ವಿಷಯಕ್ಕೆ ಹೋಗು

ನೂರಾನ್ ಸಹೋದರಿಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ನೂರಾನ್ ಸಹೋದರಿಯರು
ಮೂಲಸ್ಥಳಜಲಂಧರ, ಭಾರತ
ಸಂಗೀತ ಶೈಲಿಶಾಮ ಚೌರಾಸಿಯಾ ಘರಾನಾ
ಸಕ್ರಿಯ ವರ್ಷಗಳು೨೦೧೦ (೨೦೧೦)–ಪ್ರಸ್ತುತ
ಸಧ್ಯದ ಸದಸ್ಯರು
  • ಜ್ಯೋತಿ ನೂರಾನ
  • ಸುಲ್ತಾನ ನೂರಾನ

ನೂರಾನ್ ಸಹೋದರಿಯರು - ಜ್ಯೋತಿ ನೂರಾನ್ ಮತ್ತು ಸುಲ್ತಾನಾ ನೂರಾನ್ - ಭಾರತದ ಜಲಂಧರ್‌ನ ಸೂಫಿ ಗಾಯನದ ಜೋಡಿಗಳು. ಅವರು ಶಾಮ್ ಚೌರಾಸಿಯಾ ಘರಾನಾ ಶಾಸ್ತ್ರೀಯ ಸಂಗೀತದಲ್ಲಿ ಪ್ರದರ್ಶಿಸುತಿದ್ದರು.

ಈ ಸಹೋದರಿಯರಿಗೆ ಬಾಲ್ಯದಿಂದಲೂ ಅವರ ತಂದೆ ಉಸ್ತಾದ್ ಗುಲ್ಶನ್ ಮಿರ್ ತಮ್ಮ ಮಕ್ಕಳಿಗೆ ಸಂಗೀತ ತರಬೇತಿಯನ್ನು ನೀಡಿದರು. ಉಸ್ತಾದ್ ಗುಲ್ಶನ್ ಮಿರ್ ಅವರು ಬೀಬಿ ನೂರಾನ್ ಅವರ ಮೊಮ್ಮಗ ಮತ್ತು ೧೯೭೦ ರ ದಶಕದ ಸೂಫಿ ಗಾಯಕ ಸ್ವರ್ಣ್ ನೂರಾನ್ ಅವರ ಮಗ. ಉಸ್ತಾದ್ ಗುಲ್ಶನ್ ಮಿರ್ ಅವರ ಪ್ರಕಾರ, ತನ್ನ ಕುಟುಂಬವು ಕಷ್ಟದ ಸಮಯದಲ್ಲಿದ್ದಾಗ, ಬೆಂಬಲಕ್ಕಾಗಿ ಸಂಗೀತ ಪಾಠಗಳನ್ನು ಹೇಳಿಕೊಡುತ್ತಿದ್ದರು. []

ಸುಲ್ತಾನಾ ನೂರಾನ್‍ಗೆ ಏಳು ವರ್ಷ ಮತ್ತು ಜ್ಯೋತಿ ನೂರಾನ್‍ಗೆ ಐದು ವರ್ಷವಾಗಿದ್ದಾಗ, ತಮ್ಮ ಅಜ್ಜಿಯಿಂದ ಕೇಳಿದ್ದ ಬುಲ್ಲೆಹ್ ಶಾ ಕಲಾಂ ಅವರ 'ಕುಲ್ಲಿ ವಿಚೋನ್ ನಿ ಯಾರ್ ಲಬ್ ಲೈ' ಎಂಬ ಹಾಡನ್ನು ಮನೆಯಲ್ಲಿ ಆಡುತ್ತಿದ್ದಾಗ ಹಾಡುತ್ತಿರುವುದನ್ನು ಕಂಡ ಗುಲ್ಶನ್ ಮಿರ್ ಅವರ ಪ್ರತಿಭೆಯನ್ನು ಕಂಡುಹಿಡಿದರು. ನಂತರ ಉಸ್ತಾದ್ ಗುಲ್ಶನ್ ಮಿರ್ ಅವರು ಇತರ ಸಂಗೀತ ವಾದ್ಯಗಳೊಂದಿಗೆ ಹಾಡಬಹುದೇ ಎಂದು ಸುಲ್ತಾನಾ ಮತ್ತು ಜ್ಯೋತಿಯನ್ನು ಕೇಳಿದರು. ತಬಲಾ ಮತ್ತು ಹಾರ್ಮೋನಿಯಂನೊಂದಿಗೆ ವೃತ್ತಿಪರವಾಗಿ ಹಾಡುತ್ತಿದ್ದ ಸುಲ್ತಾನಾ ಮತ್ತು ಜ್ಯೋತಿಯವರು ಸ್ವಲ್ಪವೂ ತಪ್ಪುತ್ತಿರಲ್ಲಿಲ್ಲ. ಕೆನಡಾದ ಸಂಗೀತ ಪ್ರವರ್ತಕರಾದ ಇಕ್ಬಾಲ್ ಮಹಲ್ ಅವರು ೨೦೧೦ ರಲ್ಲಿ ಈ ಸಹೋದರಿಯರನ್ನು ಗುರುತಿಸಿದರು ಮತ್ತು ಅವರ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ೨೦೧೩ ರಲ್ಲಿ, ಅವರು ಮೊದಲ ಬಾರಿಗೆ ನಾಕೋದರ್‌ನ ಬಾಬಾ ಮುರಾದ್ ಶಾ ದರ್ಗಾದಲ್ಲಿ ಈ ಸಹೋದರಿಯರು ಪ್ರದರ್ಶನ ನೀಡಿದರು ಮತ್ತು ಆ ರಾತ್ರಿಯಿಂದ ಅವರು ಜನಪ್ರಿಯರಾದರು. ಅವರ ಅಲ್ಲಾ ಹೂ ಹಾಡು ಯೂಟ್ಯೂಬ್‍ನಲ್ಲಿ ಪ್ರಸಿದ್ಧವಾಗಿಯತ್ತು. ಅದರ ನಂತರ, ಮೇ ಯಾರ್ ದ ದಿವಾನಾ" ಮತ್ತು ಪಟಾಖಾ ಗುಡ್ಡಿ ಮುಂತಾದ ಹಾಡುಗಳನ್ನು ಜೋಡಿಯಾಗಿ ಹಾಡಿ ಜನಪ್ರಿಯತೆಯನ್ನು ಗಳಿಸಿದರು. ಅವರು ಬಾಲಿವುಡ್ ಚಲನಚಿತ್ರಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ.

