ವಿಷಯಕ್ಕೆ ಹೋಗು

ಸುಲ್ತಾನ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಲ್ತಾನ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಅಲಿ ಅಬ್ಬಾಸ್ ಜ಼ಫ಼ರ್
ನಿರ್ಮಾಪಕಆದಿತ್ಯ ಚೋಪ್ರಾ
ಲೇಖಕಅಲಿ ಅಬ್ಬಾಸ್ ಜ಼ಫ಼ರ್
ಇರ್ಷಾದ್ ಕಾಮಿಲ್ (ಗೀತಸಾಹಿತ್ಯ)
ಪಾತ್ರವರ್ಗಸಲ್ಮಾನ್ ಖಾನ್
ಅನುಷ್ಕಾ ಶರ್ಮಾ
ಸಂಗೀತಹಿನ್ನೆಲೆ ಸಂಗೀತ:
ಜೂಲಿಯಸ್ ಪಾಕಿಯಾಮ್
ಸಂಗೀತ:
ವಿಶಾಲ್-ಶೇಖರ್
ಛಾಯಾಗ್ರಹಣಆರ್ಟರ್ ಜ಼ುರಾವ್‍ಸ್ಕಿ
ಸಂಕಲನರಾಮೇಶ್ವರ್ ಎಸ್. ಭಗತ್
ಸ್ಟುಡಿಯೋಯಶ್ ರಾಜ್ ಫ಼ಿಲ್ಮ್ಸ್
ವಿತರಕರುಯಶ್ ರಾಜ್ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
 • 6 ಜುಲೈ 2016 (2016-07-06)
ಅವಧಿ170 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಂಡವಾಳ145 ಕೋಟಿ[೧]
ಬಾಕ್ಸ್ ಆಫೀಸ್ಅಂದಾಜು 623.33 ಕೋಟಿ[೨]

ಸುಲ್ತಾನ್ (ಅನುವಾದ: ರಾಜ) ೨೦೧೬ರ ಒಂದು ಹಿಂದಿ ಕ್ರೀಡಾಪ್ರಧಾನ ನಾಟಕೀಯ ಚಲನಚಿತ್ರ.[೩][೪][೫] ಇದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಯಶ್ ರಾಜ್ ಫ಼ಿಲ್ಮ್ಸ್ ಲಾಂಛನದಡಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಸಲ್ಮಾನ್‌ ಖಾನ್‌ ನಟಿಸಿದ್ದರೆ ಅವರ ಎದುರಾಗಿ ಅನುಷ್ಕಾ ಶರ್ಮಾ ನಟಿಸಿದ್ದಾರೆ. ಚಿತ್ರವು ಹರಿಯಾಣದ ಸುಲ್ತಾನ್ ಅಲಿ ಖಾನ್ ಎಂಬ ಕಾಲ್ಪನಿಕ ಪೈಲವಾನ ಕುಸ್ತಿಪಟು ಮತ್ತು ಮಾಜಿ ಕುಸ್ತಿ ಚ್ಯಾಂಪಿಯನ್ ಮೇಲೆ ಕೇಂದ್ರೀಕರಿಸುತ್ತದೆ. ಇವನ ಯಶಸ್ವಿ ವೃತ್ತಿಜೀವನವು ಅವನ ವೈಯಕ್ತಿಕ ಜೀವನದಲ್ಲಿ ಬಿರುಕನ್ನು ಸೃಷ್ಟಿಸಿರುತ್ತದೆ.[೬]

ಈ ಚಿತ್ರವು ವಿಶ್ವಾದ್ಯಂತ 6 ಜುಲೈ 2016ರಂದು ಬಿಡುಗಡೆಯಾಯಿತು. ಇದು ವಿಶ್ವಾದ್ಯಂತ ₹೬೨೩.೩೩ ಕೋಟಿಯಷ್ಟುಗಳಿಸಿತು.[೨]

ಕಥಾವಸ್ತು[ಬದಲಾಯಿಸಿ]

ಸುಲ್ತಾನ್ ಅಲಿ ಖಾನ್ ಮಧ್ಯಮ ವಯಸ್ಸಿನ ಜಾಟ್ ಪೆಹೆಲ್ವಾನಿ ಕುಸ್ತಿಪಟು ಮತ್ತು ಮಾಜಿ ಕುಸ್ತಿ ಚ್ಯಾಂಪಿಯನ್ ಆಗಿದ್ದು, ಹರಿಯಾಣದ ಒಂದು ಸಣ್ಣ ಪಟ್ಟಣದಲ್ಲಿ ಒಂಟಿ ಜೀವನವನ್ನು ನಡೆಸುತ್ತಿರುತ್ತಾನೆ. ಮಿ. ಪಟೇಲ್‍ನಿಂದ ಬೆಂಬಲಿತವಾದ ಒಂದು ಖಾಸಗಿ ಮಿಶ್ರ ಸಮರಕಲೆಗಳ ಕ್ರೀಡಾತಂಡದ ಸ್ಥಾಪಕನಾದ ಆಕಾಶ್ ಒಬೆರಾಯ್‍ನನ್ನು ಅವನ ತಂದೆ ಲೀಗ್‍ನ ಜನಪ್ರಿಯತೆಯನ್ನು ಕಾಪಾಡಲು ಸುಲ್ತಾನ್‍ನನ್ನು ಸೇರಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾನೆ. ಹರಿಯಾಣಾಕ್ಕೆ ಪ್ರಯಾಣ ಬೆಳೆಸಿ ಅವನು ಸುಲ್ತಾನ್ ಮುಂದೆ ಒಂದು ಪ್ರಸ್ತಾಪವನ್ನು ಇಡುತ್ತಾನೆ. ಆದರೆ ಸುಲ್ತಾನ್ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ ತಾನು ಕುಸ್ತಿಯಿಂದ ಸಂಪೂರ್ಣವಾಗಿ ನಿವೃತ್ತನಾಗಿದ್ದೇನೆ ಎಂದು ಹೇಳುತ್ತಾನೆ. ಅವನ ನಿವೃತ್ತಿಯ ಹಿಂದಿನ ಕಾರಣದ ಹುಡುಕಾಟದಲ್ಲಿ, ಆಕಾಶ್ ಸುಲ್ತಾನ್‍ನ ಹತ್ತಿರದ ಗೆಳೆಯ ಗೋವಿಂದ್‍ನನ್ನು ಭೇಟಿಯಾದಾಗ ಅವನು ಸುಲ್ತಾನ್‍ನ ವೃತ್ತಿಜೀವನ ಹೇಗೆ ಆರಂಭವಾಯಿತು ಎಂದು ಹೇಳುತ್ತಾನೆ.

