ವಿಷಯಕ್ಕೆ ಹೋಗು

ಅಲಿ ಅಬ್ಬಾಸ್ ಜಾಫರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲಿ ಅಬ್ಬಾಸ್ ಜಾಫರ್
'ಮೇರೆ ಬ್ರದರ್ ಕಿ ದುಲ್ಹಾನ್ ಅವರ ಆಡಿಯೋ ಬಿಡುಗಡೆಯಿಂದ ಅಲಿ ಅಬ್ಬಾಸ್ ಜಾಫರ್
ಜನನ
ಸುಲ್ತಾನ್ ಅಲಿ ಅಬ್ಬಾಸ್ ಜಾಫರ್
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ಸಹಾಯಕ ನಿರ್ದೇಶಕ
ಸಕ್ರಿಯ ವರ್ಷಗಳು೨೦೦೭–ಪ್ರಸ್ತುತ
ಗಮನಾರ್ಹ ಕೆಲಸಗಳುಸುಲ್ತಾನ್, ಟೈಗರ್ ಝಿಂದಾ ಹೇ, ಭಾರತ್

ಅಲಿ ಅಬ್ಬಾಸ್ ಜಾಫರ್ ರವರು ಭಾರತಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ.ಜಾಫರ್ ರವರು ನವದೆಹಲಿಯ ಕಿರೋರಿ ಮಲ್ ಕಾಲೇಜಿನ ಪದವೀಧರರಾಗಿದ್ದಾರೆ[].ಅವರು ತಮ್ಮ ಚೊಚ್ಚಲ ರೋಮ್ಯಾಂಟಿಕ್ ಹಾಸ್ಯಮಯ ಚಿತ್ರ, 'ಮೇರೆ ಬ್ರದರ್ ಕಿ ದುಲ್ಹನ್'(೨೦೧೧)ಗಾಗಿ ಮಧ್ಯಮ ಯಶಸ್ಸನ್ನು ಗಳಿಸಿದರು.ನಂತರ ಅವರು ಸಾಹಸಮಯ ಚಲನಚಿತ್ರ 'ಗುಂಡೇ'(೨೦೧೪)ಗೆ ನಿರ್ದೇಶನ ಮಾಡಿದರು.ಕ್ರೀಡಾ ಚಲನಚಿತ್ರ 'ಸುಲ್ತಾನ್'(೨೦೧೬)ಗಾಗಿ ಅವರು ವ್ಯಾಪಕವಾದ ಗುರುತನ್ನು ಪಡೆದರು.ಇದು ಅತೀ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.ನಂತರ ಅವರು ಆಕ್ಷನ್ ಥ್ರಿಲ್ಲರ್ 'ಟೈಗರ್ ಝಿಂದಾ ಹೇ'(೨೦೧೭)ಗೆ ನಿರ್ದೇಶನ ಮಾಡಿ ದೊಡ್ಡ ಯಶಸ್ಸನ್ನು ಸಾಧಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಅಲಿ ಅಬ್ಬಾಸ್ ಜಾಫರ್ ರವರು ಆರಂಭದಲ್ಲಿ ಯಶ್ ರಾಜ್ ಫಿಲ್ಮ್ಸ್ (ವೈ.ಆರ್.ಎಫ್)ಗಾಗಿ ಅನೇಕ ಯೋಜನೆಗಳೊಂದಿಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು.ನಂತರ ಅವರು ತಮ್ಮದೇ ನಿರ್ದೇಶನದ 'ಮೇರೆ ಬ್ರದರ್ ಕಿ ದುಲ್ಹನ್' ಚಿತ್ರದೊಂದಿಗೆ, ನಿರ್ದೇಶಕರಾಗಿ ಚೊಚ್ಚಲ ಪ್ರವೇಶ ಮಾಡಿ, ಗುರುತಿಸಲ್ಪಟ್ಟರು.ಈ ಚಿತ್ರದಲ್ಲಿ ಇಮ್ರಾನ್ ಖಾನ್ ಮತ್ತು ಕಟ್ರೀನಾ ಕೈಫ್ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡರು[].ಅವರ ಮುಂದಿನ ಚಲನಚಿತ್ರವು ೧೯೭೦ ಮತ್ತು ೧೯೮೦ ರ ದಶಕದಲ್ಲಿ ಕಲ್ಕತ್ತಾದಲ್ಲಿ ನಡೆದ ಆಕ್ಷನ್ ಚಿತ್ರ 'ಗುಂಡೇ'(೨೦೧೪) ಆಗಿತ್ತು.