ವೃತ್ತಿ

[ಬದಲಾಯಿಸಿ]

ಅವರು ಹರ್ಪಾಲ್ ತಿವಾನಾ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ಹೆಚ್.ಟಿ.ಸಿ.ಪಿ.ಎಯಲ್ಲಿ) ದಿವಂಗತ ಗಝಲ್ ಮಾಂತ್ರಿಕ ಜಗಜಿತ್ ಸಿಂಗ್ ಅವರ ೭೨ ನೇ ಜನ್ಮದಿನದ ಪಾರ್ಟಿಯಲ್ಲಿ ಪ್ರದರ್ಶನ ನೀಡಿದರು ಮತ್ತು ಪಟಿಯಾಲ, ಪಂಜಾಬ್‌ದ ಭಾರತೀಯ ನಿವಾಸಿಗಳಿಂದ ಮೆಚ್ಚುಗೆಯನ್ನು ತಮ್ಮ ಪ್ರತಿಭೆಯ ಮೂಲಕ ಪಡೆದುಕೊಂಡರು. ಅವರು ಭಾರತದ ಎಮ್‍ಟಿವಿ ಟ್ಯಾಲೆಂಟ್ ಹಂಟ್ ಸರಣಿಯ ಎಮ್‍ಟಿವಿ ಸೌಂಡ್ ಟ್ರಿಪ್ಪಿಂಗ್‍ನಲ್ಲಿ ತಮ್ಮ "ಟುಂಗ್ ಟುಂಗ್" ಹಾಡಿನಿಂದ, ಮತ್ತು ನಂತರದಲ್ಲಿ ಎಮ್‍ಟಿವಿ ಅನ್‌ಪ್ಲಗ್ಡ್ ಮತ್ತು ಕೋಕ್ ಸ್ಟುಡಿಯೋದಿಂದ ಖ್ಯಾತಿಯನ್ನು ಗಳಿಸಿದರು. ಅವರು ೨೦೧೬ ಮತ್ತು ೨೦೧೭ ರಲ್ಲಿ ಢಾಕಾ ಇಂಟರ್ನ್ಯಾಷನಲ್ ಫೋಕ್ ಫೆಸ್ಟ್ ನಲ್ಲಿ ಪ್ರದರ್ಶನ ನೀಡಿದರು. ದಿ ಸ್ಕೈ ಈಸ್ ಪಿಂಕ್‌ ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡ 'ಫಾರ್ ಆಯಿಶಾ' ಎಂಬ ಹಾಡಿಗಾಗಿ ಅವರು ಮೆಂಬ(ಎಮ್.ಇ.ಎಮ್.ಬಿ.ಎ) ಮತ್ತು ಇವಾನ್ ಗಿಯಾರೊಂದಿಗೆ ಸಹಕರಿಸಿದರು.