೨೦೦೮ರ ವೇಳೆ, ಸುಲ್ತಾನ್ ರಾಜ್ಯ ಮಟ್ಟದ ಕುಸ್ತಿಪಟು ಮತ್ತು ಸ್ಥಳೀಯ ಕುಸ್ತಿ ತರಬೇತುದಾರ ಮಗಳಾದ ಆರ್ಫ಼ಾ ಹುಸೇನ್‍ಳನ್ನು ನೋಡಿ ತಕ್ಷಣ ಅವಳನ್ನು ಪ್ರೀತಿಸತೊಡಗುತ್ತಾನೆ. ಆರಂಭದಲ್ಲಿ ಅವಳು ಅವನೆದುರು ವಾತ್ಸಲ್ಯಹೀನಳಾಗಿ ಇದ್ದರೂ, ಸುಲ್ತಾನ್‍ನನ್ನು ಗೆಳೆಯನನ್ನಾಗಿ ಒಪ್ಪಿಕೊಳ್ಳುತ್ತಾಳೆ. ತಾವು ಬದ್ಧರಿರುವುದಾಗಿ ಅವನು ಸಾಧಿಸಲು ಆರಂಭಿಸಿದಾಗ, ತಾನು ಕೇವಲ ಚೆನ್ನಾಗಿ ತರಬೇತಿಪಡೆದ ಕುಸ್ತಿಪಟುವನ್ನು ಮದುವೆಯಾಗುವೆನು ಎಂದು ಹೇಳಿ ಅವನನ್ನು ಅವಮಾನಿಸುತ್ತಾಳೆ. ಅವಳ ಗೌರವವನ್ನು ಗೆಲ್ಲುವ ದೃಢಸಂಕಲ್ಪ ಮಾಡಿ, ಸುಲ್ತಾನ್ ತನ್ನನ್ನು ತಾನು ತೀವ್ರವಾದ ತರಬೇತಿಗೆ ಸಮರ್ಪಿಸಿಕೊಳ್ಳುತ್ತಾನೆ. ಅಂತಿಮವಾಗಿ ಒಂದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಗೆಲ್ಲುತ್ತಾನೆ, ಆರ್ಫ಼ಾ ಕೂಡ. ಇಬ್ಬರೂ ಮದುವೆಯಾಗಿ ಗುರುತಿಸಲ್ಪಡುವ ಕುಸ್ತಿಪಟುಗಳಾಗಿ ಭಾರತವನ್ನು ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸುತ್ತಾರೆ. ಇಬ್ಬರೂ ಒಲಿಂಪಿಕ್ ತಂಡಕ್ಕೆ ಆಯ್ಕೆಗೊಂಡಾಗ, ಆರ್ಫ಼ಾ ತಾನು ಗರ್ಭಿಣಿ ಇರುವುದಾಗಿ ಕಂಡುಕೊಳ್ಳುತ್ತಾಳೆ. ಅವಳು ಭಾರತಕ್ಕೆ ಒಂದು ಒಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವ ತನ್ನ ಬಾಲ್ಯದ ಕನಸನ್ನು ಬಿಟ್ಟುಕೊಡುತ್ತಾಳೆ. ಅದನ್ನು ನಂತರ ಸುಲ್ತಾನ್ ಈಡೇರಿಸುತ್ತಾನೆ.