ಈ ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ರವರು ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ[][].ಈ ಚಿತ್ರವು ವಿಮರ್ಶಕರಿಂದ ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.ಜಾಫರ್ ರವರ ಮುಂದಿನ ಚಿತ್ರವು ಸಲ್ಮಾನ್ ಖಾನ್ ನಟಿಸಿದ ಬ್ಲಾಕ್ಬಸ್ಟರ್ ಕ್ರೀಡಾ ಚಲನಚಿತ್ರ 'ಸುಲ್ತಾನ್'.ಇದರಲ್ಲಿ ಸಲ್ಮಾನ್ ಖಾನ್ ರವರು ಹರಿಯಾಣಕುಸ್ತಿ ಚಾಂಪಿಯನ್ ಆಗಿ ಹಾಗು ಅನುಷ್ಕಾ ಶರ್ಮಾ ರವರು ಸ್ತ್ರೀ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರವೂ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ.ಜಾಫರ್ ರವರು ೨೦೧೭ ರಲ್ಲಿ, 'ಟೈಗರ್ ಝಿಂದಾ ಹೇ' ಚಿತ್ರವನ್ನು ನಿರ್ದೇಶಿಸಿದರು.ಇದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ರವರು ರಾ ಏಜೆಂಟ್ ಆಗಿ, ಕಟ್ರೀನಾ ಕೈಫ್ ರವರು ಐಎಸ್ಐ ಪತ್ತೇದಾರಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ[].ಈ ಚಿತ್ರವು ೪೦ ದಾದಿಯರು, ೨೫ ಭಾರತೀಯರು ಮತ್ತು ೧೫ ಪಾಕಿಸ್ತಾನಿಯರನ್ನು ನಿರ್ದಯವಾದ ಉಗ್ರಗಾಮಿಗಳಿಂದ ಮುಕ್ತಗೊಳಿಸಲು ಒಂದು ಪಾರುಗಾಣಿಕಾ ಕಾರ್ಯಾಚರಣೆಯನ್ನು ಸ್ವೀಕರಿಸುವ ಕತೆಯನ್ನೊಳಗೊಂಡಿದೆ.ಈ ಚಿತ್ರವು ೨೦೧೭ ರ ಡಿಸೆಂಬರ್ ನಲ್ಲಿ ಬಿಡುಗಡೆಯಾಯಿತು.ಮೇ ೨೦೧೮ ರಲ್ಲಿ ಅವರು 'ಭಾರತ್' ಚಿತ್ರದ ಪೂರ್ವ ನಿರ್ಮಾಣವನ್ನು ಪ್ರಾರಂಭಿಸಿದರು.ಈ ಚಿತ್ರದ ಟ್ರೈಲರ್ ೨೨ ಏಪ್ರಿಲ್ ೨೦೧೯ ರಂದು ಬಿಡುಗಡೆಯಾಯಿತು[].ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕಟ್ರೀನಾ ಕೈಫ್, ದಿಶಾ ಪಟಾನಿ, ಸುನೀಲ್ ಗ್ರೋವರ್, ತಬು(ನಟಿ) ಮುಂತಾದವರು ನಟಿಸಿದ್ದಾರೆ.ಈ ಚಿತ್ರವು 'ಓಡ್ ಟು ಮೈ ಫಾದರ್' ಎಂಬ ಕೊರಿಯನ್ ಚಿತ್ರದ ಅಧಿಕೃತ ರೂಪಾಂತರವಾಗಿದೆ.ಇದು ಖಾನ್ ಮತ್ತು ಅಲಿ ನಡುವಿನ ಮೂರನೇ ಸಹಯೋಗವನ್ನು ಗುರುತಿಸುತ್ತದೆ.[]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
Key
Films that are not yet released Denotes feature films that are not yet released

ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ನಿರ್ದೇಶಕ ಚಿತ್ರಕಥೆಗಾರ ಸಹಾಯಕ ನಿರ್ದೇಶಕ
೨೦೦೭ ಮಾರಿಗೋಲ್ಡ್ ಹೌದು
೨೦೦೭ ಜೂಮ್ ಬರಾಬರ್ ಜೂಮ್ ಹೌದು
೨೦೦೮ ಠಶನ್ ಹೌದು
೨೦೦೯ ನ್ಯೂ ಯಾರ್ಕ್ ಹೌದು
೨೦೧೦ ಬದ್ಮಾಶ್ ಕಂಪೆನಿ ಹೌದು
೨೦೧೧ ಮೇರೆ ಬ್ರದರ್ ಕಿ ದುಲ್ಹನ್ ಹೌದು ಹೌದು
೨೦೧೪ ಗುಂಡೇ[] ಹೌದು ಹೌದು
೨೦೧೬ ಸುಲ್ತಾನ್ ಹೌದು ಹೌದು
೨೦೧೭ ಟೈಗರ್ ಝಿಂದಾ ಹೇ[] ಹೌದು ಹೌದು
೨೦೧೯ ಭಾರತ್ ಹೌದು ಹೌದು
೨೦೨೦ ದಿ ಎಂಡ್ ಆಫ್ ಟೈಗರ್dagger ಹೌದು ಹೌದು

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ವರ್ಗ ನಾಮನಿರ್ದೇಶಿತ ಫಲಿತಾಂಶ Ref(s)
ಮಿರ್ಚೀ ಮ್ಯೂಸಿಕ್ ಅವಾರ್ಡ್ಸ್
೨೦೧೪ ಆಲ್ಬಮ್ ಆಫ್ ದಿ ಇಯರ್ ಗುಂಡೇ ನಾಮನಿರ್ದೇಶನ [೧೦]

ಉಲ್ಲೇಖಗಳು

[ಬದಲಾಯಿಸಿ]
  1. "Meet Director Ali Abbas Zafar". VeryShortNews.com (in ಅಮೆರಿಕನ್ ಇಂಗ್ಲಿಷ್). 2019-01-08. Archived from the original on 2019-04-16. Retrieved 2019-01-13.
  2. Kapoor, Jaskiran (13 October 2010). "Director's Cut". Indian Express. Retrieved 28 July 2016.[ಶಾಶ್ವತವಾಗಿ ಮಡಿದ ಕೊಂಡಿ]
  3. Iti Shree Misra (24 August 2012). "Ali Abbas and Yash Raj team up again". The Times of India. Retrieved 28 July 2016.
  4. IANS (16 October 2012). "Priyanka Chopra joins 'Gunday' gang". Mid Day. Retrieved 28 July 2016.
  5. "Tiger Zinda Hai first look: Salman Khan, Katrina Kaif are back in this thriller". The Indian Express. 14 September 2016. Retrieved 17 September 2016.
  6. "Times Of India".
  7. "'Bharat': Director Ali Abbas Zafar gives us a sneak peek from the first day of the film's shoot - Bollywood celebs' Instagram pics you should not miss! - The Times of India". The Times of India. Retrieved 31 May 2018.
  8. https://timesofindia.indiatimes.com/entertainment/hindi/bollywood/news/Ali-Abbas-Zafar-to-shoot-Gunday-in-Kolkata/articleshow/16347948.cms
  9. https://timesofindia.indiatimes.com/entertainment/hindi/bollywood/news/Ali-Abbas-Zafar-Directing-Tiger-Zinda-Hai-not-Race-3/articleshow/55682908.cms
  10. "MMA Mirchi Music Awards". MMAMirchiMusicAwards. Retrieved 2018-03-27.