ತಿಲ್‍ಕುಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿಲ್‍ಕುಟ್
ಮೂಲ
ಪರ್ಯಾಯ ಹೆಸರು(ಗಳು)ತಿಲ್‍ಕತ್ರಿ, ಪಲಾಲಾ
ಮೂಲ ಸ್ಥಳ(ಮಗಧ,ಭಾರತ)
ಪ್ರಾಂತ್ಯ ಅಥವಾ ರಾಜ್ಯಬಿಹಾರ ಮತ್ತು ಪೂರ್ವ ಭಾರತ
ನಿರ್ಮಾತೃಬಿಹಾರ
ವಿವರಗಳು
ಸೇವನಾ ಸಮಯಸಿಹಿ ತಿನಿಸು
ಮುಖ್ಯ ಘಟಕಾಂಶ(ಗಳು)ಎಳ್ಳು, ಬೆಲ್ಲ ಅಥವಾ ಸಕ್ಕರೆ
ಪ್ರಭೇದಗಳುಬಾದಾಮಿಗಳು

ತಿಲ್ಕುಟಮ್, ಗಜಕ್, ತಿಲ್‍ಪಟ್ಟಿ ಎಂದೂ ಕರೆಯಲ್ಪಡುವ ತಿಲ್‍ಕುಟ್ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್‌ನಲ್ಲಿ ತಯಾರಿಸಲಾಗುವ ಸಿಹಿತಿನಿಸಾಗಿದೆ.[೧]

ತಿಲ್‍ಕುಟ್‍ನ್ನು ವಿಶೇಷವಾಗಿ ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ತಯಾರಿಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇದನ್ನು ಪುಡಿಮಾಡಿದ ಎಳ್ಳು ಬೀಜಗಳು ( ಸೆಸಮಮ್ ಇಂಡಿಕಮ್ ) ಮತ್ತು ಬೆಲ್ಲ ಅಥವಾ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಅತ್ಯುತ್ತಮ ತಿಲ್‍ಕುಟ್ ಗಯಾದಿಂದ ಬರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಇದು ಮಗಧ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ.[೨] ಈ ಒಣ ಸಿಹಿತಿನಿಸಿನ ಉಲ್ಲೇಖವು ಬೌದ್ಧ ಸಾಹಿತ್ಯದಲ್ಲಿ ಪಲಾಲಾ ಎಂದು ಕಂಡುಬರುತ್ತದೆ.[೩]

ಸಾಮಾನ್ಯವಾಗಿ, ಮೂರು ವಿಧದ ತಿಲ್‍ಕುಟ್‍ಗಳು ಲಭ್ಯವಿವೆ- ಸಂಸ್ಕರಿಸಿದ ಸಕ್ಕರೆಯುಳ್ಳ ತಿಲ್‍ಕುಟ್ ಬಿಳಿ ಬಣ್ಣದ್ದಾಗಿರುತ್ತದೆ, ಶಕ್ಕರ್ ತಿಲ್‍ಕುಟ್ ಅನ್ನು ಸಂಸ್ಕರಿಸದ ಸಕ್ಕರೆಯಿಂದ ತಯಾರಿಸಲಾಗುತ್ತದೆ ಮತ್ತು ತಿಳಿ ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಗುರ್ ತಿಲ್‍ಕುಟ್ ಬೆಲ್ಲದಿಂದ ಮಾಡಲ್ಪಟ್ಟಿರುತ್ತದೆ ಮತ್ತು ಗಾಢ ಕಂದು ಬಣ್ಣವನ್ನು ಹೊಂದಿರುತ್ತದೆ. ಈ ಪ್ರತಿಯೊಂದು ಪ್ರಭೇದವು ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ. ವೃತ್ತಾಕಾರದ ತಿನಿಸನ್ನು ತಿಲ್‍ಕುಟ್ ಎಂದು ಕರೆಯಲಾಗುತ್ತದೆ ಮತ್ತು ಚಿಕ್ಕದಾದ ನಟ್ ಗಾತ್ರದವುಗಳನ್ನು ತಿಲ್ಲೌರಿ ಎಂದು ಕರೆಯಲಾಗುತ್ತದೆ.

ಚಳಿಗಾಲದಲ್ಲಿ ಕಬ್ಬನ್ನು ಕಟಾವು ಮಾಡಲಾಗುತ್ತದೆ. ಆ ಅವಧಿಯಲ್ಲಿ ಅನೇಕ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ತಿಲ್‍ಕುಟ್‍ನ್ನು ತಯಾರಿಸಲಾಗುತ್ತದೆ. ಆದಾಗ್ಯೂ, ಬೇಡಿಕೆಯು ವರ್ಷವಿಡೀ ಉಳಿಯುವುದರಿಂದ, ವರ್ಷಪೂರ್ತಿ ಸಣ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ.

ಪ್ರದೇಶಗಳು[ಬದಲಾಯಿಸಿ]

ತಿಲ್‍ಕುಟ್ ಭಾರತೀಯ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಬಳಸಲಾಗುವ ಕಾಲೋಚಿತ ಸಿಹಿತಿಂಡಿಯಾಗಿದೆ. ಡಿಸೆಂಬರ್ ಮತ್ತು ಜನವರಿ ಸಮಯದಲ್ಲಿ ಈ ಪ್ರದೇಶಗಳಲ್ಲಿ ತಿಲ್‍ಕುಟ್ ಅನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ ಮತ್ತು ಇದು ಎಲ್ಲಾ ವಯಸ್ಸಿನವರಿಗೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಇದು ಗ್ರಹ ಮತ್ತು ನಕ್ಷತ್ರ ದೋಶಕ್ಕೆ ಕೂಡ ಸಂಬಂಧಿಸಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Get famous 'tilkut' of Gaya by post anywhere in Bihar". The Times of India (in ಇಂಗ್ಲಿಷ್). 3 January 2021. Retrieved 2021-03-25.
  2. Qadir, Abdul (10 January 2020). "Gaya tilkut may get GI tag soon: Bihar agriculture minister Prem Kumar". The Times of India (in ಇಂಗ್ಲಿಷ್). Retrieved 2021-03-25.{{cite web}}: CS1 maint: url-status (link)
  3. Gupta, Deepa (2020-01-08). "How to make winter delicacy 'Tilkut' at home?". The Statesman (in ಅಮೆರಿಕನ್ ಇಂಗ್ಲಿಷ್). Retrieved 2021-03-25.{{cite web}}: CS1 maint: url-status (link)