ಅವಳಿಗೆ ಆಶ್ಚರ್ಯವಾಗುವಂತೆ, ಸುಲ್ತಾನ್‍ನ ಸಾಧನೆಯು ಅವನನ್ನು ಅಹಂಕಾರಿಯನ್ನಾಗಿ ಮಾಡುತ್ತದೆ ಮತ್ತು ಒಂದು ಕಾರ್ಯಕ್ರಮದಲ್ಲಿ ಒಬ್ಬ ವರದಿಗಾರನಿಗೆ ಕಪಾಳಕ್ಕೆ ಹೊಡೆಯುತ್ತಾನೆ. ಅವನು ಅವಳ ನಿಗದಿತ ದಿನಾಂಕದ ಹತ್ತಿರವಿರುವ ಆರ್ಫ಼ಾಳನ್ನೂ ಬಿಟ್ಟು ಟರ್ಕಿಯಲ್ಲಿ ಚಿನ್ನದ ಪದಕ ಗೆಲ್ಲುತ್ತಾನೆ. ಹಿಂದಿರುಗಿದ ನಂತರ, ತನ್ನ ನವಜಾತ ಶಿಶು ತೀವ್ರ ರಕ್ತಹೀನತೆಯಿಂದ ಸತ್ತುಹೋಗಿದೆ ಎಂದು ಅವನಿಗೆ ಗೊತ್ತಾಗುತ್ತದೆ. ಶಿಶುವಿಗೆ ಸುಲ್ತಾನ್‍ಗೆ ತದ್ರೂಪವಾದ ಅಪರೂಪದ ಒ- ರಕ್ತದ ಗುಂಪಿದ್ದು ಅವನ ಅನುಪಸ್ಥಿತಿಯು ಮಗುವಿಗೆ ದಾನಿ ದೊರಕದಂತೆ ಮಾಡಿತು. ಸಿಟ್ಟಾಗಿ, ಆರ್ಫ಼ಾ ಸುಲ್ತಾನ್‍ನನ್ನು ಬಿಟ್ಟು ತನ್ನ ತಂದೆಯೊಂದಿಗೆ ಇರಲು ನಿರ್ಧರಿಸುತ್ತಾಳೆ. ತನ್ನ ಹೆಂಡತಿ ಮತ್ತು ಮಗುವನ್ನು ಕಳೆದುಕೊಂಡಿದ್ದಕ್ಕೆ ಖಿನ್ನನಾಗಿ, ಸುಲ್ತಾನ್ ತನ್ನ ಮಗುವಿನ ಹೆಸರಿನಲ್ಲಿ ರಕ್ತ ಶೇಖರಣಾ ಕೇಂದ್ರವನ್ನು ತೆರೆಯಲು ಹಣವನ್ನು ಸಂಗ್ರಹಿಸಲು ಆರಂಭಿಸುತ್ತಾನೆ.

ಪ್ರಸಕ್ತ ದಿನದಲ್ಲಿ, ಪಂದ್ಯಾವಳಿಯ ಬಹುಮಾನದ ಹಣವು ರಕ್ತ ಶೇಖರಣಾ ಕೇಂದ್ರವನ್ನು ತೆರೆಯುವ ಅವನ ಕನಸನ್ನು ಈಡೇರಿಸುವುದೆಂದು ಆಕಾಶ್ ಸುಲ್ತಾನ್‍ಗೆ ಮಾತುಕೊಡುತ್ತಾನೆ. ಸುಲ್ತಾನ್ ಭಾಗವಹಿಸಲು ಒಪ್ಪಿ, ದೆಹಲಿಗೆ ಟ್ರೇನ್‍ನಲ್ಲಿ ಪ್ರಯಾಣಿಸುತ್ತಾನೆ. ಅಲ್ಲಿ ಆಕಾಶ್ ಅವನನ್ನು ಎಂಎಂಎ ತರಬೇತುದಾರ ಫ಼ತೇ ಸಿಂಗ್‍ಗೆ ಪರಿಚಯಿಸುತ್ತಾನೆ. ಸಿಂಗ್ ಆರಂಭದಲ್ಲಿ ಅವನನ್ನು ನಿರಾಕರಿಸುತ್ತಾನೆ. ಆದರೆ ಅವನ ದೃಢಸಂಕಲ್ಪವನ್ನು ನೋಡಿ ಒಪ್ಪುತ್ತಾನೆ. ಎರಡು ತಿಂಗಳ ತರಬೇತಿಯ ನಂತರ, ಸುಲ್ತಾನ್ ತನ್ನ ಮೈಕಟ್ಟನ್ನು ಮರಳಿ ಪಡೆದು ಫ಼್ರೀಸ್ಟೈಲ್ ಕುಸ್ತಿ ಮಾಡಲು ಕಲಿಯುತ್ತಾನೆ. ತನ್ನ ಮೊದಲ ಪಂದ್ಯದಲ್ಲಿ, ಸುಲ್ತಾನ್ ತನ್ನ ಎದುರಾಳಿಯನ್ನು ತನ್ನ ಸ್ವಂತದ ವಿಶಿಷ್ಟ ಕುಸ್ತಿ ಶೈಲಿಯನ್ನು ಬಳಸಿ ಸೋಲಿಸುತ್ತಾನೆ. ಅವನು ಶೀಘ್ರವೇ ಅನೇಕ ಪಂದ್ಯಗಳನ್ನು ಗೆದ್ದು ಮತ್ತೊಮ್ಮೆ ರಾಷ್ಟ್ರವ್ಯಾಪಿ ಆಸಕ್ತಿ ತರಿಸಿದ ವ್ಯಕ್ತಿಯಾಗಿ ಆ ಪ್ರಕ್ರಿಯೆಯಲ್ಲಿ ಆರ್ಫ಼ಾಳ ಬೆಂಬಲವನ್ನು ಗಳಿಸುತ್ತಾನೆ.

