆಲವು ಸಂದರ್ಭಗಳಲ್ಲಿ, ಧ್ವಜವನ್ನು ಬಿಳಿ ಬಟ್ಟೆಯ ಮೇಲೆ ಮುದ್ರಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, 2020ರ ಬೇಸಿಗೆ ಒಲಿಂಪಿಕ್ಸ್ನ ಶಿಷ್ಟಾಚಾರ ಕೈಪಿಡಿಯಲ್ಲಿ ನೇಪಾಳವನ್ನು ಪ್ರಮಾಣಿತ ಗಾತ್ರದ ಅವಶ್ಯಕತೆಗೆ ಏಕೈಕ ವಿನಾಯಿತಿಯೆಂದು ನಿರ್ದಿಷ್ಟವಾಗಿ ಹೆಸರಿಸಲಾಗಿದೆ. ಬದಲಿಗೆ ನೇಪಾಳದ ಧ್ವಜವು ಇತರ ಧ್ವಜಗಳಂತೆಯೇ ಎತ್ತರದಲ್ಲಿರಬೇಕು ಎಂದೂ ನಿಯಮದಲ್ಲಿ ತಿಳಿಸಲಾಗಿದೆ.

ತಪ್ಪಾದ ಆವೃತ್ತಿಗಳು

[ಬದಲಾಯಿಸಿ]

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2018ರಲ್ಲಿ ಜನಕ್ಪುರಕ್ಕೆ ಭೇಟಿ ನೀಡಿದಾಗ, ತಪ್ಪಾದ ಆಕಾರ ಮತ್ತು ಜ್ಯಾಮಿತೀಯ ಅನುಪಾತಗಳನ್ನು ಹೊಂದಿರುವ ಧ್ವಜದ ಆವೃತ್ತಿಯನ್ನು ಅಧಿಕಾರಿಗಳು ಹಾರಿಸಿದರು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ರಾಷ್ಟ್ರೀಯ ಸಿಬ್ಬಂದಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು.[೧೦]

ಇದನ್ನೂ ನೋಡಿ

[ಬದಲಾಯಿಸಿ]

 

ಉಲ್ಲೇಖಗಳು

[ಬದಲಾಯಿಸಿ]
  1. "Part-1(8) National Flag", Constitution of Nepal (in ಅಮೆರಿಕನ್ ಇಂಗ್ಲಿಷ್), Nepal Law Commission, 2015, archived from the original on 4 June 2020, retrieved 2020-05-22
  2. "Flag of Nepal". Encyclopedia Britannica. Archived from the original on 18 November 2020. Retrieved 24 July 2018.
  3. रातोपाटी. "यसरी बनेको थियो राष्ट्रिय झण्डाको डिजाइन्, चन्द्र–सूर्य र त्रिकोणको अर्थ के ?". RatoPati (in ನೇಪಾಳಿ). Archived from the original on 31 May 2022. Retrieved 2022-02-28.
  4. "Flag of Federal Democratic Republic of Nepal". CRW Flags. Archived from the original on 20 November 2018. Retrieved 31 December 2018.
  5. Nosowitz, Dan (2018-09-03). "Decoding the Unusual Shape of the Nepali Flag". Atlas Obscura. Archived from the original on 18 November 2020. Retrieved 2022-07-09.
  6. "Nepal Flag : Interesting Fact about the Flag of Nepal". Our tech room. Archived from the original on 12 September 2019. Retrieved 8 September 2019.
  7. "Nepal constitution panel rejects Maoists bid on 'People's War'". The Hindu (in Indian English). 2009-12-26. ISSN 0971-751X. Archived from the original on 9 July 2022. Retrieved 2022-07-09.
  8. "What's with the funny shape of Nepal's flag?". Public Radio International (in ಅಮೆರಿಕನ್ ಇಂಗ್ಲಿಷ್). Archived from the original on 26 October 2021. Retrieved 24 July 2018.
  9. "Schedule-1 National Flag of Nepal" (in ಅಮೆರಿಕನ್ ಇಂಗ್ಲಿಷ್). Nepal Law Commission. Archived from the original on 12 October 2022. Retrieved 2020-05-22.
  10. "Ministry seeks explanation on disfigured national flag". Kathmandu post. Ekantipur. Archived from the original on 22 November 2018. Retrieved 24 July 2018.


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found