ಬಾಲಿವುಡ್

[ಬದಲಾಯಿಸಿ]

ಅವರು ೨೦೧೪ ರಲ್ಲಿ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರೊಂದಿಗೆ ಹೈವೇ ಚಿತ್ರದಲ್ಲಿ ಪಟಖಾ ಗುಡ್ಡಿ ಹಾಡಿನ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಮೊದಲ ಅವಕಾಶವನ್ನು ಪಡೆದರು. ಅವರು ಹಾಡಿರುವ ಚಲನಚಿತ್ರಗಳು ಸುಲ್ತಾನ್, ಮಿರ್ಜ್ಯಾ, ದಂಗಲ್, ಜಬ್ ಹ್ಯಾರಿ ಮೀಟ್ ಸೇಜಲ್ ಮತ್ತು ಭಾರತ್ .

ಧ್ವನಿಮುದ್ರಿಕೆ

[ಬದಲಾಯಿಸಿ]
  • ನೂರಾನ್ ಸಿಸ್ಟರ್ಸ್‌ನಿಂದ ಸೂಫಿ ಮ್ಯಾಜಿಕ್ (ಲೈವ್)
  • ಚನ್ನೋ
  • ಮೇರಿ ಮಾ ಬೆಸ್ಟ್ ಆಫ್ ದುರ್ಗಾ ಮಾತಾ ಜಾಗರಣ್ ಭೆಂಟ್ಸ್ ಮತ್ತು ಭಜನ್ಸ್ ವೀರೇಂದ್ರ ಸಿಂಗ್

ಚಿತ್ರಕಥೆ

[ಬದಲಾಯಿಸಿ]
  • ಹೈವೇ (೨೦೧೪)
  • ಸಿಂಗ್ ಈಸ್ ಬ್ಲಿಂಗ್ (೨೦೧೫)
  • ದಮ್ ಲಗಾ ಕೆ ಹೈಶಾ (೨೦೧೫)
  • ತನು ವೆಡ್ಸ್ ಮನು: ರಿಟರ್ನ್ಸ್ (೨೦೧೫)
  • ಪಾಯುಮ್ ಪುಲಿ (೨೦೧೫ ಚಲನಚಿತ್ರ) (೨೦೧೫) (ತಮಿಳು)
  • ಸುಲ್ತಾನ್ (೨೦೧೬)
  • ಮಿರ್ಜ್ಯಾ(೨೦೧೬)
  • ಚಾರ್ ಸಾಹಿಬ್ಜಾದೆ: ರೈಸ್ ಆಫ್ ಬಂದಾ ಸಿಂಗ್ ಬಹದ್ದೂರ್ (೨೦೧೬)
  • ದಂಗಲ್ (೨೦೧೬)
  • ಜಬ್ ಹ್ಯಾರಿ ಮೆಟ್ ಸೇಜಲ್ (೨೦೧೭)
  • ಕರೀಬ್ ಕರೀಬ್ ಸಿಂಗಲ್ (೨೦೧೭)
  • ಬೋಗನ್ (೨೦೧೭) (ತಮಿಳು)
  • ಟೈಗರ್ ಜಿಂದಾ ಹೈ (೨೦೧೭)
  • ಸಾಹೇಬ್, ಬಿವಿ ಔರ್ ಗ್ಯಾಂಗ್‍ಸ್ಟರ್ 3 (೨೦೧೮)
  • ಮನ್‍ಮರ್ಝಿಯಾನ್ (೨೦೧೮)
  • ಶೂನ್ಯ (೨೦೧೮)
  • ಭಾರತ್ (೨೦೧೯)
  • ಕಿಸ್ಮತ್ 2 (೨೦೨೧), ಹಾಡು: "ಕಿಸ್ ಮೋಡ್ ತೆ", ಜ್ಯೋತಿ ನೂರಾನ್ ಮತ್ತು ಬಿ ಪ್ರಾಕ್ []

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
  • ಗಿಮಾ ಪ್ರಶಸ್ತಿಗಳು [] ೨೦೧೫
  • ಸ್ಕ್ರೀನ್ ಪ್ರಶಸ್ತಿಗಳು []

ಉಲ್ಲೇಖಗಳು

[ಬದಲಾಯಿಸಿ]
  1. "Highway to Fame". India Express. 29 January 2014. Retrieved 25 September 2017.
  2. "Kis Morh Te: Beautiful melody from 'Qismat 2' to release tomorrow". Times of India. 17 September 2021. Retrieved 18 September 2021.
  3. "GIMA » Winners for 2015". Archived from the original on 23 August 2017. Retrieved 25 September 2017.
  4. "And the AWARD goes to…". Indian Express. Mumbai. 30 January 2015. Retrieved 25 September 2017.


ಬಾಹ್ಯ ಕೊಂಡಿಗಳು

[ಬದಲಾಯಿಸಿ]