ಸೆಮಿ-ಫ಼ೈನಲ್ ಸುತ್ತಿನಲ್ಲಿ, ಸುಲ್ತಾನ್ ಪಂದ್ಯವನ್ನು ಗೆಲ್ಲುತ್ತಾನೆ ಆದರೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರುತ್ತಾನೆ. ಸುಲ್ತಾನ್ ಇನ್ನೊಮ್ಮೆ ಹೋರಾಡಬಾರದು ಮತ್ತು ಆಡಿದರೆ ಅವನ ಗಾಯಗಳು ಮಾರಕವಾಗುವವು ಎಂದು ವೈದ್ಯನು ಆಕಾಶ್‍ಗೆ ತಿಳಿಸುತ್ತಾನೆ. ಆರ್ಫ಼ಾ ವಾರ್ಡ್‌ಗೆ ಬಂದು ಹೋರಾಡುವುದನ್ನು ಮುಂದುವರಿಸುವಂತೆ ಅವನನ್ನು ಉತ್ತೇಜಿಸುತ್ತಾಳೆ. ಅಂತಿಮ ಪಂದ್ಯದ ವೇಳೆ, ಸುಲ್ತಾನ್ ತನ್ನ ನೋವನ್ನು ಜಯಿಸಿ ತನ್ನ ಎದುರಾಳಿಯನ್ನು ಸೋಲಿಸಿ ಅಂತಿಮವಾಗಿ ಪಂದ್ಯಾವಳಿಯನ್ನು ಗೆಲ್ಲುತ್ತಾನೆ. ತನ್ನ ಹೆಂಡತಿಯೊಂದಿಗೆ ಪುನರ್ಮಿಲನವಾಗಿ, ಸುಲ್ತಾನ್ ಬಹುಮಾನದ ಹಣವನ್ನು ಬಳಸಿ ಒಂದು ರಕ್ತ ಶೇಖರಣಾ ಕೇಂದ್ರವನ್ನು ತೆರೆಯುತ್ತಾನೆ. ಆರ್ಫ಼ಾ ಕುಸ್ತಿಯನ್ನು ಪುನರಾರಂಭಿಸುತ್ತಾಳೆ. ಕೆಲವು ವರ್ಷಗಳ ನಂತರ, ಅವಳು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವನ್ನು ಕುಸ್ತಿಪಟುವಾಗಿ ಮಾಡಲು ಸುಲ್ತಾನ್ ತರಬೇತಿಯನ್ನು ಆರಂಭಿಸುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

 • ಸುಲ್ತಾನ್ ಅಲಿ ಖಾನ್ ಪಾತ್ರದಲ್ಲಿ ಸಲ್ಮಾನ್ ಖಾನ್
 • ಆರ್ಫ಼ಾ ಅಲಿ ಖಾನ್ ಪಾತ್ರದಲ್ಲಿ ಅನುಷ್ಕಾ ಶರ್ಮಾ
 • ಫ಼ತೇ ಸಿಂಗ್ ಪಾತ್ರದಲ್ಲಿ ರಣ್‍ದೀಪ್ ಹೂಡಾ
 • ಆಕಾಶ್ ಒಬೆರಾಯ್ ಪಾತ್ರದಲ್ಲಿ ಅಮಿತ್ ಸಾಧ್
 • ಮಾರ್ಕಸ್ ಪಾತ್ರದಲ್ಲಿ ಮಾರ್ಕೊ ಜ಼ೇರೋರ್
 • ಸುಲ್ತಾನ್‍ನ ತಂದೆಯಾಗಿ ನವೀನ್ ಓಹ್ಲ್ಯಾನ್
 • ಟೈರನ್ ಪಾತ್ರದಲ್ಲಿ ಟೈರನ್ ವುಡ್ಲಿ
 • ಮಾರೇಸ್ ಆಗಿ ಮಾರೇಸ್ ಕ್ರಂಪ್
 • ಬರ್ಕತ್ ಹುಸೇನ್ ಪಾತ್ರದಲ್ಲಿ ಕುಮುದ್ ಮಿಶ್ರಾ[೭]
 • ಸುಲ್ತಾನ್‍ನ ಮಗಳಾಗಿ ಸೂಜ಼ಿ ಖಾನ್[೮]
 • ಟೈನಿ ಕುಕ್ರೇಜಾ ಪಾತ್ರದಲ್ಲಿ ಸುಮೀತ್ ಸಾಮ್ನಾನಿ[೯]
 • ಗೋವಿಂದ್ ಪಾತ್ರದಲ್ಲಿ ಅನಂತ್ ವಿಧಾತ್ ಶರ್ಮಾ
 • ಮಿ. ಪಟೇಲ್ ಪಾತ್ರದಲ್ಲಿ ಇವಾನ್ ರಾಡ್ರಿಗೇಸ್
 • ಹರ್ಯಾಣಾ ಸರ್ಕಾರದ ಕ್ರೀಡಾಧಿಕಾರಿಯಾಗಿ ಕರ್ಮ್‌ವೀರ್ ಚೌಧರಿ
 • ಗ್ಯಾನ್ ಸಿಂಗ್ ಓಬೆರಾಯ್ ಪಾತ್ರದಲ್ಲಿ ಪರಿಕ್ಷತ್ ಸಾಹನಿ
 • ರಾಜ್‍ವೀರ್ ಪಾತ್ರದಲ್ಲಿ ಆಶೀಶ್ ರಾಜಾ
 • ಅಂತರ ರಾಜ್ಯ ತರಬೇತುದಾರನಾಗಿ ಅರ್ವಿಂದ್ ವಾಹಿ
 • ಡಾಕ್ಟರ್ ಸಫ಼್ದರ್‍ಜಂಗ್ ಪಾತ್ರದಲ್ಲಿ ಹಿಮಾಂಶು ಭೂತಿಯಾನಿ
 • ಮೇಯಾಂಗ್ ಚ್ಯಾಂಗ್ ಸ್ವಪಾತ್ರದಲ್ಲಿ
 • ಕುಬ್ರಾಸೇಟ್ ಸ್ವಪಾತ್ರದಲ್ಲಿ
 • ಶಿಬಾನಿ ದಂಡೇಕರ್ ಸ್ವಪಾತ್ರದಲ್ಲಿ
 • ಬ್ಯಾಂಡ್ ಸದಸ್ಯೆಯಾಗಿ ಕ್ಯಾಂಡಿಸ್ ರೆಡಿಂಗ್
 • ಅಮಿತ್ ರಾಜ್ (ಅತಿಥಿ ಪಾತ್ರದಲ್ಲಿ)

ತಯಾರಿಕೆ[ಬದಲಾಯಿಸಿ]

ಬೆಳವಣಿಗೆ[ಬದಲಾಯಿಸಿ]

ಯೋಜನೆಯನ್ನು ಜೂನ್ ೨೦೧೫ರಲ್ಲಿ ಘೋಷಿಸಲಾಯಿತು ಮತ್ತು ಯೂಟ್ಯೂಬ್‌‍ನಲ್ಲಿ ಒಂದು ಟೀಜ಼ರ್‌ನ್ನು ಬಿಡುಗಡೆ ಮಾಡಲಾಯಿತು.[೧೦] ಖಾನ್ ಚಿತ್ರದಲ್ಲಿ ಹರ್ಯಾಣಾ ಮೂಲದ ಕುಸ್ತಿಪಟುವಾಗಿ ನಟಿಸಿದರು.[೧೧][೧೨] ಖಾನ್ ಲಾರ್ನೆಲ್ ಸ್ಟೋವಾಲ್‍ರ ಮಾರ್ಗದರ್ಶನದಲ್ಲಿ ಕುಸ್ತಿ ತರಬೇತಿಗೆ ಒಳಗಾದರು.[೧೩][೧೪][೧೫]

ಪಾತ್ರ ಹಂಚಿಕೆ[ಬದಲಾಯಿಸಿ]

ಡಿಸೆಂಬರ್ ೨೦೧೫ರಲ್ಲಿ, ಚಿತ್ರದಲ್ಲಿ ಖಾನ್‍ರ ತರಬೇತುದಾರನ ಪಾತ್ರವಹಿಸಲು ರಣ್‍ದೀಪ್ ಹೂಡಾರನ್ನು ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಯಿತು.[೧೬][೧೭] ಅಮಿತ್ ಸಾಧ್ ತಾವು ಖಾನ್‍ರ ತಮ್ಮನ ಪಾತ್ರ ವಹಿಸುತ್ತಿರುವುದಾಗಿ ದೃಢಪಡಿಸಿದರು.[೧೮] ಎಂಎಂಎ ಕಾದಾಳಿ ಟೈರನ್ ವುಡ್ಲಿ ಮತ್ತು ಇತರ ಕಾದಾಳಿಗಳನ್ನು ಚಿತ್ರತಂಡದಲ್ಲಿ ಸೇರಿಸಿಕೊಳ್ಳಲಾಯಿತು.[೧೯][೨೦][೨೧]

ಜನೆವರಿ ೨೦೧೬ರಲ್ಲಿ, ಖಾನ್ ಎದುರು ನಾಯಕ ನಟಿಯಾಗಿ ನಟಿಸಲು ಅನುಷ್ಕಾ ಶರ್ಮಾರನ್ನು ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಯಿತು.[೨೨] ಕುಸ್ತಿಪಟುವಾಗಿ ತಮ್ಮ ಪಾತ್ರಕ್ಕೆ, ಶರ್ಮಾ ಕುಸ್ತಿ ಪಾಠಗಳನ್ನು ತೆಗೆದುಕೊಂಡರು.[೨೩][೨೪] ಫ಼ೆಬ್ರುವರಿ ೨೦೧೬ರಲ್ಲಿ, ಬಾಸ್ಕೊ-ಸೀಜ಼ರ್‌ರನ್ನು ಚಿತ್ರದ ನೃತ್ಯ ನಿರ್ದೇಶಕರಾಗಿ ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಚಿತ್ರೀಕರಣ[ಬದಲಾಯಿಸಿ]

ಚಿತ್ರದ ತಯಾರಿಕಾ ಪೂರ್ವ ಹಂತವು ಅಕ್ಟೋಬರ್ ೨೦೧೫ರಂದು ಆರಂಭವಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣವು ಕರ್ಜತ್‍ನಲ್ಲಿ[೨೫][೨೬] ಮತ್ತು ಮುಂಬಯಿಯ ಜೆಡಬ್ಲ್ಯೂ ಮ್ಯಾರಿಯಟ್‍ನಲ್ಲಿ ಡಿಸೆಂಬರ್ ೨೦೧೫ ರಲ್ಲಿ ಆರಂಭವಾಯಿತು. ಚಿತ್ರದ ಮೊದಲ ವೇಳಾಪಟ್ಟಿಯನ್ನು ಇಲ್ಲಿ ಚಿತ್ರೀಕರಿಸಲಾಯಿತು.[೨೭] ಮೊದಲ ವೇಳಾಪಟ್ಟಿಯ ಚಿತ್ರೀಕರಣವು ಡಿಸೆಂಬರ್ ೨೦೧೫ರ ಉತ್ತರಾರ್ಧದಲ್ಲಿ ಮುಗಿಯಿತು.[೨೮][೨೯] ಎರಡನೇ ವೇಳಾಪಟ್ಟಿಯ ಚಿತ್ರೀಕರಣವು ಜನೆವರಿ ೨೦೧೬ರಂದು ಆರಂಭಗೊಂಡಿತು.[೩೦][೩೧] ಮಾರ್ಚ್ ೨೦೧೬ರ ಪೂರ್ವಾರ್ಧದಲ್ಲಿ ಒಂದು ಹಾಡನ್ನು ಚಿತ್ರೀಕರಿಸಲಾಯಿತು. ಇದರ ನೃತ್ಯವನ್ನು ಫ಼ಾರಾ ಖಾನ್ ನಿರ್ದೇಶಿಸಿದ್ದರು.[೩೨]

ಸಂಗೀತ[ಬದಲಾಯಿಸಿ]

ಸುಲ್ತಾನ್ ಚಿತ್ರದ ಸಂಗೀತವನ್ನು ವಿಶಾಲ್-ಶೇಖರ್ ಸಂಯೋಜಿಸಿದ್ದಾರೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಇರ್ಷಾದ್ ಕಾಮಿಲ್ ಬರೆದಿದ್ದಾರೆ. ಧ್ವನಿವಾಹಿನಿ ಸಂಗ್ರಹವನ್ನು 31 ಮೇ 2016 ರಂದು ಬಿಡುಗಡೆ ಮಾಡಲಾಯಿತು.[೩೩] ಧ್ವನಿಸಂಗ್ರಹದಲ್ಲಿ ಹದಿನಾಲ್ಕು ಹಾಡುಗಳಿವೆ. ಇವುಗಳಲ್ಲಿ ಒಂಬತ್ತನ್ನು ಮೂಲ ಧ್ವನಿವಾಹಿನಿಯಲ್ಲಿ ಸೇರಿಸಿಕೊಳ್ಳಲಾಗಿದೆ.

ಎಲ್ಲ ಹಾಡುಗಳು ಇರ್ಷಾದ್ ಕಾಮಿಲ್ ಅವರಿಂದ ರಚಿತ; ಎಲ್ಲ ಸಂಗೀತ ವಿಶಾಲ್-ಶೇಖರ್ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಗಾಯಕ(ರು)ಸಮಯ
1."ಬೇಬಿ ಕೋ ಬೇಸ್ ಪಸಂದ್ ಹೇ"ವಿಶಾಲ್ ದಾದ್ಲಾನಿ, ಶಾಲ್ಮಲಿ ಖೋಲ್ಗಡೆ, ಇಶಿತಾ, ಬಾದ್‍ಶಾ4:13
2."ಜಗ್ ಘೂಮೆಯಾ" (ಪುರುಷ)ರಾಹತ್ ಫ಼ತೇ ಅಲಿ ಖಾನ್4:42
3."440 ವೋಲ್ಟ್"ಮೀಕಾ ಸಿಂಗ್4:28
4."ಸುಲ್ತಾನ್" (ಶೀರ್ಷಿಕೆ ಗೀತೆ)ಸುಖ್‍ವಿಂದರ್ ಸಿಂಗ್, ಶಾದಬ್ ಫ಼ರೀದಿ4:40
5."ಸಚ್ಚಿ ಮುಚ್ಚಿ"ಮೋಹಿತ್ ಚೌಹಾನ್, ಹರ್ಷ್‌ದೀಪ್ ಕೌರ್3:59
6."ಬುಲ್ಲೇಯಾ"ಪ್ಯಾಪೋನ್5:57
7."ಟುಕ್ ಟುಕ್"ನೂರನ್ ಸೋದರಿಯರು, ವಿಶಾಲ್ ದಾದ್ಲಾನಿ4:12
8."ಜಗ್ ಘೂಮೆಯಾ" (ಮಹಿಳೆ)ನೇಹಾ ಭಸೀನ್4:14
9."ರೈಜ಼್ ಆಫ಼್ ಸುಲ್ತಾನ್"ಶೇಖರ್ ರವ್ಜಿಯಾನಿ2:46
10."ರೌಲಾ ಪಾಯೆ ಗಯಾ – ಅಧಿಕೃತ ಸುಲ್ತಾನ್ ಸೆಲ್ಯೂಟ್"ರಾಹತ್ ಫ಼ತೇ ಅಲಿ ಖಾನ್, ಸಿಕ್ಸ್ ಪ್ಯಾಕ್ ಬ್ಯಾಂಡ್3:31
11."ಬೇಬಿ ಕೋ ಬೇಸ್ ಪಸಂದ್ ಹೇ" (ಸಲ್ಮಾನ್ ಖಾನ್ ಆವೃತ್ತಿ)ಸಲ್ಮಾನ್ ಖಾನ್, ಯೂಲಿಯಾ ವಂಟೂರ್4:16
12."ಜಗ್ ಘೂಮೆಯಾ" (ಸಲ್ಮಾನ್ ಖಾನ್ ಆವೃತ್ತಿ)ಸಲ್ಮಾನ್ ಖಾನ್4:49
13."440 ವೋಲ್ಟ್" (ಸಲ್ಮಾನ್ ಖಾನ್ ಆವೃತ್ತಿ)ಸಲ್ಮಾನ್ ಖಾನ್4:28
14."ಸುಲ್ತಾನ್" (ಸಲ್ಮಾನ್ ಖಾನ್ ಆವೃತ್ತಿ)ಸಲ್ಮಾನ್ ಖಾನ್4:42
ಒಟ್ಟು ಸಮಯ:1:00:57

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ವಿಶ್ವಾದ್ಯಂತ[ಬದಲಾಯಿಸಿ]

೯ ಸೆಪ್ಟೆಂಬರ್ ೨೦೧೮ರ ವೇಳೆಗೆ, ಚೈನಾದಲ್ಲಿ ಬಿಡುಗಡೆಯಾದ ನಂತರ, ಈ ಚಿತ್ರವು ವಿಶ್ವಾದ್ಯಂತ ₹೬೨೩.೩೩ ಕೋಟಿಯಷ್ಟುಗಳಿಸಿದೆ.[೨]

ಭಾರತ[ಬದಲಾಯಿಸಿ]

ಈ ಚಿತ್ರದ ಅಂತಿಮ ದೇಶೀಯ ಗಳಿಕೆ ಸುಮಾರು 421.25 ಕೋಟಿಯಷ್ಟಿತ್ತು.[೩೪]

ವಿದೇಶದಲ್ಲಿ[ಬದಲಾಯಿಸಿ]

೯ ಸೆಪ್ಟೆಂಬರ್ ೨೦೧೮ರ ವೇಳೆಗೆ ಈ ಚಿತ್ರವು ವಿದೇಶದಲ್ಲಿ $29.82 ದಶಲಕ್ಷದಷ್ಟು ಗಳಿಸಿದೆ.[೨]

ಆಟ[ಬದಲಾಯಿಸಿ]

ಈ ಚಿತ್ರದ ಮೇಲೆ ಆಧಾರಿತವಾದ ಒಂದು ಅಧಿಕೃತ ಆಟವನ್ನು ಆ್ಯಂಡ್ರಾಯ್ಡ್ ಮೊಬೈಲ್ ಫ಼ೋನುಗಳಿಗಾಗಿ ಬಿಡುಗಡೆ ಮಾಡಲಾಗಿದೆ.[೩೫]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

೨೦೧೭ರ ಫಿಲ್ಮ್‌ಫೇರ್ ಪ್ರಶಸ್ತಿಗಳು

 • ಅತ್ಯುತ್ತಮ ಹಿನ್ನೆಲೆ ಗಾಯಕಿ - ನೇಹಾ ಭಸೀನ್ (ಜಗ್ ಘೂಮೆಯಾ) - ಗೆಲುವು
 • ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
 • ಅತ್ಯುತ್ತಮ ನಿರ್ದೇಶಕ - ಅಲಿ ಅಬ್ಬಾಸ್ ಜ಼ಫ಼ರ್ - ನಾಮನಿರ್ದೇಶಿತ
 • ಅತ್ಯುತ್ತಮ ನಟ - ಸಲ್ಮಾನ್ ಖಾನ್ - ನಾಮನಿರ್ದೇಶಿತ
 • ಅತ್ಯುತ್ತಮ ಸಂಗೀತ ನಿರ್ದೇಶಕ - ವಿಶಾಲ್-ಶೇಖರ್ - ನಾಮನಿರ್ದೇಶಿತ
 • ಅತ್ಯುತ್ತಮ ಗೀತಸಾಹಿತಿ - ಇರ್ಷಾದ್ ಕಾಮಿಲ್ (ಜಗ್ ಘೂಮೆಯಾ) - ನಾಮನಿರ್ದೇಶಿತ
 • ಅತ್ಯುತ್ತಮ ಹಿನ್ನೆಲೆ ಗಾಯಕ - ರಾಹತ್ ಫ಼ತೇ ಅಲಿ ಖಾನ್ (ಜಗ್ ಘೂಮೆಯಾ) - ನಾಮನಿರ್ದೇಶಿತ

ಉಲ್ಲೇಖಗಳು[ಬದಲಾಯಿಸಿ]

 1. "HIGHEST BUDGET MOVIES ALL TIME". Box Office India. Retrieved 6 May 2017.
 2. ೨.೦ ೨.೧ ೨.೨ ೨.೩ "Salman Khan's Sultan rakes in $5 million in 11 days in China, surpassing Padmaavat's overseas earnings". Firstpost. 12 September 2018. Retrieved 29 January 2019.
 3. "This is why Salman Khan thinks 'Sultan' will be a blockbuster". International Business Times. 26 April 2016. Retrieved 8 July 2016.
 4. "Sultan: Salman's 'Raging Bull' act is a blockbuster". Business Standard. 6 July 2016. Retrieved 8 July 2016.
 5. "Sultan review by Anupama Chopra: This is an over-sized Salman slam". Hindustan Times. 7 July 2016. Retrieved 8 July 2016.
 6. "Salman Khan's 'Sultan': Plot revealed". The Times Group. ಟೈಮ್ಸ್ ಆಫ್ ಇಂಡಿಯ. 10 February 2016. Retrieved 18 February 2016.
 7. Hungama, Bollywood. "Sultan 2016 Movie News, Wallpapers, Songs & Videos – Bollywood Hungama". www.bollywoodhungama.com. Retrieved 8 July 2016.
 8. "Meet Salman Khan's daughter in 'Sultan'".
 9. "Salman Khan's Sultan fame actor Sumeet Samnani roped in for Khidki". 7 August 2016. Retrieved 17 June 2017.
 10. Dhriti, Sharma (23 June 2015). "Check out: Salman Khan ready to battle it out in 'Sultan' teaser!". Zee News. Retrieved 16 December 2015.
 11. "Salman Khan to play a wrestler in YRF's Sultan". BH News Network. Bollywood Hungama. 23 June 2015. Retrieved 16 December 2015.
 12. Apoorva, Nijhara (9 October 2015). "Revealed: Salman Khan's rough and tough look in Sultan". India Today. Retrieved 16 December 2015.
 13. Sunita, Pacheco (29 September 2015). "Salman Khan starts training for 'Sultan', trends on Twitter". The Indian Express. Retrieved 16 December 2015.
 14. Gaurav, Dubey (9 October 2015). "Salman Khan's trainer for 'Sultan' staying at his Panvel farmhouse". Mid Day. Retrieved 16 December 2015.
 15. Kiran Kaur. "'Sultan' poster: Salman Khan will floor you with his killer intensity". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 11 February 2016.
 16. "Sultan: This is when Salman Khan will announce the lead female actor". India Today Network. India Today. 13 December 2015. Retrieved 17 December 2015.
 17. "Randeep Hooda: Lesser known facts (Slideshow)". The Times Group. ಟೈಮ್ಸ್ ಆಫ್ ಇಂಡಿಯ. Retrieved 17 December 2015.
 18. "Amit Sadh confirms he's playing Salman's younger brother in Sultan". Bollywood Hungama. 11 March 2016. Retrieved 12 March 2016.
 19. Suparno, Sarkar (5 December 2015). "Salman Khan to fight against UFC fighter Tyron Woodley in Sultan [PHOTOS]". IBT Group. International Business Times. Retrieved 17 December 2015.
 20. "OMG: SALMAN KHAN TURNS AGGRESSIVE!". Biscoot.com. Saregama. 2015. Archived from the original on 7 ಮಾರ್ಚ್ 2018. Retrieved 17 December 2015. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 21. "Salman Khan's Sultan first look poster". IBT Group. International Business Times. Retrieved 17 December 2015.
 22. Indo-Asian News Service (9 January 2016). "Confirmed: Anushka Sharma to star opposite Salman Khan in 'Sultan'". TV18. IBNLive. Retrieved 18 February 2016.
 23. "Sultan: Anushka Sharma's 'dhobi-pachad' video shows why she's perfect for the role!". DNA Desk. DNA India. 12 February 2016. Retrieved 18 February 2016.
 24. "Salman Khan flexes muscles in Sultan". Indian Express Group. The Indian Express. February 2016. Retrieved 18 February 2016.
 25. "Salman Khan shoots for 'Sultan' in Karjat". DC Team. Deccan Chronicle. 6 December 2015. Retrieved 16 December 2015.
 26. "Salman Khan's Sultan Goes on Floors Without its Lead Actress". NDTV News Network. NDTV. 8 December 2015. Retrieved 16 December 2015.
 27. Prachi, Kadam (7 December 2015). "Salman Takes Sultan To Juhu From Karjat". 9X Media. Archived from the original on 22 ಡಿಸೆಂಬರ್ 2015. Retrieved 16 December 2015.
 28. "Salman Khan to begin the second schedule of Sultan with fighting sequences from December 18!". Prlay Team. prlay.com. 15 December 2015. Archived from the original on 22 ಡಿಸೆಂಬರ್ 2015. Retrieved 19 December 2015.
 29. IANS (22 December 2015). "First schedule of Salman Khan's 'Sultan' wrapped up". The Indian Express. Retrieved 26 December 2015.
 30. Subhash K. Jha (6 January 2016). "Salman resumes shooting for Sultan". Webdesk. The Asian Age. Retrieved 8 January 2016.
 31. Sonil Dedhia (5 January 2016). "Salman Khan resumes shooting for 'Sultan'". The Times Group. ದಿ ಟೈಮ್ಸ್ ಆಫ್‌ ಇಂಡಿಯಾ. Retrieved 8 January 2016.
 32. Indo-Asian News Service (10 March 2016). "'Sultan' director Ali Abbas Zafar finishes shooting second song for film". Indian Express Group. The Indian Express. Retrieved 19 March 2016.
 33. "Sultan (Original Motion Picture Soundtrack) by Vishal-Shekhar on iTunes". iTunes Store. 1 June 2016. Retrieved 31 May 2016.
 34. "Special Features: Box Office: Worldwide Collections and Day wise breakup of Sultan – Box Office". Bollywood Hungama. 7 July 2016. Retrieved 2 September 2016.
 35. 99Games (11 July 2016). "Sultan: The Game". Archived from the original on 17 ಸೆಪ್ಟೆಂಬರ್ 2017. Retrieved 2 ನವೆಂಬರ್ 2020.{{cite web}}: CS1 maint: numeric names: authors list (link)

ಹೊರಗಿನ ಕೊಂಡಿಗಳು[ಬದಲಾಯಿಸಿ]